‘ಕೊನೆಯ ದಿನದೊಳಗೊಂದು’ ಕಥೆ: ಮೊಗೇರಿ ಶೇಖರ ದೇವಾಡಿಗ

ಫಲಿತಾಂಶದ ಪಟ್ಟುಯನ್ನು ಕೂಲಂಕಷವಾಗಿ ಪರಿಶೀಲಿಸಿದ ಮೇಲೆ ಸಹಜವಾಗಿ ಸಂತೃಪಿಯ ನಗು ತೇಲಿತು. ನೋಟಿಸ್ ಬೋರ್ಡ್‍ಗೆ ಹಚ್ಚಿದ ಮೇಲಂತೂ ಮನಸ್ಸು ತುಸು ಹಗುರಾಯಿತು. 8ನೇ ತರಗತಿಯ ಮಕ್ಕಳು ಕೆಲದಿನಗಳಿಂದ ‘ಕಥೆ ಹೇಳಿ ಸಾರ್…’ ಎಂದು ಪೀಡಿಸುತ್ತಿದ್ದದ್ದು ನೆನಪಾಗಿ ‘ಕೊನೆಯ ದಿನದೊಳಗೊಂದು’ ಕಥೆ ಹೇಳಬೇಕೆಂದು ಮನ ಮಾಡಿ ಅತ್ತ ಕಾಲಿಟ್ಟಿದ್ದೆ. ತರಗತಿಯ ಲೀಡರ್ ಅಭಿಷೇಕ್ ‘ಅರುಣ್ ಸರ್ ಬಂದ್ರ… ಇವತ್ತು ಕಥೆ ಗ್ಯಾರಂಟಿ…’ ಎಂದ ತುಸು ಜೋರಾಗಿಯೇ ತರಗತಿ ಕ್ಷಣಾರ್ಧದಲ್ಲಿ ಮೌನವಾಗಿ ನನ್ನ ಕಥೆಗೊಂದು ವೇದಿಕೆ ನಿರ್ಮಿಸಿಕೊಟ್ಟಿತ್ತು. “ಮಕ್ಕಳೇ, ಇದು … Read more

ವಿಜ್ಞಾನಿ ಮಿತ್ರರು: ಡಾ. ಗಿರೀಶ್ ಬಿ.ಸಿ.

ಜಗುಲಿ ಮೇಲೆ ಕುಳಿತು ಬಲಗೈಯಲ್ಲಿ ಬೂದುಗಾಜು ಹಿಡಿದು ಎಡಗೈಯ ಬೆರಳುಗಳ ಮದ್ಯೆ ಅದಾವುದೊ ಕೀಟವನ್ನು ವೀಕ್ಷಿಸುತ್ತ್ತಿದ್ದ ಈಸುರಯ್ಯನ ರವಿ. ಅಚಾನಕ್ ಆಗಿ ಆಗಮಿಸಿದವನಿಗೆ ಕುಳಿತುಕೊಳ್ಳಲು ಕಣ್ಣಲ್ಲೇ ಸಂಜ್ಞೆಮಾಡಿ ತನ್ನ ಅಧ್ಯಯನವನ್ನು ಮುಂದುವರೆಸಿದ. ಅದೇನು ಮಾಡ್ತಾನೋ ನೋಡೋಣ ಅಂತ ಅವನ ಎಡಭಾಗದಲ್ಲಿ ಮಂಡಿವೂರಿ ಕುಳಿತೆ. ಕಣ್ಣು ಮಿಟುಕಿಸದೆ ಆ ಕೆಂಪು ಕೀಟವನ್ನು ನೋಡುತ್ತಾ ಕತ್ತನ್ನು ಮೇಲೆ ಕೆಳಗೆ ಆಡಿಸುತ್ತಾ ಏನನ್ನೋ ನೆನದು ‘ಯೆಸ್ ಯೆಸ್’ ಅಂದ. ಕೈಯಲ್ಲಿರುವುದನ್ನು ನೆಲದ ಮೇಲೆ ಹಾಕಿ ‘ಬಂದೇ ಇರು’ ಅನ್ನುತ್ತ ಒಳಗೆ ಹೋಗುವಾಗ … Read more

