ಅಳಿವಿನ ಅಂಚಿನಲ್ಲಿ ಮಾನವ ಕುಲ…? !: ಶಶಿಧರ ರುಳಿ
ರಸ್ತೆಯಲ್ಲಿ ಹೋಗುವಾಗ ಗಿಡದಲ್ಲಿಯ ಹೂವೊಂದು ಕಮರಿ ಹೋಗಿದ್ದು ಕಂಡಿತು. ಮುದುಡಿದ ಆ ತಾವರೆ ಕದಡಿದ ನನ್ನ ಮನಸ್ಸಿಗೆ ಸಾಕ್ಷಿಯಾಗಿ ನಿಂತಂತೆ ತೋರುತ್ತಿತ್ತು. ರಣ ಬಿಸಿಲಿನ ಹೊಡೆತಕ್ಕೆ ಬಾಡಿಹೋದ ಅದರ ಸುಂದರ ಪಕಳೆಗಳು ಯಾವುದೋ ಒಂದು ಕಾಲದಲ್ಲಿ ವೈಭವೋಪಿತ ಕಟ್ಟಡವಾಗಿದ್ದು ಈಗ ಬಿದ್ದುಹೋದ ಗೋಡೆಗಳು ಅದರ ಪಳಿಯುಳಕೆಯಂತೆ ಕಂಡವು. ಬೆಳಗಿನ ಜಾವ ಅರಳಿ ಸಂಜೆಯಾಗುತ್ತಿದ್ದಂತೆ ನಿಸ್ತೇಜವಾದ ಹೂವಿನ ಸುಂದರ ತನು, ಜೀವನದ ಕ್ಷಣಿಕತೆಯ ನೀತಿ ಹೇಳುತ್ತಿರುವಂತೆ ಅನಿಸಿತು. ಈ ಮೂಲಕ ಬದುಕಿನ ಪಯಣ ರಭಸದ ಯಾತ್ರೆ ಎಂಬ ಸತ್ಯವನ್ನು … Read more