ಟನ್ನು ಭಾರದ ಖುಷಿ ಹೊರುವಂತಿರಬೇ​ಕು ಟ್ರಿಪ್ಪು: ಅಮರ್ ದೀಪ್ ಪಿ.ಎಸ್.

ಒಂದೇ ಕಡೆ ಅದೇ ಕೆಲಸ, ಅದೇ ರಸ್ತೆ, ಓಡಾಟ, ಮನೆ, ಮಂದಿ, ಮಾತು, ಜೀವನ ಕ್ರಮ ಒಮ್ಮೊಮ್ಮೆ ಬೋರಾಗುತ್ತೆ.   ಆಗಾಗ ಒಂದೆರಡು ದಿನಗಳ ಮಟ್ಟಿಗಾದರೂ ಹೊರಗಡೆ ತಿರುಗಾಡಿ ಬರಬೇಕು. ಹೋಗಿ ಬಂದೆವೆಂದರೆ, ಮನಸ್ಸು ದಿಗ್ಗನೇ ಎದ್ದು "ನಾನ್ ಫ್ರೆಶ್ ಆದ್ನೆಪ್ಪಾ" ಅಂತೇನೂ ಹೇಳುವುದಿಲ್ಲ.  ಆದರೆ, ಗೆಳೆಯರು ಸೇರಿ ರುಟೀನು ತಪ್ಪಿಸಿಕೊಂಡ ಖುಷಿಗೋ ಅಥವಾ ಹೊಸ ಜಾಗ,  ಸಧ್ಯಕ್ಕೆ ಹತ್ತಿರವಿಲ್ಲದ ಕೆಲಸ, ದುಡಿಮೆ, ಟೆನ್ಶನ್ ಎಲ್ಲಾನು ಮರೆತು ಖುಷ್ ಖುಷಿಯಾಗಿ  ಪರಿಸರ, ನದಿ ತೀರ, ಐತಿಹಾಸಿಕ ಸ್ಥಳ, … Read more

ಜಿರಾಫೆ ಡೈರಿಯಿಂದ: ಅಮರ್ ದೀಪ್ ಪಿ.ಎಸ್.

ಮಕ್ಕಳನ್ನು ನೋಡುತ್ತಲೇ ಕೆಲವರು ಹೇಳುತ್ತಿರುತ್ತಾರೆ;  "ಹುಡುಗ ಭಾಳ ಚುರುಕದಾನ, ಮುಂದ್ ಚಲೋತ್ನಾಗಿ ಓದಿ ಬುದ್ಧಿವಂತನಾಗ್ತಾನ, ನೀವೇನ್ ಕಾಳಜಿ ಮಾಡಬ್ಯಾಡ್ರಿ"  ಆ ಬುದ್ಧಿವಂತಿಕೆ, ಚುರುಕು, ತಲೆಗೆ ಹತ್ತುವ ಓದು ಎಲ್ಲಾ ಓಕೆ.  ಆದರೆ, ನಾನು ನೋಡಿದ ಸ್ವತಃ ನೋಡಿ  ಅನುಭವಿಸಿದಂತೆ ಕೆಲವು ಸ್ನೇಹಿತರಲ್ಲಿ ಯು- ಟರ್ನ್ ತೆಗೆದುಕೊಂಡಿರುತ್ತಾರೆ.  ಒಂದೋ ದಡ್ಡತನದಿಂದ ಜಾಣತನದೆಡೆಗೆ ಇಲ್ಲವೇ ಬುದ್ಧಿವಂತಿಕೆಯಿಂದ  ದಡ್ಡರ ಸಾಲಿಗೆ.  ಸೋಮಾರಿತನ ಬಿಟ್ಟು ಸಮಯ,ದುಡಿಮೆ, ಜಾಣ್ಮೆ ಎಲ್ಲದರ ಕಡೆ ಪ್ರಜ್ಞಾಪೂರ್ವಕವಾಗಿ ಬಿಹೇವ್ ಮಾಡುವುದು.  ಈ ಮಧ್ಯೆ ಓದಿನ ಹಂತದಲ್ಲೇ  ಚೂರು ಮೈ … Read more

ತುಪ್ಪದ ರುಚಿ ನಂತರವೂ ಸಾಲ ಮಾಡಲೇಬೇಕಾ?: ಅಮರ್ ದೀಪ್ ಪಿ.ಎಸ್.