ಅಂತೆ ಕಂತೆಗಳ ನಡುವೆ…: ಅಶ್ಫಾಕ್ ಪೀರಜಾದೆ

ಗೆಳೆಯ ಗಂಗಾಧರ ಸತ್ತ ಸುದ್ದಿಯ ಹಿನ್ನಲೆಯಲ್ಲಿ ನಾನು ಬೆಂಗಳೂರಿನಿಂದ ಬೆಳಗಾವಿಗೆ ಪ್ರಯಾಣ ಬೆಳಸಬೇಕಾಗಿ ಬಂತು. ಗಂಗಾಧರ ನನ್ನ ಪ್ರಾಣ ಸ್ನೇಹಿತ, ವಾರಿಗೆಯವ, ಹೆಚ್ಚುಕಮ್ಮಿ ನನ್ನಷ್ಟೇ ವಯಸ್ಸು, ನಲವತ್ತೈದು ಸಾಯುವ ವಯಸ್ಸಲ್ಲ, ಅದಕ್ಕೆ ಅದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಆದರೆ ಗಂಗಾಧರನ ಪತ್ನಿಯೇ ಅಳುತ್ತ ದೂರವಾಣಿಯ ಮುಖಾಂತರ ಇದನ್ನು ಹೇಳಿದಾಗ ನಂಬದೇ ಗತಿಯಿರಲಿಲ್ಲ. ಗಂಗಾಧರನ ಅಗಲಿಕೆಯ ವೇದನೆ ಹೊತ್ತು ಭಾರವಾದ ಮನಸ್ಸಿನಿಂದ ಬೆಳಗಾವಿ ಬಸ್ಸು ಹತ್ತಿದೆ. ಬಸ್ಸು ನಿಲ್ಧಾಣ ಬಿಟ್ಟಾಗ ರಾತ್ರಿ ಹತ್ತರ ಸಮಯ, ಸೀಟಿಗೊರಗಿ ಮಲಗಲು ಪ್ರಯತ್ನಿಸಿದೆ.ಸಾಧ್ಯವಾಗಲಿಲ್ಲ. ಕೇವಲ … Read more

ಸೌಮ್ಯ ನಾಯಕಿ ಸ್ನೇಹ ಮಹೋತ್ಸವ: ವೃಂದಾ. ಸಂಗಮ

ನಿಜವಾಗಿಯೂ ಇದು ಸೌಮ್ಯ ನಾಯಕಿಯ ಕಥೆಯೂ ಅಲ್ಲ. ಬೇಲೂರಿನ ಅಂತಃಪುರ ಗೀತೆಗಳ ವಾಚನವೂ ಅಲ್ಲ. ‘ಹಂಗಾದ್ರೆ ಇನ್ನೇನು?’ ಅಂತ ನೀವು ಕೇಳೋದಿಕ್ಕೆ ಮೊದಲೇ ಹೇಳುವ ಕತೆಯಿದು. ಕಥಾ ನಾಯಕಿಯ ಹೆಸರು ಸೌಮ್ಯ. ಧರಣಿ ಮಂಡಲ ಮಧ್ಯದೊಳಗೆ ಮೆರೆಯುತಿಹ ಕರ್ನಾಟ ದೇಶದೊಳು, ಸರ್ಕಾರೀ ನೌಕರಿಯೆಂದು ಹೆಸರಾದ ಒಂದು ಖಾಯಂ ನೌಕರಿಯೊಳಗಿದ್ದ ಒಬ್ಬ ಸಾಮಾನ್ಯ ನೌಕರನ ಮಗಳು. ಯಾವುದೇ ಮಹತ್ವಾಕಾಂಕ್ಷೆಗಳಿಲ್ಲದ ಸಾಮಾನ್ಯ ಹುಡುಗಿ. ನೋಡಲು ಗೋಧಿ ಬಣ್ಣ ಸಾಧಾರಣ ಮೈಕಟ್ಟು. ಹುಟ್ಟಿದ್ದಕ್ಕೆ ಬೆಳೆದಳು. ಬೆಳೆದಿದ್ದಾಳೆಂದು ಅಂಗನವಾಡಿಯ ಟೀಚರ್ ಎಳಕೊಂಡು ಹೋದರು, … Read more

ಮಂದಾಕಿನಿ : ಪ್ರವೀಣಕುಮಾರ್ ಗೋಣಿ

ಅಷ್ಟಕ್ಕೂ ಇವರು ಹೊರಟಿದ್ದಾದರೂ ಎಲ್ಲಿಗೆ !? ಕುರಿಮಂದೆಯ ಹಿಂಡೊಂದು ಎಲ್ಲಿಗೆ ? ಯಾವುದರ ಕಡೆಗೆ ? ಯಾವುದಕ್ಕೆ ಎನ್ನುವ ಪರಿವೆಯೇ ಇಲ್ಲದಂತೆ ಕತ್ತು ನೆಲಕ್ಕೆ ಹಾಕಿಕೊಂಡು ಸಾಗುವಂತೆ ನಡೆಯುತ್ತಲೇ ಇದ್ದಾರೆ. ಕುಂತು ಭೂಮಿಗೆ ಭಾರವಾಗಬೇಡ ಎದ್ದು ನಡೆಯುತ್ತಿಲಿರೆಂದು ಹಿರೀಕರು ಹೇಳಿದ್ದೇನೋ ನಿಜ. ನಡೆಯುತ್ತಲೇ ಇರು ಎಂದ ಮಾತ್ರಕ್ಕೆ ನಡೆಯುವುದಾದರೊ ಎಲ್ಲಿಗೆ ? ಬೆಳಗಿನಿಂದ ಅರಳುವ ನಡಿಗೆ ಇರುಳಿನವರೆಗೆ ದಾಪಿಡುತ್ತಲೇ ಸಾಗುತ್ತದೆ, ಮತ್ತೆ ಬೆಳಗು ಮೂಡಿ ಮತ್ತೆ ಕಾಲನ ಕಾಲೊಳಗೆ ಕಾಲಿರಿಸಿ ಸಾಗುವುದಷ್ಟೇ ಗಾಣದ ಎತ್ತಿನಂತೆ ತಿರುಗುತ್ತಲೇ ಇರುವಂತಾಗಿಬಿಡುತ್ತದೆ. … Read more

