ಲೇಖನ
ಹಿಂಗ್ ಕಣ್ಣೀರ್ ಹಾಕಿ ಎಷ್ಟೋ ವರ್ಷ ಆಗಿದ್ವು!: ಗುರುಪ್ರಸಾದ ಕುರ್ತಕೋಟಿ
ಅವತ್ತ ನನ್ ಕಣ್ ನನಗ ನಂಬದಷ್ಟು ಆಶ್ಚರ್ಯ ಆತು. ಎರಡೂ ಕಣ್ಣಾಗ ದಳ ದಳ ನೀರು ಹರಿಲಿಕತ್ತಾವು. ತಡಕೊಳ್ಳಲಿಕ್ಕೆ ಆಗದಷ್ಟು. ಹಿಂಗ್ ಕಣ್ಣೀರ್ ಹಾಕಿ ಎಷ್ಟೋ ವರ್ಷ ಆಗಿದ್ವು! … ನನಗ ನೆನಪಿದ್ದಂಗ ಹತ್ತು ವರ್ಷದ ಹಿಂದ ಇರ್ಬೇಕು ನನ್ನ ಹೆಂಡತಿ ನನ್ನ ಬಿಟ್ಟು ತಾ ಒಬ್ಬಾಕಿನ ತೌರ ಮನೀಗೆ ಹೋಗಿದ್ದು. ಅದನ್ನ ಬಿಟ್ರ ಅಕಿ ಒಬ್ಬಾಕಿನ ಎಂದೂ ಹೋಗೇ ಇಲ್ಲ. ಪ್ರತಿ ಸಲ ಊರಿಗೆ ಹೋಗುಮುಂದ ಜೊತಿಗೆ ನಾನೂ ಇದ್ದ ಇರ್ತಿದ್ದೆ. ಅಥವಾ ತನ್ನ ಜೋಡಿ … Read more
ಪ್ಲಾಸ್ಟಿಕ್: ರೇಖ ಮಾಲುಗೋಡು.
ಕಾಯಿಲೆಯೇ ಏನೆಂದು ಗೊತ್ತಿಲ್ಲದೇ ಹೊಟ್ಟೆ ಉಬ್ಬರಿಸಿ ಅಡ್ಡಬಿದ್ದ ದನದಿಂದ ಕೆಜಿಗಟ್ಟಲೆ ಪ್ಲಾಸ್ಟಿಕ್ ಹೊರತೆಗೆದ ಪಶುವೈದ್ಯ ಎಂದು ಓದುವಾಗ ಮುಂದಿನ ದಿನಗಳಲ್ಲಿ ದನದ ಬದಲು ಮನುಷ್ಯ ಎನ್ನುವ ಪದ ಬಂದರೆ ಆಶ್ಚರ್ಯವೇನಿಲ್ಲ. ಈಗ ಎಲ್ಲಿ ನೋಡಿದರು ಪ್ಲಾಸ್ಟಿಕ್ ಕವರ್ಗಳದ್ದೇ ಸಾಮ್ರಜ್ಯ.ಪ್ಲಾಸ್ಟಿಕ್ ಪದ ಬಳಕೆಗೆ ನಮ್ಮ ಕನ್ನಡದಲ್ಲಿ ಸುಲಭವಾಗಿ ಆಡುವಂತ ಪರ್ಯಾಯ ಪದವಿಲ್ಲ. ಆದ್ದರಿಂದ ಬೇರೆ ಆಂಗ್ಲ ಪದದ ತರವೇ ನಮ್ಮನ್ನು ನಾವು ಆಂಗ್ಲಪದಗಳಿಗೆ ಹೊಂದಿಸಿಕೊಂಡು ಬಿಟ್ಟಿದ್ದೇವೆ. ನಮ್ಮ ಪರಿಸರ ಶುದ್ದವಾಗಿರಬೇಕೆಂದರೆ ನಾವೇ ಪ್ಲಾಸ್ಟಿಕ್ನ್ನುಆದಷ್ಟು ಕಡಿಮೆ ಮಾಡುತ್ತಾ ಹೋಗಬೇಕು.ನಮ್ಮ ಹಿಂದಿನ … Read more
ಈಗ ಹಂಪಿಯೆಂದರೇ ?: ಬಿ. ಎಲ್. ಆನಂದ ಆರ್ಯ
