ವಂಶೋದ್ಧಾರ !: ಅಶ್ಫಾಕ್ ಪೀರಜಾದೆ

ಪಾತರಗಿತ್ತಿಯಂತಾ ಚಂಚಲ ಚಲ್ವಿ ಈ ಪಾರಿ! ಕಡ್ಡೀಲೇ ಬರದಾಂಗ ಬಳಕು ಶರೀರದ ವೈಯ್ಯಾರಿ !! ನಡದರ ನಾಟ್ಯ ನವಿಲಿನ್ಯಾಂಗ„ !! ಉಲಿದರ ಕೋಗಿಲೆ ಹಾಡಿದಾಂಗ„ !!! ಹಡದವರ ಮುದ್ದಿನ ಮಗಳಾಗಿ ಆಡಕೊಂತ ಮಾಡಕೊಂತ, ಹಂಗ„ ಚಾರುಚೂರು ಸಾಲೀನೂ ಕಲಕೊಂತ ಬೆಳೆದ ಹುಡ್ಗಿ ಒಂದಿವ್ಸ ದೊಡ್ಡಾಕಿ ಆದ ಸುದ್ದಿ ಮಲೇರಿಯಾ ಜ್ವರದಾಂಗ ಸುತ್ತ ಹಳ್ಳಿಗೆಲ್ಲ ಹರಡಿ, ಮೊದಲ„ ಅವಳ ರೂಪಲಾವಣ್ಯ ಮನಸಿನ್ಯಾಗ ತುಂಬಕೊಂಡ ಕನಸ ಕಾಣಾಕ ಹತ್ತಿದ ಪಡ್ಡೆ ಹುಡಗರ ನಿದ್ದಿಗೆಡಸಿತ್ತ. ಥ್ವಾಡೆ ಮಂದಿಗೆ ಈ ವಿಶ್ಯಾ ಮೊಜಿನ … Read more

ರೈತನ ಮಗಳ ಎಂ.ಬಿ.ಬಿ.ಎಸ್. : ಕೊಟ್ರೇಶ್ ಕೊಟ್ಟೂರು

ನಾಳೆ ಹೇಗಾದರೂ ಮಾಡಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿಯೇ ತೀರುವೆ ಎನ್ನುವ ಭರವಸೆಯಿಂದ ಜಗದೀಶ ಭಾನುವಾರ ರಾತ್ರಿ 7.00 ಗಂಟೆಗೆ ತನ್ನೆಲ್ಲಾ ಬಟ್ಟೆಯನ್ನು ಪ್ಯಾಕ್ ಮಾಡಿ ರಾತ್ರಿ 10.30 ಕ್ಕೆ ಬಸ್ ಇರುವುದು ಅದಕ್ಕೆ ಹೊರಟರಾಯಿತು ಎಂದು ಅಂದುಕೊಂಡು ತನ್ನ ಹೆಂಡತಿ ಮುಬೀನಾಗೆ ಹೇಳಿದ “ಏನೆ ನಾನು ಬೆಳಿಗ್ಗೆ ಬೆಂಗಳೂರು ಹೋಗ್ತಿದ್ದೀನಿ ಮಗಳಿಗೆ ಏನಾದ್ರೂ ಇದ್ರೆ ಕೊಡು ಅಂದ” ಅದಕ್ಕೆ ಮುಬೀನಾ “ಅಲ್ರೀ ಇಲ್ಲಿ ಉಣ್ಣಾಕ ಏನೂ ಗತಿಯಿಲ್ಲ, ಮಳೆ ನೋಡಿದ್ರ ಕಣ್ಮರೆಯಾಗ್ಯಾತಿ ಏನು ಅದ ಮನ್ಯಾಗ ಬರೀ … Read more

ಕ್ಯಾ ಯಹೀ ಪ್ಯಾರ್ ಹೇ…..: ಗಿರಿಜಾ ಜ್ಞಾನಸುಂದರ್

ಬೆಳಿಗ್ಗೆ ಏಳುತ್ತಲೇ ಗಲಾಟೆ ಮಾಡುತ್ತಿದ್ದ ತನ್ನ ಪುಟ್ಟ ಅಚಿಂತ್ಯನನ್ನ ತನ್ನ ಕಂಕುಳಲ್ಲಿ ಹೊತ್ತುಕೊಂಡು ಅಡುಗೆ ಮನೆಗೆ ಧರಿತ್ರಿ ಬಂದಳು. ಗಂಟೆ ಆಗಲೇ ೬ ಆಗಿತ್ತು. ಗಂಡನಿಗೆ ಅಡುಗೆ ಮಾಡಿ ಡಬ್ಬಿಗೆ ಹಾಕಬೇಕು, ಹೆಚ್ಚು ಸಮಯವಿಲ್ಲ ಎಂದು ದಡಬಡ ಕೆಲಸ ಮಾಡುತ್ತಿದ್ದಳು. ಗಂಡನ ಪ್ರೀತಿಯ ವಾಂಗೀಬಾತ್ ಮಾಡುತ್ತ ಜೊತೆಯಲ್ಲಿ ಗಸಗಸೆ ಪಾಯಸ ಮಾಡುವುದರಲ್ಲಿ ಮಗ್ನಳಾಗಿದ್ದಳು. ಪುಟ್ಟ ಮಗು ಕೈಬಿಡುತ್ತಿಲ್ಲ. ಆದರೂ ಅವನ ಹುಟ್ಟುಹಬ್ಬಕ್ಕೆಂದು ಅವನಿಗೆ ಮತ್ತು ಅವನ ಸಹೋದ್ಯೋಗಿಗಳಿಗೂ ಆಗುವಂತೆ ಪ್ರೀತಿಯಿಂದ ತಯಾರು ಮಾಡಿ, ಡಬ್ಬಿಗೆ ಹಾಕಿದಳು. ಅಷ್ಟರಲ್ಲಿ … Read more