ಕಣ್ಣೊಂದು ಕವಿತೆ ಕುಕ್ಕಿ, ಕವಿತೆಯೊಂದು ಕಣ್ಣ ಕುಕ್ಕಿ: ಶಿವಕುಮಾರ ಚನ್ನಪ್ಪನವರ

ಭಾಗ-1 “ಕಣ್ಣೊಂದು ಕವಿತೆ ಕುಕ್ಕಿ ಗುಂಜಿ, ಗುಂಜಿಯಾಗಿ, ಗುಂಪಾಗಿ ಗೂಡಾಗಿ ಕೊರಗುತ್ತಿತ್ತು ಅವಳ ಹೊಗಳದ ಪದವೊಂದು ಸಿಗದೇ” ಇನ್ನೇನು ಹೂಬಿಸಲು ಸತ್ತು ಹೋಗುತ್ತದೆನ್ನುವ ಮಾತು ಅನುವಾಗುವಂಥ ಸಮಯವಾದ್ದರಿಂದ, ಎರಡರಿಂದ ಐದಾಳ ಇರುವ ವರದೆಯ ಬದುವಿಗೆ ಬೇರು ಚಾಚಿ, ಬಾಗಿ, ವರದೆಯನ್ನೇ ಇಣುಕುವಂತ ಮರಗಳ ಮೇಲೊಂದು ಜಾತ್ರೆಯೇ ನಡೆಸಿರುವಂತೆ ಗುಬ್ಬೆ-ಕಾಗೆಗಳು ಒಂದೊಂದು ಗುಂಪು ಕಟ್ಟಿ ಪಿಸುಮಾತು ನಡೆಸುತ್ತಿವೆ. ಈಗೈದು ತಿಂಗಳ ಹಿಂದೆಯಷ್ಟೇ ಅದೇ ಕಳೆಗುಂದದ ಸೇತುವೆಯ ಮೇಲೆ ಕುಳಿತು ಕಥೆ, ಕವಿತೆ ಕಟ್ಟುತ್ತೇನೆಂದು ಹೊಯ್ದಾಡುವ ಸಂದರ್ಭಗಳನ್ನೇ ಒಟ್ಟುಗೂಡಿಸುವಲ್ಲಿ ವಿಫಲವಾಗುತ್ತಿದ್ದ … Read more

ಅಪೂರ್ಣ ಹೋರಾಟ !: ಅಶ್ಫಾಕ್ ಪೀರಜಾದೆ

-1- ದೇಶ ಸ್ವಾತಂತ್ರವಾಗಿ ದಶಕಗಳೇ ಕಳೆದು ಹೋದರೂ ದೇಶದ ಪ್ರಜೆಗಳು ಮಾತ್ರ ಇನ್ನೂ ಗುಲಾಮರಾಗಿಯೇ ಉಳಿದಿರುವದು ನಮ್ಮ ದೇಶದ ಅತಿದೊಡ್ಡ ದುರಂತ. ಆಜಾದ ದೇಶದ ಗುಲಾಮ ಪ್ರಜೇಗಳು ನಾವು!. ಬ್ರಿಟೀಷರ ಕಾಲದಿಂದಲೂ ನಾವು ಶೋಷಣೆಯ ಹಳ್ಳಕ್ಕೆ ಬಿದ್ದು ಒದ್ದಾಡ್ತಾ ಇದ್ದೇವೆ. ಆಗ ಬ್ರಿಟೀಷರು ನಮ್ಮನ್ನು ಶೋಷಿಸುತ್ತಿದ್ದರೆ, ಈಗ ನಮ್ಮವರೆ ನಮ್ಮನ್ನು ಶೋಷಿಸುತ್ತಿದ್ದಾರೆ. ಸ್ವತಂತ್ರ್ಯಪೂರ್ವ ಮತ್ತು ಸ್ವಾತಂತ್ರದ ನಂತರದ ದಿನಗಳು ಕಂಡಿರು ಹಿರಿಯರನ್ನು ಕೇಳಿದರೆ ಸ್ವತಂತ್ರ್ಯಪೂರ್ವದ ದಿನಗಳೇ ಚೆನ್ನಾಗಿದ್ದವು. ಈಗೀನ ರಾಜಕಾರಣಿಗಳು ವೋಟಿನಾಸೆಗೆ ದೇಶದ ಜ್ವಲಂತ ಸಮಸ್ಯೆಗಳನ್ನೆಲ್ಲ ಹಾಗೇ … Read more

ಕಪ್ಪೆಯೊಂದರ ಅಂತಿಮಯಾತ್ರೆ: ಡಾ. ಗಿರೀಶ್ ಬಿ.ಸಿ.

