ಅವನಿಕ – ಐ ಮಿಸ್ ಯೂ: ಅಮರ್ ದೀಪ್ ಪಿ.ಎಸ್.

ಡಿಯರ್ ಅವನಿಕ, ನಿನಗಲ್ಲದೇ ನಾನ್ಯಾರಿಗೆ ಹೇಳಿಕೊಳ್ಳಲಿ,  ಈಗತಾನೇ ಎರೆಡೆರಡು ಅಪಘಾತವಾಗುವ ಕಂಟಕದಿಂದ ತಪ್ಪಿಸಿಕೊಂಡು ಬಂದು ಹೂಳು ತುಂಬಿದ ತುಂಗಭಧ್ರ ನದಿ ತಟದಲ್ಲಿ ಒಬ್ಬನೇ ಕೂತು ನಡುಗುತ್ತಿದ್ದೇನೆ. ಅದೇನಾಗಿತ್ತು ನಂಗೆ? ಬೈಕ್ ಓಡಿಸುವಾಗ ನಾನೆಂಥ “ಚಿತ್ತ”ದಲ್ಲಿದ್ದರೂ ಹದ ತಪ್ಪುತ್ತಿರಲಿಲ್ಲ.  ಯಾವ ಯೋಚನೆಯಲ್ಲಿ ಬೈಕ್ ಓಡಿಸುತ್ತಿದ್ದೆನೋ? ಎರಡು ಕ್ಷಣ ಮೈಮರೆತಿದ್ದರೆ ಟಿಪ್ಪರ್ ಗಾಡಿಯ ಗಾಲಿಗೆ  ಅಂಟಿಕೊಳ್ಳುತ್ತಿದ್ದೆ. ಯಾರಿಗಾದ್ರೂ ಫೋನ್ ಮಾಡಿ ಹೇಳಿಕೊಳ್ಲಾ ಅಂದರೆ ಮತ್ತೆ ನನಗೇ ಬೈಗುಳ.  ನಿನಗೊಬ್ಬಳಿಗೆ ಸುಮ್ಮನೇ ಮೆಸೇಜ್ ಕುಟ್ಟಿ ಮೊಬೈಲ್ ಜೇಬಲ್ಲಿಟ್ಟುಕೊಂಡೆ.  ಹೆದ್ದಾರಿಯಲ್ಲಿ ಈಗತಾನೇ ಕಣ್ಣುಬಿಟ್ಟುಕೊಂಡು … Read more

ಕನಸಲ್ಲಿ ಕಂಡವಳು!: ಎಸ್.ಜಿ.ಶಿವಶಂಕರ್

                   `ನೋ…ಇದು ಸಾಧ್ಯವಿಲ್ಲ!' ಕಪಿಲನ ದನಿ ನಡುಗುತ್ತಿತ್ತು!  ಮಿದುಳಿಗೆ ಒಮ್ಮೆಲೇ ರಕ್ತ ಪ್ರವಾಹದಂತೆ ನುಗ್ಗಿ ಕಿವಿಗಳು ಗುಂಯ್ ಎಂದವು! ಎದುರು ಕುಳಿತಿದ್ದ ಆ ಅಪ್ರತಿಮ ಸುಂದರಿಯನ್ನು ಕಂಡು ಕಪಿಲ ಬೆದರಿ, ಬೆವರಿಬಿಟ್ಟಿದ್ದ! ಮೇರೆ ಮೀರಿದ ಅಚ್ಚರಿ, ಅನುಮಾನ, ಸಂತೋಷ  ಎಲ್ಲವೂ ಏಕ ಕಾಲದಲ್ಲಿ ಆಗಿದ್ದವು! ಜೊತೆಗೆ ಆಕೆ ತನ್ನ ಸಂಗಾತಿಯಾಗಲಿರುವಳು ಎಂಬ ಅನಿವರ್ಚನೀಯ ಆನಂದ ಬೇರೆ! `ಎಸ್.. ಇಟ್ ಇಸ್ ರಿಯಲ್! ಯಾವುದೂ ಅಸಾಧ್ಯವಲ್ಲ!' ಅಂಕುರನದು … Read more