ರೇಷ್ಮೆ ಸೀರೆ: ಅಶ್ಫಾಕ್ ಪೀರಜಾದೆ

-1- ಅನುದಾನ ರಹಿತ ಖಾಸಗೀ ಶಾಲೆಯೊಂದರ ಸಹ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿರುವ 40 ವಯದ ಅನಂತನದು ಸುಂದರ ಸಂಸಾರ. ಮಗ ಅಮೀತ ಓದಿನಲ್ಲಿ ಜಾಣ ಅನ್ನುವ ಕಾರಣಕ್ಕೆ ನಗರದ ಪ್ರತಿಷ್ಠಿತ ಕಾಲೇಜವೊಂದರಲ್ಲಿ ಪಿ ಯು ವಿಜ್ಞಾನ ಓದುತ್ತಿದ್ದಾನೆ. ಮಗಳು ಮಯೂರಿ ಕೂಡ ಜಾಣ ವಿದ್ಯಾರ್ಥಿನಿ, ಎಂಟನೇಯ ತರಗತಿಯಲ್ಲಿ ಓದುತ್ತಿದ್ದಾಳೆ. ಅವಳು ಈ ಸಣ್ಣ ವಯಸ್ಸಿನಲ್ಲಿ ಭರತ ನಾಟ್ಯದಲ್ಲಿ ಹೆಸರು ಮಾಡುತ್ತಿರುವ ಅಪರೂಪದ ಉದಯೋನ್ಮುಖ ಪ್ರತಿಭೆಯೂ ಹೌದು. ಇವಳು ಹಲವಾರು ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕಲಿಯುತ್ತಿರುವ ಶಾಲೆಗೆ, ಹುಟ್ಟಿದ … Read more

ತೆರೆದಿದೆ ಮನೆಯೋ…: ಅಶ್ಫಾಕ್ ಪೀರಜಾದೆ

ಬದುಕಿನ ಮುಸ್ಸಂಜೆಯಲ್ಲಿ ಕುಳಿತು ನನ್ನ ಜೀವನದ ಮರಳು ಗಾಡಿನಲ್ಲಿ ನನಗಾಗಿ ನನ್ನತ್ತ ನಡೆದು ಬಂದವರ ಹೆಜ್ಜೆಗಳ ಗುರುತು ಹುಡುಕಲು ಪ್ರಯತ್ನಿಸುತ್ತೇನೆ. ಹೃದಯದಲ್ಲಿ ಎದ್ದ ಬಿರುಗಾಳಿಗೆ ಸರಿದು ಹೋದ ಮರಳಿನಲ್ಲಿ ಗುರುತು ಸಿಗದಂತೆ ಅವಶೇಷವಾಗಿ ಅಳಿದುಳಿದ ಗುರತುಗಳೇ!. ಒಂದೇ ಒಂದು ಸ್ಥಿರವಾದ ಹೆಜ್ಜೆ ಅಲ್ಲಿ ಮೂಡಿದ್ದು ಗೋಚರಿಸುವುದೇ ಇಲ್ಲ. ನಾನು ನನ್ನ ಮನೆಯಲ್ಲಿ ಒಂಟಿಯಾಗಿ ಕುಳಿತು ಇವುಗಳನ್ನೆಲ್ಲ ಅವಲೋಕಿಸುತ್ತ ಮತ್ತೇ ನನ್ನತ್ತ ಯಾರಾದರೂ ಬರಬಹುದೇ ಎಂದು ಬರುವವರ ಹೆಜ್ಜೆ ಸಪ್ಪಳ ಆಲಿಸಲು ಮೈಯಲ್ಲ ಕಿವಿಯಾಗಿಸುತ್ತೇನೆ. ಗಾಳಿಗೆ ಹಾರಿ ಹೋದ … Read more

ಬಣ್ಣದ ನೆರಳು ……: ಸತೀಶ್ ಶೆಟ್ಟಿ, ವಕ್ವಾಡಿ.

