ಮೂವರ ಕವನಗಳು: ಕು.ಸ.ಮಧುಸೂದನ್‍ ರಂಗೇನಹಳ್ಳಿ, ಅನುರಾಧಾ ಪಿ ಎಸ್., ನಾಗೇಶ ಮೈಸೂರು

    ವ್ಯತ್ಯಾಸ! ನಾನು ಗೇಯುತ್ತ ಬಂದೆ ನೀನು ತಿಂದು ತೇಗುತ್ತ ಬಂದೆ ನಾನು ಗೋಡೆಗಳ ಕೆಡವುತ್ತ ಬಂದೆ ನೀನು ಮತ್ತೆ ಅವುಗಳ ಕಟ್ಟುತ್ತ ಬಂದೆ ನಾನು ಭೇದಗಳ ಇಲ್ಲವಾಗಿಸುತ್ತ ಬಂದೆ ನೀನು ಹೊಸ ಭೇದಗಳ ಸೃಷ್ಠಿಸುತ್ತ ಬಂದೆ ನಾನು ಸಹನೆಯ ಕಲಿಸುತ್ತ ಬಂದೆ ನೀನು ಸಹಿಷ್ಣುತೆಯ ಭೋದಿಸುತ್ತ ಬಂದೆ! *** ವಾಸ್ತವ ಮಂದಿರಕ್ಕೆ ಹೋದೆ ಮಸೀದಿಗೆ ಹೋದೆ ಇಗರ್ಜಿಗೆ ಹೋದೆ ದೇವರು ಸಿಗಲೇ ಇಲ್ಲ! ಬೆಟ್ಟಗಳ ಹತ್ತಿದೆ ಕಣಿವೆಗಳ ದಾಟಿದೆ ನದಿಗಳ ಈಜಿದೆ ನಿಸರ್ಗದಲೊಂದಾದೆ ಆತ್ಮದೊಳಗೊಂದು … Read more

ಮೂವರ ಕವನಗಳು: ಬಿದಲೋಟಿ ರಂಗನಾಥ್, ನಂದಾ ದೀಪ, ರೇಣುಕಾ ಹೆಳವರ್

ಜೋಲಿ ಕಟ್ಟಿ ತೂಗುವ ನೆಲದವ್ವ ನೆಲದ ಕರುಣೆಯ ತೊರೆಯಲು ಮನಸ್ಸಿಗೆ ಮಾರುದ್ದ ದುಃಖ ಕನಸಿನ ಗುಹೆಗೆ ಭಯದ ಭೈರಿಗೆ ನೆಲದ ಕರುಳ ಮಾತೃಕೆಗೆ ಸೋತು ಭಾವ ಉಕ್ಕಿದ ಮನಸ್ಸೆಂಬ ಸಮುದ್ರ ಮಂಥನಕೆ ಸಾಕ್ಷಿಯೇ ಇಲ್ಲದ ದಾವೆ ಸಿಟ್ಟೆಂಬ ಬೀಜ ಸಿಡಿದರು ಮೊಳಕೆಯಾಗದ ಅನುಬಂಧ ಆದರೂ ನನ್ನವ್ವ ಭೂತಾಯಿಗೆ ನಾನು ಸದಾ ಆಳುಮಗನೆ. ಗುಡಿಸಿದರೂ ಸವೆಯದೆ ಅಗೆದು ಬಗೆದರೂ ಹರಿಯದ ನನ್ನವ್ವಳ ಜೀವದ ಗಟ್ಟಿತನಕ್ಕೆ ಸರ್ವರು ಸವಕಲೇ. ಆದಿಯನ್ನು ಗುಡಿಸದೆ ಇತಿಹಾಸ ನಿರ್ಮಾತೃ ಹೃದಯಕೆ ಜೋಲಿಕಟ್ಟಿ ತೂಗುವ ನೆಲದವ್ವಳ … Read more

