ಕನ್ನಡಿಗಂಟದ ಬಿಂದಿ: ಡಾ.ಅಜಿತ್ ಹರೀಶಿ

ಜೇಡ ತನ್ನೊಳಗಿನಿಂದ ತಾನು ಅಂಟನ್ನು ಸ್ರವಿಸುತ್ತಾ ಬಲೆ ನೇಯುತ್ತಲೇ ಇತ್ತು. ಸೂರ್ಯನ ಕಿರಣಗಳು ಬಲೆಯ ಮೇಲೆ ಬಿದ್ದಾಗ ಕಣ್ಣಿಗೆ ಬಣ್ಣದೋಕುಳಿಯಾಗುತ್ತಿತ್ತು. ದಿನವೂ ಅದೊಂದು ಚಿತ್ತಾಪಹಾರಿಯಾದ ದೃಶ್ಯವಾಗಿತ್ತು. ಆದರೆ ಇಂದೇಕೋ ಕಿರಿಕಿರಿ ಉಂಟುಮಾಡುತ್ತಿದೆ ಎಂದು ಅನ್ನಿಸಿತು. ಕೆಲಸದ ರಾಜಮ್ಮ ಅದಾಗಲೇ ನನ್ನ ರೂಮಿಗೆ ಬಂದು ನೆಲ ಗುಡಿಸುತ್ತಿದ್ದಳು. ರಾಜಮ್ಮ, ಮೇಲೆಲ್ಲಾ ನೋಡು, ಕಸ ಹೊಡೆಯೋದೇ ಇಲ್ಲ. ಹೇಳದೇ ಯಾವ ಕೆಲಸವನ್ನೂ ಇತ್ತೀಚೆಗೆ ನೀನು ಮಾಡಲ್ಲ’ ತುಸು ಗಡಸು ಧ್ವನಿಯಲ್ಲಿ ಜೇಡರ ಬಲೆ ತೋರಿಸುತ್ತಾ ಹೇಳಿದೆ. ಅಯ್ಯೋ, ಇದೊಳ್ಳೆ ಆಯ್ತಲ್ಲಾ … Read more

ಅಗ್ನಿ ಸ್ಪರ್ಶ: ಭಾರ್ಗವಿ ಜೋಶಿ

ಅಲ್ಲಿ ಜನಸಾಗರ ನೆರೆದಿತ್ತು, ಜಾತಿ ಮತದ ಬೇಧವಿಲ್ಲದೆ ನೆರೆದಿದ್ದ ಜನ.. ಎಲ್ಲರಲ್ಲೂ ಮನೆ ಮಾಡಿದ ಮೌನ, ತುಂಬಿದ ಕಣ್ಣೀರು. ಕಳೆದುಕೊಂಡ ಮಾಣಿಕ್ಯ ಬದುಕಿದ ರೀತಿಯೇ ಹಾಗಿತ್ತು. ಶ್ರೀನಿವಾಸ ರಾಯರು ತಮ್ಮ 60ವರ್ಷ ಸಾರ್ಥಕ ಬದುಕಿನ ಪಯಣ ಮುಗಿಸಿ ಪರಲೋಕ ಸೇರಿದ್ದರು. ಬದುಕಿರುವಷ್ಟು ದಿನ ಆದರ್ಶ ಜೀವನ ನಡೆಸಿದ್ದರು, ಜಾತಿ ಭೇಧವಿಲ್ಲದೆ, ಮೇಲು ಕೀಳು, ಬಡವ ಶ್ರೀಮಂತ ಎಂಬ ಬೇಧವಿಲ್ಲದೆ ಎಲ್ಲರನ್ನು ಪ್ರೀತಿಸುತ್ತಿದ್ದರು. ಪರೋಪಕಾರಕ್ಕೆ ಹೆಸರಾಗಿದ್ದರು. ಅನಾರೋಗ್ಯ, ಮಕ್ಕಳ ವಿದ್ಯಾಭ್ಯಾಸ ಹೀಗೆ ಹಲವಾರು ಇವರಿಂದ ಸಹಾಯ ಪಡೆದಿದ್ದರು. ಇವರ … Read more

