ಅಮಾವಾಸ್ಯೆ: ಗಿರಿಜಾ ಜ್ಞಾನಸುಂದರ್

“ಏ ಬೇಡ ಮಕ್ಕಳಾ, ಅವು ನಮ್ಮ ಸೀಬೆ ಮರಗಳಲ್ಲ, ಬೇರೆಯವರದ್ದು. ಅವರನ್ನು ಕೇಳದೆ ಹಾಗೆಲ್ಲ ಕೀಳಬಾರದು” ಎಂದು ಕಾಮಾಕ್ಷಿ ಕೂಗುತ್ತಿದ್ದರು ಮಕ್ಕಳ ಸೈನ್ಯ ಅವಳ ಮಾತನ್ನು ಕಿವಿಗೆ ಹಾಕಿಕೊಳ್ಳದೆ ಹಣ್ಣುಗಳನ್ನು ಕಿತ್ತು ತಮ್ಮ ಚೀಲಕ್ಕೆ ಹಾಕುವುದರಲ್ಲಿ ಮುಳುಗಿತ್ತು. ಒಟ್ಟು ಹತ್ತು ಮೊಮ್ಮಕ್ಕಳು ಸೇರಿ ಲಗ್ಗೆ ಹಾಕಿದ್ದರು. ರಜಕ್ಕೆ ಅಜ್ಜಿ ಮನೆಗೆ ಬಂದಿದ್ದ ಎಲ್ಲರು ಮಂಗಗಳಾಗಿದ್ದರು. ಅವರನ್ನು ಹಿಡಿಯುವುದಕ್ಕೆ ಸೀನ ಮಾವನಕೈಯಲ್ಲಿ ಮಾತ್ರ ಸಾಧ್ಯ ಆಗುತ್ತಿತ್ತು. ಅವರು ಶಾಲೆಯ ಮುಖ್ಯೋಪಾಧ್ಯಾಪಕರಾಗಿ ಮಕ್ಕಳ ಮೇಲೆ ಒಳ್ಳೆ ಹಿಡಿತ ಹೊಂದಿದ್ದರು. ಆದರೆ … Read more

ಮಗುವಿನ ಕಥೆ: ನಂದಾ ಹೆಗಡೆ

ಪ್ರೈಮರಿ ಸ್ಕೂಲ್ ಟೀಚರಾದ ನಾನು ಇಂದು ಶಾಲೆಯಿಂದ ಮನೆಗೆ ಬಂದರೂ ಶಾಲೆಯದೇ ಗುಂಗಿನಲ್ಲಿದ್ದೆ. ಆರನೇ ಕ್ಲಾಸ್ ನಲ್ಲಿ ಓದುತ್ತಿದ್ದ ಪ್ರಗತಿ ನನ್ನ ಯೋಚನೆಯ ವಿಷಯವಾಗಿದ್ದಳು. ಪ್ರಗತಿ ನಾನು ನೋಡುತ್ತಿದ್ದ ಹಾಗೆ ಚೂಟಿಯಾದ ಹುಡುಗಿ. ಓದುವುದರಲ್ಲಿ ಯಾವಾಗಲೂ ಮುಂದು. ಸಾಮಾನ್ಯವಾಗಿ ಅವಳು ಎಲ್ಲಾ ವಿಷಯಕ್ಕೂ ನೂರಕ್ಕೆ ನೂರು ಅಥವಾ ಅದರ ಆಜು ಬಾಜು ಅಂಕ ಗಳಿಸುತ್ತಿದ್ದಳು. ಆದರೆ ಈಗ ಎರಡು ಮೂರು ಪರೀಕ್ಷೆಗಳಲ್ಲಿ ಅಂಕಗಳ ಇಳಿಕೆಯಾಗತೊಡಗಿತ್ತು. ಏನೋ ಸ್ವಲ್ಪ ವ್ಯತ್ಯಾಸವಾಗಿರಬಹುದೆಂದು ನಾನೂ ವಿಶೇಷವಾಗಿ ಏನೂ ಹೇಳಿರಲಿಲ್ಲ. ಆದರೆ ಅರ್ಧ … Read more

