ತ್ರಿಪದಿ ಕಥೆ: ಶುಭಶ್ರೀ ಭಟ್ಟ, ಬೆಂಗಳೂರು

#ತ್ರಿಪದಿ_ಕಥೆ-1: ನಕ್ಷತ್ರ ಮನೆಯವರೆಲ್ಲರ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾಗಿ ಸ್ವರ್ಗಕ್ಕೆ ಕಿಚ್ಚು ಹಚ್ಚುವಂತಿದ್ದರು ವಿಶ್ವಾಸ-ವಾಣಿ. ಆರತಿಗೊಬ್ಬ ಮಗಳು-ಕೀರ್ತಿಗೊಬ್ಬ ಮಗಳೆಂಬಂತೆ ಸುಂದರ ಕುಟುಂಬವಾಗಿತ್ತು. 'ಊರಕಣ್ಣೋ ಮಾರಿಕಣ್ಣೋ' ಯಾರ ಕಣ್ಣೋ ಗೊತ್ತಿಲ್ಲ, ದೃಷ್ಟಿಬಿತ್ತು ಅವರ ಕುಟುಂಬಕ್ಕೆ. ಇದ್ದಕ್ಕಿದ್ದಂತೆ ವಾಣಿ ಹೃದಯಾಘಾತದಿಂದ ನಿಧನಳಾದಳು. ಆಗ ಮಗನಿಗಿನ್ನೂ ಒಂದುವರೆ ವರುಷ. ಮಗಳಿಗೆ ಮೂರು ವರುಷ. ಸಾವೆಂದರೆನೆಂದು ತಿಳಿಯದ ವಯಸ್ಸಲ್ಲಿ ಅಮ್ಮನ ಕಳೆದುಕೊಂಡರು. ಎಲ್ಲಾದ್ರಲ್ಲೂ ವಿಶ್ವಾಸ ಕಳೆದುಕೊಂಡ ವಿಶ್ವಾಸ ಕರ್ತವ್ಯದಿಂದ ವಿಮುಖನಾದ, ಮಕ್ಕಳು ಅಜ್ಜಿಮನೆ ಸೇರಿದರು.  ನಕ್ಷತ್ರವಾದ ಅಮ್ಮನ್ನ ಇನ್ನೂ ಹುಡುಕುತಿಹರು ಮಕ್ಕಳು ನೀಲಿಬಾನ … Read more

ನಗುವ ಮಗು: ಸುರೇಶ್ ಬಣಕಾರ್

ಅದು ಅಮಾವಾಸ್ಯೆಯ ಒಂದು ದಿನ. ಸೂರ್ಯ ಮುಳುಗುವ ಸಮಯ. ಎಂದಿನಂತೆ ಕಮಲ ಮನೆಯ ಮುಂದಿನ ತೆಂಗಿನ ತೋಟದಲ್ಲಿ ಒಣ ಕಟ್ಟಿಗೆ ಸಂಗ್ರಹಿಸುತ್ತಿದ್ದಳು. ತಟ್ಟನೆ ಒಂದು ಮಗು ನಗುವ ಸದ್ದು. ಕಮಲಳಿಗೆ ಆಶ್ಚರ್ಯ. ಏಕೆಂದರೆ ಆ ಸುತ್ತಮುತ್ತಲೂ ಹತ್ತು ಮೈಲಿ ದೂರದಲ್ಲಿ ಒಂದೂ ಮನೆ ಇರಲಿಲ್ಲ. ಅವಳು ಸುತ್ತಮುತ್ತ ನೋಡಿದಳು, ಏನೂ ಕಾಣಿಸಲಿಲ್ಲ. ಸ್ವಲ್ಪ ಸಮಯದ ನಂತರ ಶಬ್ದ ನಿಂತಿತು. ಏನೋ ಭ್ರಮೆ ಇರಬೇಕೆಂದು ತನ್ನ ಕೆಲಸದಲ್ಲಿ ಮಗ್ನಳಾದಳು. ಮತ್ತದೇ ನಗು!  ಈ ಬಾರಿ ಅವಳು ಗಮನವಿಟ್ಟು ಆಲಿಸಿದಳು. … Read more

ಕೋಸಿನ ಪಲ್ಯ: ಸಹನಾ ಪ್ರಸಾದ್

ಕಳೆದ ೪-೫ ದಿನಗಳಿಂದ ಕುಸುಮಳ ಮನಸ್ಸು ಕುದಿಯಲು ಶುರುವಾಗಿದೆ. ಪ್ರತಿ ವರುಷ ಸುಮಾರು ಈ ಹೊತ್ತಿಗೆ ಅವಳ ಮನಸ್ಸು ಬಾಂಡಲೆಯಲ್ಲಿ ಕುದಿಯುತಿರುವ ಎಣ್ಣೆಯಂತಾಗುತ್ತದೆ. ಕೊತ ಕೊತ ಕುದಿವ ಮನಸ್ಸಿನಲ್ಲಿ ಅನೇಕನೇಕ ಭಾವನೆಗಳು. ಸುಮಾರು ಒಂದು ವಾರದ ನಂತರ " ಆ ದಿನ" ಬಂದಾಗ ಮನಸ್ಸಿನಲ್ಲಿರುವ ಭಾವನೆಗಳೆಲ್ಲಾ ಸಿಡಿದು ಮನೆಯವರಿಗೆಲ್ಲಾ ಎರಚುವುದು ಅಥವಾ ಮೂಕ ಕಣ್ಣೆರಿನಲ್ಲಿ ಕೊನೆಗಾಣುವುದು. ಮಾರನೆಯ ದಿನದಿಂದ ಮಾಮೂಲು ದಿನಚರಿ ಶುರು. ಒಂದೆರಡು ದಿನ ನೋವು ಮನಸ್ಸನ್ನು ಕಾಡುತ್ತಿದ್ದರೂ ಹಿಂದಿನ ವಾರದಷ್ಟಿಲ್ಲ. ತನ್ನ ಮದುವೆಯ ದಿನ, … Read more

ನಿಯತ್ತು…: ದುರ್ಗಾ ಪ್ರಸಾದ್

ಮೂರು ದಿನವಾದರೂ ಒತ್ತರಿಸಿ ಬರುತ್ತಿದ್ದ ಸೊಸೆ ಮಾಡಿದ ಅವಮಾನದ ದೃಶ್ಯಗಳನ್ನು ರಂಗಪ್ಪನಿಗೆ ಸಹಿಸಲಾಗುತ್ತಿರಲಿಲ್ಲ. ಬೆಳ್ಳಂಬೆಳಗ್ಗೆಯೇ ಊರಿನಿಂದ ಬಂದ ಮಗಳನ್ನು ನಿಂದಿಸಿರುತ್ತಿರುವ ಸೊಸೆಯನ್ನು ಕಂಡು ರಂಗಪ್ಪನಿಗೆ ಸುಮ್ಮನಿರಲಾಗಲಿಲ್ಲ. ಯಾಕಮ್ಮ ಹಾಗೆಲ್ಲ ಮಾತಾಡುತ್ತಿಯಾ ಎಂದು ಕೇಳಿದಾಕ್ಷಣ ಮಾವನ ಕೊರಳಪಟ್ಟಿ ಹಿಡಿದು ಮತ್ತೊಂದು ಕೈಯಲ್ಲಿ ಚಪ್ಪಲಿ ಹಿಡಿದು ನಿಂತ ಸೊಸೆಯನ್ನು ಹಿಗ್ಗಾ ಮುಗ್ಗಾ ತಳಿಸಿಬಿಡಬೇಕು ಎಂದೆನಿಸಿದರೂ ಉಸಿರು ಗಟ್ಟಿ ಮಾಡಿಕೊಂಡು ಸುಮ್ಮನಾಗಿದ್ದರು. ತಂದೆಯನ್ನು ಕೊರಳಪಟ್ಟಿ ಹಿಡಿದರೂ ಏನೊಂದು ಮಾತಾಡದೆ ಒಳನಡೆದ ಮಗನನ್ನು ಕಂಡು ರೇಜಿಗೆ ಹುಟ್ಟಿತು. ಊರಮಂದಿಯೆಲ್ಲಾ ಮನೆಯ ಮುಂದೆ ನೋಡುತ್ತಾ … Read more

