ವಿಂಡೀಸ್ ಪಾಲಿಗೆ ಒಬ್ಬನೇ ಶಿವ, ಒಬ್ಬನೇ ಚಂದ್ರ: ಆದರ್ಶ ಯು ಎಂ

ನೀವು ತೊಂಭತ್ತರ ದಶಕದಿಂದ ಕ್ರಿಕೆಟ್ ನೋಡುವವರಾಗಿದ್ದರೆ ನಿಮಗೆ ಶಿವನಾರಾಯಣ್ ಚಂದ್ರಪೌಲ್ ನೆನಪಿನಲ್ಲಿ ಇದ್ದೇ ಇರುತ್ತಾನೆ, ಹೆಚ್ಚೂ ಕಡಿಮೆ ಬೌಲರ್ ಗೆ ಅಡ್ಡವಾಗಿ ನಿಲ್ಲುವ ಆತನ ಬ್ಯಾಟಿಂಗ್ ಶೈಲಿಯನ್ನು ಮರೆಯಲಾದರೂ ಹೇಗೆ ಸಾಧ್ಯ? ಶಿವನಾರಾಯಣ್ ಚಂದ್ರಪಾಲ್ ನ ವಂಶದ ಹಿಂದಿನವರು ಜೀತ ಪದ್ಧತಿಯಿಂದ ಭಾರತದಿಂದ ವೆಸ್ಟ್ ಇಂಡೀಸ್ ಗೆ ಹೋಗಿ ನೆಲೆಸಿದರು ಅಂತ ಇತಿಹಾಸ ಹೇಳುತ್ತದೆ. ಅಂತಹ ವಂಶದ ಚಂದ್ರಪಾಲ್ ಮುಂದೆ ವೆಸ್ಟ್ ಇಂಡೀಸ್ ತಂಡದ ಆಧಾರ ಸ್ಥಂಭವಾಗಬಲ್ಲ ಅಂತ ಅಂದು ಜೀತದಾಳುಗಳಾಗಿದ್ದ ಆತನ ಪೂರ್ವಜರಿಗೆ ಗೊತ್ತಿರಲಿಲ್ಲವೇನೋ. ಚಂದ್ರ … Read more

ಹೀಗೊಂದು ಸಾರ್ಥಕ ಮಹಿಳಾ ದಿನಾಚರಣೆ: ಶೀಲಾ. ಶಿವಾನಂದ. ಗೌಡರ.   

ಅಂದು ಮಾರ್ಚ 8. ವಿಶ್ವ ಮಹಿಳಾ ದಿನಾಚರಣೆ. ಶಾಲೆಯಲ್ಲಿ ವಿಶ್ವ ಮಹಿಳಾ ದಿನದ  ಇತಿಹಾಸವನ್ನು,  ಮಹಿಳೆಯರ ಹಕ್ಕು, ರಕ್ಷಣೆ, ಖ್ಯಾತ ಮಹಿಳಾ ಸಾಧಕಿಯರು, ಸಾಧನೆಯ ಹಾದಿಯಲ್ಲಿ ಎದುರಾಗುವ ತೊಡಕುಗಳು, ಅವುಗಳನ್ನು ಮೆಟ್ಟಿನಿಂತು ಸಾಧನೆಯ ನಗುಚಲ್ಲುವ  ಛಾತಿಯ ಬಗ್ಗೆ ವಿದ್ಯಾರ್ಥಿಗಳಿಗೆ  ತಿಳಿಸಲು , ಅವರೊಂದಿಗೆ ಚರ್ಚಿಸಲು ತುಂಬಾ ಉತ್ಸುಕಳಾಗಿದ್ದೆ.  ಸಂಸಾರ ಮತ್ತು  ವೃತ್ತಿಗಳೆರಡನ್ನು  ಯಶಸ್ವಿಯಾಗಿ  ನಿಭಾಯಿಸುತ್ತಿರುವ ಸುಪರ್ ವುಮನ್ ಗಳ ಸಾಲಿನಲ್ಲಿ ನಾನೂ ಒಬ್ಬಳು ಎಂದು ಬೀಗುತ್ತ, ಲಗುಬಗೆಯಲ್ಲಿ ಶಾಲೆಗೆ ನಡೆದೆ. ಯಾವತ್ತೂ ಅಭ್ಯಾಸದಲ್ಲಿ, ಶಾಲೆಯ ಪ್ರತಿ ಚಟುವಟಿಕೆಗಳಲ್ಲಿ … Read more