ಕ್ಯಾಮೆರಾಮ್ಯಾನ್: ದಯಾನಂದ ರಂಗದಾಮಪ್ಪ

ಕ್ಯಾಮೆರಾ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಾ ಅರಿವಿಲ್ಲದೆ ನಿದ್ರೆಗೆ ಜಾರಿದ್ದೆ. ಸ್ಟುಡಿಯೋದಲ್ಲಿನ ಫೋನಿನ ರಿಂಗಿನ ಸದ್ದು ನನ್ನನ್ನು ಎಚ್ಚರಿಸಿತು. ನಿದ್ದೆಗಣ್ಣಲ್ಲೇ ಫೋನ್ ಸ್ವೀಕರಿಸಿದೆ. ಅತ್ತ ಕಡೆಯಿಂದ Is this Colors Studios? May I speak to Saurabh ಅಂದ. ನಾನು yes Speaking ಅಂದೆ. ನಾನು ಡೇನಿಯಲ್ ಅಂತ, ನಾಳೆ ಮಧುವೆಗೆ ಒಂದು ಫೋಟೋಶೂಟ್ ಮಾಡಿಕೊಡ್ತಿರಾ ಪ್ಲೀಸ್. ಮುಂದಿನ ವಾರ ನನ್ನ ಮದುವೆ. ಸುಮಾರು ಸ್ಟುಡಿಯೊಸ್ ಗೆ ಕರೆ ಮಾಡಿದೆ ಆದರೆ ಎಲ್ಲ ಸ್ಟುಡಿಯೊಸ್ ಬುಕ್ ಆಗಿವೆ … Read more

ವಿಮಲಿ: ಎನ್, ಶೈಲಜಾ ಹಾಸನ

ಇಸ್ಕೋಲಿನಲ್ಲಿ ಏಳಿದ್ದ ವಿಸಯದ್ದ ಬಗ್ಗೆನೇ ಅವತ್ತೇಲ್ಲ ಯೋಚ್ನೆ ಮಾಡ್ಕಂಡು ಏಟು ವೊತ್ತಿಗೆ ಮನಿಗೋಯ್ತಿನೊ, ಏಟು ಬ್ಯಾಗ ಅವ್ವಂಗೆ ಆ ವಿಸಯ ತಿಳ್ಸಿ ನಮ್ಮನೆಗೂ ಒಂದು ಸೌಚಾಲ್ಯ ಮಾಡಿಸ್ಕೊತಿನೋ ಅಂತ ವಿಮಲಿ ಮನಸ್ಸಿನಲ್ಲೆ ಮಂಡಿಗೆ ತಿಂತಿದ್ದಳು. ಮನೆಗೆ ಬಂದವ್ಳೆ ಅವ್ವನ್ನ ಕಾಡೊಕೆ ಸುರು ಹಚ್ಕಂಡ್ಳು. “ಏಂತದೇ ಅದು ಸೌಚಲ್ಯ” ಅಂತ ಇಟ್ಟಿಗೆ ವೊತ್ತು ಸುಸ್ತಾಗಿದ್ದ ಪಾರು ರೇಕಂಡ್ಳು. ವಿಮಲಿ ಅತ್ಯೂತ್ಸಹದಿಂದ “ಅದೇ ಕನವ್ವ, ಕಕ್ಸದಮನೆ, ಇವತ್ತು ನಮ್ಮಿಸ್ಕೋಲಿನಲ್ಲಿ ದೊಡ್ಡವರೆಲ್ಲ ಬಂದು ಬಾಷ್ಣ ಮಾಡಿದ್ರು ಕನವ್ವ ಬಯಲಾಗೆ ಎಲ್ಡಕ್ಕೆ ವೋಗಬಾರದಂತೆ,ಅಂಗೆ … Read more

ಹೂವಾಗಿ ಅರಳಿ: ವೆಂಕಟೇಶ ಚಾಗಿ

  ಬೆಳಗಿನ ೬ ಗಂಟೆಯ ಸಮಯ. . ಕಣ್ಣಲ್ಲಿ ಇನ್ನೂ ನಿದ್ದೆ ಮಂಪರು. ಆದರೂ ಕಣ್ತೆರೆಯುವಂತೆ ಮಾಡಿತ್ತು ಮೊಬೈಲ್. ಯಾರದೋ ಮೆಸೆಜ್ ಬಂದಿರುವ ರಿಂಗ್ ಟೋನ್ ಆಗಾಗ ಕೇಳಿಸುತ್ತಿತ್ತು. ಚಳಿಗಾಲದ ಚಳಿಯಲ್ಲಿ ಮುದುಡಿಕೊಂಡು ಮಲಗಿದ್ದ ನಾನು ಮನಸ್ಸಿಲ್ಲದೇ ಕಣ್ತೆರೆಯಬೇಕಾಯಿತು. ಒಂಟಿ ಕಣ್ಣು ತೆರೆದು ಮೊಬೈಲ್ ತಡಕಾಡಿದೆ. ಮೆಸೆಜ್ ಟೋನ್ ನ ಶಬ್ದ ಮೊಬೈಲ್ ನ್ನು ಬೇಗ ಕೈಗೆ ಸಿಗುವಂತೆ ಮಾಡಿತ್ತು. ಆನ್ ಮಾಡುತ್ತಿದ್ದಂತೆ ಸುಮಾರು ೧೦ ಮೆಸೆಜ್ ಗಳಲ್ಲೂ ಸಾರಿ ಸಾರಿ ಸಾರಿ. . . ಹಿಂದಿನ … Read more