ಹಂಪಿಯೆಂದು ಹೆಸರು ಕೇಳಿದ ಕೂಡಲೆ ನೆನಪಾಗೋದು ; ಅಲ್ಲಿನ ಶಿಲ್ಪ-ಕೆತ್ತನೆಗಳು, ಬೆಟ್ಟ-ಗುಡ್ಡಗಳು, ದೇವಾಲಯಗಳು. ಇತ್ತೀಚಿಗೆ ನಾವು ಕಾಣುವ ಹಂಪಿಯ ಪರಿಚಯಿಸಲು ಪ್ರಯತ್ನಿಸುವೆ. ಹಂಪಿಯು ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಹೀಗಾಗಿ ಸುಮಾರು 30 ಚದರ ಕೀ. ಮೀ. ನಷ್ಟು ಈಗಲೂ ವ್ಯಾಪಕವಾದ ಗುಡಿಗುಂಡಾರ, ಶಿಲ್ಪಕೆತ್ತನೆ, ಪುಷ್ಕರಣಿ, ಕೋಟೆಗಳ ಮಾರ್ದನಿಯಿದೆ. ಹಾಗೆಯೇ ಕನ್ನಡದಷ್ಟೆ ಇಂಗ್ಲೀಷ್ ಮಾತಾಡುವ ಹಾಗೂ ಪಾಶ್ಚತ್ಯ, ಭಾರತೀಯ ಸಂಸ್ಕೃತಿಗಳ ಮಹಾಸಂಗಮತಾಣವಾಗಿ ಮಾರ್ಪಟ್ಟಿದೆ. ಪ್ರವಾಸಿಗರ ಪ್ರಭಾವದಿಂದ ಅಲ್ಲಿನ ಜನರು ಕೃಷಿಯ ಹೊರತುಪಡಿಸಿ ವ್ಯಾಪಾರವಹಿವಾಟು ನಡೆಸಿ ನಿಶ್ಚಿಂತರಾಗಿ ಹೊಟ್ಟೆ … Read more
ಖುಷಿ ಮತ್ತು ಸಂತೋಷ: ಶಿವರಾಜ್ ಬಿ. ಎಲ್
ನಾನು ಅನೇಕ ಬಾರಿ, ತುಂಬಾ ದಿನಗಳಿಂದ ಅತಿಯಾಗಿ ಕಾಡುತ್ತಿದೆ ಅದೇನೆಂದರೆ ನಮ್ಮ ಜೀವನದ ಮುಖ್ಯ ಗುರಿ ಕೇವಲ ಸಂತೋಷವಾಗಿರುವುದಾ???. ಹೌದು ತಾನೇ ನಮ್ಮ ಜೀವನದ ಮುಖ್ಯ ಉದ್ದೇಶ ನಾವು ಖುಷಿಯಾಗಿ ಇರುವುದೇ ಆಗಿದೆ, ಆದರೆ ಈ ನೋವು ಮತ್ತು ಕಷ್ಟ ಪಡುವುದು ಯಾಕೆ ?? ಇವು ಕೂಡ ನಾವು ಸಂತೋಷವನ್ನು ಪಡೆಯೋಕೆ ಇರುವ ಕೆಲವು ಕಾರಣಗಳು. ಈ ರೀತಿಯಾಗಿ ನಂಬಿರುವುದು ನಾನೊಬ್ಬನೇ ಅಲ್ಲ,ನಮ್ಮ ಸುತ್ತ ಮುತ್ತಲಿನ ಎಲ್ಲ ಜನರು ಇದೆ ಸಿದ್ಧಾಂತ ನಂಬಿ ಜೀವನ ಮಾಡುತ್ತಿದ್ದಾರೆ. ಕೆಲವರು … Read more
ಮಾನವ ಜನುಮ ಕನ್ನಡ ವಿಡಿಯೋ
