ಮಾತೋಶ್ರೀ ಗೌರಮ್ಮ ಸಾಹಿತ್ಯ ಪ್ರಶಸ್ತಿಗಾಗಿ ಕೃತಿಗಳ ಆಹ್ವಾನ

ಮಾತೋಶ್ರೀ ಗೌರಮ್ಮ ಸಾಹಿತ್ಯ ಪ್ರತಿಷ್ಠಾನವು 2016-17ರಲ್ಲಿ ಪ್ರಕಟವಾದ ಕಥೆ,ಕಾದಂಬರಿ,ಕವನ ಸಂಕಲನ,ವಿಮರ್ಶೆ ಮತ್ತು ಅನುವಾದ ಸಾಹಿತ್ಯ ಕೃತಿಗಳಿಗೆ ಪ್ರಶಸ್ತಿ ನೀಡಲು ಆಹ್ವಾನಿಸಿದೆ. ಕನ್ನಡದ ಕೃತಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದು. ಸಾಹಿತ್ಯದ ಎರಡು ಪ್ರಕಾರದ ಉತ್ತಮ ಕೃತಿಗಳಿಗೆ ಈ ಪ್ರಶಸ್ತಿ ನೀಡಲು ಪ್ರತಿಷ್ಠಾನ ನಿರ್ಧರಿಸಿದೆ.  2500 ನಗದು ಮತ್ತು ಫಲಕವನ್ನು ಒಳಗೊಂಡಿರುವುದೆಂದು ಪ್ರತಿಷ್ಠಾನದ ಅಧ್ಯಕ್ಷರು ಶ್ರೀ ಭೀಮಣ್ಣ ಭಂಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಲೇಖಕರು ಕೃತಿಗಳನ್ನು 28 ಜನವರಿ 2018ರ ಒಳಗಾಗಿ ಈ ವಿಳಾಸಕ್ಕೆ ಕಳಿಸಬಹುದು. ತಿರುಪತಿ ಭಂಗಿ  ಕಾರ್ಯದರ್ಶಿಗಳು “ಮಾತೋಶ್ರೀ ಗೌರಮ್ಮ ಸಾಹಿತ್ಯ … Read more

ಫ್ರಾನ್ಜ್ ಕಾಫ್ಕನ ತಪೋಸ್ಥಲ: ಕೀರ್ತಿ. ಪಿ

ಜಗತ್ತಿನ ಪ್ರತಿಯೊಂದು ಕತೆ, ಕಾದಂಬರಿಯೂ ಏನೋ ಒಂದು ಸಾರಾಂಶವ ಹೇಳಲು ಹೊರಟಿರುತ್ತದೆ. ತನ್ನ ಕಾವ್ಯಾನುಶಕ್ತಿಯ ಮೀರಿ ಕವಿ ಬರೆಯಲು ಹೋದಾಗ ಕವಿಗೆ ಕಾವ್ಯ ಹೊಸತು, ನಿರ್ಧಾರ ಸ್ಪಷ್ಟವಾಗುತಾ ಹೋಗುತ್ತದೆ. ಕವಿ ಹೀಗೆಯಿರಬೇಕೆಂಬ ಇರಾದೆ, ತಗಾದೆಯೂ ಇಲ್ಲ, ತನ್ನ ಅರ್ಥಪೂರ್ಣ ಕತೆಯ ಚಿತ್ರಿಸಲು ಕವಿಗೆ ಹೊಳೆದದ್ದನ್ನು ಹೇಳಿ ಮುಗಿಸಿ ಬಿಡುತ್ತಾನೆ. ಕಾವ್ಯ ತಪಸ್ಸು, ತಪಸ್ಸಿಲ್ಲದ ವ್ಯಕ್ತಿಗೆ ಕಾವ್ಯ ದಕ್ಕುವುದು ಕಷ್ಟ. ಓದು, ಜ್ಞಾನ, ತಾಳ್ಮೆ, ಪ್ರೀತಿ, ಸಹನೆ, ತಪಸ್ಸು, ಏಕಾಂತ, ಧ್ಯಾನ, ವಿಭೂತಿಯ ವಿಭಾವ, ಭಾವನಾತ್ಮಕ ಮನೋಭಾವ ಬಹುಮುಖ್ಯ! … Read more

ಬದುಕಿನಲ್ಲಿ ಭರವಸೆ ಎಂಬುದು ಪುನರ್ಜನ್ಮದ ಅವಕಾಶವಿದ್ದಂತೆ: ನರಸಿಂಹಮೂರ್ತಿ. ಎಂ.ಎಲ್.