ಇದು ಕಥೆಯಲ್ಲ ವ್ಯಥೆ: ಆರೀಫ ವಾಲೀಕಾರ

ಅವ್ವ..! ಅವ್ವ..! ಎಂದು ರಾಮ ಓಡುತ್ತಾ ಮನೆಗೆ ಬಂದ ರಾಮು, ಅಕ್ಕ ಎಲ್ಲಿ ಎಂದು ಕೇಳಿದ?. ಅದಕ್ಕೆ ಗುರವ್ವ(ರಾಮು ತಾಯಿ) ಅವಳು(ರುಕ್ಕು ರಾಮುನ ಅಕ್ಕ) ಹಳ್ಳಕ್ಕೆ ಕಟ್ಟಿಗೆ ತರಲು ಹೋಗಿದ್ದಾಳೆಂದು ಹೇಳಿ. ತನ್ನ ಕಾಯಕದಲ್ಲಿ ತಲ್ಲಿನಳಾದಳು. ನಾನು ಆಟ ಆಡೋಕೆ ಹೋಗುತ್ತೀನಿ ಎಂದು ರಾಮು ಓಡಿ ಹೋದ. ಗುರವ್ವ ಕುಳ್ಳು ಸರಿಮಾಡುತ್ತಾ ಗೋಣು ಹಾಕಿದಳು. ಸೂರ್ಯಸ್ತ ಆಗುತ್ತಿತ್ತು. ಧರೆಪ್ಪ(ಗುರವ್ವನ ಗಂಡ) ಗೌಡರ ಹೊಲದ ಕೆಲಸ ಮುಗಿಸಿಕೊಂಡು ಮನೆಗೆ ಬಂದ. ‘ಲೇ ಗುರಿ ಎಲ್ಲಿ ಇದ್ದಿಯೇ?. ಗುರವ್ವಾ ಚುಮಣಿಗೆ … Read more

ನೆನಪಾಗುತ್ತಾರೆ ಇನ್ನೂ ನಮ್ಮ ಅಪ್ಪಾಜಿ ಮೇಷ್ಟ್ರು : ಜಹಾನ್‍ ಆರಾ. ಎಚ್. ಕೋಳೂರು

ಬೆಳಗ್ಗೆ ಶಾಲೆ ಗಂಟೆ ಹೊಡೆದ ನಿಮಿಷಾರ್ಧದಲ್ಲಿ ಎಲ್ಲರೂ ಪ್ರಾರ್ಥನೆ ಕಡೆಗೆ. ಆಯಸ್ಕಾಂತವು ಕಬ್ಬಿಣದ ವಸ್ತುಗಳನ್ನು ಆಕರ್ಷಿಸಿದಂತೆ ಮೇಷ್ಟ್ರ ವಿಷಲ್ ನಮ್ಮನ್ನು ಆಕರ್ಷಿಸುತ್ತಿತ್ತು. ಗಟ್ಟಿ ಧ್ವನಿಯಲ್ಲಿ “ಸಾವಧಾನ” ಎಂದರೆ ಹುಮ್ಮಸ್ಸಿನಿಂದ “ಏಕ್” ಎನ್ನುವ ಧ್ವನಿ ಒಂದು ಕಡೆಯಾದರೆ ನೂರಾರು ಮಕ್ಕಳ ಕಿವಿಗಳವರೆಗೆ ತರುವ ಮತ್ತೊಂದು ಧ್ವನಿ “ವಿಶ್ರಾಮ್” ಮತ್ತೊಂದು ಕಡೆ,ಇ ದು ನಮ್ಮ ಶಾಲೆಯ ಪಿ.ಟಿ.ಮೇಷ್ಟ್ರಾದ ಅಪ್ಪಾಜಿಗೌಡ್ರ ಶಿಸ್ತಿನ ಪಾಠ. ಶಿಸ್ತು, ಸಜ್ಜನಿಕೆಗೆ ಮತ್ತೊಂದು ಹೆಸರೇ ಇವರು. ನೀಳಕಾಯದ ಬಿಳಿಗೂದಲಿನ ಇವರು ಯಾವಾಗಲೂ ಸಫಾರಿ ಬಟ್ಟೆ ಮೈಮೇಲೆ, ಎಲ್ಲರ … Read more