https://www.youtube.com/watch?v=y9PBe1-JakQ&feature=youtu.be
ಎಲ್ಲರಂಥವನಲ್ಲ ನನ್ನಪ್ಪ! – ಬರಹಗಳ ಅಹ್ವಾನ
"ನಮ್ಮ ಅಪ್ಪ ನಮಗೆ ಹೀರೋ! ಅವನ ಹಾಗೆ ಮತ್ತೊಬ್ಬನಿಲ್ಲ!" ಅಂತ ನಿಮಗನ್ನಿಸಿದೆಯೇ? ಹಾಗಿದ್ದರೆ ಅದನ್ನು ವ್ಯಕ್ತಪಡಿಸುವ ಅವಕಾಶ ಇಲ್ಲಿದೆ…. ಅಪ್ಪಂದಿರ ಬಗ್ಗೆ ಪುಸ್ತಕ ಮಾಡುವ ಪ್ರಯತ್ನ ನಡೆದಿದೆ. ವಿಶ್ವದ ಎಲ್ಲ ಅಪ್ಪಂದಿರಿಗೆ ನಮ್ಮ ಪ್ರೀತಿಯ ಕೊಡುಗೆ ಇದು. ಅವರು ನಿಮಗೆ ಹೇಗೆ ಸ್ಪೂರ್ತಿ ಆದರು, ಅವರ ಬಗ್ಗೆ ನಿಮಗೇನಿಷ್ಟ, ಅವರ ಜೊತೆ ಕಳೆದ ಭಾವನಾತ್ಮಕ ಕ್ಷಣಗಳು, ಯಾವುದೋ ಒಂದು ಸಣ್ಣ ಜಗಳ, ಕಾಡುತ್ತಿರುವ ಪಾಪ ಪ್ರಜ್ಞೆ, ನಿಮ್ಮ ಕಣ್ಣಲ್ಲಿ ನೀರು ಹರಿಸಿದ ಅವರು ಪಟ್ಟ ಕಷ್ಟಗಳು… … Read more
ಕಿರುಲೇಖನಗಳು: ಪ್ರಶಸ್ತಿ, ಶಿವು ನಾಗಲಿಂಗಯ್ಯನಮಠ
ನಂಬರ್ ಪ್ಲೇಟ್ ಬಂಗಾರದ ಹುಡಿಯ ಜಗಕೆಲ್ಲಾ ಎರಚೋಕೆ ಹೊರಟಿದ್ದ ಸೂರ್ಯ ಹಿಂದೆಂದಿಗಿಂತಲೂ ಹೆಚ್ಚು ಖುಷಿಯಾಗಿದ್ದ.ರಾತ್ರಿ ಪಾಳಿ ಮುಗಿಸಿ ಬರುತ್ತಿದ್ದ ಚಂದ್ರನಿಗೊಂದು ಟಾಟಾ ಹೇಳಿ, ಅರುಣೋದಯಕ್ಕೇ ಗೂಡು ಬಿಡೋ ಹಕ್ಕಿಗಳಿಗೊಂದು ಹಾಯ್ ಹೇಳೋ ನಿತ್ಯಕರ್ಮದಲ್ಲಿ ಎದುರಾಗೋ ಅಂಕಲ್ಲುಗಳಿಗೆ ಇವನೆಂದರೆ ಪಂಚ ಪ್ರಾಣ.ವಾಕಿಂಗ್ ಮಾಡೋಕೆ ಮನಸಿದ್ರೂ ಚಳಿ ಚಳಿಯೆನ್ನುತ್ತಾ ಮನೆ ಬಿಡೋಕೇ ಬೇಜಾರಾಗೋ ಸಂದರ್ಭದಲ್ಲಿ ಬೆಳಕ ಬೆಚ್ಚನೆಯ ಶಾಲು ಹೊಚ್ಚುವವನ ಕಂಡರೆ ಯಾರಿಗೆ ಇಷ್ಟವಿರೋಲ್ಲ ಹೇಳಿ ? ತರುಲತೆಗಳಿಗೆ ಗೆಲುವು ತರುವವನ, ಮೊಗ್ಗಾಗಿ ಮುದುಡಿದ ಮನಗಳ ಅರಳಿಸೋನ ಬರುವಿಕೆಗೇ … Read more
