ಯಶೋಧರ ಚರಿತದ ಸಂಕಲ್ಪಹಿಂಸೆಯ ಬಹುರೂಪಗಳು : ದೊರೇಶ ಬಿಳಿಕೆರೆ

      ಜನ್ನನ ಯಶೋಧರ ಚರಿತೆ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ವಿಭಿನ್ನವಾದ ಕೃತಿ. ಕಾವ್ಯದ ವಸ್ತು ಮತ್ತು ರೂಪದಲ್ಲೂ, ಅಭಿವ್ಯಕ್ತಿಯ ಸ್ವರೂಪದಲ್ಲೂ, ಕಾವ್ಯೋದ್ಧೇಶದಲ್ಲೂ ಇದೊಂದು ಭಿನ್ನ ದಾರಿಯನ್ನೇ ತುಳಿದದೆ. ಸಾಂಪ್ರದಾgಯಿಕ ಜೈನಕಾವ್ಯಗಳಿಗಿಂತಲೂ ಮಿಗಿಲಾಗಿ ಜೀವದಯೆ ಜೈನಧರ್ಮಂ ಅನ್ನುವ ಆಶಯದೊಂದಿಗೆ ಇಡೀ ಕಾವ್ಯ ಕಂದಪದ್ಯಗಳಲ್ಲಿಯೇ ರಚಿತವಾಗಿದೆ. ಬೆರಳೆಣಿಕೆಯಷ್ಟು ವೃತ್ತಗಳಿವೆ. ಸಮಕಾಲೀನ ಸಂದರ್ಭದಲ್ಲಿ ಜರುಗುತ್ತಿದ್ದ ಧಾರ್ಮಿಕ ಮತ್ತು ರಾಜಕೀಯ ಪಲ್ಲಟಗಳಿಂದಾಗಿ ಜನ್ನ ಅನುಸರಿಸಿದ ಮತ ಪ್ರತಿಪಾದನೆಯ ಮಾರ್ಗ ಆ ಕಾಲದ ಸರಿದಾರಿ ಎನಿಸಿತು. ಈ ಕೃತಿಯ ಮತಪ್ರತಿಪಾದನೆಯ ತತ್ವವನ್ನು … Read more

ಕದ್ದು ತಿನ್ನುವ ರುಚಿ: ಸುನೀತಾ ಕುಶಾಲನಗರ

ನಾನು ಕುಳಿತಿದ್ದ ರೈಲು ಹೊರಡಲು ಇನ್ನೂ ಸಮಯವಿತ್ತು. ಜನರು ಹತ್ತುವ ಇಳಿಯುವ ಗಜಿಬಿಜಿಯ ಗಲಾಟೆ ಕಡೆ ಕಣ್ಣಾಯಿಸಿದೆ. ಕೆಲವರು ಬೋಗಿಯೊಳಗೆ ತಮ್ಮ ಆಸನ ಹುಡುಕುತ್ತಿದ್ದಾರೆ. ಮತ್ತೆ ಕೆಲವರು ತಮ್ಮ ಲಗೇಜು ಇಡುವ ಭರದಲ್ಲಿದ್ದಾರೆ. ಕೆಲವರ ಬ್ಯಾಗುಗಳನ್ನು ಅಪ್ಪರ್ ಬರ್ತ್‍ನಲ್ಲಿಡುತ್ತಿದ್ದಾರೆ. ಇನ್ನೂ ಕೆಲವರು ಇಡೀ ಮನೆ ಖಾಲಿ ಮಾಡಿ ಬಂದಷ್ಟು ಲಗೇಜ್ ತಂದು ಇಡಲು ಸ್ಥಳವಿಲ್ಲದೆ ಪೇಚಾಡುತ್ತಿದ್ದಾರೆ. ಈ ಎಲ್ಲಾ ಗಲಾಟೆಯ ಮಧ್ಯೆಯೂ ಸೀಬೆಬುಟ್ಟಿ ಹಿಡಿದ ಹುಡುಗಿಯೊಬ್ಬಳು ತೂರಿ ಬಂದಳು. ಅವಳು ಮಾರಲು ತಂದ ಬುಟ್ಟಿಯೊಳಗೆ ಬಿಸಿಲಿಗೆ ಬಾಡಿ … Read more