ನನ್ನವಳ ನೆನಪು: ಶ್ರೀರಂಗ. ಕೆ. ಆರ್

ಅದೇನೋ ಅಂದು ಮನಸ್ಸು ತಳಮಳಗೊಂಡಿತ್ತು. ಮಲಗಿ ಮೂರು ಸುತ್ತು ಹೊರಳಾಡಿದರೂ ಕಣ್ಣಿಗೆ ನಿದ್ದೆ ಹತ್ತಲಿಲ್ಲ. ಆಗ ನಿನ್ನಪ್ಪನಿಂದ ಕರೆಬಂದದ್ದು. ನಿನಗೆ ಹೆರಿಗೆ ನೋವು, ಆಸ್ಪತ್ರೆಯಲ್ಲಿದ್ದೇವೆ ಎಂದು. ಆಗಲೇ ಓಡಿ ಬರಬೇಕೆಂದುಕೊಂಡೆ. ಪರವಾಗಿಲ್ಲ ನಾವೆಲ್ಲರೂ ಇದ್ದೇವೆ ತೊಂದರೆಯಿಲ್ಲ, ಬೆಳಗ್ಗೆ ಬಂದರಾಯಿತು ಎಂದರು ಮಾವ. ಆದರೂ ನನಗೆ ಸಮಾಧಾನವಿರಲಿಲ್ಲ. ನಿನ್ನ ಕನಸುಗಳಿಲ್ಲದೆ ಮಲಗಿದವನೇ ಅಲ್ಲ ನಾನು, ಅಂದೇಕೋ ಕಣ್ಣುಗಳು ಮುಚ್ಚಲೇ ಇಲ್ಲ. ಮಲಗಿದ್ದ ಕೋಣೆಯ ಮೇಲ್ಛಾವಣಿಯ ಪರದೆಯ ಮೇಲೆ ನಿನ್ನ ಜೊತೆ ಕಳೆದ ಕ್ಷಣಗಳ ನೆನಪುಗಳು ಮೂಡಿಬರುತ್ತಿದ್ದವು. ಅವನ್ನೇ ನೋಡುತ್ತ … Read more

ಹೊಸ ಬೆಳಕು: ವೈ. ಬಿ. ಕಡಕೋಳ

ವಂದನಾಳ ಬಾಳಿನಲ್ಲಿ ಏನೋ ದುಗುಡ. ಮುಖ ಸಪ್ಪೆಯಿಂದ ಮನೆಗೆಲಸದಲ್ಲಿ ಆಸಕ್ತಿ ಇಲ್ಲದಂತೆ ಮೋಬೈಲ್‍ದಲ್ಲಿ ಏನನ್ನೋ ಟೈಪಿಸುತ್ತ ಕುಳಿತಿದ್ದಳು. ಅದೇ ಸಂದರ್ಭ ಆ ಕಡೆಯಿಂದ ಅವಳ ಗೆಳತಿಯ ಕರೆ ಬಂತು ”ಹಲೋ ವಂದನಾ ಏನು ಮಾಡುತ್ತಿರುವೆ. ”? ಪ್ರಶ್ನೆ ಬರುವುದಷ್ಟೇ ತಡ ದುಃಖ ಉಮ್ಮಳಿಸಿ ಬಂದು ಅಳತೊಡಗಿದಳು. ಆ ಕಡೆಯಿಂದ ಮಾತೇ ಬರದಾದಾಗ ಇವಳ ಅಳುವ ಧ್ವನಿಯನ್ನು ಕೇಳಿ ಸುಮ ”ಯಾಕೆ ಏನಾಯಿತೇ ನಿನಗೆ, ಯಾಕೆ ಈ ಅಳು. ”? ಎಂದೆಲ್ಲ ಪ್ರಶ್ನೆಗಳ ಸುರಿಮಳೆಯೇ ಸುಮಳಿಂದ ಬಂದಾಗ ವಂದನಾ … Read more

ನ್ಯಾನೋ ಕಥೆಗಳು: ವೆಂಕಟೇಶ್‌ ಚಾಗಿ

೧) ಹೊಸ ವರ್ಷಹೊಸ ವರ್ಷ ಬಂದಿತೆಂದು ಅವನಿಗೆ ತುಂಬ ಖುಷಿ. ಹೊಸ ವರ್ಷದ ಸಡಗರ ಭರ್ಜರಿಯಾಗಬೇಕೆಂಬುದು ಅವನ ಅಭಿಲಾಷೆ. ಅದರಂತೆ ತನ್ನ ಸ್ನೇಹಿತರೊಂದಿಗೆ ಸೇರಿ ದೊಡ್ಡ ಔತಣಕೂಟವನ್ನೆ ಏರ್ಪಡಿಸಿದ.ಮೋಜು ಮಸ್ತಿಯೊಂದಿಗೆ ಪಾರ್ಟಿ ಜೋರಾಗಿಯೇ ಆಯ್ತು. ಹೊಸ ವರ್ಷಕ್ಕೆ ಹೊಸ ಕ್ಯಾಲೆಂಡರ್ ಖರೀದಿಸಿದ. ಹೊಸ ಡೈರಿಯೊಂದನ್ನು ಖರೀದಿ ಮಾಡಿದ. ಡೈರಿಯ ಮೊದಲ ಪುಟದಲ್ಲಿ ತಾನು ಈ ವರ್ಷದಲ್ಲಿ ಕೈಗೊಳ್ಳ ಲೇಬೇಕಾದ ಕಾರ್ಯಗಳನ್ನು ಪಟ್ಟಿ ಮಾಡಿದ. ಸನ್ನಡತೆ , ನೈತಿಕತೆ ,ಉತ್ತಮ ಹವ್ಯಾಸ , ಉಳಿತಾಯ ಮುಂತಾದ ಗುಣಗಳನ್ನು ರೂಢಿಸಿಕೊಳ್ಳಲೇಬೇಕೆಂದು … Read more