ಡಾ. ಬಿ. ಆರ್. ಅಂಬೇಡ್ಕರ್ ಅವರು ಹೇಳಿದ್ದರೆನ್ನಲಾದ  ಸ್ವಾತಂತ್ರ್ಯ ಪೂರ್ವದಲ್ಲಿ ನಡೆದ ಒಂದು ಘಟನೆ. ದಲಿತ ಸಮುದಾಯದವರು ಸಾಮೂಹಿಕ ಭೋಜನದಲ್ಲಿ ತುಪ್ಪವನ್ನು ಬಡಿಸಿ, ಊಟ ಮಾಡುವ ವೇಳೆ ಮೇಲ್ವರ್ಗದ ಜನರು ಅಡುಗೆ ಪಾದಾರ್ಥಗಳನ್ನು ಚೆಲ್ಲಾಪಿಲ್ಲಿ ಮಾಡಿ ಊಟ ಮಾಡುತ್ತಾ ಕುಳಿತ ಜನರನ್ನು ಹಿಗ್ಗಾಮುಗ್ಗಾ ಥಳಿಸಿದ್ದರಂತೆ. ಕಾರಣ, ಆ ವರ್ಗದ ಜನರು ತುಪ್ಪ ತಿನ್ನಬಾರದು.  ತಿಂದದ್ದು ಮೇಲ್ವರ್ಗದ ಜನಗಳಿಗೆ ಮಾಡಿದ ಅಪಮಾನವಂತೆ. ಇಂಥ ಪಿಡುಗುಗಳನ್ನು ಸಾಕ್ಷರತೆ ಸಾರುವ ಮೂಲಕ ಮಾತ್ರ ತೊಡಗಿಸಲು ಸಾಧ್ಯವೆಂದರಿತು ಡಾ. ಬಿ. ಆರ್. ಅಂಬೇಡ್ಕರ್ … Read more

ಹಬ್ಬ ಯಾವುದಾದರೇನು ಮುಬಾರಕ್ ಒಂದೇ: ಅಮರ್ ದೀಪ್ ಪಿ.ಎಸ್.

ಫೆಬ್ರವರಿ 16, 27, ಏಪ್ರಿಲ್ 24, ಡಿಸೆಂಬರ್ 25, ಆಗಸ್ಟ್ 15, ಜನವರಿ 26, ಹೀಗೆ ಸುಮಾರು ದಿನಗಳು ಒಬ್ಬೊಬ್ಬರಿಗೆ ಒಂದೊಂದು ಮರೆಯಲಾರದ ದಿನವಾಗಿರುತ್ತೆ.  ಮದುವೆಯದೋ.  ಹುಟ್ಟುಹಬ್ಬದ್ದೋ… ರಾಷ್ಟ್ರೀಯ ಹಬ್ಬ ಅದು ಬಿಡಿ ಎಲ್ಲರಿಗೂ ಹಬ್ಬವೇ. ಒಮ್ಮೊಮ್ಮೆ ಆ ದಿನಗಳಿಗೆ ಅಂಟಿಕೊಂಡು ಒಂದೊಂದು ಹಬ್ಬ, ಹುಣ್ಣಿಮೆ, ಅಮಾವಾಸ್ಯೆ, ಘಟನೆಗಳು  ಸೇರಿರುತ್ತವೆ. ಹೆಚ್ಚು ಓದಿರದ ನಮ್ಮವ್ವನ ವಯಸ್ಸಿನವರಿಗೆ  "ನನ್ನ  ಹುಟ್ಟಿದ ದಿನಾಂಕ ಯಾವ್ದವ್ವ?" ಅಂತೇನಾದ್ರೂ ಕೇಳಿದ್ರೆ, ಗೊತ್ತಿಲ್ಲೆಪ್ಪಾ, ಆದ್ರ ನೀ ಹುಟ್ಟಿದ್ ಎಲ್ಡು ದಿನಕ್ಕೆ ಕಾರ ಹುಣ್ಣಿವಿ ಇತ್ನೋಡೆಪ್ಪ. … Read more

ಒಲವೇ ಬಾಡಿಗೆ ಮನೆಯ ಲೆಕ್ಕಾಚಾರ:ಅಮರದೀಪ್ ಅಂಕಣ

ಹೊರಗೆ ಜೋರು ಮಳೆ.  ಮನೆ ತುಂಬಾ ತಟಕ್ ತಟಕ್ ಎಂದು ಸೋರಿದ ಮಳೆ ಹನಿಗಳು ಹೊರಡಿಸುವ ಪ್ಯಾಥೋ ಸಾಂಗಿನ ತುಣುಕು ಸಂಗೀತ.  ಮನೆ ಮಾಳಿಗೆಯ  ಹೊಗೆ ಗೂಡಿನ ಬಾಯಿಗೆ ತಗಡು ಮುಚ್ಚುವುದನ್ನು ಮರೆತಿದ್ದಳು ಮುದುಕಿ.  ಫಕ್ಕನೇ ನೋಡಿ ಮೊಮ್ಮಗನಿಗೆ ಹೇಳಿದಳು.  ಹುಡುಗ ಹತ್ತಲೋ ಬೇಡವೋ ಎಂಬಂತೆ ನೋಡಿದ; ಹಣ್ಣಣ್ಣು  ಮುದುಕಿ ತನ್ನ ಅಳಿದುಳಿದ ಹಲ್ಲುಗಳನ್ನು ಜೋಪಾನ ಮಾಡಿಟ್ಟು ಕೊಂಡು ದಿನ ದೂಡುವಂತೆ ಗೋಚರಿಸುತ್ತಿದ್ದ ಏಣಿಯ ಪರಿಸ್ಥಿತಿ.   ಹಂಗೂ ಹಿಂಗೂ ಸವ್ಕಾಶಿ ಹತ್ತಿ ಮಾಳಿಗೆ ನೋಡಿದರೆ ಏನಿತ್ತು? … Read more

ದೂರ ತೀರಕೆ ಹೋದರೇತಕೆ?: ಅಮರ್ ದೀಪ್ ಪಿ.ಎಸ್.