ನಮ್ಮೂರಿನ ಹೆಸರನ್ನು ಒಂದ್ ಬಾರಿ ಹೇಳಿದ್ರೆ ಯಾರ್ಗು ಅರ್ಥಾನೇ ಆಗಲ್ಲ. ‘ಏನೂ .. ಕೊಕ್ಕರೇನಾ ?’ ಅನ್ನೊ ಪ್ರಶ್ನೇನ ಜರೂರು ಕೇಳ್ತಾರೆ. ಮೊದ್ಲು ಮೊದ್ಲು ಹೀಗಿ ಕೇಳಿದ್ರೆ ಕೋಪ ಮಾಡ್ಕೊತಿದ್ದ ನಾನು ಇತ್ತೀಚಿಗಂತು ತಾಳ್ಮೆಯಿಂದಲೆ ‘ಅಲ್ರಿ, ಬೆಕ್ಕರೆ ಅಂತ, ಪುಟ್ಟಣ್ಣ ಕಣ್‍ಗಾಲ್ ಅವರನ್ನ ಕರ್ನಾಟಕಕ್ಕೆ ಕೊಡುಗೆ ಇತ್ತ ಮೈಸೂರಿನ ಪಿರಿಯಾಪಟ್ಟಣ ತಾಲೂಕಿನಲ್ಲಿರೊ ಹಳ್ಳಿ ಇದು’ ಅಂತಾನೊ ಇಲ್ಲ …. ‘ನೀವು ಬೈಲುಕುಪ್ಪೆ ಬುದ್ದಿಸ್ಟ್ ಟೆಂಪಲ್‍ಗೆ ಹೋಗೋವಾಗ ಹತ್ತಿರದಲ್ಲಿ ಸಿಗುತ್ತೆ’ ಅಂತಾನೊ, ಕೆಲವೊಮ್ಮೆ ಮೂಡ್ ಇಲ್ದೆ ಇದ್ರೆ, ‘ಬೆಟ್ಟದಪುರದ … Read more

ಬಂಜೆ: ಚೈತ್ರಾ ವಿ.ಮಾಲವಿ

‘ಹೇ..ಪೆದ್ದು ನೋಡಲ್ಲಿ ಒಲೆ ಮುಂದೆ ನಿಂತ್ಕೊಂಡು ಏನು ಯೋಚನೆ ಮಾಡ್ತಿದಿಯಾ. ತಲೆ ಸರಿಗಿದಿಯೋ..ಇಲ್ವೋ. ಹಾಲು ಉಕ್ತಿರೋದು ಕಾಣ್ತಿಲ್ವ’ ಕೊಂಕು ನುಡಿದಳು ಅತ್ತೆ. ಅತ್ತೆಯ ಮಾತಿನಿಂದ ಯಾವುದೋ ಲೋಕದಿಂದ ಹೊರ ಬಂದಳು ಭಾರತಿ. ‘ನಿನ್ನ ಯೋಗ್ಯತೆಗೆ ಮದುವೆ ಆಗಿ ಹತ್ತು ವರ್ಷ ಆದರೂ ಮಗು ಕೊಡೋಕೆ ಆಗಿಲ್ಲ ನಿನ್ನ ಕೈಲಿ.’ ಮತ್ತೆ ಅತ್ತೆಯ ಕೊಂಕು ನುಡಿಗಳು ಶುರುವಾದವು. ಭಾರತಿಗೆ ಹೊಸದೇನೂ ಅಲ್ಲ ಇದು. ಪ್ರತಿದಿನ ಅತ್ತೆಯ ಕೊಂಕು ನುಡಿಗಳನ್ನು ಕೇಳಿ ಬೇಸತ್ತಿದ್ದಳು. ‘ನನ್ನ ಅಂತರಂಗ ಬಲ್ಲವರು ಯಾರು? ನನ್ನ … Read more

ನಾ ಯಾರು… ನನ್ನವರು ಯಾರು… : ಸಹನಾ ಪ್ರಸಾದ್

ಜೀವ ಹಿಡಿಯಾಗುತ್ತಿದೆ. ಅವರ ಮೆಲು ನಗೆ, ಕಣ್ಣಲ್ಲಿ ಕಾಣದ ಆದರೆ ತುಟಿಯಲ್ಲಿ ತೇಲುವ ನಗೆ ಅಸಹ್ಯ ಹುಟ್ಟಿಸುತ್ತಿದೆ. ಮಾತು ಮಾತಿಗೆ “ಗ್ರಾನೀ” ಅನ್ನುವ, ಚಾಕೊಲೇಟ್ ಬಾಯಿಗೆ ಹಿಡಿಯುವ ಪರಿಗೆ, ಅದನ್ನು ಮೊಬೈಲ್ನಲ್ಲಿ ಸೆರೆ ಹಿಡಿಯುವ ತವಕಕ್ಕೆ ಕೆಟ್ಟ ಕೋಪ ಬರುತ್ತಿದೆ. ಇಲ್ಲಿಂದ ಓಡಿ ಹೋಗಬೇಕು, ನನ್ನ ಮನೆಗೆ, ಆದರೆ ಅದು ಎಲ್ಲಿದೆ? ನನ್ನವರು ಯಾರು? ಅಸಲು ನಾನು ಯಾರು? ತಲೆ ತಿರುಗುತ್ತಿದೆ. ” ಸಾಕು ಇನ್ನು ಫ಼ೋಟೋ ತೆಗೆದಿದ್ದು. ಬೇಗ ಬೇಗ ಉಡುಗೊರೆ ಹಂಚಿ. ಉಪಹಾರ ಮುಗಿಸಿ … Read more