ರೈತ (ಪುಟ್ಟ ಕತೆ): ವೆಂಕಟೇಶ ಚಾಗಿ

ಆಗ ನಾನಿನ್ನು  ಪುಟ್ಟ ಹುಡುಗ. ಎರಡೇ ತರಗತಿಯಲ್ಲಿ ಓದುತ್ತಿರುವಾಗಲೇ ಅಪ್ಪ ನನ್ನನ್ನು ಹೊಲಕ್ಕೆ ಕರೆದುಕೊಂಡು ಹೋಗುತ್ತಿದ್ದ. ಅಪ್ಪನಿಗೆ “ಅಪ್ಪಾ , ನಾನೂ ರೈತ ಆಗ್ಲಾ? ” ಅಂತ ಕೇಳಿದ್ದೆ.  ಅಪ್ಪನ ಕೆಲಸಗಳೋ ಒಂದಲ್ಲ ಎರಡಲ್ಲ. ನಸುಕಿನ ಜಾವ ಏಳುತ್ತಲೇ ಅಪ್ಪನ ಕಾಯಕ ಶುರುವಾಗುತ್ತಿತ್ತು. ಅಮ್ಮ ಮಾಡಿಕೊಟ್ಟ ನಾಲ್ಕೈದು ರೊಟ್ಟಿ  , ಪಲ್ಲೆ ಒಂದು ಬಟ್ಟೆಯಲ್ಲಿ ಕಟ್ಟಿಕೊಂಡು ಬಾಯಾರಿಕೆಗಾಗಿ ಮಣ್ಣಿನ ಬಾಟಲ್ ನಲ್ಲಿ ನೀರು ತುಂಬಿಕೊಂಡು ಎರಡು ಎತ್ತುಗಳನ್ನು ಹಿಡಿದು ಹೊರಟರೆ ಮುಗೀತು ಮತ್ತೆ ಸಂಜೆ ಆರಕ್ಕೆ ಅಪ್ಪ … Read more

ಅಮ್ಮ ಹೀಗೆ ಇರಬೇಕು: ಗಿರಿಜಾ ಜ್ಞಾನಸುಂದರ್

ಪುಟ್ಟ ಪುಟ್ಟ ಕೈಗಳು ಅಮ್ಮನನ್ನು ಹಿಡಿದಿದ್ದವು. ೮ ದಿನದ ಮಗು ಬಹಳ ಸಣ್ಣದಾಗಿ ಹುಟ್ಟಿದ್ದು, ಆ ಮಗುವನ್ನು ಹೇಗೆ ಎತ್ತಿಕೊಳ್ಳಬೇಕೆಂಬುದು ಸಹ ತಿಳಿದಿರಲಿಲ್ಲ ಅಮ್ಮನಿಗೆ. ಸರಸ್ವತಿ ತನ್ನ ೨೨ ನೇ ವರ್ಷಕ್ಕೆ ಮಗುವಿಗೆ ಜನನ ನೀಡಿದ್ದಳು. ಅವಳಿಗೆ ಇದೆಲ್ಲ ಹೊಸತು. ಮಗು ಅಳುತ್ತಿದ್ದರೆ ಏನು ಮಾಡಬೇಕೆಂಬುದೇ ಅವಳಿಗೆ ತಿಳಿಯುತ್ತಿರಲಿಲ್ಲ. ಯಾವ ಕಾರಣಕ್ಕೆ ಅಳುತ್ತಿದೆ ಎಂದು ಯೋಚಿಸುತ್ತಿದ್ದಳು. ಮಗು ತುಂಬ ಅಳುತ್ತಿತ್ತು, ಅವಳಿಗೆ ಅದನ್ನು ಸಮಾಧಾನ ಮಾಡುವುದೇ ಒಂದು ದೊಡ್ಡ ಸಾಹಸವಾಗಿತ್ತು. ಅವಳ ನಿದ್ದೆಗೆ, ಊಟಕ್ಕೆ ಪ್ರತಿಯೊಂದಕ್ಕೂ ಮಗು … Read more