ಕ್ಯಾಂಪಸ್ ಕವಿಗೋಷ್ಠಿ
ದಿನಾಂಕ 15-03-2017 ರಂದು ಬೆಳಿಗ್ಗೆ 11 ಗಂಟೆಗೆ ಕನ್ನಡ ಅಧ್ಯಯನ ಕೇಂದ್ರದ ಕರ್ನಾಟಕ ಸಂಘ ದಿಂದ‘ಕ್ಯಾಂಪಸ್ ಕವಿಗೋಷ್ಠಿ’ಯನ್ನು ಆಯೋಜಿಸಲಾಗಿದೆ. ಈ ಕವಿಗೋಷ್ಠಿಯಲ್ಲಿ ವಿವಿಧ ವಿಶ್ವವಿದ್ಯಾಲಯದ, ವಿವಿಧ ವಿಷಯಗಳ, ವಿವಿಧ ಭಾಷೆಯ ಸ್ನಾತಕೋತ್ತರ ಮತ್ತು ಸಂಶೋಧನಾ ವಿದ್ಯಾರ್ಥಿಗಳು ಪಾಲ್ಗೊಳ್ಳ ಬಹುದಾಗಿದ್ದು ಆಸಕ್ತ ವಿದ್ಯಾರ್ಥಿಗಳು ತಮ್ಮ ಕವಿತೆಗಳನ್ನು ಈ ಕೆಳಕಂಡ ವಿಳಾಸಕ್ಕೆ ದಿನಾಂಕ 13-03-2017 ರೊಳಗೆ ತಲುಪಿಸಬೇಕಾಗಿ ಕೋರುತ್ತೇವೆ. ಇದರೊಂದಿಗೆ ನಿಮ್ಮ ಹೆಸರು, ವಿಳಾಸ, ಮೊಬೈಲ್ ಸಂಖ್ಯೆ ನೀಡಬೇಕಾಗಿ ವಿನಂತಿ. ಸಂಪರ್ಕಿಸಬೇಕಾದ ಮೊಬೈಲ್ ಸಂಖ್ಯೆ : 9900903084 ಬೆಂಗಳೂರು … Read more
“ಮರೆಯಾದ ಜೀವಾ”: ಪಿ ಕೆ…? ನವಲಗುಂದ
ಹಂಗೆ ಸುಮ್ಮನೆ ಕೆಲಸವಿರಲಿಲ್ಲ ಹರಟೆ ಹೊಡೆಯುತ್ತಾ ಕುಂತಿದ್ದೆ ಆ ಕಡೆ ನನ್ನ ಆತ್ಮೀಯ ಮಿತ್ರನ ಕರೆ ಬಂತು. ಆ ಕಡೆಯಿಂದ ಎಲ್ಲಿದ್ದೀಯಾ? ನಾನು. ಮಾರ್ಕೆಟ್ ನಲ್ಲಿ . ಹಾಗಾದರೆ ಸರ್ಕಾರಿ ಆಸ್ಪತ್ರೆಗೆ ಬಾ. ಯಾಕೋ.? ಬಾರೋ ಮಾರಾಯ ಆಯ್ತು ಬಂದೆ. ಗೆಳೆಯನ ಬೈಕು ತೆಗೆದುಕೊಂಡು ಹೊರಟೆ ಆದರೆ ಮನಸ್ಸುನಲ್ಲಿ ಏನೋ ತಳಮಳ ಏನಾಗಿರಬೇಕು? ಅನ್ನುವ ವಿಚಾರದಲ್ಲಿಯೇ ಆಸ್ಪತ್ರೆ ಹತ್ತಿರವೇ ಬಂದೆ ಗೆಳೆಯ ಮುಖದಲ್ಲಿ ಕೊಂಚು ನೋವು ಕೊಂಚು ಸಂತಸ . ಇತ್ತ ತಂದೆಯಾಗುವ ಸಂತಸ ಒಂದಾದರೆ ಇತ್ತ … Read more
ವೃದ್ಧಾಪ್ಯದ ಕಥೆ-ವ್ಯಥೆ: ಈಶ್ವರ. ಜಿ. ಸಂಪಗಾವಿ, ಕಕ್ಕೇರಿ.
