ಸ್ವಗತ: ನಾಗರೇಖಾ ಗಾಂವಕರ
ಎರಡನೇಯ ಗರ್ಭವೂ ಹೆಣ್ಣೆಂದು ಗೊತ್ತಾಗಿದೆ. ಗಂಡ ಆತನ ಕುಟುಂಬ ಸುತಾರಂ ಮಗುವನ್ನು ಇಟ್ಟುಕೊಳ್ಳಲು ತಯಾರಿಲ್ಲ. ತಾಯಿಯೊಬ್ಬಳು ಒತ್ತಾಯದ ಗರ್ಭಪಾತಕ್ಕೆ ಸಿದ್ಧಳಾಗಿ ಕೂತಿದ್ದಾಗಿದೆ, ತಾಯಿಯ ಗರ್ಭದೊಳಗಿನ ಭ್ರೂಣ ಬಿಕ್ಕಳಿಸುತಿದೆ. ಅಯ್ಯೋ! ಅವರು ಬಂದೇ ಬರುತ್ತಾರೆ. ನನ್ನನ್ನು ಕತ್ತರಿಸಿ ಹೊರಗೆಸೆಯಲು. ಅವರಿಗೇನೂ ಅದು ಹೊಸತಲ್ಲ. ಆದರೆ ನನ್ನಮ್ಮನಿಗೆ ನಾನು ಏನೂ ಅಲ್ಲವೇ? ಅವಳ ರಕ್ತದ ರಕ್ತ ನಾನು. ಅವಳ ಮಾಂಸದ ಮುದ್ದೆ ನಾನು. ಅಮ್ಮ ದಯವಿಟ್ಟು ಹೇಳಮ್ಮ. ಅವಳಿಗೆ ನನ್ನ ದನಿ ಕೇಳುತ್ತಿಲ್ಲವೇ? ಅಮ್ಮನ್ಯಾಕೆ ಮೂಕಿಯಾಗಿದ್ದಾಳೆ.. ಸಪ್ಪಗಿದ್ದಾಳೆ.. ನನಗೆ ಗೊತ್ತು. … Read more