ಕಾಣದ ಕರಡಿ: ದೊಡ್ಡಮನಿ.ಎಂ.ಮಂಜುನಾಥ
ನೂರೆಂಟು ತೂತು ಬಿದ್ದು ಹರಿದ ಬನಿಯನ್ ಹಾಕಿಕೊಂಡು, ಕಿತ್ತು ಹೋದ ಹವಾಯಿ ಚಪ್ಪಲಿಗೆ ಪಿನ್ನು ಹಾಕುತ್ತ, ಮನೆಯ ಅಂಗಳದಲ್ಲಿ ಕೂತಿದ್ದ ಬಳೆಗಾರ ಶಿವಪ್ಪನಿಗೆ ಕುಂಟ್ಲಿಂಗ ಒಂದೇ ಉಸಿರಿನಲ್ಲಿ ಕುಂಟಿಕೊಂಡು ತನ್ನತ್ತ ಓಡಿ ಬರುವುದನ್ನು ಕಂಡೊಡನೆ ಮನಸಿಗೆ ಗಲಿಬಿಲಿಯಾಯಿತು. ಎದೆ ಉಸಿರು ಬಿಡುತ್ತ ನಿಂತ ಕುಂಟ ಲಿಂಗನನ್ನು ಎದ್ದು ನಿಂತು ಏನಾಯ್ತೋ ಕುಂಟ್ಯ ಹಿಂಗ್ಯಾಕ್ ಓಡಿ ಬಂದಿ ? ಎನ್ನುವಷ್ಟರಲ್ಲಿ ಸರೋಜಳ ಸಾವಿನ ವಿಷಯವನ್ನು ಸರಾಗವಾಗಿ ಕುಂಟ ಲಿಂಗ ಒದರಿಬಿಟ್ಟ, ಇದನೆಲ್ಲ ಕೇಳುತ್ತಾ ಕುಸಿದು ಬೀಳುವಷ್ಟು ನಿಶ್ಯಕ್ತನಾದರು ತಡ ಮಾಡದೆ ಉಕ್ಕಿ ಬರುವ ದುಃಖವನ್ನು ನುಂಗಿ ಇವ ಹೇಳಿದ್ದೆಲ್ಲಾ ಸುಳ್ಳಾಗಲಿ ಎಂದು ಇದ್ದ ಬದ್ದ ದೇವರನೆಲ್ಲ ನೆನಪಿಸಿಕೊಳ್ಳುತ್ತಾ … Read more