ಟಿ.ಎಸ್.ಗೊರವರ ಅವರ “ರೊಟ್ಟಿ  ಮುಟಗಿ” ಕಾದಂಬರಿ ಲೋಕಾರ್ಪಣೆ

ಧಾರವಾಡದ ರಂಗಾಯಣ ಆವರಣದಲ್ಲಿರುವ ಸುವರ್ಣ ಸಾಂಸ್ಕೃತಿಕ ಸಮುಚ್ಛಯದಲ್ಲಿ ಜನೆವರಿ 29, ರವಿವಾರ ಬೆಳಗ್ಗೆ 10.30ಕ್ಕೆ ಟಿ.ಎಸ್.ಗೊರವರ ಅವರ "ರೊಟ್ಟಿ  ಮುಟಗಿ" ಕಾದಂಬರಿ ಲೋಕಾರ್ಪಣೆ.

ಎರಡು ಮನಸ್ಸುಗಳ ಮಧ್ಯೆ (ಸಣ್ಣ ಕಥೆ): ಹೆಚ್ ಯಸ್ ಅರುಣ್ ಕುಮಾರ್

ವಾಸಂತಿ ಮಗಳು  ಮೃದುಲಾ ಗೆ ಫೋನ್ ಮಾಡಿದಳು. "ನಿನ್ನ ಅಣ್ಣ ನ ಲಗ್ನ ನಿಶ್ವಯವಾಗಿದೆ " ಒಂದು ವಾರದ ಮುಂಚೆಯೇ ಬರುವಂತೆ ಆಗ್ರಹ ಮಾಡಿದಳು. ಮೃದುಲಾ  ಬಂದರೆ ಅಮ್ಮ ಅಮ್ಮ ಅಂತ ಹಿಂದೆ  ಮುಂದೆ ಸುತ್ತುತ್ತ ಕೆಲಸಕ್ಕೆ ಸಹಾಯ ಮಾಡುತ್ತಾಳೆ ಎನ್ನಿಸಿತ್ತು. ಅವಳು ಮದುವೆಯಾಗಿ ಹೊರಟುಹೋದ ಮೇಲೆ ಒಂಟಿತನ ಕಾಡುತಿತ್ತು. ಅವಳ ಮದುವೆಯಾಗಿ ಎರಡು ವರ್ಷವಾಗಿದ್ದರೂ ಕೇವಲ ಒಂದುಸಾರಿ ಮನೆಗೆ ಬಂದಿದ್ದಳು. ದೂರದ ಹಳ್ಳಿ. ಬೇಸಾಯದ ಕುಟುಂಬ. ಬಿತ್ತನೆ ಕಾಲ,ಕೊಯ್ಲಿನ ಕಾಲ ಹೀಗೆ ಬಿಡುವಿಲ್ಲದ ಜೀವನ ಅವಳದು … Read more

ಕಿರು ಕತೆಗಳು: ಸಿಂಧುಭಾರ್ಗವ್, ಕೃಷ್ಣವೇಣಿ ಕಿದೂರ್.

ಅಹಂಕಾರವೂ ಕರಗುವುದು. ಆಗರ್ಭ ಶ್ರೀಮಂತನ ಮಗನಿಗೆ ಐಶಾರಾಮಿಯ ಜೀವನ ನಡೆಸಲು ಏನೆಲ್ಲ ಮಾಡಬೇಕೋ ಅದನ್ನು ಚೆನ್ನಾಗಿ ತಿಳಿದಿದ್ದ.. ಕಾರು, ಬಂಗಲೆ ಜೊತೆಗೆ ಆಳುಕಾಳು ಅಲ್ಲದೆ ಕುಡಿತ ದಿನಕ್ಕೊಬ್ಬಳು ದೇಹದಾನ ಮಾಡುವವಳು ಸಿಗುತ್ತಿದ್ದಳು.. ತಂದೆ ರಾಮುವಿನ ಸವೆತ, ಬೆವರ ಹನಿ, ದೇಹದಲ್ಲಿ ಬತ್ತಿ ಹೋದ ರಕ್ತ ಇದಾವುದೂ ಕಣ್ಣಿಗೆ ಕಾಣಿಸುತ್ತಲೇ ಇರಲಿಲ್ಲ..  * ರೈತನಾಗಿದ್ದ ರಾಮುವಿನ ತಂದೆ ತನ್ನ ಕೃಷಿಭೂಮಿಯನ್ನು ಮಗನ ಕೈಗೊಪ್ಪಿಸಿ ಕಣ್ಣುಮುಚ್ಚಿಕೊಂಡರು. ಇದ್ದ ಒಂದು ಎಕರೆ ಜಾಗದಲ್ಲಿ ಮೊದಲು ಕೃಷಿ ಆರಂಭಿಸಿದ್ದ ರಾಮು ದಿನವೂ ತಾನೇ … Read more

ಕಿರು ಲೇಖನಗಳು: ಬಸವರಾಜ ಪಟ್ಟಣಶೆಟ್ಟಿ , ವೇಣುಗೋಪಾಲ್ ಹೆಚ್.