ಮುಂಗಾರಿಗೆ ಯಾಕಿಷ್ಟು ಅವಸರವೋ ಗೊತ್ತಿಲ್ಲ. ಊರಲ್ಲಿ ಯಕ್ಷಗಾನ ಮೇಳಗಳು ತಮ್ಮ ತಿರುಗಾಟಕ್ಕೆ ಮಂಗಳ ಹಾಡುವ ಮುನ್ನವೇ ಮಳೆ ತನ್ನ ಒಡ್ಡೋಲಗ ಆರಂಭಿಸಿಬಿಟ್ಟಿದೆ. ಸಾಮಾನ್ಯವಾಗಿ ಜೂನ್ ಮೊದಲ ವಾರದಲ್ಲಿ ಕರಾವಳಿಗೆ ಕಾಲಿಡುತ್ತಿದ್ದ ಮುಂಗಾರು ಈ ಬಾರಿ ಹೆಚ್ಚು ಕಡಿಮೆ ಇಪ್ಪತ್ತು ದಿನಗಳ ಮೊದಲೇ ನೆಲೆಯೂರವ ಲಕ್ಷಣ ಹೆಚ್ಚಾದಂತಿದೆ. ನಿನ್ನೆ ರಾತ್ರಿಯಿಂದ ಧೋ ಅಂತ ಬ್ರೇಕ್ ಇಲ್ಲದೆ ಸುರಿಯುತ್ತಿದ್ದ ಮಳೆ ಊರಲ್ಲಿ ನೆರೆಯನ್ನೇ ಸೃಷ್ಟಿಸಿತ್ತು. ಕಡಲ ಶಬ್ದ ಮತ್ತು ಕಪ್ಪುಗಟ್ಟಿದ ಆಕಾಶ ಭಾರೀ ಮಳೆಯ ಮುನ್ಸೂಚನೆ ನೀಡುತ್ತಿತ್ತು. “ಥತ್, ಎಂತ … Read more

‘ಕೊನೆಯ ದಿನದೊಳಗೊಂದು’ ಕಥೆ: ಮೊಗೇರಿ ಶೇಖರ ದೇವಾಡಿಗ

ಫಲಿತಾಂಶದ ಪಟ್ಟುಯನ್ನು ಕೂಲಂಕಷವಾಗಿ ಪರಿಶೀಲಿಸಿದ ಮೇಲೆ ಸಹಜವಾಗಿ ಸಂತೃಪಿಯ ನಗು ತೇಲಿತು. ನೋಟಿಸ್ ಬೋರ್ಡ್‍ಗೆ ಹಚ್ಚಿದ ಮೇಲಂತೂ ಮನಸ್ಸು ತುಸು ಹಗುರಾಯಿತು. 8ನೇ ತರಗತಿಯ ಮಕ್ಕಳು ಕೆಲದಿನಗಳಿಂದ ‘ಕಥೆ ಹೇಳಿ ಸಾರ್…’ ಎಂದು ಪೀಡಿಸುತ್ತಿದ್ದದ್ದು ನೆನಪಾಗಿ ‘ಕೊನೆಯ ದಿನದೊಳಗೊಂದು’ ಕಥೆ ಹೇಳಬೇಕೆಂದು ಮನ ಮಾಡಿ ಅತ್ತ ಕಾಲಿಟ್ಟಿದ್ದೆ. ತರಗತಿಯ ಲೀಡರ್ ಅಭಿಷೇಕ್ ‘ಅರುಣ್ ಸರ್ ಬಂದ್ರ… ಇವತ್ತು ಕಥೆ ಗ್ಯಾರಂಟಿ…’ ಎಂದ ತುಸು ಜೋರಾಗಿಯೇ ತರಗತಿ ಕ್ಷಣಾರ್ಧದಲ್ಲಿ ಮೌನವಾಗಿ ನನ್ನ ಕಥೆಗೊಂದು ವೇದಿಕೆ ನಿರ್ಮಿಸಿಕೊಟ್ಟಿತ್ತು. “ಮಕ್ಕಳೇ, ಇದು … Read more

ವಿಜ್ಞಾನಿ ಮಿತ್ರರು: ಡಾ. ಗಿರೀಶ್ ಬಿ.ಸಿ.

ಜಗುಲಿ ಮೇಲೆ ಕುಳಿತು ಬಲಗೈಯಲ್ಲಿ ಬೂದುಗಾಜು ಹಿಡಿದು ಎಡಗೈಯ ಬೆರಳುಗಳ ಮದ್ಯೆ ಅದಾವುದೊ ಕೀಟವನ್ನು ವೀಕ್ಷಿಸುತ್ತ್ತಿದ್ದ ಈಸುರಯ್ಯನ ರವಿ. ಅಚಾನಕ್ ಆಗಿ ಆಗಮಿಸಿದವನಿಗೆ ಕುಳಿತುಕೊಳ್ಳಲು ಕಣ್ಣಲ್ಲೇ ಸಂಜ್ಞೆಮಾಡಿ ತನ್ನ ಅಧ್ಯಯನವನ್ನು ಮುಂದುವರೆಸಿದ. ಅದೇನು ಮಾಡ್ತಾನೋ ನೋಡೋಣ ಅಂತ ಅವನ ಎಡಭಾಗದಲ್ಲಿ ಮಂಡಿವೂರಿ ಕುಳಿತೆ. ಕಣ್ಣು ಮಿಟುಕಿಸದೆ ಆ ಕೆಂಪು ಕೀಟವನ್ನು ನೋಡುತ್ತಾ ಕತ್ತನ್ನು ಮೇಲೆ ಕೆಳಗೆ ಆಡಿಸುತ್ತಾ ಏನನ್ನೋ ನೆನದು ‘ಯೆಸ್ ಯೆಸ್’ ಅಂದ. ಕೈಯಲ್ಲಿರುವುದನ್ನು ನೆಲದ ಮೇಲೆ ಹಾಕಿ ‘ಬಂದೇ ಇರು’ ಅನ್ನುತ್ತ ಒಳಗೆ ಹೋಗುವಾಗ … Read more

