ಮೂವರ ಕವಿತೆಗಳು: ಬಸವರಾಜ ಕದಮ್, ರಮೇಶ್ ನೆಲ್ಲಿಸರ, ತ.ನಂ.ಜ್ಞಾನೇಶ್ವರ

ಪ್ರೀತಿಯ ಹೆಜ್ಜೆಗಳು : ಪ್ರೀತಿಯ  ನಿನ್ನ  ಹೆಜ್ಜೆಗಳು ನನ್ನ  ಹೃದಯದ ಒಳಗೆ ಗೆಜ್ಜೆ  ಕಟ್ಟಿಕೊಂಡು  ಕುಣಿಯುತ್ತಿದೆ ಪ್ರೇಮದ ತಾಳದ  ಸದ್ದು ಮನಸ್ಸಿಗೆ  ಮುದಕೊಡುತ್ತದೆ. ಪ್ರೀತಿಯ ಅನುಭವ : ನಿನ್ನ  ಕಾಲಿಗೆ  ಚುಚ್ಚಿದ ಮುಳ್ಳನ್ನು  ಪ್ರೀತಿಯಿಂದಲೇ  ಮುಳ್ಳಿಗೂ  ನನಗೂ  ನೋವಾಗದೆ ತೆಗೆಯುವಾಗ  ಅಲ್ಲೊಂದು  ಪ್ರೀತಿಯ  ಅನುಭವವೇ ಬೇರೆ ….!!! ಹೊಸತನ : ನೀ ಬರೆದ ರಂಗೋಲೆ ಅಂಗಳದ  ಅಲಂಕಾರವೇ  ಬದಲಾಗಿ ಹೊಸತನ  ತಂದಿದೆ  ಒಂದೊಂದು  ಚುಕ್ಕೆಗಳ ಸಾಲುಗಳು  ನನ್ನ  ಹೃದಯದಲ್ಲಿ  ಚಿತ್ತಾರ ಮೂಡಿಸಿದೆ.. ನಗು : ಗೆಳತಿ, ನಿನ್ನ … Read more

ಮೂರು ಕವಿತೆಗಳು: ಕಡಲ ಬೇಟೆಗಾರ, ರಮೇಶ್ ನೆಲ್ಲಿಸರ, ದಿನೇಶ್ ಚನ್ನಬಸಪ್ಪ

ಅವಳೆಂದರೆ,,, ಅದ್ಯಾವುದೋ ಒಂದು ಹೊತ್ತಿನ ಮೌನ, ಮತ್ತೆಲ್ಲಿಂದಲೋ ತೂರಿ ಬಂದ ನಿಲ್ಲದ ಮಾತು,, ಮಚ್ಚೆಯ ಜೊತೆಜೊತೆಗೆ ಚೆಲುವಿನ ಗುಳಿಕೆನ್ನೆ, ಮರೆತಾಗ ಹೆಚ್ಚಾಗೇ ನೆನಪಾಗೊ ಏನೋ ಒಂದು ಗುರುತು. ಅವಳೆಂದರೆ,,, ಹಾಳಾದ ಸಂಜೆಯನೇ ರಂಗೇರಿಸೊ ಬೆಳಕು, ಮತ್ತನ್ನೆ ಬಗಲಲ್ಲೇ ಎತ್ತಿಟ್ಟುಕೊಂಡು ಬೀಸೋ ತಂಗಾಳಿ,, ನಿಧಾನ ಗತಿಯಲಿ ಏರಿಇಳಿಯೊ ರಂಗು, ಕಡಲಿನೆದೆಮೇಲೆ ಪ್ರತಿಫಲಿಸೋ ಅರೆನೀಲಿಮೋಡದ ಸಂದಿಗೊಂದಿಯ ಬಿಳಿ. ಅವಳೆಂದರೆ,,, ತುಂತುರು ಮತ್ತೆ ಚಳಿ ಹಿಡಿಸೊ ಆಷಾಡದ ಮಳೆ,, ನೆನೆವಾಗ ಕಾರಣವಿರದೇ ಮನಸೊಳಗೆ ಮೂಡೋ ಸಂಭ್ರಮ, ಜ್ವರದಮೂಲಕ ಕಾಡುವ ಹೊಸ ರಗಳೆ. … Read more

ಮೂವರ ಕವಿತೆಗಳು: ವಿಲ್ಸನ್ ಕಟೀಲ್, ವಾಮನ ಕುಲಕರ್ಣಿ, ಅಕ್ಷಯ ಕಾಂತಬೈಲು

ಅಸ್ಪೃಶ್ಯರು ಎಲೆಗಳುದುರಿದ ಒಣ ಕೊಂಬೆಗೆ ಜೋಡಿ ಬಾವಲಿ ಜೋತು ಬಿದ್ದಂತೆ ಎದ್ದು ಕಾಣುವ ನಿನ್ನ ಪಕ್ಕೆಲುಬುಗಳಿಗೆ ಬತ್ತಿ ಹೋದ ಸ್ಥನಗಳು ನನ್ನ ಬೆರಳುಗಳೂ ಅಂತೆಯೇ ಎಲುಬಿನ ಚೂರುಗಳಿಗೆ ತೊಗಲುಡಿಸಿದಂತೆ  ಮಾಂಸಲವೇನಲ್ಲ ನಮ್ಮಿಬ್ಬರ ಮಿಲನ ರಮ್ಯವಲ್ಲ; ನವ್ಯ ಮಾಂಸಖಂಡಗಳ ಪ್ರಣಯದಾಟವಲ್ಲ ಅದು, ಮೂಳೆ-ತೊಗಲಿನ ಸಂಘರ್ಷ! *** ವಿದ್ಯುತ್ತಂತಿ ಸ್ಪರ್ಶಿಸಿ ಸತ್ತ  ಬಾವಲಿಯ ರೆಕ್ಕೆಯನ್ನು ತೆಂಗಿನ ಚಿಪ್ಪಿಗೆ ಬಿಗಿದು ಕಟ್ಟಿ ರಚಿಸಿದ ಪುಟ್ಟ ಡೋಲು ಬಾರಿಸುತ್ತಿದ್ದಾನೆ ನನ್ನ ಮುದ್ದು ಮಗ ಸವೆದ ಪಕ್ಕೆಲುಬುಗಳಂತಿರುವ ಚೋಟುದ್ದ ಬೆತ್ತಗಳಿಂದ ಬಾವಲಿಯ ರೆಕ್ಕೆಗೆ ಬಡಿಯುವಾಗ … Read more

