ತಿರಸ್ಕಾರ (ಭಾಗ 4): ಜೆ.ವಿ.ಕಾರ್ಲೊ, ಹಾಸನ
’ರಾಕ್ಷಸರು. ಪಾಪ ಹುಡುಗಿ!’ ಅವಳು ಅನುಕಂಪ ವ್ಯಕ್ತಪಡಿಸಿದಳು. ಒಬ್ಬ ಮಿಡ್‌ವೈಫಳ ವಿಳಾಸವನ್ನು ಕೊಟ್ಟು ’ನಾನು ಕಳುಹಿಸಿದೆ ಎಂದು ಹೇಳಿ’ ಎಂದಳು. ಮಿಡ್‌ವೈಫ್ ಯಾವುದೋ ಔಷದವನ್ನು ಕೊಟ್ಟಳು. ಅದರಿಂದ ಏನೂ ಪ್ರಯೋಜನವಾಗಲಿಲ್ಲ. ಆನ್ನೆಟ್ ಮತ್ತೂ ಕಾಹಿಲೆ ಬಿದ್ದಳು. ಗರ್ಭ ಬೆಳೆಯುತ್ತಲೇ ಹೋಯ್ತು. ಮೇಡಮ್ ಪೆರಿಯೆರ್‌ಳ ವೃತ್ತಾಂತವನ್ನು ಕೇಳಿದ ಹ್ಯಾನ್ಸ್ ಅರೆಗಳಿಗೆ ಸ್ತಬ್ಧನಾದ. ನಂತರ, ’ನಾಳೆ ಭಾನುವಾರ. ನಾವು ಪುರುಸೊತ್ತಾಗಿ ಕುಳಿತು ಮಾತನಾಡುವ.’ ಎಂದ. ’ನಮ್ಮಲ್ಲಿ ಹೊಲಿಯಲು ಸೂಜಿಗಳಿಲ್ಲ! ಮತ್ತೆ ಬರುವಾಗ ತರುವೆಯಾ?’ ಮೇಡಮ್ ಪೆರಿಯೆರ್ ಕೇಳಿದಳು. ’ಪ್ರಯತ್ನ ಮಾಡುತ್ತೇನೆ … Read more