ಕಥಾಲೋಕ

ಸೊಕ್ಕಿನ ಕೋಗಿಲೆ: ಚೇತನ್ ಕೆ ಹೊನ್ನವಿಲೆ

  ಅವಳು ಇದ್ದದ್ದು ಹಾಗೆ!! ಸೊಕ್ಕಿನ ಕೋಗಿಲೆ ಹಾಗೆ!! ಆ ಕೋಗಿಲೆಯ ಕಂಠಕ್ಕೆ ತೂಗದ ತಲೆಗಳಿಲ್ಲ, ಮಣಿಯದ ಮನಗಳಿಲ್ಲ.   ಹೆಸರು ಪೂರ್ವಿ!!  ಮನೆಯವರು ಪ್ರೀತಿಯಿಂದ ಇಟ್ಟ ಹೆಸರು. ಹಾಡೋದಕ್ಕೆ ಅಂತಲೇ ಹುಟ್ಟಿದವಳು.  ಹಾಡಲು ನಿಂತರೆ ಸಂಧಿಸುತ್ತಿದ್ದುದು, ಕರ್ಣಗಳನ್ನಲ್ಲ!! ತೊಯ್ದ ಆತ್ಮಗಳನ್ನ!! ಆ ತನ್ಮಯತೆಯನ್ನು, ಅವಳು ಅದನ್ನು ಅನುಭವಿಸುವ ಸೊಬಗನ್ನು ನೋಡಲು, ಕಲಾರಸಿಕರು ಹಾತೊರೆಯುವರು. ಸೊಕ್ಕಿನ ಕಂಠದಿಂದ ಬರುತ್ತಿದ್ದ ಧ್ವನಿ , ಹೃದಯ ಕಿತ್ತು ಬಂದಂತೆ. ಸಹಜ ಮಾತಿನಲ್ಲೂ, ದೂರಬೆಟ್ಟದ ದೇವಸ್ಥಾನದ ಗಂಟೆ ಹೊಡೆದಂತೆ. ಕೊರಳಿನ ಮಾಧುರ್ಯ!! […]

ಕಥಾಲೋಕ

ಸರ್ವತ್ರ:’ಪ್ರೀತೀಶ’

ಚಲಂ ನನ್ನ ಬೆನ್ನು ಹತ್ತಿಬಿಟ್ಟಿತ್ತು.  ಯಾವತ್ತೂ ನನ್ನ ಮಾತು ಮೀರದ ಚಲಂ ಇಂದು ಬೇಡಬೇಡವೆಂದರೂ, ನಾನು ಕೋರ್ಟಿಗೆ ಹೋಗುತ್ತಿದ್ದೇನೆ, ಅಲ್ಲಿ ನೀನು ಬರಬಾರದು ಎಂದು ಎಷ್ಟು ಹೇಳಿದರೂ ಕೇಳುತ್ತಿಲ್ಲ. ದಾರಿಯಲ್ಲಿ ಒಂದೆರಡು ಬಾರಿ ಸಿಟ್ಟಿಗೂ ಬಂದೆ.  ನನ್ನ ಸಿಟ್ಟಿಗೆ ಹೆದರಿ ಕಾಲು ಉದ್ದಕ್ಕೆ ಬಿಟ್ಟು ದಾರಿಯಲ್ಲಿ ಕುಳಿತುಕೊಂಡಿತು.  ಹಾಳಾಗಿ ಹೋಗಲಿ, ಮನೆ ದಾರಿ ಅದಕ್ಕೆ ಗೊತ್ತು, ಯಾವಾಗಲಾದರೂ ಮನೆಗೆ ಹೋಗಲಿ ಎಂದು ನಾನು ಬಿರಬಿರನೆ ನಡೆದುಬಿಟ್ಟೆ.  ಮೊದಲೇ ಅದರ ಹಟದಿಂದಾಗಿ ಆಫೀಸಿಗೆ ಹೋಗುವುದು ತಡವಾಗಿತ್ತು. ಕೋರ್ಟಿನ ಗೇಟು […]