ಬೆಲ್ಲದ ಬಗ್ಗೆ ಬಲ್ಲಿರೇನು?: ಎಂ.ಎಚ್.ಮೊಕಾಶಿ

ಇಂದು ಬಹುತೇಕ ಜನರ ಮನೆಯಲ್ಲಿ ಫ್ರಿಜ್ ಇರುವುದರಿಂದ ವಿವಿಧ ರೀತಿಯ ಸಾಫ್ಟ್ ಡ್ರಿಂಕ್ಸ್‍ಗಳನ್ನು ಬಳಸುತ್ತೇವೆ. ಇವುಗಳು ನಾವು ಬಿಸಿಲಿನಿಂದ ಬಂದಾಗ ನಮ್ಮ ದೇಹವನ್ನು ತಂಪಾಸುತ್ತವೆ. ಆದರೆ ಮೊದಲೆಲ್ಲ ಹಾಗಿರಲಿಲ್ಲ ಹೊರಗಿನಿಂದ ಬಿಸಿಲಿನಲ್ಲಿ ಬಂದವರಿಗೆ ಬೆಲ್ಲ ಮತ್ತು ನೀರು ಕೊಡುತ್ತಿದ್ದರು. ಏಕೆಂದರೆ ಬೆಲ್ಲದಲ್ಲಿ ಗ್ಲುಕೋಸ್, ವಿಟಮಿನ್ ಹಾಗೂ ಕ್ಯಾಲ್ಸಿಯಮ್‍ಗಳಿರುವುದರಿಂದ ಶೀಘ್ರವಾಗಿ ದಣಿವಾರಿಸಿ ಆರೋಗ್ಯವನ್ನು ಸುಧಾರಿಸುವುದೆಂದು ತಿಳಿದಿದ್ದರು. ಆದರೆ ಇಂದು ಬೆಲ್ಲ ತಿನ್ನುವವರ ಸಂಖ್ಯೆ ಕಡಿಮೆಯಾಗುತ್ತಿದೆ. ಏಕೆಂದರೆ ಬಹುತೇಕ ಜನರು ಸಕ್ಕರೆಯತ್ತ ತಮ್ಮ ಅಕ್ಕರೆಯನ್ನು ತೋರಿಸುತ್ತಿದ್ದಾರೆ. ಬೆಲ್ಲ ಅಂದರೆ ಮೂಗು … Read more

ಗೂಡಿನಲ್ಲೊಂದು ಗೂಡು!: ಜಯಶ್ರೀ. ಜೆ. ಅಬ್ಬಿಗೇರಿ ಬೆಳಗಾವಿ 

‘ನಿರಂತರ ಸಂತೋಷವೆಂಬುದಿಲ್ಲ ಕೇವಲ ಸಂತಸದ ಕ್ಷಣಗಳಿವೆ.’ ಎನ್ನುವುದು ಬಲ್ಲವರ ಮಾತು. ಇಂಥ ಸಂತಸದ ಕ್ಷಣಗಳನ್ನು ದಕ್ಕಿಸಿಕೊಳ್ಳಲು ಸ್ವಂತದ್ದೊಂದು ಗೂಡು (ಹೋಮ್ ಸ್ವೀಟ್ ಹೋಮ್) ಕಟ್ಟಲೇಬೇಕೆಂದು ಮುಂದಾಗುತ್ತೇವೆ. ಸ್ವಂತದ್ದೊಂದು ಮನೆ ಕಟ್ಟಿಕೊಳ್ಳುವುದು ಬದುಕಿನ ಪರಮೋಚ್ಚ ಗುರಿ. ಆ ಗುರಿ ಮುಟ್ಟಲು ಬ್ಯಾಂಕ್ ಲೋನ್‍ಗೆ ಅರ್ಜಿ ಸಾಲದ್ದಕ್ಕೆ ಸಂಬಂಧಿಕರು ಸ್ನೇಹಿತರು ಪರಿಚಿತರ ಹತ್ತಿರ ಸಾಲ. ಮನೆಯಾಕೆಯ ಸಾಮಾನು ಅಡವಿಡುವುದು ಇನ್ನೂ ಏನೇನೋ ನಡೆಯುತ್ತವೆ. ಇದನ್ನೆಲ್ಲ ಅರಿತ ನಮ್ಮ ಹಿರಿಯರು ‘ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು.’ ಎಂಬ ಮಾತು … Read more