ಮೂವರ ಕವನಗಳು: ನಂದನ್ ಜಿ, ರನ್ನ ಕಂದ, ಸಿಪಿಲೆನಂದಿನಿ

ತಾರೆ ಬದುಕು  ನೆನಪಿನಾ ಜೋಳಿಗೆಯ ಸರಕು ಆ ನೆನಪಿಗೂ ಬೇಕಿದೆ ಆಸರೆ  ಮಿನುಗುವುದೇ  ಮಿಂಚಿ ಮರೆಯಾದ ಆ ತಾರೆ..  ಹೊಳೆಯುವುದೇ  ಮಿಂಚಿ ಮರೆಯಾದ ಆ ತಾರೆ.. ನೆನಪಿನಾ ಬಾಣಲೆಗೆ ಹಾಕಿದಳು ಒಲವೆಂಬ ಒಗ್ಗರಣೆ  ಹಾಳಾಗಿದೆ ಹೃದಯ..  ಸರಿಪಡಿಸಲಾರದು  ಯಾವುದೇ ಗುಜರಿ ಸಲಕರಣೆ ಅಂದು ಮನತಣಿಸಿದ್ದ  ಹಾವ-ಭಾವ ಮಾತುಗಳ ಸಮ್ಮಿಲನ  ಇಂದೇಕೊ ಕಾಡುತಿದೆ  ಖಾಲಿ ನೀರವತೆಯ ಮೌನ ಶುರುವಾಗಿದೆ ಅವಳೊಂದಿಗಿನ  ಆ ನೆನಪುಗಳ ಪ್ರಹಾರ..  ಮನದ ಪಡಸಾಲೆಯಲ್ಲೆಲ್ಲೋ  ನಿರಂತರ ಮರುಪ್ರಸಾರ. ಕತ್ತಲಲ್ಲಿ ಮುದುಡಿದ್ದ ಮನಸಿಗೆ  ನಗುವೆಂಬ ಲಾಟೀನು ಹಿಡಿದು … Read more

ಮೂವರ ಕವನಗಳು: ವಸಂತ ಬಿ ಈಶ್ವರಗೆರೆ, ದಿವ್ಯ ಆಂಜನಪ್ಪ, ಆಶಿತ್

ನನ್ನವಳಿಗೆ ಮೊಬೈಲ್ ಸಂದೇಶದ ಕವನಗಳು. ನನ್ನ ಭಾವನೆಯ ಮುಟ್ಟಿಸಿ ಪ್ರೇಮದ ಸಾಲುಗಳು…! 1. ಬೆಳದಿಂಗಳ ರಾತ್ರಿಯಲಿ, ಹೊಳೆವ ಬಾನಂಗಳದ ಎರೆಡು ನಕ್ಷೇತ್ರಗಳು ಆಗೋಣವೇ..? ಧರೆ ನಮ್ಮ ಸುತ್ತ, ಗ್ರಹ ಮಂಡಲ ನಮ್ಮ ಸುತ್ತ, ನೋಡುತ ಪ್ರೀತಿಯ ಮಾಡೋಣ, ಪಥ ಬದಲಿಸದಂತೆ ಜೊತೆ ಸಾಗೋಣ..! . 2. ಎದೆಯೊಳಗಿನ ನೋವು, ಹೃದಯದೊಳಗಿನ ಮಾತು, ನನ್ನ ಎದೆಗೆ ತಲೆ ಇಟ್ಟಾಗಲೇ ಮರೆತೆ. ನಗು ಈಗ ಮೊಗದೊಳಗೆ, ಪ್ರೀತಿಯ ಹೊಳೆ, ನಿನ್ನ ಈ ದಿನಗಳ ಒಳಗೆ, ಇಷ್ಟು ಸಾಕಲ್ಲವೇ ನಾ ಬಂದ … Read more

ಕಾವ್ಯಧಾರೆ: ಬಿದಲೋಟಿ ರಂಗನಾಥ್, ಶ್ರೀಶೈಲ ಮಗದುಮ್, ಶ್ರೀಮಂತ ಯನಗುಂಟಿ, ಎಸ್ ಕಲಾಲ್

ಸುಡುವ ಕನ್ನಡಮ್ಮನ ಪಾದಗಳು ಸುಡುಬಿಸಿಲ ನಡುಮಧ್ಯಾಹ್ನ ನನ್ನವ್ವಳ ಅಂಗಾಲುಗಳು ಚುರ್ರುಗುಟ್ಟಿ ಬೊಬ್ಬೆ ಎದ್ದಿವೆ ಮೈಲಿದೂರಗಳ ಕ್ರಮಿಸಿ ಛತ್ರಿಯಿಲ್ಲ ಚಪ್ಪಲಿಯಿಲ್ಲ ಹೆಗಲ ಮೇಲೆ ಕೂರಿಸಿಕೊಳ್ಳುವವರು ಮೊದಲೇ ಬಚ್ಚಿಕ್ಕಿಕೊಳ್ಳುತ್ತಿದ್ದಾರೆ ಕಣ್ತಪ್ಪಿ ಕೂರಿಸಿಕೊಂಡವವನನ್ನು ಹುಚ್ಚ ದಡ್ಡನೆಂದು ಜರಿಯುತ್ತಿದ್ದಾರೆ 'ಅಮ್ಮ' ಎನ್ನುವ ನಾಲಗೆಗಳು  'ಮಮ್ಮಿ' ಅನ್ನುತ್ತಿದ್ದಾವೆ ಬರಿಗಾಲಲಿ ನಡೆದೋಗುತಿರುವ ತಾಯಿಗೆ ನೀರಡಿಕೆಯಾದರು ಗುಟುಕು ನೀರು ಕೊಡುವವರಿಲ್ಲ ಮರದಡಿಯ ಮರಳ ಚಿಲುಮೆ ಉಕ್ಕುತ್ತಿಲ್ಲ ! ಬೆವರ ಹನಿಗಳು ತಂಬಿಗೆ ಲೆಕ್ಕದಲ್ಲಿ ಸೋರುತ್ತಿವೆ ಒರೆಸುವ ಕೈಗಳು ಗಾಯವಿಲ್ಲದೆಯೂ ಬ್ಯಾಂಡೀಜ್ ಕಟ್ಟಿಕೊಂಡಿದ್ದಾರೆ ! ಉಸಿರೆತ್ತಿದರೆ ಕನ್ನಡಮ್ಮನ ಮಡಿಲ … Read more