ಕಥಾಲೋಕ

ಮೆರವಣಿಗೆ: ವೀರೇಂದ್ರ ರಾವಿಹಾಳ್

  ಹಿರಿಗೌಡರ ಮಗನ ಮದುವೆಯ ಮೆರವಣಿಗೆಯು ಅತಿ ವೈಭವದಿಂದ ಸಾಗಿ ಹೊರಟಿತ್ತು. ಹೂವಿನಿಂದ ಅಲಂಕೃತವಾದ ರಥದಲ್ಲಿ ನವದಂಪತಿಗಳು ಯುವರಾಜ-ಯುವರಾಣಿಯರಂತೆ ಕಂಗೊಳಿಸುತ್ತಿದ್ದರು. ರಥದ ಮುಂದೆ ಕಿಕ್ಕಿರಿದ ಭಾರಿ ಜನಸಮೂಹ… ಹಿರಿಗೌಡರ ಸಂಬಂಧಿಗಳು, ಗೆಳೆಯರು, ಪುರಜನರು… ಹೀಗೆ ನಭದಲ್ಲಿ ತಾರೆಗಳ ದಿಬ್ಬಣವೇ ಹೊರಟಂತ್ತಿತ್ತು. ಎಡ-ಬಲದ ಉದ್ದಕ್ಕೂ ದೀಪಾಲಂಕೃತ ಸಾಲುಗಳು ಹಿರಿಗೌಡರ ಮಗನ ಮದುವೆಯ ವೈಭವವನ್ನು ಸಾರಿ ಹೇಳುತ್ತಿದ್ದವು. ಮೆರವಣಿಗೆಯ ಮುಂಚೂಣಿಯಲ್ಲಿ ಬೆಂಗಳೂರು ಬ್ಯಾಂಡ್‌ನ ಸಿನಿಮಾ ಹಾಡು ಭರ್ಜರಿಯಾಗಿ ಸಾಗಿತ್ತು. ಇಡೀ ಊರಿಗೆ ಇದೊಂದು ಉತ್ಸವವೆನಿಸಿತ್ತು. ಕೆಲವು ಜನ ಇದನ್ನೆಲ್ಲಾ ನೋಡಿದ್ರೆ […]

ಕಥಾಲೋಕ

ನವೀನ ಕಹಾನಿ: ನವೀನ್ ಮಧುಗಿರಿ

  ಜವಾಬ್ದಾರಿ ಅವನಿಗಿದ್ದದ್ದು ಅವಳೊಬ್ಬಳೇ ಅಕ್ಕ. ತಂದೆ-ತಾಯಿ ಇಲ್ಲದವನನ್ನು, ಅಕ್ಕನೇ ತಂದೆ ತಾಯಿಯಂತೆ ಸಾಕಿ ಸಲಹಿದಳು. ಜೊತೆಗೆ ಓದಿಸಿದಳು. ಅವನಿಗಿದ್ದ  ಆಸೆಯೆಂದರೆ- 'ಅಕ್ಕ ನನಗಾಗಿ ಎಷ್ಟೋಂದು ಕಷ್ಟಪಟ್ಟಿದ್ದಾಳೆ? ಕಷ್ಟದ ನೆರಳೂ ಕೂಡ ನನ್ನನ್ನು ಹಿಂಬಾಲಿಸದಷ್ಟು ಸುಖವಾಗಿ ಬೆಳೆಸಿದ್ದಾಳೆ. ನಾನೂ ಕೂಡ ಕೆಲಸಕ್ಕೆ ಹೋಗುತ್ತಿದ್ದಂತೆಯೇ, ಅಕ್ಕನನ್ನು ಸುಖವಾಗಿ ನೋಡಿಕೊಳ್ಳಬೇಕು. ಒಳ್ಳೆಯ ಅನುಕೂಲಸ್ಥರ ಮನೆಗೇ ಅಕ್ಕನನ್ನು ಸೊಸೆಯಾಗಿ ಕಳಿ ಸಬೇಕು.'   ಅವನಂದುಕೊಂಡಂತೆಯೇ ಒಳ್ಳೆಯ ಕೆಲಸವೂ ಸಿಕ್ಕಿತು. ಉತ್ತಮ ಮನೆತನದ ಸಭ್ಯಸ್ಥ ಹುಡುಗನೊಂದಿಗೇ  ಅಕ್ಕನ  ಮದುವೆಯನ್ನೂ ಮಾಡಿ ಮುಗಿಸಿದ. ಆಗವನ ಗೆಳೆಯ ಹೇಳಿದ- 'ಅಂತೂ ನೀನಂದುಕೊಂಡಂತೆ […]

ಕಥಾಲೋಕ

ಕವಲುದಾರಿ: ಹರ್ಷ ಮೂರ್ತಿ

  ಸಂಜೆಯ ಜಿಟಿಪಿಟಿ ಮಳೆ ಹನಿಯುತ್ತಿತ್ತು. ರಸ್ತೆಯ ಗುಂಡಿಗಳೆಲ್ಲ ನೀರು ತುಂಬಿ ಸಮೃದ್ಧವಾಗಿದ್ದವು, ಅವು ಮೋಟಾರು ವಾಹನಗಳ ಬರುವಿಕೆಗೆ ಕಾಯುತ್ತ ಕೆಸರೆರೆಚಾಟಕ್ಕೆ ಸನ್ನದ್ಧವಾಗಿದ್ದವು. ಗಿಡಮರಗಳೆಲ್ಲವೂ ಮಳೆಯಲ್ಲಿ ತೊಯ್ದು ಹಸುರಿನಿಂದ ಕಂಗೊಳಿಸುತ್ತಿದ್ದವು. ರಸ್ತೆಯಲ್ಲಿ ಜನಸಂಚಾರ ಬಹಳ ವಿರಳವಾಗಿತ್ತು. ಅಲ್ಲೊಂದು ಓಬಿರಾಯನ ಕಾಲದ ಮುರುಕಲು ಬಸ್ ಸ್ಟಾಪ್. ಊರಿಗೆ ಹೊಸ ರಸ್ತೆ ಬಂದ ಮೇಲೆ ಈ ರಸ್ತೆಯಲ್ಲಿ ಊರಿನವರ ಕೆಲ ವಾಹನಗಳ ಬಿಟ್ಟರೆ ಬಸ್ಸುಗಳಾವುವೂ ಓಡುತ್ತಿರಲಿಲ್ಲ. ಹೀಗಾಗಿ ಆ ಬಸ್ ಸ್ಟಾಪನ್ನು ಕೇಳುವರಾರೂ ಇಲ್ಲದೆ ಅವಸಾನದತ್ತ ಸಾಗಿತ್ತು. ಅದೇ ಬಸ್ […]