ಮೂರು ಕವಿತೆಗಳು: ಶಿವರಾಂ ಎಚ್. ಆಶಾ ದೀಪ, ಅಕ್ಷತಾ ಕೃಷ್ಣಮೂರ್ತಿ

ನೀనిಲ್ಲದ ದಿನಗಳಲಿ ಮೌನವಾಗಿವೆ ಭಾವಗಳು ಮ್ಲಾನವಾಗಿವೆ ಕನಸಿನ ಬಣ್ಣಗಳು ಹೃದಯದ  ಸರಸಿಯಲ್ಲೇ ಅರಳಿದ ತಾವರೆಯ ಹೂಗಳು. ನೀನಿಲ್ಲದ ದಿನಗಳಲಿ ಇರುಳು ತಪ್ತವಾಗಿದೆ; ಪ್ರೀತಿಯ ಇನಿದನಿಗಳು ಸೊಂಪಾಗಿ ಹನಿಯಾಗಿ ತೊಟ್ಟಿಕ್ಕಲಾಗದೇ ಬತ್ತಿಹೋಗಿವೆ ಪಿಸು ಮಾತಿನ ಕುಸುಮಗಳು. ಹ್ಞಾಂ! ಹಾಗೂ ಪಿಸುಗುಟ್ಟಿ ನುಡಿಯಲಾಗದೆ ಹ್ಞುಂ, ಹೀಗೂ ಬಿಗುವಿಟ್ಟು ಸವಿ ಹೀರಲಾಗದೆ ಒಣಗಿವೆ ಚೆಂದುಟಿಗಳು; ಹೊರಗಿನ ನೋವಿನಲ್ಲೂ ಸುಖಿಸಿ ಇಹ ಮರೆಯಲೆಳೆಸುವ ಒಳಗಿನ ಅಂಗಗಳು  ತಟ್ಟನೆ ಕಾವೇರಿದರೂ ತಂಪಾಗದಿವೆ. ಗೆಳೆಯಾ, ಅಂದಿಗೆ ಬೆದೆ ಬಂದ ಸೊಕ್ಕಿನಲಿ ಹೆಡೆಯಾಡಿಸುತ್ತ ತಪ್ತವಾಗಿ ಹೋದ ಕಾಮನೆಗಳೆಲ್ಲ … Read more

ಮೂರು ಕವಿತೆಗಳು: ಕುಮಲೇಶ ಗೌಡ, ಈಸೋಪ, ರಮೇಶ್ ನೆಲ್ಲಿಸರ

ಸಾವು ಕಣ್ರೆಪ್ಪೆಗಳನ್ನ  ತೆರೆದು ನೋಡಿದರೆ ಬೆಳಕನ್ನ ನೋಡಲಾಗದೆ ಮುಚ್ಚಿಕೊಂಡವು ಪ್ರಯಾಸದಿಂದ ತೆರೆದ ಕಣ್ಣನ್ನ ಅವನನ್ನ ಬಿಗಿದು ಕಟ್ಟಲಾಗಿತ್ತು ಊರಾಚೆಗಿನ ಬಟಾಬಯಲಿನ ಮಧ್ಯೆ ಮರವೊಂದಕ್ಕೆ ನಿರ್ಜನ ಪ್ರದೇಶದಲ್ಲಿ ಸುತ್ತಲೂ ಬಿದ್ದಿದ್ದ ಹಿಡಿಗಾತ್ರದ ಕಲ್ಲುಗಳು ಅವನ ಮೈಗೆ ತಾಕಿ ಕೆಳಬಿದ್ದವಾಗಿದ್ದವು ರಕ್ತ ಹೊರಬಂದು ಹೆಪ್ಪುಗಟ್ಟಿತ್ತು ಗಾಯಗಳಿಂದ ತುಟಿಗಳೊಣಗಿತ್ತು ಮುಖದಲ್ಲಿ ಜೀವವಿದೆಯಾ ಇನ್ನೂ ಅನ್ನುವಂತ ನಿರ್ಜೀವವಾದ ಭಾವ ಸುತ್ತಲೂ ನೋಡಿ ಒಮ್ಮೆ ಯಾರೂ ಕಾಣದಾದಾಗ ನೆನಪು ಮಾಡಿಕೊಳ್ಳಲು ಶುರುಮಾಡಿದ ತನ್ನೀ ಪರಿಸ್ಥಿತಿಗೆ!!  ಕಾರಣ! ಇನ್ನೂ …….ಅದೆ..! ಐ….ಕ..!! –ಕಮಲೇಶ ಗೌಡ   … Read more

ಎರಡು ಕವಿತೆಗಳು: ಪ್ರಮೋದ್ ಬಿ.ಸಿ., ಅಕುವ

  ನನ್ನ ಹಾಡಿನ ಪಲ್ಲವಿ  ಸ್ನೇಹದ ಸವಿನೆನಪಿನ ಇಂಪಾದ ಸ್ವರ ನೀನು, ಬಯಸಿರುವೆ ನಿನ್ನ ವಾಣಿಯ ಮಾಯೆಯನು; ನನ್ನ ರಹಸ್ಯ ಹೊತ್ತಿಗೆಯ ಸಾರಾಂಶ ನೀನು, ಲೇಖನಿಯು ಕಾತರಿಸಿದೆ ಮೊದಲ ಅಕ್ಷರವನು; ಇಳಿಸಂಜೆಯ ಮಧುರವಾದ ಕಲ್ಪನೆ ನೀನು, ಕಾದಿರುವೆ ನಿನ್ನ ಒಲವಿನ ಆಗಮನವನು; ಮುಂಬರುವ ಕ್ಷಣದಲ್ಲಿ ನಿನ್ನ ಕಾಣುವೆನು, ಕಬಳಿಸಿರುವ ಪುಟ್ಟ ಹೃದಯದ ಕೋಣೆಯಲಿ; ಬರೆಯುವೆ ನನ್ನ ಜೀವಾಳದ ಸುಮಧುರ ಹಾಡನು ಆಗುವೆಯಾ ಆ ಹಾಡಿನ ಚರಣಕ್ಕೆ ಪಲ್ಲವಿ ನೀನು. – ಬಿ. ಸಿ. ಪ್ರಮೋದ.     … Read more

ನಾಲ್ಕು ಕವಿತೆಗಳು: ಕಾವ್ಯ ಪ್ರಿಯ, ದಿನೇಶ್ ಚನ್ನಬಸಪ್ಪ, ಅಕ್ಷತಾ ಕೃಷ್ಣಮೂರ್ತಿ, ಸುಚಿತ್ರ ಕೆ.

ಮರೆಯಲಾಗದು !!! ಅ೦ದೇಕೊ ಘಾಸಿಗೊ೦ಡ ಮನ ಮತ್ತೆ ಚೇತರಿಸಿಕೊಳ್ಳಲಿಲ್ಲ ಪ್ರಯತ್ನಗಳು ಹಲವು ಆದವೆಲ್ಲ ವ್ಯರ್ಥವು….. ಎಲ್ಲ ದುಃಖಗಳ ಮರೆತರೂ ಅದೊ೦ದೆ ನೆನಪು ಅದೇಕೊ ತಿಳಿಯದು ಮಾಸುತಿಲ್ಲ ಆ ಗಾಯವು…. ಅಷ್ಟಿತ್ತಾ ಘಾಸಿಯ ತೀವ್ರತೆ ಅ೦ದೇಕೊ ತಿಳಿಯಲಿಲ್ಲಿ ಸಿಹಿಯ೦ತಿತ್ತು ಆ ಮರೆಯಲಾಗದ ಮಮತೆಯು… ಮರೆತೆನೆ೦ದರೆ ಸುಳ್ಳು ಮರೆಯದಿದ್ದರೆ ಅದು ಕಹಿಯಾದ ಸತ್ಯವು ಸಾಯಿಸದೇ ಸುಡುತಿಹುದು…. — ಕಾವ್ಯಪ್ರಿಯ ***** ಬೆಳಕಾಗುವ ಮೊದಲೇ ಕತ್ತಲೆಯ ಮುಸುಕು, ಶುರುವಾಗುವ ಮೊದಲೇ ಕೊನೆಯಾಗುವ ಕೊರಗು, ಅರಳುವ ಮೊದಲೇ ಬಾಡಿಹೋಗುವ ಕುರುವು, ಒಲವೇ ನೀ … Read more