ವಿಜೀ : ವರದೇಂದ್ರ.ಕೆ

ನಿತ್ರಾಣನಾಗಿದ್ದ ಸೂರ್ಯ ವಿರಮಿಸಲು ಪಶ್ಚಿಮಕ್ಕೆ ಮಾಯವಾಗುತ್ತಿದ್ದ, ಇದನ್ನೇ ಕಾಯುತ್ತಿದ್ದವನಂತೆ ಚಂದಿರ ಮುಗುಳ್ನಗುತ್ತ ಹಾಲು ಬೆಳದಿಂಗಳ ಚೆಲ್ಲುತ್ತ ಚೆಲುವೆಯರ ಅಂದ ಪ್ರತಿಬಿಂಬಿಸುತ್ತ ಮೇಲೇರ ತೊಡಗಿದ. ಅವನ ಬೆಳಕೇ ಗತಿ ಎನ್ನುವ ಬಸ್ ನಿಲ್ದಾಣ, ಧೂಳು ತುಂಬಿಕೊಂಡಿತ್ತು. ಇಂದೋ ನಾಳೆಯೋ ನೆಲಕ್ಕೆ ಮುತ್ತಿಡುವಂತಹ ಸ್ಥಿತಿಯಲ್ಲಿದ್ದು, ವಿನಾಶದ ಅಂಚಿನಲ್ಲಿತ್ತು. ಅಂತಹ ನಿಲ್ದಾಣವೇ ನಮ್ಮ ಜನರಿಗೆ ಜೀವ ಎನ್ನುವಂತೆ; ಅದರಡಿಯಲ್ಲಿಯೇ ನಿಂತು ಧೂಳಿನೊಂದಿಗೆ, ಬೀಡಿ ಸಿಗರೇಟಿನ ವಾಸನೆಯೊಂದಿಗೆ ಒಡನಾಡಿಗಳಾಗಿ ನಿಂತಿದ್ದಾರೆ. ಅಲ್ಲಿ ಪೋಲಿ ಹುಡುಗರ ದಂಡು, ಊರಿಗೆ ಲೇಟಾಗಿ ಪರಿತಪಿಸುತ್ತಿರುವ ಹೆಂಗಳೆಯರು. ದೊಡ್ಡ … Read more

ಹಗರಣದಲ್ಲೇ ಅಂತ್ಯ: ದಯಾನಂದ ರಂಗಧಾಮಪ್ಪ

ಸುಮಾರು ಅರವತ್ತು ವರ್ಷದ ವೃದ್ಧ ಟೇಬಲ್ ಮೇಲಿದ್ದ ಖಾಲಿ ಕಾಗದದ ಮೇಲೆ “ದೇವರು ಇದಾನೆ , ಇಲ್ಲ …. ದೇವರು ಇದಾನೆ , ಇಲ್ಲ ” ಎಂದು ಬರೆಯುತ್ತಿದ್ದ ತನ್ನ ಗಂಡನನ್ನು ನೋಡಿ ‘ರೀ ಏನ್ರಿ ಇದು? ರಾಮ ರಾಮ ಬರೆಯೋ ವಯಸ್ಸಲ್ಲಿ ನೀವ್ಯಾಕೆ ಈ ರೀತಿ ಬರೆತ್ತಿದ್ದೀರಾ? ಎಂದು ಗದರಿದಳು. ನಿನ್ನ ಪ್ರಕಾರ ಇದಾನೆ ಅಂತೀಯಾ? ಅವಳು ಮೌನಿಯಾದಳು. ಬರೆಯೋದು ನಿಲ್ಲಿಸಿ ಮೆಲ್ಲಗೆ ನಿಟ್ಟುಸಿರು ಬಿಡುತ್ತಾ ಕುರ್ಚಿಗೆ ಹೊರಗಿ ” ಮಗ ನಮ್ಮ ಜೊತೆ ಮಾತು … Read more

ಸಾವಿನ ಆಟ: ಜೆ.ವಿ.ಕಾರ್ಲೊ.

ಮೂಲ: ಇವಾನ್ ಹಂಟರ್ ಅನುವಾದ: ಜೆ.ವಿ.ಕಾರ್ಲೊ.   ಅವನ ಎದುರಿಗೆ ಕುಳಿತ್ತಿದ್ದ ಹುಡುಗ ಶತ್ರು ಪಾಳೆಯದವನಾಗಿದ್ದ. ಹೆಸರು ಟೀಗೊ. ಅವನು ಧರಿಸಿದ್ದ ಹಸಿರು ಬಣ್ಣದ ಜಾಕೆಟಿನ ಬಾಹುಗಳಿಗೆ ಕಿತ್ತಳೆ ಬಣ್ಣದ ಪಟ್ಟಿಯನ್ನು ಅಂಟಿಸಲಾಗಿತ್ತು. ಆ ಜಾಕೆಟ್ಟೇ ಅವನು ಶತ್ರು ಪಾಳೆಯದವನೆಂದು ಚೀರಿ ಚೀರಿ ಸಾರುತ್ತಿತ್ತು. “ಇದು ಚೆನ್ನಾಗಿದೆ!” ಮೇಜಿನ ಮಧ್ಯದಲ್ಲಿದ್ದ ರಿವಾಲ್ವರಿಗೆ ಬೊಟ್ಟು ಮಾಡಿ ಡೇವ್ ಹೇಳಿದ. “ಅಂಗಡಿಯಲ್ಲಿ ಕೊಳ್ಳುವುದಾದರೆ 45 ಡಾಲರುಗಳಿಗೆ ಕಡಿಮೆ ಇಲ್ಲ ಅಂತ ನನ್ನ ಅನಿಸಿಕೆ.” ಅದು ಸ್ಮಿತ್ ಅಂಡ್ ವೆಸ್ಸನ್ .38 … Read more