ಕಥಾಲೋಕ

ಪ್ರೇಮ ಪತ್ರ: ಗಣೇಶ್ ಖರೆ

  ನವೀನ ಮೇಘನಳ ಪರಿಚಯ ಸುಮಾರು ಆರೇಳು ವರ್ಷಗಳಷ್ಟು ಹಳೆಯದು. ಕಾಲೇಜಿನಿಂದ ಹಿಡಿದು ಕೆಲಸಕ್ಕೆ ಸೇರಿ ಎರಡು ವರ್ಷಗಳಾಗಿದ್ದವು ಇಬ್ಬರು ಜೊತೆಗಿದ್ದು. ನಿಷ್ಕಲ್ಮಶ ಸ್ನೇಹ ಇಬ್ಬರದು. ಇವರಿಬ್ಬರ ಸ್ನೇಹ ನೋಡಿ ಅಸೂಯೆಪಡದವರಿಲ್ಲ. ನಸುಗೆಂಪು ಬಣ್ಣದ ಉತ್ತಮ ಮೈಕಟ್ಟಿನ ಮಧ್ಯಮ ವರ್ಗದ ಸೀದಾ ಸಾದಾ ಹುಡುಗ ನವೀನ, ಹಾಲ್ಗೆನ್ನೆಯ ಎಲ್ಲರ ನೋಟವನ್ನ ಒಮ್ಮೆಲೇ ತನ್ನೆಡೆಗೆ ಸೆಳೆಯುವ ಶ್ರೀಮಂತರ ಮನೆಯ ಹುಡುಗಿ ಮೇಘನ, ಆದರೂ ಮನೆಯ ಶ್ರೀಮಂತಿಕೆ ಅವಳ ಸ್ವಭಾವದಲ್ಲಿರಲಿಲ್ಲ, ಬಹುಷಃ ಇದೆ ಕಾರಣವಿರಬೇಕು ಇವರಿಬ್ಬರ ಸ್ನೇಹ ಇಷ್ಟು ಗಟ್ಟಿಯಾಗಿರಲು. […]

ಕಥಾಲೋಕ

ಉಪದ್ವ್ಯಾಪಿ:ಉಮೇಶ್ ದೇಸಾಯಿ

  ಹುಬ್ಬಳ್ಳಿಯಿಂದ ಬಿಟ್ಟ ರಾಜಹಂಸ ಹರಿಹರಕ್ಕ ಬಂದಾಗ ಲೇಟಾಗಿತ್ತು. ಸೀಟ್ ನಂ೭ರಲ್ಲಿ ಕುಳಿತ ನಮ್ಮ ನಾಯಕನಿಗೆ ಎಚ್ಚರವಾಗಿದ್ದು ಅಲ್ಲಿ ಹತ್ತಿದ ಪ್ರಯಾಣಿಕ ಕಂಡಕ್ಟರ್ ಜೋಡಿ ವಾದಕ್ಕಿಳಿದಾಗ. ಪ್ರಯಾಣಿಕ ಮುಂಗಡ ಟಿಕೆಟ್ ಮಾಡಿಸಿದ್ದ. ಯಶವಂತಪುರದಾಗ ಮುಂದ ಹೋಗಲಿಕ್ಕೆ  ಗಾಡಿ ಹಿಡಿಯುವನಿದ್ದ. ಬಸ್ಸು ಹರಿಹರಕ್ಕ ಮುಟ್ಟಿದ್ದು ಒಂದು ತಾಸು ತಡಾ. ಇದು ಅವನ ಕ್ಷೋಭೆಗೆ ಕಾರಣ. ಆ ಪಯಣಿಗನ ಜೋಡಿ ಹೆಂಡತಿ,ಎರಡು ಮಕ್ಕಳು ಇದ್ರು. ಅಕಿನೂ ಚಾಲಕ/ನಿರ್ವಾಹಕರಿಗೆ ಮಂಗಳಾರತಿ ಎತ್ತಿದ್ಲು. ಬಸ್ಸು ಹುಬ್ಬಳ್ಳಿ ಹತ್ತಿರದ ವರೂರ ಹತ್ರ ಊಟಕ್ಕ ನಿಲ್ಸಿದ್ದು […]