ಮೂರು ಕವಿತೆಗಳು: ಪ್ರವೀಣ್ ಡಿ. ಕಟೀಲ್, ರಮೇಶ್ ನೆಲ್ಲಿಸರ, ಬಸವರಾಜ ಕದಮ್

ಅಷ್ಟಕ್ಕೂ ಮಳೆಯೆಂದರೆ… ಅವಳೇಕೆ ನೆನಪಾಗುತ್ತಾಳೆ…? ಈ ಮಳೆಗೂ ಈಶಾನ್ಯಕ್ಕೂ ಸಂಬಂಧವಿದೆ, ಮೊದಲ ಈಶಾನ್ಯ ಮಾರುತಗಳೇ ಮೊದಲಮಳೆ ತರುತ್ತವೆ, ಬದುಕಲ್ಲೂ ಅಷ್ಟೇ ಮೊದಲ ಮಳೆ ತಂದವಳು ಈಶಾನ್ಯದವಳು,ಆ ಮುಂಗಾರುಮಳೆ ಇನ್ನೂ ಇದೆ, ಈ ಮೊದಲಪ್ರೇಮವೇ ಹೀಗೆಯೇ, ಎಲುಬಿಲ್ಲದ ನಾಲಗೆ ಬೇಡವೆಂದರೂ ನೋವಿದ್ದ ಹಲ್ಲಿನ ಕಡೆ ಹೊರಳುವ ಹಾಗೆ, ವರ್ಷಾನುಗಟ್ಟಲೆ ಜೊತೆಯಾಗಿದ್ದ ಪ್ರೀತಿ ಏಕಾ ಏಕಿ ಕೈಬಿಟ್ಟು ಹೋದಾಗ ನಡುದಾರಿಯಲ್ಲೇ ಆಗೋ ಆಘಾತಕ್ಕೆ ಶವದಂತಾದ ದೇಹಕ್ಕೆ ನೆತ್ತಿಯ ಮೇಲೆ ಬಿದ್ದ ಮಳೆ ಹನಿ ಮಾತ್ರ ಸಮಾಧಾನ, ಸಾಂತ್ವಾನ ನೀಡಬಲ್ಲುದು, ಪ್ರೀತಿಯೆಂದರೆ … Read more

ಮೂರು ಕವಿತೆಗಳು: ಚೆನ್ನ ಬಸವರಾಜ್, ನವೀನ್ ಪವಾರ್, ವಾಮನ ಕುಲಕರ್ಣಿ

ಕೊಕ್ ಕೊಕ್ ಕೊಕ್ಕೋ….!! ಲೇ… ಕುಮುದಾ, ಜಾಹ್ನವಿ, ವೈಷ್ಣವಿ ಎದ್ದೇಳ್ರೇ… ಬೆಳಗಾಯ್ತು ; ಕೋಳಿ ಮನೆಯೊಳಗೆಲ್ಲೋ.. ಬಂದು, ಕೊಕ್ ಕೊಕ್ ಕೊಕ್ಕೋ…. ಎಂದು ಕೂಗಿದ ಸದ್ದು ಹಾಳಾದ್ದು ಅದ್ಹೇಗೆ ಮನೆ ಹೊಕ್ಕಿತೋ… ಏನೋ?  ಎಲ್ಲಾ ನನ್ನ ಪ್ರಾರಬ್ಧ ಕರ್ಮ ಇನ್ನೇನು ಕಾದಿದೆಯೋ  ಇದ ಕೇಳಿಸಿಕೊಂಡು ಅಕ್ಕಪಕ್ಕದವರು ನಗದಿರರು ನಮ್ಮ ಏನೆಂದು ತಿಳಿದಾರು, ಅನುಸೂಯಮ್ಮನ ಮೊಮ್ಮಕ್ಕಳು ಕೋಳಿ ತಿನ್ನುವರೆಂದು ಊರೆಲ್ಲಾ ಹೇಳಿ ಕೊಂಡು ತಿರುಗಾಡಿದರೆ  ಇನ್ನು ನಾ ತಲೆಯೆತ್ತಿ ಹೊರಗೆಲ್ಲೂ ಓಡಾಡುವಂತಿಲ್ಲ  ಅಯ್ಯೋ …. ಅಜ್ಜೀ… ಸುಮ್ಮನೆ ಮಲಗ … Read more

ಎರಡು ಕವಿತೆಗಳು:ವಿಲ್ಸನ್ ಕಟೀಲ್, ಸಿ.ಮ.ಗುರುಬಸವರಾಜ್ ಇಟ್ಟಿಗಿ

ಮೂರ್ತಿಗಳಿಗೆ ಉಚ್ಚೆ ಉಯ್ಯಬೇಡಿ ಮೂರ್ತಿಗಳಿಗೆ ಉಚ್ಚೆ ಹುಯ್ಯಬೇಡಿ ವಿಚಾರವಾದಿಗಳೆ! ಮೂರ್ತಿಗಳಿಗೆ ಉಚ್ಚೆ ಹುಯ್ಯಬೇಡಿ ಹಸಿದ, ಬಾಯಾರಿದ ಕೋಟಿ ಜನರ ಕಂಬನಿಯನ್ನೂ ಒರೆಸದ ಶುಷ್ಕ ಕೈಗಳಿಂದ  ಮಾಡಿಸಿದ ಹಾಲು, ತುಪ್ಪ, ಎಳನೀರಿನ  ಅಭಿಶೇಕವೇ ಸಾಕವುಗಳಿಗೆ! ಮೂರ್ತಿಗಳಿಗೆ ಉಚ್ಚೆ ಹುಯ್ಯಬೇಡಿ!! * ಮೂರ್ತಿಗಳಿಗೆ ನೀವು ಬಯ್ಯಬೇಡಿ ವಿಚಾರವಾದಿಗಳೆ! ಮೂರ್ತಿಗಳಿಗೆ ನೀವು ಬಯ್ಯಬೇಡಿ ಕಂದಪದ್ಯದಲ್ಲೂ ಹೊಳೆದ ಹೊಸ ವಿಚಾರವನ್ನು ಓದಿ ಅರ್ಥೈಸಲಾಗದ ಮಂತ್ರ ಪಂಡಿತರ  ಬಾಯ್ಗಳಿಂದ ಹೊರಟ ಒಣ ಪಠಣಗಳ ಕಿರಿಕಿರಿಯೇ ಸಾಕವುಗಳಿಗೆ! ಮೂರ್ತಿಗಳಿಗೆ ನೀವು ಬಯ್ಯಬೇಡಿ!! * ಸಾಧ್ಯವಾದರೆ ನಾವೆಲ್ಲಾ … Read more

ಮೂವರ ಕವನಗಳು: ಗಣೇಶ್ ಖರೆ, ಶ್ರೀದೇವಿ ಕೆರೆಮನೆ, ಲಕ್ಷ್ಮೀಶ ಜೆ.ಹೆಗಡೆ

ಮಸಣದ ಹೂವು:   1.ವಿಕೃತ ಕಾಮಿಗಳ ಕಾಮದಾಹಕೆ ಬಲಿಯಾದ ಹುಡುಗಿಯ ಗೋರಿಯ ಮೇಲಿನ ಹೂವಲ್ಲೂ ಅದೇ ಮುಗ್ಧ ನಗು… ಆದರೆ ಇಲ್ಯಾರೂ ಹೊಸಕುವವರಿಲ್ಲ. 2.ಇಂದು  ಮಸಣದಲ್ಲೂ ನೀರವ ಮೌನ ಆಕೆ ಬಂದಿದ್ದಾಳೆ ಕಾಮುಕರ ಕಾಮಕ್ರೀಡೆಗೆ ಪ್ರಾಣತೆತ್ತು. 3.ಹೆಣ್ಣೊಡಲ ಮಾತು… ಯಾರ ಭಯವಿಲ್ಲ ನನಗೆ ಹುಟ್ಟಿಬಂದರೆ ಮಸಣದ ಹೂವಾಗಿ. 4.ಹೆಣ್ಣು ಸುರಕ್ಷಿತ ಒಂದು ತಾಯಿಯ  ಗರ್ಭದಲ್ಲಿ, ಇನ್ನೊಂದು  ಮಸಣದ  ಗೋರಿಗಳಲ್ಲಿ. 5.ಮಸಣದಲ್ಲಿ  ನನ್ನವಳ  ಗೋರಿಯ ಮೇಲೆ ಅರಳಿದ್ದ ಹೂವೂ ನನ್ನ ನೋಡಿ ನಕ್ಕಿತ್ತು ಅವಳು ನಕ್ಕಂತೆ. 6.ಎಷ್ಟಿದ್ದರೂ ಏನಿದ್ದರೂ … Read more