ಕಾವ್ಯಧಾರೆ: ಸಿಪಿಲೆನಂದಿನಿ, ಎಸ್ ಕಲಾಲ್, ಕು.ಸ.ಮಧುಸೂದನ್ ರಂಗೇನಹಳ್ಳಿ

ಅವನು ಕಾಡುಗಳ್ಳರಲ್ಲಿ ಬಬ್ಬನು  ಮಳೆತಂಪಿಗೆ ನಳ-ನಳಸುತ್ತ ಚಿಗುರೊಡೆಯುತ್ತಿದೆ ವನರಾಶಿ ತುಂಬಿದೆ ಶಿಖೆಯಾದ್ರಿಗಳು ಅವನ ಮೈತುಂಬಿದ  ಹಸಿರು ಎಲೆಗಳ ಉಡುಪುಲಿ  ಎಂತಹ ಸುವಾಸನೆ  ಮಣ್ಣಿನ ಬೇರಿನೊಳಗೂ  ಸೂಸುವ ತಾಜಾತನ ಅವನ ಎದೆಯೊಳಗೆ ಜೀವನಿರೋದಕ  ಮೌನಕವಿದ ರುದ್ರ ತೊರೆಯಂತಹ ಮುಖ ಸಿಡಿಲಿನಂತಹ ಬಾಹುಗಳಲ್ಲಿ ಬಂದಿಯಾಗುವ ಸಾರಂಗ, ಚಿತ್ತಾಕರ್ಷಕ ಗುಂಡಿಗೆ  ದಮನಿಯ ಮೇಲೆ ಚಿನ್ನದಕಾಂತಿ ಹುಲಿಪಟ್ಟೆ  ನಡುವಲ್ಲಿ ನೀಲಿ ವರ್ಣದ ಗುಂಡುಗಳ ಬತ್ತಳಿಕೆ ಕಂಗಳ ಹಂಚಿನಲಿ  ಬೆಳ್ಳಿಮುಗಿಲ ಹೊಳಯುವ ಚಿತ್ತಾರ ಹಾಲ್ದಿಂಗಳ ಬೆಳಕ ನೆರಳಿನಲಿ ನೆಡೆವಾಗ  ಕಣಿವೆಗಳಲಿ ಕಂಪನ  ಕಾನನದೆದೆಯ ಆಳದೊಳಗೆ … Read more

ಕಾವ್ಯಧಾರೆ: ವಸಂತ ಬಿ ಈಶ್ವರಗೆರೆ, ನೂರುಲ್ಲಾ ತ್ಯಾಮಗೊಂಡ್ಲು, ಸತೀಶ್ ಪಾಳೇಗಾರ್

ಮಳೆರಾಯ ಬರಡು ಭೂಮಿಗೆ, ಮುತ್ತಿನ ಹನಿಗಳ ಸುರಿಸಿ,  ಹಸಿರ ಚಿಗುರಿಸು ಮಳೆರಾಯ.  ಕಾದು ಬಾಯ್ದೆರೆದಿದೆ,  ನಿನ್ನ ಆಗಮನದ ನಿರೀಕ್ಷೆಯಲಿದೆ, ಸುರಿಯಲು ಬಾರೆಯ ಮಹರಾಯ..? ರೈತ ಮುಗಿಲತ್ತ ನೋಡುತ,  ಪಶು ಪಕ್ಷಿಗಳೆಲ್ಲ ನಿನಗಾಗಿ ಹುಯ್ಯಲಿಡುತ,  ಕರುಣೆ ತೋರಲಾರೆಯ ಮುನಿದ ಮಾಯ…?  ಬೆಟ್ಟದಲಿ ಹಸಿರಿಲ್ಲ,  ಭುವಿಯಲಿ ತಂಪಿನ ಕಂಪಿಲ್ಲ, ತೋರಲಾರೆಯ ಹೊಸ ಚೇತನ ರಾಯ…?  ನೀರಿಗಾಗಿ ಆಹಕಾರ ಏಳುವ ಮುನ್ನ,  ಜಾನುವಾರುಗಳು ಹಸಿವಿನಿಂದ ಸಾಯುವ ಮುನ್ನ,  ಈ ಧರೆ ಬಾಯಿ ಬಿಟ್ಟು ಎಲ್ಲರನು ಮಣ್ಣಾಗಿಸುವ ಮುನ್ನ,  ನಿನ್ನ ಸಿಂಚನ ಸುರಿಸು,  … Read more