ಇದರರ್ಥವೇನು?: ಸಹನಾ ಪ್ರಸಾದ್

ನಾನು ರಜಿತಾ. ರಂಜಿತಾ ಹೆಸರು ಬರೆಯುವಾಗ ಈ ರೀತಿ ತಿರುಚಲ್ಪಟ್ಟು, ಈ ಹೆಸರು ಖಾಯಂ ಆಯಿತು. ವಯಸ್ಸು ೫೫. ಗಂಡ ಸದಾಶಿವ, ದೊಡ್ಡ ಕಂಪನಿಯಲ್ಲಿ ಕೈ ತುಂಬಾ ಕೆಲಸ ಹಾಗು ಕೈ ತುಂಬಾ ದುಡ್ಡೂ ಸಹ. ಮೊದಲಿಂದಲೂ ಮಿತಭಾಷಿ. ಈಗ ವಯಸ್ಸಾದಂತೆ ಮಹಾ ಮೌನಿ. ಬೆಳಗ್ಗೆ ಎದ್ದು ತನ್ನ ಪ್ರಾತಃವಿಧಿಗಳನ್ನು ತೀರಿಸಿ, ೨೦ ನಿಮಿಷ ವ್ಯಾಯಾಮ ಮಾಡಿ , ತಿಂಡಿ ತಿನ್ನುತ್ತಾ ಪೇಪರ್ ಓದಿ ಹೊರಡುವರು. ಹೊಸ ಮಾದರಿಯ ಕಾರು, ಅದಕ್ಕೊಬ್ಬ ಡ್ರೈವರ್ ಇದಾನೆ. ಗಂಡನ ದಿನಚರಿಯಲ್ಲಿ … Read more

ಬದುಕಿದು ಸುಂದರ. . .: ಧೀರೇಂದ್ರ ನಾಗರಹಳ್ಳಿ.

‘ಅವನು’  ವಿಪರೀತವಾದ ಗೊಂದಲದಲ್ಲಿ ಮುಳುಗಿದ್ದ. ತನ್ನ ಸ್ನೇಹಿತನಾದ ‘ಇವನಿ’ಗೆ ಯಾವುದೋ ಒಂದು ಮಾಹಿತಿ ಕೊಡಲು ವಿನಂತಿಸಿದ್ದ. ಅದಕ್ಕೆ ಪ್ರತ್ಯತ್ತರವಾಗಿ ಇವನು,  ಅವನು ಕೇಳಿದ್ದ ಮಾಹಿತಿಯನ್ನೇನೋ  ಒದಗಿಸಿದ್ದ. ಅದನ್ನು ಯಥಾವತ್ತಾಗಿ ಸ್ವೀಕರಸೊವುದೋ ಅಥವಾ ತುಸುವಷ್ಟೇ ತೆಗೆದು ಕೊಂಡು ಉಳಿದದ್ದನ್ನು ಬಿಟ್ಟುಬಿಡಬೇಕೋ?. ಅವನು ಆ ಮಾಹಿತಿಯನ್ನು ಈ ತರಹದ  ಗುಮಾನಿಯಿಂದ ನೋಡುವುದಕ್ಕೆ ಕಾರಣ, ಆ ಮಾಹಿತಿಯಲ್ಲಿ ಇವನು ಕುಳಿತಿದ್ದ. ಇವನು ಕುಳಿತಿದ್ದ ಆ ಮಾಹಿತಿಯಲ್ಲಿ ಅವನಾಗಿರುವ ಇವನಿರಲಿಲ್ಲ. ಹೀಗಾಗಿ ಈ ಮಾಹಿತಿಯನ್ನು ಸ್ವೀಕರಿಸುವುದೋ ಅಥವಾ ಬೇಡವೂ ಎನ್ನುವ ಗೊಂದಲದಲ್ಲಿದ್ದ. ಆದರೆ … Read more

ಯಶೋದೆ: ಪ್ರೇಮಾ ಟಿ ಎಂ ಆರ್

ಲೇಡೀಸ್ ಕ್ಲಬ್ ನಲ್ಲಿ ನವರಾತ್ರಿ ಉತ್ಸವ. ಕೈಯ್ಯಲ್ಲಿ ಪೂಜಾ ಸಾಮಗ್ರಿ ಹಿಡಿದು ಹಿಡಿದು ಗಡಿಬಿಡಿಯಲ್ಲೇ ಹೊರಟಿದ್ದಳು ಕವನ. ಹಿಂದಿಂದ ಬಂದ ಬೈಕೊಂದು ಅವಳನ್ನು ದಾಟಿಕೊಂಡು ನಾಲ್ಕು ಮಾರು ಮುಂದೆ ನಿಂತಿತು. ಬೈಕ್ ಸವಾರ ಹೆಲ್ ಮೆಟ್ ತೆಗೆದು ಸಣ್ಣಗೆ ನಕ್ಕರು. ಈ ವ್ಯಕ್ತಿಯನ್ಬ ಎಲ್ಲೋ ನೋಡಿದ ನೆನಪು ಎಲ್ಲಿ ? ತಲೆಕೆರೆದುಕೊಂಡಳು ಕವನ. ಓ ಹೌದಲ್ವಾ ತಾನು ಗೇಟಿಗೆ ಬೀಗ ಸಿಕ್ಕಿಸುವಾಗ ಎದುರುಗಡೆ ಮನೆಯ ಅಂಗಳದಲ್ಲಿ ನಿಂತಿದ್ದರು ಆ ವ್ಯಕ್ತಿ . ಕಳೆದ ವಾರವಷ್ಟೇ ಆ ಮನೆಯ … Read more