ನಾಲ್ಕು ಕವಿತೆಗಳು: ವೆಂಕಟೇಶ್ ನಾಯಕ್, ಶಿವಕುಮಾರ ಚನ್ನಪ್ಪನವರ, ಗುರು ಪ್ರಸಾದ್, ರಾಣಿ ಪಿ.ವಿ.

ಬೆಳೆ ಕಳೆ ನನ್ನ ಬೆಳೆ, ನನ್ನ ಕಳೆ ನನ್ನದೇ ಹೊಲದಲ್ಲಿ ನಾನೇ ಭಿತ್ತಿದ ಬೀಜ ಸದಾವಕಾಶದಲ್ಲಿ ಬೆಳೆದು ಕಳೆ ಇಲ್ಲದ ಬೆಳೆ ಕನಸು ಕಂಡಿದ್ದು ನಿಜ ಮಣ್ಣಿದು, ಕಪ್ಪಿರಲಿ ಕೆಂಪಿರಲಿ ಖಂಡಿತ ಚಿಗುರುವುದು ಕಳೆ ನೀರಾಕಿದ್ದು ನಾನೇ ಬೆಳೆಗೆ, ಇಂಗಿತ. ಅದರೊಡನೆ ಬೆಳೆದದ್ದು ಕಳೆ ಇಂದು, ಬೆಳೆಗಾತ್ರಕ್ಕೆ ಬೆಳೆದ ಕಳೆ ಅಲ್ಲಿ ಕೆಸರು ತುಂಬಿದ ಕೊಳೆ ಈಗ ಪಿಕಾಸಿ ಹಿಡಿದು ಹೊಲದ ಬದಿಯಲ್ಲಿ ನಿಂತ ನಾನು ತಲೆಯಲ್ಲಿ ಸಾಕದಿದ್ದರೂ ಬದುಕುವ ಹೇನು   ರಭಸದಲಿ ತೆಗೆಯ ಬೇಕೆಂದಿರುವೆ … Read more

ನಾಲ್ವರ ಕವನಗಳು: ಜಾನ್ ಸುಂಟಿಕೊಪ್ಪ, ಪರಶು ರಾಮ್, ಮುರಳಿ ತರೀಕೆರೆ, ಪವಿತ್ರ ಆಚಾರ್ಯ

ಮೂಲ ನನ್ನ ಬಯಕೆಗಳ ಮೂಲ ಈ ಎದೆಗೂಡಾಗಿದ್ದರೆ ತುರ್ತಾಗಿ ಎದೆಗೂಡನು ಕೆಡವಿ ಬಿಡುವುದು ಲೇಸು ಇಲ್ಲವಾದರೆ – ಈ ದೇಹ ಪಾಳು ಬಿದ್ದೀತು ,,.   ನನ್ನ ಬಯಕೆಗಳ ಮೂಲ ಈ ನೆತ್ತರಾದರೆ ಒಮ್ಮೆ ಎಲ್ಲವ ಬತ್ತಿಸುವುದು ಲೇಸು ಇಲ್ಲವಾದರೆ – ಮೈ ನೀಲಿಗಟ್ಟೀತು ,,,   ನನ್ನ ಬಯಕೆಗಳ ಮೂಲ ಈ ಉಸಿರಾದರೆ ಒಮ್ಮೆ ಸತ್ತುಬಿಡುವುದು ಲೇಸು ಇಲ್ಲವಾದರೆ – ಉಸಿರಿಗೆ ಉಸಿರು ಸೇರಿ ಊರು ಕೆಟ್ಟೀತು ,,,   ನನ್ನ ಬಯಕೆಗಳ ಮೂಲ ಈ … Read more

ಮೂರು ಕವಿತೆಗಳು: ಕಾವ್ಯ ಪ್ರಿಯ, ಬಸವರಾಜ್ ಕದಮ್, ರಾಣಿ ಪಿ.ವಿ.

ಬ್ಯಾಚುಲರ್ ಫುಡ್ಸ್.. ಬೆಳಗಾಗುತ್ತಲೆ ಎದ್ದೊಡನೆ ಏನಾಗುವುದು ನನಗೇಕೊ ಮೊದಲು ಹಸಿವಾಗುವುದು ಊರಿನಲ್ಲಿದ್ದಾಗ ತಿ೦ಡಿ ತಯಾರಾಗುತ್ತಿದ್ವು ಹೊಟ್ಟೆ ತು೦ಬ ತಿ೦ದು ಅಡ್ಡಾಡುತ್ತಿದ್ದೆವು… ಇ೦ದಿನ ಪರಿಸ್ತಿತಿ ಬದಲಾಗಿಹುದು ರಾತ್ರಿ ಮನೆಗೆ ಬ೦ದರೂ ಕೇಳರಾರಿಹರು ಊಟ ತಿ೦ಡಿ ಉಪಚಾರದ ಮಾತೆಲ್ಲಿಹುದು ಪಿಜಾ ಅ೦ಗಡಿಯವನಿಗೆ ವ್ಯಾಪಾರ ಜೋರು… ಇದಕ್ಕೆ ಬೇಕೊ೦ದು ಶಾಶ್ವತ ಪರಿವಾರವು ಯೊಚಿಸಿ ನೊಡಿದೆ ಎನಿಹುದು ದಾರಿಯೂ ಅಡಿಗೆ ಮಾಡುವುದು ನನಗೆ ಸುಲಭವು ಲೇಟಾದರೂ ಹಚ್ಚುವೆನು ಒಲೆಯ ದಿನವೂ…. ಬೆಳಗಿನ ತಿ೦ಡಿಗೆ ಕಾರ್ನ್ ಫ್ಲೇಕ್ಸು ಮಧ್ಯಾನ ಕ್ಯಾ೦ಟೀನ ಮಿನಿ ಮೀಲ್ಸು ಸ೦ಜೆ … Read more