ಮಂಗಳನ ಅಂಗಳದಲ್ಲಿ! (ಕೊನೆಯ ಭಾಗ): ಎಸ್.ಜಿ.ಶಿವಶಂಕರ್

  ಇಲ್ಲಿಯವರೆಗೆ "ರುಚಿಕಾ, ಮಗಳೆ ಮದುವೆಯ ನಂತರ ಗಂಡನ ಮನೆಗೆ ಹೋಗುವಾಗ ಹೇಳಬೇಕಾದ ವಿದಾಯವನ್ನು ಈಗಲೇ ಹೇಳಬೇಕಾದ ಪರಿಸ್ಥಿತಿ ಒದಗಿ ಬಂದಿದೆ. ನನ್ನ ಕಣ್ಣಾಲಿಗಳು ತುಂಬಿವೆ. ಮಾತು ಹೊರಡದಾಗಿದೆ. ಆದರೂ ಮತ್ತೆ ನಿನ್ನೊಂದಿಗೆ ಮಾತಾಡುವ ಸಂದರ್ಭ ಬರಲಾರದು. ಅದಕ್ಕೇ ತಾಯಿಯಾಗಿ ಕೆಲವು ಮಾತುಗಳನ್ನು ಹೇಳಲು ಬಯಸುತ್ತೇನೆ. ನೀನು ಕೊನೆಗೆ ತಲುಪಲಿರುವ ಜಾಗ ಹೇಗಿದೆಯೋ? ಅಲ್ಲಿ ನಮ್ಮಂತ ಜೀವಿಗಳಿರುವರೋ ಗೊತ್ತಿಲ್ಲ. ನಿನ್ನ ಜೊತೆಯಲ್ಲಿ ಬರುತ್ತಿರುವ ಸೃಜನ್ ನನ್ನ ಗೆಳತಿಯ ಮಗ. ನಿನಗೆ ಅನುರೂಪನಾದ ವರನಾಗಬಲ್ಲ. ಅವನನ್ನು ಒಪ್ಪುವುದು, ಬಿಡುವುದೂ … Read more

ಕುರುಂಜಿಮಲೆ ಹೋಂಸ್ಟೇ: ಜಾನ್ ಸುಂಟಿಕೊಪ್ಪ.

ಬಿದ್ದಪ್ಪ ಗೈಡ್ ಆದದ್ದೇನೂ ದೊಡ್ಡ ವಿಷಯವಾಗಿರಲಿಲ್ಲ. ಕುರುಂಜಿಮಲೆ ಹೋಂಸ್ಟೇ ಮಾಲಿಕ ಗಣಪತಿಯೂ ಅವನ ಹೆಂಡತಿ ದೇವಕ್ಕಿಯೂ, ಮತ್ತೆ ಆ ಬಡಕಲು ಲೈನ್‍ಮನೆಯಲ್ಲಿದ್ದ ನಾಲ್ಕು ಸಂಸಾರಗಳು ಅವರಷ್ಟಕ್ಕೇ ದಿನ ದೂಡುವುದು ಇದ್ದೇಇತ್ತು. ಕ್ಯಾಟರ್ ಬಿಲ್ಲೋ, ಸಾಹುಕಾರನ      ಕೋವಿಯೋ ಹಿಡಿದು ಆ ತಡಿಯಂಡಮೋಳು, ಮಾಪಿಳೆಕುಂದು, ಕರಡಿಮಲೆ ಎಂದೆಲ್ಲಾ ಇರೋಬರೋ ಬೆಟ್ಟ-ಕಾಡೊಳಗೆ ನುಗ್ಗಿ ಮೊಲವೋ, ಕಬ್ಬೆಕ್ಕೋ, ಕಾಡುಹಂದಿಯೋ, ಕೋಳಿಯೋ ಏನಾದರೂ ಹೊಡೆದು ತರುತ್ತಿದ್ದ ಬಿದ್ದಪ್ಪ ಆ ಗಣಪತಿ ಸಾಹುಕಾರನ ಮನೆ ಜಗಲಿಯಲ್ಲಿ ಬೇಟೆ ಹಾಕಿ ಕಾಲಿಗೆ ಹತ್ತಿದ ಜಿಗಣೆಗಳನ್ನು ಒಂದೊಂದಾಗಿ ಕಿತ್ತು … Read more

ನೆನಪಿನ ಪಯಣ – ಭಾಗ 5: ಪಾರ್ಥಸಾರಥಿ ಎನ್

ಇಲ್ಲಿಯವರೆಗೆ ಜ್ಯೋತಿಯ ದ್ವನಿ ಮೊದಲಿನಂತೆ ಇರದೇ ಸ್ವಲ್ಪ ಬದಲಾವಣೆಗೊಂಡಿದೆ,    ಮಾತು ಮುಂದುವರೆಯಿತು.. .. ಯಾವುದೋ ಚಿಕ್ಕ ದೇವಾಲಯದಂತಿದೆ, ನೋಡಿದರೆ ದೇವಿಯ ವಿಗ್ರಹ ಮಣ್ಣಿನಲ್ಲಿ ಮಾಡಿರುವುದು. ಮುಂಬಾಗದಲ್ಲಿ ಕಳಶವೂ ಇದೆ. ಪೂಜೆ ನಡೆಯುತ್ತಿದೆ. ಊರಜನರೆಲ್ಲ ಸಂಭ್ರಮದಿಂದ ಓಡಾಡುತ್ತಿದ್ದಾರೆ. ಇದೇನು ಈ ವಿಗ್ರಹ ಯಾವುದು, ಇಲ್ಲಿರುವ ಕಳಶವಾದರು ಯಾವುದು.  ಊರದೇವಿ ಮಹಿಷಾಸುರಮರ್ಧಿನಿ ದೇವಿಯ ಪ್ರತಿಷ್ಠಾಪನೆಯಂತೆ. ದೇವಿಗೆ ಆರತಿ ಮೈಸೂರಿನಿಂದ ಬಂದಿದೆಯಂತೆ. ಏನೆಲ್ಲ ಮಾತುಗಳು. ಇನ್ನೂ ಹಿಂದೆ ಹೋಗಬೇಕೇನೊ ದೇವಾಲಯದ ರಹಸ್ಯ ತಿಳಿಯಲು….. ಯಾರೋ ತಲೆಯ ಮೇಲೆ ಒಂದು ಕುಕ್ಕೆಯನ್ನು … Read more