ಹೊಸ್ತಿನ ಮನೆ ಸ್ಮಶಾನವಾದಾಗ: ಪ್ರವೀಣ್ ಶೆಟ್ಟಿ

ಅಂದೇಕೋ ಅವನು ತುಂಬಾ ಖುಷಿಯಾಗಿದ್ದ! ತಂಗಿ ಬೆಂಗಳೂರಿನಿಂದ ಬಂದ ಖುಷಿ, ಅದರ ಜೊತೆ ನಾಳೆ ಅಂದರೆ ಹೊಸ್ತು ಬೇರೆ. ಮನೆಯಲ್ಲಿ ಎಂದೋ ಕಳೆದುಹೊಗಿದ್ದ ಸಂಭ್ರಮ ಬೇರೆ. ಎಲ್ಲ ಅಣ್ಣ-ಅಕ್ಕ-ತಂಗಿ ಒಟ್ಟಾಗಿ ವರುಷಗಳೇ ಕಳೆದಿತ್ತು. ಎಲ್ಲಾ ಸೇರಿ ಹೊಸ್ತು ಮಾಡುವ ಸಂಭ್ರಮ ಮನೆಮಾಡಿತ್ತು. ಅವನು ಸೀತಾರಾಮ ಮೂವರು ಒಡಹುಟ್ಟಿದ ತಂಗಿಯರೊಂದಿಗೆ ಒಬ್ಬನೇ ಮಗ. ಟಿಸಿಎಚ್ ಮಾಡಿ ಸರಕಾರಿ ಕೆಲಸಕ್ಕಾಗಿ ಅರ್ಜಿ ಗುಜರಾಯಿಸಿ ಕಾಯುತ್ತಿದ್ದ. ಹಾಗೆ ತಂದೆಯ ವ್ಯವಹಾರಲ್ಲಿ ಕೈ ಜೊಡಿಸಿದ್ದ. ಅದೇ ಸಮಯಕ್ಕೆ ಸರಿಯಾಗಿ ಗ್ರಾಮೀಣ ಕೃಪಾಂಕದ ಅಡಿಯಲ್ಲಿ … Read more

ಚಿಗುರಿನ ಮುನ್ನ: ಮಂಜು ಹೆಗಡೆ

“ನಂಗೆ ನಿನ್ನಿಂದ ಒಂದು ಮಗು ಬೇಕು, ಪ್ಲೀಸ್ ಇಲ್ಲ ಅನ್ನಬೇಡ. ನಾನು ಜೀವನದಲ್ಲಿ ಒಂಟಿ ಆಗ್ಬಿಡ್ತೀನಿ. ನೆಮ್ಮದಿ, ನನ್ನ ಜೀವನಕ್ಕೆ ಭರವಸೆಗಾದ್ರು ಬೇಕು. ಇದು ಕೋನೆಯ ಆಸೆ, ಇಲ್ಲ ಅನ್ನಬೇಡಿ. ” ಅಂತ ಗಾಯತ್ರಿ ಗೋಗರಿತಾ ಇದ್ದಾಗ ರಾಘವ ಮೌನವಾಗಿದ್ದ. ‘ಇಲ್ಲ ಕಣೆ ಏನ್ ಹೇಳಬೇಕು ತಿಳಿತಿಲ್ಲ, ನಿನ್ನ ಮಾತು ಒಮ್ಮೆಲೆ ಬಾಂಬ್ ಬಿದ್ದಾಗೆ ಆಗಿದೆ. ‘ ಏಕಾಂತದಲ್ಲೂ ವೈರುಧ್ಯದ ಭಾವ. ‘ಹಾಗಲ್ಲ ರಾಘವ 7ವರ್ಷ ಆಯ್ತು ನಂದು ನಿಂದು ಪರಿಚಯ, ಮದುವೆ ಆದಾಗಿಂದ ನಾನು ಪಟ್ಟ … Read more

e – ಸಂಭಾಷಣೆ !: ಸಂತೋಷ್ ಮೂಲಿಮನಿ

ಇಬ್ಬರೂ ತಮ್ಮ ತಮ್ಮ ಲ್ಯಾಪ್ಟಾಪ್ ಮುಂದೆ ಕುಳಿತಿದ್ದಾರೆ, ಇಬ್ಬರ ತೆರೆಯ ಮೇಲೂ ಫೇಸ್ಬುಕ್ ನ ಪರದೆ ಇಣುಕಿ ಇವರ ಮುಖವನ್ನ ಆವರಿಸಿಕೊಂಡಿದೆ. ಇವನು ತನ್ನ ಫೇಸ್ಬುಕ್ ಪ್ರೋಪೈಲಿನಲ್ಲಿ ಈಗ ತಾನೆ ತನ್ನ ಬ್ಲಾಗ್ ನಲ್ಲಿ ಪ್ರಕಟಿಸಿದ ಲೇಖನದ ಕೊಂಡಿಯನ್ನು ಎಲ್ಲರೊಂದಿಗೆ ಹಂಚುತ್ತಲಿದ್ದ. ಅಪ್ದೇಟ್ ಬಟನ್ ಒತ್ತಿದ ತಕ್ಷಣ, ‘ ಸುಮಿ, ಆಯ್ತು ನೋಡು ‘ ಎಂದು ಸ್ವಲ್ಪ ದೂರದಲ್ಲೆ ಕೂತಿದ್ದ ಹೆಂಡತಿಗೆ ಉಸಿರಿದ್ದ. ಅವಳು ಆಗಲೆ ಮೆಚ್ಚಿದ್ದ ಗಂಡನ ಪೊಸ್ಟ್ ನ್ನ ಲೈಕ್ ಮಾಡಿದಳು. ಹೀಗೆ ಅವನ … Read more