ನ್ಯಾನೋ ಕತೆಗಳು: ವೆಂಕಟೇಶ ಚಾಗಿ

  ೧) ಸ್ವಚ್ಛ ಭಾರತ ಬಸ್ ನಿಲ್ದಾಣದ ಕಟ್ಟೆಯ ಮೇಲೆ ಇಬ್ಬರು ಸ್ನೇಹಿತರು ಸರಕಾರದ ಮಹತ್ತರ ಯೋಜನೆಯ ಸಾಧಕ-ಬಾಧಕಗಳ ಕುರಿತು ಮಾತನಾಡುತ್ತಾ ಕುಳಿತಿದ್ದರು. ಸಮಯ ಕಳೆಯಲು ಬಾಯಿ ಚಟಕ್ಕಾಗಿ ಶೇಂಗಾ, ಪ್ಯಾಕೆಟ್ ತಿಂಡಿ, ಬಾಳೆಹಣ್ಣು ಇನ್ನಿತರೆ ವಸ್ತುಗಳನ್ನು ತಿನ್ನುತ್ತಾ ಮಾತನಾಡುತ್ತಿದ್ದರು. “ಛೇ, ಈ  ಜನರಿಗೆ ಸರಕಾರದ ಈ ಮಹಾ ಯೋಜನೆ ಅರ್ಥವಾಗುವುದೇ ಇಲ್ಲ.  ಇವರಿಗೆ ಯಾವಾಗ ಬುದ್ಧಿ ಬರುತ್ತೋ ” ಎನ್ನುತ್ತಾ ಹೊರಟುಹೋದರು. ಅವರಿದ್ದ ಜಾಗದ ಸುತ್ತಮುತ್ತ ಶೇಂಗಾ ಸಿಪ್ಪೆ,  ಪ್ಲಾಸ್ಟಿಕ್ ಹಾಳೆಗಳು, ಬಾಳೆ ಸಿಪ್ಪೆ ಹರಡಿದ್ದವು. … Read more

ಶಕ್ತಿದೇವತೆ: ಗಿರಿಜಾ ಜ್ಞಾನಸುಂದರ್

ಕಮಲಾ ತನ್ನ ಯೋಚನೆಯಲ್ಲಿ ಮುಳುಗಿದ್ದಳು. ತನ್ನ ಬಾಲ್ಯ, ತನ್ನನ್ನು ಮುದ್ದುಮಾಡಿ ಬೆಳೆಸಿದ ತವರು, ಅವಳಪ್ಪ ಅಮ್ಮನ ಮುದ್ದು ಸಾಲದೆಂದು ಅವಳ ಅಣ್ಣ ಕೂಡ ಅವಳನ್ನು ಅತಿಯಾಗಿ ಮುದ್ದು ಮಾಡುತ್ತಿದ್ದ. ಅವರೆಲ್ಲರ ಮುದ್ದಿನ ಕಣ್ಮಣಿ ಆಗಿದ್ದ ಅವಳನ್ನು ಸಿರಿವಂತನಿಗೆ ಕೊಟ್ಟು ಮಾಡುವೆ ಮಾಡಿದ್ದರು. ಅವನು ಸಮಾಜದಲ್ಲಿ ಒಳ್ಳೆಯ ಹೆಸರನ್ನು ಪಡೆದುಕೊಂಡಿದ್ದ. ಆದರೆ ಅವನು ಮತ್ತು ಅವನ ಅಪ್ಪ ಅಮ್ಮ ಮನೆಯಲ್ಲಿ ಬೇರೆ ರೀತಿಯಲ್ಲಿಯೇ ಇರುತ್ತಿದ್ದರು. ಹೊರಗಿನ ಸಮಾಜದಲ್ಲಿ ಸಭ್ಯಸ್ಥರೆನಿಸಿಕೊಂಡ ಅವರು, ತಮ್ಮ ನಿಜವಾದ ಬಣ್ಣವನ್ನು ಮನೆಯಲ್ಲಿ ತೋರಿಸುತ್ತಿದ್ದರು. ಅವರನ್ನು … Read more