ನಿರೀಕ್ಷೆಗಳು ಹುಸಿಗೊಂಡಾಗ ಭರವಸೆಗಳೊಂದಿಗೆ ಬೆಸೆದುಕೊಂಡು ಮುನ್ನೆಡೆಯಬೇಕು. ಅಂದುಕೊಂಡಿದ್ದೆಲ್ಲ  ನಡೆಯಲ್ಲ, ಅಪೇಕ್ಷಿಸಿದ್ದೆಲ್ಲ ದೊರೆಯುವುದಿಲ್ಲ. ಇದು ಹೀಗೆ ಒಂದಂತರಂಗದ ಅಲೆಯಾಗಿ ಮೌನವನ್ನು ಪರಿಚಯಿಸಿ ಹೋಗಿಬಿಡುತ್ತದೆ.  ನಿರೀಕ್ಷೆಗಳಲ್ಲಿ ತೇಲಿಮುಳುಗುವಾಗ ಕುತೂಹಲಗಳು ಕನಸ್ಸಿನ ದೋಣಿಯನ್ನು ಅಲುಗಾಡದಂತೆ ಮುನ್ನೆಡಿಸಿದಂತೆ ಸೊಗಸಾದ ಅನುಭವದ ಹಿತವನ್ನು ಒಡ್ಡುತ್ತದೆ. ಅದೇ ನಿರೀಕ್ಷೆಗಳು ಹುಸಿಯಾಗುತ್ತಿದ್ದಂತೆ ಭರವಸೆಯ ಬೆಳಕು ಮೆಲ್ಲನೆ ಸರಿದು ಹೋಗಿ ಕತ್ತಲಾವರಿಸಲು ಆರಂಭಿಸಿ ಅತೀವ ಭಾವೋವೇದನೆಗೆ ಗುರಿ ಮಾಡುತ್ತಾ ಜಗತ್ತೆಲ್ಲ ಶೂನ್ಯವೆಂಬಂತಾಗಿ ಜಿಗುಪ್ಸೆ ಆವರಿಸಿಕೊಳ್ಳುತ್ತದೆ. ಏನೇನು ಹುಚ್ಚು ಮನಸ್ಸಿನ ಮಜಲುಗಳು ವಿವಿಧ ಆಯಾಮಗಳಲ್ಲಿ ಹಂಗಿಸಲು ಆರಂಭಿಸುತ್ತದೆ. ಈ ಪಯಣವೇ … Read more

ಮಕ್ಕಳಲ್ಲಿ ಹೆಚ್ಚುತ್ತಿರುವ ಒತ್ತಡ: ವೈ. ಬಿ. ಕಡಕೋಳ

"ಅಮ್ಮಾ ಇಂದು ನನಗೆ ಹೊಟ್ಟೆ ನೋಯುತಿದೆ. ಶಾಲೆಗೆ ಹೋಗಲಾರೆ”, ಮಹೇಶನಿಗೆ ಶಾಲೆಗೆ ಹೋಗದೇ ಇರಲು ಇಂಥ ನೆಪ ಹೊಸತೇನಲ್ಲ. ಆತ ಆಗಾಗ ತಲೆನೋವು, ಹೊಟ್ಟೆನೋವು, ಎನ್ನುತ್ತಲೇ ಇರುತ್ತಾನೆ. ಕೆಲ ಸಲ ವಾಂತಿಯಾಗುತ್ತದೆ ಎಂದು ಹೇಳಿ ವಾಂತಿ ಸಹ ಮಾಡುತ್ತಾನೆ. ಆತನ ತಂದೆ ತಾಯಿ ಇದು ಆತನ ಹಠಮಾರಿತನ ಎಂದು ಭಾವಿಸುತ್ತಾರೆ. ಆತನನ್ನು ಹೊಡೆದು ಬಡಿದು ಬೈದು ಹೇಗಾದರೂ ಮಾಡಿ ಆತನನ್ನು ಶಾಲೆಗೆ ಕಳುಹಿಸುತ್ತಾರೆ.     ಅವರೇನೋ ಆತನದು ಹಠಮಾರಿತನ ಎಂದು ಭಾವಿಸಿದ್ದಾರೆ ಆತ ನಿಜವಾಗಿಯೂ ಅನಾರೋಗ್ಯಕ್ಕೀಡಾಗಿದ್ದಾನೆ. ಆತನಿಗೆ ಶಾಲೆಯ … Read more