  ‘ಬಿ, ಎಡ್ನಲ್ಲಿ ಒಂದು ದಿನ’: ಯಲ್ಲಪ್ಪ ಹಂದ್ರಾಳ

ನಾಳೆ "ಕುಮಾರಗಂಧರ್ವ ಹಾಲ್ ನಲ್ಲಿ (ಬೆಳಗಾವಿ) ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಶಕ್ತರು ಭಾಗವಹಿಸಬೇಕು ಮತ್ತು ಆಸಕ್ತರು ಕಾರ್ಯಕ್ರಮವನ್ನು ವೀಕ್ಷಿಸಬೇಕು. ಒಟ್ಟಿನಲ್ಲಿ ಎಲ್ಲರೂ ಅಲ್ಲಿರಬೇಕು'' ಎಂದು ಪ್ರಿನ್ಸಿಪಾಲರಾದ ಶ್ರೀ ಬಿ. ಮಲ್ಲಿಕಾರ್ಜುನ ಸರ್ ಅವರು ಗಂಭೀರವಾಗಿ ಹೇಳಿದಾಗ ರೋಮಾಂಚನವಾಯಿತು. ಏಕೆಂದರೆ ಬಿ. ಎಡ್ ನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಅಂದ್ರೆ ಮರುಭೂಮಿಯಲ್ಲಿ ಸಿಗುವ ಓಯಾಸಿಸ್ ಇದ್ದಹಾಗೆ. ಅದೂ ಕೆ. ಡಿ ದೇಶಪಾಂಡೆ ಮತ್ತು ಆನಂದ ಅಪ್ಪುಗೋಳ್(ಧರ್ಮದೇವತೆ, ನಂತರ ಸಂಗೊಳ್ಳಿರಾಯಣ್ಣ ಸಿನೆಮಾ ಖ್ಯಾತಿಯ)ಅವರುಗಳು ನಡೆಸುವ ಕಾರ್ಯಕ್ರಮ. ಸರಿ, … Read more

unsung hero: ವಿಶ್ವಾಸ್ ವಾಜಪೇಯಿ

ಅಪ್ಪ, ತಂದೆ, ಬಾಬಾ.. ಈ ಎರಡಕ್ಷರದ ಮಹತ್ವ. ಈ ಸಂಬಂಧದ ಅರ್ಥ ತಿಳಿದುಕೊಳ್ಳೋದು ಎಷ್ಟೋ ಜನರಿಂದ ಬಹುಷಃ ಆಗಂಗೇ ಇಲ್ಲಾ.. ಅಂಥವರಾಗ ನಾನೂ ಒಬ್ಬ ಎಷ್ಟಾದ್ರೂ ಹಿರಿ ಮಗ ನೋಡ್ರಿ, ಅವ್ವನ ಮ್ಯಾಲೇ ಪ್ರೀತಿ ಜಾಸ್ತಿ ಎಲ್ಲಾರೂ ಅಂತಾರ ತಾಯಿಯಾದಮೇಲೆ ಹೆಣ್ಣೆಗೆ ಎರಡನೇ ಜೀವ ಸಿಗ್ತದ ಅಂತ, ಮತ್ತ ಅಪ್ಪಗ? ಅವನ ಬಗ್ಗೆ ಯಾರೂ ಜಾಸ್ತೀ ಮಾತಾಡಲೇ ಇಲ್ಲ ಯಾಕಂದ್ರ ಅವರ ಜೀವನದಾಗ ಅಪ್ಪನ ‘ರೋಲ್’ ಯಾವತ್ತೂ, ಯಾರಿಗೂ ಕ್ಲಿಯರ್ ಆಗ್ಲೇ ಇಲ್ಲ ಎಲ್ಲರ ಜೀವನದ ಕಥಿಯೊಳಗೂ … Read more

ಮುಕ್ತನಾದವ: ಶ್ರೀಪತಿ ಮಂಜನಬೈಲು

 “ಪ್ರತಿ ಸುಖದ ಹಿಂದೆ ಅನಿವಾರ್ಯವಾಗಿ ದುಃಖ ಬೆಂಬತ್ತುವುದೇ ಆದಲ್ಲಿ, ಆಗ ದುಃಖದಿಂದಲ್ಲ – ಸುಖದಿಂದಲೇ ಮುಕ್ತನಾಗುವ ಸ್ಪಷ್ಟತೆ ನಿನ್ನ ಜೀವನದಲ್ಲಿ ಫಲಿತವಾಗಬೇಕು.” (ಓಶೋ)   — ನಾನಾಗ ಬೆಳಗಾವಿಯವನಾಗಿದ್ದೆ. ನಾನು ನನ್ನ ಸಂಸಾರದೊಂದಿಗೆ ವಾಸಿಸುತ್ತಿದ್ದ ಬಾಡಿಗೆ ಮನೆ ಬೆಳಗಾವಿ ದಂಡು ಪ್ರದೇಶದಲ್ಲಿತ್ತು.  1999 ರ ಡಿಸೆಂಬರ ತಿಂಗಳ ಮೊದಲ ರವಿವಾರದ ದಿನ ಮುಂಜಾನೆಯ ಸಮಯ. ಮನೆಯ ಬಾಗಿಲ ಚಿಲಕ ಕಟಕಟ ಬಡಿದ ಶಬ್ಧ. ಬಾಗಿಲು ತೆಗೆದೆ, ಅವನು ನಿಂತಿದ್ದ. ಬಾರೋ ಒಳಗೆ ಅಂದೆ. ಬಂದ, ಕೈಲಿದ್ದ ಆವತ್ತಿನ … Read more