ಅಂತೆ ಕಂತೆಗಳ ನಡುವೆ…: ಅಶ್ಫಾಕ್ ಪೀರಜಾದೆ

ಗೆಳೆಯ ಗಂಗಾಧರ ಸತ್ತ ಸುದ್ದಿಯ ಹಿನ್ನಲೆಯಲ್ಲಿ ನಾನು ಬೆಂಗಳೂರಿನಿಂದ ಬೆಳಗಾವಿಗೆ ಪ್ರಯಾಣ ಬೆಳಸಬೇಕಾಗಿ ಬಂತು. ಗಂಗಾಧರ ನನ್ನ ಪ್ರಾಣ ಸ್ನೇಹಿತ, ವಾರಿಗೆಯವ, ಹೆಚ್ಚುಕಮ್ಮಿ ನನ್ನಷ್ಟೇ ವಯಸ್ಸು, ನಲವತ್ತೈದು ಸಾಯುವ ವಯಸ್ಸಲ್ಲ, ಅದಕ್ಕೆ ಅದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಆದರೆ ಗಂಗಾಧರನ ಪತ್ನಿಯೇ ಅಳುತ್ತ ದೂರವಾಣಿಯ ಮುಖಾಂತರ ಇದನ್ನು ಹೇಳಿದಾಗ ನಂಬದೇ ಗತಿಯಿರಲಿಲ್ಲ. ಗಂಗಾಧರನ ಅಗಲಿಕೆಯ ವೇದನೆ ಹೊತ್ತು ಭಾರವಾದ ಮನಸ್ಸಿನಿಂದ ಬೆಳಗಾವಿ ಬಸ್ಸು ಹತ್ತಿದೆ. ಬಸ್ಸು ನಿಲ್ಧಾಣ ಬಿಟ್ಟಾಗ ರಾತ್ರಿ ಹತ್ತರ ಸಮಯ, ಸೀಟಿಗೊರಗಿ ಮಲಗಲು ಪ್ರಯತ್ನಿಸಿದೆ.ಸಾಧ್ಯವಾಗಲಿಲ್ಲ. ಕೇವಲ … Read more

ಸೌಮ್ಯ ನಾಯಕಿ ಸ್ನೇಹ ಮಹೋತ್ಸವ: ವೃಂದಾ. ಸಂಗಮ

ನಿಜವಾಗಿಯೂ ಇದು ಸೌಮ್ಯ ನಾಯಕಿಯ ಕಥೆಯೂ ಅಲ್ಲ. ಬೇಲೂರಿನ ಅಂತಃಪುರ ಗೀತೆಗಳ ವಾಚನವೂ ಅಲ್ಲ. ‘ಹಂಗಾದ್ರೆ ಇನ್ನೇನು?’ ಅಂತ ನೀವು ಕೇಳೋದಿಕ್ಕೆ ಮೊದಲೇ ಹೇಳುವ ಕತೆಯಿದು. ಕಥಾ ನಾಯಕಿಯ ಹೆಸರು ಸೌಮ್ಯ. ಧರಣಿ ಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ನಾಟ ದೇಶದೊಳು, ಸರ್ಕಾರೀ ನೌಕರಿಯೆಂದು ಹೆಸರಾದ ಒಂದು ಖಾಯಂ ನೌಕರಿಯೊಳಗಿದ್ದ ಒಬ್ಬ ಸಾಮಾನ್ಯ ನೌಕರನ ಮಗಳು. ಯಾವುದೇ ಮಹತ್ವಾಕಾಂಕ್ಷೆಗಳಿಲ್ಲದ ಸಾಮಾನ್ಯ ಹುಡುಗಿ. ನೋಡಲು ಗೋಧಿ ಬಣ್ಣ ಸಾಧಾರಣ ಮೈಕಟ್ಟು. ಹುಟ್ಟಿದ್ದಕ್ಕೆ ಬೆಳೆದಳು. ಬೆಳೆದಿದ್ದಾಳೆಂದು ಅಂಗನವಾಡಿಯ ಟೀಚರ್ ಎಳಕೊಂಡು ಹೋದರು, … Read more