ಕಥಾಲೋಕ

ಕೋಡುವಳ್ಳಿಯ ಕರೆ:ಪಾರ್ಥಸಾರಥಿ ಎನ್

  ನಾಲ್ವರು ಗೆಳತಿಯರು ಬೆಂಗಳೂರಿನ ಮೆಜಿಸ್ಟಿಕ್ ಬಸ್ ಸ್ಟಾಪ್ ನಲ್ಲಿ ಸಂತಸದಿಂದ ಹರಟುತ್ತಿದ್ದರು. ರಾತ್ರಿ ಆಗಲೇ ಹತ್ತು ಘಂಟೆ ದಾಟಿದ್ದು, 10:40 ಕ್ಕೆ ಚಿಕ್ಕಮಂಗಳೂರಿಗೆ ಹೊರಡುವ ರಾಜಹಂಸ ಬಸ್ಸಿಗೆ ಕಾಯುತ್ತಿದ್ದರು. ಎಲ್ಲರದ್ದೂ ಹೆಚ್ಚು-ಕಡಿಮೆ ಒಂದೇ ವಯಸ್ಸು. ಹತ್ತೊಂಬತ್ತು ಇಪ್ಪತ್ತರ ಉತ್ಸಾಹದ ಚಿಲುಮೆಗಳು. ಮೈಸೂರು ರಸ್ತೆಯಲ್ಲಿರುವ ಡಾನ್ ಬಾಸ್ಕೋನಲ್ಲಿ ಇಂಜಿನೀಯರಿಂಗ್ ಕಾಲೇಜಿನ ಐ.ಎಸ್ ವಿಭಾಗದ ಮೂರನೆ ಸೆಮಿಸ್ಟರ್ ಪರೀಕ್ಷೆಗಳನ್ನು ಮುಗಿಸಿದ ಎಲ್ಲರೂ, ರಜೆ ಇರುವ ಕಾರಣ ಒಂದು ವಾರ ಸಮಯ ಕಳೆಯಲು ಪ್ರಕೃತಿಯ ಮಡಿಲು ಚಿಕ್ಕಮಗಳೂರಿಗೆ ಹೊರಟಿರುವರು.   […]

ಕಥಾಲೋಕ

ಇಳಿ ಸಂಜೆಯ ಮೌನ… ಮಂಜುಗಣ್ಣಿನ ಮಾತು:ಶ್ರೀವತ್ಸ ಕಂಚೀಮನೆ

  ಏಳು ದಶಕಗಳ ಹಣ್ ಹಣ್ಣು ಬದುಕು…ಹೆಸರು ಆನಂದರಾವ್… ಮಣ್ಣ ಮನೆಯಲಿ ಮಲಗುವ ಮುನ್ನಿನ ಮಂಜುಗಣ್ಣಿನ ಹಿನ್ನೋಟದಲ್ಲಿ, ಹೆಸರಲ್ಲಿ ಮಾತ್ರ ಕಂಡ ಆನಂದದ ಅರ್ಥ ಹುಡುಕುತ್ತಾ ಕಂಗಾಲಾಗಿದ್ದೇನೆ… ಈದೀಗ ಮನದಿ ಸುಳಿದಿರುಗುತ್ತಿರೋ ಭಾವ ಇದೊಂದೇ "ಎಷ್ಟುಕಾಲ ಬದುಕಿದ್ದೊಡೇನು – ಜೀವಿಸಲಾಗದಿದ್ದೊಡೆ ನನ್ನಂತೆ ನಾನು…" ಈ ಬದುಕಿಗೆ (ನನ್ನನ್ನೂ ಸೇರಿ ಈ ಜನಕ್ಕೆ) ಅದ್ಯಾಕೆ ಅಷ್ಟೊಂದು ಪ್ರೀತಿಯೋ ಮುಖವಾಡಗಳ ಮೇಲೆ…ಇಂದೀಗ ಬಯಲ ಹಸಿರ ತಂಗಾಳಿ ನಡುವೆಯೂ ಉಸಿರುಗಟ್ಟುವ ಭಾವ ನನ್ನಲ್ಲಿ… ಏನೆಲ್ಲ ಇತ್ತಲ್ಲವಾ ಬದುಕ ದಾರೀಲಿ…ಸೊಗಸಾದದ್ದು, ಆಹ್ಲಾದವನೀಯುವಂಥದ್ದು…ಪುಟ್ಟ ಪುಟ್ಟದು…ಆಸ್ವಾದಿಸಿದರೆ […]

ಕಥಾಲೋಕ

ಭ್ರಮೆ:ಪ್ರವೀಣ್ ಕೆ

  ಗುರು ಕಾಡು ದಾಟಿ ಹೊಳೆಯ ದಂಡೆಗೆ ಬಂದು ಹಸಿಮಣ್ಣು ಕಂಡರೂ ಅದರ ಮೇಲೆ ಕುಳಿತುಕೊಂಡ.  ಕಾಡಿನ ಗವ್ವೆನ್ನುವ ಧ್ವನಿ, ನದಿಯ ಜುಳುಜುಳು ನಾದ, ಹಕ್ಕಿಗಳ ಕಲರವ ಯಾವುದೂ ಅವನ ಕಿವಿ ಸೇರುತ್ತಿರಲಿಲ್ಲ.  ತಾನು ಇಷ್ಟು ದಿನ ನಂಬಿಕೊಂಡು ಬಂದಿದ್ದ ಬದುಕು ಹೀಗೆ ತನ್ನನ್ನೇ ತಿನ್ನುವ ರಾಕ್ಷಸವಾಗುತ್ತದೆ ಎಂದು ಅವನು ಅಂದುಕೊಂಡಿರಲಿಲ್ಲ.   ನದಿ ತನ್ನ ಪಾಡಿಗೆ ತಾನು ಹರಿಯುತ್ತಿತ್ತು.  ಅದರ ಗುರಿ ಸಮುದ್ರ ಸೇರುವುದು ಎಂದು ಯಾರೋ ಹೇಳಿದ್ದನ್ನು ಕೇಳಿ ಗಹಗಹಿಸಿ ನಕ್ಕಿದ್ದ.  ಅದಕ್ಕೇನ್ ತಲಿ […]