ಭಾಷಾ ಮೋಡಿಗಾರ: ಜಯಲಕ್ಷ್ಮೀ ಪಾಟೀಲ್

ಗೋಪಾಲ್ ವಾಜಪೇಯಿ ಅನ್ನುವ ಹೆಸರು ಕೇಳಿದ ತಕ್ಷಣ ಸಿನಿಮಾದ ಹಾಡುಗಳ ಬಗ್ಗೆ ಗೊತ್ತಿರುವವರಿಗೆ ‘ಈ ಹಸಿರು ಸಿರಿಯಲಿ, ಮನಸು ನಲಿಯಲಿ ನವಿಲೇ’ ಮತ್ತು ‘ಕಂಬದಾ ಮ್ಯಾಲಿನ ಗೊಂಬೆಯೆ, ನಂಬಲೇನ ನಿನ್ನ ನಗೆಯನ್ನ’ ಹಾಡುಗಳಾದರೆ, ರಂಗಭೂಮಿಯ ಜನರಿಗೆ ‘ಅದ ಗ್ವಾಡಿ, ಅದ ಸೂರು ದಿನವೆಲ್ಲ ಬೇಜಾರು/ ತಿದಿಯೊತ್ತಿ ನಿಟ್ಟುಸಿರು ಎದಿಯಾಗ ಚುರುಚುರು..’, ‘ಯಾವ ದೇಸದ ರಮಣ ಬಂದು, ಏನ ಮೋಸವ ಮಾಡಿದಾ…’ ಇತ್ಯಾದಿ ಹಾಡುಗಳು ನೆನಪಿಗೆ ಬರುತ್ತವೆ. ಇತ್ತೀಚಿಗಷ್ಟೆ ಬಿಡುಗಡೆಯಾದ ಶಿವರಾಜಕುಮಾರ್ ನಟಿಸಿದ ‘ಸಂತೆಯಲ್ಲಿ ನಿಂತ ಕಬೀರ’ ಸಿನಿಮಾ … Read more

ಇಷ್ಟು ಗಡಿಬಿಡಿ ಮಾಡ್ಕೊಂಡ್ ಯಾಕ ಹೋದ್ರಿ?: ಗುರುಪ್ರಸಾದ ಕುರ್ತಕೋಟಿ

ಅವತ್ತು ಎಪ್ರಿಲ್ ೨೧ ನೆ ತಾರೀಖು, ಮದ್ಯಾಹ್ನದ ಹೊತ್ತು. ಫೇಸ್ ಬುಕ್ ಮೆಸ್ಸೆಂಜರ್ ನಲ್ಲಿ ಬಂದ “ಎಂತದ್ರೋ” ಅನ್ನೋ ಮೆಸ್ಸಜು ನನ್ನ ಕಣ್ಣು ಹಿಗ್ಗಿಸಿತ್ತು. ಯಾವ ಹಿರಿಯರು ಆನ್ಲೈನ್ ಇದ್ದಾರೆ ಅಂತ ಗೊತ್ತಿದ್ರೂ, ಅವರು ನನಗೆ ಎಷ್ಟು ಚೆನ್ನಾಗಿ ಪರಿಚಯ ಇದ್ರೂ, ಅವರನ್ನ  ಮಾತಾಡಿಸಬೇಕು ಅಂತ ಆಸೆ ಆದರೂ ಪಿಂಗ್ ಮಾಡೋಕೆ ಹೆದರತಿದ್ನೋ, ಅವರೇ ನನಗೆ “ಎಂತದ್ರೋ” ಅನ್ನೋ ಮೆಸ್ಸೇಜ್ ಕಳಸಿದ್ರೆ ನನಗೆ ಎಷ್ಟು ಖುಷಿ ಆಗಬೇಡಾ? ಅವತ್ತಿನ ದಿನ ನಾನು ಅಮೇರಿಕದಲ್ಲಿ ಇದ್ದೆ, ಅವ್ರು ಬೆಂಗಳೂರಿನಲ್ಲಿ. … Read more