ಮಂದಾಕಿನಿ : ಪ್ರವೀಣಕುಮಾರ್ ಗೋಣಿ

ಅಷ್ಟಕ್ಕೂ ಇವರು ಹೊರಟಿದ್ದಾದರೂ ಎಲ್ಲಿಗೆ !? ಕುರಿಮಂದೆಯ ಹಿಂಡೊಂದು ಎಲ್ಲಿಗೆ ? ಯಾವುದರ ಕಡೆಗೆ ? ಯಾವುದಕ್ಕೆ ಎನ್ನುವ ಪರಿವೆಯೇ ಇಲ್ಲದಂತೆ ಕತ್ತು ನೆಲಕ್ಕೆ ಹಾಕಿಕೊಂಡು ಸಾಗುವಂತೆ ನಡೆಯುತ್ತಲೇ ಇದ್ದಾರೆ. ಕುಂತು ಭೂಮಿಗೆ ಭಾರವಾಗಬೇಡ ಎದ್ದು ನಡೆಯುತ್ತಿಲಿರೆಂದು ಹಿರೀಕರು ಹೇಳಿದ್ದೇನೋ ನಿಜ. ನಡೆಯುತ್ತಲೇ ಇರು ಎಂದ ಮಾತ್ರಕ್ಕೆ ನಡೆಯುವುದಾದರೊ ಎಲ್ಲಿಗೆ ? ಬೆಳಗಿನಿಂದ ಅರಳುವ ನಡಿಗೆ ಇರುಳಿನವರೆಗೆ ದಾಪಿಡುತ್ತಲೇ ಸಾಗುತ್ತದೆ, ಮತ್ತೆ ಬೆಳಗು ಮೂಡಿ ಮತ್ತೆ ಕಾಲನ ಕಾಲೊಳಗೆ ಕಾಲಿರಿಸಿ ಸಾಗುವುದಷ್ಟೇ ಗಾಣದ ಎತ್ತಿನಂತೆ ತಿರುಗುತ್ತಲೇ ಇರುವಂತಾಗಿಬಿಡುತ್ತದೆ. … Read more

ಕಣ್ಣೊಂದು ಕವಿತೆ ಕುಕ್ಕಿ, ಕವಿತೆಯೊಂದು ಕಣ್ಣ ಕುಕ್ಕಿ: ಶಿವಕುಮಾರ ಚನ್ನಪ್ಪನವರ

ಭಾಗ-1 “ಕಣ್ಣೊಂದು ಕವಿತೆ ಕುಕ್ಕಿ ಗುಂಜಿ, ಗುಂಜಿಯಾಗಿ, ಗುಂಪಾಗಿ ಗೂಡಾಗಿ ಕೊರಗುತ್ತಿತ್ತು ಅವಳ ಹೊಗಳದ ಪದವೊಂದು ಸಿಗದೇ” ಇನ್ನೇನು ಹೂಬಿಸಲು ಸತ್ತು ಹೋಗುತ್ತದೆನ್ನುವ ಮಾತು ಅನುವಾಗುವಂಥ ಸಮಯವಾದ್ದರಿಂದ, ಎರಡರಿಂದ ಐದಾಳ ಇರುವ ವರದೆಯ ಬದುವಿಗೆ ಬೇರು ಚಾಚಿ, ಬಾಗಿ, ವರದೆಯನ್ನೇ ಇಣುಕುವಂತ ಮರಗಳ ಮೇಲೊಂದು ಜಾತ್ರೆಯೇ ನಡೆಸಿರುವಂತೆ ಗುಬ್ಬೆ-ಕಾಗೆಗಳು ಒಂದೊಂದು ಗುಂಪು ಕಟ್ಟಿ ಪಿಸುಮಾತು ನಡೆಸುತ್ತಿವೆ. ಈಗೈದು ತಿಂಗಳ ಹಿಂದೆಯಷ್ಟೇ ಅದೇ ಕಳೆಗುಂದದ ಸೇತುವೆಯ ಮೇಲೆ ಕುಳಿತು ಕಥೆ, ಕವಿತೆ ಕಟ್ಟುತ್ತೇನೆಂದು ಹೊಯ್ದಾಡುವ ಸಂದರ್ಭಗಳನ್ನೇ ಒಟ್ಟುಗೂಡಿಸುವಲ್ಲಿ ವಿಫಲವಾಗುತ್ತಿದ್ದ … Read more