ಮೂರು ಕವನಗಳು: ಸಂತೇಬೆನ್ನೂರು ಫೈಜ್ನಟ್ರಾಜ್, ಜಾನ್ ಸುಂಟಿಕೊಪ್ಪ, ಎಸ್. ಕಲಾಲ್

ದ್ವಿಪದಿಗಳು ಕುಡಿದ ಅಮಲಿನಲ್ಲಿಲ್ಲ ಸಖಿ ನೀನಿಲ್ಲ ಎಂಬುದೊಂದು ನೋವೆನಿಸಿಲ್ಲ ನನಗೆ         ಹೆಜ್ಜೆ ಇಟ್ಟಲ್ಲೆಲ್ಲಾ ಮುರಿದ ಹಪ್ಪಳ         ಸದ್ದು ಪುಡಿಯಾದ ಕನಸುಗಳು ಜೀವ ಬಿಟ್ಟವು ನನಗೂ ಎಚ್ಚರ ಇದೆ ನೆನಪಿರಲಿ ಕುಡಿದರೇನು ಮರೆವಲ್ಲ ಹಳೇ ಮೆಲುಕು!         ನಡೆ ನಡೆದಂತೆ ದಾರಿ ಹಿಂದೆ ಅಷ್ಟೆ;         ಹಿಂದಿನದು ಬಿಟ್ಟಿಲ್ಲ ಜೊತೆಗೆ ಅಚ್ಚರಿ ಕನಸ ಚರಂಡಿ ದಾಟಲು ದರ್ದಿದೆ ಸಭ್ಯರೆಲ್ಲಾ ನನ್ನ ಅವಸ್ಥೆಯೆಡೆ ಕಣ್ ನೆಟ್ಟಿದ್ದಾರೆ!         ಹಗಲಿನಲಿ ಹಾಡಾಗಿ … Read more

ಮೂರು ಕವಿತೆಗಳು: ಸಂಗೀತ ರವಿರಾಜ್, ಗಣೇಶ್ ಖರೆ, ಸಿದ್ಧಲಿಂಗಸ್ವಾಮಿ ಎಚ್ ಇ

ನಾನು ಕೊಳಲಾಗಿ ಪ್ರೀತಿಸಲೇ…? ಕೊಳಲಿನವಗಾಹನೆಗೆ ಜೀವ ತೆತ್ತ ರಾಧೆ ಗಾಳಿಯಲ್ಲು ಲೀನವಾದ ಸ್ವರ ಸನ್ನಿಹಿತ ಎಷ್ಟೊಂದು ಪ್ರೀತಿಗಳು! ಮುಡಿಯಲ್ಲಿ, ಹೆಬ್ಬೆರಳ ತುದಿಯಲ್ಲು……………! ನಾಚಿ ನಿಂತ ನೀರೆಗೆ ನಿರ್ಮಲ ನಿರ್ಬಂಧನೆ ಪಂಚಾಕ್ಷರಿ, ಸುಪ್ರಭಾತ ಸ್ವರ ತೆತ್ತ ಮಾಧವ ಕೊಳಲ ಗೋಪುರ ನಿನಾದ ಮುಗಿಲು ಮುಟ್ಟಿತು ಪ್ರೀತಿಗಾಗಿ ಪ್ರೀತಿಸಿದ ತೆಕ್ಕೆಗೆ ನ್ಯಾಯ ತೆತ್ತ ಮುತ್ತಿನ ಪೀಠ ತೇದ ಗಂಧದಂದದಿ ನಿಷ್ಠೆ ಹೊತ್ತ ರಾಧೆ ರಾಗ ತೆತ್ತ ದಿಟ ಸಂದೇಶ ಸುತ್ತ ಸುಳಿವ ಮಾಯೆಯಲ್ಲು ಕಣ್ಣ ಕಾಣ್ಕೆಯ ನೀಲಿ ನೋಟ ಕಣ್ಣಿಂದ … Read more

ಮಕ್ಕಳ ಪದ್ಯಗಳು: ಹೃದಯಶಿವ

೧)ಶುಭೋದಯ  __________________ ದಿನಾ ನಾನು ಶಾಲೆಗೆ  ಹೋಗುವಂಥ ವೇಳೆಗೆ  ಹಾದಿಬದಿಯ ಬೇಲಿಯು  ಮುಡಿದು ನಿಂತ ಹೂವಿಗೆ  ಹೇಳುವೆ ಶುಭೋದಯ ಹೊಳೆದಂಡೆಯ ಬಂಡೆಗೆ  ಒರಗಿನಿಂಥ ಜೊಂಡಿಗೆ  ರೆಕ್ಕೆಗೆದರಿ ಹಾರುವ  ಹಚ್ಚಹಸಿರು ಮಿಡತೆಗೆ  ಹೇಳುವೆ ಶುಭೋದಯ ಎತ್ತರೆದೆಳನೀರಿಗೆ  ಹತ್ತುವಂಥ ಅಳಿಲಿಗೆ  ಪುಟ್ಟ ಮೂರುಗೆರೆಗಳ   ಅದರ ಮುದ್ದುಬೆನ್ನಿಗೆ ಹೇಳುವೆ ಶುಭೋದಯ ಹಾಲ್ದುಂಬಿದ ತೆನೆಗೆ ಕೊಕ್ಕಿಡುವಾ ಹಕ್ಕಿಗೆ  ತೊಟ್ಟಿಲಾಗಿ ತೂಗುವ  ತಾಯಿಯಂಥ ಪೈರಿಗೆ  ಹೇಳುವೆ ಶುಭೋದಯ  ಬೆಳ್ಳಿಯಂಥ ಬೆಳಗಿಗೆ  ಚಿನ್ನದಂಥ ಕಿರಣಕೆ  ಬದುಕಿರುವ ತನಕವೂ  ಬದುಕುಳಿಯುವ ಚಿತ್ರಕೆ  ಹೇಳುವೆ ಶುಭೋದಯ ೨)ಗುಂಡನ … Read more

ಮೂವರ ಕವಿತೆಗಳು: ಶ್ರೀದೇವಿ ಕೆರೆಮನೆ, ಶಿವಕುಮಾರ್ ಸಿ., ಸ್ವರೂಪ್ ಕೆ.

ಕಣ್ಣೀರಿಗೂ ಅರ್ಹಳಲ್ಲ ನನ್ನ ಹೆಣದ ಮುಖದ ಮೇಲೆ  ನಿನ್ನ ಬಿಸಿ ಬಿಸಿ ಕಣ್ಣ ಹನಿ….  ಅಯ್ಯೋ ನೀನು ಅಳುತ್ತಿದ್ದೀಯಾ ಬೇಡ ಗೆಳೆಯಾ ನಿನ್ನ ಕಣ್ಣೀರು ನನ್ನನ್ನು ಪಾಪ ಕೂಪಕ್ಕೆ ತಳ್ಳುತ್ತದೆ ನರಕದ ಬಾಗಿಲಿನಲ್ಲಿ ನಿಲ್ಲಿಸುತ್ತದೆ ನನಗೆ ಗೊತ್ತು ನಿನ್ನ ಕಣ್ಣೀರಿಗೂ ನಾನು ಅರ್ಹಳಲ್ಲ ಬದುಕಿದ್ದಷ್ಟು ದಿನವೂ ನಿನ್ನ ಕಣ್ಣಲ್ಲಿ  ನೀರೂರಿಸುತ್ತಲೇ ಇದ್ದೇನೆ ನನ್ನ ಬಿರು ನುಡಿಗೆ ನೀನು ನಡುಗುತ್ತಲೇ ಕಾಲಕಳೆದಿದ್ದೀಯಾ ನನ್ನ ಪ್ರೇಮದ ಹಸಿವಿಗೆ ಸ್ಪಂದಿಸಲಾಗದೇ ಕಂಗಾಲಾಗಿದ್ದೀಯಾ ನನ್ನ ಪ್ರೇಮದ ಉತ್ಕಂಟತೆಗೆ ಉತ್ತರಿಸಲಾಗದೇ ಮೌನತಾಳಿದ್ದೀಯಾ ನಿನ್ನ ಅಕಾಲಿಕ … Read more