ಗುರುವೆಂದರೆ..ಇವರೇ..!!: ಉಮೇಶ ದೇಸಾಯಿ

   ಇತ್ತೀಚೆಗೆ ಸಂಧ್ಯಾರಾಣಿ ತಾವು ಗೋಪಾಲ ವಾಜಪೇಯಿಯವರನ್ನು ಮೊದಲಬಾರಿ ಭೇಟಿಯಾದಾಗಿನ ಸನ್ನಿವೇಶ ಹೇಳುತ್ತಿದ್ದರು. ಅವರು ಮುಂದುವರೆಸುತ್ತ ಹೇಗೆ ಒಬ್ಬ ಕವಿ ತಾನೇ ಗೀತೆಗಳ ರಚಿಸಿದರೂ ಅದರ ಹಕ್ಕನ್ನು ಅನುಭವಿಸಲಾಗದ ಸಂಕಟವನ್ನು ಹೇಗೆ ಅನುಭವಿಸಿರಬಹುದು ಎಂದು ಹೇಳುತ್ತಿದ್ದರು. ಅದ್ಭುತ ಅನ್ನುವ ಸಾಹಿತ್ಯ ಹಾಡುಗಳ ಬರೆದರೂ ಇದು ನನ್ನದು ಅಂತ ಹೇಳಿಕೊಳ್ಳಲಾಗದ ವಿಚಿತ್ರ ಪರಿಸ್ಥಿತಿ ಗುರುಗಳಾದ ಗೋಪಾಲ ವಾಜಪೇಯಿ ಅನುಭವಿಸಿದರು. ಅದು ಆಗಿದ್ದು ನಾಗಮಂಡಲ ನಾಟಕ/ಸಿನೇಮಾಗೆ ಸಂಬಂಧಿತವಾಗಿ. ಶಾಮರಾಯರ ಕಣ್ಣು/ಕಿವಿ ತಪ್ಪಿಸಿ ಬರೆಯುವ ಪರಿಸ್ಥಿತಿ..ಇಂದಿಗೂ ನಾಗಮಂಡಲದ ಹಾಧು ಬರೆದವರು "ಗೋಪಾಲ … Read more

ನನ್ನ ಶಿಷ್ಯ ಗೋಪಾಲ!: ಶಶಿಕಾಂತ ಕುರ್ತಕೋಟಿ

ನನ್ನ ಮಗ ಗುರುಪ್ರಸಾದ ಅದೊಂದು ದಿನ ಬೆಳಿಗ್ಗೆ “ಅಪ್ಪ, ಗೋಪಾಲ ವಾಜಪೇಯಿಯವರ ಪುಸ್ತಕ ಬಿಡುಗಡೆ ಸಮಾರಂಭವಿದೆ ಬರುತ್ತೀಯಾ? ಅವರು ನಿನ್ನನ್ನು ಕರೆದುಕೊಂಡು ಬರಲು ಹೇಳಿದ್ದಾರೆ.” ಅಂತ ಕೇಳಿದ. ನಾನು ಕೂಡಲೇ ಹೂಂ ಅಂತ ಒಪ್ಪಿಕೊಂಡೆ. ಆ ಹೆಸರು ನನಗೆ ೪೩ ವರ್ಷ ಹಿಂದೆ ಕರೆದೊಯ್ದಿತು. ನಮ್ಮಿಬ್ಬರದು ಗುರು-ಶಿಷ್ಯ ಸಂಬಂಧ. ಆ ಸಮಾರಂಭಕ್ಕೆ ಜಾತಕ ಪಕ್ಷಿಯಂತೆ ಕಾಯತೊಡಗಿದೆ. ಅಷ್ಟು ವರ್ಷಗಳ ನಂತರ ನನ್ನ ಆತ್ಮೀಯ ಗೋಪಾಲನನ್ನು ನೋಡುವ ಅವಕಾಶ ಅದಾಗಿತ್ತು.  ನನ್ನ ಮಗನಿಗೆ ಚಿಕ್ಕಂದಿನಿಂದಲೂ ಸಾಹಿತ್ಯ, ನಾಟಕ ರಂಗದ … Read more

ಅಪ್ಪ ಸತ್ತಾಗ: ಅಖಿಲೇಶ್ ಚಿಪ್ಪಳಿ

80 ವರ್ಷಗಳ ಹಿಂದೆ ಅಳುತ್ತಲೇ ಭೂಮಿಗೆ ಬಂದ ಮಗುವಿಗೆ ತಿಳುವಳಿಕೆ ಬರುವ ಮೊದಲೇ ತನ್ನ ತಂದೆಯನ್ನು ಕಳೆದುಕೊಂಡಿತ್ತು. ತಂದೆಯನ್ನು ನೋಡಿದ ನೆನಪು ಅದಕ್ಕಿರಲಿಲ್ಲ. ಕಡುಬಡತನದ ಆ ಮನೆಯಲ್ಲಿ ಮನೆ ತುಂಬಾ ಮಕ್ಕಳು ಎಲ್ಲರೂ ಸೇರಿದರೆ ಬರೋಬ್ಬರಿ 8 ಮಕ್ಕಳು ಹಾಗೂ ಎರಡು ವಿಧವೆಯರು! ಊರಲ್ಲಿ ಶಾಲೆಯಿದೆ, ಓದಲಿಕ್ಕೆ ಕಷ್ಟವಿದೆ. ಅಂತೂ-ಇಂತೂ ಕಷ್ಟಪಟ್ಟು ಆ ಮಗು 7ನೇ ತರಗತಿಯವರೆಗೆ ಕಲಿಯಿತು. ಹೆಚ್ಚು ಕನ್ನಡ ಹಾಗೂ ಸ್ವಲ್ಪ ಇಂಗ್ಲೀಷು. ಮತ್ತೆ ಬೇಸಾಯಕ್ಕಿಳಿದ ಆ ಯುವಕ ನಿರಂತರವಾಗಿ ದುಡಿಯುತ್ತಲೇ ಇದ್ದ. ಮಧ್ಯದಲ್ಲಿ … Read more