ದೇವರಂಥವರಿವರು: ಪ್ರೇಮಾ ಟಿ ಎಮ್ ಆರ್

"ನೀನು ದೇವರನ್ನು ನೋಡಿದ್ದೀಯಾ?" ಮುಸ್ಸಂಜೆ ಜಗುಲಿ ಕಟ್ಟೆಮೇಲೆ  ಕೂತು ಹರಟುವಾಗೆಲ್ಲ ಈ ಥರ ತರ್ಲೆ ಪ್ರಶ್ನೆಗಳನ್ನು ಎಸೆದು ನನ್ನೊಳಗಿನ ಗಡಿಬಿಡಿಯನ್ನ ನೋಡುತ್ತ ಕೂಡ್ರುವದು  ಗೆಳತಿ ವೀಣಾಳ ಅಭ್ಯಾಸ.  ನಾನು ತಡಮಾಡದೇ ಹೂಂ ಎಂದೆ.  ನನ್ನ ಹೂಂ ಎಂಬ ಉತ್ತರಕ್ಕೆ ನಾನೇ ಗಲಿಬಿಲಗೊಂಡಿದ್ದೆ. ನನ್ನ ಹೂಂ ಗೆ ಉತ್ತರ ಹುಡುಕುತ್ತ ನನ್ನೊಳಗೆ ನಾನೇ ಹಿಮ್ಮುಖವಾದೆ. ಈಗ ನಾನೋಡಿದ ದೇವರನ್ನು ಹುಡುಕಬೇಕಿತ್ತು ನನ್ನೊಳಗೆ.  ಕೆಲ ತಿಂಗಳುಗಳ ಹಿಂದೆ ಒಂದು ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ ನಿರೂಪಕಿಯಾಗಿ ಹೋಗಿದ್ದೆ. ಪ್ರತಿಷ್ಠಿತ ಶಿಕ್ಷಣಸಂಸ್ಥೆಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮ. … Read more

ಕಿರು ಲೇಖನಗಳು: ನಿರ್ಮಲಾ ಹಿರೇಮಠ, ಸಹನಾ ಪ್ರಸಾದ್

ಯುವ ಪೀಳಿಗೆಯಲ್ಲಿ ಕನ್ನಾಡಾಭಿಮಾನ ಇಂದಿನ ಯುವಕರೆ ನಾಳಿನ ಸತ್ಪ್ರಜೆಗಳು ಎಂಬಂತೆ ಸ್ವಾಮಿ ವಿವೇಕಾನಂದರು ಯುವಶಕ್ತಿಯ ಮೇಲೆ ಅಗಾಧ ನಂಬಿಕೆ ಇಟ್ಟಿದ್ದರು. ಉಕ್ಕಿನ ನರಮಂಡಲ ಕಬ್ಬಿಣದಂತಹ ಮಾಂಸಖಂಡಗಳನ್ನು ಹೊಂದಿದಂತಹ ಯುವಕರು ಹಾಗೆ ಮನಸ್ಸಿನಲ್ಲಿ ದೃಢವಾದ ಆತ್ಮವಿಶ್ವಾಸ ನಂಬಿಕೆ ಹಾಗೂ ದೇಶಾಭಿಮಾನ ಭಾಷಾಭಿಮಾನ ಹೊಂದಿದ ಸಮರ್ಥ ಯುವಕರು ದೇಶಕ್ಕೆ ಬೇಕಾಗಿದೆ. ಮೊದಲು ತಾಯಿ ಹಾಲು ಕುಡಿದು ಲಲ್ಲೆಯಿಂದ ತೊದಲು ನುಡಿದು ಕೆಳೆಯರೊಡನೆ ಬೆಳೆದು ಬಂದ ಮಾತದಾವುದು ನಲ್ಲೆಯೊಲವ  ತೆರೆದು ತಂದ ಮಾತದಾವುದು ಎಂಬ ಬಿ ಎಂ ಶ್ರೀ ರವರ ಕಾಣಿಕೆ … Read more

