ಹರಕೆ ತೀರಿತ್ತು…! (ಮೊದಲ ಭಾಗ) : ಸಾವಿತ್ರಿ ವಿ. ಹಟ್ಟಿ
ದೀಪಿಕಾ ಮೇಲೆದ್ದು ಕುಳಿತಳು. ಎಷ್ಟೊ ಹೊತ್ತು ನಿದ್ರೆ ಬಾರದೆ ಸೆಖೆ ಸೆಖೆ ಎಂದು ಒದ್ದಾಡುತ್ತಲೆ ಇದ್ದ ಪತಿ ನಾಗರಾಜ ಅದೇ ದನೇ ನಿದ್ರೆ ಹೋಗಿದ್ದ. ಗಡಿಯಾರದ ಕಡೆ ನೋಡಿದಳು. ಆಗಲೆ ಮಧ್ಯರಾತ್ರಿ. ಪಕ್ಕದಲ್ಲಿ ಮಕ್ಕಳು ಲೋಕದ ಯಾವ ಚಿಂತೆಯ ಸೋಂಕೂ ಇಲ್ಲದೆ ಶಾಂತವಾಗಿ ನಿದ್ರಿಸುತ್ತಿದ್ದಾರೆ. ಅವಳಿಗೆ ಮಾತ್ರ ನಿದ್ರೆ ಸನಿಹವೂ ಸುಳಿಯುತ್ತಿಲ್ಲ. ಅವಳ ಒಡಲು ಬೆಂಕಿಗೆ ಆಹುತಿಯಾಗಿ ದಗದಗಿಸುತ್ತಿದೆ. ಕಟು ಸತ್ಯ ಸಂಗತಿಯನ್ನು ತಿಳಿದುಕೊಂಡಾಗಲೆ ಎದೆ ಬಿರಿದು ಎರೆಭೂಮಿ ಬಾಯಿ ಬಿಟ್ಟಂತಾಗಿದೆ. ಕಣ್ಣುಗಳಲ್ಲಿ ಆ ಮದ್ಯಾಹ್ನದವರೆಗೂ ನಳನಳಿಸುತ್ತಿದ್ದ … Read more