ಕನ್ನಡ ನಾಡಿನ ಅಪರೂಪದ ನೃತ್ಯತಾರೆ ಜ್ಯೋತಿ ಬಳ್ಳಾರಿ ಹಾಗೂ ಕಲಾವಿದರ ತಂಡ ಜ್ಯೋತಿ ಬಳ್ಳಾರಿ ಕರ್ನಾಟಕ ಕಂಡ ಅಪರೂಪದ ನೃತ್ಯತಾರೆ.  ಈ  ತಾರೆ ಹಿಂದೊಮ್ಮೆ ಯಾವ ಪರಿ ಪ್ರೇಕ್ಷಕರಿಗೆ ತಮ್ಮ ನೃತ್ಯದ ಮೋಹಕತೆಯಿಂದ ಹುಚ್ಚು ಹಿಡಿಸಿದ್ದರೆಂದರೆ ಅದನ್ನು ಹಿಂದಿನ ಪ್ರೇಕ್ಷಕರು ಈಗಲೂ ನೆನಪಿಸಿ ಖುಷಿ ಪಡುತ್ತಾರೆ. ಆಶ್ಚರ್ಯವೆಂದರೆ ಈಗ ಕೂಡ ಜ್ಯೋತಿ ಬಳ್ಳಾರಿಯವರು  ಅದೇ ಮೋಹಕತೆಯ ನೃತ್ಯವನ್ನು ಮಾಡಿ  ಪ್ರೇಕ್ಷಕರ ಮನದಲ್ಲಿ ಅಭಿಮಾನದ  ತರಂಗಳನ್ನು  ಎಬ್ಬಿಸುತ್ತಾರೆ. ಮೂಲತಃ ಬಳ್ಳಾರಿಯವರಾದ ಜ್ಯೋತಿಯವರು ಕರ್ನಾಟಕದ ಎಲ್ಲ ವೃತ್ತಿ ರಂಗಭೂಮಿಗಳಲ್ಲಿ  ತಮ್ಮ ಮೋಹಕ … Read more

“ಮನದಾಳ”: ಟಿ.ಎ.ಗೋಪಾಲ 

    ಹಲವು ದಿನದ ಹಂಬಲ, ತಿಳಿಯುವ ಆಸೆ, ಅರಿಯುವ ಬಯಕೆ, ಬಂದನದಿಂದ ಹೊರಬರುವ ಚಿಂತನೆ. ಅದೇನೊ ನನ್ನ ಬೆನ್ನ ಹಿಂದೆ ಬಿದ್ದು ಎಳೆಯುತಿದೆ ಎಂದು ಕೆಲವು ಬಾರಿ ಬಾಸವಾಗುತ್ತದೆ. ಇದೆಲ್ಲವನ್ನು ತಿಳಿದುಕೊಳ್ಳಲು ಒಂದು ದಿನ ನನ್ನನ್ನು ನಾನು ವಿಶ್ಷ್ಲೇಷಿಸಿದೆ, ಹಲವಾರು ಸತ್ಯಾಂಶಗಳು ಕಂಡುಬಂದವು, ಅವು ಮನದಲ್ಲಿ ಗೊಂದಲ, ಜಂಜಾಟ, ಅಸಮಾದಾನ, ಅಶಾಂತಿ, ಉನ್ಮಾದ ಮತ್ತು ಎನೋ ಒಂದು ತರಹದ ಭಯ. ಇವೆಲ್ಲವು ಬೊರ್ಗರೆಯುವ ವೇಗದಲ್ಲಿ ಸಂಚಲಿಸುತ್ತಿವೆ, ಇದನ್ನು ಹಿಡಿದು ನಿಲ್ಲಿಸುವ ಯೋಚನೆ ಆದರೆ ಸಾದ್ಯವಾಗುತ್ತಿಲ್ಲ, ಹಲವು … Read more