ಒಂಟಿ ಹೆಣ್ಣಿನ ಕಥೆ: ವರದೇಂದ್ರ ಕೆ

ಕಡು ಬಡತನದ ಬೇಗೆ. ಮನೆಯಲ್ಲಿ ತಾಯಿ ಮಗಳು ಮಾತ್ರ. ಗಾಯತ್ರಿ ಬದುಕಿಗೆ ಆದ ಹಲವು ಗಾಯಗಳಿಗೆ ನಗು ಸಹನೆಗಳನ್ನೇ ಔಷಧಿ ಆಗಿಸಿಕೊಂಡಾಕೆ. ಮದುವೆ ಆಗಿ ಒಂದು ಮಗುವಿಗೆ ತಾಯಿ ಆಗುತ್ತಾಳೆ. ಹೆರಿಗೆ ಆದ ದಿನವೇ ಗಂಡ ಆ್ಯಕ್ಸಿಡೆಂಟ್ ನಲ್ಲಿ ಸತ್ತು ಹೋಗುತ್ತಾನೆ. ಹೆರಿಗೆಗೆ ಬಂದಾಕಿ ತವರು ಮನೆಯಲ್ಲೇ ಉಳಿಯುತ್ತಾಳೆ. ಹುಟ್ಟಿ ತಂದೆಯನ್ನು ತಿಂದುಕೊಂಡ ಕೆಟ್ಟ ನಕ್ಷತ್ರದವಳೆಂಬ ಹಣೆ ಪಟ್ಟಿ ಹೊತ್ತ ಮಗಳನ್ನು ಗಂಡನ ಅಪ್ಪ ಅಮ್ಮ, ಮುಖ ನೋಡಲೂ ಬರುವುದಿಲ್ಲ. ಗಾಯತ್ರಿಗೆ ತವರು ಮನೆಯೇ ಗತಿಯಾಗುತ್ತದೆ ತವರನ್ನು … Read more

ಮಾಲಿಂಗ. . .: ಸಿದ್ದರಾಮ ತಳವಾರ

ರಾಮೇನಹಳ್ಳಿಯ ಇಡೀ ಊರಿಗೆ ಊರೇ ಪತರಗುಟ್ಟಿ ಹೋಗಿದೆ. ಊರ ರಾಮೇಗೌಡರ ಮನೆಯೆಂಬುದೊಂದು ಸಂತೆಯಾಗಿ ಹೋಗಿತ್ತು. ಇಡೀ ಊರಿಗೆ ಊರೇ ಅವರ ಮನೆ ಮುಂದೆ ನೆರೆದು ನೆರೆದವರೆಲ್ಲ ಕೌತುಕದಿಂದ ಪರಿಶೀಲನೆಗೆ ಬಂದ ಪೋಲೀಸರ ಮುಖಗಳನ್ನ ದಿಟ್ಟಿಸುತ್ತಿದ್ದಾರೆ. ಊರಿನ ಯಾವೊಬ್ಬ ಹೆಂಗಸು ಮುಖ ತೊಳೆದಿಲ್ಲ ಅಂಗಲದ ಕಸ ಗುಡಿಸಿಲ್ಲ ರಂಗೋಲಿ ಹಾಕಿಲ್ಲ ಬಾಯಲ್ಲಿ ಸೆರಗಿಟ್ಟುಕೊಂಡು “ಯವ್ವಾ ಹೆಂಗಾಗ್ಯದೋ ಏನೋ, ಪಾಪ ದೇವ್ರಂಥ ಗೌಡ್ರಿಗೆ ಹಿಂತಾ ಸ್ಥಿತಿ ಯಾಕ ಬಂತುಅಂತೇನಿ, ಮನೀ ಮಗನಂಗಿದ್ದ ಮಾಲಿಂಗ ಅದ್ಹೆಂಗ್ ಸತ್ನೋ ಏನೋ ಪಾಪ ಗೌಡರ … Read more

ಜಪ್ತಿ: ಎಂ ಜವರಾಜ್

ಅಪ್ಪನನ್ನು ತಬ್ಬಿಕೊಂಡು ಮಲಗಿದ ರಾತ್ರಿಗಳು ಸಾಕಷ್ಟಿದ್ದವು. ಅವನ ಮಗ್ಗುಲು ಬೆಚ್ಚನೆಯ ಗೂಡಾಗಿತ್ತು. ಒಂದೊಂದು ಸಾರಿ ಆ ಬೆಚ್ಚನೆಯ ಗೂಡು ದುಗುಡದಲಿ ಕನವರಿಸಿ ಕನವರಿಸಿ ನನ್ನನ್ನು ದೂರ ತಳ್ಳುತ್ತ ಮಗ್ಗುಲು ಬದಲಿಸುತ್ತಿತ್ತು. ಅಪ್ಪನನ್ನು ತಬ್ಬಿಕೊಂಡು ಮಲಗಲು ಅಷ್ಟು ಸುಲಭವಾಗಿರಲಿಲ್ಲ. ತಮ್ಮಂದಿರ ಸರದಿಯ ಸಾಲಿತ್ತು. ಒಂದೊಂದು ರಾತ್ರಿ ಒಬ್ಬೊಬ್ಬರಿಗೆ ಎಂದು ನಿಗದಿ ಮಾಡಿದ್ದರಿಂದ ಆ ಸರದಿಯ ಸಾಲಿನ ರಾತ್ರಿ ನನ್ನದಾಗುತ್ತಿತ್ತು. ಉಳಿದವರು ಅವ್ವನ ಮಗ್ಗುಲಲ್ಲಿ ಮಲಗುತ್ತಿದ್ದರು. ನನ್ನದಾದ ಆ ರಾತ್ರಿಗಳು ಅಪ್ಪನ ಪೇಚಾಟ ನರಳಾಟ ನನಗೆ ದಿಗಿಲು ಹುಟ್ಟಿಸುತ್ತಿತ್ತು. ಕರಿಯ … Read more