ಸ್ವಾರ್ಥಿಗಳಾಗಿ – ಅಗತ್ಯವಿದ್ದವರಿಗೆ ನೆರವಾಗಿ: ಎಂ.ಎನ್.ಸುಂದರ ರಾಜ್, ಶಿವಮೊಗ್ಗ

ಇದೊಂದು 100 ವರ್ಷದ ಕಥೆಯಾದರೂ, ಅದರಿಂದ ದೊರಕುವ ಪಾಠ ಇಂದಿಗೂ ಪ್ರಸ್ತುತವಾದದ್ದು. 1892ನೆಯ ಇಸವಿ., ಸ್ಥಳ ಸ್ಟಾಂಡ್ ಫೋರ್ಡ್ ವಿಶ್ವವಿದ್ಯಾನಿಲಯ. 18 ವರ್ಷದ ಯುವ ವಿದ್ಯಾರ್ಥಿಯೊಬ್ಬ ಕಾಲೇಜಿನ ಶುಲ್ಕ ಕಟ್ಟಲು ಹೆಣಗಾಡುತ್ತಿದ್ದ. ಅವನೊಬ್ಬ ಅನಾಥ, ಯಾವ ಬಂಧುಗಳೂ ಇಲ್ಲ, ಹಣ ಹೊಂದಿಸುವುದು ಹೇಗೆಂದು ಒದ್ದಾಡುತ್ತಿದ್ದ. ಆಗ ಅವನಿಗೊಂದು ಉಪಾಯ ಹೊಳೆಯಿತು. ಅವನು ಮತ್ತು ಅವನ ಗೆಳೆಯನೊಬ್ಬ ವಿಶ್ವ ವಿದ್ಯಾನಿಲಯದ ಆವರಣÀದಲ್ಲಿ ಒಂದು ಸಾಂಸ್ಕøತಿಕ ಕಾರ್ಯಕ್ರಮವನ್ನೇರ್ಪಡಿಸಿ ಹಣ ಸಂಪಾದಿಸಿ ಕಾಲೇಜಿನ ಶುಲ್ಕ ಭರ್ತಿ ಮಾಡುವುದು. ಅದಕ್ಕಾಗಿ ಅಂದಿನ ಪ್ರಸಿದ್ಧ … Read more

ವಿಶ್ವ ರೇಡಿಯೋ ದಿನಾಚರಣೆ: ಎಂ.ಎಚ್.ಮೊಕಾಶಿ

ನಾಲಿಗೆಯಿಲ್ಲದೇ ಮಾತನಾಡುವ ವಸ್ತು ಎಂದೇ ಖ್ಯಾತಿಯಾದ ರೇಡಿಯೋವನ್ನು ಇಟಲಿ ದೇಶದ ವಿಜ್ಞಾನಿ ಗುಗ್ಲಿಯೊಲ್ಮೋ ಮಾರ್ಕೋನಿ ಆವಿಷ್ಕಾರ ಮಾಡಿದರು. 1886 ರಲ್ಲಿ ‘ಹೆನರಿಜ್ ಹಟ್ರ್ಜ್’ ಎಂಬ ವಿಜ್ಞಾನಿ ತರಂಗಗಳ ಸಂಶೋಧನೆಯನ್ನಾರಂಭಿಸಿದರು. ಮಾರ್ಕೊನಿಯು ಹಟ್ರ್ಜ್‍ರವರ ತರಂಗಗಳ ಕುರಿತು ಅಧ್ಯಯನ ಕೈಗೊಂಡು ಕೊನೆಗೆ ಜಯ ಪಡೆದರು. ಹೀಗಾಗಿ ಮಾರ್ಕೋನಿಯನ್ನು ರೇಡಿಯೋದ ಜನಕನೆಂದು ಕರೆಯುವರು. ಮಾರ್ಕೊನಿಯು 1896ರಲ್ಲಿ ಒಂದು ಏರಿಯಲ್ ಮುಖಾಂತರ 15 ಕಿಲೋ ಮೀಟರ್ ದೂರದಲ್ಲಿದ್ದ ಒಂದು ಸ್ಥಳಕ್ಕೆ ತಂತಿ ಇಲ್ಲದೇ ಸಂದೇಶ ಕಳಿಸಿದರು. ಇದೇ ಹೊಸ ತಂತ್ರಜ್ಞಾನದ ಆವಿಷ್ಕಾರಕ್ಕೆ ಕಾರಣವಾಯಿತು. … Read more