ಜಮೀಲ್ ಅಹ್ಮದ್… ನನಗಿಂತಲೂ ಕನಿಷ್ಠ ಎಂಟು ಹತ್ತು ವರ್ಷವಾದರೂ ಹಿರಿಯ..  1992ರಿಂದ  1996ರವರೆಗೆ ನಾನು ನೋಡಿದಂತೆ ಕೇವಲ ನಾಲ್ಕು ನೂರು ರೂಪಾಯಿಗಳ ಸಂಬಳದ ಕೆಲಸವನ್ನು ಮಾಡುತ್ತಿದ್ದ. ಅದು ಬಿ. ಕಾಂ. ಪದವಿ ಕೈಯಲ್ಲಿಟ್ಟುಕೊಂಡು. ನಾನು ನನ್ನ ಓದು ಮುಗಿಸಿ ಯಾವುದೋ   ಎನ್. ಜಿ. ಓ ಒಂದರಲ್ಲಿ ಮಾರ್ಚ್ 1996 ರಲ್ಲಿ ಸಾವಿರ ರೂಪಾಯಿಯ ಸಂಬಳದ ಕೆಲಸಕ್ಕೆ ಸೇರಿಕೊಂಡಿದ್ದೆ. ಅದೇ ಕಚೇರಿಯಲ್ಲಿ ಖಾಲಿ ಇದ್ದ ಆಫೀಸ್ ಬಾಯ್ ಕೆಲಸಕ್ಕೆ ರೂ. ೬೦೦ ಗಳ ಸಂಬಳ ಕೊಡುತ್ತೇವೆಂದಿದ್ದರು. ದಿನ … Read more

ಈರಣ್ಣ ಮೆಸ್ ಎಂಬ ಹರಟೆ ತಾಣ: ಅಮರ್ ದೀಪ್ ಪಿ.ಎಸ್.

ಸುಮಾರು ಐವತ್ತರ ಆಸುಪಾಸಿನ ವಯಸ್ಸಿನ ವ್ಯಕ್ತಿ ಆತ.  ಹೆಸರು ವೀರಣ್ಣ ಅಂತ.  ಹೆಚ್ಚು ಮಾತನಾಡದ, ತೆಳ್ಳನೆ ಆಕೃತಿ.  ಮನೆಯಲ್ಲಿ ಹೆಂಡತಿ, ಮಕ್ಕಳು ಅಳಿಯ, ಚಿಳ್ಳೆ ಪಿಳ್ಳೆಗಳು. ಮನೆಯಲ್ಲಿ ಆಡು ಭಾಷೆ ತೆಲುಗು. ಬಂದವರೊಂದಿಗೆ ತೆಲುಗು, ಕನ್ನಡ, ಹಿಂದಿ ಮಾತನಾಡುವುದು ಸರಾಗ.  ದೊಡ್ಡ ಮಗಳ ಹೆಸರು ಅರುಣಾ ಅಂತ.  ಅಳಿಯ ಸೀನ.  ಅವನು ಆಂಧ್ರದ ಯಾವುದೋ  ಊರಲ್ಲಿ ಫೈನಾನ್ಸ್ ಮಾಡುತ್ತಿದ್ದನಂತೆ.  ಅದು ಬಿಟ್ಟು ಮದುವೆ ನಂತರ ಇಲ್ಲೇ ಬಳ್ಳಾರಿಯಲ್ಲಿ ಮಾವನ ಮನೆಯಲ್ಲಿ ಬಂದು ನೆಲೆಸಿದ್ದ.  ದುರುಗಮ್ಮ ಗುಡಿ ಹತ್ತಿರದ … Read more

ತಿಪ್ಪಣ್ಣ ಸರ್ಕಲ್: ಅಮರ್ ದೀಪ್ ಪಿ.ಎಸ್.