ಶತಮಾನದ ಅಧ್ಬುತಗಳಲ್ಲೊಂದು-ಗೋಲ್ಡನ್ ಗೇಟ್ ಬ್ರಿಡ್ಜ್: ಪ.ನಾ.ಹಳ್ಳಿ.ಹರೀಶ್ ಕುಮಾರ್

ಇಲ್ಲೊಂದು ಸೇತುವೆಯಿದೆ. ಇದನ್ನು ನೋಡಿದವರೆಲ್ಲಾ ಇದೊಂದು ಇಪ್ಪತ್ತನೇ ಶತಮಾನದ ಅದ್ಭುತಗಳಲ್ಲೊಂದು ಎಂದು ಉಧ್ಗರಿಸುತ್ತಾರೆ. ಅಲ್ಲದೇ ಇದನ್ನು ಶತಮಾನದ ಅದ್ಬುತಗಳಲ್ಲೊಂದು ಎಂದೂ ಘೋಷಿಸಲಾಗಿದೆ. ಜಗತ್ತಿನ ಮೊದಲ ತೂಗುಸೇತುವೆಯೂ ಇದೇ ಆಗಿದೆ ಎಂದರೆ ಆಶ್ಚರ್ಯವಲ್ಲ. ಸ್ಯಾನ್ ಫ್ರಾನ್ಸಿಸ್ಕೋ ಕೊಲ್ಲಿಯ ಮೇಲಿರುವ ಈ ತೂಗುಸೇತುವೆಯು 1.7 ಮೈಲುಗಳಷ್ಟು ಉದ್ದವಿದ್ದು, ಸ್ಯಾನ್ ಫ್ರಾನ್ಸಿಸ್ಕೋದ ಉತ್ತರ ತುದಿಯನ್ನು ಮರೀನ್‍ಕೌಂಟಿಯ ಸಸಲಿಟೋದೊಂದಿಗೆ ಸೇರಿಸುತ್ತದೆ. ಆಧುನಿಕ ಜಗತ್ತಿನ 7 ಅಧ್ಬುತಗಳಲ್ಲಿ ಗೋಲ್ಡನ್ ಗೇಟ್ ಬ್ರಿಡ್ಜ್ ಕೂಡಾ ಒಂದು. ಸ್ಯಾನ್‍ಫ್ರಾನ್ಸಿಸ್ಕೋ ಕೊಲ್ಲಿಯ ಮೇಲಿರುವ ಈ ತೂಗುಸೇತುವೆ ಮುಖ್ಯವಾಗಿ ಎರೆಡು … Read more

ಆರೋಗ್ಯದ ಮೇಲೆ ಸಕಾರಾತ್ಮಕ ಮನೋಭಾವದ ಪರಿಣಾಮ: ವೈ. ಬಿ. ಕಡಕೋಳ

ಮನುಷ್ಯನ ನಡೆ-ನುಡಿ ಆತನ ಮನೋಭಾವ, ಕ್ರಿಯೆ, ಪ್ರತಿಕ್ರಿಯೆಗಳು ಒಂದೇ ರೀತಿ ಇರುವುದಿಲ್ಲ. ಒಂದು ಸಾಮಾನ್ಯ ಪ್ರಚೋದನೆಗೆ ಹತ್ತಾರು ಜನ ಹತ್ತಾರು ರೀತಿಯ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಬಹುದು. ಉದಾಹರಣೆಗೆ ಒಂದು ಮಗು ಅಳುತ್ತಿದ್ದರೆ ಕೆಲವರು "ಅಯ್ಯೋ ಪಾಪ ಎನ್ನಬಹದು. ಇನ್ನು ಕೆಲವರು “ಛಿ ಏನು ಅನಿಷ್ಟ ಎಷ್ಟು ಅಳುತ್ತೆ” ಎನ್ನಬಹುದು. ಇನ್ನು ಕೆಲವರು “ಪಾಪ ಆ ಮಗುವನ್ನು ರಮಿಸಬೇಕು” ಎನ್ನಬಹುದು. ಒಬ್ಬರು ಮಗುವಿನ ಪಕ್ಕದಲ್ಲಿ ಕುಳಿತು ರಮಿಸಲು ಯತ್ನಿಸಬಹುದು. ಹೀಗೆ ಕೇವಲ ಒಂದು ಘಟನೆ ಹತ್ತಾರು ಜನರಲ್ಲಿ ಹತ್ತಾರು ಯೋಚನೆಗಳನ್ನು … Read more

ಆಧುನಿಕ ಬೆಳವಣಿಗೆಯಿಂದ ಮಾನವೀಯ ಮೌಲ್ಯಗಳ ಅವನತಿ: ಶಿವಣ್ಣ ಎಸ್.ಕೆ. 