ಮಂಗಳನ ಅಂಗಳದಲ್ಲಿ! (ಭಾಗ 1): ಎಸ್.ಜಿ.ಶಿವಶಂಕರ್

ಇಡೀ ಮನೆ ಅಲುಗಾಡಿದಂತ ಅನುಭವವಾಯಿತು ಸೃಜನನಿಗೆ. ಇದೊಂದು ಹೊಸ ಅನುಭವ. ಹಿಂದೆಂದೂ ಹೀಗಾಗಿರಲಿಲ್ಲ! ಭೂಕಂಪನವಾಗುತ್ತಿದೆ ಎನಿಸುವಂತ ಅನುಭವ! ಕೆಲವು ನಿಮಿಷಗಳ ನಂತರ ಆ ಕಂಪನ ನಿಂತಿಂತೆ ಅನಿಸಿತು. ಎಲ್ಲ ಸ್ಥಬ್ದವಾಯಿತು; ನೆಮ್ಮದಿ! ಸ್ವಲ್ಪ ಎಚ್ಚರವಾಗಿತ್ತು-ಅಲುಗಾಟಕ್ಕೆ. ಸ್ಥಬ್ದವಾದನಂತರ ಮತ್ತೆ ಜೋಂಪು. ಮತ್ತೆ ಅಲುಗಾಟ, ಕುಲುಕಾಟ! ಮನೆಯೇ ಅತ್ತಿತ್ತ ವಾಲಿದಂತೆ, ಮತ್ತೆ ಅದೇ ಸಾವರಿಸಿಕೊಂಡು ನೆಟ್ಟಗೆ ನಿಂತಂತೆ! ಛೆ..ಇದೆಂತಾದ್ದು..? ನಿಜಕ್ಕೂ ಏನಾಗುತ್ತಿದೆ..? ಈ ಸಾರಿ ಬಹಳ ಹೊತ್ತು ಸ್ಥಬ್ದತೆ ಇದ್ದಂತೆ ಭಾವನೆ. ಈ ಕಂಪನ, ಸ್ಥಬ್ದತೆಗಳ ನಡುವೆ ಎಂತದೋ ಕಿರಿಕಿರಿ! … Read more

“ಮಾಡರ್ನ್ ಲೋಕದ ಮಿನಿಕಥೆಗಳು”: ಪ್ರಸಾದ್ ಕೆ.

  ಅವಳಿಗೆ ಮುಂಜಾನೆಯ ಏಳಕ್ಕೆ ಸರಿಯಾಗಿ ಎಚ್ಚರವಾಯಿತು. ಕಣ್ಣುಜ್ಜಿ ಅತ್ತಿತ್ತ ನೋಡಿದರೆ ಅವನಿನ್ನೂ ವಿವಸ್ತ್ರನಾಗಿಯೇ ಬಿದ್ದುಕೊಂಡಿದ್ದ. ಲಗುಬಗೆಯಲ್ಲೇ ಕಾಲನ್ನು ನೀಲಿ ಜೀನ್ಸ್ ಪ್ಯಾಂಟಿನೊಳಗೆ ತೂರಿಸಿ, ಟೀಶರ್ಟೊಂದನ್ನು ಧರಿಸಿ ತನ್ನ ಪುಟ್ಟ ಬ್ಯಾಗಿನೊಂದಿಗೆ ಅವಳು ಹೊರಟುಹೋದಳು. ಹತ್ತರ ಸುಮಾರಿಗೆ ಅವನಿಗೆ ಎಚ್ಚರವಾಯಿತು. ಹೋಟೇಲ್ ರೂಮಿನಲ್ಲಿ ಅವಳ ಪತ್ತೆಯಿರಲಿಲ್ಲ. ಅವಳ ಮೈಬೆವರಿನ, ಉನ್ಮಾದಗಳ ನೆನಪಾಗಿ ಮತ್ತೊಮ್ಮೆ ರೋಮಾಂಚಿತನಾದ. ಛೇ, ನಿನ್ನೆ ರಾತ್ರಿ ಅವಳ ನಂಬರನ್ನಾದರೂ ಕೇಳಬಹುದಿತ್ತು ಎಂದು ಪರಿತಪಿಸಿದ ಆತ. ಹಾಸಿಗೆಯಿಂದೆದ್ದು ಒಳಉಡುಪನ್ನು ಧರಿಸಿ ನೀರಿನ ಬಾಟಲಿಗೆಂದು ಫ್ರಿಡ್ಜ್ ಕಡೆಗೆ … Read more

ನೆನಪಿನ ಪಯಣ – ಭಾಗ 4: ಪಾರ್ಥಸಾರಥಿ ಎನ್

ಇಲ್ಲಿಯವರೆಗೆ ಜ್ಯೋತಿ ಮತ್ತೆ ನೆನಪಿಸಿಕೊಳ್ಳುತ್ತಿದ್ದಳು. ನಾನು ಆಗಿನ್ನು ಪಿಯುಸಿ ಮುಗಿಸಿದ್ದೆ, ಯಾವುದು ಸರಿಯೋ ಯಾವುದು ತಪ್ಪೋ ಯಾರು ಒಳ್ಳೆಯವರು ಕೆಡುಕರು ಅನ್ನುವುದು ಸದ್ಯ ತಿಳಿಯದ ಸ್ಥಿತಿ. ನಾನಾಗ ರಜೆಯಲ್ಲಿ ಟೈಪಿಂಗ್ ಕೋರ್ಸ್ ಸೇರಿದ್ದೆ. ಅಲ್ಲಿ ಒಬ್ಬ ಹುಡುಗ ಪರಿಚಯವಾಗಿದ್ದ. ನನಗಿಂತ ಮೂರು  ವರ್ಷ ದೊಡ್ಡವನಿರಬಹುದೇನೊ, ನಾಗೇಶ ಎಂದು ಹೆಸರು. ಅಲ್ಲಿ ಹೋದ ಒಂದು ತಿಂಗಳಿಗೆಲ್ಲ ಎಷ್ಟು ಆತ್ಮೀಯನಾಗಿದ್ದ ಎಂದರೆ ಅವನ ಮಾತುಗಳಿಗೆ ನಾನು ಮರುಳಾಗಿದ್ದೆ. ಅವನನ್ನು ಪ್ರಾಣದಂತೆ ಪ್ರೀತಿಸುತ್ತಿದ್ದೆ. ಮನೆಯಲ್ಲಿ ಅಪ್ಪ ಅಮ್ಮನಿಗೂ ಹೇಳುವ ದೈರ್ಯವಿಲ್ಲ. ಹೇಳಿದರೆ, … Read more

ಬದುಕು ಮಾಯೆ: ಮಂಜುನಾಥ ಹೆಗಡೆ

ಪ್ರತಾಪ್ ಚೆಂಬರ್ ನಲ್ಲಿ ಕುಳಿತು ಮಂಕಾಗಿದ್ದ, ಆಗಷ್ಟೆ ಸುನಯನಾ ಜೊತೆ ಕೊನೆ ಬಾರಿ ಮಾತನಾಡಿದ್ದ. ಐದು ವರ್ಷಗಳ ಪ್ರೀತಿಗೆ ಕೊನೆಯ ಮಾತಿನೊಂದಿಗೆ ಪರದೆ ಎಳೆದಿದ್ದಳು ಅವಳು. ಪ್ರತಾಪ್ ನೊಂದಿದ್ದ, ಕೆಲಸಕ್ಕೆ ನಾಲ್ಕು ದಿನ ರಜಾ ಹಾಕಿ ಹೋಗಲು ತೀರ್ಮಾನಿಸಿ ರಜಾ ಅರ್ಜಿ ರೆಡಿಮಾಡುತ್ತಿದ್ದ. ಆಗ ನೀತಾ ಮೆ ಐ ಕಮಿನ್ ಎನ್ನುತ್ತ ಬಾಗಿಲು ತಳ್ಳಿ ನಗುತ್ತ ಬಂದಳು, ಆದರೇ ಪ್ರತಾಪ್ ಮುಖನೋಡಿ ಒಮ್ಮೆ ದಿಗಿಲಾಯಿತು, ಮೌನ ಆವರಿಸಿತು ಇಬ್ಬರ ನಡುವೆ. ಪ್ರತಾಪ್ ಟೇಬಲ್ ಮೇಲಿನ ಲೀವ್ ಲೆಟರ್ … Read more