ಹಿಂಗೇ ಓಣಿಯಲ್ಲಿನ ಈಶಪ್ಪನ ಗುಡಿ ಕಟ್ಟೆಗೆ ಪಕ್ಕದ ಮನೆ ರತ್ನಕ್ಕನ  ಮನೆಯಿಂದ ತಂದ ಪೇಪರ್ ಓದ್ತಾ ಕುಂತಿದ್ದೆ .   ಗುಡಿ ಎದುರಿಗಿನ ದಾರಿ ಏಕಾ ಇದ್ದದ್ದರಿಂದ ಅಷ್ಟೂ ದೂರದಿಂದ ಬರೋರು ಹೋಗೋರು ಎಲ್ಲಾ ಕಾಣಿಸೋರು. ದಿನ ಭವಿಷ್ಯ ನೋಡೋ ಚಟ ನನ್ನ ಪಕ್ಕದ ನನ್ನಂಥ ನಿರುದ್ಯೋಗಿಗೆ.  ಅವನೂ ನಂಜೊತೆ ಓದಿದೋನೇ. ಅವನಿಗೆ ಜಾತಕದ ಪ್ರಕಾರ ಗೌರ್ಮೆಂಟ್ ನೌಕ್ರಿ ಸಿಕ್ಕೇ ಸಿಗುತ್ತೆ ಅನ್ನೋ ಲೆಕ್ಕಾಚಾರದಲ್ಲಿ ದಿನಾ ಸರ್ಕಾರಿ ಜಾಹಿರಾತು ನೋಡೋದು ಅವನ ಅಭ್ಯಾಸವಾಗಿತ್ತು.  ಜೊತೆಗೆ  ಪಂಚಾಗದ ಹುಚ್ಚು … Read more

ಕನ್ಯಾ ಕೊಡ್ತೀವಿ, ವರ ಹೆಂಗೇ?: ಅಮರ್ ದೀಪ್ ಪಿ.ಎಸ್.

ವಿಷ್ಣುವರ್ಧನ್ ಅಭಿನಯದ ಒಂದು ಸಿನೆಮಾ ಬಂದಿತ್ತು." ನೀನು ನಕ್ಕರೆ ಹಾಲು ಸಕ್ಕರೆ"ಅಂತ.    ಅದರಲ್ಲಿ ಒಬ್ಬರಲ್ಲಾಂತ ನಾಲ್ಕು ನಾಲ್ಕು ಜನ ಹಿರೋಯಿನ್ ಗಳು.  ವಿಷ್ಣುವರ್ಧನ್ ಜೊತೆ  ಒಬ್ಬರಿಗೂ ಒಂದೊಂದು ಡುಯೆಟ್ ಸಾಂಗ್, ಕಾಮಿಡಿ ಎಲ್ಲಾ ಇದೆ.   ಕೊನೆಗೆ ವಿಷ್ಣುವರ್ಧನ್ ಗೆ  ಒಂದು ಹುಡುಗೀನು ಸಿಗಲ್ಲ. ಆ ಸಿನೆಮಾದಲ್ಲಿ ಹುಡುಗ ಓದಿರೋನು, ಒಂದಷ್ಟು ಆಸ್ತಿ ಇರುತ್ತೆ.  ಕಡಿಮೆ ಅಂದ್ರೆ ಅವನ ಬಾಳಿ ನಲ್ಲಿ ಒಂದು ಹುಡುಗಿ ಎಂಟ್ರಿ ಮತ್ತು ಅವನ ಮದುವೆ. ಅದು ಸಿನೆಮಾದಲ್ಲಿ ಕಡೆಗೂ ಆಗೋದಿಲ್ಲ ಅನ್ಸುತ್ತೆ. ಸಿನೆಮಾ ನೋಡಿ ತುಂಬಾ … Read more

ಅನಪೇಕ್ಷಿತ ಶಿಕ್ಷೆಯ ಮೂಲ ಅಕಾರಣ ಶೋಷಣೆ: ಅಮರ್ ದೀಪ್ ಪಿ.ಎಸ್.

ಆ ದಿನ ಯಾಕೋ "ಆತ"ನಿಗೆ ಕಣ್ಣಿಗೆ ಪಟ್ಟಿ ಕಟ್ಟಿ ಬಿಟ್ಟ ದಿನ… ನಡೆದದ್ದು ಆಫೀಸಿಗೆ,ದೇಕಿದ್ದು ಕೆಲಸವೇ ಆದರೂ ಎದುರಾದದ್ದು ಕೆಟ್ಟ ಸಂಜೆ ಸಮಯ.   ಆತ ಆ ದಿನ ಇದ್ದ ಇಷ್ಟೇ ಕೆಲಸಗಳನ್ನು ಮುಗಿಸಿ ಗೆಳೆಯ ಬಂದನೆಂದ ಕಾರಣಕ್ಕೆ ಅದೇ ಆವರಣದ ಇನ್ನೊಂದು ಕಚೇರಿಗೆ ಒಂದೆರಡು ನಿಮಿಷದ ಮಟ್ಟಿಗೆ ತೆರಳುತ್ತಾನೆ.  ವಾಪಸ್ಸು ಬರುವುದರೊಳಗೆ ಎಂಕ, ನೋಣ ಸೀನ ಎಂಬಂತಿದ್ದ ಮೂರ್ನಾಲ್ಕು ಜನ ಸಿಬ್ಬಂದಿ ಎದುರಿಗೆ ಹತ್ತು ಹದಿನೈದು ಜನರ ಗುಂಪೊಂದು ಕಚೇರಿಗೆ ಬಂದು "ಆತ "ನನ್ನು ಹುಡುಕುತ್ತಾರೆ, … Read more

ಜರ್ನಿ, ದಾರಿಯೊಂದೇ ಮೂರು ಸಂಗತಿಗಳು: ಅಮರ್ ದೀಪ್ ಪಿ.ಎಸ್.