ಕರುಳ ಬಳ್ಳಿ ಚಿಗುರಬೇಕೆಂಬುದು ಎಲ್ಲ ಜೀವಿಗಳ ಸಹಜ ಬಯಕೆ. ಅದರಂತೆ ಮನುಷ್ಯನು ಮಕ್ಕಳಿಂದ ತನ್ನ ವಂಶದ ಬಳ್ಳಿ ಚಿಗುರಲಿ ಎಂದು ಹಂಬಲಿಸುತ್ತಾನೆ. ಮಕ್ಕಳಾಗದೇ ಇದ್ದಾಗ ಹತ್ತು ಹನ್ನೆರಡು ದೇವರುಗಳಿಗೆ ಹರಕೆ ಹೊತ್ತು ಸುಸ್ತಾಗುತ್ತಾನೆ. ಛಲದಂಕಮಲ್ಲನಂತೆ ಎಡೆಬಿಡದೆ ಅನೇಕ ಡಾಕ್ಟರಗಳನ್ನು ಸಂಪರ್ಕಿಸುತ್ತಾನೆ. ಮಕ್ಕಳಾಗುವ ಮುನ್ಸೂಚನೆ ಅವನನ್ನು ಪುಲಕಿತಗೊಳಿಸುತ್ತದೆ. ಹೆತ್ತ ಮಕ್ಕಳನ್ನು ಚನ್ನಾಗಿ ಬೆಳೆಸಿ, ವಿದ್ಯಾವಂತರನ್ನಾಗಿಸಲು ಹಗಲಿರುಳು ತನ್ನ ಜೀವ ಸವೆಸುತ್ತಾನೆ. ಜೀವಮಾನದಲ್ಲಿ … Read more
ಶ್ರೀ ಮಂಜುನಾಥ ಭಾಗವತ, ಹೊಸ್ತೋಟ-77 ರ ಸಂಭ್ರಮ
ಮಾನ್ಯರೆ, ತಮ್ಮೆಲ್ಲರ ಹಾರೈಕೆ, ಸಹಕಾರದ ನೆಲೆಯಲ್ಲಿ, ಶ್ರೀ ಮಂಜುನಾಥ ಭಾಗವತ, ಹೊಸ್ತೋಟ-77 ರ ಸಂಭ್ರಮವನ್ನು ದಿನಾಂಕ 18.2.2017, ಶನಿವಾರ, ಸಂಜೆ 5.00 ರಿಂದ 7.30 ರ ತನಕ, ಮಲೆನಾಡ ಸಿರಿ ಸಭಾಂಗಣ, ವರದ ಶ್ರೀ, ಸಾಗರದಲ್ಲಿ ಹಮ್ಮಿ ಕೊಳ್ಳಲಾಗಿದೆ. ದಯಮಾಡಿ ಬಂದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತಿದ್ದೇವೆ. ಡಾ ಮಮತಾ ಜಿ ಮತ್ತು ಅನೇಕ ಬಳಗ, ಅನೇಕ ನಾರಾಯಣ ಜೋಶಿ ಚಾರಿಟಬಲ್ ಟ್ರಸ್ಟ್, ಬೆಂಗಳೂರು. ಅoಟಿಣಚಿಛಿಣ ಟಿo : 9945744833
ಮುರಿದ ಪ್ರೀತಿಯ ಕೊಂಡಿ : ನಾಗರಾಜ ವಿ. ಟಿ.