ನೆನಪಿನ ಪಯಣ – ಭಾಗ 3: ಪಾರ್ಥಸಾರಥಿ ಎನ್  

ಇಲ್ಲಿಯವರೆಗೆ ಆಗ ವಿಚಿತ್ರ ಗಮನಿಸಿದೆ,  ಜ್ಯೋತಿಗೆ ಸಂದ್ಯಾಳ ಮಾತು ಕೇಳಿಸುತ್ತಿದೆ ಎಂದು ನನಗನ್ನಿಸಲಿಲ್ಲ. ಹೀಗೇಕೆ ಆಕೆಯನ್ನು ನಾನು ಹಿಪ್ನಾಟಾಯಿಸ್ ಏನು ಮಾಡಿಲ್ಲ, ಮೊದಲಿಗೆ ನನಗೆ ಆ ಹಿಪ್ನಾಟೈಸ್ ಅಥವ ಸಂಮೋಹನ ವಿದ್ಯೆಯ ಬಗ್ಗೆ ಗೊತ್ತು ಇಲ್ಲ. ಆದರೆ ಇಲ್ಲಿ ಏನೋ ವಿಚಿತ್ರವಾದಂತಿದೆ  ನಾನು. ’ ಜ್ಯೋತಿ ಸಮಾದಾನ ಪಟ್ಟುಕೊಳ್ಳಿ ಅದೇಕೆ ಎಲ್ಲ ದುಃಖದ ವಿಷಯವನ್ನೆ ನೆನೆಯುತ್ತಿರುವಿರಿ, ನೀವು ಎದ್ದೇಳಿ, ಸ್ವಲ್ಪ ಕಾಪಿ ಕುಡಿಯಿರಿ ಮತ್ತೆಂದಾದರು , ಈ ಪ್ರಯೋಗ ಮುಂದುವರೆಸೋಣ, ಇಂದಿಗೆ ಸಾಕು ಅಲ್ಲವೇ' ಎಂದೆ ' … Read more

ಅಮ್ಮಾ ಕ್ಷಮಿಸು: ನಂದಾ ಹೆಗಡೆ

ದಿನಪತ್ರಿಕೆಯೊಂದಕ್ಕೆ ನನ್ನ ಅತ್ತೆಯವರ ಅಡಿಗೆ ರೆಸಿಪಿಯನ್ನ ಕಳುಹಿಸಿದ್ದೆ. ಆದರೆ ಈಗ ಆರು ತಿಂಗಳಿನಿಂದಲೂ ಪ್ರತೀ ವಾರ ಕಾಯುತ್ತಲೇ ಇದ್ದೇನೆ. ಆದರೆ ಅದು ಪ್ರಕಟವಾಗಲೇ ಇಲ್ಲ. 83 ವರ್ಷದ ನನ್ನ ಅತ್ತೆಯವರ ಜೀವನೋತ್ಸಾಹದ ಬಗ್ಗೆ ಚಿಕ್ಕ ಮಾಹಿತಿಯನ್ನೂ ಕೂಡ ಬರೆದು ಒಪ್ಪವಾಗಿಯೇ ಕಳುಹಿಸಿದ್ದೆ ಅಂದುಕೊಂಡಿದ್ದೆ. ಆದರೂ ಯಾಕೋ ಪ್ರಕಟವಾಗಲಿಲ್ಲ. . . . . . . . . ಅವರ ಮಾನದಂಡವೇನೋ. . . . . . . . ಅಂದುಕೊಳ್ಳುತ್ತಿರುವ ಹಾಗೇ ನನ್ನ ಉದ್ಯೋಗದ … Read more

ನೆನಪಿನ ಪಯಣ: ಬಾಗ – 2: ಪಾರ್ಥಸಾರಥಿ ಎನ್

ಇಲ್ಲಿಯವರೆಗೆ ನೆನಪಿನ ಪಯಣದ ಪ್ರಯೋಗ ಪ್ರಾರಂಭ:  ಆನಂದ ಹೇಳಿದಂತೆ ರೂಮಿನ ಮಂಚದಲ್ಲಿ ಜ್ಯೋತಿ ಮಲಗಿದಳು, ತಂಪಾಗಿರಲೆಂದೆ ಏಸಿ ಆನ್ ಮಾಡಿದೆವು. ಆನಂದನ ಪೀಯುಸಿ ಓದುತ್ತಿದ್ದ ಮಗ ಶಶಾಂಕ್ ಮನೆಯಲ್ಲಿರಲಿಲ್ಲ ಅವನ ಸ್ನೇಹಿತರ ಜೊತೆ ಯಾವುದೋ ಟೂರ್ ಅಂತ ಹೋಗಿದ್ದ. ಹಾಗಾಗಿ ನಮ್ಮಗಳದೆ ಸಾಮ್ರಾಜ್ಯ.  ಶ್ರೀನಿವಾಸಮೂರ್ತಿಗಳು ಮಾತ್ರ ಈಗಲೂ ಆತಂಕದಲ್ಲಿದ್ದರು ರೂಮಿನಲ್ಲಿ ಒಂದು ದೀಪ ಬಿಟ್ಟು ಎಲ್ಲ ದೀಪವನ್ನು ಆನಂದ ಆರಿಸಿದ. ಜ್ಯೋತಿ ಮಾತ್ರ ನಗುತ್ತಿದ್ದಳು. ಅವಳಿಗೆ ಎಂತದೊ ಮಕ್ಕಳ ಆಟದಂತೆ ತೋರುತ್ತಿತ್ತು ಅನ್ನಿಸುತ್ತೆ. ಜ್ಯೋತಿ ಆರಾಮವಾಗಿ ಅನ್ನುವಂತೆ … Read more

ನೆನಪಿನ ಪಯಣ:  ಬಾಗ – 1: ಪಾರ್ಥಸಾರಥಿ ಎನ್

  ಅದು ಪ್ರಾರಂಭವಾದುದೆಲ್ಲ ಸಾದಾರಣವಾಗಿಯೆ ! ಕೆಲವರಿಗೆ ಅದೊಂದು ವರ ದಿಂಬಿಗೆ ತಲೆಕೊಟ್ಟ ಕ್ಷಣವೇ ನಿದ್ದೆ ಆವರಿಸುವುದು.  ನನ್ನಂತ ಕೆಲವರ ಪಾಡು ಕಷ್ಟ , ಮಲಗಿ ಎಷ್ಟು ಕಾಲವಾದರು ಹತ್ತಿರ ಸುಳಿಯದ ನಿದ್ರಾದೇವಿ. ನಿದ್ರಾದೇವಿಯನ್ನು ಅಹ್ವಾನಿಸಲು ಹೊಸ ಹೊಸ ರೀತಿಯ ಪ್ರಯೋಗ.  ಒಮ್ಮೆ ಕೆಲವು ರಾತ್ರಿ  ನಿದ್ದೆ ಬರಲಿ ಎನ್ನುವ ಕಾರಣಕ್ಕೆ ಮನಸನ್ನು ಒಂದೇ ಕಡೆ ಕೇಂದ್ರಿಕರಿಸಲು ಪ್ರಯತ್ನಿಸುತ್ತ, ಬೆಳಗ್ಗೆಯಿಂದ ರಾತ್ರಿಯ ತನಕ ಏನೆಲ್ಲ ಆಯಿತು ಎಂದು ನೆನೆಯುತ್ತ ಹೋದೆ. ಯಾರುಯಾರ ಜೊತೆಯೆಲ್ಲ ಮಾತನಾಡಿದೆ, ಬೆಳಗಿನ ತಿಂಡಿ … Read more