ನನ್ನೂರು -ನನ್ನ ಜನ, ಬೋಳೂರು ಪಾಟ್ಲೆನ ಎತ್ತಿನ ನಾಲು: ಮಂಜಯ್ಯ ದೇವರಮನಿ.

ನಮ್ಮೂರು ರೈತಾಪಿ ಚಟುವಟಿಕೆಯಿಂದ ಕೂಡಿದ ಸಣ್ಣ ಹಳ್ಳಿ. ಪ್ರತಿ ಮನೆಯಲ್ಲಿ ಏನಿಲ್ಲವೆಂದರು ಒಂದು ಜೊತೆ ಇಲ್ಲವೇ ಎರಡು ಜೊತೆ ಎತ್ತುಗಳು ಸಾಮಾನ್ಯ. ರಾಮನಗೌಡರ ಮನೆಯಲ್ಲಿ ಮಾತ್ರ ಏಳೆಂಟು ಜೊತೆ ರಾಸುಗಳು. ನೊಣ ಕೂತರೆ ಜಾರಬೇಕು ಅಷ್ಟು ಪೊಗರ್ದಸ್ಥಾಗಿದ್ದವು. ಅವುಗಳ ಚಾಕರಿ ಮಾಡಲೆಂದೇ ಇಬ್ಬರನ್ನು ನೇಮಿಸಲಾಗಿತ್ತು. ಏರೆ ಜಮೀನಿನಲ್ಲಿ ಬೆಳೆದ ಹಸಿಯಾದ ಎಳೆ ಬಿಳಿಜೋಳದ ತೆನೆಗಳನ್ನು ಮೇಯಲು ಹಾಕುತ್ತಿದ್ದರು. ಆದ್ದರಿಂದ ಅವುಗಳಿಗೆ ದುಡಿಯುವದಕ್ಕಿಂತ ಮೇಯೆಯುವುದೇ ಕೆಲಸವಾಗಿತ್ತು. ಹೀಗೆ ಊರ ದನಗಳಿಗೆ ನಾಲು ಕಟ್ಟಲು (ನಾಲು ಎಂದರೆ ಎತ್ತಿನ ಕಾಲಿನ … Read more

ಮಹಿಳೆಗೆ ಶೋಭೆ ನೀಡುವ ಮಂಗಲದ್ರವ್ಯಗಳು: ಜಯಶ್ರೀ ಭ.ಭಂಡಾರಿ.

ಭಾರತೀಯ ಸಂಸ್ಕೃತಿ ಶ್ರೀಮಂತಿಕೆಯಿಂದ ಕೂಡಿದೆ. ಅದರಲ್ಲೂ ಮಹಿಳೆಯರಿಗೆ ವಿಶೇಷವಾದ ಸಂಸ್ಕೃತಿ ಆಚರಣೆಗಳಿವೆ. “ಗೃಹಿಣಿ ಗೃಹಮುಚ್ಯತೆ ಎಂಬಂತೆ ಒಂದು ಮನೆಯಲ್ಲಿ ಒಬ್ಬ ಸ್ತ್ರೀ ಆಚರಿಸುವ ಧಾರ್ಮಿಕ, ಪೂಜೆ ಪುನಸ್ಕಾರಗಳು ಆ ಇಡೀ ಕುಟುಂಬವನ್ನೇ ಉನ್ನತ ಮಟ್ಟಕ್ಕೆ ಒಯ್ಯುತ್ತವೆ. ಅಂತಹ ಸ್ತ್ರೀಗೆ ಪಂಚರೀತಿಯ ಮಂಗಲದ್ರವ್ಯಗಳು ಭೂಷಣಪ್ರದವಾಗಿರುತ್ತವೆ. ಆ ಮಂಗಲ ದ್ರವ್ಯಗಳೆಂದರೆ . . “ಕುಂಕುಮಂ ಕವಚಂ ದಿವ್ಯಂ ಕಜ್ಜಲಂ ಕಂಠಸೂತ್ರತಾ ಕಂಕಣಂಚತು ಪಂಚೈತೆ ಕಕಾರಂ ಮಂಗಲಪ್ರದಾ” ಈ ಶ್ಲೋಕದ ಮೂಲಕ ಆ ಐದು ಮಂಗಲದ್ರವ್ಯಗಳು ತಿಳಿಯುತ್ತವೆ. ಕುಂಕುಮ, ಕವಚ(ವಸ್ತು), ಕಜ್ಜಲ(ಕಾಡಿಗೆ), … Read more