ಕಾವ್ಯಧಾರೆ: ಸುಷ್ಮಾ ರಾಘವೇಂದ್ರ, ಶೋಭಾ ಕೆ., ಕು.ಸ.ಮಧುಸೂದನ್ ರಂಗೇನಹಳ್ಳಿ, ಎಸ್.ಕಲಾಲ್

ಹಚ್ಚೆಯ ಹಸಿರು ಅವಳು, ಒಡಕು ಕನ್ನಡಕದೊಳಗಿನಿಂದ ಇಣುಕಿ ನನ್ನ ಕರೆದಾಗ ನನಗಿನ್ನು ಎಳಸು ಬೆರೆಯಲಿಲ್ಲ ಬೆಳೆಯಲಿಲ್ಲ ಅವಳೊಳಗೆ ಅವಳ ಕೈ ತುಂಬಿದ ಹಚ್ಚೆಯ ಹಸಿರೊಳಗೆ, ಎಲ್ಲರಂತೆ ತೊಡೆಯೇರಿ ಕಥೆಯಾಗಿ ಹಂಬಲಿಸಲಿಲ್ಲ ಅದಕ್ಕೇ ಕಾಡುತ್ತಾಳವಳು ಕಣ್ಣಂಚಿನಲ್ಲಿ ಹನಿಗಳಾಗಿ, ಬೀಳಲೊಲ್ಲೆ ನೆಲಕ್ಕೆ  ಬಾಗುತ್ತೇನೆ ಅವಳೆದುರಿಗೆ, ಯಾವ ಕಥೆಯ ನಾಯಕಿಯಂತಲ್ಲ ಉತ್ತಿದಳು ಬಿತ್ತಿದಳು ನನ್ನವರ ಹಸುರ, ಕೂತು ತಿನ್ನುವ ಮಂದಿಗೆ ಕುಡಿಕೆ ಹೊನ್ನು ತುಂಬಿಸಿ ಹರಿದ ನೆತ್ತರ,  ಕರಗಿದ ಖಂಡವನ್ನು ಸವೆದ ಬೆನ್ನ ಮೂಳೆಯ ತಿರುಗಿ ನೋಡದೇ ಬೆತ್ತಳಾದಳು ಶೂನ್ಯದೊಳಗೆ ನೆನಪಾಗದ … Read more

ಕಾವ್ಯಧಾರೆ: ಜಯಶ್ರೀ ದೇಶಪಾಂಡೆ, ವಲ್ಲಿ ಕ್ವಾಡ್ರಸ್, ಸಂತೆಬೆನ್ನೂರು ಫೈಜ್ನಟ್ರಾಜ್

ಜ್ಯೋತಿಯೆದುರು ನತಮಸ್ತಕ. 'ಸತ್ಯಮೇವ ಜಯತೇ' ಪರ೦ಪರೆಗಳಿ೦ದ ಬಿ೦ಬಿತ… ಅಲ್ಲಗಳೆದು ನಕ್ಕಿದೆ ವಾಸ್ತವ , ಹುಚ್ಚು ಅದಕ್ಕೆ?!  ನೂರು ಅಪರಾಧಿಗಳಳಿದರೂ  ಒಬ್ಬ ನಿರಪರಾಧಿ  ಅಳಿವುದು ಬೇಡ .. ವರ್ತಮಾನದ ಸತ್ಯವೇ ಮಿಥ್ಯವೇ ? ಉರಿಬಿಸಿಲ ಸೂರ್ಯನ ಕಣ್ಣೆದುರು   ಜೀವಜಾಲದ ಕಡುಗೊಲೆ, ಸಾಕ್ಷಿಗಳಿಲ್ಲ..ನೋಡಿದವರಿಲ್ಲ, ಆರೋಪಿಗಿದೆ  ಅನುಮಾನದ ಭಾಗ್ಯ..ಬೆನೆಫಿಟ್ ಆಫ್ ಡೌಟ್! ಸಿರಿವ೦ತರಿಗೆ ಮಾತ್ರ-ಯಾರಿಗೂ ಹೇಳಬೇಡಿ! ಅಪ್ಪಿತಪ್ಪಿ ಗಲ್ಲೇ? ಅದಕೂ ದಾರಿ ನೂರೆ೦ಟು. ಕಪ್ಪುಕೋಟಿನ ಅಸ್ಖಲಿತ ಮೊಳಕೆಯ ಮಿದುಳುಗಳಿರುವುವುದೇಕೆ?  ಸರ್ವೇ ಗುಣ: ಕಾ೦ಚನಮಾಶ್ರಯ೦ತಿ.  ಅವನ ಶಿಕ್ಷೆ ಇವನ ಪ್ರಸಾದ! ಮಕ್ಕಳು … Read more