ಅಪೂರ್ಣ ಹೋರಾಟ !: ಅಶ್ಫಾಕ್ ಪೀರಜಾದೆ

-1- ದೇಶ ಸ್ವಾತಂತ್ರವಾಗಿ ದಶಕಗಳೇ ಕಳೆದು ಹೋದರೂ ದೇಶದ ಪ್ರಜೆಗಳು ಮಾತ್ರ ಇನ್ನೂ ಗುಲಾಮರಾಗಿಯೇ ಉಳಿದಿರುವದು ನಮ್ಮ ದೇಶದ ಅತಿದೊಡ್ಡ ದುರಂತ. ಆಜಾದ ದೇಶದ ಗುಲಾಮ ಪ್ರಜೇಗಳು ನಾವು!. ಬ್ರಿಟೀಷರ ಕಾಲದಿಂದಲೂ ನಾವು ಶೋಷಣೆಯ ಹಳ್ಳಕ್ಕೆ ಬಿದ್ದು ಒದ್ದಾಡ್ತಾ ಇದ್ದೇವೆ. ಆಗ ಬ್ರಿಟೀಷರು ನಮ್ಮನ್ನು ಶೋಷಿಸುತ್ತಿದ್ದರೆ, ಈಗ ನಮ್ಮವರೆ ನಮ್ಮನ್ನು ಶೋಷಿಸುತ್ತಿದ್ದಾರೆ. ಸ್ವತಂತ್ರ್ಯಪೂರ್ವ ಮತ್ತು ಸ್ವಾತಂತ್ರದ ನಂತರದ ದಿನಗಳು ಕಂಡಿರು ಹಿರಿಯರನ್ನು ಕೇಳಿದರೆ ಸ್ವತಂತ್ರ್ಯಪೂರ್ವದ ದಿನಗಳೇ ಚೆನ್ನಾಗಿದ್ದವು. ಈಗೀನ ರಾಜಕಾರಣಿಗಳು ವೋಟಿನಾಸೆಗೆ ದೇಶದ ಜ್ವಲಂತ ಸಮಸ್ಯೆಗಳನ್ನೆಲ್ಲ ಹಾಗೇ … Read more

ಕಪ್ಪೆಯೊಂದರ ಅಂತಿಮಯಾತ್ರೆ: ಡಾ. ಗಿರೀಶ್ ಬಿ.ಸಿ.

ನಮ್ಮೂರಿನ ಹೆಸರನ್ನು ಒಂದ್ ಬಾರಿ ಹೇಳಿದ್ರೆ ಯಾರ್ಗು ಅರ್ಥಾನೇ ಆಗಲ್ಲ. ‘ಏನೂ .. ಕೊಕ್ಕರೇನಾ ?’ ಅನ್ನೊ ಪ್ರಶ್ನೇನ ಜರೂರು ಕೇಳ್ತಾರೆ. ಮೊದ್ಲು ಮೊದ್ಲು ಹೀಗಿ ಕೇಳಿದ್ರೆ ಕೋಪ ಮಾಡ್ಕೊತಿದ್ದ ನಾನು ಇತ್ತೀಚಿಗಂತು ತಾಳ್ಮೆಯಿಂದಲೆ ‘ಅಲ್ರಿ, ಬೆಕ್ಕರೆ ಅಂತ, ಪುಟ್ಟಣ್ಣ ಕಣ್‍ಗಾಲ್ ಅವರನ್ನ ಕರ್ನಾಟಕಕ್ಕೆ ಕೊಡುಗೆ ಇತ್ತ ಮೈಸೂರಿನ ಪಿರಿಯಾಪಟ್ಟಣ ತಾಲೂಕಿನಲ್ಲಿರೊ ಹಳ್ಳಿ ಇದು’ ಅಂತಾನೊ ಇಲ್ಲ …. ‘ನೀವು ಬೈಲುಕುಪ್ಪೆ ಬುದ್ದಿಸ್ಟ್ ಟೆಂಪಲ್‍ಗೆ ಹೋಗೋವಾಗ ಹತ್ತಿರದಲ್ಲಿ ಸಿಗುತ್ತೆ’ ಅಂತಾನೊ, ಕೆಲವೊಮ್ಮೆ ಮೂಡ್ ಇಲ್ದೆ ಇದ್ರೆ, ‘ಬೆಟ್ಟದಪುರದ … Read more

ಬಂಜೆ: ಚೈತ್ರಾ ವಿ.ಮಾಲವಿ

‘ಹೇ..ಪೆದ್ದು ನೋಡಲ್ಲಿ ಒಲೆ ಮುಂದೆ ನಿಂತ್ಕೊಂಡು ಏನು ಯೋಚನೆ ಮಾಡ್ತಿದಿಯಾ. ತಲೆ ಸರಿಗಿದಿಯೋ..ಇಲ್ವೋ. ಹಾಲು ಉಕ್ತಿರೋದು ಕಾಣ್ತಿಲ್ವ’ ಕೊಂಕು ನುಡಿದಳು ಅತ್ತೆ. ಅತ್ತೆಯ ಮಾತಿನಿಂದ ಯಾವುದೋ ಲೋಕದಿಂದ ಹೊರ ಬಂದಳು ಭಾರತಿ. ‘ನಿನ್ನ ಯೋಗ್ಯತೆಗೆ ಮದುವೆ ಆಗಿ ಹತ್ತು ವರ್ಷ ಆದರೂ ಮಗು ಕೊಡೋಕೆ ಆಗಿಲ್ಲ ನಿನ್ನ ಕೈಲಿ.’ ಮತ್ತೆ ಅತ್ತೆಯ ಕೊಂಕು ನುಡಿಗಳು ಶುರುವಾದವು. ಭಾರತಿಗೆ ಹೊಸದೇನೂ ಅಲ್ಲ ಇದು. ಪ್ರತಿದಿನ ಅತ್ತೆಯ ಕೊಂಕು ನುಡಿಗಳನ್ನು ಕೇಳಿ ಬೇಸತ್ತಿದ್ದಳು. ‘ನನ್ನ ಅಂತರಂಗ ಬಲ್ಲವರು ಯಾರು? ನನ್ನ … Read more