ನಾಲ್ಕು ವೇದಗಳೊಂದಿಗೆ ಐದನೇ ನಾಟ್ಯವೇದ: ಕೆ.ಪಿ.ಎಂ. ಗಣೇಶಯ್ಯ

ಎಲ್ಲವನ್ನೂ ತಿಳಿದ ನಾವು ನಮ್ಮ ತನುವನ್ನ ಬಿಟ್ಟು ಕೊಡುವುದಿಲ್ಲವೇಕೆ.? ಅಪ್ಪ ಹಾಕಿದ ಆಲದ ಮರವಿದೆ. ಬೇಕಾದ ರೀತಿಯಲ್ಲಿ, ಬೇಕಾದ ಹಾಗೆ ಬದುಕು ಕಂಡುಕೊಂಡ ಎಷ್ಟೋ ಜೀವಿಗಳು ನಮ್ಮ ಕಣ್ಣ ಮುಂದಿವೆ. ಹಾಗಂತ ಎಲ್ಲರನ್ನೂ ದೂಷಿಸಲು ಬರುವುದಿಲ್ಲ. ಕೆಲವರಾದರೂ ತಮ್ಮ ಕುಟುಂಬದ ಘನತೆಗೆ ತಕ್ಕಂತೆ “ಪರೋಪ ಕಾರ್ಯಾರ್ಥಂ ಮಿದಂ ಶರೀರಂ” ಎನ್ನುವ ಹಾಗೆ ಪರೋಪ ಕಾರ್ಯದಲ್ಲಿ ತೊಡಗಿರುವವರು ಎಷ್ಟೋ ಜನ..? ನಮ್ಮಷ್ಟಕ್ಕೇ ನಾವು ಅಂದುಕೊಂಡು ಇತರರನ್ನೂ ಕಡೆಗಣಿಸಿ ತಮ್ಮಿಷ್ಟದಂತೆ ಬದುಕು ನಡೆಸಿಕೊಂಡು ಹೋದರಾಯ್ತು ಎಂಬುವವರಿಗೆ ನಮ್ಮ ದೇಶದಲ್ಲೇನೂ ಕೊರತೆಯಿಲ್ಲ. … Read more

ಮಕ್ಕಳನ್ನು ಕೇವಲ ಮುದ್ದುಮಾಡಿ ಬೆಳೆಸಬೇಡಿ ಮೌಲ್ಯಗಳನ್ನೂ ಬೆಳೆಸಿ: ಶ್ರೀ ಜಗದೀಶ ಸಂ.ಗೊರೋಬಾಳ

ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು ಎಂಬ ಮಾತು ಸತ್ಯವಾದರೂ ಇಂದಿನ ಮಕ್ಕಳಿಗೆ ನಾವು ಅವರಿಗೆ ಮುಂದೆ ಬೇಕಾಗುವುದನ್ನು ಕೊಡಬೇಕು ಅಲ್ವಾ? ಕೇವಲ ಸಸಿನಟ್ಟು ಅದರ ಫಲಕ್ಕೆ ಆಸೆಪಟ್ಟರೆ ಹೇಗೆ? ಅದನ್ನು ದಿನಂಪ್ರತಿ ನೀರು ಗೊಬ್ಬರ ಹಾಕಿ ಪೋಷಿಸಿದಾಗ ಮುಂದೊಮ್ಮೆ ಅದರಿಂದ ಫಲ ನಿರೀಕ್ಷಿಸಬಹುದು. ಹಾಗೆಯೇ ನಮ್ಮ ಶಾಲಾ ಮಕ್ಕಳನ್ನು ಬೆಳೆಸಬೇಕಿದೆ. ಮಕ್ಕಳ ಬಗ್ಗೆ ಹಲವು ಶಿಕ್ಷಕರ ಅಭಿಪ್ರಾಯಗಳು ಹೀಗಿರಲೂಬಹುದು : “ಇಂದಿನ ಮಕ್ಕಳಿಗೆ ಹಿರಿಯರೆಂದರೆ ಗೌರವವೇ ಇಲ್ಲ”, “ನನ್ನ ಕ್ಲಾಸ್ ಮಕ್ಕಳು ಹಾಳಾಗಿವೆ!”, “ನಾನು ಎಷ್ಟ್ ಅರಚಿದರೂ … Read more