ಕಾವ್ಯಧಾರೆ: ಶೀತಲ್, ಸಿಪಿಲೆನಂದಿನಿ, ಶಿವಕುಮಾರ ಚನ್ನಪ್ಪನವರ, ಕು.ಸ.ಮಧುಸೂದನ್

ಸ್ವಾತಂತ್ರ ನಿನ್ನ ಖೈದಿ  ನಾ  ಬೇಡ ನನಗೆ ನೀ ಕೊಡುವ ಬಿಡುಗಡೆ …..  ನಿನ್ನ ಗುಲಾಮ  ನಾ   ಕೊಡಬೇಡ ನೀ ನನಗೆ ಯಾವುದೇ  ಸಂಭಾವನೆ ….  ನಿನ್ನ ಅಗಲಿ ನಾ ಬದುಕಲು  ಅರ್ಥವಿಲ್ಲದ ಕವನವದು …..  ನೀನಿಲ್ಲದ ಜೀವನವೇಕೆ ಹೇಳು  ನೆತ್ತರಿಲ್ಲದ ನರವದು ……  ಇದ್ದಾಗ ನೀ   ಗಾಳಿಗೂ ಅಸೂಯೆ ಹುಟ್ಟಿಸುವೆ ನಾ…  ಕೈಬಿಟ್ಟಾಗ ನೀ  ಪ್ರತೀ ಉಸಿರಿಗೂ ಭಿಕ್ಷೆ ಬೇಡುವ ಭಿಕಾರಿ ನಾ….  (ನೀ ಎಂಬುದು ಈ ಕವನದಲ್ಲಿ ಸ್ವಾತಂತ್ರ) -ಶೀತಲ್        … Read more

ಮೂವರ ಕವನಗಳು: ಬಿದಲೋಟಿ ರಂಗನಾಥ್, ರಾಘವ ಹರಿವಾಣಂ, ಕು.ಸ.ಮಧುಸೂದನ್ ನಾಯರ್

ಏಕ ಶೀಲಾ ಬೆಟ್ಟ ನೋಡುತ್ತಲೇ ಇದ್ದೇನೆ ಬೆಳೆಯದೇ ಕೊರಗದೆ ಕರಗದೆ ಜುಮ್ಮನ್ನದೇ ಕೂತಿದೆ ಎದೆಯ ಭಾಗಕ್ಕೆ ಅಂಗಾಲೂರಿ ಸಾಗಿದರೆಷ್ಟೋ ಜನ ನಾನೂ ಕೂಡಿ. ಸಾಯದೆ ಹಿಗ್ಗುತ್ತಿದೆ ಸೊಗಸು ಬಿನ್ನಾಣ. ನನ್ನಿಂದೆ ಬಂದೋದವರ ಬಿಸಿಯುಸಿರ ಪಿಸುನುಡಿ ಏದುಸಿರ ಬಿಚ್ಚು ಮೆದೆ ಜೀವಂತ ಸದಾ… ನರ ಹೊತ್ತ ಬೆಳ್ಳಕ್ಕಿಗಳ ಕೋಮಲ ಪಾದಗಳ ಸ್ಪರ್ಶ ಸೋಕಿ ನಿರಂತರ ಎಚ್ಚರ ರಸಿಕತೆಯಲಿ ಒಳಗೊಳಗೆ ಖುಷಿಯ ಮೈದವಡುತ ಕೂತಿದೆ ಸುಮ್ಮನೆ ಬಿಮ್ಮನೆ ಯಾರು ಹತ್ತಿದರು ಅಪ್ಪಿದರು ಒದ್ದರು  ಬೇಸರವಿಲ್ಲ ಜಗಜಟ್ಟಿ ಮಲ್ಲನಿಗೆ ಬೆತ್ತಲ ಮನಸ … Read more

ಮೂವರ ಕವನಗಳು: ಸಿಪಿಲೆ ನಂದಿನಿ, ಸಾವಿತ್ರಿ ವಿ. ಹಟ್ಟಿ, ಅನುರಾಧ ಪಿ. ಸಾಮಗ

ಮಲೆಗಳಲಿ ಮರೆಯಾದದ್ದು ಬೇಸಿಗೆ ಮಲೆಯ  ಕುಳಿರ್ಗಾಳಿ ಶ್ರೀಗಂಧ-ರಕ್ತಚಂದನ ಸುವಾಸನೆ ವನರಾಜಿಗಳಲಿ ಸುಯ್ಯಲು.. ಸೋನೆಗತ್ತಲೊಳಗೆ ಹಸಿರುತಂಗಾಳಿ  ಸಿರಿಗೆ ಕಾನನಗಳು ಶೃಂಗಾರ ಗೊಂಡಿರಲು.. ಎಳೆಬೆಳಕು ಮಲೆಯ ಮುಕುಟವ ತೆರೆಯಲು ಕವಳದ ಸೊಬಗೊಳಗೆ.. ಹಕ್ಕಿ ಇಂಚರ ಅಖಂಡ  ಐಕ್ಯತೆಯೊಳಗೆ ಮುಚ್ಚಲು.. ಮಿಂಚು ತುಂಬಿದ  ಮಹಾಬಯಲು ಅಗೋಚರ  ಮರೆಯಾಕೃತಿಯ ಕಾನನವೆಲ್ಲ ಸಂಚರಿಸಲು ಹರ್ಷಕವಳವೆ ಸುರಿಯಲು ಹಸಿರುಬೇಟೆಗೆ ಹೊಂಚು ಹಾಕುತ್ತಿದ್ದ  ಮುಸುಕಧಾರೆ ರೈಫಲ್‍ಗಳು ಮಲೆಯಸಿರಿಯ ಶೃಂಗಗಳ ಹೆದರಿಸಲು ಹಸಿರೆಲೆಮೇಲೆ ಅತ್ಯಾಚಾರ ಬೆಳಕ ಝರಿಒಡಲಲಿ ಹಸಿರುರಕ್ತದ ನೋವಿಗೊಂದು  ದೊರಕದ ನ್ಯಾಯ ಕಾಡು ಕೆಂಪು ನಕ್ಷತದೇವತೆ  ನರಳಿ … Read more