ಪಂಜು ಕಾವ್ಯಧಾರೆ

  ಆಗಷ್ಟೇ … ಸ್ನಾನ ಮುಗಿಸಿ, ತಿಂಡಿ ತಿಂದು  ಒಂದರ್ಧ ಗಂಟೆ ನಿದ್ರಿಸಿದರೆ ಹೇಗೆ…? ಆಯಾಸದ ಮೈಮನಸ್ಸಿಗೂ… ಕೊಂಚ ಆರಾಮ ಆನಂತರ ಆಸ್ಪತ್ರೆಗೆ ಹೋದರಾಯ್ತೆಂದು  ಹಾಸಿಗೆಯ ಮೇಲೆ ಹಾಗೆಯೇ….  ಮೈ ಚೆಲ್ಲಿ  ಇನ್ನೇನು ಮಲಗಿ ವಿಶ್ರಮಿಸಬೇಕು ಒಮ್ಮೆಲೇ… ಬಾಗಿಲ ದಬ ದಬ ಬಡಿವ ಸದ್ದು ಜೊತೆಗೆ ಕಾಲಿಂಗ್ ಬೆಲ್ ನ ಜೋರು ಶಬ್ಧ  ಹಾಳಾದ್ದು ನೆಮ್ಮದಿಯಾಗಿ ನಿದ್ರಿಸುವಂತಿಲ್ಲ ಅಭೀ… ಅಭೀ… ಹೋಗಿ ನೋಡ ಬಾರದೆ ಕರೆದರೂ… ಇವಳ ಸುಳಿವಿಲ್ಲ, ಉತ್ತರವಿಲ್ಲ ಐದು ತಿಂಗಳ ಗರ್ಭಿಣಿ ಬೇರೆ, ಎಲ್ಲಿ … Read more

ಪಂಜು ಕಾವ್ಯಧಾರೆ

ಡಿಸೆಂಬರ್ ಚಳಿ  ಡಿಸೆಂಬರ್ ಬಂತೆಂದರೆ ಸಾಕು ತುಟಿಗಳು ಒಣಗಿ ಅವಳು ಕೊಡುತ್ತೇನೆಂದ ಮುತ್ತು  ಮತ್ತೆ ಮತ್ತೆ ನೆನೆಯುವಂತೆ ಮಾಡುತ್ತಿದೆ, ಜಗದ ಋತು ಚಕ್ರಕೆ ತಲೆ ಬಾಗಿ  ಕೊರೆಯುವ ಚಳಿಯಲಿ  ಹೆಣ್ಣಿನ ಸೌಂದರ್ಯದ ವಕ್ರತೆ  ಗಂಡಿನ ಚಂಚಲತೆಯನು ಕೆಣಕುತ್ತಿದೆ.  ನಿರಾಶೆ  ಕತ್ತಲೆಯ ಕನಸುಗಳು ಸೋತಾಗ  ಹೋಗುತಿರುವ ದಾರಿ ಮೌನ ತಳೆದಾಗ  ಬಯಕೆಗಳ ಬಾಯಾರಿಕೆಗೆ ನಗುತಲಿದೆ ಮೌನ  ಕಾಣದ ತೀರಕೆ ಹೊರಟಿದೆ ಜೀವನ  ನಿಲ್ಲದ ತವಕ,ಕೊನೆಯಿಲ್ಲದ ಏಕಾಂತ  ನಿಸ್ವಾರ್ಥಿ  ಹೇ ಹಣತೆಯ ದೀಪ ನೀನೆಷ್ಟು ನಿಸ್ವಾರ್ಥಿ  ರಾತ್ರೀಲಿ ನಿನ್ನ ಬಿಟ್ಟರೆ … Read more

ಪಂಜು ಕಾವ್ಯಧಾರೆ

ಕನಸ್ಫುರಣೆ:   ಹಾಡು ಹರಿಯದೆಯೇ ರಾಗ ಸೃಜಿಸಿದೆ  ಮಧುರ ಗಾನಕೆ ಸೆರೆಯಾಗಿ  ಭಾವ ತೊರೆಯದೆಯೇ ಮೌನ ಮಿಡಿದಿದೆ  ಕನಸ ಸಾಲಿಗೆ ಕರೆಯಾಗಿ  ಮಾತು ಹಾಡಾದಾಗ, ಮೌನಭಾವವರಿತಾಗ  ಕಾವ್ಯ ಹೊಮ್ಮಿದ ಪರಿಯಂತೆ  ಕೌತುಕ ಕಾಡಿದ ಹಾಡು ನನ್ನ ಪಾಡು..!   ತುಟಿ ವೊಡೆಯದಲೇ ನಗು ಸುರಿದದಂಗೆ  ಪುಳಕನಿನ್ನಾಟ ನೆನೆದು ಬೆರಗಾಗಿ  ಕಣ್ಣು ಮಿಟುಕದೆಯೇ ನೀರು ಹರಿದಂಗೆ  ವಿರಹ ತಾಳದೆಯೆ ನೋವಾಗಿ ನಗುವತಿಯಾಗಿ ಹನಿಯುರುಳಿದಾಗ  ಸಂವೇದನೆ ಚಿಮ್ಮಿದ ಝರಿಯಂತೆ   ವೇದನೆಯ ಹಾಡು ನನ್ನ ಜಾಡು..!   ಕಾವ್ಯ ಸಾಲಿನ … Read more

ಆಲಿಸ್ ವಾಕರ್ ಳ ಮೂರು ಕವಿತೆಗಳು: ರಮೇಶ್ ಮೇಗರವಳ್ಳಿ

 *ಆಲಿಸ್ ವಾಕರ್* ಅಮೇರಿಕಾದ ಜಾರ್ಜಿಯಾದ ಈಟಾನ್ಟನ್ ನಲ್ಲಿ ೯ – ೨ – ೧೯೪೪ ರ೦ದು ಜನಿಸಿದ ಆಲಿಸ್ ವಾಕರ್ ಅಮೇರಿಕಾದ ಸುಪ್ರಸಿದ್ಧ ಕಾದ೦ಬರಿಗಾರ್ತಿ, ಕಥೆಗಾರ್ತಿ, ಕವಯತ್ರಿ, ಪ್ರಬ೦ಧಗಾರ್ತಿ ಮತ್ತು ಹೋರಾಟಗಾರ್ತಿ.  ಅವಗಢವೊ೦ದರಲ್ಲಿ ಒ೦ದು ಕಣ್ಣನ್ನು ಕಲೆದುಕೊ೦ಡ ಆಲಿಸ್ ವಾಕರ್ ಳಿಗೆ ಆಗಾಧವಾದ ಓದಿನ ಹಸಿವು. ಸಾರಾ ಲಾರೆನ್ಸ್ ಕಾಲೇಜ್ ಮತ್ತು ಸ್ಪೆಲ್ಮನ್ ಕಾಲೇಜ್ ಗಳಲ್ಲ್ಲಿ ಶಿಕ್ಷಣ ಪಡೆದ ಆಲಿಸ್ ವಾಕರ್ ಳ ಸುಪ್ರಸಿಧ್ಧ ಕಾದ೦ಬರಿ "The color purple" ಗೆ ಪ್ರತಿಷ್ಠಿತ  ಪುಲಿಟ್ಸರ್ ಬಹುಮಾನ ಮತ್ತು … Read more