ಸಂಜೆ ನಾಲ್ಕು ಇಪ್ಪತ್ತಕ್ಕೆ ಹುಬ್ಬಳ್ಳಿಯಿಂದ ನಿಜಾಮುದ್ದೀನ್ ಎಕ್ಸ್ ಪ್ರೆಸ್ ರೈಲಲ್ಲಿ ದೆಹಲಿಗೆ  ನಮ್ಮ ಪ್ರಯಾಣವಿತ್ತು. ಒಂದು ಸೆಕೆಂಡ್ ಕ್ಲಾಸ್ ಸ್ಲೀಪರ್ ಟಿಕೆಟ್ ಕನ್ಫರ್ಮ್ ಆಗಿತ್ತು.  ಇನ್ನೊಂದು ಇಲ್ಲ.  ಆಗಿಲ್ಲದ್ದೇ ನಂದು.   ನಮ್ಮ ಸ್ನೇಹಿತರೊಬ್ಬರ ಜೊತೆ ಹೋಗಿದ್ದೆ. ಆ ದಿನ ಬೆಳಗಾಂ ದಾಟಿದ ನಂತರ ಟಿ. ಸಿ. ಟಿಕೆಟ್ ಕನ್ಫರ್ಮ್ ಮಾಡಿ ಪಕ್ಕದ ಬೋಗಿಯಲ್ಲಿ ಸೀಟು ಕೊಟ್ಟಿದ್ದ.  ರಾತ್ರಿ ಎಂಟಾಗುತ್ತಿದ್ದಂತೆ ಆ ವರ್ಷದಲ್ಲೇ ಜ್ವರ ಕಾಣಿಸಿಕೊಳ್ಳದ ನನಗೆ ಜ್ವರ ಏರಿ ಓಡುವ ರೈಲಲ್ಲಿ ಪೇಚಿಗೆ ಹತ್ತಿತ್ತು.  ನನ್ನಲ್ಲಿದ್ದ … Read more

ನಾನು ನೋಡಿದ ಚಿತ್ರ, ಚೌಕಟ್ಟು ಮೀರಿದ ಶ್ರಮ: ಅಮರ್ ದೀಪ್ ಪಿ.ಎಸ್.

ಕೆಲ ವರ್ಷಗಳ ಹಿಂದೆ ರಜನಿಕಾಂತ್ ಅವರ ಶಿವಾಜಿ ಸಿನಿಮಾ ಬಂದಿತ್ತು.  ಅದರಲ್ಲಿ ರಜನಿಕಾಂತ್ ಎಲ್ಲಾ ಆಸ್ತಿ ಕಳಕೊಂಡ ನಂತರ ವಿಲನ್ ಸುಮನ್ ರಜನಿಕಾಂತ್ ಅವರಿಗೆ ಒಂದು ರುಪಾಯಿ ಕಾಯಿನ್ ಎಸೆಯುತ್ತಾನೆ. ಆ ಒಂದು ರುಪಾಯಿ ಕಾಯಿನ್ ಸಿನೆಮಾ ಅಂತ್ಯವಾಗುವವರೆಗೂ ಪದೇ ಪದೇ ಪರದೆ ಮೇಲೆ ಕಾಣಿಸಿ ಕೊಳ್ಳುತ್ತಲೇ ಇರುತ್ತದೆ.  ಅದೂ ರಜನಿ ಸ್ಟೈಲಿಶ್ ನಟನೆಯೊಂದಿಗೆ.   ನನಗೆ ಪದೇ ಪದೇ ಆ ಒಂದು ರೂಪಾಯಿಯೇ  ನೆನಪಾಗುತ್ತದೆ.   ಬಿಡಿ, ಸಿನೆಮಾ ಬೇರೆ.  ಜೀವನ ಬೇರೆ. ಒಮ್ಮೊಮ್ಮೆ  ಒಬ್ಬನ … Read more

“ಚೇತನ” ಎಂದಾದರೂ “ವಿಕಲ”ವಾಗಲು ಸಾಧ್ಯವೇ?: ಅಮರ್ ದೀಪ್ ಪಿ.ಎಸ್.