ತಾಯಿಯ ಮನಸ್ಸು: ಹೆಚ್ ಎಸ್ ಅರುಣ್ ಕುಮಾರ್

ಕಾರು "ಚೈತನ್ಯ ಧಾಮ" ದ ಮುಂದೆ ನಿಂತಿತು. ಅವಳು ಕಾರಿನಿಂದ ಆತುರವಾಗಿ ಇಳಿದಳು. "ಇಂದಿರಾ ನಿಧಾನ" ತಂದೆಯ ಮಾತು ಮುಗಿಯುವ ಮುನ್ನವೇ ಅನಾಥಾಶ್ರಮದಲ್ಲಿ ನುಗ್ಗಿದಳು. ನಾಲ್ಕು ವರ್ಷಗಳಲ್ಲಿ ಅವಳು ತಿರುಗಿದ ಅನಾಥಾಶ್ರಮಗಳು ಏಷ್ಟೊ. ಅಂದು ಒಂದು ಸ್ವಷ್ಟ ಸುಳಿವಿನ ಆಧಾರದ ಮೇಲೆ ತುಂಬು ನಂಬಿಕೆ ಯಿಂದ ಶಿವಮೊಗ್ಗದಿಂದ ಬೆಂಗಳೊರಿಗೆ ಬಂದಿದ್ದಳು. ಶಾರದಮ್ಮ ಅವಳನ್ನು ಕುಳಿತುಕೊಳ್ಳಲು ಹೇಳಿ ಮಕ್ಕಳನ್ನು ಕರೆದು ತರಲು ಆಯಗೆ ಹೇಳಿದಳು. ಅವಳ ಕಣ್ಣು ಬಾಗಿಲ ಕಡೆಗೆ ಇತ್ತು. ಮನಸ್ಸು "ಅಕ್ಷಯ" "ಅಕ್ಷಯ" ಎಂದು ಚೀರುತ್ತಿತ್ತು. ಇಂದಿರಾ … Read more

ಸತ್ತವನ ಶಿಕಾಯತ್ತುಗಳು : ಪ್ರಸಾದ್ ಕೆ.

  1977 ರ ದಿನಗಳು ಇಪ್ಪತ್ತೆರಡರ ಯುವಕನೊಬ್ಬನಿಗೆ ಬ್ಯಾಂಕಿನಿಂದ ಲೋನ್ ಬೇಕಾಗಿತ್ತು. ಲೋನ್ ಅಂದಾಗ ಕಾಗದ ಪತ್ರಗಳ ಅವಶ್ಯಕತೆ, ಓಡಾಟ ಎಲ್ಲವೂ ಸಹಜವೇ ಅನ್ನಿ. ಆಗಿನ ಕಾಲದಲ್ಲಿ ಈಗಿನಂತೆ ಕರೆದು ಸಾಲ ಕೊಡುತ್ತಿರಲಿಲ್ಲವೋ ಏನೋ! ಇರಲಿ, ವಿಷಯಕ್ಕೆ ಬರೋಣ. ಸೋ ಈ ನಮ್ಮ ಬಡಪಾಯಿ ಯುವಕ ಆ ಸರ್ಟಿಫಿಕೇಟು, ಈ ಸರ್ಟಿಫಿಕೇಟು ಅಂತ ಕಾಗದ ಪತ್ರಗಳನ್ನು ಲಗುಬಗೆಯಿಂದ ಹೊಂದಿಸುತ್ತಲೇ ಇದ್ದ. ಬಹುತೇಕ ಎಲ್ಲಾ ಮುಗಿದ ನಂತರ ತನ್ನ ಗುರುತು ಪ್ರಮಾಣಪತ್ರದ ಸಲುವಾಗಿ ಆತ ರೆವೆನ್ಯೂ ಆಫೀಸಿನ ಬಾಗಿಲು … Read more

ಕೊಟ್ಟೂರ ಜಾತ್ರೆ ಮತ್ತು ಜಯಂತ: ಪಾರ್ಥಸಾರಥಿ ಎನ್

ಜಯಂತ ಅಮ್ಮನ ಕೈ ಹಿಡಿದು ನಡೆಯುತ್ತಿರುವಂತೆ ಸುತ್ತಲು ಕಾಣುತ್ತಿದ್ದ ರಂಗು ರಂಗು ಅವನ ಕಣ್ಣು ತುಂಬುತಿತ್ತು.  ಅಮ್ಮ, ಸರೋಜ ತನ್ನದೆ ರಸ್ತೆಯ ಅಕ್ಕಪಕ್ಕದ ಮನೆಯ ಗೆಳತಿಯರೊಡನೆ ಜಾತ್ರೆಯ  ಸಂಭ್ರಮ   ನೋಡಲು ಹೊರಟಾಗ ಜಯಂತನದೇ ಚಿಂತೆ ಸರೋಜಳಿಗೆ, ಮನೆಯಲ್ಲಿ ಬಿಟ್ಟು ಹೋಗುವಂತಿಲ್ಲ, ಕರೆದುಕೊಂಡು ಹೋಗುವಂತಿಲ್ಲ. ಅಂತಹ ವಯಸ್ಸು ಅವನದು. ಬೆಳೆಯುವ ವಯಸಿನ ಮಕ್ಕಳದೆ ಒಂದು ಸಮಸ್ಯೆ ಬಿಡಿ, ತೀರ ಚಿಕ್ಕ ಮಕ್ಕಳಾದರೆ ಅಮ್ಮಂದಿರು ಎತ್ತಿ ಸೊಂಟದ ಮೇಲೆ ಕೂಡಿಸಿಕೊಂಡು, ಆ ಕಡೆ ಈಕಡೆ ಎನ್ನುತ್ತ ಬಾರ ಬದಲಾಯಿಸುವಂತೆ, … Read more