ನಾ ಯಾರು… ನನ್ನವರು ಯಾರು… : ಸಹನಾ ಪ್ರಸಾದ್

ಜೀವ ಹಿಡಿಯಾಗುತ್ತಿದೆ. ಅವರ ಮೆಲು ನಗೆ, ಕಣ್ಣಲ್ಲಿ ಕಾಣದ ಆದರೆ ತುಟಿಯಲ್ಲಿ ತೇಲುವ ನಗೆ ಅಸಹ್ಯ ಹುಟ್ಟಿಸುತ್ತಿದೆ. ಮಾತು ಮಾತಿಗೆ “ಗ್ರಾನೀ” ಅನ್ನುವ, ಚಾಕೊಲೇಟ್ ಬಾಯಿಗೆ ಹಿಡಿಯುವ ಪರಿಗೆ, ಅದನ್ನು ಮೊಬೈಲ್ನಲ್ಲಿ ಸೆರೆ ಹಿಡಿಯುವ ತವಕಕ್ಕೆ ಕೆಟ್ಟ ಕೋಪ ಬರುತ್ತಿದೆ. ಇಲ್ಲಿಂದ ಓಡಿ ಹೋಗಬೇಕು, ನನ್ನ ಮನೆಗೆ, ಆದರೆ ಅದು ಎಲ್ಲಿದೆ? ನನ್ನವರು ಯಾರು? ಅಸಲು ನಾನು ಯಾರು? ತಲೆ ತಿರುಗುತ್ತಿದೆ. ” ಸಾಕು ಇನ್ನು ಫ಼ೋಟೋ ತೆಗೆದಿದ್ದು. ಬೇಗ ಬೇಗ ಉಡುಗೊರೆ ಹಂಚಿ. ಉಪಹಾರ ಮುಗಿಸಿ … Read more

ದೋಷ: ಅಶ್ಫಾಕ್ ಪೀರಜಾದೆ

ಏಳು ಹಳ್ಳಿಗಳಿಂದ ಆವೃತ್ತಗೊಂಡು ಏಳು ಸುತ್ತಿನ ಕೋಟೆಯಂತಿರುವ ಊರು ಯಾದವಾರ! ನಾನು ಅಲ್ಲಿನ ಪಶು ಆಸ್ಪತ್ರೆಗೆ ಪಶು ಪರೀಕ್ಷಕನಾಗಿ ಹಾಜರಾದ ಹೊಸದರಲ್ಲಿ ಒಬ್ಬಳು ಅಂದರೆ ವಯಸ್ಸು ಸುಮಾರು ಇಪ್ಪತ್ತೆರಡರಿಂದ ಇಪ್ಪತ್ತೈದರ ನಡುವೆ ಇರಬಹುದು. ಕಣ್ಣು ಕೊರೈಸುವಂತಿರಬೇಕಾದ ಈ ಹರೆಯದಲ್ಲಿ ಅದ್ಯಾವುದೋ ಬಿರುಗಾಳಿಗೆ ಸಿಕ್ಕು ತತ್ತರಿಸಿದಂತಿದ್ದಳು. ಆಳಕ್ಕಿಳಿದ ನಿಸ್ತೇಜ ಕಣ್ಣುಗಳೇ ಜೀವನದಲ್ಲಿ ಅವಳು ಸಾಕಷ್ಟು ನೊಂದಿರುವ ಬಗ್ಗೆ ಸಂಕೇತ ನೀಡುತ್ತಿದ್ದವು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಸೃಷ್ಟಿಯ ಯಾವುದೋ ವಿಕೋಪಕ್ಕೆ ಸಿಲುಕಿ ಭಗ್ನಾವಶೇಷವಾಗಿ ಇತಿಹಾಸ ಸೇರಿದಂತಿದ್ದಳು. ನಮಸ್ಕರಿಸುತ್ತ ಒಳಬಂದ ಅವಳನ್ನು … Read more

