ಯು.ಆರ್. ಅನಂತಮೂರ್ತಿಯವರ ಭಾರತೀಪುರ

  ಇತ್ತೀಚಿಗೆ ನಾನು ಓದಿದ ಕಾದಂಬರಿ ಶ್ರೀ ಯು.ಆರ್. ಅನಂತಮೂರ್ತಿರವರ ‘ಭಾರತೀಪುರ’, ಈ ಕಾದಂಬರಿ ಈ ವರ್ಷದ ಕೆ.ಎ.ಎಸ್ ಮುಖ್ಯ ಪರೀಕ್ಷೆಯಲ್ಲಿ ಪಠ್ಯವಸ್ತುವೂ ಆಗಿದೆ ಗೆಳೆಯರೊಬ್ಬರ ಸಲಹೆಯಂತೆ ಈ ಕಾದಂಬರಿಯನ್ನು ಓದಿದೆ. ಕಾದಂಬರಿಯ ನಾಯಕ ‘ಜಗನ್ನಾಥ ಭಾರತೀಪುರದ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದವನಾಗಿದ್ದು, ಉನ್ನತ ಶಿಕ್ಷಣವನ್ನು ‘ಇಂಗ್ಲೆಂಡಿನಲ್ಲಿ ಪಡೆದಿರುತ್ತಾನೆ. ಈತ ಇಂಗ್ಲೆಂಡಿನಲ್ಲಿ ‘ಬಂಡಾಯ’ ದ ಬಗ್ಗೆ ಮಾತನಾಡುತ್ತ ಎಲ್ಲರನ್ನೂ ಆಕರ್ಷಿಸಿರುತ್ತಾನೆ. ಆ ವೇಳೆಗೆ ಅವನಿಗೆ ‘ಮಾರ್ಗರೇಟ್’ ಗೆಳತಿಯಾಗಿ ಸಿಗುತ್ತಾಳೆ. ಅತೀ ಶೀಘ್ರದಲ್ಲೆ ಪ್ರೇಯಸಿಯಾಗಿರುತ್ತಾಳೆ. ಜಗನ್ನಾಥನ ಗೆಳೆಯ, ಸದಾಕಾಲ … Read more

ಕಾರ್ನಾಡರ “ಹಯವದನ”

ಮನುಷ್ಯನ ಅಪೂರ್ಣತೆಯ ಬಗೆಗೆ ಆಲೋಚಿಸಲು, ಕಾರ್ನಾಡರ “ಹಯವದನ” ಓದಬೇಕು. ನಾಟಕ ಆರಂಭ ಆಗುವುದು ಗಣೇಶನ ಅಪೂರ್ಣತೆಯ ಉಲ್ಲೇಖನದಿಂದ. ಇಲ್ಲಿ ಕಂಡುಬರುವುದು ಬರೇ ಮೂರು ಮುಖ್ಯ ಪಾತ್ರಗಳು – ಪದ್ಮಿನಿ, ದೇವದತ್ತ ಹಾಗೂ ಕಪಿಲ. ಇಲ್ಲಿ ಅಪೂರ್ಣತೆಯ ಪ್ರತೀಕ ಅನ್ನುವಂತೆ ಹಯವದನನಿದ್ದಾನೆ.  ಇಲ್ಲಿನ ಕಥೆ ಸಾಮಾನ್ಯವಾಗಿ ಗೊತ್ತಿರುವಂತಹದೆ. ಯಾವುದೇ ಕಾರಣಕ್ಕೆ ಇಬ್ಬರು ಮನುಷ್ಯರ ತಲೆ ಅದಲು ಬದಲಾದರೆ, ತಲೆ ಇರುವವನನ್ನು ಅವನ ಹೆಸರಿನಿಂದ ಗುರುತಿಸುತ್ತೇವೆ, ಯಾಕೆಂದರೆ ತಲೆ ಮುಖ್ಯ. ಈ ಸಣ್ಣ ತುಣುಕನ್ನು ಹಿಡಿದುಕೊಂಡು ಕಾರ್ನಾಡರು ತುಂಬಾ ವಿಚಾರ … Read more

ಕಾಡತೊರೆಯ ಜಾಡಿನಲ್ಲಿ ಜೀವನ ಪ್ರೀತಿಯ ಚಿಲುಮೆ…

ಕಡಿದಾಳು ಶಾಮಣ್ಣನವರ ಬಗ್ಗೆ ತೇಜಸ್ವಿಯವರ ಪುಸ್ತಕಗಳಲ್ಲಿ, ಆವಾಗಿವಾಗ ಪತ್ರಿಕೆಗಳಲ್ಲಿ ಓದಿದ್ದೆನಷ್ಟೇ. ಅವರ ಆತ್ಮಕಥೆಯ ಕೆಲವು ಭಾಗಗಳನ್ನು ಮಯೂರ ಮಾಸಪತ್ರಿಕೆಯಲ್ಲಿ ಓದಿ ಆಸಕ್ತಗೊಂಡಿದ್ದೆನಾದರೂ ಪುಸ್ತಕ ಖರೀದಿಸಿರಲಿಲ್ಲ. ಕುಪ್ಪಳ್ಳಿಯಲ್ಲಿ ‘ನಾವು ನಮ್ಮಲ್ಲಿ’ ತಂಡ ಏರ್ಪಡಿಸಿದ್ದ ‘ಕರ್ನಾಟಕ ಕಂಡ ಚಳುವಳಿಗಳು’ ಸಂವಾದಗೋಷ್ಠಿಯಲ್ಲಿ ಕಡಿದಾಳು ಶಾಮಣ್ಣನವರನ್ನು ಮುಖತಃ ಭೇಟಿಯಾದಾಗ ಅವರಲ್ಲಿದ್ದ ಲವಲವಿಕೆ, ಉತ್ಸಾಹ ಕಂಡು ಅಚ್ಚರಿಪಟ್ಟಿದ್ದೆ. ಚಳುವಳಿಗಳ ಬಗ್ಗೆ ಬಹುತೇಕರಲ್ಲಿ ಸಿನಿಕತೆಯ ಭಾವವೇ ಹೆಚ್ಚುತ್ತಿರುವ ಈ ಕಾಲಘಟ್ಟದಲ್ಲಿ ಯಾವ ನ್ಯಾಯಯುತ ಹೋರಾಟವೂ ವ್ಯರ್ಥವಾಗುವುದಿಲ್ಲ ಎಂಬ ಶಾಮಣ್ಣನವರ ಮನಸ್ಥಿತಿ ಮೆಚ್ಚುಗೆಯಾಗಿತ್ತು. ಅವರ ಜೀವನಗಾಥೆಯನ್ನು ಸಂಪೂರ್ಣ … Read more