ಸುಂದರ ಊರಿನಲ್ಲೀಗ …: ಸ್ಮಿತಾ ಅಮೃತರಾಜ್. ಸಂಪಾಜೆ

ನಿಮ್ಮ ಊರು ಅದೆಷ್ಟು ಚೆಂದ; ನೀವೆಲ್ಲಾ ಪುಣ್ಯವಂತರು ಕಣ್ರೀ, ಸ್ವರ್ಗ ಅಂದರೆ ಇದೇ ನೋಡಿ. ಅಲ್ಲಿಯ ಬೆಟ್ಟ,ಗುಡ್ಡ,ನದಿ ,ಧುಮ್ಮುಕ್ಕಿ ಹರಿಯುವ ಜಲಧಾರೆ, ತುಂತುರು ಜುಮುರು ಮಳೆ..ನೆಮ್ಮದಿಯಿಂದ ಬದುಕೋದಿಕ್ಕೆ ಇನ್ನೇನು ಬೇಕು ಹೇಳಿ?. ನಾವೂ ನಿಮ್ಮೂರಿನಲ್ಲೇ ಬಂದು ಠಿಕಾಣಿ ಹೂಡ್ತೀವಿ, ಕೆಲಸಕ್ಕೆ ಜನ ಇಲ್ಲ ಅಂತೀರಿ ನಾವೇ ಬಂದು ಬಿಡ್ತೀವಿ, ನಮಗೆ ನಿಮ್ಮ ತೋಟಗಳಲ್ಲಿ ಕೆಲಸ ಕೊಟ್ರೆ ಅಷ್ಟೇ ಸಾಕು . ಈ ಬಯಲು ಸೀಮೆಯ ಒಣ ಹವೆ, ರಾಚುವ ಬಿಸಿಲು, ಇವೆಲ್ಲಾ ಅನುಭವಿಸಿ ಸಾಕಾಗಿ ಹೋಗಿದೆ ಅಂತ … Read more

ನಮ್ಮ ದಸರಾ Exhibition ಸವಾರಿ: ವಿಭಾ ಶ್ರೀನಿವಾಸ್

“Exhimition…Exhimition…” ಪದವನ್ನು ಸರಿಯಾಗಿ ಉಚ್ಚರಿಸಲೂ ಬಾರದ ಆ ದಿನಗಳಲ್ಲಿ ವರ್ಷಕ್ಕೊಮ್ಮೆ ಎದುರಾಗುತಿದ್ದ ಸ೦ತಸವೇ ಮೈಸೂರು ದಸರಾ Exhibition (ದಸರಾ ವಸ್ತುಪ್ರದರ್ಶನ). ಎಲ್ಲಾ ವರ್ಗದ, ಎಲ್ಲಾ ಭಾಷೆಗಳನ್ನು ಮಾತನಾಡುವ ಜನ ಕಾಣಸಿಗುತಿದ್ದ mini world !! ಪ್ರವೇಶ ಟಿಕೆಟ್ ನ ದರ ರೂ5 ಇದ್ದ ಕಾಲ. ನಾ ಮುಂದು ತಾ ಮುಂದು ಎ೦ದು ಟಿಕೆಟ್ ಪಡೆದು, ಮುಖ್ಯದ್ವಾರದ ಕನ್ನಡಿಯಲ್ಲಿ ಮುಖವನ್ನೊಮ್ಮೆ ನೋಡಿ ಹಲ್ಲುಕಿರಿದ ನ೦ತರವೇ ಪ್ರವೆಶಿಸಿದೆವೆ೦ಬ ಖುಷಿ. ಮು೦ದಿನ ೨-೩ ಗಂಟೆಗಳ ಕಾಲ ಅಣ್ಣ/ಚಿಕ್ಕಪ್ಪನ ಮಗಳ ಕೈ ಹಿಡಿದೇ … Read more