ತಿಳುವಳಿಕೆ ವ್ಯರ್ಥ ಕಸರತ್ತಾಗದಿರಲಿ: ನರಸಿಂಹಮೂರ್ತಿ ಎಂ.ಎಲ್, ಮಾಡಪ್ಪಲ್ಲಿ

ನಾವೆಲ್ಲರೂ ಜಾಣರೇ ತಿಳುವಳಿಕೆಗಳಿಗೆ ಬರವಿಲ್ಲ . ಆದರೆ ಬದುಕುಗಳೇ ಬರದೆಡೆಗೆ ದಾಪುಗಾಲಿಡುತ್ತಿವೆ. ಅಂತರ್ಗ್ರಹ ಪರ್ಯಟನೆ ಮಾಡುತ್ತಿರುವ ನಾವುಗಳು ಜೀವಿಸುತ್ತಿರುವ ಗ್ರಹವನ್ನು ಪೀಡಿಸಿ ಪಿಪ್ಪೆ ಮಾಡುತ್ತಿದ್ದೇವೆ. ಪ್ರಪಂಚದ ನೋವು ನಲಿವುಗಳನ್ನು ದೊಡ್ಡ ಮಟ್ಟದಲ್ಲಿ ಚರ್ಚೆಗಳು ಮಾಡುತ್ತಾ ನಮ್ಮ ಅಕ್ಕಪಕ್ಕದ ಸಮಸ್ಯೆಗಳನ್ನೆ ಗಾಳಿಗೆ ತೂರುತ್ತೇವೆ. ಯಾವುದೇ ಕೆಲಸ ಮಾಡಲೀ ವೈಯಕ್ತಿಕ ಲಾಭವನ್ನೆ ನಿರೀಕ್ಷಿಸಿ ಮುನ್ಹ್ನೆಜ್ಜೆ ಹಾಕುತ್ತವೆ. ಇತ್ತೀಚೇಗೆ ತನುಮನಗಳನ್ನು ಮುಡಿಪಾಗಿಟ್ಟು ಸೇವೆಯ ಹೆಸರನ್ನು ವ್ಯಾಪಕವಾಗಿ ಬಳಸುತ್ತಾ ನ್ಯಾಯ, ಸತ್ಯಗಳ ಪರವಾದ ಕೆಲಸಕಾರ್ಯಗಳನ್ನು ಕೈಗೊಳ್ಳುತ್ತೇವೆ. ಅದರ ಹಿಂದೆ ಮಾತ್ರ ಸ್ವಹಿತವೂ ಕಡ್ಡಾಯವಾಗಿರುತ್ತದೆ. … Read more

ಗುಡವಿ ಪಕ್ಷಿಧಾಮ: ವಸಂತ ಬಿ ಈಶ್ವರಗೆರೆ

ಹಸಿರ ಹಾದಿಯ ಪಯಣ, ಮನ ತಣಿಸುವ ಕಾನನ. ಸವಿಯುತ್ತಾ ಸವಿಯುತ್ತಾ ಮುಂದೆ ಸಾಗಿದರೇ ಮಲೆನಾಡ ಹಬ್ಬಾಗಿಲಿನಲ್ಲಿ ಕೈ ಬೀಡಿ ಕರೆಯುವುದೇ ಗುಡವಿ ಎಂಬ ಪಕ್ಷಿಗಳ ಲೋಕ. ಈ ಪ್ರವಾಸಿ ತಾಣಕ್ಕೆ ಕಾಡಿನ ಮಧ್ಯದ ಹಾದಿಯ ಮೂಲಕ ಸಾಗುತ್ತಾ ಹೋದ ಹಾಗೆ, ಪ್ರವಾಸಿಗರ ಮನ ಮಿಡಿಯುತ್ತದೆ. ತಂಪಾದ ಹಾದಿಯ ಪಯಣ ನಿಮಗೆ ಮುಗಗೊಳಿಸುತ್ತದೆ.  ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನಿಂದ 12 ಕಿಲೋಮೀಟರ್ ದೂರದಲ್ಲಿರುವ ಸುಮಾರು 23 ಬಗೆಯ ಹಕ್ಕಿಗಳ ಕಲರವದ ತಾಣ ಗುಡವಿ ಪಕ್ಷಿಧಾಮ. 1986 ರಲ್ಲಿ ಜೆ.ಎಚ್.ಪಟೇಲ್ … Read more

ಮರದ ಆಸರೆ ಬಯಸಿದ ಬಳ್ಳಿ: ನಾಗಭೂಷಣ ಬಿ ಕೆ, ಚಂದ್ರಶೇಖರಪುರ

ನಯನಮನೋಹರಿಯಾದ ಅವಳ ಅಂದ ಚಂದ ನೋಡಿದರೆ ನೋಡುತಲೇ ಇರಬೇಕು ಎನ್ನುವಷ್ಟು ಆಕರ್ಷಕ ಮೊಗದವಳು. ತಲೆಯ ಮದ್ಯಕ್ಕೆ ಬೈತಲೆ ತೆಗೆದ ಮಾರುದ್ದ ಜಡೆಯವಳು.ಕತ್ತು ಆಡಿಸುತ್ತ ಮುತ್ತಿನಂತ ಮಾತುಗಳ ಹಾಡುತಿದ್ದರೆ ಕಿವಿಯ ಓಲೆಗಳು ನರ್ತಿಸುತಲಿರುತ್ತವೆ. ಆ ನರ್ತನ ಕಾಣಲು ನಿಜಕ್ಕೂ ಕಣ್ಗಳ ಪುಣ್ಯವೆ ಸರಿ. ಕಪ್ಪು ಕಾಡಿಗೆ ಬಳಿದ ಆ ಕಣ್ಣುಗಳ ನೋಟದಲ್ಲೂ ಒಂದು ಆಕರ್ಷಣೆ. ನಕ್ಕರೆ ನಾಜೂಕು ಕೆನ್ನೆಯ ಮೇಲೆ ಗುಳಿಯೊಂದು ಮೂಡಿ ಅವಳ ಅಂದವನು ಹೆಚ್ಚಿಸಿ ಎತ್ತಿ ತೋರಿತಲಿತ್ತು. ಒಟ್ಟಾರೆಯಾಗಿ ಹೇಳುವುದಾದರೆ ಹೊಳೆವ ಹುಣ್ಣಿಮೆಯ ಪೂರ್ಣಚಂದಿರನಂತೆ ಇರುತಿತ್ತು … Read more