ಲಂಕೇಶ್ ಮತ್ತು ಮನಶಾಸ್ತ್ರ: ಶ್ರೀಮಂತ್ ಯನಗುಂಟಿ

ಪಿ.ಲಂಕೇಶ್. ಕನ್ನಡ ಸಾಹಿತ್ಯದಲ್ಲಿ ತುಂಬಾ ಪರಿಚಿತ ಮತ್ತುಆತ್ಮಿಯ ಹೆಸರು. ಈಗಾಗಲೇ ಲಂಕೇಶ್‍ರ ಬದುಕು ಮತ್ತು ಬರಹದ ಬಗ್ಗೆ ಅನೇಕ ಬರಹಗಾರರು ಕೃತಿಗಳನ್ನು ರಚಿಸಿ ಬಿಡುಗಡೆ ಮಾಡಿದ್ದಾರೆ. ಅಷ್ಟೇ ಏಕೆ ಸ್ವತಃ ಲಂಕೇಶರೇ ತಮ್ಮ ಆತ್ಮಚರಿತ್ರೆ "ಹುಳಿಮಾವಿನ ಮರ"ವನ್ನು ನಮ್ಮಕೈಗಿಟ್ಟು ಹೋಗಿದ್ದಾರೆ. ಆದರೆ ಒಂದು ಮಾತ್ರ ನಿಜ. ಆ ಬರಹಗಳನ್ನೆಲ್ಲ ಮತ್ತೆ ಮತ್ತೆಓದಿದ ಹಾಗೆ ಮತ್ತೆ ಮತ್ತೆ ಲಂಕೇಶರ ವಿಭಿನ್ನ ಮನಸ್ಥಿತಿಗಳ ಅರಿವು ಗಾಢವಾಗುತ್ತಾ ಹೋಗುತ್ತದೆ. ಮೊದಲಿಗೆ ಓದಿದಾಗ ಲಂಕೇಶ ಒಬ್ಬ ಉತ್ತಮ ವಿಚಾರವಾದಿ ಹಾಗೂ ಸಮಾಜವಾದಿ ಎನಿಸಬಹುದು. … Read more

ಸಕಲ ಕುಲತಿಲಕ ಶ್ರೀಕನಕದಾಸರು!: ಹೊರಾ.ಪರಮೇಶ್ ಹೊಡೇನೂರು

ಶ್ರೀ ಕನಕದಾಸರ ಮೂಲ ಹೆಸರು ತಿಮ್ಮಪ್ಪ ನಾಯಕ. ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಬಹಳ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಕನಕದಾಸರು ದಾಸ ಶ್ರೇಷ್ಠರೆಂದು ಇಂದಿಗೂ ಜನಮಾನಸದಲ್ಲಿ ಉಳಿದಿದ್ದಾರೆ. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊ೦ದಿಗೆ ಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಗಣನೀಯ ಕಾಣಿಕೆಯನ್ನಿತ್ತವರು. ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ "ಅಶ್ವಿನಿ ದೇವತೆ"ಗಳೆಂದು ಬಣ್ಣಿಸಲಾಗಿದೆ. ಕನಕದಾಸರು ಆರಂಭದಲ್ಲಿ ದಂಡನಾಯಕರಾಗಿದ್ದು … Read more

