ಎಲ್ಲಿದೆ ನಮ್ಮ ಮನೆ?!: ಎಸ್.ಜಿ.ಶಿವಶಂಕರ್
ಸಮಯ ರಾತ್ರಿ ಏಳೂವರೆ ಸಮೀಪ. ಬಡಾವಣೆಯ ನಡುವಿನ ಆ ಪಾರ್ಕು ನಿರ್ಜನವಾಗುತ್ತಿತ್ತು. ಕತ್ತಲಾಗುವವರೆಗೂ ಅಲ್ಲಿ ಮಕ್ಕಳು, ಮಹಿಳೆಯರು ತುಂಬಿರುತ್ತಾರೆ. ಕತ್ತಲು ಕವಿಯುವ ಹೊತ್ತಿನ ನಂತರವೂ ಅಲ್ಲಿ ಉಳಿಯುತ್ತಿದ್ದವರೆಂದರೆ ಕೆಲವು ಹಿರಿತಲೆಗಳು. ಆರು ಜನರ ಆ ಹಿರಿಯರ ಗುಂಪು ಕಳೆದೈದು ವರ್ಷಗಳಿಂದ ಆ ಪಾರ್ಕಿನ ಅವಿಭಾಜ್ಯ ಅಂಗವಾಗಿದ್ದರು. ಅವರೆಲ್ಲ ಸರ್ವಿಸಿನಲ್ಲಿದ್ದು ರಿಟೈರ್ ಆದವರು. ಬೆಳಕಿರುವವರೆಗೂ ವಾಕಿಂಗ್ ಮಾಡಿ ನಂತರ ಪಕ್ಕಪಕ್ಕದಲ್ಲಿರುವ ಎರಡು ಕಲ್ಲು ಬೆಂಚುಗಳಲ್ಲಿ ಆಸೀನರಾಗುತ್ತಿದ್ದರು. ಏಳೂವರೆಯವರೆಗೂ ಅವರ ಹರಟೆ ಸಾಗುತ್ತಿತ್ತು. ನಂತರ ನಿಧಾನಕ್ಕೆ ಎಲ್ಲರೂ ತಂತಮ್ಮ ಮನೆಗಳತ್ತ … Read more