ಮುಖವಾಡ ಕಳಚಿದಾಗ: ಅಮುಭಾವಜೀವಿ

ವ್ಯಕ್ತಿ ಹಾಗೂ ವ್ಯಕ್ತಿತ್ವದ ಮುಖವಾಡಗಳು ಕಳಚುವ ಕಾಲದ ನಂಬಿಕೆಯ ಪರಿಸ್ಥಿತಿ ನಿಜಕ್ಕೂ ಕಳವಳಕಾರಿಯಾಗಿರುತ್ತದೆ. ನಾವು ನಮಗಿಂತಲೂ ಹೆಚ್ಚು ನಂಬಿಕೆಯಿಟ್ಟ ಮನುಷ್ಯ ನಮ್ಮ ನಂಬಿಕೆಗೆ ಅರ್ಹನಲ್ಲ ಎಂದು ತಿಳಿದಾಗ ನಮ್ಮ ಮೇಲೆ ನಮಗೆ ಜಿಗುಪ್ಸೆಯಾಗುತ್ತದೆ. ಮಾನವ ಸಂಘಜೀವಿ .ಇಲ್ಲಿ ಬದುಕುವ ಪ್ರತಿಯೊಬ್ಬರಿಗೂ ಇನ್ನೊಬ್ಬರ ಅವಶ್ಯಕತೆ  ಇದ್ದೇ ಇರುತ್ತದೆ. ಈ ಜಗತ್ತಿನಲ್ಲಿ ಒಂಟಿ ಬದುಕು ಅಷ್ಟು ಸುಲಭವಲ್ಲ. ನೀರು ಆಹಾರ ಬಟ್ಟೆ ಮೈಥುನ ಸುಖದುಃಖ ನೋವುನಲಿವುಗಳನ್ನು ಹಂಚಿಕೊಳ್ಳಲು ಇನ್ನೊಬ್ಬರ ಸಹಾಯವನ್ನು ನಾವು ಯಾಚಿಸಲೇಬೇಕು. ನೀರು ಸ್ವಾಭಾವಿಕ ಆದರೂ ಅದನ್ನು ತಂದುಕೊಡಲು … Read more

ನೆರೆಹೊರೆಯವರೊಂದಿಗೆ ಹೇಗಿರಬೇಕು?: ವೈ. ಬಿ. ಕಡಕೋಳ

ಇತ್ತೀಚಿಗೆ ಪಕ್ಕದ ಮನೆಗೆ ನೆಂಟರು ಬಂದಿದ್ದರು ಅವರು ತಮ್ಮ ಮೋಬೈಲ್ ಚಾರ್ಜರ್ ತಂದಿರಲಿಲ್ಲ. ಆಗ ಅವರಿಗೆ ಮೋಬೈಲ್ ಚಾರ್ಜರ್ ಬೇಕಾಯಿತು. ನಮ್ಮ ಮನೆಗೆ ಬಂದರು. ಮೋಬೈಲ್ ನೋಡಿದೆ ಅದರ ಚಾರ್ಜರ್ ನಮ್ಮ ಮನೆಯಲ್ಲಿತ್ತು ಅವರಿಗೆ ಕೊಟ್ಟು ನಿಮ್ಮ ಮೋಬೈಲ್ ಚಾರ್ಜ ಆದ ತಕ್ಷಣ ಮರಳಿಸಿ ಎಂದು ತಿಳಿಸಿದೆ. ತಗೆದುಕೊಂಡು ಹೋದರು. ಮರುದಿನ ಸಂಜೆಯಾದರೂ ಚಾರ್ಜರ ಮರಳಿಸಿರಲಿಲ್ಲ. ಆಫೀಸಿಂದ ಮನೆಗೆ ಬಂದು ಹೆಂಡತಿಯನ್ನು ಅವರ ಮನೆಗೆ ಕಳಿಸಿದೆ. ಅಯ್ಯೋ ಮರೆತೇ ಬಿಟ್ಟಿದ್ದೆವು. ತಗೊಳ್ಳಿ ಎಂದು ಚಾರ್ಜರ್ ಕೊಟ್ಟರಂತೆ. ಅಷ್ಟೇ … Read more

