ಕರ್ನಾಟಕ ಪರಿಶೆ (ಭಾಗ-3): ಎಸ್. ಜಿ. ಸೀತಾರಾಮ್, ಮೈಸೂರು
ಕನ್ನಡ ಭಾಷೆಯನ್ನು ಅರಳಿಸುವ ಹೆಸರಿನಲ್ಲಿ, ಅದೇ ಖ್ಯಾತ ಸಾಹಿತಿಗಳನ್ನು ಉತ್ಸವಗಳಲ್ಲಿ ಮತ್ತೆಮತ್ತೆ ಮೆರೆಸಿ, ಪಂಪ ಪ್ರಶಸ್ತಿ, ನಾಡೋಜ ಪ್ರಶಸ್ತಿ, ನೃಪತುಂಗ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ ಮೊದಲಾದ ಪದವಿ-ಪ್ರಶಂಸೆಗಳ ಸುಂಟರಮಳೆಯನ್ನು ಅವರ ಮೇಲೆ ಚಳಿಜ್ವರಬರುವಮಟ್ಟಿಗೆ ಸುರಿಸುವುದು ಒಂದು ಸಂಪ್ರದಾಯವಾಗಿಬಿಟ್ಟಿದೆ. (“ರಾಜ್ಯಕವಿ” ಬಿರುದು ಯಾವ “ದಾತಾರ” ನೇತಾರರಿಗೂ ಏಕೋ ಇನ್ನೂ ಹೊಳೆದಿಲ್ಲ! ನಿಜಾರ್ಥದಲ್ಲಿ “ರಾಷ್ಟ್ರಕವಿ” ಎಂಬುವುದೂ “ರಾಜ್ಯಕವಿ” ಅಷ್ಟೇ ಅಲ್ಲವೇ?) ಕನ್ನಡ “ಅಕ್ಕ-ಡುಮ್ಮಿ” (‘ಅಕ್ಯಾಡಮಿ’- ಡಿ.ವಿ.ಜಿ. ಕರೆದಂತೆ), ಪರಿಷತ್ತು, ಪ್ರಾಧಿಕಾರ, ಪೀಠ, ವಿಶ್ವವಿದ್ಯಾನಿಲಯ, ಇಲಾಖೆ … Read more