ದೇಹದಲ್ಲಿ ಮನುಷ್ಯನಿಗೆ ಯಾವುದಾದ್ರೂ  ಅಂಗ ಊನತೆ ಇದ್ರೆ ಅದಕ್ಕೆ ಅಂಗವೈಕಲ್ಯ ಅಂತ ಲೋಕ ರೂಢಿಯಾಗಿ ಕರೆದು ಬಿಟ್ಟರು.  ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ನಮ್ಮ ಬರಹಗಾರರು ಅಂಗವೈಕಲ್ಯ ಪದವನ್ನು ಬದಲಾಯಿಸಿ "ವಿಕಲಚೇತನ"ಎಂದು ಕರೆದರು.  ಆಂಗ್ಲದಲ್ಲಿ "physically handicapped" ಅನ್ನುವ ಪದವನ್ನು ಯಥಾವತ್ತಾಗಿ  ಕನ್ನಡೀಕರಿಸಿರಬಹುದು.  ಅದನ್ನೇ ಅಂಥಹವರನ್ನು ನಿಂದಿಸದ ರೀತಿ ಯಲ್ಲಾಗಲಿ ಪ್ರೋತ್ಸಾಹಿಸುವ ರೀತಿಯಲ್ಲಾಗಲಿ  "physically challenged" ಅಂತ ಕರೀಬೇಕು ಅಂತೇನೋ ಆಯಿತು. ಇರಲಿ  ನನ್ನ ಪ್ರಶ್ನೆ ಇರುವುದು  ಈಗ ಈ ಅಂಗ ಊನತೆ ಇರುವ ಜನರನ್ನು … Read more

ಈರಬದ್ದೇವ್ರು ಮತ್ತು ಇದ್ದೂ ಇರಬಾರದಂಥ ಭಕ್ತಿ: ಅಮರ್ ದೀಪ್ ಪಿ.ಎಸ್.

"ಭಾವದಲೊಬ್ಬ ದೇವನ ಮಾಡಿ….  ಮನದಲ್ಲೊಂದು ಭಕ್ತಿಯ ಮಾಡಿ  ಕಾಯದ ಕೈಯಲಿ ಕಾರ್ಯವೂ ಉಂಟೆ? ವಾಯಕೆ ಬಳಲುವರು ನೋಡ …..  ಎತ್ತನೇರಿ ಎತ್ತನರಸುವರು  ಎತ್ತ ಹೋದರಯ್ಯ ..ಗ಼ುಹೇಶ್ವರ….. "  ಅಲ್ಲಮ ಪ್ರಭು ಅವರ ವಚನ ಸಾಹಿತ್ಯವನ್ನು ನನ್ನ ಮೆಚ್ಚಿನ  ಹುಡುಗನೊಬ್ಬ  ಹಾಡುವುದನ್ನು ಆಗಾಗ  ಕೇಳುತ್ತಲೇ ಇದ್ದೆ.. ಅದು ಈ ಬರಹಕ್ಕೆ ಎಷ್ಟರ ಮಟ್ಟಿಗೆ ಹೊಂದುತ್ತದೋ ಇಲ್ಲವೋ ಗೊತ್ತಿಲ್ಲ.. ಆದರೆ ಈ  ಬರಹ ಬರೆಯುವ ಹೊತ್ತಿಗೆ ಈ ಹಾಡು ನನ್ನನ್ನ್ನು ಬಹುವಾಗಿ ಕಾಡಿದ್ದಂತೂ ಸತ್ಯ.   ಹೊಸಪೇಟೆ ದಾಟಿ ಮರಿಯಮ್ಮನಹಳ್ಳಿ … Read more

ನಾರಾಣಾಚಾರಿ ಕಾಂಪೌಂಡಿನ ಅತೃಪ್ತ ಆತ್ಮ ಮತ್ತು ನಾನು: ಅಮರ್ ದೀಪ್ ಪಿ.ಎಸ್.

ನಿಮ್ ಹೆಸರೇನ್ ಸರ?  ಯಾವ್ ಊರು? ಈ ಊರಿಗೆ  ಬಂದ್ ಎಷ್ಟ್ ವರ್ಸಾತು? … ಮದ್ವೆ ಆಗೇದೋ? ಎಷ್ಟು ಮಕ್ಳು ?  ಹೀಗೆ ಒಬ್ಬ ಮುದುಕ ಎನ್ಕ್ವೈರಿ ಮಾಡುತ್ತಿದ್ದ.  ಯಜ್ಮಾನ, ನಾನ್ ಪರೀಕ್ಷೆಗೆ ಕುಂತಿಲ್ಲೋ ಯಪ್ಪಾ, ಒಂದೊಂದ್ ಪ್ರಶ್ನೆ ಕೇಳು ಅಂದೆ.   "ಆತು ಹೇಳಪಾ" ಅಂದ.   ಆ ವಯಸ್ಸಾದ ಮುದುಕ ಬರೀ ಒಂದು ಪಂಜೆ, ಮೇಲೊಂದು  ಬನೀನು ಹೆಗಲ ಮೇಲೊಂದು ಟವೆಲ್ ಹಾಕಿ ಕೊಂಡು ಬಸವಣ್ಣ ಸರ್ಕಲ್ ಬಳಿಯ ಸೈಕಲ್ ಶಾಪ್ ಕಟ್ಟೆಗೆ ಕೂತು ವಿಚಾರಿಸುತ್ತಿದ್ದ.  ನೋಡುತ್ತಿದ್ದಂತೆಯೇ … Read more

ಖಾಜಾ ಪಾಷಾನ ನಸೀಬು ಮತ್ತು ಗುಡ್ಡದ ಮೇಲಿನ ಗೆಸ್ಟ್ ಹೌಸ್: ಅಮರ್ ದೀಪ್ ಪಿ.ಎಸ್.