ದೋಷ: ಅಶ್ಫಾಕ್ ಪೀರಜಾದೆ

ಏಳು ಹಳ್ಳಿಗಳಿಂದ ಆವೃತ್ತಗೊಂಡು ಏಳು ಸುತ್ತಿನ ಕೋಟೆಯಂತಿರುವ ಊರು ಯಾದವಾರ! ನಾನು ಅಲ್ಲಿನ ಪಶು ಆಸ್ಪತ್ರೆಗೆ ಪಶು ಪರೀಕ್ಷಕನಾಗಿ ಹಾಜರಾದ ಹೊಸದರಲ್ಲಿ ಒಬ್ಬಳು ಅಂದರೆ ವಯಸ್ಸು ಸುಮಾರು ಇಪ್ಪತ್ತೆರಡರಿಂದ ಇಪ್ಪತ್ತೈದರ ನಡುವೆ ಇರಬಹುದು. ಕಣ್ಣು ಕೊರೈಸುವಂತಿರಬೇಕಾದ ಈ ಹರೆಯದಲ್ಲಿ ಅದ್ಯಾವುದೋ ಬಿರುಗಾಳಿಗೆ ಸಿಕ್ಕು ತತ್ತರಿಸಿದಂತಿದ್ದಳು. ಆಳಕ್ಕಿಳಿದ ನಿಸ್ತೇಜ ಕಣ್ಣುಗಳೇ ಜೀವನದಲ್ಲಿ ಅವಳು ಸಾಕಷ್ಟು ನೊಂದಿರುವ ಬಗ್ಗೆ ಸಂಕೇತ ನೀಡುತ್ತಿದ್ದವು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಸೃಷ್ಟಿಯ ಯಾವುದೋ ವಿಕೋಪಕ್ಕೆ ಸಿಲುಕಿ ಭಗ್ನಾವಶೇಷವಾಗಿ ಇತಿಹಾಸ ಸೇರಿದಂತಿದ್ದಳು. ನಮಸ್ಕರಿಸುತ್ತ ಒಳಬಂದ ಅವಳನ್ನು … Read more

ಅಂದಿನ ಆ ಕರಾಳ ರಾತ್ರಿ: ನಂದಾ ಹೆಗಡೆ

ಎಪ್ಪತ್ತರ ಇಳಿವಯಸ್ಸಿನಲ್ಲಿ ನಾನು ನನ್ನ ಹಿಂದಿನ ಬದುಕಿನ ಬಗ್ಗೆ ಒಂದು ಸಿಂಹಾವಲೋಕನ ಮಾಡಿದಾಗ—————– ನನ್ನ ಬದುಕು ನಾನಂದುಕೊಂಡಂತೆಯೇ ನಡೆಯಿತು. ಎಷ್ಟೋ ಜನ ಹೇಳುತ್ತಾರೆ, ಬದುಕು ನಾನಂದುಕೊಂಡಂತೆ ನಡೆಯಲೇ ಇಲ್ಲ. ನಾನಂದುಕೊಂಡಿದ್ದೇ ಒಂದು, ಬದುಕು ನಡೆದದ್ದೇ ಬೇರೆ, ನಾನೇನೇನೋ ಕನಸು ಕಂಡಿದ್ದೆ. ಆದರೆ ನನ್ನ ಯಾವ ಕನಸೂ ನನಸಾಗಲಿಲ್ಲ. . . . . . . . . ಹೀಗೇ ಏನೇನೋ . . . . . . . . . . . … Read more

ಒಂದು ಹುಡಗಿಯ ಶವ ಮತ್ತು ಪವಿತ್ರ ಜಲ !: ಅಶ್ಫಾಕ್ ಪೀರಜಾದೆ

-1- ದುಂಡಾಪುರ ! ಎಲ್ಲ ಜಾತಿಯ , ಎಲ್ಲ ವರ್ಗದ ಜನ ಒಟ್ಟಾಗಿ,ಒಗ್ಗಟ್ಟಾಗಿ ಬದುಕುವ ಒಂದು ಪುಟ್ಟ ಗ್ರಾಮ. ಜಾತಿಯಾಧಾರಿತ ಕಸಬುಗಳಲ್ಲಿ ನಿರತ ಗ್ರಾಮಸ್ಥರು ತಂತಮ್ಮ ಯೋಗ್ಯತೆಯನುಸಾರ ನಡೆದುಕೊಳ್ಳುವುದರಿಂದ ವಿವಿಧ ಕೋಮುಗಳ ನಡುವೆ ಮನಸ್ತಾಪವಿಲ್ಲ, ಗಲಭೆಗಳಿಲ್ಲ. ಕೂಡಿ ಬಾಳಿದರೆ ಸ್ವರ್ಗ ಸುಖ ಎಂಬ ತತ್ತ್ವದಲ್ಲಿ ನಂಬಿಕೆಯಿಟ್ಟು ಶಾಂತಿಯಿಂದ, ನಂಬಿಕೆಯಿಂದ ಬದುಕು ಸಾಗಿಸುತ್ತಿದ್ದಾರೆ. ಈ ಕಾರಣಕ್ಕಾಗಿ ಈ ಗ್ರಾಮವನ್ನು ಒಂದು ಆದರ್ಶ ಗ್ರಾಮ ಒಂದು ಮಾದರಿ ಗ್ರಾಮವೆಂದೇ ಬಣ್ಣಿಸಬಹುದು. ಜಾತಿಯಾಧಾರಿತ ಕಸಬುಗಳಾದ ಚಮ್ಮಾರಿಕೆ, ಕುಂಬಾರಿಕೆ,ಕಂಬಾರಿಕೆ, ಪತ್ತಾರಿಕೆ, ಬಡಿಗತನ, ಕುರಿ … Read more

