ಗಾಂಧೀ ಬಾಂಧವ್ಯ: ಎಸ್. ಜಿ. ಸೀತಾರಾಮ್, ಮೈಸೂರು.
ಗಾಂಧೀ ಎಂದೊಡನೆ ಜನರು ಗಾಂಧೀಜೀಯವರನ್ನು ನೆನೆದು ಸುಮ್ಮನಾಗುವರೇ ಹೊರತು, ಅವರ ಗಾಂಧೀ ನಾಮಧಾರಿ ಬಂಧುಗಳನ್ನಾಗಲೀ ಅಥವಾ ಗಾಂಧೀ ನಾಮದ ಮೂಲವನ್ನಾಗಲೀ ಸಾಮಾನ್ಯವಾಗಿ ಹುಡುಕಲೆತ್ನಿಸುವುದಿಲ್ಲ. ಹಾಗೆ ಹುಡುಕಲು ಹೊರಟಲ್ಲಿ, ಗಾಂಧೀ ಎಂಬುವ ಪದ ಗಂಧ ಎಂಬ ಶಬ್ದದಿಂದ ಬಂದಿದ್ದು, ಗಂಧದ ವ್ಯಾಪಾರಿಗಳನ್ನು ಹೀಗೆ ಕರೆಯುತ್ತಿದ್ದರೆಂಬುದನ್ನು ತಿಳಿದು ಶುರುವಿನಲ್ಲೇ ಅಚ್ಚರಿಯಾಗುತ್ತದೆ. ಹಾಗೆಯೇ ಮುಂದುವರಿದರೆ, ಗಾಂಧೀಜೀಯವರಿಗೆ ಮುಂಚೆಯೇ ಇನ್ನೊಬ್ಬ ವಿಶ್ವವಿಖ್ಯಾತ ಗಾಂಧೀ ಇದ್ದರೆಂದು ತಿಳಿದು ಕುತೂಹಲ ಮತ್ತಷ್ಟು ಕೆರಳುತ್ತದೆ. ಇವರೇ ಬ್ಯಾರಿಸ್ಟರ್ ಮತ್ತು ಬಹುಧರ್ಮ ವಿದ್ವಾಂಸ ವೀರ್‌ಚಂದ್ ರಾಘವ್‌ಜೀ ಗಾಂಧೀ (೧೮೬೪-೧೯೦೧). … Read more