ಅಂಗೈ ನೋಡಿಕೊಂಡೆ.  ವಾಹ್ ಮೇರೆ ನಸೀಬ್?  ಇದೇ ಡಿಶ್ ಕೇಬಲ್ ನನ್ನ ಜೀವನದ ಹೈಸಿಯತ್  ಬದಲಾಯಿಸಿಬಿಡುತ್ತಾ ? ಈಗ ನನ್ನ ಕೈಯಲ್ಲಿ ಹರಿದಾಡುತ್ತಿರುವ ದುಡ್ಡು ನೋಡಿದರೆ ಹಾಗೆ ಅನ್ನಿಸುತ್ತೆ. ಮುಂದೆ ಗೊತ್ತಿಲ್ಲ.  ಆದರೆ ಇದೇ ಸ್ಪೀಡಲ್ಲಿ ನಾನೇನಾದರೂ ದುಡ್ಡು ಮಾಡಿದರೆ ಒಂದಿನ ನಾನು ನನ್ನ ಸ್ವಂತಕ್ಕೆ ಮಕಾನ್ ಮಾಡ್ಕೊಬೋದು, ಮತ್ತು  ಜೀರ್ಣವಾಗಿಸಿ ಹೂ….. ಮತ್ತೇನಿದೆ ನಿನ್ನ ತಾಕತ್ತಿಗೆ ನನ್ನ ಚೀಲ ತುಂಬಿಸಲು ಎನ್ನುವಂತೆ ಸವುಂಡೆ ಮಾಡದೇ ಸಂಕಟ ನೀಡುವ ಪೇಟ್ ಕಾ ಸವಾಲ್ ಹಮೇಶಾ  ಇದ್ದೇ ಇರುತ್ತೆ.  … Read more

ತಾಳಿ ಕಟ್ಟಿದ ಶುಭ ವೇಳೆ ….ಕೊರಳಲ್ಲಿ ಅದ್ಯಾವ ಮಾಲೆ?: ಅಮರ್ ದೀಪ್ ಪಿ.ಎಸ್.

ಅದೊಂದು ಅದ್ಭುತವಾದ ಸಿನೆಮಾ.  "ಬೆಂಕಿಯಲ್ಲಿ ಅರಳಿದ ಹೂ "   ಬಹುಶಃ 1983 ರಲ್ಲಿ ಬಂದ ಕೆ. ಬಾಲ ಚಂದರ್ ಅವರ ನಿರ್ಧೇಶನದ ಸಿನೆಮಾ ಅದು.  ತನ್ನೊಳಗಿನ ವೈಯುಕ್ತಿಕ ಆಸೆ ಮತ್ತು ಬದುಕಿನ ಕನಸು ಗಳನ್ನು ಅದುಮಿಟ್ಟುಕೊಂಡು ತನ್ನ ಕುಟುಂಬದವರ ಹಿತಕಾಗಿಯೇ ತಾನು ತನ್ನ ನಗುವನ್ನು ಜೀವಂತವಾಗಿಟ್ಟು ದುಡಿಯಲು ಸಿಟಿ ಬಸ್ಸು ಹತ್ತುವುದರಲ್ಲೇ ಕೊನೆಗೊಳ್ಳುವ ಸಿನೆಮಾದಲ್ಲಿ ಸುಹಾಸಿನಿ ಎಂಬ ಚೆಲುವೆ ತನ್ನ ಕಣ್ಣಲ್ಲೇ ನಗುವನ್ನು  ಮತ್ತು ನಗುವಿನಲ್ಲೇ ದುಃಖವನ್ನು ವ್ಯಕ್ತಪಡಿಸುತ್ತಲೇ ಇರುತ್ತಾರೆ.  ನಿಜ ಬದುಕಿನ ಹಲವರ ಸನ್ನಿವೇಶಗಳನ್ನು … Read more

ಹಲೋ ಡಾಕ್ಟರ್: ಅಮರ್ ದೀಪ್ ಪಿ.ಎಸ್.

ಅದೊಂದು ಓಣಿಯಲ್ಲಿ ಆಗಾಗ ವಯಸ್ಸಿನ ಹುಡುಗರ ನಡುವೆ ಹಾಕ್ಯಾಟ, ಜಗಳ ನಡೆಯುತ್ತಿದ್ದವು. ಮತ್ತೇನಿಲ್ಲ, ರಜಾ ದಿನ ಬಂತೆಂದರೆ, ಹಬ್ಬ ಹರಿದಿನಗಳು ಬಂದವೆಂದರೆ, ಇಲ್ಲವೇ ಮದುವೆ ಸೀಜನ್ನು ಇದ್ದರೆ ಹೀಗೆ… ಅಲ್ಲಿ ಗುಂಪು ಕಟ್ಟಿಕೊಂಡು ಇಸ್ಪೀಟು ಆಡುವ ಖಯಾಲಿ ಅವರಿಗೆ. ಅಲ್ಲಿಗೆ ಇಸ್ಪೀಟು ಆಡುವವರು ಮಾತ್ರವೇ ಆಲ್ಲ ಆಡದವರೂ ಸಹ ಇರುತ್ತಿದ್ದರು. ಹಿಂದೆ ಸಾಲ ಕೊಟ್ಟು ಆಡಿಸಲು, ಇಸ್ಪೀಟು  ಆಡಲು ಹುರಿದುಂಬಿಸಿ ಮತ್ತೆ ಮತ್ತೆ ಸಾಲಗಾರರನ್ನಾಗಿಸಲು ಅಷ್ಟೇ.  ಅದಿದ್ದದ್ದೇ ಬಿಡಿ. ಅದಲ್ಲ ನಾನು ಹೇಳುತ್ತಿದ್ದುದು ಹೀಗೆ ಆಡುತ್ತಿದ್ದ ವಯಸ್ಸಿನ … Read more

