“ವಾರಿಸ್ ಡಿರೀ: ಮರುಭೂಮಿಯ ಒಂದು ಹೂವಿನ ಕಥೆ” (ಕೊನೆಯ ಭಾಗ): ಪ್ರಸಾದ್ ಕೆ.
ಇಲ್ಲಿಯವರೆಗೆ…. 1991 ರಲ್ಲಿ ನ್ಯೂಯಾರ್ಕ್ ಗೆ ತೆರಳಿದ ವಾರಿಸ್ ನಿರೀಕ್ಷೆಗೂ ಮೀರಿ ಯಶಸ್ವಿಯಾಗುತ್ತಾರೆ. ರೆವಲಾನ್, ಲೆವಿಸ್, ಲಾರಿಯಲ್, ಬೆನೆಟನ್ ಮುಂತಾದ ಪ್ರತಿಷ್ಠಿತ ಕಂಪನಿಗಳ ಉತ್ಪನ್ನಗಳ ರಾಯಭಾರಿಯಾಗಿ ವಾರಿಸ್ ಮಿಂಚುತ್ತಾರೆ. ಮೂರು ತಿಂಗಳಲ್ಲೇ ವಾರಿಸ್ ರ ಚಿತ್ರವನ್ನು ಹೊತ್ತ ದೈತ್ಯ ಜಾಹೀರಾತು ಫಲಕಗಳು ವಿಶ್ವದಾದ್ಯಂತ ಬಿಡುಗಡೆಯಾಗಿ ಎಲ್ಲೆಲ್ಲೂ ರಾರಾಜಿಸತೊಡಗುತ್ತವೆ. ಸುಗಂಧ ದ್ರವ್ಯಗಳು, ಆಭರಣಗಳು, ಮದ್ಯತಯಾರಿಕೆ, ಬಟ್ಟೆಗಳು ಹೀಗೆ ನಾನಾ ಕ್ಷೇತ್ರಗಳಲ್ಲಿ ತನ್ನದೇ ಛಾಪನ್ನು ಮೂಡಿಸಿರುವ ದೈತ್ಯ ಬಹುರಾಷ್ಟ್ರೀಯ ಕಂಪೆನಿಗಳು ತಮ್ಮ ಉತ್ಪನ್ನಗಳ ರಾಯಭಾರಿಯನ್ನಾಗಿಸಿಕೊಳ್ಳಲು ವಾರಿಸ್ ರ ಬೆನ್ನು ಬೀಳುತ್ತವೆ. … Read more