ಡಾ.ಬಸವಲಿಂಗ ಪಟ್ಟದೇವರ ಸಾಹಿತ್ಯಿಕ ಕೊಡುಗೆ: ಸಂಜೀವಕುಮಾರ ಶಿವಪುತ್ರಪ್ಪಾ ನಡುಕರ

ಕರ್ನಾಟಕದಲ್ಲಿ ಬಸವತತ್ವ ಚಿಂತನೆ ಧರ್ಮ ಪ್ರಚಾರದ ಜೊತೆಗೆ ಅನೇಕ ಮಠಾಧೀಶರು ಸಾಹಿತ್ಯದ ಬರವಣಿಗೆಯಲ್ಲಿ ಸಹ ತೊಡಗಿದ್ದಾರೆ. ಅವರಲ್ಲಿ ಡಾ.ಜಚನಿ, ಡಾ.ಮೂಜಗಂ, ಡಾ.ಅನ್ನದಾನೀಶ್ವರ ಸ್ವಾಮಿಗಳು, ಡಾ.ಮುರುಘ ಶರಣರು ಅವರಂತೆ ಡಾ. ಬಸವಲಿಂಗ ಪಟ್ಟದೇವರು ಕೂಡಾ ಒಬ್ಬರು. ಬಸವಲಿಂಗ ಪಟ್ಟದೇವರು ವೈಚಾರಿಕ ಕ್ರಾಂತಿಯ ಮೂಲಕ ಸಾಮಾಜಿಕ ಚಿಂತನೆಯ ಪ್ರಗತಿಪರ ಚಿಂತಕರು ಹೌದು. ಅವರು ಬಸವ ತತ್ವ ಚಿಂತನೆ ಸಾಹಿತ್ಯವನ್ನು ರಚಿಸಿದ್ದಾರೆ. ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕøತಿಕ, ಜೊತೆಗೆ ಸಾಹಿತ್ಯದ ರಚನೆಗೂ ತೊಡಗಿದ್ದಾರೆ. ಬಸವಲಿಂಗ ಪಟ್ಟದೇವರು ಮೂಲತಃ ಕವಿಗಳು ಅವರು ವಿದ್ಯಾರ್ಥಿ … Read more

ಜಿಯಾವುಲ್ಲಾಖಾನ್ ಅವರ ಬಳಿ ಎಲ್ಲಾ ದೇಶದ ನೋಟು ಮತ್ತು ನಾಣ್ಯಗಳು: ಪ್ರವೀಣ್ ಕುಮಾರ ಸಲಗನಹಳ್ಳಿ

ಇದು ಡೀಮೋನಿಟೈಜೆಷನ್ ಸಮಯ. ಇಲ್ಲಿ ಹಳೆಯ ನೋಟುಗಳಿಗೆ ಕಾವಡೆ ಕಾಸಿನ ಕಿಮ್ಮತ್ತು ಇಲ್ಲ. ಒಂದು ಕಾಲದಲ್ಲಿ ತಮ್ಮದೇ ಆದ ಮೌಲ್ಯವನ್ನು ಹೊಂದಿದ್ದ ನೋಟುಗಳು, ಇಂದು ಮೌಲ್ಯಕ್ಕೂ ತಮಗೂ ಸಂಬಂಧ ಇಲ್ಲವೆಂಬಂತೆ ಮೂಲೆ ಸೇರಿಕೊಳ್ಳುತ್ತಿವೆ. ಆದರೆ, ಆ ರೀತಿ ಮೌಲ್ಯ ಕಳೆದುಕೊಂಡ ನೋಟುಗಳು ಮುಂದೂಂದು ದಿನ ನಮ್ಮನ್ನು ಕಣ್ಣರಳಿಸಿಕೊಂಡು ನೋಡುವಂತೆ ಮಾಡುವುದರಲ್ಲಿ ಸಂದೇಹವಿಲ್ಲ. ಅಂತಹ ಕಣ್ಣರಳಿಸಿಕೊಂಡು ಹಳೆಯ ನೋಟುಗಳು ಮತ್ತು ನಾಣ್ಯಗಳನ್ನು ನೋಡಬೇಕು ಎಂದರೆ ಶಿವಮೊಗ್ಗ ನಗರದಲ್ಲಿರುವ ತಂಪು ಪಾನಿಯಗಳ ವ್ಯಾಪಾರಿ ಜಿಯಾವುಲ್ಲಾಖಾನ್ ಅವರ ಅಂಗಡಿಗೆ ನೀವು ದಾಂಗುಡಿ … Read more