ಸುಬ್ಬೀ ಮದುವೆ: ಕೃಷ್ಣವೇಣಿ ಕಿದೂರ್

   ಮಗಳನ್ನು  ಕರೆದುಕೊಂಡು  ರೈಲು  ಹತ್ತಿದ್ದ  ಭಟ್ಟರು  ಪ್ರಯಾಣದ ಉದ್ದಕ್ಕೂ  ಸುಬ್ಬಿ ಹತ್ತಿರ  ಒಂದೇಒಂದು  ಮಾತನ್ನೂ ಆಡಲಿಲ್ಲ.  ಅಪ್ಪನ  ದೂರ್ವಾಸಾವತಾರಕ್ಕೆ ಹೆದರಿ ಕೈಕಾಲು ಬಿಟ್ಟಿದ್ದ  ಅವಳು  ತೆಪ್ಪಗೆ  ಕುಸುಕುಸು  ಮಾಡುತ್ತ   ಮುಖ  ಊದಿಸಿಕೊಂಡೇ  ಕೂತಳು. ಎರ್ನಾಕುಲಂ   ನಿಲ್ದಾಣ  ಹತ್ತಿರವಾಗಿ ಇನ್ನೇನು  ಇಳಿಯುವ  ಹೊತ್ತು ಬಂತು ಅನ್ನುವಾಗ  ಭಟ್ಟರು  ಕೆಂಗಣ್ಣು  ಬಿಟ್ಟು  ಮಗಳತ್ತ  ದುರುಗುಟ್ಟಿದರು.                         " ಬಾಯಿ ಮುಚ್ಚಿಕೊಂಡು … Read more

ಅಳುವ ಧ್ವನಿಯು ಎಲ್ಲಿಂದ?: ಲತಾ ಆಚಾರ್ಯ

     ಅದೊಂದು ಹೆಚ್ಚು ಜನಸಂಚಾರವಿರದ ಪ್ರದೇಶ. ಸುತ್ತಲೂ ಗುಡ್ಡ, ಪೊದರುಗಳು. ಒಂದಕ್ಕಿಂತ ಒಂದು ವಿಭಿನ್ನ. ಆದರೂ ಸೂಕ್ಷ್ಮವಾಗಿ ನೋಡಿದರೆ ಅಲ್ಲೊಂದು ಮನೆ ಕಾಣುತ್ತಿತ್ತು. ಅಲ್ಲಿದ್ದವರು ಶಾಂತಿ ಅವಳ ಗಂಡ ರಘು ಮತ್ತು ಅತ್ತೆ ಕಮಲಮ್ಮ. ದಿನ ನಿತ್ಯದ ಮನೆಗೆ ಬೇಕಾದ ವಸ್ತುಗಳ ಖರೀದಿಗೆ ನಾಲ್ಕು-ಐದು ಕಿಲೋಮೀಟರ್ ನಡೆದುಕೊಂಡು ಬಂದು ಹೋಗಬೇಕಾಗಿತ್ತು. ಹೆಚ್ಚಿನವರು ಇದೇ ಕಾರಣಕ್ಕಾಗಿ ಅಲ್ಲಿಂದ ಬೇರೆ ಕಡೆಗೆ ತೆರಳಿದವರು ಮತ್ತೆ ಆ ದಾರಿಯತ್ತ ಕಣ್ಣು ಹಾಯಿಸಿರಲಿಲ್ಲ. ಹಾಗಿದ್ದರೂ ಕಮಲಮ್ಮನದು ಒಂದೇ ಹಟ. ಬೇರೆಲ್ಲೂ ಹೋಗಲಾರೆನೆಂಬುದು. … Read more

ನೀನಂದ್ರೆ ನನಗಿಷ್ಟ…: ಅನುರಾಧ ಪಿ. ಸಾಮಗ

ಈಗಷ್ಟೇ ನಿನ್ನೊಡನೆ ಮಾತಾಡಿ ಫೋನಿಟ್ಟು ಈಚೆಗೆ ಬರುತ್ತಿದ್ದೇನೆ ಗೆಳೆಯಾ. ಸಣ್ಣಪುಟ್ಟ ಅಲೆ ಸೇರಿ ಹೆದ್ದೆರೆಯಾಗುವಂತೆ ನನ್ನೊಳಗೆ ನಿನ್ನ ಬಗೆಗಿನ ಆಲೋಚನೆಗಳು ದಟ್ಟವಾಗುತಲೇ, "ಮನದಲ್ಲಿ ನೆನೆದವರು ಎದುರಲ್ಲಿ" ಎಂಬಂತೆ ನೀನು ಅಲ್ಲೆಲ್ಲಿಂದಲೋ ಸಂಪರ್ಕಿಸಿರುತ್ತೀಯಾ. ಇದು ಮೊದಲೆಲ್ಲ ತುಂಬ ಅಚ್ಚರಿಯೆನಿಸುತ್ತಿತ್ತು. ಈಗೀಗ ನಿನ್ನ ಕುರಿತಾದ ಒಂದೊಂದೇ ಯೋಚನೆ ಬರುಬರುತಾ ಕಾಡತೊಡಗಿ ತೀವ್ರವಾಗಿ ಆವರಿಸಿಕೊಳುತಲೇ ನಿನ್ನ ಕರೆಯ, ನಿನ್ನ ಸಂದೇಶವೊಂದರ ಅಥವಾ ಸಾಕ್ಷಾತ್ ನಿನ್ನ ಬರುವಿಕೆಯ ಗಾಢನಿರೀಕ್ಷೆಯೊಂದು ತನ್ನಷ್ಟಕ್ಕೆ ಮೂಡಿಬರುತ್ತದೆ. ಅದು ಹೇಗಿರುತ್ತದೆ ಅಂದರೆ, ಕತ್ತಲನ್ನು ಮೆಲ್ಲ ಸರಿಸುತ್ತಾ ನಾಕೂ ದಿಕ್ಕಿಂದ … Read more