ಬಂಡಿ ಯಲ್ಲವ್ವ: ಭೀಮಣ್ಣ ಮಾದೆ

ಅಪ್ಪನ ಕಾಲಕ್ಕೆ ಮೂರಡಿ ಜಾಗದಲ್ಲಿ ಹಾಕಿಕೊಟ್ಟ ಹರಕು ಜೋಪಡಿ, ವರ್ಷಕ್ಕೊಮ್ಮೆ ಬಂಡಿ ಯಲ್ಲವ್ವನ ಹರಕೆಗೆ ಪಡೆಯುತ್ತಿದ್ದ ಕೋಣಗರವು, ಮೂರೊತ್ತಿನ ಗಂಜಿ ಹನುಮಂತನನ್ನು ಗೌಡರ ಲೆಕ್ಕದ ಪುಸ್ತಕ ರೂಪದಲ್ಲಿ ಬಂಧಿಸಿ ಬಿಟ್ಟಿದ್ದವು. ಚಿಕ್ಕವರು ದೊಡ್ಡವರೆನ್ನದೆ ಕೈಯೆತ್ತಿ ಮುಗಿಯುತ ಏಕವಚನದಲಿ ನಾಮಧೇಯಾನಾಗುವುದು ಜೀತದ ಕೆಲಸದ ಜೊತೆಗೆ ಸೇರಿಹೋಗಿತ್ತು. ಮೊದಲ ಗಂಡನ ಕಳೆದುಕೊಂಡ ಹೊನ್ನವ್ವಳನ್ನು ತಂದೆ ಬ್ಯಾಡ ಅಂದರು ಎಲ್ಲವ್ವನ ಎದುರಿನಲ್ಲಿಯೇ ಕಟ್ಟಿಕೊಂಡು ಆರು ಜನರನ್ನು ಸಂಸಾರದ ಬಂಡಿಯಲಿ ಕೂರಿಸಿಕೊಂಡು ಒಂಟೆತ್ತಿನಂಗ ಎಳೆಯುತ್ತಿದ್ದ ಈತನ ಕುಟುಂಬಕ್ಕೆ ಬಂಡಿ ಯಲ್ಲವ್ವನೇ ಸರ್ವಸ್ವ. ಯಲ್ಲವ್ವಳಿಗೆ … Read more

ಜನ್ನತ್: ಅಶ್ಫಾಕ್ ಪೀರಜಾದೆ

ಶಬ್-ಏ-ಮೆಹರಾಜ ! ಮುಹ್ಮದ ಪೈಗಂಬರರನ್ನು ಸರ್ವಶ್ರೇಷ್ಠ ಅಲ್ಲಾಹ ತನ್ನ ಆಸ್ಥಾನಕ್ಕೆ ಸ್ವಾಗತಿಸಿ ಆದರಾತಿಥ್ಯ ನೀಡಿದ ಮಹತ್ವದ ರಾತ್ರಿ. . . ಅಲ್ಲಾಹ ಮತ್ತು ಪೈಗಂಬರರ ಈ ಅಪೂರ್ವ ಸಮ್ಮಿಲನದ ಸವಿನೆನಪಿಗಾಗಿ ಇಡೀ ಮುಸ್ಲಿಂ ಸಮುದಾಯದವರು ಆ ಇಡೀ ರಾತ್ರಿಯನ್ನು ಅಲ್ಲಾಹನ ನಾಮಸ್ಮರಣೆ, ಪ್ರಾರ್ಥನೆಯಲ್ಲಿ ಕಳೆಯುತ್ತಾರೆ. ವಿಶೇಷ ಪ್ರಾರ್ಥನೆ, ಪ್ರವಚನಗಳ ಮುಖಾಂತರ ತಮಗೂ ‘ಜನ್ನತ್’ ಅಂದರೆ ಸ್ವರ್ಗ ಲಭ್ಯವಾಗಲೆಂದು ಕೋರುತ್ತಾರೆ. ಸಾದೀಕ ಕೂಡ ಈ ಸಾಮೂಹಿಕ ಪ್ರಾರ್ಥನೆ, ಪ್ರವಚನಗಳಲ್ಲಿ ಭಾಗಿಯಾಗಲು ತನ್ನ ಮೊಹಲ್ಲಾದ ಮಸೀದಿಗೆ ತಲಪುತ್ತಾನೆ. ಇಶಾ ನಮಾಜಿನ … Read more