ಕಥಾಲೋಕ

ಕಾಮಾತುರಾಣಾಂ: ಉಪೇಂದ್ರ ಪ್ರಭು

'ಏ ಚೆನ್ನಾಗಿ ಥಳಿಸು. ಜೀವಮಾನವಿಡೀ ಮರೀಬಾರ್ದು. ಮಾನಗೇಡಿ, ಏನಂದ್ಕೊಂಡಿದ್ದಾನೆ?' 'ಹಾಡುಹಗಲಲ್ಲೇ ಈ ಥರ ವರ್ತಿಸೋರು ಇನ್ನು ರಾತ್ರೆ ಏನೆಲ್ಲಾ ಮಾಡಿಯಾರೋ?' 'ಎಷ್ಟು ಕೊಬ್ಬು. ಅವಳ ಅಪ್ಪನ ವಯಸ್ಸಾಗಿರಬಹುದು!' 'ಕಾಮಾತುರನಿಗೆ ಎಲ್ಲಿಯ ಭಯ , ಎಲ್ಲಿಯ ಲಜ್ಜೆ !' 'ಎಲ್ಲಾ ಈ ಕುಡಿತದಿಂದ.  ದಿನಾ ನೋಡ್ತಿದ್ದೀವಿ. ಮಧ್ಯಾಹ್ನ, ಸಂಜೆ, ರಾತ್ರೆ, ಹೊತ್ತಿಲ್ಲ ಗೊತ್ತಿಲ್ಲ, ತೂರಾಡುತ್ತಲೇ ಇರುತ್ತಾನೆ.  ಈ ಗೌರ್‍ಮೆಂಟ್ನವ್ರೂ ಅಷ್ಟೆ. ತಮ್ಮ ಲಾಭಕ್ಕೆ ಎಲ್ಲಾರ್ಗೂ ಲೈಸನ್ಸ್ ಕೊಟ್ಟ್‍ಬಿಟ್ಟಿದ್ದಾರೆ. ಹೆಜ್ಜೆಗೊಂದೊಂದು ಬಾರ್, ಸಾರಾಯಿ ಅಂಗಡಿ!'  'ಚಪ್ಲಿಯಿಂದ ಬಾರಿಸ್ರೋ, ಸತ್ರೂ ಸಾಯ್ಲಿ. […]

ಕಥಾಲೋಕ

ಹೀಗೊಂದು ಕಥೆ: ಸುನಿಲ್ ಗೌಡ

  "ಎಲ್ಲಾ ಕೆಲ್ಸ ಮುಗ್ಸಿ ತಿಂಡಿ ಮಾಡಿದ್ರು ಇನ್ನೂ ಬಿದ್ದಿದ್ದೀಯಲ್ಲಾ, ಚಿಂತೆ ಇಲ್ದೋನ್ಗೆ ಚಿತೆ ಮೇಲೆ ಮಲ್ಗಿಸಿದ್ರು ನಿದ್ದೆ ಬರ್ತವಂತೆ. ಎದ್ದು ತೋಟ ನೋಡೋಗೊ ಸೋಮಾರಿ, ಈಗೀನ್ ಕಾಲದ್ ಹುಡುಗ್ರು ಮಲ್ಗದು ಏಳದು ಯಾವ್ದು ಸರಿ ಮಾಡಲ್ಲ". ಅಡುಗೆಯ ಮನೆಯಿಂದ ವಗ್ಗರಣೆಯ ತುಪ್ಪದ ವಾಸನೆ ಜೊತೆ ಸರ್ರನೆ ಬಂದ ಅಮ್ಮನ ಧ್ವನಿಗೆ ಕಿವಿ ಮುಚ್ಚಿ ವಗ್ಗರಣೆಯ ವಾಸನೆಯನ್ನು ಆಸ್ವಾದಿಸಲು ಮುಂದಾದೆ, "ಏಳ್ತೇನೆ ತಡಿಯಮ್ಮ, ಯಾಕೆ ಈ ತರಹಾ ಕಿರುಚ್ತೀಯ, ಆ ವಾಯ್ಸ್ ನನ್ ಕಿವೀಲಿ ಕೇಳೋಕೆ ಆಗಲ್ಲಾ.." […]