ಆಗಸದಲ್ಲೊಂದು ಅಧೂರಿ ಕಹಾನಿ: ಪ್ರಸಾದ್ ಕೆ.

13 ಫೆಬ್ರವರಿ, 2016 ದೆಹಲಿಯ ಮಯೂರ್ ವಿಹಾರ್ ಎಂಬ ಪ್ರದೇಶದ, ಕೋಟ್ಲಾ ಹಳ್ಳಿಯ ಮೂರನೇ ಗಲ್ಲಿಯಲ್ಲಿ ತಲೆಯೆತ್ತಿರುವ ಕಟ್ಟಡದ ಐದನೇ ಮಹಡಿಯ ಮನೆಯೊಂದು ಆ ದಿನ ತುಸು ಹೆಚ್ಚೇ ಅನ್ನುವಷ್ಟು ಚಟುವಟಿಕೆಯಲ್ಲಿತ್ತು.  ನಾನು ಆಫ್ರಿಕಾದ ಮೂಲೆಯೊಂದರಲ್ಲಿರುವ ಲುವಾಂಡಾಗೆ ಉದ್ಯೋಗ ನಿಮಿತ್ತವಾಗಿ ತೆರಳುವ ತರಾತುರಿಯಲ್ಲಿದ್ದೆ. ಪ್ಯಾಕಿಂಗ್ ಬಹುತೇಕ ಮುಗಿದಿದ್ದರೂ ಬ್ಯಾಗಿನೊಳಗೆ ಇನ್ನೇನು ತುರುಕಬಹುದು ಎಂಬ ದುರಾಸೆಯಿಂದ ನನ್ನ ಕಣ್ಣುಗಳು ಮನೆಯ ಮೂಲೆಮೂಲೆಗಳನ್ನು ಜಾಲಾಡುತ್ತಿದ್ದವು. ನಾಲ್ಕೈದು ಭಾರದ ಪುಸ್ತಕಗಳು “ಬಾ ಬಾರೋ… ಎತ್ತಿಕೋ ನನ್ನ'' ಎಂದು ಮೌನವಾಗೇ ಬಲು ಪ್ರೀತಿಯಿಂದ … Read more

ಕಾಣದ ಕಣ್ಣಲಿ ಕಾಡುವ ಕಣ್ಣೀರು: ಕ.ಲ.ರಘು.

ಅದೊಂದು ದಿನ ಸಂಜೆ ನನ್ನ ಪಯಣ ಬೆಂಗಳೂರಿನ ಕಡೆಗೆ ಸಾಗಿತ್ತು. ನನ್ನ ಸಂಬಂಧಿಕರ ಮದುವೆಸಮಾರಂಭಕ್ಕೆ ಹೋಗಬೇಕಾಗಿದ್ದರಿಂದ ನನ್ನ ವೃತ್ತಿ ಮುಗಿಸಿಕೊಂಡು ಕೆಎಸ್‍ಆರ್‍ಟಿಸಿ ಬಸ್‍ಗೆ ಹತ್ತಿದೆ. ಮನಸಿಗೆ ಉಲ್ಲಾಸ ನೀಡುವ ಮೌನಗೀತೆ ಹಾಗೂ ಭಾವಗೀತೆಗಳನ್ನು ಕೇಳುವ ಹವ್ಯಾಸ ಸ್ವಲ್ಪ ಇರುವುದರಿಂದ ಏನಾಗಲಿ ಮುಂದೆ ಸಾಗು ನೀ ಎಂಬ ಗೀತೆಯನ್ನು ಕೇಳುತ್ತಾ ಪ್ರಯಾಣ ಆರಂಭವಾಗಿ ಚಂದಿರ ಬರುವ ವೇಳೆಗೆ ಬೇಂಗಳೂರು ತಲುಪಿದೆ.  ಪ್ರಯಾಣ ಅಲ್ಲಿಗೆ ಮುಗಿಯಲಿಲ್ಲ ಅಲ್ಲಿಂದ ನಮ್ಮ ಸಂಬಂಧಿಕರ ಕಾರಿನಲ್ಲಿ ಮದುವೆ ನಡೆಯುತ್ತಿದ್ದ ಸ್ಥಳಕ್ಕೆ ಹೊರಟೆ. ಹಿಂದೆ ಮುಂದೆ … Read more