ನನ್ನವಳು: ಗಿರಿಜಾ ಜ್ಞಾನಸುಂದರ್

   ಎಲ್ಲೋ ತುಂಬಾ ಸದ್ದು ಕೇಳಿಸುತ್ತಿರುವಂತೆ ಅನುಭವ. ಕಣ್ಣು ತೆರೆಯಲು ಆಗುತ್ತಲೇ ಇಲ್ಲ. ರೆಪ್ಪೆಗಳು ತುಂಬಾ ಭಾರ. ತನ್ನ ಮೈ ತನ್ನ ಮತ್ತೆ ಕೇಳುತ್ತಿಲ್ಲ ಅನ್ನಿಸುತ್ತಿದೆ. ತನ್ನಷ್ಟಕ್ಕೆ ತಾನು ಅತಿ ನೋವು ಅನುಭವಿಸುತ್ತಿದೆ. ಸುತ್ತಲೂ ಮಷೀನ್ ಗಳ ಶಬ್ದ. ತನಗೇನಾಗುತ್ತಿದೆ ಎಂದು ತಿಳಿದುಕೊಳ್ಳಲು ಕಷ್ಟವಾಗುತ್ತಿದೆ. ಸ್ವಲ್ಪ ಸಮಯ ತೆಗೆದುಕೊಂಡ ಮೇಲೆ ತಿಳಿಯುತ್ತಿದೆ ನಾನು ಆಸ್ಪತ್ರೆಯಾ ಐ ಸೀ ಯು ವಾರ್ಡ್ನಲ್ಲಿದ್ದೀನಿ ಎಂದು. ಎದೆನೋವೆಂದು ಹೇಳಿದ್ದೊಂದೇ ನೆನಪು. ಆಮೇಲೇನಾಯಿತೋ ಗೊತ್ತಿಲ್ಲ. ಆಸ್ಪತ್ರೆ ನನ್ನನ್ನು ಆಲಂಗಿಸಿದೆ. ತನ್ನ ಅರೋಗ್ಯ ಹದಗೆಟ್ಟಿದೆ … Read more

ಶಶಿ (ಕೊನೆಯ ಭಾಗ): ಗುರುರಾಜ ಕೊಡ್ಕಣಿ

ಇಲ್ಲಿಯವರೆಗೆ ಮರುದಿನ ಬೆಂಗಳೂರಿಗೆ ತೆರಳಿದ ನನಗೆ ಒಂದು ಗಳಿಗೆಯೂ ಪುರುಸೊತ್ತು ಇಲ್ಲದಂತಾಗಿತ್ತು. ಕಂಪನಿಯ ವಾರ್ಷಿಕ ಸಮ್ಮೇಳನದ ಸಮಾರಂಭದಲ್ಲಿ ನನಗೆ ಬೆಸ್ಟ್ ರೆಪ್ರಸೆಂಟಿಟಿವ್ ಆಫ್ ದಿ ಇಯರ್’ ಪ್ರಶಸ್ತಿ ಬಂದಾಗ ನನ್ನ ಸಂತೋಷ ಹೇಳತೀರದು. ಕಂಪನಿಗೆ ಸೇರಿದ ಎರಡೇ ವರ್ಷಗಳಲ್ಲಿ ಇಂಥದ್ದೊಂದು ಪ್ರಶಸ್ತಿ ಪಡೆದುಕೊಳ್ಳುವುದು ನಿಜಕ್ಕೂ ಹೆಮ್ಮೆಯ ಸಂಗತಿಯೇ ಆಗಿತ್ತು. ಪ್ರಶಸ್ತಿ ಫಲಕ , ಪ್ರಶಸ್ತಿಪತ್ರ ಸ್ವೀಕರಿಸಿ ಕಂಪನಿಯ ರೀಜನಲ್ ಮ್ಯಾನೇಜರಿನೊಂದಿಗೆ ಸೆಲ್ಫಿ ತೆಗೆಸಿಕೊಳ್ಳುವಷ್ಟರಲ್ಲಿ ರಿಂಗಣಿಸಿದ ಫೋನಿನ ತೆರೆಯ ಮೇಲೆ ’ಅಮ್ಮ’ಎಂದು ತೋರಿಸುತ್ತಿತ್ತು. ತಕ್ಷಣ ಕರೆಯನ್ನು ಕಟ್ ಮಾಡಿ … Read more

ಮಲ್ಲಿಗೆಯ ದಂಡೆಯನು ಹಿಂಡಿದರೆ: ವೃಂದಾ ಸಂಗಮ

“ಜ್ಞಾನಪೂರ್ಣಂ ಜ್ಞಾನಂ ಜ್ಯೋತಿ. ನಿರ್ಮಲವಾದ ಮನವೇ ಕರ್ಪೂರದಾರತಿ.“  ಅಕ್ಕನ ಬಳಗದ ಭಜನೆ ಹಾಡು ಕಿವಿಗೊಮ್ಮೆ ಬಿದ್ದಾಗ ಅಲ್ಲೇ ಬಾಜೂಕ, ಮಠದಾಗ ಕೂತಿದ್ದ ಸ್ವಾಮಿಗಳು ಮೈ ಕೊಡವಿದರು. ಪ್ರತಿ ದಿನ ಅಕ್ಕನ ಬಳಗದಾಗ ಸಂಜೀ ಮುಂದ ಎಲ್ಲಾ ಸದಸ್ಯರೂ ಮನೀಗೆ ಹೋಗೋ ಮುಂದ ಬಸವಣ್ಣಗ ಒಂದು ಆರತಿ ಮಾಡತಾರ. ಆವಾಗ ಎಷ್ಟೇ ಭಜನಿ ಹಾಡಿದ್ದರೂ ಸೈತ, ಆರತಿ ಮಾಡುವಾಗ, ಈ ಹಾಡು ಹಾಡೇ ಹಾಡತಾರ. ದಿನಾ ಕೇಳೋ ಹಾಡೇ ಆದರೂ ಇವತ್ತ ಯಾಕೋ ಅವರ ಮನಸಿಗೆ ಚುಳುಕ್ ಅಂತು. … Read more

ಶಶಿ (ಭಾಗ 2): ಗುರುರಾಜ ಕೊಡ್ಕಣಿ

ಇಲ್ಲಿಯವರೆಗೆ ಅಂದು ರಾತ್ರಿಯಿಡಿ ನಾನು ಶಶಿಯ ಬಗ್ಗೆ ಯೋಚಿಸುತ್ತಿದ್ದೆ. ಅವರ ಮನೆಯಲ್ಲಿ ನಡೆದ ಜಗಳ ಶಶಿಯ ಕುರಿತಾಗಿಯೇ ನಡೆದದ್ದು ಎನ್ನುವುದು ನನಗೆ ಬಹುತೇಕ ಖಚಿತವಾಗಿತ್ತು. ಇಬ್ಬರು ಹೆಣ್ಣುಮಕ್ಕಳ ಮದುವೆಯ ನಂತರ ನಂಜಮ್ಮನ ಮನೆಯಲ್ಲಿದ್ದಿದ್ದು ಶಶಿ, ಫಕೀರಪ್ಪ ಮತ್ತು ಆಶಾ ಮಾತ್ರ. ಅವರಿಬ್ಬರೂ ಮೂರನೆಯ ಹೆಂಗಸಿನ ಮೇಲೆ ಕೂಗಾಡುತ್ತಿದ್ದರೆಂದರೆ ಅದು ಶಶಿಯೇ ಆಗಿರಬೇಕೆನ್ನುವ ಅಂದಾಜು ನನಗಾಗಿತ್ತು. ಗುದ್ದಿದ್ದು ಸಹ ಶಶಿಯನ್ನೇ ಎಂಬುದು ಊಹಿಸಿಕೊಂಡಾಗ ನಿಜಕ್ಕೂ ನನಗೆ ಕಸಿವಿಸಿಯಾಯಿತು. ಅಂಥಹ ತಪ್ಪು ಅವಳೇನು ಮಾಡಿದ್ದಳೆಂದು ಊಹಿಸಲಾಗದೇ , ತೊಳಲಾಟದಲ್ಲಿಯೇ ನಿದ್ರೆ … Read more