ಕಥಾಲೋಕ

ತಂತ್ರ: ರಾಘವೇಂದ್ರ ತೆಕ್ಕಾರ್

  ಅವನು ಎಲ್ಲರಂತಿರಲಿಲ್ಲ, ಕುರುಚಲು ಗಡ್ಡಧಾರಿಯಾಗಿ ಹರಕಲು ಉಡುಪುಗಳ ಜೊತೆ ನನ್ನ ಮುಂದು ನಿಂತಿದ್ದ. ಏನು? ಎಂದಿದ್ದೆ. ಭಿಕ್ಷುಕ ವೇಷಧಾರಿಯಂತೆ ಕಾಣುವ ಆತ ಭಿಕ್ಷುಕನೆಂದು ಒಪ್ಪಿಕೊಳ್ಳದಂತೆ ಮಾಡಿದ್ದು ಆತನ ದೃಷ್ಟಿಯಲ್ಲಿದ್ದ ಹರಿತ. ಚಿಂಗಾಣಿ ಬೆಟ್ಟದ ಕಡೆ ಹೋಗ್ಬೇಕು ದಾರಿಯೆಂತು ? ಎಂದು ತನ್ನ ಗೊಗ್ಗರು ದನಿಯಲ್ಲಿ ಕೇಳಿದ. ನನ್ನ ಎಡಕ್ಕೆ ಕಾಣುವ ದೊಡ್ಡ ಬೆಟ್ಟದ ಕಡೆ ಕೈ ತೋರಿ ನೀ ಕೇಳುತ್ತಿರುವ ಬೆಟ್ಟ ಅದೆ ಎಂದು ಕೈ ತೋರಿದ್ದೆ. ಆತ ನನ್ನೆಡೆಗೆ ಒಂದು ಕ್ಷಣ ನೋಡಿ ನಸು […]

ಕಥಾಲೋಕ

ವಿಪರ್ಯಾಸ: ಬದರಿನಾಥ ಪಲವಳ್ಳಿ

  ಬೆಳಿಗ್ಗೆ ಎದ್ದಾಗಲಿಂದಲೂ ಏಕೋ ಸಣ್ಣಗೆ ತಲೆಯ ನೋವು. ಸ್ವಲ್ಪ ಕಾಫಿ ಕಾಯಿಸಿಕೊಳ್ಳೋಣ ಎಂದು ಮೂರು ಗಂಟೆಯಿಂದ ಯೋಚಿಸಿದ್ದೇ ಬಂತು. ಯಾಕೋ ಅದಕ್ಕೂ ಬೇಸರ. ಯಜಮಾನರು ತೀರಿಕೊಂಡ ಮೇಲೆ ನಾನು ನಾನು ತೀರಾ ಅಂತರ್ಮುಖಿಯಾಗುತ್ತಿದ್ದೇನೆ ಅನಿಸುತ್ತದೆ. ಮೂರು ಕೋಣೆಗಳ ಈ ವಿಶಾಲವಾದ ಫ್ಲಾಟಿನಲ್ಲಿ ಈಗ ನಾನು ಒಬ್ಬಂಟಿ. ತುಂಬಾ ಮನೆಗಳಿರುವ ವಿಶಾಲವಾದ ಸೊಸೈಟಿ ಇದು. ಪಕ್ಕದ ಮನೆಯವರು ಯಾರೆಂದು ನನಗೂ ಇಲ್ಲಿಯವರೆಗೂ ಗೊತ್ತಿಲ್ಲ. ಕೆಲಸದವಳು ಬೆಳಿಗ್ಗೆ ಬಂದು ಮನೆ ಕೆಲಸಗಳನ್ನು ಮುಗಿಸಿ ಹೊರಟಳೆಂದರೆ ಇಡೀ ದಿನ ನಾನು […]

ಕಥಾಲೋಕ

ಕನಸು: ಗಣೇಶ್ ಖರೆ

ಭಾನುವಾರ ಎದ್ದಾಗ 10 ಗಂಟೆಯಾಗಿತ್ತು. ತಲೆ ತುಂಬಾ ಭಾರವಾಗಿತ್ತು. ದಿನದ ಉತ್ಸಾಹವೂ ಇರಲಿಲ್ಲ. ಒಂದು ಕಪ್ ಕಾಫಿಯನ್ನಾದರೂ ಕುಡಿಯೋಣ ಅಂತ ಮುಖ ತೊಳೆದು ಫ್ರೆಶ್ ಆಗಿ ಅಡುಗೆ ಮನೆಗೆ ಬಂದೆ. ಗ್ಯಾಸ್ ಕಟ್ಟೆಯ ಮೇಲೆ ಹರಡಿದ್ದ ಪಾತ್ರೆಗಳನ್ನೆಲ್ಲ ಬದಿಗೆ ಸರಿಸಿ ಹಾಲನ್ನು ಬಿಸಿ ಮಾಡಿ, ಕಾಫಿ ಪೌಡರ್ ಸಕ್ಕರೆ ಹಾಕಿ ಕದಡಿ ಕಪ್ಪನ್ನ ಕೈಯ್ಯಲ್ಲಿ ಹಿಡಿದು ಹಾಗೆ ಹಾಸಿಗೆಯ ಮೇಲೆ ಬಂದೊರಗಿದೆ. ಮನಸ್ಸಿನಲ್ಲಿ ನೂರಾರು  ಚಿಂತೆಗಳು ಸುಳಿದಾಡುತ್ತಿದ್ದವು. ಇದೇ ಚಿಂತೆಯಲ್ಲಿ ನಿನ್ನೆ ಮಲಗಿದಾಗ ರಾತ್ರಿ ಎರಡಾಗಿತ್ತು. ಕಾಫಿಯ […]

ಕಥಾಲೋಕ

ಮರೀಚಿಕೆ: ಶಶಿಕಿರಣ್ ಎ.