ರೋಹಿಣಿ: ಸಾವಿತ್ರಿ ವಿ. ಹಟ್ಟಿ

ಆ ಒಂಟಿ ಕೋಣೆಯಲ್ಲಿ ಅವಳನ್ನು ಹೊರತುಪಡಿಸಿದರೆ, ಒಂದೆರಡು ತಟ್ಟೆ ಲೋಟಗಳು, ಒಂದೆರಡು ಪಾತ್ರೆಗಳು, ಪ್ಲಾಸ್ಟಿಕ್ ಕೊಡ, ಬಕೆಟ್, ಚೊಂಬು ಹಾಗೂ ಒಂದಷ್ಟು ಪುಸ್ತಕಗಳು ಮಾತ್ರ. ಕೋಣೆಯಲ್ಲಿ ನಿಃಶಬ್ದ ಕವಿದಿತ್ತು. ಅಪರೂಪಕ್ಕೆ ಕೈಜಾರಿಸಿದರೆ ಪಾತ್ರೆಗಳ ಸದ್ದಷ್ಟೆ. ಆ ಮೌನ ಅವಳನ್ನು ಅದೆಷ್ಟು ಹಿಂಸಿಸುತ್ತಿತ್ತೆಂದರೆ ಇನ್ನೂ ತಾಸು ಮುಂಚಿತವಾಗಿಯೇ ಕಾಲೇಜಿಗೆ ಹೊರಟು ಬಿಡುತ್ತಿದ್ದಳು. ಅಲ್ಲಿಯಾದರೆ ವಿದ್ಯಾರ್ಥಿಗಳ, ಸಹೋದ್ಯೋಗಿಗಳ ಒಡನಾಟ ಸಿಗುತ್ತದೆ. ಬಿಡುವಿನ ವೇಳೆಯಲ್ಲಿ ಗ್ರಂಥಾಲಯದಲ್ಲಿಯ ಪುಸ್ತಕಗಳಿರುತ್ತವೆ ಎಂಬುದು ರೋಹಿಣಿಯ ಯೋಚನೆಯಾಗಿರುತ್ತಿತ್ತು. ಆದರೆ ಅವಳಿಗೆ ಮೊದಲಿನಂತೆ ತನ್ಮಯಳಾಗಿ ಪಾಠ ಮಾಡಲಾಗುವುದಿಲ್ಲ. ಮೈಮರೆತು … Read more

ಕಂದನ ಕರೆ: ಲಾವಣ್ಯ ಸಿದ್ದೇಶ್ವರ್

ವಿಜಯ ನರ್ಸಿಂಗ್ ಹೋಮಿನ ಆಪರೇಷನ್ ಥಿಯೇಟರಿನ ಮುಂದೆ, ಪ್ರಭಾಕರ ಶತಪಥ ತಿರುಗುತ್ತಿದ್ದಾನೆ, ಸಾವಿತ್ರಮ್ಮ ಬೆಂಚಿನ ಮೇಲೆ ಏನಾಗುವುದೋ ಎಂಬ ಭಯದಲ್ಲಿ ತನ್ನ ಸೊಸೆ, ಮೊಮ್ಮಗುವಿನ ಸೌಖ್ಯಕ್ಕಾಗಿ ಕಣ್ಣೀರಿಡುತ್ತಾ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ, ಒಳಗಿನಿಂದ ಗೌರಿಯ ಅಳು ಎಂಥವರನ್ನು ಕರಗಿಸುವಂತಿದೆ. ********* ಗೌರಿ, ಪ್ರಭಾಕರ್ ಮದುವೆಯಾಗಿ ಎಂಟು ವರ್ಷಗಳಾಗಿತ್ತು, ಆ ಮನೆಯಲ್ಲಿ ಇನ್ನೂ ಒಂದು ತೊಟ್ಟಿಲು ಕಂಡಿರಲಿಲ್ಲ, ಇದು ಸಾವಿತ್ರಮ್ಮನಿಗೂ ಬೇಸರದ ವಿಷಯವೇ ಆದರೂ ಸೊಸೆಗೆ ಚಿತ್ತವಧೆ ಮಾಡುವಂಥ ಸ್ವಭಾವದ ಹೆಣ್ಣಾಗಿರಲಿಲ್ಲ. ಆದರೂ ಹೋದಲ್ಲಿ, ಬಂದಲ್ಲಿ ಕಡೆ ನಿಮ್ಮ ಸೊಸೆಗಿನ್ನು … Read more