ದಿನಚರಿಯಂತೆ facebook ನಲ್ಲಿ ಅವಳ profile ಚೆಕ್ ಮಾಡುತಿದ್ದ ನಾನು ಸಿಡಿಲು ಬಡೆದವನಂತೆ ಇದು ನಿಜವೋ..ಅಥವಾ ದೃಷ್ಟಿ ಭ್ರಮೆಯೋ ಎಂದು ದಿಜ್ಞೂಢನಾಗಿ ಮತ್ತೊಮ್ಮೆ ಮೋಬೈಲ್ ನ ಸ್ಕ್ರೀನ್ ದಿಟ್ಟಿಸಿ ನೋಡಿದೆ. ಹೌದು ಇದು ಕೆಟ್ಟ ಕನಸು ಅಲ್ಲ..ಕನಸ್ಸಾಗಿದ್ದರೆ ಪಕ್ಕದ ಸೀಟಲ್ಲಿ ಕುಳಿತವನ ಬೇವರಿನ ವಾಸನೆ ನನ್ನ ಮೂಗಿಗೆ ಬಡಿಯುತಿರಲಿಲ್ಲ. ಛೇ..!! ಅವಳು ನನ್ನನು unfriend ಮಾಡುವಷ್ಟು ನಾ ಅವಳಿಗೆ ಬೇಡ ವಾಗಿ ಹೋದನೆ? ಅವಳು ಮೊದ ಮೊದಲು ಪರಿಚಯವಾದಾಗ ಆವಳು online ಬರುವುದನ್ನು ಬಕ ಪಕ್ಷಿಯಂತೆ ಒಂಟಿ … Read more
‘ಬುದ್ಧ ಹೇಳಿದ ಕಥೆ’ ನಾಟಕ ಪ್ರಯೋಗ : ಹಿಪ್ಪರಗಿ ಸಿದ್ಧರಾಮ
ಮಕ್ಕಳ ಲೋಕದ ಒಗ್ಗಟ್ಟಿನ ಸೂತ್ರ ಹೇಳುವ ‘ಬುದ್ಧ ಹೇಳಿದ ಕಥೆ’ ನಾಟಕ ಪ್ರಯೋಗ. ಮಗು ಮನಸ್ಸಿನ ಧಾರವಾಡದ ಉದಯೋನ್ಮುಖ ಹವ್ಯಾಸಿ ರಂಗನಟಿ ಶ್ರೀಮತಿ ಗಿರಿಜಾ ಹಿರೇಮಠ ಅವರು ಬಹು ಆಸಕ್ತಿ-ಶ್ರಮವಹಿಸಿ ಎಸ್.ಮಾಲತಿ ವಿರಚಿತ ‘ಬುದ್ಧ ಹೇಳಿದ ಕಥೆ’ ನಾಟಕವನ್ನು ಇತ್ತೀಚೆಗೆ (ಡಿ.27) ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಮಕ್ಕಳ ಮಂಟಪದ ಆಶ್ರಯದಲ್ಲಿ ಸಾಧನಕೇರಿಯ ಆಲೂರ ವೆಂಕಟರಾವ್ ಪದವಿ ಪೂರ್ವ ಮಹಾವಿದ್ಯಾಲಯದ ಮಕ್ಕಳು ಮುದ್ದು-ಮುದ್ದಾಗಿ ಅಭಿನಯಿಸಿ ನೆರದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾದರು. ಹಲವಾರು ಶಾಲಾ-ಕಾಲೇಜುಗಳ ಮಕ್ಕಳು ಕೇವಲ ಶಾಲಾ … Read more
“ವಾರ್ಡ್ ನಂಬರ್ 6”, ಕನ್ನಡ ನಾಟಕದ ಎರಡನೇ ಪ್ರಯೋಗ
ಆತ್ಮೀಯರೆ, "ವಾರ್ಡ್ ನಂಬರ್ 6", ಕನ್ನಡ ನಾಟಕದ ಎರಡನೇ ಪ್ರಯೋಗಕ್ಕೆ ತಮಗಿದು ಆದರದ ಆಹ್ವಾನ. ಸ್ಥಳ: ಕೆ.ಹೆಚ್. ಕಲಾಸೌಧ, ಹನುಮಂತನಗರ, ರಾಮಾಂಜನೇಯ ಗುಡ್ಡದ ಪಕ್ಕದಲ್ಲಿ, ಬೆಂಗಳೂರು ದಿನಾಂಕ: 28, ಜನವರಿ 2017 (ಶನಿವಾರ) ಸಮಯ: ಸಂಜೆ 7.30ಕ್ಕೆ. ಮೂಲಕತೆ: ಆಂಟನ್ ಚೆಕಾವ್ (ರಷ್ಯನ್ ಬರಹಗಾರ) ಮೂಲ ನಾಟಕ ರಚನೆ: ಡಿ.