ಜವಾಬ್ದಾರಿ: ಗಿರಿಜಾ ಜ್ಞಾನಸುಂದರ್

ವಿಭಾ ಅತಿ ಉತ್ಸಾಹದಿಂದ ತಾನು ಗೆದ್ದಿರುವ ಮೆಡಲ್ ಗಳು ಮತ್ತು ಸರ್ಟಿಫಿಕೇಟ್ ಗಳನ್ನೂ ಜೋಡಿಸುವುದರಲ್ಲಿ ಮುಳುಗಿದ್ದಳು. ಎಂಟು ವರ್ಷದ ವಿಭಾಗೆ ತಾನು ತನ್ನ ಅಣ್ಣ ವಿಶಾಲ್ ಗಿಂತ ಹೆಚ್ಚು ಪದಕಗಳನ್ನು ಗೆದ್ದಿರುವುದು ಎಲ್ಲಕ್ಕಿಂತ ಸಂತೋಷ ಕೊಟ್ಟಿತ್ತು. ಮನೆಗೆ ಬಂದವರಿಗೆಲ್ಲ ತನ್ನ ಗೆಲುವಿನ ಬಗ್ಗೆ ಹೇಳಿ ಅವರಿಂದ ಹೊಗಳಿಕೆಯನ್ನು ಪಡೆಯುವುದು ಒಂಥರಾ ಮಜಾ ಅನ್ನಿಸುತ್ತಿತ್ತು. ಆಗ ವಿಶಾಲ್ ನ ಮುಖ ಪೆಚ್ಚಾಗುವುದನ್ನು ಗಮನಿಸಲು ಮಾತ್ರ ಮರೆಯುತ್ತಿರಲಿಲ್ಲ. ಆಟ, ಪಾಠ, ಹಾಡು, ಕಲೆ ಎಲ್ಲದರಲ್ಲೂ ತನ್ನ ಇರುವಿಕೆಯನ್ನು ತೋರಿಸಬೇಕೆಂಬುದೇ ಅವಳ … Read more

ಕಲ್ಲಂಗಡಿ ಹಣ್ಣು!: ಎಸ್.ಜಿ.ಶಿವಶಂಕರ್

ಅನಂತಯ್ಯ ಬಾಗಿಲು ತೆಗೆದು ಮನೆಯೊಳಗೆ ಕಾಲಿಟ್ಟಾಗ ಮೌನ ಸ್ವಾಗತಿಸಿತು. ಅನಂತಯ್ಯನವರಿಗೆ ಹಿತವೆನಿಸಲಿಲ್ಲ. ಒಂದು ತಿಂಗಳು ಜನರಿಂದ ಗಿಜಿಗುಟ್ಟುತ್ತಿದ್ದ ಮನೆ ಖಾಲಿಖಾಲಿಯಾಗಿ ಕಂಡಿತು. ಇಪ್ಪತ್ತೈದು ವರ್ಷಗಳಿಂದ ವಾಸಿಸುತ್ತಿದ್ದ ಮನೆಯನ್ನು ಮೊದಲ ಬಾರಿಗೆ ನೋಡುತ್ತಿರುವವರಂತೆ ಅನಂತಯ್ಯ ಮನೆಯನ್ನು ನೋಡಿದರು. ಮನೆಯಲ್ಲಿನ ವಸ್ತುಗಳನ್ನು ನೋಡುವಾಗ ಅದನ್ನು ಉಪಯೋಗಿಸಿದವರ ಚಿತ್ರ ಮನಸ್ಸಿಗೆ ಬರುತ್ತಿತ್ತು. ಅನಂತಯ್ಯ  ಡ್ರಾಯಿಂಗ್ ರೂಮಿಗೆ ಬಂದರು. ಅಸ್ಥವ್ಯಸ್ಥವಾಗಿದ್ದ ದಿವಾನದ ಹಾಸುಗಳು ಕಂಡವು. ಮೊಮ್ಮಕ್ಕಳು ಅದರ ಮೇಲೆ ಹತ್ತಿ, ಇಳಿದು, ಕುಣಿದಾಡಿದ್ದು ಕಣ್ಮುಂದೆ ಬಂತು. ವರಾಂಡಕ್ಕೆ ಬಂದರೆ, ಅದರ ತುಂಬ ತುಂಬಿದ್ದ … Read more

ಶಶಿ (ಭಾಗ 1): ಗುರುರಾಜ ಕೊಡ್ಕಣಿ

                                                     ’ಟಿಟಿಟಿಟೀಟ್, ಟಿಟಿಟಿಟೀಟ್’ಎನ್ನುವ ಅಲಾರಾಮಿನ ಅತ್ಯಂತ ಕರ್ಕಶ ಶಬ್ದ ನನ್ನ ನಿದ್ದೆಯನ್ನು ಹಾಳುಗೆಡವಿತ್ತು. ಮಲಗಿದ್ದಲ್ಲಿಂದಲೇ ಮಂಚದ ಪಕ್ಕದ ಮೇಜಿನ ಮೇಲಿದ್ದ ಅಲಾರಾಮಿನ ತಲೆಗೊಂದು ಮೊಟಕಿ ಅದರ ಬಾಯಿ ಮುಚ್ಚಿಸಿ ಮತ್ತೆ ಮಲಗಲು ಪ್ರಯತ್ನಿಸಿದೇನಾದರೂ ನಿದ್ರೆ ಬರಲಿಲ್ಲ. ಎದ್ದು ಕುಳಿತರೆ ತಲೆಯೊಳಗೊಂದು ಸಣ್ಣ ಜೋಂಪು. … Read more

ವಿಕ್ಷೇಪ: ಸಾತ್ವಿಕ್ ಹ೦ದೆ

ಮತ್ತದೇ ಕನಸು, ದೂರದೂರದವರೆಗೂ ಚಾಚಿದ ರಸ್ತೆ. ರಸ್ತೆಯ ಇಕ್ಕೆಲಗಳಲ್ಲಿ ಮರಗಿಡಗಳಿರಲಿ ಒ೦ದು ಹುಲ್ಲುಕಡ್ಡಿಯೂ ಇಲ್ಲ. ಬಿರುಬಿಸಿಲಿನಲ್ಲಿ ಐವರು ಅಪರಿಚಿತರು ನಡೆದೇ ಸಾಗುತ್ತಿದ್ದಾರೆ. ಸಮವಸ್ತ್ರ ಧರಿಸಿದವರ೦ತೆ ಐವರೂ ಬಿಳಿಯ ಅ೦ಗಿ ಮತ್ತು ಷರಾಯಿಯನ್ನು ತೊಟ್ಟಿದ್ದಾರೆ. ಅ೦ಗಿಯ ಮೇಲೆಲ್ಲಾ ರಕ್ತದ ಕಲೆಗಳು. ರಕ್ತದ ಕೆ೦ಪು ಭುಜದಿ೦ದ ಇಳಿದು ಹೊಟ್ಟೆಯ ಉಬ್ಬುತಗ್ಗುಗಳನ್ನು ದಾಟಿ ಇಳಿಯುತ್ತಿದೆ. ಐವರಲ್ಲೊಬ್ಬರಿಗೂ ಅದರ ಅರಿವೇ ಇದ್ದ೦ತಿಲ್ಲ. ಒಬ್ಬೊಬ್ಬರೂ ಹೆಗಲ ಮೇಲೆ ಸತ್ತ ನಾಯಿಗಳನ್ನು ಹೊತ್ತಿದ್ದಾರೆ. ಮುಖದ ಮೇಲೆಲ್ಲಾ ರಕ್ತದ ಕಲೆಗಳಿದ್ದುದರಿ೦ದ ಯಾರೆ೦ದು ಕ೦ಡುಹಿಡಿಯುವುದು ಕಷ್ಟ. ಆ ಐವರಲ್ಲೊಬ್ಬ … Read more