ಅಜ್ಜ ನೆಟ್ಟ ಹಲಸಿನ ಮರ: ಸತೀಶ್ ಶೆಟ್ಟಿ. ವಕ್ವಾಡಿ

ಸೂರ್ಯನ ಬೆಳಗಿನ ಬೆಳಕಿಗೆ ಮಂಜಿನ ಹನಿಗಳ ರಂಗಿನಾಟ ಆಗತಾನೆ ಮುಗಿದಿತ್ತು. ಸೂರ್ಯನ ಬೆಳಕಿನ ಅಟ್ಟಹಾಸ ಹೆಚ್ಚಾದಂತೆ ಮನೆ ಎದುರಿನ ಹುಲ್ಲು ಹಾಸಿನ ಮೇಲೆ ಬೆಚ್ಚನೆ ಮಲಗಿದ್ದ ಮಂಜಿನ ಹನಿಗಳು ಒಂದೊಂದಾಗಿ ಕಾಣದ ಗೂಡು ಸೇರುವ ತವಕದಲ್ಲಿದ್ದವು. ಅದೂ ಬೇರೆ ಕಾರ್ತಿಕ ಮಾಸ. ಚಳಿರಾಯನ ಒಡ್ಡೋಲಗಕ್ಕೆ ಆಗಷ್ಟೇ ರಂಗಸಜ್ಜಿಕೆಯ ಹೂರಣವಾಗಿತ್ತು. ಮನೆಯ ಕಣದಲ್ಲಿ ರಂಗು ಮೂಡಿಸಿದ್ದ ಭತ್ತದ ತಿರಿ ಮತ್ತು ಹುಲ್ಲಿನ ಕುತ್ತರಿಗಳಿಂದ ಮೂಗಿಗೆ ಅಪ್ಪಳಿಸುತ್ತಿದ್ದ ಭತ್ತದ ಸುವಾಸನೆ ಮನದ ಮೂಲೆಯಲ್ಲಿ ಹೊಂಗಿರಣದ ಚಿತ್ತಾರ ಬರೆಸಿದ್ದವು. ಮನೆ ಹಿಂದಿನ … Read more

ಟಚ್ ಸ್ಕ್ರೀನ್: ಸುದರ್ಶನ್.ವಿ

  “ಹಲೋ ಎಲ್ಲಿದ್ದಿಯೋ? ಎಷ್ಟು ವರ್ಷ ಆಯ್ತು ನಿನ್ನ ನೋಡಿ, ಯಾವಾಗ ಸಿಗೋಣ?” “ಹ್ಯಾಟ್ಸ್ ಆಫ್ ಫೇಸ್ ಬುಕ್‍ಗೆ. ನಿನ್ನ ನಂಬರ್ ಸಿಕ್ತು. ನಿಜಕ್ಕೂ ಥ್ಯಾಂಕ್ಸ್ ಈ ಟೆಕ್ನಾಲಜಿಗೆ” … ಈ ಕಡೆ ಒಂದು ಕ್ಷಣ ಮೌನ. ಹೀಗೆ ಅಚಾನಕ್ಕಾಗಿ ಬಂದ ಹಳೆಯ ಗೆಳೆಯನ ಕರೆ ಕೊಂಚ ನನ್ನನ್ನು ಪಾಪ ಪ್ರಜ್ಞೆ ಗೆ ದೂಡಿತು. ಛೇ ನಾನೆಂಥ ಮನುಷ್ಯ…? ಡಿಗ್ರಿ ಮುಗಿದ ನಂತರ ಎಲ್ಲರ ಜೊತೆಗೂ ಸಂಬಂಧ ಕಡಿದುಕೊಂಡು ಬದುಕುತ್ತಿದ್ದೆನಲ್ಲಾ… ಬಾಲ್ಯದ ಗೆಳೆಯರು ಜಯನಗರದ ಮನೆಯನ್ನು ಬಿಟ್ಟು … Read more

ಕುರಿಯ ಕಾಲು: ಜೆ.ವಿ.ಕಾರ್ಲೊ

ಕಿಟಕಿಯ ಪರದೆಗಳು ಇಳಿಬಿದ್ದಿದ್ದ ಬೆಚ್ಚನೆಯ ರೂಮಿನಲ್ಲಿ ಟೇಬಲ್ ಲ್ಯಾಂಪಿನ ಮಂದ ಬೆಳಕು ಒಂದು ವಿಶಿಷ್ಟ ವಾತಾವರಣ ಉಂಟುಮಾಡಿತ್ತು. ಅವಳು ಕುಳಿತಿದ್ದ ಕುರ್ಚಿಯ ಹಿಂಭಾಗದಲ್ಲಿದ್ದ ಸೈಡ್‍ಬೋರ್ಡಿನ ಮೇಲೆ ಒಂದು ಅರೆ ತುಂಬಿದ್ದ ವ್ಹಿಸ್ಕಿ ಬಾಟಲ್, ಎರಡು ಉದ್ದನೆಯ ಗ್ಲಾಸುಗಳು, ಸೋಡ ಮತ್ತು ಐಸ್ ತುಂಡುಗಳ ಥರ್ಮೋ ಬಕೆಟ್ ತಯಾರಾಗಿತ್ತು. ಅವಳ ಎದುರಿನ ಕುರ್ಚಿ ಇನ್ನೂ ಖಾಲಿ ಇತ್ತು. ಮೇರಿ ಮಲೋನಿ, ತನ್ನ ಪತಿ ಕೆಲಸದಿಂದ ಹಿಂದಿರುಗುವುದನ್ನೇ ಕಾಯುತ್ತಿದ್ದಳು. ಗಳಿಗೆಗೊಮ್ಮೆ ಅವಳ ದೃಷ್ಟಿ ಗೋಡೆಯ ಮೇಲಿದ್ದ ಗಡಿಯಾರದ ಕಡೆಗೆ ಹೊರಳುತ್ತಿತ್ತು. … Read more