ಇಂದು ಆಧುನಿಕತೆಯು ಅತ್ಯಂತ ವೇಗದಲ್ಲಿ ಬೆಳೆಯುತ್ತಿರುವುದು ನಿಜಕ್ಕೂ ಸಂತೋಷದ ವಿಷಯ. ಆದರೆ ಈ ತೀವ್ರಗತಿಯ ಆಧುನಿಕತೆಯ ಬೆಳವಣಿಗೆಯಿಂದಾಗಿ ಭಾರತದಲ್ಲಿ ಆಧುನಿಕತೆಯ ಬಿಸಿ (ಶಾಖ) ಹೆಚ್ಚು ತಟ್ಟಿರುವುದು ನಗರ/ಪಟ್ಟಣಗಳಲ್ಲಿ ಎಂದು ಹೇಳಬಹುದು. ಇಂದು ಸಾಮಾಜಿಕ ಸಂಬಂಧಗಳು ಗುರು-ಹಿರಿಯರು, ತಂದೆ-ತಾಯಂದಿರು, ಸ್ತ್ರೀಯರು ತಮ್ಮ ಸ್ಥಾನಮಾನಗಳನ್ನು ಕಳೆದುಕೊಳ್ಳುತ್ತಿರುವುದು ನಿಜಕ್ಕೂ ವಿಷಾದನೀಯ ಸಂಗತಿಯಾಗಿದೆ. ಸ್ವದೇಶಿ ಮತ್ತು ವಿದೇಶಿ ಚಾನೆಲ್‍ಗಳು ಮನೋರಂಜನೆಯ ಹೆಸರಿನಲ್ಲಿ ಬಿತ್ತರಿಸುತ್ತಿರುವ ಅಶ್ಲೀಲ ಚಿತ್ರಗಳಿಂದಾಗಿ ಭಾರತೀಯ ಸಂಸ್ಕøತಿಯ ಸಂಕೇತಗಳಾದ ಸೀರೆ, ಕುಂಕುಮ, ಹಸಿರು ಬಳೆಗಳು ಇಂದು ಕಾಣಸಿಗುವುದು ಅಪರೂಪವಾಗಿದೆ. ಹೀಗೆಯೇ ಮುಂದುವರೆದರೆ … Read more

ಭರತ ಮಾತೆಯ ಪುಣ್ಯ ಭೂಮಿಯನ್ನು ರಕ್ತದಿಂದ ತೋಯಿಸದಿರಿ ಸಹೋದರರೆ: ಸಿದ್ದುಯಾದವ್ ಚಿರಿಬಿ…

ನಿನ್ನೆ ಒಂದು ಕೆಲಸದ ವಿಷಯವಾಗಿ ಕೂಡ್ಲಿಗಿಯ ಸಾರ್ವಜನಿಕ ಅಸ್ಪತ್ರೆಗೆ ಹೋಗಿದ್ದೆ. ನಾನು ಹೋದಾಗ ಡಾಕ್ಟರ್ ಬಂದಿರಲಿಲ್ಲ. ಅದಕ್ಕಾಗಿ ಅಸ್ಪತ್ರೆಯ ಹೊರಗಡೆ ಕುಳಿಯು ಕಾಯ್ತಿದ್ದೆ. ಒಬ್ಬ ವ್ಯೆಕ್ತಿ ಬಂದು "ನೀವು ಸಿದ್ದುಯಾದವ್ ಅಲ್ವಾ?" ಅಂದ. 'ಹೌದು' ಎಂದೆ. ಅವ್ನು ಮರುಮಾತನಾಡದೆ ಯಾರ್ಗೊ ಪೋನ್ ಮಾಡ್ತ ಹೊರಟರಹೋದ. ಸ್ವಲ್ಪ ಸಮಯದ ನಂತರ ಇಬ್ಬರು ಬೈಕ್ ಮೆಲೆ ಬಂದು " ಸಿದ್ದುಯಾದವ್ " ಅಂದ್ರು ಹೌದು ಎಂದೆ. 'ನಿಮ್ಮ ಹತ್ತಿರ ಸ್ವಲ್ಪ ಮಾತಾಡ್ಬೆಕು ಬರ್ತಿರಾ!' ಅಂದ್ರು. ಯಾಕೆ ಎಂದೆ. ಪ್ಲೀಜ್ ಬನ್ನಿ … Read more

ದೋಸ್ತಿ ಖಾತೆಯವರಿಂದ ಕತೆ ಮಾತು ಆಹ್ವಾನ

ಬೆಳಗಾವಿಯಲ್ಲಿ ಒಂದಷ್ಟು ಕತೆಗಾರರು ಸೇರಿ ಒಬ್ಬರ ಕತೆಗಳ ಬಗ್ಗೆ ಇನ್ನೊಬ್ಬರು ಮಾತನಾಡುವ ವಿಶಿಷ್ಟ "ಕತೆ ಮಾತು" ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ.  ಕಾರ್ಯಕ್ರಮದ ಆಹ್ವಾನ ಪತ್ರಿಕೆಯನ್ನು ಜೊತೆಗೆ ಲಗತ್ತಿಸಲಾಗಿದೆ.   ಕಾರಣ, ಸಹೃದಯರಾದ ತಾವು ಕಾರ್ಯಕ್ರಮಕ್ಕೆ ಆಗಮಿಸಬೇಕಾಗಿ ವಿನಂತಿ. ಕಾರ್ಯಕ್ರಮದ ವಿವರಗಳು ಕೆಳಗಿನಂತಿವೆ. 13ನೇ ನವೆಂಬರ್ 2016,  ಕೇಂದ್ರ ಗ್ರಂಥಾಲಯ, ಡಿ.ಸಿ. ಕಂಪೌಂಡ್, ಬೆಳಗಾವಿ ಕಾರ್ಯಕ್ರಮದ ಆಶಯ: ಸಮಕಾಲೀನ ಕತೆಗಾರ ಗೆಳೆಯರು ಕೂತು ಪರಸ್ಪರರ ಕೃತಿಗಳ ಬಗ್ಗೆ ಅನಿಸಿಕೆ ಹಂಚಿಕೊಳ್ಳುವ ತನ್ಮೂಲಕ ಹೊಸ ಹೊಳಹುಗಳನ್ನು ಅರಿಯುವ ಚಿಕ್ಕ ಪ್ರಯತ್ನ.  ಒಬ್ಬರು … Read more