ವಿದ್ಯಾರ್ಥಿಗಳ ಪಾಲಿನ ಅಚ್ಚುಮೆಚ್ಚಿನ ಶಿಕ್ಷಕ- ತಹಶೀಲ್ದಾರ: ದಾವಲಸಾಬ ತಾಳಿಕೋಟಿ

(ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಸಂಭ್ರಮ ಈ ನಿಮಿತ್ತ ಲೇಖನ)  ಶಿಕ್ಷಕ ವೃತ್ತಿಯಂದರೇ ಎಲ್ಲಕ್ಕಿಂತಲೂ ಸರ್ವಶ್ರೇಷ್ಟವಾದ ಕಾಯಕವಾಗಿದೆ. ಶಿಕ್ಷಕ ತನ್ನಲ್ಲೇ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಧಾರೆಯರೇದು ಉತ್ತಮ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಶಿಕ್ಷಕನ ಪಾತ್ರ ಬಹುಮುಖ್ಯವಾದದ್ದು. ಇಂತಹ ಶ್ರೇಷ್ಠ ವೃತ್ತಿಗೆ ಬರಬೇಕಾದರೇ ಪೂರ್ವಿಕರ ಆರ್ಶಿವಾದ ಇರಬೇಕು ಎನ್ನುತ್ತಾರೆ. ಮುಂದೆ ಗುರಿ ಇರಬೇಕು ಹಿಂದೆ ಗುರುವಿರಬೇಕು ಗುರುವಿಲ್ಲದೇ ಎನ್ನುವಂತೆ  ಇಲ್ಲೋಬ್ಬ ಶಿಕ್ಷಕ ತನ್ನ ಕಾಯಕ ನಿಷ್ಠೆಯಿಂದಲೇ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕನಾಗಿ, ಜಿಲ್ಲಾ ಉತ್ತಮ ಶಿಕ್ಷಕನಾಗಿ, ಸಹ ಶಿಕ್ಷಕರಾಗಿದ್ದುಕೊಂಡೆ ಶಾಲೆಯ … Read more

ನಮಸ್ಕಾರ-ಚಮತ್ಕಾರ: ವೈ. ಬಿ. ಕಡಕೋಳ

“ನಮಸ್ಕಾರ” ಸರ್ ಹೇಗಿದ್ದೀರಿ?” ಎಂಬ ಧ್ವನಿ ನಿಮ್ಮೆದುರಿಗೆ ಬಂದರೆ ತಕ್ಷಣ ನಿಮ್ಮ ಭಾವನೆ ಹೇಗಿರುತ್ತದೆ? ಎಲ್ಲಿಯೋ ಈ ಧ್ವನಿ ಕೇಳಿದೆನೆಲ್ಲ ಎಂದೊಮ್ಮೆ ಮನಸ್ಸಿನಲ್ಲಿ ಅಂದುಕೊಳ್ಳಬಹುದು.  ಅಥವ ಗುರುತಿಸಿದ ವ್ಯಕ್ತಿಯ ಧ್ವನಿಯ ಪರಿಚಯವಿದ್ದರೆ ತಕ್ಷಣ ನಮಸ್ಕಾರ ಹೇಗಿದೀರಿ? ಎಂಬ ಉಭಯಕುಶಲೋಪಚರಿಯತ್ತ ಮನಸ್ಸು ಹೊರಳಬಹುದು. ಅಂತಹ ಶಕ್ತಿ ಇರುವುದು ಈ ನಮಸ್ಕಾರ ಪದಕ್ಕೆ ಅಲ್ಲವೇ?  ಈ ನಮಸ್ಕಾರ ಇಂದು ನಿನ್ನೆಯದಲ್ಲ. ವೇದಗಳ ಕಾಲದಿಂದಲೂ ಭಾರತದ ಸನಾತನ ಧರ್ಮದಲ್ಲಿ ಇದಕ್ಕೆ ತನ್ನದೇ ಆದ ವೈಶಿಷ್ಟ್ಯತೆ ಮತ್ತು ಗೌರವ ಸೂಚಕ ಮೌಲ್ಯತೆಯಿದೆ. , … Read more

2017ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ

ಕನ್ನಡ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ 'ವಿಭಾ ಸಾಹಿತ್ಯ ಪ್ರಶಸ್ತಿ-2017' ಕ್ಕಾಗಿ ಕನ್ನಡದ ಕವಿ/ಕವಿಯಿತ್ರಿಯರಿಂದ ಮೂವತ್ತಕ್ಕೂ ಹೆಚ್ಚು ಸ್ವರಚಿತ ಕವಿತೆಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಅನುವಾದಿತ ಕವಿತೆಗಳು ಬೇಡ. ಈ ಪ್ರಶಸ್ತಿಯು ರೂ.5000/- ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಪ್ರಶಸ್ತಿ ವಿಜೇತ ಹಸ್ತಪ್ರತಿಯನ್ನು ಗದಗ ದ ಲಡಾಯಿ ಪ್ರಕಾಶನದಿಂದ ಪ್ರಕಟಿಸಲಾಗುವುದು.  ಆಸಕ್ತರು ತಮ್ಮ ಹೊಸ ಕವಿತೆಗಳ ಹಸ್ತಪ್ರತಿಯನ್ನು ಸ್ಪರ್ಧೆಗೆ ಕಳುಹಿಸಲು ವಿನಂತಿಸಲಾಗಿದೆ.  ವಿ.ಸೂ; ಯಾವುದೇ ಕಾರಣಕ್ಕೂ ಹಸ್ತಪ್ರತಿಯನ್ನು ಹಿಂದಿರುಗಿಸಲಾಗುವುದಿಲ್ಲ. ಮೇಲ್ ಮೂಲಕ ಕಳಿಸುವದಕ್ಕಿಂತ ಡಿಟಿಪಿ ಮಾಡಿದ ಹಸ್ತಪ್ರತಿ … Read more