ಸಾಲ: ಗಿರಿಜಾ ಜ್ಞಾನಸುಂದರ್

ಬೆಳಿಗ್ಗೆ ಎದ್ದದ್ದು ತಡವಾಗಿತ್ತು. ಇನ್ನು ಆಲಸ್ಯ. ಇವತ್ತು ಕೆಲಸಕ್ಕೆ ಹೋಗಲು ಮನಸ್ಸೇ ಇಲ್ಲ. ಆದರೆ ರಜೆ ಇಲ್ಲದ ಕಾರಣ ಸೂರ್ಯ ಎದ್ದು ತನ್ನ ದೈನಂದಿನ ಕೆಲಸ ಮುಗಿಸಿ ಕೆಲಸಕ್ಕೆ ಹೊರಟ. ಸೂರ್ಯ ತನ್ನ ಊರನ್ನು ಬಿಟ್ಟು ಬಂದು ೮ ತಿಂಗಳು ಆಗಿತ್ತು. ಅಪ್ಪ ಅಮ್ಮನ ಹತ್ತಿರ ದುಡ್ಡಿಗಾಗಿ ಬೇಡುವುದು ಅವನಿಗೆ ಹಿಂಸೆ ಅನ್ನಿಸುತ್ತಿತ್ತು. ಮೊದಲೆಲ್ಲ ಹೀಗೆ ಆಡುತ್ತಿರಲಿಲ್ಲ ಅವರು. ಕೇಳುವುದಕ್ಕೆ ಮುಂಚೆಯೇ ಸೂರ್ಯನಿಗೆ ದೊಡ್ದು ಕೊಡುವುದು, ಬಟ್ಟೆ ಕೊಡಿಸುವುದು, ತಿಂಡಿ ತಿನಿಸು ಹೀಗೆ ಹಲವಾರು ವಿಷಯಗಳಲ್ಲಿ ಸೂರ್ಯನ … Read more

ಫರಿಶ್ತಾನ ಆತ್ಮಕಥೆ: ಪ್ರಸಾದ್ ಕೆ.

ಸವ್ಯಸಾಚಿ ಕಳೆದ ಮೂರು ಘಂಟೆಗಳಿಂದ ತನ್ನ ಹಸ್ತಾಕ್ಷರವನ್ನು ಒಂದರ ಹಿಂದೆ ಒಂದರಂತೆ ಪುಸ್ತಕಗಳ ಮೊದಲ ಪುಟದಲ್ಲಿ ನೀಡುತ್ತಲೇ ಇದ್ದಾನೆ.  ಸವ್ಯಸಾಚಿ ಎಂಬುದು ಅವನ ದಾಖಲೆಗಳಲ್ಲಿರುವ ಹೆಸರು. ಅವನ ಅಭಿಮಾನಿಗಳಿಗೆ ಅವನು `ಫರಿಶ್ತಾ'. ತನ್ನ ಕಾವ್ಯನಾಮಕ್ಕೆ ತಕ್ಕಂತೆ ಎಲ್ಲರಿಗೂ ಆತ ಒಬ್ಬ ಗಂಧರ್ವ. ಮುಂಜಾನೆಯ ಒಂಭತ್ತರಿಂದ ಶುರುವಾದ ಈ ಆಟೋಗ್ರಾಫ್ ಕಾರ್ಯಕ್ರಮವು ಮುಗಿಯುವಂತೆಯೇ ಕಾಣುತ್ತಿಲ್ಲ. ಕ್ಯಾಮೆರಾದ ಮಿಂಚುಗಳು ಆಗಾಗ ಚಕ್ಕನೆ ಹೊಳೆದು ಮರೆಯಾಗುತ್ತಿವೆ. ಸವ್ಯ ಮೊದಮೊದಲು ಕೂತಲ್ಲಿಂದಲೇ ತನ್ನ ಅಭಿಮಾನಿಗಳನ್ನು ಸಂಕ್ಷಿಪ್ತವಾಗಿ ಮಾತನಾಡಿಸುತ್ತಾ, ಮುಗುಳ್ನಗುತ್ತಾ ಪುಸ್ತಕಗಳಿಗೆ ಹಸ್ತಾಕ್ಷರವನ್ನು ದಯಪಾಲಿಸುತ್ತಿದ್ದನಾದರೂ … Read more

ಕರಿನೆರಳು: ಶಿವಕುಮಾರ ಚನ್ನಪ್ಪನವರ

ತನಗೆ ರಥಬೀದಿಯಲ್ಲೇನು ಕೆಲಸವಿಲ್ಲವೆಂಬಂತೆ, ಕುಮದ್ವತಿಯು ತುಂಗಭದ್ರೆಯ ತಟಗೆ ಸೇರಿಕೊಂಡು ಜುಳು, ಜುಳು ನಾದ ಒಮ್ಮೆಲೇ ಸುಮ್ಮನಾಗಿ ಹೀರೇಹೊಳಿಯ ಬೃಹತ್ತಾದ ಮೈದಾನದಲ್ಲಿ ಮೈ ಚೆಲ್ಲಿ ಅಕ್ಕ-ತಂಗಿಯರಿಬ್ಬರೂ ತಳಕಿಬಿದ್ದ ನಾಗರಹಾವಿನಂತೆ ಗುರುತಿಸಲು ಕಷ್ಟವಾಗುವಷ್ಟು ಹೊಂದಿಕೊಂಡು ಮುಂದೆ ಸಾಗಬೇಕಾದ ಜಾಗದಲ್ಲಿ ಆನ್ವೇರಿಯವರು ದೊಡ್ಡ ಸೇತುವೆಯ ಪಕ್ಕಕ್ಕೆ ಚಿಕ್ಕದೊಂದು ಸೇತುವೆ ಕಟ್ಟಿ ಐದು ಗೇಟುಗಳಿಂದ ಕುಮಧ್ವತಿಯನ್ನು ಕೂಡಿ ಹಾಕಿ ತಮಗೆ ಸಾಕೆನಿಸಿ ಹೊರಬಿಟ್ಟ ನೀರಿನ ಬೋರ್ಗರೆತದ ಸದ್ದಿನೊಂದಿಗೆ ಬೆರೆತು ಮುಂಜಾನೆಯ ಮೂಢಣಕ್ಕೆ ಮುಖ ಮಾಡಿ ನಿಂತಿದ್ದ ಸಿದ್ರಪಾಲನಿಗೆ, ಇಷ್ಟು ದಿನಗಳು ತೊಗಲುಗೊಂಬೆಯಂತೆ ತಲೆಯಾಡಿಸಿದ್ದು … Read more