ಅಂದಿನ ಆ ಕರಾಳ ರಾತ್ರಿ: ನಂದಾ ಹೆಗಡೆ

ಎಪ್ಪತ್ತರ ಇಳಿವಯಸ್ಸಿನಲ್ಲಿ ನಾನು ನನ್ನ ಹಿಂದಿನ ಬದುಕಿನ ಬಗ್ಗೆ ಒಂದು ಸಿಂಹಾವಲೋಕನ ಮಾಡಿದಾಗ—————– ನನ್ನ ಬದುಕು ನಾನಂದುಕೊಂಡಂತೆಯೇ ನಡೆಯಿತು. ಎಷ್ಟೋ ಜನ ಹೇಳುತ್ತಾರೆ, ಬದುಕು ನಾನಂದುಕೊಂಡಂತೆ ನಡೆಯಲೇ ಇಲ್ಲ. ನಾನಂದುಕೊಂಡಿದ್ದೇ ಒಂದು, ಬದುಕು ನಡೆದದ್ದೇ ಬೇರೆ, ನಾನೇನೇನೋ ಕನಸು ಕಂಡಿದ್ದೆ. ಆದರೆ ನನ್ನ ಯಾವ ಕನಸೂ ನನಸಾಗಲಿಲ್ಲ. . . . . . . . . ಹೀಗೇ ಏನೇನೋ . . . . . . . . . . . … Read more

ಒಂದು ಹುಡಗಿಯ ಶವ ಮತ್ತು ಪವಿತ್ರ ಜಲ !: ಅಶ್ಫಾಕ್ ಪೀರಜಾದೆ

-1- ದುಂಡಾಪುರ ! ಎಲ್ಲ ಜಾತಿಯ , ಎಲ್ಲ ವರ್ಗದ ಜನ ಒಟ್ಟಾಗಿ,ಒಗ್ಗಟ್ಟಾಗಿ ಬದುಕುವ ಒಂದು ಪುಟ್ಟ ಗ್ರಾಮ. ಜಾತಿಯಾಧಾರಿತ ಕಸಬುಗಳಲ್ಲಿ ನಿರತ ಗ್ರಾಮಸ್ಥರು ತಂತಮ್ಮ ಯೋಗ್ಯತೆಯನುಸಾರ ನಡೆದುಕೊಳ್ಳುವುದರಿಂದ ವಿವಿಧ ಕೋಮುಗಳ ನಡುವೆ ಮನಸ್ತಾಪವಿಲ್ಲ, ಗಲಭೆಗಳಿಲ್ಲ. ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ತತ್ತ್ವದಲ್ಲಿ ನಂಬಿಕೆಯಿಟ್ಟು ಶಾಂತಿಯಿಂದ, ನಂಬಿಕೆಯಿಂದ ಬದುಕು ಸಾಗಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಈ ಗ್ರಾಮವನ್ನು ಒಂದು ಆದರ್ಶ ಗ್ರಾಮ ಒಂದು ಮಾದರಿ ಗ್ರಾಮವೆಂದೇ ಬಣ್ಣಿಸಬಹುದು. ಜಾತಿಯಾಧಾರಿತ ಕಸಬುಗಳಾದ ಚಮ್ಮಾರಿಕೆ, ಕುಂಬಾರಿಕೆ,ಕಂಬಾರಿಕೆ, ಪತ್ತಾರಿಕೆ, ಬಡಿಗತನ, ಕುರಿ … Read more

ಬಂಡಿ ಯಲ್ಲವ್ವ: ಭೀಮಣ್ಣ ಮಾದೆ

ಅಪ್ಪನ ಕಾಲಕ್ಕೆ ಮೂರಡಿ ಜಾಗದಲ್ಲಿ ಹಾಕಿಕೊಟ್ಟ ಹರಕು ಜೋಪಡಿ, ವರ್ಷಕ್ಕೊಮ್ಮೆ ಬಂಡಿ ಯಲ್ಲವ್ವನ ಹರಕೆಗೆ ಪಡೆಯುತ್ತಿದ್ದ ಕೋಣಗರವು, ಮೂರೊತ್ತಿನ ಗಂಜಿ ಹನುಮಂತನನ್ನು ಗೌಡರ ಲೆಕ್ಕದ ಪುಸ್ತಕ ರೂಪದಲ್ಲಿ ಬಂಧಿಸಿ ಬಿಟ್ಟಿದ್ದವು. ಚಿಕ್ಕವರು ದೊಡ್ಡವರೆನ್ನದೆ ಕೈಯೆತ್ತಿ ಮುಗಿಯುತ ಏಕವಚನದಲಿ ನಾಮಧೇಯಾನಾಗುವುದು ಜೀತದ ಕೆಲಸದ ಜೊತೆಗೆ ಸೇರಿಹೋಗಿತ್ತು. ಮೊದಲ ಗಂಡನ ಕಳೆದುಕೊಂಡ ಹೊನ್ನವ್ವಳನ್ನು ತಂದೆ ಬ್ಯಾಡ ಅಂದರು ಎಲ್ಲವ್ವನ ಎದುರಿನಲ್ಲಿಯೇ ಕಟ್ಟಿಕೊಂಡು ಆರು ಜನರನ್ನು ಸಂಸಾರದ ಬಂಡಿಯಲಿ ಕೂರಿಸಿಕೊಂಡು ಒಂಟೆತ್ತಿನಂಗ ಎಳೆಯುತ್ತಿದ್ದ ಈತನ ಕುಟುಂಬಕ್ಕೆ ಬಂಡಿ ಯಲ್ಲವ್ವನೇ ಸರ್ವಸ್ವ. ಯಲ್ಲವ್ವಳಿಗೆ … Read more