ಪಂಜು ಕಾವ್ಯಧಾರೆ

ಸಂಕೋಲೆಯೊಳಗಿನ ನೀನು! ನೀನು ಬಂದಾಗ ನಿಜವಾಗಿ ಬೆಳದಿಂಗಳು ಹಾಲಿನಂತೆ ಸುರಿದಿತ್ತು ನೋಡಿದ್ದಷ್ಟೇ ಭಾಗ್ಯ! ಅದನ್ನು ತುಂಬಿಡಲು ಯಾವ  ಬಟ್ಟಲಿಗೂ ಸಾದ್ಯವಾಗಿರಲಿಲ್ಲ ನಿನ್ನ ಕಣ್ಣುಗಳೊಳಗೆ ಅಂತಹುದೇ  ಬೆಳಕಿರಬಹುದೆಂದು ಕಾದಿದ್ದೇ ಬಂತು: ಒಂದು ತಣ್ಣನೆಯ ಸಂಜೆ ನಿನ್ನ ಕಣ್ಣುಗಳಲ್ಲಿ ಕಣ್ಣಿಟ್ಟು ನೋಡಿ ಬೆವೆತು ಹೋದೆ ನಿನ್ನ ಕಣ್ಣುಗಳ ತುಂಬ ಬೆಂಕಿ ಕೆನ್ನಾಲಿಗೆಗಳು ನಿನ್ನ ತುಟಿಗಳಿಗೆ ಬಂದೆ ಹೊರಬಂದದ್ದೆಲ್ಲ ನಿಗಿನಿಗಿ ಕೆಂಡದಂತ ಶಬ್ದಗಳು ನಿನ್ನ  ಎದೆಗೆ ಬಂದೆ ಕೊತಕೊತ ಕುದಿಯುವ ಲಾವಾರಸದ  ಕಡಲು ನಿನ್ನ ಸೊಂಟಕ್ಕೆ ಬಂದೆ ಮಿರಮಿರ ಮಿಂಚುವ ಬಿಳಿ … Read more

ಕನ್ನಡ ಭಾಷೆ ಮತ್ತು ಸಂಸ್ಕೃತಿ -ಮುಂದಿನ ದಿನಗಳಲ್ಲಿ!: ಎಸ್.ಜಿ.ಶಿವಶಂಕರ್

ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಭಾರತದ್ದಲ್ಲೇ ಉಜ್ವಲವಾದ ಸ್ಥಾನವಿದೆ. ಕರ್ನಾಟಕದ ಹೆಸರು ವ್ಯಾಸ ಭಾರತದಲ್ಲೇ ಉಲ್ಲೇಖವಾಗಿದೆ. ಕನ್ನಡ ಭಾಷೆಗೆ ಎರಡು ಸಾವಿರ ವರ್ಷಕ್ಕೂ ಮಿಗಿಲಾದ ಇತಿಹಾಸವಿದೆ. ಈ ನಾಡು ಕಾವೇರಿಯಿಂದ ಗೋದಾವರಿಯವರೆಗೂ ವ್ಯಾಪಿಸಿತ್ತು ಎಂದು ಇತಿಹಾಸ ಹೇಳುತ್ತದೆ. ಈ ನಾಡಿಗೆ ಕರ್ನಾಟಕ ಎಂಬ ಹೆಸರು ಬಂದಿರುವ ಬಗೆಗೆ ವಿದ್ವಾಂಸರು ಹಲವು ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಈ ಪ್ರದೇಶವನ್ನು ಮೊದಲಿಗೆ 'ಕರಿಯ ಮಣ್ಣಿನ ನಾಡು' ಎಂದೂ, 'ಕರುನಾಡು' ಎಂದರೆ ಎತ್ತರದ ಪ್ರದೇಶದಲ್ಲಿರುವ ನಾಡು ಎಂದೂ, 'ಕಮ್ಮಿತ್ತು ನಾಡು' ಎಂದರೆ … Read more

ಅಂಧಕಾರ ಅಳಿಸುವ ಬೆಳಕಿನ ಅರಿವು ದೀಪಾವಳಿ: ವೈ.ಬಿ.ಕಡಕೋಳ

ಕರುಣಾಳು ಬಾ ಬೆಳಕೆ, ಮುಸುಕಿದೀ ಮಬ್ಬಿನಲಿ ಕೈಹಿಡಿದು ನಡೆಸೆನ್ನನು ಇರುಳು ಕತ್ತಲೆಯ ಗವಿ:ಮನೆ ದೂರ; ಕನಿಕರಿಸಿ ಕೈಹಿಡಿದು ನಡೆಸೆನ್ನನು ಹೇಳಿ ನನ್ನಡಿಯಿಡಿಸು;ಬಲುದೂರ ನೋಟವನು ಕೇಳಿದೊಡನೆಯೇ ಸಾಕು ನನಗೊಂದು ಹೆಜ್ಜೆ   ಅಜ್ಞಾನದ ಕತ್ತಲೆಯನ್ನು ಕಳೆಯಲು ಜ್ಞಾನದ ದೀಪ ಅಗತ್ಯ. ದೀಪಾವಳಿ ದೀಪಗಳ ಬೆಳಕಿನ ಹಬ್ಬ. ನರಕಚತುರ್ದಶಿಯಿಂದ ಆರಂಭಿಸಿ ಮೂರು ದಿನಗಳವರೆಗೆ ಆಚರಿಸುವುದುಂಟು. ಭಾರತದ ಎಲ್ಲೆಡೆಯಲ್ಲಿಯೂ ದೀಪಾವಳಿಯನ್ನು ಆಚರಿಸುತ್ತಾರೆ.      ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಸ್ತಾಪಗೊಳ್ಳುವ ಎರಡು ಮುಖ್ಯ ಹೆಸರುಗಳು. ನರಕ ಹಾಗೂ ಬಲಿ. ನರಕನು ಭೂದೇವಿಯ … Read more

ಅವ್ವ: ಸಿದ್ದರಾಮ ತಳವಾರ, ದಾಸ್ತಿಕೊಪ್ಪ.