ಅಪ್ಪ ಅಂದ್ರೆ ಆಕಾಶ…: ನಾ’ನಲ್ಲ’

ಏಷ್ಟೋ ದಿನಗಳ ಹಿಂದೆ ಓದಬೇಕು ಅಂತ ತಂದಿದ್ದ ಪುಸ್ತಕವನ್ನು ಓದೋಕೆ ಇವತ್ತು ಸಮಯ ಕೂಡಿ ಬಂದಿತ್ತು. ಓದುತ್ತ ಹೋದಂತೆ ಒಂದಕ್ಕಿಂತ ಒಂದು ಲೇಖನಗಳು ಮನಸ್ಸಿನ ಆಳಕ್ಕೆ ಇಳಿಯತೊಡಗಿದವು. ಒಂದು ಲೇಖನದಲ್ಲಿ ಲೇಖಕರು ಹೇಳಿದಂತೆ "ಅಪ್ಪ ಅಂದ್ರೆ ಆಕಾಶ" ಎನ್ನುವುದು ಮನದಟ್ಟಾಗಲು ಬಹಳ ಸಮಯ ಬೇಕಾಗಲಿಲ್ಲ. ಹೌದು, ನಿಜವಾಗಲೂ ಅಪ್ಪ ಅಂದ್ರೆ ಆಕಾಶ. ನಾವು ಚಿಕ್ಕವರಿದ್ದಾಗ ಒಗಟುಗಳಿಗೆ ಉತ್ತರಿಸುವ ಪಂದ್ಯವಾಡುವಾಗ ಅನೇಕ ಬಾರಿ ಕೇಳಲ್ಪಟ್ಟ ಒಗಟೆಂದರೆ "ಅವ್ವನ ಸೀರೆ ಮಡಿಚೋಕಾಗಲ್ಲ, ಅಪ್ಪನ ರೊಕ್ಕ ಎನಿಸೊಕಾಗಲ್ಲ" ಅನ್ನೋದು. ಅದಕ್ಕೆ ಉತ್ತರ … Read more

ಕಿರು ಲೇಖನಗಳು

ಗೆಳೆತನ ಅಂದು ಡಿಗ್ರಿ ಮೊದಲ ವರ್ಷದ ಪ್ರಾರಂಭ ದಿನ, ನನ್ನವರೂ ಯಾರೂ ಇಲ್ಲವೆಂಬ ಕೊರಗು ಆಕಾಶದಲ್ಲಿನ ಒಂಟಿ ಹಕ್ಕಿಯ ತಳಮಳದಂತೆ ನನ್ನ ಮನಸ್ಸನ್ನು ಭಾರವಾಗಿಸುತ್ತಿತ್ತು. ಅಪರಿಚಿತ ಮುಖಗಳ ದರ್ಶನ.. ಗೆಳೆಯರಿಲ್ಲದ ನೋವು… ಆಗ ಕಾಲೇಜಿನ ಮೊದಲ ಮಹಡಿಯಲ್ಲಿ ನನ್ನದೇ ಭಾವಗಳ ಭಾರ ಹೊತ್ತು ಆರಡಿ ಎತ್ತರದ ತೆಳ್ಳಗೆ ಮೈಕಟ್ಟಿನ ಕೋರಳಲ್ಲಿ ಸೈಡ ಬ್ಯಾಗ ಹಾಕಿಕೊಂಡ ನಿಂತಿದ್ದ ಹೊಸ ಮುಖದವನ್ನು ಮಾತನಾಡಿಸಿದೆ, ಪರಸ್ಪರ ಪರಿಚಯ ಮಾಡಿಕೊಂಡೆ.  ಮಾತುಗಳು ಸಾಗಿ ಆತ ಬೆಳಗಾವಿಯನೆಂದು ಹೇಳಿದ, ಅವರ ತಂದೆಯ ವರ್ಗವಾಗಿ ಆ … Read more