ಬಡತನ: ಅಣ್ಣಪ್ಪ ಆಚಾರ್ಯ

ಸುತ್ತಲೊಮ್ಮೆ ನೋಡಿದರೆ ಗವ್ವೆನ್ನುವ, ಬೆಳಕನ್ನೇ ನುಂಗಿ ನೀರ್ ಕುಡಿಯುವ, ನಿಂತಲ್ಲೇ ಉಚ್ಚೆ ಹುಯ್ಯಿಕೊಳ್ಳುವ ಕತ್ತಲು; ಕಗ್ಗತ್ತಲು. ಅಮಾವಾಸ್ಯೆಯಾದ್ದರಿಂದ ನರಮನುಷ್ಯರು ಓಡಾಡಿದ ವಾಸನೆಯೂ ಬರುತ್ತಿಲ್ಲ. ಒಂದೆರಡು ನಾಯಿ-ಪಕ್ಕಿಗಳ ಕೂಗು, ನರಿಗಳ ಊಳಿಡುವಿಕೆ ಬಿಟ್ಟರೆ ಉಳಿದಂತೆ ಇಡೀ ಊರಿಗೆ ಊರೇ ಮೌನವಾಗಿದೆ. ಜಗವೆಲ್ಲ ಬೇಕಾಗಿದ್ದು, ಬೇಡವಾಗಿದ್ದನ್ನೆಲ್ಲ ತಿಂದು, ಬಕ್ಕ ಬೋರಲಾಗಿ ಮಲಗಿದೆ. ಆದರೆ ಈ ಗುಡಿಸಲಿನಲ್ಲಿ..?! ಆಗಲೋ, ಈಗಲೋ ಆರಿಹೋಗುವಂತಹ ಚಿಮಣಿ ಬುಡ್ಡಿಯನ್ನು ಎದುರಿಗಿಟ್ಟುಕೊಂಡು ಬಾಗಿಲ ಬಳಿ ಅವ್ವ ಕುಳಿತಿದ್ದಾಳೆ. ಮಕ್ಕಳೆಲ್ಲವೂ ‘ಪಿಳಿ-ಪಿಳಿ’ ಕಣ್ಣ್ ಬಿಡುತ್ತಾ, ತೆಂಗಿನ ಗರಿಯ ಮಾಡನ್ನೇ(ಛಾವಣಿ) … Read more

ಹೆಣ್ಣು: ಸಹನಾ ಪ್ರಸಾದ್

ರಾತ್ರಿ ಎಲ್ಲ ಮಧುಸೂದನನಿಗೆ ನಿದ್ರೆ ಇಲ್ಲ. ಆ ಕಡೆ, ಈ ಕಡೆ ಹೊರಳಾಡಿ, ಎದ್ದು ಕುಳಿತು, ಮತ್ತೆ ಮಲಗಿ, ಹೀಗೆ ಅರ್ಧ ರಾತ್ರಿ ಕಳೆಯಿತು. ಸಧ್ಯ, ಹೆ0ಡತಿಗೆ ಬೇರೆ ಕೋಣೆಯಲ್ಲಿ ಮಲಗಿ ಅಭ್ಯಾಸ. ಇಲ್ಲದಿದ್ದರೆ ಇಷ್ಟು ಹೊತ್ತಿಗೆ ರ0ಪ ಮಾಡಿ ಬಿಟ್ಟಿರುತ್ತಿದ್ದಳು. ಅಬ್ಬಬ್ಬಾ, ರಾತ್ರಿಯೆಲ್ಲ ನಿಮ್ಮ ಗೊರಕೆ ಇಲ್ಲಾ ಹೊರಳಾಟ, ನನ್ಕೈಲಿ ಆಗುವುದಿಲ್ಲಪ್ಪ. ಆರಾಮವಾಗಿ ಹೊದ್ದು ಮಲಗಲು ನಿಮಗೇನು ಕಷ್ಟ? ಹೇಗು ನನಗೆ ಚಿಕ್ಕ ವಯಸ್ಸಿನಿ0ದ ಆಸೆ, ನನ್ನದೇ ರೂಮು ಇರಬೇಕೆ0ದು, ರಮ್ಯಳ ರೂಮು ಖಾಲಿಯಾಗಿದೆಯಲ್ಲ, ಅಲ್ಲಿ … Read more