ಮೂವರ ಕವನಗಳು: ಸಾವಿತ್ರಿ ವಿ. ಹಟ್ಟಿ, ಚಾರುಶ್ರೀ ಕೆ ಎಸ್, ಸಿದ್ರಾಮ ತಳವಾರ

ಕನಸಿಗೊಂದು ವಿನಂತಿ ನಿದ್ದಿ ಬರವಲ್ದವ್ವ ಕನಸು ಕಳೆದೀತೆಂದು ಕಣ್ಣಿಂದ ಜಾರಿ ಬಿದ್ದು ಹೋದೀತೆಂದು ಕಣ್ಣು ಬಡಿಯದೆ ಕುಂತೀನೆ ಕನಸ ಕನವರಿಸುತಲೆ! ಯಾವಾಗನೊ ಮಲಗಿ ಬಿಟ್ಟೆ  ಎಚ್ಚರವಾದಾಗ ಮನಹೊಕ್ಕು ನೋಡಿದೆನು ಎಲ್ಲೂ ಹೋಗದೆ ಕನಸು ಮನದಾಗ ನಿಂತೈತೆ ಮತ್ತಷ್ಟು ರಂಗು ರಂಗಾಗೇತಿ ನೋಡವ್ವ ಕಣ್ತುಂಬ ತುಂಬೇತಿ ಉಲ್ಲಾಸದ ಹೊಳಪು! ಕನಸೆಂಬ ಕುದುರೆಯ ಮ್ಯಾಲೆ ಸವಾರಿ ಹೊಂಟೀನಿ ನಾನು ಬ್ಯಾಸರಿಕೆ ಇಲ್ಲ ಬಾಯಾರಿಕೆ ಇಲ್ಲವ್ವ ಓಡುತೋಡುತ ಇದರ ಓಟ ಹೆಚ್ಚಾಗೇತಿ ಬದುಕಿನ ಹಾಡಿಗೆ ಅಚ್ಚು ಮೆಚ್ಚಾಗೇತಿ! ಏ ಕನಸೇ ನೋಡಾ … Read more

ಮೂವರ ಕವನಗಳು: ಸಿಪಿಲೆ ನಂದಿನಿ, ಎಸ್.ಜಿ. ಸೀತಾರಾಮ್, ಶ್ರೀಶೈಲ ಮಗದುಮ್ಮ

ನಿರಾಶ್ರಿತರ ಸ್ವಾತಂತ್ರ್ಯ ಗೂಡ ಕಳೆದ ಜೀವಗಳ ಕಸಿವಿಸಿ ಯಾವುದೋ ಬರಗಾಲ ದೈತ್ಯ ಮಾರುತ ಹೊಡೆತಕೆ ಸಿಲುಕಿ ನಲುಗಿತೊ ಭೂಕಂಪನ ಆರ್ತನ ಅನಾಥವಾದವೋ ಕಳಚಿ ಬಿದ್ದ ಕಾಲ ಮರೆತ ವರ್ತಮಾನ ಮೈದಾನದಲಿ ಬದುಕ ಕಟ್ಟಿತೊ.  ಎಷ್ಟೋ ಸೂರ್ಯೋದಯ ಉದಯಿಸಿದರೂ ಬೆಳಕುಮಾತ್ರ ಬೆಳಗದೆ ಸುಡುತ್ತಿತ್ತು. ಆದರೂ ಇಲ್ಲಿ ಯಾರ  ಹಂಗು ಇಲ್ಲ ಬಂಧನ ಬೇಲಿ ಇಕ್ಕೆಲಲಿ ತಂಪು ತಂಗಾಳಿ ಸಾಲುಮರಗಳು ಇಲ್ಲಿ ಕತ್ತಲಾದರೆ ಅದೇ ಕಾಡುವ  ನೆಲದ ಮಣ್ಣಿನ ಋಣ ಆಕಾಶ ಹೊದಿಕೆ ಮಲಗಿದರೆ ಜೋಪಡಿ ಎದುರಾದ ಚಂದ್ರ  ಬೆಳಕು … Read more