ಮುಚ್ಚಿಟ್ಟ ಪುಟಗಳು: ಉಮೇಶ ದೇಸಾಯಿ

  “ದಿವ್ಯಾ ಮಗನ ಪ್ರಶ್ನಿ ಕೇಳಿ ತಲಿ ತಿನಬ್ಯಾಡ. ಇದರ ಮಜಾ ತಗೊಳಲಿಕ್ಕೆ ಬಿಡು. ” ಶ್ರೀ ಹೇಳಿದ ಮಾತು ದಿವಾಕರನಿಗೂ ನಾಟಿತು. ಅವನು ಗ್ಲಾಸು ಎತ್ತಿ ಬೀರು ಗುಟಕರಿಸಿದ. ಹಂಗ ನೋಡಿದರ ದಿವಾಕರನ ಉತ್ಸಾಹಕ್ಕ ಅರ್ಥನೂ ಇತ್ತು. ಬರೋಬ್ಬರಿ ಮುವ್ವತ್ತು ವರ್ಷ ಆದಮ್ಯಾಲೆ ಜೀವದ ಗೇಳೆಯನ ಭೇಟಿ ಆಗಿದ್ದ ಅವ. ಗೆಳೆಯ ಅಂದರ ಅಂತಿತಂಹ ಗೆಳೆಯ ಅಲ್ಲ ರಂಗೀಲಾ ವ್ಯಕ್ತಿತ್ವದವ. ದಿವಾಕರನಿಗೆ ಯಾವಾಗಲೂ ಒಂದು ನಿಗೂಢ ವ್ಯಕ್ತಿಹಂಗ ಕಾಣಸತಿದ್ದ ಇವ ಹಿಂಗ ಇವನ ನಡಾವಳಿ ಹಿಂಗ … Read more

ಜೀರ್ಣೋದ್ದಾರ: ಸತೀಶ್ ಶೆಟ್ಟಿ ವಕ್ವಾಡಿ.

ಗುತ್ತಿಗೆಪುರದ ಶ್ರೀ ಅನಂತಪದ್ಮನಾಭ ದೇವಸ್ಥಾನ ಇತಿಹಾಸ ಪ್ರಸಿದ್ಧವಾದದ್ದು. ಸುತ್ತಲಿನ ಐದಾರು ಊರುಗಳ ಆರಾಧ್ಯ ದೇವರಾದ ಅನಂತಪದ್ಮನಾಭನನ್ನು ಏಳುನೂರು ವರ್ಷಗಳ ಹಿಂದೆ ಇಲ್ಲಿ ಪ್ರತಿಷ್ಠಾಪಿಸಲಾಗಿತ್ತು. ಪ್ರತಿವರ್ಷದ ಮಾರ್ಗಶಿರ ಮಾಸದ ಮೊದಲ ಅಷ್ಟಮಿಯ ದಿನ ಇಲ್ಲಿ ರಥೋತ್ಸವ ಮತ್ತು ಕೃಷ್ಣಾಷ್ಟಮಿಯ ದಿನ ವಿಶೇಷ ಉತ್ಸವದ ಕಾರ್ಯಕ್ರಮವಿರುತ್ತದೆ. ಇದಲ್ಲದೆ ಗಣೇಶೋತ್ಸವ ಮತ್ತು ನವರಾತ್ರಿ ಉತ್ಸವಗಳನ್ನೂ ಆಚರಿಸಲಾಗುತ್ತೆ. ಆವಾಗೆಲ್ಲ ಸುತ್ತಲಿನ ಊರುಗಳ ಸ್ಥಳೀಯ ಪ್ರತಿಭೆಗಳ ಸಾಂಸ್ಕೃತಿಕ ಕಲರವ ರಂಗೆರಿಸುತ್ತವೆ. ಊರಿನವರೆಲ್ಲ ತಮ್ಮ ಗದ್ದೆಗಳ ನಾಟಿ ಮಾಡುವ ಮುನ್ನ ದಿನ ಮತ್ತು ನಾಟಿಯ ಕೊನೆ … Read more