“ಅವ್ವ ಇದ್ದರೇ ಸಾಕು    ಅವಳಿರದ ಸಿರಿವಂತಿಕೆ ಯಾರಿಗೆ ಬೇಕು   ಅವಳಿರದ ಏಕಾಂತ ಯಾರಿಗೆ ಬೇಕು   ಅವಳಿರದ ಅರಮನೆಯದಾರಿಗೆ ಬೇಕು   ಅವಳಿರದ ಸಂತಸ, ಹಬ್ಬ, ಹರಿದಿನಗಳದಾರಿಗೆ ಬೇಕು   ಅವ್ವ ಇದ್ದರದೇ ಕ್ರಿಸ್‍ಮಸ್, ಅದೇ ಯುಗಾದಿ ಅದೇ ರಮ್ಜಾನ್   ಅವ್ವ ಇರಬೇಕು ಅವಳ ಜೊತೆ ನಾನೂ ಇರಬೇಕು”     ಅವ್ವನನ್ನು ಮಮ್ಮಿಯೆಂದು ಕರೆಯಲು ನನಗೆ ತುಂಬಾ ಮುಜುಗುರ ಯಾಕೆಂದರೆ ಮಮ್ಮಿ ಎಂದರೆ ಕೇವಲ ಶಬ್ದವಾದೀತು. ಅವ್ವ ಎಂದರೆ ಆಹಾ ಅದೇನೋ ಸೊಗಸು. … Read more

ಬಿಸಿಲ ನಾಡಿನಲ್ಲಿ ಸೋಂಪಾಗಿ ಬೆಳೆಯುತ್ತಿರುವ ಶಿಲ್ಪ ಅಂತರಗಂಗೆ: ವೀರೇಶ ಗೋನವಾರ

ಹೈದರಬಾದ್ ಕರ್ನಾಟಕ ಎಂದಾಕ್ಷಣವೇ ಮೂಗು ಮುರಿಯುವ ಇಂದಿನ ಜಾಯಮಾನದಲ್ಲಿಯೇ ರಾಯಚೂರು ಜಿಲ್ಲೆಯ ಭತ್ತದ ಕಣಜ ಎಂದೇ ಖ್ಯಾತಿಯನ್ನು ಪಡೆದಿರುವ ಸಿಂಧನೂರು ತನ್ನ ಒಡಲಲ್ಲಿ ಭತ್ತದ ಜೊತೆ-ಜೊತೆಗೆ ಅನೇಕ ಪ್ರತಿಭೆಗಳನ್ನು ಅಡಗಿಸಿಟ್ಟುಕೊಂಡಿದೆ. ಅಂತಹ ಪ್ರತಿಭೆಗಳ ಸಾಲಿಗೆ ನನ್ನೂರಿನ ಹೆಮ್ಮೆಯ ಯುವತಿ ಶಿಲ್ಪ ಅಂತರಗಂಗೆ ನಮ್ಮ ಇಂದಿನ ಯುವ ಸಮುದಾಯಕ್ಕೆ ಹೊಸ ಭರವಸೆಯ ಪ್ರತಿಭೆಯಾಗಿ ನಿಲ್ಲುತ್ತಾರೆ. ಇಂತಹ ಭರವಸೆಯ ಕಣ್ಮಣಿಗೆ ಪ್ರಸ್ತುತ ಕರ್ನಾಟಕ ಸರಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ ಕೊಡಮಾಡಲಾಗುವ 2014-15ನೇ ಸಾಲಿನ ರಾಜ್ಯ ಮಟ್ಟದ ‘ಸ್ವಾಮಿ … Read more