ಮೂವರ ಕವನಗಳು: ಬಿದಲೋಟಿ ರಂಗನಾಥ್, ಪ್ರವೀಣ ಕಾಗಾಲ, ಅಭಿಸಾರಿಕೆ

ನಾನೊಬ್ಬ ಮನುಷ್ಯ ಜಾತಿಯೆಂಬ ಅಡ್ಡಗೋಡೆ ಕಟ್ಟಿ ನನ್ನೆದೆಯೊಳಗಿನ ಜೇನಗೂಡಿಗೆ ಬೆಂಕಿ ಸೂಡಿದ ಬಿರುಸಿಗೆ ಕನಸಿನ ಹಕ್ಕಿ ಸತ್ತೇ ಹೋಯಿತು ನನ್ನದೆನ್ನುವ ಸ್ವಾರ್ಥಕೆ ರೆಕ್ಕೆ ಬಂದು ಪುರ್ರೆಂದು ಹಾರಿತು. ಆದರೂ ಕಾದೆ ತಡೆಯಲಾರದೆ ಸುಮಾರು ದಿನ. ಮತ್ತೆ ಎದೆಯ ಗೂಡೊಳಗೆ ಜೇನಗೂಡ ಕಟ್ಟುತ ನೀನೆ ಬಿಟ್ಟೋಗಿದ್ದ ನೆನಪ ಕೈಲಿಡಿದು ನೋಡುತ ಅದನ್ನೆ. ಬಿರುಸ ಬೆಳದಿಂಗಳಿಗು ಹೇಳಿದೆ ಮನಸು ಕತ್ತಲಾಗಿದೆ ಕೆತ್ತಬೇಕು ಬೆಳದಿಂಗಳ ತುಣಿಕಿನಿಂದ ಒಂದು ಹಣತೆ. ಕೊಡುವುದಾದರೆ ಸಾಲ ಕೊಡು ಬರುವ ಪ್ರೀತಿಯ ಕಣ್ಣಿಗೆ ಕತ್ತಲಾಗುವುದು ಬೇಡ ನನ್ನದೆಯ … Read more

ಮೂವರ ಕವನಗಳು: ಸಿರಿ, ಶ್ರೀಶೈಲ ಮಗದುಮ್ಮ, ವಿನಾಯಕ ಭಟ್

ಸದ್ದಿಲ್ಲದೇ ಒಳ ನುಗ್ಗಿದವನಿಗೆ ಭದ್ರವಾಗಿ ಮುಚ್ಚಿ, ಕೀಲಿ ಹಾಕಿದ್ದ ನನ್ನೆದೆಯ ಗುಬ್ಬಿ ಬಾಗಿಲನು ನಿನ್ನದೇ ಸ್ವಂತ ಸ್ವತ್ತೆಂಬಂತೆ ರಾಜ ಗಾಂಭೀರ್ಯದಲ್ಲಿ ತೆರೆದು  ಸದ್ದಿಲ್ಲದೇ ಒಳನುಗ್ಗಿ,  ಸಿಂಹಾಸನಾರೂಢನಾದೆಯಲ್ಲೋ ನಿನಗದೆಂತಹ ಸೊಕ್ಕು…? ಇಷ್ಟಾದರೆ ಸಹಿಸಿಕೊಳ್ಳುತ್ತಿದ್ದೆ ಪಾಪ, ಸುಸ್ತಾಗಿದ್ದಿರಬಹುದೇನೋ ಕುಳಿತು ಕೊಂಚ ಸುಧಾರಿಸಿಕೊಳ್ಳಲಿ ಎಂದು ಆದರೆ ಸುಮ್ಮನಿರದ ನೀನು ನನ್ನ ಕನಸುಗಳನ್ನೆಲ್ಲ  ವಶ ಪಡಿಸಿಕೊಂಡೆಯಲ್ಲೋ ನಿನಗದೆಂತಹ ಛಾತಿ…? ಇರಲಿ, ಜುಜೂಬಿ ಕನಸುಗಳಿಗಾಗಿ ಕೊರಗುವುದೇ..? ಹಾಳಾಗಲಿ  ಹೊಸ ಕನಸು ಹೆಣೆದರಾಯಿತು ಎಂದು ನನ್ನ ಮನಸಿಗೆ ಸಮಾಧಾನ ಹೇಳಿ ತಿರುಗಿ ನೋಡುವಷ್ಟರಲ್ಲಿ ನೀನು ನನ್ನ … Read more