ಐಚ್ಚಿಕಮು: ಪಾರ್ಥಸಾರಥಿ ಎನ್

ಅದೇನೊ ಕೆಲವೊಮ್ಮೆ ಇಂತಹ ಅಚಾತುರ್ಯಗಳೆ ನಡೆಯುತ್ತದೆ.  ಆಂದ್ರದ ಯಾವುದೋ ಊರಿಗೆ ಹೋಗಿದ್ದವನು, ಬೆಂಗಳೂರಿಗೆ ವಾಪಸ್ಸು ಬರಲು ರೈಲು ಹತ್ತಿದ್ದೆ.  ಅದೇನು ನೇರವಾಗಿ ಬೆಂಗಳೂರಿಗೆ ಬರುವ ರೈಲಲ್ಲ ಬಿಡಿ. ಹೈದರಾಭಾದಿಗೆ ಬಂದು ಮತ್ತೆ ಬೆಂಗಳೂರು ಕಡೆ ಹೊರಡುವ ರೈಲು ಹಿಡಿಯಬೇಕಿತ್ತು.  ಮಧ್ಯಾನ್ಯದ ಊಟವು ಇಲ್ಲವಾಗಿ, ಕುಳಿತಲ್ಲೆ ಜೊಂಪು ಎಳೆಯುತ್ತಿತ್ತು.  ನಿದ್ದೆಗಣ್ಣಲ್ಲಿ ಎಚ್ಚರವಾಗಿ ನೋಡಿದರೆ ಎಲ್ಲರೂ ಕೆಳಗೆ ಇಳಿಯುತ್ತಿದ್ದರು.  ಅದೇ ಹೈದರಾಭಾದ್ ಇರಬೇಕೆಂದು ಯಾರನ್ನೋ ಕೇಳಿದೆ ಅವನು ಅದೇನು ಕೇಳಿಸಿಕೊಂಡನೊ  ’ಅವುನೂ ’ ಎನ್ನುತ್ತ ಇಳಿದುಹೋದ!,  ನಾನು ಸಹ ಬ್ಯಾಗ್ … Read more

ಅಯ್ಯಯ್ಯೋ.. ದೆವ್ವಾ…!!: ತಿರುಪತಿ ಭಂಗಿ

                       ಅಂದು ಮಟಮಟ ಮದ್ಯಾಹ್ನ  ಆಕಾಶದಲ್ಲಿ ಸೂರ್ಯ ಸೀಮೆ ಎಣ್ಣೆ ಸುರುವಿಕೊಂಡು ಅತ್ತೆಯ ಕಾಟ ಸಹಿಸಿಕೊಳ್ಳದ ಸೊಸೆ ಆತ್ಮಹತ್ತೆ ಮಾಡಿಕೊಂಡು ಧಗಧಗಿಸುವಂತೆ ಉರಿಯುತ್ತಿದ್ದ. ಡಾಂಬರ ರಸ್ತೆ  ಸ್ಮಾಶಾನ ಮೌನವಾಗಿ ಮಲಗಿತ್ತು. ಗಿಡಮರಗಳು ಮಿಲ್ಟಟ್ರೀ ಯೋಧರಂತೆ ವಿಶ್ರಾಮ್ ಸ್ಥಿತಿಯಲ್ಲಿ ನಿಂತುಕೊಂಡಿದ್ದವು. ಒಂದು ಎಲೆಯೂ ಅಲಗಾಡುತ್ತಿರಲಿಲ್ಲ. ಗಾಳಿ ಭೂಮಂಡಲದಿಂದ ಗಡಿಪಾರಾಗಿ ಹೋದಂತೆ ಇತ್ತು. ಅಂತ ಭಯಂಕರ  ರಸ್ತೆಯ ಮೇಲೆ ಒಂದು ಮೋಟಾರಿನ ಸುಳಿವಿಲ್ಲ. ಅಪ್ಪಿತಪ್ಪಿ ಆ … Read more

ತಾಯಿ ಭಾಗ್ಯ: ಸಾವಿತ್ರಿ ವಿ. ಹಟ್ಟಿ

-ಒಂದು- ಅಂವ ರಾತ್ರಿ ಆದ್ರ ಸಾಕು ಹೆದರಿದ ಮೊಲ ಆಕ್ಕಿದ್ದ. ಆಕಿ ಏನು ಕೇಳೂದ ಬ್ಯಾಡ ಹಸಿದ ಹೆಣ್ಣು ಹುಲಿ ಆಕ್ಕಿದ್ಲು. ಆಕೀ ಮೂಲಭೂತ ಬೇಡಿಕೆ ಅಂವಂಗ ಅತಿ ದುಬಾರಿದಾಗಿ ಕಾಣ್ತಿತ್ತು. ರಾತ್ರಿಯಾದ್ರ ಸಾಕು; ಬಡವರು ಸಂತೀಗಿ ಹೋಗುವಾಗ ಪುಡಿಗಾಸ್ನ ಎಣಿಸಿ ಎಣಿಸಿ ನೋಡಿಕೊಂಡು ಹೋಗುವಂಗ ಅಂವ ಇದ್ದಷ್ಟು ತನ್ನ ಗಂಡಸ್ತನನೆಲ್ಲಾ ಒಟ್ಟುಗೂಡಿಸಿಕೊಂಡು ಇವತ್ತರ ಆಕೀನ್ನ ತೃಪ್ತಿಪಡಿಸಲೇಬೇಕು ಅಂತ ಹೋದ್ರೂ ಆಕೀ ಬೇಡಿಕೆಯ ಕಾಲು ಭಾಗನಾದ್ರೂ ಪೂರೈಸದಾ ಹೈರಾಣಾಕ್ಕಿದ್ದ. ‘ನಿನ್ನ ಹಾಡು ಇಷ್ಟಾ ಹೋಗಾ ಮೂಳ’ ಅಂತ … Read more