ಬೆಳಕು: ರೋಹಿತ್ ಶೆಟ್ಟಿ ಮೇಲಾರಿಕಲ್ಲ್

'ಬೆಳಕು' ಅನಂತ. ಅನಿಯಮಿತ. ಅದಕ್ಕೆ ಗಡಿ-ಗೆರೆಗಳಿಲ್ಲಾ. ನಮ್ಮ ಬೇಕುಗಳ ಸರತಿಸಾಲಿನ ಮೊದಲಿನ ಶಬ್ದವೆ ಬೆಳಕು ಎನ್ನಬಹುದು ಅಲ್ವ. ಬೆಳಕು ಏ೦ಧಾಕ್ಷಣ ಯಾರ ಮುಖಾರವಿ೦ದ ಅರಳದು ಹೇಳಿ? ಬೆಳಕ ವರ್ಣಿಸದ ಕವಿಯಿಲ್ಲ, ಬಣ್ಣಸದ ಮಾತುಗಾರನಿಲ್ಲಾ, ಬೆಳಗದ ಮನುಷ್ಯನಿಲ್ಲಾ, ಮನುಕುಲವಿಲ್ಲಾ, ಅದು ಜಗತ್ತಿನ ಚೈತನ್ಯದ ಸ೦ಕೇತ. ಪ್ರಾಣಿಪಕ್ಷಿ, ಸಸ್ಯಸ೦ಕುಲದ ಜೀವಾದಾರ, ಜೀವವು ಹೌದು! ಬೆಳಕು ಗೋಚರ ರೂಪದಲ್ಲಿದ್ದರೂ ಅಗೋಚರ ಸ್ಥಿತಿಯ ಪ್ರತಿಪಾದಕ. ಜಗತ್ತಿನ ಎಲ್ಲಾ ಆಗು ಹೊಗುಗಳಿಗು ಕಾರಣೀಕರ್ತ. ಸುಡುವುದು, ಬೆಳಗುವುದು ಎಲ್ಲವು ಅದೇ. ಕಣ್ಮುಚ್ಚಿದರೂ ಕಣ್ತೆರೆದರೂ ಕಾಣುವುದು ಬೆಳಕೆ. … Read more

ವಿಶೇಷತೆಗಳ ಆಗರ;  ಗೂಳೂರು ಗಣೇಶ: ದಂಡಿನಶಿವರ ಮಂಜು

                                ಗೂಳೂರು ಗಣೇಶನಿಗೆ ಸಾವಿರಾರು ವರ್ಷಗಳ ಇತಿಹಾಸ ಇದೆ. ಈ ಗಣಪತಿ ಆಕಾರ ಮತ್ತು ಗಾತ್ರಗಳಲ್ಲಿ ತನ್ನದೇ ಆದ ವಿಶೇಷ ಶೈಲಿಯನ್ನು ಹೊಂದಿದೆ. ಎಲ್ಲಾ ಕಡೆಗಳಲ್ಲಿ ಗಣೇಶ ಚತುರ್ಥಿಯ ದಿನ ಗಣಪತಿಯನ್ನು ಪ್ರತಿಷ್ಠಾಪಿಸಿದರೆ ಗೂಳೂರಿನಲ್ಲಿ ಅಂದು ಮಣ್ಣಿನಿಂದ ಗಣಪತಿ ಮೈಳೆದಯಲು ಆರಂಭಿಸುತ್ತಾನೆ. ದೀಪಾವಳಿ ಹಬ್ಬದ ದಿನ ಈ ಗಣೇಶ ಪ್ರಥಮ ಪೂಜೆಗೆ ಸಿದ್ಧಗೊಳ್ಳುತ್ತಾನೆ. ಅಂದಿನಿಂದ ನಲವತ್ತೈದು … Read more

