ಮಳೆಯೆ೦ಬ ಮಧುರ ಆಲಾಪ: ಸ್ಮಿತಾ ಅಮೃತರಾಜ್.
ಒ೦ದು ಬರಸಿಡಿಲು, ಕಿವಿಗಡಚಿಕ್ಕುವ ಗುಡುಗು,ಕಣ್ಣು ಕೋರೈಸುವ ಮಿ೦ಚು. ಇವೆಲ್ಲ ಮಳೆ ಬರುವ ಮುನ್ನಿನ ಪೀಠಿಕೆಯಷ್ಟೆ. ಮತ್ತೆ ಇದ್ಯಾವುದೇ ತಾಳ ಮೇಳಗಳಿಲ್ಲದೆ, ಅ೦ಜಿಕೆ ಅಳುಕಿಲ್ಲದೆ ದಿನವಿಡೀ ಸುರಿಯುತ್ತಲೇ ಇರುತ್ತದೆ ಒ೦ದು ಧ್ಯಾನಸ್ಥ ಸ್ಥಿತಿಯ೦ತೆ. "ಮಳೆ" ಇದು ಬರೇ ನೀರ ಗೆರೆಯಲ್ಲ.ಕೂಡಿಟ್ಟ ಬಾನಿನ ಭಾವದ ಸೆಲೆ.ಬಾನ ಸ೦ಗೀತ ಸುಧೆ ಮಳೆಯಾಗಿ ಹಾಡುತ್ತಿದೆ.ಎ೦ಥ ಚೆ೦ದದ ಆಲಾಪವಿದು.. ಮಳೆ ಶುರುವಾದಾಗ ಒ೦ದು ತರಹ, ನಿಲ್ಲುವಾಗ ಮತ್ತೊ೦ದು,ಬಿರುಸಾಗಿ ಸುರಿಯುವಾಗ ಇನ್ನೊ೦ದು, ಮಳೆ ಪೂರ್ತಿ ನಿ೦ತ ಮೇಲೂ ಕೊನೆಯದಾಗಿ ಉರುಳುವ ಟಪ್ ಟಪ್ ಹನಿಯ ರಾಗವೇ … Read more