ಮಾತು ಮದುವೆ ಮಂಟಪದೊಳು ಸಕಲ ಕಾರ್ಯವಾ: ಡಾ. ವೃಂದಾ ಸಂಗಮ

ಸರಸ್ವತಿ ಮನೆಗೆ ಬಂದಾಗ ಏಳೂವರೆ. ಮುಂದಿನ ಹಾಲ್ ನಲ್ಲಿಯೇ ಲಕ್ಷ್ಮಿ ತನ್ನ ತಮ್ಮನನ್ನು ಓದಿಸುತ್ತಿದ್ದಳು. ಅಮ್ಮ ಬಂದಿದ್ದು ಕಂಡೊಡನೇ ಕಾಫಿ ಮಾಡಲು ಎದ್ದಳು. ಸರಸ್ವತಿ ಹತ್ತಿರದಲ್ಲೇ ಇರುವ ಹೆಸರಾಂತ ನರ್ಸಿಂಗ್ ಹೋಂ ಒಂದರಲ್ಲಿ ಹೆಡ್ ನರ್ಸ. ಮೈ ತುಂಬಾ ಕೆಲಸ. ಮನೆಗೆ ಬಂದರೆ ಸಾಕೋ ಸಾಕು ಎನಿಸುತ್ತಿರುತ್ತದೆ. ಈಗ ಮಗಳು ಲಕ್ಷ್ಮಿ ಮನೆಯಲ್ಲೇ ಇರುವುದರಿಂದ ಅವಳಿಗೆ ಮನೆ ಕೆಲಸದಲ್ಲಿ ಸಂಪೂರ್ಣ ವಿನಾಯಿತಿ. ಮಧ್ಯಮ ವರ್ಗದ ಮನೆಯಲ್ಲಿ ಬೇಡಿ ಬಯಸುವಂತಹ ಮಗಳು. ಪಿ ಯು ಸಿ ಯಲ್ಲಿ ಅತ್ಯುತ್ತಮ … Read more

ನಿಂಗಿ: ಗೀತಾ ಜಿ. ಹೆಗಡೆ, ಕಲ್ಮನೆ

“ಅಮ್ಮಾ ಅಮ್ಮಾ ” ಯಾರಿದು? ಒಂದೆ ಸಮ ಕಿಟಕಿ ಸಂಧಿಯಲ್ಲಿ ಮೂತಿ ಇಟ್ಕಂಡು ಕರೆಯುತ್ತಿರೋದು? ಓಹ್! ಮಾದೇವಿ. ಈ ದಿನ ಬೆಳಗ್ಗೆಯೇ ಬಂದು ಮನೆ ಕೆಲಸ ಮಾಡಿ ಹೋದಳಲ್ಲಾ? ಇನ್ನೂ ಮಧ್ಯಾಹ್ನ ಎರಡೂವರೆಯಷ್ಟೆ. ಈಗ್ಯಾಕೆ ಬಂದ್ಲಪ್ಪಾ ಇವಳು? ಇನ್ನೇನು ರಾಮಾಯಣವೊ ಏನೊ? ಇವಳ ಗೋಳು ಯಾವತ್ತು ಮುಗಿಯುತ್ತೊ? ಸದಾ ಒಂದಲ್ಲಾ ಒಂದು ಗಲಾಟೆ ಕುಡುಕ ಗಂಡನನ್ನು ಕಟ್ಟಿಕೊಂಡು. ಇದ್ದ ಒಬ್ಬ ಮಗನ ಪಾಲನೆ,ಪೋಷಣೆಯ ಜವಾಬ್ದಾರಿಗೆ ನಿಯತ್ತಾಗಿ ಮೂಕ ಎತ್ತಿನಂತೆ ದುಡಿಯುವ ಹೆಣ್ಣು. ಏನು ಹೇಳಿದರೂ ಇಲ್ಲಾ ಅನ್ನದೇ … Read more

ಇಸ್ಪೀಟು ರಾಣಿ: ಜೆ.ವಿ.ಕಾರ್ಲೊ.

ರಶ್ಯನ್ ಮೂಲ: ಅಲೆಕ್ಸಾಂಡರ್ ಪುಷ್ಕಿನ್ ಇಂಗ್ಲಿಷಿನಿಂದ: ಜೆ.ವಿ.ಕಾರ್ಲೊ. ಅಶ್ವದಳದ ಸೇನಾಧಿಪತಿ ನರುಮೋವನ ವಸತಿ ಗೃಹದಲ್ಲಿ ಇಸ್ಟೀಟ್ ಆಟ ಬಹಳ ಜೋರಾಗಿ ನಡೆದಿತ್ತು. ಚಳಿಗಾಲದ ಆ ರಾತ್ರಿ ಹೇಗೆ ಕಳೆಯಿತೆಂದು ಯಾರಿಗೂ ಅರಿವಾಗಲಿಲ್ಲ. ಅವರೆಲ್ಲಾ ಊಟಕ್ಕೆಂದು ಎದ್ದಾಗ ಬೆಳಗಿನ ಜಾವ ಐದಾಗಿತ್ತು! ಗೆದ್ದವರಿಗೆ ಊಟ ರುಚಿಕರವಾಗಿದ್ದರೆ, ಸೋತವರಿಗೆ ಅದೊಂದು ಯಾಂತ್ರಿಕ ಕರ್ಮವಾಯಿತು. ಕೊನೆಗೂ ಶಾಂಫೇನಿನ ಬಾಟಲಿ ಕೈ ಬದಲಾಯಿಸಿದಾಗ ಅವರಲ್ಲಿ ಹೊಸ ಹುರುಪು ತುಂಬಿ ಬಂದಿತು. “ಸುರಿನ್? ಏನಪ್ಪ ನಿನ್ನ ಕತೆ?” ಮನೆಯ ಯಜಮಾನ ನರುಮೊವ್ ಕೇಳಿದ. “ಅಯ್ಯೋ, … Read more