ರಾಗಿ’ಮುದ್ದೆ’ ತಿಂದವ ನಿರೋಗಿ. .: ಪ. ನಾ. ಹಳ್ಳಿ. ಹರೀಶ್ ಕುಮಾರ್

ಕನಕದಾಸರು ರಚಿಸಿದ ‘ರಾಮಧಾನ್ಯಚರಿತೆ’ ಯನ್ನು ನೀವು ಓದಿರಬೇಕು. ಅದರಲ್ಲಿ ಬರುವ ಅಕ್ಕಿ ಹಾಗೂ ರಾಗಿ ಧಾನ್ಯಗಳ ನಡುವಿನ ವಾದವಿವಾದ ಹಾಗೂ ಅದು ರಾಮನ ಆಸ್ಥಾನದಲ್ಲಿ ಬಗೆಹರಿದ ವಿಚಾರ,ಅಲ್ಲದೇ ಅಕ್ಕಿಗಿಂತಲೂ ರಾಗಿಯೇ ಶ್ರೇಷ್ಠ ಧಾನ್ಯ ಎಂದು ರಾಮನು ತೀರ್ಪಿತ್ತಿದ್ದನ್ನು ಓದಿ ಅಥವಾ ಕೇಳಿ ತಿಳಿದಿರಬೇಕಲ್ಲವೇ?. ಈಗ ಅದೆಲ್ಲಾ ಏಕೆ ಎಂದಿರಾ? ಕಾರಣ ಇದೆ. ನಾವೀಗ ಧಾನ್ಯಗಳಲ್ಲೇ ಶ್ರೇಷ್ಠವಾದ ರಾಗಿ ಹಾಗೂ ಅದರ ಉತ್ಪಾದಿತ ಆಹಾರ ಪದಾರ್ಥವಾದ ರಾಗಿಮುದ್ದೆಯ ಬಹುಪಯೋಗಿ ಗುಣಗಳ ಬಗ್ಗೆ ಚರ್ಚಿಸೋಣ. . ತನ್ನಲ್ಲಿ ಅಡಗಿಸಿಕೊಂಡಿರುವ ಪೋಷಕಾಂಶಗಳ … Read more

ಗೆಳೆಯನಿದ್ದರೆ ಕರ್ಣನಂತಿರಬೇಕು: ಸಿದ್ದುಯಾದವ್ ಚಿರಿಬಿ

ಅವನು ಕರ್ಣ. ಆತ ಕುಂತಿಯ ಮೊದಲ ಮಗ. ಪಾಂಡವರ ಹಿರಿಯಣ್ಣ. ಪರಶುರಾಮರ ಮೆಚ್ಚಿನ ಶಿಷ್ಯ. ದುರ್ಯೋಧನನ ಆಪ್ತಮಿತ್ರ. ಅರ್ಜುನನ ಪರಮಶತ್ರು. ಅವನು, ಭೀಷ್ಮರ ಕಣ್ಣಲ್ಲಿ ಸಿಡಿಮಿಡಿ ಉಂಟುಮಾಡುವ ಸುನಾಮಿ. ಭೀಮನ ಪಾಲಿಗೊಂದು ಅಸೂಯೆ. ಕರ್ಣನೆಂದರೆ ಅಷ್ಟೇ ಅಲ್ಲ. ಮಹಾಭಾರತದ ಮಹಾನ್ ಗ್ರಂಥದಲ್ಲಿ ತನ್ನವರಿಂದಲೆ ಆತಾಷೆ, ಅವಮಾನ, ಕಿಳಿರಿಮೇಗಳ ಚಕ್ರಯೋಹದೊಳಗೆ ಸಿಲುಕಿ ಬಳಲಿ ಬೆಂದ ಆತಭಾಗ್ಯದಾತ. ಆತ, ದ್ರೌಪದಿಯಂಥ ದ್ರೌಪದಿಯ ಎದೆಯಲ್ಲೂ ಆಸೆಯ ತರಂಗ ಎಬ್ಬಿಸಿದ ಸುಂದರಾಂಗ. ಧಾನಶೋರ, ಅಂಗರಾಜ, ಹುಟ್ಟಿನಿಂದ ಕ್ಷತ್ರಿಯನಾಗಿದ್ದರೂ, ಎಲ್ಲರಿಂದಲೂ ಸೂತಪುತ್ರ ಎಂದು ಕರೆಸಿಕೊಂಡ … Read more

ಶಿಕ್ಷಣ (ಭಾಗ 2): ಭಾರ್ಗವ ಎಚ್.ಕೆ.

ಇಲ್ಲಿಯವರೆಗೆ 4    ಬೋಧನಾ ಕಲೆ ಪ್ರಸ್ತುತ ಸನ್ನಿವೇಶದಲ್ಲಿ ಮಕ್ಕಳಿಗೆ ಯಾವ ರೀತಿ ಶೈಕ್ಷಣಿಕ ಬೋಧನೆ ಮಾಡಬೇಕೆಂಬ ಹೊಸ ಹೊಸ ಆಲೋಚನೆಗಳ ಮತ್ತು ಜಿಜ್ಞಾಸೆಗಳ ಮಧ್ಯೆ ಬೋಧನಾ ಕಲೆಯ ಮಹತ್ವದ ಮನವರಿಕೆಗೆ ಇದು ಸುಸಂದರ್ಭ. ಶಿಕ್ಷಕನ ಬೋಧನೆ ಮಾಡುವ ಶೈಲಿಯು ಮಕ್ಕಳಿಗೆ ಪೂರಕವಾಗಿರಬೇಕು. ವಿದ್ಯಾರ್ಥಿಗಳಿಗೆ ಪಾಠದ ವಿವರಣೆ ಸರಳವಾಗಿ ತಿಳಿಯುವಂತಾಗಬೇಕು. ಶಿಕ್ಷಕರಾದ ನಾವುಗಳು ದಿನಾಲು ಅಪಡೇಟ್ ಆಗಿರಬೇಕು. ಅವುಟುಡೇಟೆಡ್ ಆಗಬಾರದು. ಕಲಿಯಲು ನಿರಂತರ ಉತ್ಸಾಹವುಳ್ಳವರು ಮಾತ್ರ್ರ ಕಲಿಸಲು ಯೋಗ್ಯರು ಎಂದರೆ ತಪ್ಪಾಗಲಾರದು. ಒಬ್ಬ ವಿದ್ಯಾರ್ಥಿಯ ಕಲಿಕಾ ಮಟ್ಟವು … Read more