ಸಾಬ್ಯ: ಶ್ರೀಮಂತ ರಾಜೇಶ್ವರಿ ಯನಗುಂಟಿ

                          ಅವನ ಹೆಸರು ಸಾಹೇಬಗೌಡ ಅಂತ. ಅವನನ್ನು ಪ್ರೀತಿಸುವವರು ಪ್ರೀತಿಯಿಂದ ಸಾಬು ಅಂತ ಕರೀತಾರೆ. ಮೊನ್ನೆ ಸಿಕ್ಕಿದ್ದ. ನಮ್ಮ ಪರಿಚಯದವರೊಬ್ಬರ ಮದುವೆಯಲ್ಲಿ. ಅವನೂ ಸಹ ನಮ್ಮ ಊರಿನವನೇ ಆದ್ದರಿಂದ ಊರಿನವರೆಗೂ ಹೋಗಿ ಎಲ್ಲರಿಗೂ ಆಮಂತ್ರಣವನ್ನು ಕೊಟ್ಟು ಅವನೊಬ್ಬನಿಗೆ ಕೊಡದಿರುವುದು ಸರಿಯೆನಿಸುವುದಿಲ್ಲವೆಂಬ ದೃಷ್ಟಿಯಿಂದ ಅವನಿಗೂ ಮದುವೆಗೆ ಆಹ್ವಾನಿಸಿ ಬರಲಾಗಿತ್ತು. ನಮ್ಮ ಪಾಡಿಗೆ ನಾವೂ ಆ ಕೆಲಸ ಈ ಕೆಲಸ ಅಂತ ಓಡಾಡಿಕೊಂಡಿದ್ವಿ. … Read more

ನೀಲಿ: ತಿರುಪತಿ ಭಂಗಿ

                                     ಮೊದಲ ಕೋಳಿ ಕೂಗಿತು. “ಅಯ್ಯೋ ಬೆಳಕ ಆತು. ಇಂದ ಬ್ಯಾರೆ ಅಮವಾಸಿ ಐತಿ ಹಾರಿಗೆಡಿಲಿ, ಈ ನಿದ್ದಿ ಒಂದ ನನಗ ದೆವ್ವ ಕಾಡಿದಂಗ ಕಾಡ್ತೈತಿ ನೋಡ, ಅಮವಾಸಿ ಅಡಗಿ ಮಾಡಬೇಕಾದ್ರ ಸೂರ್ಯಾ ನೆತ್ತಿ ಮ್ಯಾಲ ಬರ್ತಾನ” ಎಂದು ಗಡಬಡಿಸಿ ಹಾಸಗಿಯಿಂದ ಮ್ಯಾಲೆದ್ದು ನೀಲವ್ವ ಕಣ್ಣುಜ್ಜತೊಡಗಿದಳು. ತನ್ನ ಮಗ್ಗಲ ಮಲಿಗಿದ್ದ ಲಕ್ಕಪ್ಪ ಇನ್ನ … Read more

‘ನಿರ್ಧಾರ’: ರಮೇಶ್ ನೆಲ್ಲಿಸರ

'ನಂಗೊತ್ತಿತ್ತು ಒಂದ್ ದಿನ ನೀನು ಬಂದೇ ಬರ್ತೀಯ ಅಂತ' ಎಲ್ಲ ಸಂಬಂಧಗಳ ಬಂಧನವನ್ನು ಕಳಚಿ ಬಹುದೂರ ಸಾಗಿಬಂದ ಜಾಹ್ನವಿ,ರಾಘವ್ ತನ್ನನ್ನು ಏಂದಾದರೂ ಹುಡುಕಿಕೊಂಡು ಬಂದೇಬರುವನೆಂಬ ಆಸೆಯನ್ನು ಮನದ ಗರ್ಭದಲಿ ಸುಪ್ತ ಶಿಲಾಪಾಕದಂತೆ ಕಾಯ್ದಿಟ್ಟುಕೊಂಡಿದ್ದಳು. ಕಳೆದ ಹತ್ತು ವರ್ಷಗಳಿಂದ ಅನಾಥ ಮಕ್ಕಳ ಸೇವಾಸಂಸ್ಥೆ ನಡೆಸುತ್ತಿ‌ದ ಜಾಹ್ನವಿ ಮೊದಲ ಬಾರಿಗೆ ತನಗಾಗಿ ಇಷ್ಟೊಂದು ಖುಷಿಪಟ್ಟಿದ್ದಳು. ರಾಘವ್ ನ ಮುಖವನ್ನು ಕಣ್ತುಂಬಿಕೊಳ್ಳುತ್ತಿರುವಾಗಲೇ,ಹಿಂದೆ ಎಂದೋ ಕೀಲಿಹಾಕಿ ಭದ್ರಪಡಿಸಿ‌ದ್ದ ನೆನಪಿನ ಬಾಗಿಲು ತಂತಾನೆ ತೆರೆದುಕೊಂಡಿತು. ““““““““` ರಾಘವ್ ಹಾಗೂ ಜಾಹ್ನವಿ ಒಂದೇ ಕಾಲೇಜಿನಲ್ಲಿ ಕಲಿತದ್ದು,ರಾಘವ್ … Read more