ಸರಸವಾಡದಿರಿ ಪುಟಾಣಿಗಳೇ ಪಟಾಕಿಗಳ ಜೊತೆ!: ಹೊರಾ.ಪರಮೇಶ್ ಹೊಡೇನೂರು

             ಮತ್ತೊಮ್ಮೆ ದೀಪಾವಳಿ ಹಬ್ಬ ಬರುತ್ತಿದೆ. ಈ ಸಂದರ್ಭದಲ್ಲಿ ಹಬ್ಬದ ಸಡಗರವನ್ನು ಹೆಚ್ಚಿಸುವುದು ವೈವಿಧ್ಯಮಯವಾದ ಪಟಾಕಿಗಳು ಎಂಬುದನ್ನು ಯಾರೂ ಅಲ್ಲಗಳೆಯಲಾರರು. ಮನೆಯಲ್ಲಿ ದೊಡ್ಡವರು ಪೂಜಾದಿ ಕಾರ್ಯಗಳು, ತಳಿರು ತೋರಣ, ಹೊಸ ಬಟ್ಟೆಗಳು, ದೇಗುಲ ದರ್ಶನ, ಮುಂತಾದ ವುಗಳ ಕಡೆ ಗಮನ ನೀಡಿದರೆ, ಪುಟಾಣಿ ಮಕ್ಕಳಿಗೆ ಪಟಾಕಿಗಳನ್ನು ಸುಟ್ಟು, ಸುರ್ ಸುರ್ ಬತ್ತಿ ಉರಿಸಿ, ಕೃಷ್ಣ ಚಕ್ರ ತಿರುಗಿಸಿ, ಹೂ ಕುಂಡ ಚಿಮ್ಮಿಸಿ, ಆಟಂಬಾಂಬ್ ಸಿಡಿಸಿ ಖುಷಿಪಡುತ್ತಾರೆ. ಮುಗ್ಧ ಮಕ್ಕಳು ಹಬ್ಬದ … Read more

ಆ ದೀಪಾವಳಿ: ದಿವ್ಯಾಧರ ಶೆಟ್ಟಿ ಕೆರಾಡಿ

ದೀಪಾವಳಿ ಮತ್ತೆ ಬಂದಿದೆ ಇಡೀ ಜಗತ್ತೇ ಸಂಭ್ರಮ ದಿಂದ ಆಚರಿಸುವ ಬೆಳಕಿನ ಹಬ್ಬದ ಗಮ್ಮತ್ತೆ ಬೇರೆ ತರಹದ್ದು. ಇಂದಿನ ಅಬ್ಬರದ ದೀಪಾವಳಿಯ ಜೋರು ಶಬ್ದಗಳ ನಡುವೆ ಚೈನಾಪಟಾಕಿಗಳ ಸದ್ದಿನ ಎದುರು ನಾವು ಬಾಲ್ಯದಲ್ಲಿ ಹೊಡೆಯುತ್ತಿದ್ದ ಲಕ್ಷ್ಮೀ ಪಟಾಕಿಯ ಸದ್ದೇ ಕೇಳಿಸುತ್ತಿಲ್ಲ ಈಗ.. ಏಲ್ಲೋ ಮರೆಯಾಗಿ ಹೋದ ಹಳೆಯ ನೆನಪುಗಳ ಹಣತೆಯನ್ನು ಒಂದಿಷ್ಟು ಸಾಲಾಗಿ ಜೋಡಿಸುವ ಆಸೆಯಾಗಿದೆ. ಒಮ್ಮೆ ನಮ್ಮ ಹಳ್ಳಿ ಬಾಲ್ಯದ ಕಡೆಗೆ, ಕಳೆದು ಹೋದ ಆ ಕಾಲದ ದೀಪಾವಳಿ ಯ ನೆನಪುಗಳ ಮನೆಯೊಳಗೊಮ್ಮೆ ಮೆಲ್ಲಗೆ  ಹೋಗಿ ಹಣತೆ … Read more

ದೀಪಾವಳಿ: ಸುನೀತಾ ಮಂಜುನಾಥ್

ದೀಪಾವಳಿ ಎಂದರೆ ಮನೆಯನ್ನ ಸಾವರಿಸಿ, ಹಂಡೆಗೆ ಪೂಜೆ ಮಾಡಿ ಇದ್ದ ಬದ್ದ ಹಂಡೆ, ಬಿಂದಿಗೆ, ಬಕೇಟುಗಳಿಗೆಲ್ಲ ನೀರು ತುಂಬಿಟ್ಟು , ನೀರು ತುಂಬುವ "ಹಬ್ಬ' ಮುಗಿವಷ್ಟರಲ್ಲಿ ಬೆಳಗಾಗಿ ಮನೆಯ ಬಾಗಿಲಿಗೆ ಸಗಣಿಯ ಸಾರಿಸಿ, ರಂಗೋಲಿ ಹಾಕಿ, ರಂಗೋಲಿಯ ನಡುವೆ ಸಗಣಿಯ ಉಂಡೆಯನ್ನಿಟ್ಟು ಮೇಲೊಂದು ಹುಚ್ಚೆಳ್ಳಿನ ಹಳದಿ ಹೂವಿನ್ನ ಸಿಕ್ಕಿಸಿದರೆ ಹಬ್ಬದ ಕಳೆ ಬಂತೆಂದೇ.. .ನೆತ್ತಿಗೆ ಎಣ್ಣೆಯಿಟ್ಟು ಹಂಡೆಯಿಂದ ಬಿಸಿ ನೀರು ಹಾಕಿಸಿಕೊಂಡು ಒಂದು ಸರ ಪಟಾಕಿ ಹೊಡೆದರೆ ನಮ್ಮ ಹಬ್ಬ ಶುರು ಎಂದೇ ಅರ್ಥ..  ಮತ್ತೆ ಮೂರು … Read more