ರಾಹುಲ್ ಎಂದಿನಂತೆ ಆಫೀಸ್ ಪ್ರವೇಶ ಮಾಡುತ್ತಲೇ ಟೈಮ್ ನೋಡಿಕೊಂಡ, ಗಡಿಯಾರದ ಮುಳ್ಳು ಘಂಟೆ ೧೦ರಲ್ಲಿ ತೋರಿಸುತ್ತಿತ್ತು."ಛೆ ಅರ್ಧ ಘಂಟೆ ತಡವಾಯಿತು, ಬಾಸ್ ಏನೆನ್ನುತ್ತಾರೋ.." ಗೊಣಗುತ್ತಲೇ ಚೇಂಬರ್ ಸೇರಿಕೊಂಡು ನಿನ್ನೆ ಬಾಕಿ ಇದ್ದ ಫೈಲ್ ಗಳನ್ನು ಬಿಡಿಸಿ ನೋಡಲಾರಂಭಿಸಿದ. ಪ್ರೈವೇಟ್ ಕಂಪೆನಿಯೊಂದರ ಆಫೀಸಿನಲ್ಲಿ ಸುಪರ್ ವೈಸರ್ ಆಗಿ ಕೆಲಸ ಮಾಡುತ್ತಿದ್ದ ರಾಹುಲ್. ಪಕ್ಕಾ ಬ್ರಾಹ್ಮಣ ಮನೆತನದ ಅಳುಕು ಸ್ವಭಾವದ ಭಾವನಾತ್ಮಕ ಹುಡುಗ.  ಹೀರೋನಂತಿಲ್ಲದಿದ್ದರೂ. ನೋಡುವಂತಹಾ ಸುಂದರ. ಅದೆಲ್ಲ ಇರಲಿ, ನಿನ್ನೆ ಬಾಕಿ ಮಾಡಿ ಹೋದ ಕೆಲಸಗಳನ್ನು ತುರಾತುರಿಯಲ್ಲಿ ಮುಗಿಸುತ್ತಿದ್ದಾಗ […]

ಕಥಾಲೋಕ

ನಿಂತ ನೆಲವೇ ಅವಳನ್ನು ಭದ್ರವಾಗಿ ಹಿಡಿದುಕೊಂಡಿತ್ತು! : ಶೈಲಜ

‘ಕೊನೆಗೂ ತನ್ನ ಕನಸು ನನಸಾಗಲಿದೆಯೆ?’ ದೀಪಾಳಿಗೆ ನಂಬಲು ಸಾಧ್ಯವಾಗಲಿಲ್ಲ… ತನ್ನ ಮೊಬೈಲಿಗೆ ಬಂದ ಸಂದೇಶವನ್ನು ಮತ್ತೊಮ್ಮೆ ಮಗದೊಮ್ಮೆ ನೋಡಿದಳು. “pack ur bag. chalo mumbai… aaaaa… :)”  ಕೆಲಸ ಮುಂದುವರಿಸಲು ಸಾಧ್ಯವಾಗಲಿಲ್ಲ. ಬಾಸ್ ಹತ್ತಿರ ಒಪ್ಪಿಗೆ ಕೇಳಿ ಮನೆಗೆ ಹೊರಟಳು. ಮನಸ್ಸು ಕೆಲವು ದಿನಗಳ ಹಿಂದಿನ ಚಿತ್ರಣವನ್ನು ಬಿಚ್ಚಿತು.  ಇದ್ದಕ್ಕಿದ್ದಂತೆ ಸುಮಿ ಪ್ರತ್ಯಕ್ಷಳಾಗಿದ್ದಳು. ಸುಮ ದೀಪಳ ಬಾಲ್ಯ ಸ್ನೇಹಿತೆ. ಹೆಚ್ಚು ಕಡಿಮೆ ನಿತ್ಯವೂ ಅಂತರ್ಜಾಲ ಅಥವಾ ಮೊಬೈಲ್ ಮೂಲಕ ಸಂಪರ್ಕವಿರುವುದಾದರೂ ಊರ ಕಡೆ ಅವಳು ಬರದೇ […]

ಕಥಾಲೋಕ

ಅಸ್ತಿತ್ವ : ಪ್ರಸಾದ್.ಡಿ.ವಿ.