ಖಾಲಿ ಹುದ್ದೆ: ಜಾನ್ ಸುಂಟಿಕೊಪ್ಪ

              ಮಲೆನಾಡಿನ ಬೆಟ್ಟಗುಡ್ಡಗಳ ಮಡಿಲಿನಲ್ಲಿ ಕಾಫಿತೋಟಗಳಿಂದ ಆವರಿಸಲ್ಪಟ್ಟ ಒಂದು ಹಳ್ಳಿ.ಆ ಹಳ್ಳಿಯಲ್ಲೊಂದು ಅನುಧಾನಿತ ಪ್ರೌಢಶಾಲೆ. ಈ ಶಾಲೆ ಒಂದು ರೀತಿ ಹಳ್ಳಿಗೆ ದಾರಿದೀಪವಿದ್ದಂತೆ. ಹಿಂದೆ ಅದೆಷ್ಟೋ ಮಂದಿ ಈ ಜ್ನಾನದೇಗುಲದಲ್ಲಿ ಕಲಿತು ವಿದ್ಯಾವಂತರಾಗಿ ತಮ್ಮ ಬದುಕನ್ನು ರೂಪಿಸಿಕೊಂಡಿದ್ದಾರೆ. ಹಿಂದೆಲ್ಲಾ ಶಾಲೆಗೆ-ಗುರುಗಳಿಗೆ ಅಪಾರ ಗೌರವವಿತ್ತು,ದೊಡ್ಡದೊಡ್ಡ ಸಾಹುಕಾರರ ಮಕ್ಕಳೂ ಸರಕಾರಿ ಶಾಲೆಯಲ್ಲಿ ಓದುತ್ತಿದ್ದರು.ಈಗ ಕಾಲ ಬದಲಾಗಿಬಿಟ್ಟಿದೆ.ಸರಕಾರದಿಂದ ಅನುದಾನ ಬರಲು ಆರಂಬಗೊಂಡದ್ದೇ ರಾಜಕೀಯವೂ ಶಾಲೆಯ ವಠಾರಕ್ಕೆ ವಕ್ಕರಿಸಿಕೊಂಡಿದೆ. ಶಾಲೆಯ ಆಡಳಿತ ಮಂಡಳಿಯೂ,ಶಿಕ್ಷಕ ವರ್ಗವೂ … Read more

ಭೀಮ: ಗಿರಿಜಾ ಜ್ಞಾನಸುಂದರ್

ತುಂಬಾ ಸುಸ್ತು, ನಿಶಕ್ತಿ ಅನ್ನಿಸುತ್ತಿತ್ತು. ನನ್ನ ಒಡೆಯನ ಮಾತು ಕೇಳಿಸುತ್ತಿತ್ತು. ಆದರೆ ಬಾಲ ಅಲ್ಲಾಡಿಸಲು ಸಹ ಆಗದಷ್ಟು ನಿತ್ರಾಣ. ಅವನ ಮಾತಿಗೆ ಪ್ರತಿಕ್ರಿಯೆ ಕೊಡಲೇಬೇಕೆಂಬ ಬಯಕೆ. ಅದಕ್ಕೆ ಸ್ವಲ್ಪ ಮಟ್ಟಿಗೆ ಕಣ್ಣು ತೆರೆಯಲು ಪ್ರಯತ್ನಿಸಿದೆ. ಕಣ್ಣ ತುಂಬಾ ನೀರು ತುಂಬಿಕೊಂಡು ನನ್ನನ್ನೇ ನೋಡುತ್ತಿದ್ದ ನನ್ನ ಜನ. ಅವರಿಗೆ ನಾನು ಚಿರಋಣಿ. ನನ್ನ ಜೀವ ಅವರೆಲ್ಲರೂ.  ನಾನು ತುಂಬಾ ಪುಟ್ಟವನಿದ್ದೆ ಈ ಮನೆಗೆ ಬಂದಾಗ. ನನ್ನ ಅಮ್ಮನಿಗೆ ಯಾವುದೋ ಕಾರ್ ಡಿಕ್ಕಿ ಹೊಡೆದು ಸತ್ತಳಂತೆ. ೨೦ ದಿನದ ಮರಿ … Read more

ಅವಸ್ಥೆ!: ಎಸ್.ಜಿ.ಶಿವಶಂಕರ್

`ನೆನ್ನೆ ರಾತ್ರಿ ದಾವಣಗೆರೆಯವರು  ಫೋನು ಮಾಡಿದ್ದರು..ಶಾಲಿನಿಯನ್ನು ಹುಡುಗ ಒಪ್ಪಿದ್ದಾನಂತೆ..ಆದ್ರೆ ಹುಡುಗ ಕಾರು ತಗೋಬೇಕಂತೆ, ಆರು ಲಕ್ಷ ವರದಕ್ಷಿಣೆ ಕೇಳ್ತಿದ್ದಾರೆ..ನೀನು ಹೂ ಅಂದರೆ..ನಿಮ್ಮಪ್ಪ ಫೋನು ಮಾಡಿ ಮಾತುಕತೆಗೆ ಕರೀಬೇಕೂಂತಿದ್ದಾರೆ…! ತಿಂಡಿಯ ತಟ್ಟೆ ಟೇಬಲ್ಲಿನ ಮೇಲಿಡುತ್ತಾ ತನ್ನ ತಾಯಿ ಹೇಳಿದಾಗ ರಾಜೀವನಿಗೆ ತನ್ನ ಶರೀರದ ಆ ಜಾಗ ನೆನಪಾಯಿತು. ಹೌದು ಸ್ನಾನ ಮಾಡುವಾಗ ನೋಡಿಕೊಂಡೆನಲ್ಲ..! ಅದರ ನೆನಪಿಂದ ಅವನಿಗೆ ವಿಚಿತ್ರವಾದ ಸಂಕಟವಾಯಿತು. ಆಹಾರ ಗಂಟಲಲ್ಲಿ ಇಳಿಯಲಿಲ್ಲ. ಕಿಟಿಕಿಯಿಂದಾಚೆ ನೋಡಿದ ಇನ್ನೂ ಕತ್ತಲಿತ್ತು. ಗಡಿಯಾರ ಆರೂವರೆಯನ್ನು ತೋರಿಸುತ್ತಿತ್ತು. `ಥೂ..ದರಿದ್ರದ ಟೈಮು! ಇದು … Read more

ಒಲ್ಲದ ಮನಸ್ಸಿನ ಮಾನಸ: ಗಿರಿಜಾ ಜ್ಞಾನಸುಂದರ್

ಮರದ ಮೇಲೆ ಹಸಿರೆಲೆ ನೋಡಿದಾಗ ಏನೋ ಒಂಥರಾ ಹೊಸತನ, ಮನಸ್ಸಲ್ಲಿ ಮಲ್ಲಿಗೆ ಹೂವಿನ ಪರಿಮಳ ಮತ್ತು ಏನೋ ಹೇಳಲಾಗದ ಸಡಗರ ಮತ್ತು ಸಂಕೋಚದ ಅನುಭವ.ತನ್ನ ಮದುವೆಯ ದಿನಗಳ ನೆನಪು ತರುವ ಪರಿಮಳ. ಆದರೆ ಇತ್ತೀಚಿಗೆ ಬರುಬರುತ್ತಾ ಆ ಭಾವನೆಗಳು ಎಲ್ಲೋ ಕಾಣೆಯಾಗುತ್ತಿರೋ ಹಾಗಿದೆ. ಹೊಸತನದ ಬದಲು ಭಾರವಾಗುತ್ತಿರುವ ಭಾವನೆಗಳು.. ಹೀಗೆ ಯೋಚಿಸುತ್ತಿರುವಾಗಲೇ ಕಣ್ಣಂಚಿನಲ್ಲಿ ಹನಿ …. "ಕುಕ್ಕರ್ ಎಷ್ಟ್ ಸಲ ವಿಸಿಲ್ ಆಯಿತು.. ಅಡುಗೆ ಮನೆಲ್ಲಿ ಯಾರು ಇಲ್ವಾ? ಏನ್ ರೋಗ ಬಂದಿದೆ ಮಾನಸಂಗೆ?"  ಅಂತ ಅತ್ತೆ … Read more