ಹೆಂಡತಿಯೊಬ್ಬಳು ಮನೆಯೊಳಗಿಲ್ಲದಿದ್ದರೆ: ಅಮರ್ ದೀಪ್ ಪಿ.ಎಸ್.

ಆಗಾಗ ಹೆಂಡತಿಯಾದವಳು ತವರಿಗೆ ಹೋಗಿ ಬರುತ್ತಿರಬೇಕು. ಮನೆಯ ದಿನನಿತ್ಯ ನಡೆಯುವ ಚಟುವಟಿಕೆಗಳಿಗೆ ಗಂಡನಾದವನು ಕಣ್ತೆರೆದಂತಾಗುತ್ತೆ. ಅಡುಗೆ ಕಸ, ಮುಸುರೆ, ದೇವರ ಪೂಜೆ, ಸಂಜೆ ಮುಂದೆ ದೀಪ ಹಚ್ಚುವುದು ಎಲ್ಲಾ ಕಡೆ ಗಮನ ಹರಿಸಿದಂತಾಗುತ್ತದೆ. ಹೆಂಡತಿ ಹೋದ ಮೊದ ಮೊದಲ ದಿನಗಳಲ್ಲಿ ಹುಮ್ಮಸ್ಸಿನ ಸ್ನಾನ,  ಸ್ನಾನದ ಮಧ್ಯೆ ಹಳೇ ಹಳೇ ನೆನಪುಗಳ ಹಾಡುಗಳು. ಹಳೆಯ ಹುಡುಗಿಯು ಹಲ್ಲು ಕಾಣದಂತೆ ನಕ್ಕ ನಗೆಯ ಪುಳಕ. ಹೊರ ಬರುತ್ತಿದ್ದಂತೆಯೇ ರಜೆಯನ್ನು ಎಲ್ಲಿ ಹೇಗೆ ಆಚರಿಸುವುದು? ಯಾರು ಜೊತೆಯಿರಬೇಕು? ಯಾರಿಗೆ ಫೋನು ಮಾಡಬೇಕು? … Read more

ರಸ್ತೆ ಅಪಘಾತವೂ ಪರಿಹಾರದ “ಮಾರ್ಗ” ವೂ: ಅಮರ್ ದೀಪ್ ಪಿ.ಎಸ್.

ಆಗತಾನೇ ರಾಜಣ್ಣ ಹಳೇ ಹಗರಿಬೊಮ್ಮನಹಳ್ಳಿ ದಾಟಿ ರಸ್ತೆಯ ಎಡಕ್ಕಿರುವ ಧಾಭಾದಲ್ಲಿ ಏಕಾಂತದ   ಮೇಜಿನ ಮೇಲೆ ಗ್ಲಾಸಿನಿಂದ ಬ್ಲೆಂಡರ್ ಸ್ಪ್ರೈಡ್  ಕೊನೆಯ ಸಿಪ್ಪು ಗುಟುಕರಿಸಿ ಕೆಳಗಿಟ್ಟು ಇನ್ನೇನು ಎದ್ದೇಳಬೇಕು, ಆಗ ರಾಜಣ್ಣನ ಫೋನು ರಿಂಗಣಿಸಿತು. ದೇವಾ  ಕರೆ ಮಾಡಿದ್ದ.  ಆಗ ಸಮಯ ರಾತ್ರಿ ಹನ್ನೊಂದುವರೆ ಆಗಿತ್ತು.  ದ್ವನಿಯಲ್ಲಿ ಗಾಬರಿ ಇತ್ತು. "ಅಣ್ಣಾ, ನನ್ನ ಡ್ರೈವಿಂಗ್ ಲೈಸೆನ್ಸ್ ಇದ್ದ ವಾಲೆಟ್ ಕಳೆದು ಹೋಗಿದೆ."  ಅಂದ. ನಿಶೆಯಲ್ಲಿ ರಾಜಣ್ಣ ಧಾಭಾದ ಹೊರಗೆ ಬರುತ್ತಾ "ಈಗೇನ್ ಹೊಸಾದು ಕೊಡುಸ್ಲೆನಲೇ"  ಎಂದು ಗದರಿ … Read more