ಆಡಿಯೋ ಸಹಿತ ಪಂಜು ಕಾವ್ಯಧಾರೆ

ಅಮ್ಮ ನಾನು ಕೈಚಾಚಿ ಹನಿಗಳ  ಸ್ಪರ್ಶಿಸಲು  ಇಬ್ಬನಿಯ ಹೊತ್ತ ಚಳಿಗಾಳಿ ಮೈಯ ಅಪ್ಪಲು ನೆಲ ತುಂಬಿ ನಿಂತ ನೀರು ಪಾದಗಳ ಮುತ್ತಿಡಲು ನೀನು ನೆನಪಾಗುತ್ತೀಯ ಅಮ್ಮ ಒದ್ದೆಯಾದ ಮೈ ಒರೆಸಿದಂತೆ ಕೆಸರಾದ ಕಾಲ ನೇವರಿಸಿ  ತೊಳೆದಂತೆ ಅನ್ನಿಸಿಬಿಡುವುದು  ಪ್ರತೀಬಾರಿ ಮಳೆಬರಲು -ಅಕ್ಷಯ ಕಾಂತಬೈಲು                     ನಾ ನಿನ್ನ ಮರೆತು, ತೊರೆಯ ಹೊರಟರೆ ತಾಯಿ  ತನ್ನ ಮಗುವನ್ನು ತೊರೆದಂತೆ  ಮರ ತನ್ನ ಬೇರನ್ನು ತಾನೇ  ಕಡಿದುಕೊಂಡಂತೆ, … Read more

ಆಡಿಯೋ ಸಹಿತ ಪಂಜು ಕಾವ್ಯಧಾರೆ

ಕನ್ನಡ ನಾಡಿನಲಿ  ಶ್ರೀಗಂಧದ ನಾಡಿನಲಿ ಸಹ್ಯಾದ್ರಿಯ ಗೂಡಿನಲಿ ಕಾವೇರಿಯ ಮಡಿಲಿನಲಿ ನನ್ನದೊಂದು ಪುಟ್ಟ ಗುಡಿಸಲು ಕನ್ನಡ ನುಡಿಯು ಮಿನುಗುವುದಲ್ಲಿ ಹಸಿರು ತೋರಣದೊಲು ಹಸಿರನುಟ್ಟ ಭುವನಗಿರಿ ಮುಡಿಯಲಿಟ್ಟು ನವಿಲುಗರಿ ಹಕ್ಕಿಗೊರಲ ತಬ್ಬಿ ಹಿಡಿದು ಚಂದಿರನ ಗಿಲಕಿ ಬಡಿದು ನನ್ನ ಹ್ರುದಯ ಕನ್ನಡವನೆ ಮಿಡಿಯುವುದು ನನ್ನ ಮಡದಿ ಮತ್ಸ್ಯಕನ್ಯೆ ಬಳೆಯ ಸದ್ದು ಗೆಜ್ಜೆನಾದ ಅಡಿಗಡಿಗೂ ಕನ್ನಡ ಸುತನ ಪ್ರವರ ತೊದಲು ನುಡಿಯಲಿ ಸವಿಜೇನು ಕನ್ನಡ ನಮ್ಮ ಮನೆಯ ಅಂಗಳದಿ ಪ್ರಜ್ವಲಿಪುದು ಕನ್ನಡ ರಾಷ್ಟ್ರನುಡಿ ರಾಜನುಡಿ ಯಾವುದಾದರೇನು ದಾಯಾದಿಗಳ ನುಡಿಯ ನಡೆಯು … Read more

ಪಂಜು ಕಾವ್ಯಧಾರೆ

ದೇವನೊಲಿದ ಮೊದಲು ಸಾರಿ ತೊದಲು ನುಡಿ ತುಟಿಗೆ ಬಂದಾಗ ಪವಿತ್ರ ಬೆಟ್ಟವನ್ನೇರಿ ಪ್ರಾರ್ಥಿಸಿದೆ ದೇವರಿಗೆ- 'ಪ್ರಭು, ನಾ ನಿನ್ನ ಸೇವಕ -ಅನ್ಯಥಾ ಶರಣಂ ನಾಸ್ತಿ, ತ್ವಮೇವ ಶರಣಂ ಮಮ' ಬಿರುಗಾಳಿಯಂತೆ ಬೀಸಿ ಹೋದ ದೇವನದೆಂದಿನಂತೆ ನಿರುತ್ತರ. ಸಾವಿರ ಯುಗಗಳಾನಂತರ ಮತ್ತೆ ಏರಿದೆ-ನಾ ಪವಿತ್ರ ಬೆಟ್ಟ ಪ್ರಾರ್ಥಿಸಿದೆ ದೇವರಿಗೆ-  'ನೀ ಕರ್ತ, ನಾ ನಿನ್ನ ಕೈ ಬೊಂಬೆ, ನನ್ನ ಅಣು ರೇಣು ತೃಣವೂ ನಿನ್ನದೆ' ಗರಿಗೆದರಿದ ರೆಕ್ಕೆಯಂದದಿ ಹಾರಿಹೋದ ದೇವನದೆಂದಿನಂತೆ ನಿರುತ್ತರ. ಸಾವಿರ ಯುಗಗಳಾನಂತರ ಮತ್ತೆ ಏರಿದೆ-ನಾ ಪವಿತ್ರ … Read more

ಮೂರು ಕವಿತೆಗಳು: ಶಿವಕುಮಾರ ಸಿ., ಕುಸುಮ ಆಯರಹಳ್ಳಿ, ನೇಮಿನಾಥ ತಪಕೀರೆ

ನಾ ಕಟ್ಟುವದಿಲ್ಲ ನಾ ಕಟ್ಟುವದಿಲ್ಲ….. ತಾಜ್ ಮಹಲ ನಿನ್ನ ಜಾತ್ರೆಯಲ್ಲಿ ತೂಗುವ ತೊಟ್ಟಿಲು ಹರಿದಾಡುವ ಬೊ೦ಬೆ  ಸದ್ದು, ಸಿಳ್ಳೆಗಳೆಲ್ಲಾ ನಾನಾಗಿದ್ದರೂ.. ಬದುಕ ಕಚ್ಚೆ ಸಿಗದ ತಿರುಕ ನಾ ಕಟ್ಟುವದಿಲ್ಲ….. ಚಾರ್ ಮಿನಾರ್ ಮನಕೆ ಕ೦ಬದ ಕೊರತೆ ಕೆಸರು ಹಾದಿ ಕಲ್ಲು ಮುಳ್ಳು ಬೆಚ್ಚಿ ಬಿದ್ದಾಗಲೊಮ್ಮೆ ಪ್ರೇರಣೆಯ ಹಣತೆ ನೀನು ದಾರಿಹೋಕ ನಾನು ನಾ ಕಟ್ಟುವದಿಲ್ಲ ಕವಿತೆ ಕೊಸರಾಡುವ ಕಲ್ಪನೆ ಹೆಸರಿಗೂ ಸಿಗದ ನಗು ಉಸಿರಾಟಕ್ಕು ಬಿಗಿದ ನೋವು ಕಟ್ಟಿದ್ದೇನೆ…… ಅಲ್ಲೊ೦ದು ಗೂಡ ನಿನ್ನ ಹೆಸರಿಗೊ೦ದು ನಗು ಕೊಸರಿಗೊ೦ದು … Read more

ಮೂರು ಕವಿತೆಗಳು: ಜೈಕುಮಾರ್ ಎಚ್.ಎಸ್., ಪ್ರಶಾಂತ್ ಭಟ್, ರಾಣಿ ಪಿ.ವಿ.