ಅಹಂಕಾರ ದರ್ಪಗಳ ಮಧ್ಯೆ ಬಂದ ಅವನೊಬ್ಬ: ಬಸವರಾಜ ಕಾಸೆ

ಮಧ್ಯೆ ರಾತ್ರಿ ಎರಡು ಗಂಟೆಯ ಸಮಯ, ಸಿಟಿ ರೈಲು ನಿಲ್ದಾಣದ ಎದುರು ಪುಟಪಾತ್ ಅಲ್ಲಿ ಹೇಗೇಗೊ ಪೇಪರ್ ಹಾಸಿಕೊಂಡು ಮಲಗಿರುವ ಜನರು. ಗಾಢ ಅಂಧಕಾರದ ನಡುವೆ ಕುಂಟುತ್ತಿರುವ ಕುದುರೆ ನಿಂತಲ್ಲೇ ಎಗರಾಡಿ ಬರುತ್ತಿದೆ ಅವನ ಮೈಮೇಲೆ, ಇನ್ನೇನು ತುಳಿದು ಬಿಟ್ಟಿತು ಎನ್ನುವಷ್ಟರಲ್ಲಿ ಒಂದೆಡೆ ರಣಕೇಕೆ ಹಾಕಿ ನಗುತ್ತಿರುವ ರಾಜ ರಾಣಿ ಮಂತ್ರಿಗಳು, ಅಷ್ಟರಲ್ಲಿ ಜೋರಾಗಿ ತಿರುಗುತ್ತಿರುವ ಯಂತ್ರವೊಂದು ಕಳಚಿ ಭಯಾನಕವಾಗಿ ಬಿದ್ದು ಬಿಟ್ಟಿತು. ಹೊಡಿ ಆರು ನೂರಾ ಎಂಭತ್ತು ಎಂಬ ಕರಾಳ ಧ್ವನಿ…ಮಲಗಿದ್ದ ಅವನು ಇದ್ದಕ್ಕಿದ್ದಂತೆ ಬೆಚ್ಚಿ … Read more

ವೆಂಕಜ್ಜ: ಗಿರಿಜಾ ಜ್ಞಾನಸುಂದರ್

ಬೆಳಗಿನ ಸೂರ್ಯನ ಕಿರಣ ಕಣ್ಣಿಗೆ ಚುಚ್ಚುತ್ತಿದ್ದು,   ವೆಂಕಜ್ಜನ ಕಣ್ಣು ಭಾರವಾಗಿದ್ದರೂ ನಿಧಾನವಾಗಿ ತೆಗೆಯುತ್ತಿದ್ದ. ದೇವಸ್ಥಾನದ ಒಂದು ಮೂಲೆಯಲ್ಲಿ ಮಲಗುವ ವೆಂಕಜ್ಜ ಯಾವಾಗಲು ಚುರುಕು. ಅಷ್ಟೊಂದು ನಿಧಾನವಾಗಿ ಎದ್ದವನೇ ಅಲ್ಲ. ಇಂದೇಕೋ ಅವನ ಮನಸ್ಸು ಎಂದಿನಂತೆ ಇರಲಿಲ್ಲ. ವಸುಧಾಳ ನೆನಪು ಬಹಳವಾಗಿ ಕಾಡುತ್ತಿತ್ತು. ಅವಳು ತನ್ನನ್ನು ಎಬ್ಬಿಸುತ್ತಿದ್ದ ರೀತಿ,   ಮುದ್ದು ಮಾಡುತ್ತಾ ಕಚಗುಳಿ ಇಡುತ್ತಿದ್ದ ನೆನಪು. ವೆಂಕಜ್ಜನ ಜೀವನದಲ್ಲಿ ವಸುಧಾ ಅವನ ಬಾಳ ಸಂಗಾತಿಗಿಂತ ಹೆಚ್ಚಾಗಿದ್ದಳು. ಅವನೆಲ್ಲ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಳು. ಚಿಕ್ಕವಯಸ್ಸಿನಲ್ಲಿ ತಂದೆ ತಾಯಿಯನ್ನು ಕಳೆದುಕೊಂಡಿದ್ದ ಅವನಿಗೆ ತನ್ನೆಲ್ಲ … Read more