ಅದೊಂದು ದೊಡ್ಡ ಬಂಗಲೆ, ಸುಮಾರು ಹತ್ತಿಪ್ಪತ್ತು ವರ್ಷಗಳಿಂದ ಯಾರೂ ವಾಸವಿದ್ದಂತೆ ಕಾಣುವುದಿಲ್ಲ! ಅಲ್ಲಲ್ಲಿ ಗಿಡ ಗಂಟಿಗಳು ಬೆಳೆದು, ಆ ಬಂಗಲೆಗೆ ಭೂತ ಬಂಗಲೆಯಂತಹ ಮೆರುಗು ಕೊಟ್ಟಿದ್ದವು! ಆಗೊಮ್ಮೆ, ಈಗೊಮ್ಮೆ ನರಿಯಂತೆ ಕೂಗುವ ಕಿವಿ ಗಡಚಿಕ್ಕುವ ಸದ್ದುಗಳು, ಭಯವನ್ನು ಉತ್ಪಾದಿಸಿ, ತನುವೊಳಗಿನ ಜೀವ ಹಿಡಿಯಷ್ಟಾಗುವಂತೆ ಮಾಡುತ್ತಿದ್ದವು. ಆ ಬಂಗಲೆ ಊರಿನಿಂದ ಸಾಕಷ್ಟು ದೂರದಲ್ಲಿದ್ದುದ್ದರಿಂದ ಹಾಗೆ ಪಾಳು ಬಿದ್ದಿತ್ತೋ, ಇಲ್ಲ ಆ ಮನೆಯ ವಾರಸುದಾರರೆಲ್ಲಾ ಒಟ್ಟಾಗಿ ಯಮನ ಅತಿಥಿಗಳಾಗಿದ್ದರೋ, ಅಥವಾ ಆ ಬಂಗಲೆಯ ವಾಸ್ತು ಸರಿಯಿಲ್ಲದೆ ಅವಘಡಗಳು ಸಂಭವಿಸಿ ಭೂತ […]

ಕಥಾಲೋಕ

ನಂಜು ನುಂಗಿ ನಕ್ಕಾತ : ರಮೇಶ್ ಕುಲಕರ್ಣಿ

ಬೆಳಗಿನ ಜಾವ ಮೂರು ಗಂಟೆಗೆ ಇರಬಹುದು, ನನ್ನ ಸೆಲ್ ಫೋನ್ ವೈಬ್ರೇಶನ್ ಮೋಡಲ್ಲಿ ಪತರಗುಟ್ಟುತ್ತಿತ್ತು. ಕರೆಯನ್ನು ಕಟ್ ಮಾಡಿದರೂ ಆ ಕಡೆಯ ಕರೆ ಬರುತ್ತಲೇ ಇತ್ತು. ಏನೋ ಸಮಸ್ಯೆ ಇರಬಹುದು ಎಂದುಕೊಂಡ ನಾನು ಫೋನನ್ನು ರಿಸೀವ್ ಮಾಡಿ “ಹರಿ ಓಂ..” ಅಂದೆ. ಆ ಕಡೆಯಿಂದ ನನ್ನ ಮಿತ್ರ ಶಶಿಕುಮಾರ್ ಕಂಪಿಸುವ ಧ್ವನಿಯಲ್ಲಿ “ಸರ್ ಸ್ವಲ್ಪ ನಮ್ಮ ಮನೆಹತ್ರ ಬರ್ತೀರಾ? ನಿಮ್ಮ ಹತ್ರ ಮಾತಾಡಬೇಕು, ಬೇಗ ಬನ್ನಿ ಸಾರ್ ಎನ್ನುತ್ತಲೇ ಫೋನ್ ಕರೆಯನ್ನು ಕಟ್ ಮಾಡಿದರು. ನನ್ನ ಆತ್ಮೀಯ […]

ಕಥಾಲೋಕ

ನೈತಿ(ಕತೆ)

  'ಸಾರ್ ನಿಮ್ಮನ್ನ ಎಲ್ಲೋ ನೋಡಿದ್ದೀನಿ ಸಾರ್….ನೀವು…..ನೀವ್ ದಾರವಾಯಿಲಿ ಬತ್ತೀರ ಅಲ್ವಾ?' ಅಂತ ಶುರು ಮಾಡಿದ ಅವನು. ನಾನು ಸುಮ್ಮನೆ 'ಹ್ಞೂಂ' ಅಂದೆ. 'ಅದೇ ಅನ್ಕೊಂಡೆ… ನೀವು ಬಸ್ ಅತ್ದಾಗಿಂದ ತಲೆ ಕೆಡುಸ್ಕೊತಿದ್ದೆ, 'ಇವ್ರುನ್ನ ಎಲ್ಲೋ ನೋಡ್ದಂಗದಲ್ಲ ಅಂತ…ಈಗ ವಳಿತು ಸಾರ್… 'ನಮಸ್ಕಾರ ಸಾರ್…ನನ್ನೆಸ್ರು ಕೃಷ್ಣ ಅಂತ…' 'ಈ ಬಸ್ ಕಂಡಕ್ಟರ ನೀವು?'    ' ಊಂ ಸಾರ್ ಒಂತರ ಅಂಗೆ ಅನ್ಕೊಳ್ಳಿ… ಈ ಬಸ್ಗೆ ನಾನೇ ಕಂಡಕ್ಟ್ರು, ಕ್ಲೀನರ್ರು, ಕ್ಯಾಶಿಯರ್ರು ಎಲ್ಲಾ'  ಅವನ ಮಾತಿನ ಧಾಟಿಗೆ ನಕ್ಕು ಮೆಚ್ಚುಗೆ ಸೂಚಿಸಿದೆ.  […]