ಉದಾತ್ತ ಜೀವಿ ಪ್ಲಾಟಿಪಸ್: ಅರ್ಪಿತ ಮೇಗರವಳ್ಳಿ

ಒ೦ದಾನೊ೦ದು ಕಾಲದಲ್ಲಿ ಆ ದೇವರು ಅನ್ನೋನಿಗೆ ಮೂರು ಬಗೆಯ ವಿಭಿನ್ನ ಜೀವಿಗಳನ್ನು ಸೃಷ್ಟಿಮಾಡುವ ಹುಕಿ ಬ೦ದಿತು. ಆ ಪ್ರಕಾರವಾಗಿ ದೇವರು ಮೊಟ್ಟಮೊದಲಿಗೆ ಸಸ್ತನಿಗಳನ್ನು ಸೃಷ್ಟಿಸಿ ಅವುಗಳಿಗೆ ನೆಲದ ಮೇಲೆ ಬದುಕುವ ಅವಕಾಶಮಾಡಿಕೊಟ್ಟನು. ಹಾಗೆಯೆ ವಾತಾವರಣದ ವಿಪರೀತಗಳಿ೦ದ ರಕ್ಷಿಸಿಕೊಳ್ಳಲು ಅವಕ್ಕೆ ತುಪ್ಪಳವನ್ನು ದಯಪಾಲಿಸಿದನು. ಎರಡನೆಯದಾಗಿ ಮೀನುಗಳನ್ನು ಸೃಷ್ಟಿಸಿದ ಭಗವ೦ತ, ಅವುಗಳನ್ನು ನೀರಿನಲ್ಲಿ ಸರಾಗವಾಗಿ ಈಜಾಡಲು ಬಿಟ್ಟು, ಉಸಿರಾಡಲು ಕಿವಿರುಗಳನ್ನು ನೀಡಿದನು. ತನ್ನ ಸೃಷ್ಟಿಕಲೆಯನ್ನು ಮು೦ದುವರೆಸಿದ ದಯಾಮಯಿ ಮೂರನೆಯದಾಗಿ ಹಕ್ಕಿಗಳನ್ನು ಸೃಷ್ಟಿಸಿ ಆಕಾಶದಲ್ಲಿ ಅನ೦ತವಾಗಿ ಹಾರಡಲು ಅವುಗಳಿಗೆ ರೆಕ್ಕೆಗಳನ್ನು ನೀಡಿದನು. … Read more

ಆರತಕ್ಷತೆ: ಅದಿತಿ ಎಂ. ಎನ್.

ದೂರದ ಸಂಬಂಧಿಯಾಗಿದ್ದ ಶಿವರಾಮನ ಮಗನ ಮದುವೆಯ ಕರೆಯೋಲೆ ತಲುಪಿದಾಗಿನಿಂದ ಜಯಣ್ಣ ಮೋಡದ ಮೇಲೆಯೇ ತೇಲುತ್ತಿದ್ದರು. ಹಣಕಾಸಿನ ವಿಚಾರದಲ್ಲಿ ತಾನೆಲ್ಲಿ, ಶಿವರಾಮನೆಲ್ಲಿ? ಆದರೂ ಅವನು ತನಗೆ ಮದುವೆಯ ಕರೆಯೋಲೆಯನ್ನು ಮರೆಯದೇ ಕಳಿಸಬೇಕೆಂದರೆ ತನ್ನ ಮೇಲೆ ಅವನಿಗೆ ಪ್ರೀತಿ, ವಿಶ್ವಾಸ ಇದೆಯೆಂದೇ ಅರ್ಥವಲ್ಲವೇ ಎನ್ನುವುದು ಜಯಣ್ಣನ ತರ್ಕವಾಗಿತ್ತು. ಅವರ ಉತ್ಸಾಹಕ್ಕೆ ತಕ್ಕ, ಮದುವೆಯ ಆರತಕ್ಷತೆ ಕಾರ್ಯಕ್ರಮ ಬೆಂಗಳೂರಿನಲ್ಲಿಯೇ ಇತ್ತು; ಅದೂ ಮನೆಯಿಂದ ಅಂದಾಜು ಐದಾರು ಕಿಲೋಮೀಟರ್ ದೂರದಲ್ಲಿದ್ದ ದೊಡ್ಡ ಛತ್ರದಲ್ಲಿ. ಹಾಗಾಗಿ ಜಯಣ್ಣ, ಮದುವೆಗೆ ಅಲ್ಲದಿದ್ದರೆ ಆರತಕ್ಷತೆಗಾದರೂ ಹೋಗಿಯೇ ಸಿದ್ಧ … Read more