ತೇಪೆ ಚಡ್ಡಿ ಮತ್ತು ನಕ್ಷತ್ರ ಶನಿವಾರದ ಬೆಳ್ಳಂಬೆಳಗ್ಗೆ ಒಪ್ಪತ್ತಿನ ಶಾಲೆಗೆ ಹೊಂಟಿದ್ದೆ ಎದುರಿಗೆ ಸಿಕ್ಕ ಜಮೀನ್ದಾರನ ಸೊಕ್ಕಿನ ಹೈದ 'ನಿಂದು ಪೋಸ್ಟ್ ಆಗಿದೆ' ಎಂದ! ನನಗ್ಯಾವ ಲೋಕದವರು ಪತ್ರ ಬರೆವರೆಂದು ನೋಡಿದರೆ ಅವನ ಕಣ್ಣುಗಳು ನೆಟ್ಟಿದ್ದು ಒಡೆದುಹೋಗಿರುವ ನನ್ನ ಚಡ್ಡಿ ಮೇಲೆ! ಹೋದ್ವಾರ ಅವ್ವ ತವರಿಂದ ತಮ್ಮನ ಚಡ್ಡಿ ತಂದು ಇಕ್ಕಿಸಿದ್ದಳು, ಇದೇ ಹಲ್ಕಟ್ ಹೈದ, 'ದೊಗಳೆ ಚಡ್ಡಿ' ಎಂದು ಆಗಲೂ ಛೇಡಿಸಿದ್ದ. ಅಪ್ಪ ಗದ್ದೆಗೆ ಪಲಾಯನಗೈವ ಮೊದಲೇ ಹಿಡಿಯಲೆಂಬಂತೆ ಓಡಿದೆ ಮನೆ ಎದುರು ಏರು ಕಟ್ಟುತ್ತಿದ್ದ … Read more

ಮೂರು ಕವಿತೆಗಳು: ಶಿದ್ರಾಮ ತಳವಾರ್, ವೆಂಕಟೇಶ ನಾಯಕ್, ಲೋಕೇಶಗೌಡ ಜೋಳದರಾಶಿ

ನಾನೊಂದು ಖಾಲಿ ಸೀಸೆ ನಾನೊಂದು ಖಾಲಿ ಸೀಸೆ ಈಗ ನಾ 'ನೊಂದೆ', ಮತ್ತು ತರುವ ಮದಿರೆ ತುಂಬಿಹೆ ನನ್ನೊಳು ಪೂರ್ತಿ, ಬರೀ ಮೈಗಷ್ಟೇ ಮತ್ತು; ಮತ್ತೇನಿಲ್ಲ ದಾಹದಿ ಮದಿರೆಯ ದಾಸರು ಕೊಂಡು ಹೀರಿದರೆಲ್ಲ ನನ್ನೊಳ ಮತ್ತು ; ಮತ್ತೇನೂ ಅಷ್ಟೇ ಮತ್ತೇನಿಲ್ಲ, ದಾಹದಿ ಹೀರಿ ಮೋಹದಿ ಇವರು ಮುತ್ತಿಕ್ಕಿ ಮತ್ತೆಲ್ಲ ಹೀರಿ ಮತ್ತೂ ಮುತ್ತಿಕ್ಕಿ; ಕೊನೆಗೊಮ್ಮೆ ಬಿಸಾಕಿದರೆನ್ನ ಬೀದಿಯಲಿ ಅಷ್ಟೇ ನನ್ನೊಳು ಮತ್ತೇನಿಲ್ಲ, ತೂರಾಡುತಲಿ ಕೂಗಾಡುತಲಿ ಬೈಯುತಲಿ ನನ್ನನೂ; ಬೈಸಿಕೊಳುತಲಿ ತಮ್ಮನೂ ಕಕ್ಕುತಿಹರು ಮನದೊಳಗಣ ಕಿಚ್ಚನು ಇಷ್ಟೇ … Read more

ನಾಲ್ಕು ಕವಿತೆಗಳು: ವೈ.ಬಿ.ಹಾಲಬಾವಿ, ಮೌಲ್ಯ ಎಂ., ಸಾಬಯ್ಯ ಸಿ.ಕಲಾಲ್, ಶೀತಲ್ ವನ್ಸರಾಜ್

ಪ್ರೀತಿ ಬೆರೆಸೋಣ… ಹೇಳುವುದು ಬಹಳಷ್ಟಿದೆ ಏಳುತ್ತಿಲ್ಲ ನಾಲಿಗೆ ಸೀಳಲ್ಪಟ್ಟಿದೆ ಹೊಲಿಯಲ್ಪಟ್ಟಿವೆ ತುಟಿಗಳು ಆದರೂ; ಮಾತಾಡೋಣ ಬಾ ಗೆಳಯ ನಮ್ಮ ಎದೆಗಳಿಂದ ನೂತ ನೋವಿನ ಎಳೆಗಳಿಂದ… ಕೇಳುವುದು ಬಹಳಷ್ಟಿದೆ ಸುರಿದ ಸೀಸ ಇನ್ನೂ ಆರಿಲ್ಲ ಕಿವುಡಾಗಿವೆ ಕಿವಿಗಳು ಪಿಸುಗುಡುತ್ತಿವೆ ಸನಾತನ ಗೋಡೆಗಳು ಆದರೂ; ಆಲಿಸೋಣ ಬಾ ಗೆಳಯ ನಮ್ಮ ಎದೆಬಡಿತದ ಸದ್ದುಗಳಿಂದ… ನೋಡುವುದು ಬಹಳಷ್ಟಿದೆ ಕುರುಡಾಗಿವೆ ಕಣ್ಣುಗಳು ನೆಟ್ಟ ಅವರ ಕ್ರೂರ ನೋಟಗಳಿಂದ ಆದರೂ; ಬೆಸೆಯೋಣ ಬಾ ಗೆಳೆಯ ನಮ್ಮ ಅಂತರಂಗದ ನೋಟಗಳನ್ನು ಎದೆಗೂಡಿನಲ್ಲಿ ಬಚ್ಚಿಟ್ಟ ಕನಸುಗಳಿಂದ… ನಡೆಯುವುದು … Read more

ವಿಶ್ವ ಕವಿತಾ ದಿನದ ವಿಶೇಷ ಕಾವ್ಯಧಾರೆ

ಕನ್ನಡಿಯಲ್ಲಿ ಕಂಡದ್ದು ಕಾಲ ತದೇಕ ಚಿತ್ತದಿ ಕನ್ನಡಿಯನ್ನೆ ಯಾಕೋ ಮೈಮರೆತು ದಿಟ್ಟಿಸಿದ ಕ್ಷಣ ಕಂಡೊಂದು ನೆರಿಗೆಗೆ ಪಿಚ್ಚೆನಿಸಿತು ಬುನಾದಿ!  ನಾನು ಸುಳ್ಳೋ ಕನ್ನಡಿ ಸುಳ್ಳೋ ಕಾಯದ ಕಾಲಕ್ಕೆ ಒಡಂಬಡಿಕೆ ಪತ್ರ ಬಿಂಬಿಸುವೆ … ಅರ್ಧ ತೆರೆದ ಬಾಗಿಲ ಸಂಧಿಯಲಿ ಇಣುಕಿ ನಕ್ಕ ಬಾಲ್ಯ ಈಗ ತಾಳೆ ಹಾಕಿ ಗುಣಿಸಿದರೂ, ಗುನುಗಿದರೂ ಉತ್ತರವಿಲ್ಲದ ಲೆಕ್ಕಾಚಾರಕ್ಕೆ ನನ್ನ ನೋಡಿ ನಗುತ್ತದೆ ಕಂದ ಸವೆಸಿದ ಮಜಲುಗಳ ಮುಖದಲಿ ಬಿದ್ದರೆ ಮಾತ್ರನೇ ಚೂರಾಗುವ ಕನ್ನಡಿಯಲಿ ಕಾಣುವ ನೂರಾರು ಮುಖಗಳು! ಕಂಡ ಒಂದೇ ಒಂದು … Read more