ಮೂವರ ಕವನಗಳು: ರಾಘವ ಹರಿವಾಣಂ, ಸಿಪಿಲೆನಂದಿನಿ, ಜಾನ್ ಸುಂಟಿಕೊಪ್ಪ

ಇರುವೆ ಇರುವೆಯೇ ಮನುಜರಿಗೆ ನೀ ಮಾದರಿಯಾಗಿರುವೆ ಕಾರ್ಯಕೂ ಮೊದಲು ಧ್ಯೇಯವನು ನಿರ್ಧರಿಸುವೆ ಹಿಡಿದೊಂದು ಕಾರ್ಯದಿ ಶಿಸ್ತಿನ ಸಿಪಾಯಿಯಾಗುವೆ ಗುರಿತಪ್ಪದೆ ಮುಂದ್ಸಾಗುವ ಛಲದಂಕಮಲ್ಲ ನೀನಾಗುವೆ   ಕಣಕಣವ ಸೇರಿಸುತ ಮಹಾರಾಶಿಯ ಕೂಡಿಸುವೆ ಆಳರಸನಾಗುತ ಗುಂಪನು ಪಥದಿ ಮುಂದೊಯ್ಯುವೆ                                                           … Read more

ಮೂವರ ಕವನಗಳು: ಬಿದಲೋಟಿ ರಂಗನಾಥ್, ರಾಜಹಂಸ, ಗ಼ಂಗಾಧರ ಬೆನ್ನೂರ

ಕಾಡೋ ಕುದುರೆಯ ಕನಸು ದಯೆಗೆ ಅಂಕುಶವಿಟ್ಟ ಪ್ರೀತಿಯೇ ಜಾತಿಯ ಬೆನ್ನ ಬಿದ್ದು ಯಾಕೋದೆ? ಕಣ್ಣ ನೀರಲಿ ಸಾವಿರ ಕಣ್ಣುಗಳ ಹುಟ್ಟಿಸಿ. ಬದುಕು ಜಿಂಕೆಯೋಟ ಮರೆವು ಮಂಗನಾಟ ಕುಲಕಿ ಕುಲಕಿ ಬೆರತ ಆ ನೋಟ ರೆಂಬೆ ಕೊಂಬೆಯಾಗಿ ಚಾಚಿದೆ ವರುಷ ವರುಷಗಳೇ ಸಂದರು. ನೀನಿಟ್ಟ ಹೆಜ್ಜೆ ಮಾತಿನಲಿ ಕಥೆಯಾಗಿದ್ದು ಅಲ್ಪ ಕಾವ್ಯವಾಗಿ ಕಾಡಿದ್ದೇ ಗಹನ ಕಾಡೋ ಕುದುರೆಯ ಕನಸು ಜೂಜಾಟವಾಗಿದ್ದು ಸರಿಯೆ? ಮೋರಿ ಮೇಲೆ ಕೂರಿಸಿ ಮಾಡದ ತಪ್ಪಿಗೆ ಹಿಂಡುವ ನೆನಪ ಬೆಂಬಲಿಸಿದ್ದು ಹಿತವೆ? ಒಂಟಿ ಮರದ ಮೇಲೆ … Read more

ನಾಲ್ವರ ಕವನಗಳು: ಶಿದ್ರಾಮ ತಳವಾರ, ನೂರುಲ್ಲಾ ತ್ಯಾಮಗೊಂಡ್ಲು, ಮೆಲ್ವಿನ್ ಕೊಳಲಗಿರಿ, ಆಶಿತ್

ಪಯಣ ಎಲ್ಲೋ ನಡೆಯುತ್ತಿದೆ ನನ್ನೀ ಪಯಣ ಎಲ್ಲೆಂತೆನಗರಿವಿಲ್ಲವಾದರೂ ಇಲ್ಲೇ ಎಲ್ಲೋ ನಡೆಯುತ್ತಿದ್ದೇನೆ,,,,, ದಾರಿಯುದ್ದಕ್ಕೂ ಬರೀ ಕತ್ತಲು ಎಲ್ಲೆಲ್ಲೂ ಸ್ಮಶಾನ ಮೌನ ಕಾಣದಿಹ ಈ ದಾರಿಯಲ್ಲಿ ನನಗೆ ನಾನೇ ಪ್ರಶ್ನೆ, ಅಲ್ಲಲ್ಲಿ ನಾಯಿ ಊಳಿಡುತಿವೆ, ತಂಪು ಗಾಳಿಗೆ ಒಣಗಿದೆಲೆಗಳು ಪಟ ಪಟ ಉದುರುವ ಸದ್ದು ಬೇರೇನಿಲ್ಲ, ಆದರೂ,,, ಅದಾರೋ ನನ್ನ ಹಿಂಬಾಲಿಸುವಂತಿದೆ. ಇಲ್ಲೇ ಎಲ್ಲೋ ದೂರದಲ್ಲಿ ಬೆಂಕಿ ಹೊತ್ತಿಕೊಂಡಿದೆ ಬಹುಶ: ಹೆಣ ಸುಡುತಿರಬಹುದು ವಾಸನೆ ಮೂಗು ಕಟ್ಟುತಿದೆ ಯಾವುದೀ ತಾಣ ? ಕೆಟ್ಟ ಕನಸಿರಬಹುದು ಅಲ್ಲವೇ ? ಆದರೂ,,,, … Read more