ನಾಲ್ವರ ಕವನಗಳು: ವಿನಾಯಕ ಭಟ್, ಇಂದುತನಯ, ಯದುನಂದನ್ ಗೌಡ ಎ.ಟಿ., ಶ್ರೀದೇವಿ ಕೆರೆಮನೆ
ಅದೇ ರಾಗ, ಬೇರೆ ಹಾಡು.. (ಧಾಟಿ: ಚೆಂದುಟಿಯ ಪಕ್ಕದಲಿ; ಚಿತ್ರ: ಡ್ರಾಮ) ಕಂಗಳಲಿ ಕೋರೈಸೊ ಬೆಳದಿಂಗಳಾ ಹೊಳಪ ಚಂದಿರನ ಮೊಗದಲ್ಲೂ ನಾ ಕಾಣೆ; ಅಂಗಳದಿ ನೀ ಬರೆದ ರಂಗೋಲಿಯ ಹಾಗೇ ಬಾಳನ್ನು ಸಿಂಗರಿಸು ಓ ಜಾಣೆ; ಬರೆದಿರುವೆ ಈ ಗೀತೆ ನಿನಗಾಗಿ.. ಮೂಡಿರುವೆ ನೀ ಇದರ ಶೃತಿಯಾಗಿ.. ಹಾಡೋಣವೇ ಒಮ್ಮೆ ಜೊತೆಯಾಗಿ? ಎತ್ತರದಿ ಅರಳಿರುವ ಚಾಚೊ ಕೈಯ್ಯಿಗೆ ಸಿಗದ ಪಾರಿಜಾತದ ಹೂವು ಬಲು ಚಂದವಂತೆ; ನೀ ದೂರ ಸರಿದಂತೆ ನೆನಪುಗಳು ಸನಿಹಾಗಿ ಗಾಢವಾಗುವ ಮೋಹಕೆ ಕೊನೆಯೆಂಬುದುಂಟೆ? ಎಡರುಗಳು … Read more