“ಎಲ್ಲರಂಥವನಲ್ಲ ನನ್ನಪ್ಪ” ಪುಸ್ತಕ ಬಿಡುಗಡೆ

ಆತ್ಮೀಯರೇ, ಪಂಜುವಿನ ಲೇಖಕರು ಮತ್ತು ಅಂಕಣಕಾರರಾದ ಗುರುಪ್ರಸಾದ ಕುರ್ತಕೋಟಿಯವರ ಸಂಪಾದಕತ್ವದಲ್ಲಿ ಮೈತ್ರಿ ಪ್ರಕಾಶನ "ಎಲ್ಲರಂಥವನಲ್ಲ ನನ್ನಪ್ಪ" ಎಂಬ ಪುಸ್ತಕ ಹೊರತರುತ್ತಿದೆ.  ಈ ಪುಸ್ತಕ ಬಿಡುಗಡೆಯ ಆಹ್ವಾನ ಪತ್ರಿಕೆ ಕೆಳಗಿನ ಚಿತ್ರದಲ್ಲಿದೆ.  ಆಸಕ್ತರು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ್ಳಲು ವಿನಂತಿ.. ಹಾಗೆಯೇ ಈ ಪುಸ್ತಕದ ಪ್ರತಿಯನ್ನು ಈ ಕೆಳಗಿನ ಲಿಂಕ್ ಒತ್ತಿ ಫಾರಂ ಅನ್ನು ಭರ್ತಿ ಮಾಡಿ ರಿಯಾಯಿತಿ ದರದಲ್ಲಿ ಮುಂಗಡವಾಗಿ ಕಾದಿರಿಸಬಹುದಾಗಿದೆ. https://goo.gl/forms/r7kCj5KlGV86XoBi2 ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಪಂಜು ಬಳಗದ ಪರವಾಗಿ ಶುಭಾಶಯಗಳು ಹಾಗು ಗುರುಪ್ರಸಾದ್ ಕುರ್ತಕೋಟಿ ಮತ್ತು ಪುಸ್ತಕದ … Read more

” ಸೂಫಿ, ಪ್ರೇಮ ಮತ್ತು ಗಜಲ್ “: ಕೃಷ್ಣ ಶ್ರೀಕಾಂತ ದೇವಾಂಗಮಠ

    ಉರ್ದು, ಅರೇಬಿಕ್ ಹಾಗೂ ಪರ್ಷಿಯನ್  ಗಜಲ್ ಕಾವ್ಯ ಮತ್ತು ಹಲವು ಪ್ರಕಾರದ ಸೂಫಿ ಕಾವ್ಯಗಳು ಮೂಲದಲ್ಲಿ ಪ್ರೇಮ ಕಾವ್ಯಗಳೇ. ಅನೇಕ ಸೂಫಿಗಳು ಬರೆದಿರುವುದು ಗಜಲ್ ಪ್ರಕಾರದಲ್ಲೇ. ಕೆಲವು ಸೂಫಿಗಳು ' ಮಸನವಿ ' ಅಂದರೆ ದ್ವಿಪದಿಯಂಥ ರಚನೆಗಳನ್ನು ತಮ್ಮ ಕಾವ್ಯದಲ್ಲಿ ಬಳಸಿದ್ದಾರೆ. ಸೂಫಿಯನ್ನು ಪ್ರೇಮ ಕಾವ್ಯ ಎಂದು ಅರ್ಥೈಸುವಲ್ಲಿ ಅವರ ಪ್ರೇಮದ ತೀವ್ರ ಒಡನಾಟವಿರುವುದು ಬೇರಾರ ಮೇಲು ಅಲ್ಲಾ ಅದು ಸ್ವತಃ ಅವರ ಆರಾಧ್ಯ ದೈವ ಅಲ್ಲಾಹನ ಮೇಲೆಯೇ . ಹೀಗೆ ಸೂಫಿಯಲ್ಲಿ ಅಲ್ಲಾಹನ … Read more