ಶಾಲಿನಿ: ಶ್ರೀ, ಧಾರವಾಡ.

  ಸಂಜೆಗೆಂಪಿನ ಸೂರ್ಯ ಪೂರ್ವದಿಂದ ಪಶಚಿಮಕ್ಕೆ ಬಾಡಿಗೆಗೆ ಬಿಟ್ಟ ತನ್ನ ಕಿರಣಗಳನ್ನೆಲ್ಲ ಲೆಕ್ಕಹಾಕಿ ಹಿಂಪಡೆಯುತ್ತ ಮನೆಯ ಹಾದಿ ಹಿಡಿದಿದ್ದ. ಹುಬ್ಬಳ್ಳಿಯ ದುರ್ಗದಬೈಲಿನ ತುಂಬ ಬದಲಾಯಿಸಿದ ಚಹಾ ಪುಡಿಯ ಚಹಾ ಕುದಿಯುತ್ತ ತನ್ನ ಕಂಪನ್ನೆಲ್ಲ ಹರಡಿ ಸೂರ್ಯನಿಗೆ ಬೀಳ್ಕೊಟ್ಟು ಅಲ್ಲಿದ್ದವರನ್ನೆಲ್ಲ ತನ್ನ ಕಡೆಗೇ ಸೆಳೆಯುತ್ತಿತ್ತು. ಸಂಜೆಯಾಗುತ್ತಲೇ ಇಲ್ಲಿ ಹುಟ್ಟುವ ತಾತ್ಕಾಲಿಕ ಸಾಮ್ರಾಜ್ಯದಲ್ಲಿ ತರಾವರಿ ತಿನಿಸಿನಂಗಡಿಗಳು, ಮುಂಬೈಯಿಂದ ತರಿಸಿದ ಸೋವಿ ಬೂಟು, ಚಪ್ಪಲ್ಲು, ಜರ್ಕಿನ್ನುಗಳು, ದಾರಿಯ ಬದಿಗೆ ಬಿಕರಿಯಾಗುವ ಬ್ರ್ಯಾಂಡೆಡ್ ವಾಚುಗಳ ವಹಿವಾಟು ತನ್ನದೇ ತನ್ಮಯತೆಯಲ್ಲಿ ಸಾಗುತ್ತದೆ. ಈ ಪೇಟೆಯ … Read more

ಮಂಗಳಗೌರಿಯೂ ಫಾರಿನ್ ಸೊಸೆಯೂ: ಪಾರ್ಥಸಾರಥಿ ಎನ್

ಗೆಳೆಯ ಶಿವರಾಜ್ ಮನೆಗೆ ಹೋಗಿ ತುಂಬಾ ದಿನಗಳೆ ಕಳೆದಿದ್ದವು. ಅವನು ಮೊದಲಾದರು ದಿನಾ ಅಂತ ನಮ್ಮ ಮನೆಗೆ ಬರುತ್ತಿದ್ದವರು ಈಗ ರಿಟೈರ್ಡ್ ಆದಮೇಲೆ ಕಾಣಿಸುತ್ತಲೇ ಇಲ್ಲ,  ’ನಾನು ರಿಟೈರ್ಡ್ ಆದ ಮೇಲೆ ತುಂಬ ಎಂಗೇಂಜ್ ಆಗಿ ಬಿಟ್ಟಿದ್ದೀನಿ ಯಾವುದಕ್ಕು ಸಮಯವಿಲ್ಲ ಅಂತ ಅವನ ಗೋಳಾಟ’  ಒಮ್ಮೆ ಮಾತನಾಡಿಸಿಯಾದರು ಬರೋಣ, ಇನ್ನು ನನ್ನ ಮುಖ ಮರೆತೀತು ಎಂದು ಬಾನುವಾರ ಅವರ ಮನೆಗೆ ಹೋದೆ. ಮುಂಬಾಗಿಲು ತೆರೆದಿತ್ತು, ಸೀದಾ ಒಳಗೆ ಹೋದೆ, ಯಾರು ಕಾಣಲಿಲ್ಲ ಅನ್ನುವಷ್ಟರಲ್ಲಿ, ರೂಮಿನಲ್ಲಿ ಸಣ್ಣ ಶಬ್ದ, … Read more