ಯಾರಿಂದ, ಯಾರಿಗೆ, ಯಾತಕ್ಕಾಗಿ ಈ ವಶೀಕರಣ?: ಕೃಷ್ಣವೇಣಿ ಕಿದೂರ್, ಇಚ್ಲಂಪಾಡಿ

ಸ್ತ್ರೀ, ಪುರುಷ ವಶೀಕರಣ ಮಾಡಿಕೊಡುವವರು ಮಾಧ್ಯಮಗಳಲ್ಲಿ ಜಾಹೀರಾತುಗಳ ಮೂಲಕ ಹೆಚ್ಚಾಗಿ ಯುವಜನರನ್ನು ಸೆಳೆದುಕೊಳ್ಳುವುದನ್ನು ಗಮನಿಸಿದರೆ ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಇರುತ್ತಾರೆ ಅನ್ನುವ ಮಾತು ಅಪ್ಪಟ ಸತ್ಯ. ವಾರ್ತಾಮಾಧ್ಯಮಗಳಲ್ಲಿ ನಿತ್ಯವೂ ನಾನಾ ತರಹದ ಆಮಿಷವೊಡ್ಡಿ ಗಾಳಕ್ಕೆ ಸಿಲುಕಿಸುತ್ತಾರೆ. ಮೀನು ಹಿಡಿಯಬೇಕಾದರೆ ಗಾಳಕ್ಕೆ ಎರೆಹುಳ ಸಿಕ್ಕಿಸದೆ ಹೋದರೆ ಅದು ಬಾರದು. ಯುವಜನರನ್ನು ಮಾತ್ರವಲ್ಲ; ಈ ವಶೀಕರಣದ ಮೂಲಕ ಬಯಸಿದವರನ್ನು, ಸುಲಭವಾಗಿ ವಶ ಮಾಡಿಕೊಳ್ಳಬಹುದು ಎನ್ನುವ ಆಸೆ ಅನೇಕ ಜನರನ್ನು ಪತಂಗದಂತೆ ಮುಕುರಿ ಬೀಳಿಸುತ್ತದೆ. ಇದಕ್ಕೆ ವಯಸ್ಸಿನ … Read more

ಶಿಕ್ಷಣ: ಭಾರ್ಗವ ಎಚ್.ಕೆ.

1 ಶಿಕ್ಷಣದ ಉದ್ದೇಶವಾದರು ಏನು ? ಇಂದಿನ ಆಧುನಿಕ ಯುಗದಲ್ಲಿ ಶಿಕ್ಷಣವಂತರು ಸಮಾಜದ ಉದ್ಧಾರಕ್ಕೆ ತಮ್ಮ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ. ಇನ್ನು ಕೆಲವರು ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸಕ್ಕೂ ಕೈಹಾಕಿದ್ದಾರೆ.  ಉದಾಹರಣೆಗೆ, ಗೂಗಲ್‍ನಲ್ಲಿ ಬಾಂಬ್ ತಯಾರಿಸುವ ಬಗೆಯನ್ನು ಸಾವಿರಾರು ಯುಆರ್‍ಎಲ್‍ಗಳು ಮಾಹಿತಿಗಳನ್ನು ನೀಡುತ್ತಿವೆ. ಅದೇ ರೀತಿಯಾಗಿ ಗೂಗಲ್ ಸರ್ಚ್ ಇಂಜಿನ್ ಒಳ್ಳೆಯದಕ್ಕೂ ಬಳಕೆಯಾಗುತ್ತಿದೆ. ವಿಪರ್ಯಾಸವೆಂದರೆ, ಈ ಜಾಲತಾಣಗಳನ್ನೆಲ್ಲ ಜಾಲಾಡುವ ವರ್ಗ ಮಾತ್ರ ಶಿಕ್ಷಣವಂತರು. ಶಿಕ್ಷಣದ ಮೂಲ ಉದ್ದೇಶವು ಕೆಲವು ಸಮಾಜಘಾತುಕರ ತಲೆಗೆ ಹೊಕ್ಕಿಲ್ಲ. ಪರಿಜ್ಞಾನದ ಪಾರವೇ ಇಲ್ಲದಷ್ಟು … Read more