ನಿರಾಶ್ರಿತ: ವೈ. ಬಿ. ಕಡಕೋಳ

"ನಮಸ್ಕಾರ ಗುರುಗಳಿಗೆ" ಎದುರಿಗಿದ್ದ ಮಲ್ಲಪ್ಪನ ಕಂಡ ವೆಂಕಪ್ಪ ಮಾಸ್ತರು  "ಅರೆ ಮಲ್ಲಪ್ಪ. ಏನಿದು ಕಳೆದ ಎಳೆಂಟು ತಿಂಗಳಿಂದ ಬೆಟ್ಟಿ ಆಗಿಲ್ಲ ಎಲ್ಲಿ ಹೋಗಿದ್ದಿ. ಏನು ಕಥೆ? ", ಮತ್ತೆ ಮಾತು ಮುಂದುವರೆಸಿ "ಅಂದಾಂಗ ನಿನ್ನ ಮಗ ಚನ್ನಪ್ಪ ಅರಾಮ ಅದಾನೇನು? " ಹಾಗೆಯೇ ಒಂದೇ ಉಸಿರಿನಿಂದ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದರು. ಬಹಳ ದಿನಗಳಿಂದ ಶಾಲೆಯ ಕಡೆಗೆ ಬರದಿದ್ದ ಮಲ್ಲಪ್ಪನ ಬಗ್ಗೆ ವೆಂಕಪ್ಪ ಮಾಸ್ತರರಿಗೆ ವಿಶೇಷ ಕಾಳಜಿ. ಅವನ ಮಗ ಚನ್ನಪ್ಪ ಓದಿನಲ್ಲಿ ಸದಾ ಮುಂದು. ಮಲ್ಲಪ್ಪ ಬಡವನಾದರೂ … Read more

ಯೇಸು ಶಿಲುಬೆಯಲ್ಲಿಲ್ಲ: ಧನು ಮಲ್ಪೆ

ಸಾರ್, ಸಾರ್ ಎಂಬ ಕೂಗಿಗೆ ಅವನು ಸಾವಧಾನವಾಗಿ ಅಷ್ಟೆ ನಿರ್ಲಕ್ಷ್ಯವಾಗಿ ತಿರುಗಿ ನೋಡಿದ. ರೈಲಿನ ಕಿಟಕಿಯಿಂದ ವೇಗವಾಗಿ ಚಲಿಸುತ್ತಿರುವಂತೆ ಭಾಸವಾಗುವ ನದಿ ಸೇತುವೆಗಳು, ಹಸಿರು ಸೀರೆಯನ್ನು ಹೊದ್ದು ಮಲಗಿದಂತೆ ಕಾಣುವ ಹೊಲ ಗದ್ದೆಗಳು, ಕಪ್ಪು ಚುಕ್ಕೆಗಳಂತೆ ಕಾಣುವ ದನ ಕರುಗಳನ್ನು ನೋಡುತ್ತಾ ಯಾವುದೋ ಆಲೋಚನೆಯಲ್ಲಿ ಮುಳುಗಿದ್ದವನಿಗೆ ಆ ಕೂಗಿನಿಂದ ಅಸಾಧ್ಯ ಸಿಟ್ಟು ಬಂತು. ತಿರುಗಿ ನೋಡಿದಾಗ ಗಂಟಿನ ಕೆಳಗೆ ಎರಡೂ ಕಾಲುಗಳಿಲ್ಲದ ಹೆಳವನೊಬ್ಬ ತಟ್ಟೆ ಹಿಡಿದು ದೈನ್ಯವಾಗಿ ಅವನನ್ನೇ ನೋಡುತ್ತಿದ್ದಾನೆ. ಕಳೆದ ಎರಡು ವರ್ಷಗಳಲ್ಲಿ ಇದು ಅವನಿಗೆ … Read more

ಹಸಿದವರು: ಪ್ರವೀಣಕುಮಾರ್. ಗೋಣಿ

ಒಲೆಯ ಮೇಲೆ ಇಟ್ಟ ಅನ್ನ ಉಕ್ಕಿ ಗಂಜಿ ಎಲ್ಲ ಪಾತೆಲಿಯ ಮೈತುಂಬ ಇಳಿದು ಉರಿಯುತ್ತಿದ್ದ ಬೆಂಕಿಯನ್ನ ಚರ ಚರನೇ ಆರಿಸುತ್ತಲಿತ್ತು.  ಮಿಣುಕು ದೀಪದ ಮುಂದೆ ಓದುತ್ತ ಕುಳಿತಿದ್ದ ಮಗನನ್ನೇ ಬೆರಗು ಕಣ್ಣಿಂದ ನೋಡುತ್ತಾ ಕುಳಿತಿದ್ದ ಯಲ್ಲಿ ಎದ್ದು ಓಡಿ ಹೋಗಿ ಪಾತ್ರೆಯ ಮೇಲಿನ ಮುಚ್ಚಳಿಕೆಯನ್ನ ಆಚೆ ನೂಕಿದಳು.  ಏಳು ಮಗಾ ವೇಳ್ಯಾ ಬಾಳ್ ಆಯ್ತು ಅನ್ನಾನು ಆಗೆದೆ ಉಂಡು ಒದ್ತಾ ಕೂಡುವೆಂತೆ ಅಂತಾ ರಾತ್ರಿ ಊಟಕ್ಕೆ ಗಂಗಾಳ ಇಟ್ಲು.  ತೇಲಿ ಬರುತ್ತಿದ್ದ ನಿದ್ದೆಯನ್ನ ಸರಿಸಿ ಪರಮ ಚಕ್ಕಳುಮುಕ್ಕಳು … Read more