ಆರ್. ನಾಗರಾಜ್ ವಿಸ್ತೃತ ರಂಗರೂಪ: ಚನ್ನಕೇಶವ ಸಂಗೀತ: ಅಭಿ-ಜೋಯಲ್ ಬೆಳಕು: ಮಂಜು ನಾರಾಯಣ್ ವಿನ್ಯಾಸ-ನಿರ್ದೇಶನ: ಕೆ.ಎಸ್ ಪರಮೇಶ್ವರ ಗೆಳೆಯರೊಂದಿಗೆ ಮರೆಯದೆ ಬನ್ನಿ… ಧನ್ಯವಾದಗಳೊಂದಿಗೆ, ಕಲಾಮಾಧ್ಯಮ ತಂಡ ದೂ: … Read more
ಕಿರು ಲೇಖನಗಳು: ರಘುಚರಣ್, ಸಹನಾ ಪ್ರಸಾದ್
ಜಸ್ಟ್ ಮಿಸ್ಸು..!! ಎರಡು ಜಿಲ್ಲೆಗಳ ಗಡಿಯಲ್ಲಿ ನೆಲೆಸಿ ಕಾಯುವ ಮ್ಯಾಗಲಟ್ಟಿ ಜಕ್ಕಪ್ಪನ ಮುಂದೆ ಸಣ್ಣೀರ ಬಕುತಿಯಿಂದ ಕೈ ಮುಗಿದು ಕೆನ್ನೆ ಬಡಿದುಕೊಂಡು ಮನಸಲ್ಲೇ ಅಪ್ಪಣೆ ಕೇಳಿಕೊಳುತಿದ್ದ. “ಸೈಕಲ್ ಪಕ್ಸಕ್ ಓಟಾಕ್ತೀನಿ ಅಂತವ ದುಡ್ ತಕಂಡ್ ಬುಟ್ಟಿದೀನಿ ನನ್ನಪ್ಪಾ.. ಅವ್ನಿಗೇ ಓಟ್ ಆಕದ್ ಒಳ್ಳೇದನ್ನಂಗಿದ್ರೆ ಬಲ್ಗಡಿಕ್ ಕೊಡೂ.. ಬ್ಯಾಡಾ ಚೆಂಡೂವಿನ್ ಪಕ್ಸಕ್ಕೇ ಓಟ್ ಆಕು ಅನ್ನಂಗಿದ್ರೆ ಎಡಗಡಿಕ್ ಕೊಡೂ..” ಜಕ್ಕಪ್ಪನಿಗೆ ಏನೋ ಕೋಪ, ಚೆಂಡೂವಿನ್ ಪಕ್ಸದೋನ್ ಗೆಲ್ಲಬಾರದು ಅಂತ. ಅದ್ಕೆ ಬಲದಾಗಡೆ ಊವಾನಾ ಪಳುಕ್ಕುನ್ ಉದುರಿಸಿಬಿಟ್ಟಾ. ಆದ್ರೆ ಅಷ್ಟರಲ್ಲಿ … Read more
ಪ್ರೀತಿ ಪ್ರೇಮ ಕಿರು ಲೇಖನಗಳು: ಹರೀಶ್ ಹೆಗಡೆ, ಅಭಿಷೇಕ್ ಪೈ
ಅವಳ ಡೈರಿಯ ಪುಟಗಳಿಂದ… ಆತ ವಿಕ್ರಮ್, ಆ ವರುಷ ತಾನೆ ಇಂಜಿನಿಯರಿಂಗ್ ಮುಗಿಸಿ ಬೆಂಗಳೂರಿನಲ್ಲಿ ಎಮ್.ಎನ್.ಸಿ. ಕಂಪನಿಯೊಂದರಲ್ಲಿ ಕೆಲಸ ಮಾಡುತಿದ್ದ ಯುವಕ. ಆ ದಿನ ಶನಿವಾರ ಆಫಿಸ್ ಗು ರಜ, ಬೆಳಗ್ಗೆ ಎದ್ದು ಸುಮ್ಮನೆ ಒಂದು ರೌಂಡ್ ತಿರುಗಾಡಿ ಬಂದು ಉಟ ಮಾಡಿ ಮಲಗಿ ಎದ್ದವನಿಗೆ ಏನು ಮಾಡಲೂ ಮನಸಿಲ್ಲದ ಒಂದು ರೀತಿಯ ಜಡತ್ವ ಆವರಿಸಿತ್ತು. ಆಗಲೇ ನೆನಪಾಗಿದ್ದು ಕಳೆದ ವಾರ ತನ್ನ ಉರಿಗೆ ಹೋದಾಗ ಗೆಳತಿ ಸುನೀತಾ ಫ್ರೆಂಡ್ ಪ್ರೇಮ ಕೊಟ್ಟ ಗಿಫ್ಟ್. ಬೇರೆ ಯಾರಾದರು … Read more