ಕಾಯಕಲ್ಪವಾಗಿ ಪ್ರವಾಸೋದ್ಯಮ: ಎಂ.ಎಚ್.ಮೊಕಾಶಿ

“ದೇಶ ಸುತ್ತಿ ನೋಡು ಕೋಶ ಓದಿ ನೋಡು” ಎಂಬ ಗಾದೆ ಮಾತಿದೆ. ಇದು ತನು ಮನದ ಜ್ಞಾನಕ್ಕಾಗಿ ನಮ್ಮ ಹಿರಿಯರು ಹೇಳಿದ ಮಾತಾಗಿದೆ. ಅನುಭವ, ತನ್ಮೂಲಕ ಅನುಭಾವಕ್ಕೆ ಬಾರದ ಜ್ಞಾನವನ್ನು ಪುಸ್ತಕದ ಬದನೇಕಾಯಿ ಎಂದು ಹೇಳುವುದೂ ಇದೆ. ಒಂದೇ ಒಂದು ಸುತ್ತಾಟ ಪುಸ್ತಕ ನೀಡುವ ಜ್ಞಾನಕ್ಕಿಂತ ಹೆಚ್ಚಿನ ಜ್ಞಾನ ನೀಡುವುದೆಂಬುದು ಅನುಭವದ ಮಾತಾಗಿದೆ. “ವಿಶ್ವ ಒಂದು ಪುಸ್ತಕವಿದ್ದಂತೆ, ಸುತ್ತಾಡಲಾರದವ ಯಾವ ಜ್ಞಾನವನ್ನೂ ಗಳಿಸಲಾರ” ಎಂದು ಸೇಂಟ್ ಆಗಸ್ಟಿನ್ ಹೇಳಿದ್ದಾರೆ. ವಿಶ್ವಸಂಸ್ಥೆಯ ಅಂತರಾಷ್ಟ್ರೀಯ ಪ್ರವಾಸೋದ್ಯಮ ಸಂಸ್ಥೆಯು 1980 ರಿಂದಲೂ … Read more

ಅಸಹಾಯಕತೆ: ನಾವೆ

ಅದೊಂದು ದಿನ ಮಟ ಮಟ ಮಧ್ಯಾಹ್ನ. ಸೂರ್ಯ ನೆತ್ತಿಯ ಮೇಲೆ ಪ್ರಖರ ಕಿರಣಗಳಿಂದ ಸುಡುತ್ತಿದ್ದ. ಗ್ರಾಮೀಣ ಪ್ರದೇಶವಾದ್ದರಿಂದ ಅದಾಗಲೇ ಅಕ್ಕಪಕ್ಕದ ಅಂಗಡಿ ಮುಂಗಟ್ಟುಗಳ ಹೊರಬಾಗಿಲುಗಳೆಲ್ಲ ಮುಚ್ಚಲ್ಪಟ್ಟಿದ್ದವು. ಅಂಗಡಿ ಮಾಲಿಕರು, ಕಾರ್ಮಿಕರೆಲ್ಲ ಹಸಿವೆಂಬ ರಕ್ಕಸನ ಅಬ್ಬರ ತಣಿಸಲು ಅವರವರ ಮನೆಯತ್ತ ಪಯಣಿಸಿಯಾಗಿತ್ತು. ಹಾಗಾಗಿ ಆ ಸಮಯದಲ್ಲಿ ಮನೆಗೆ ಹೋಗದೇ ಊಟ ಹೊತ್ತು ತರುವ ನನ್ನ ಅಂಗಡಿಯೊಂದೇ ತೆರೆದಿತ್ತು.ಊಟದ ಸಮಯದಲ್ಲಿಯೂ ಅಂಗಡಿಯು ತೆರೆದೇ ಇರುತ್ತಾದ್ದರಿಂದ ಅದರ ಗೋಜಿಗೆ ಹೋಗದೆ ನಾನೂ ಕೂಡ ಊಟದ ತಯಾರಿ ನಡೆಸುತ್ತಿದ್ದೆ. ಹಸಿವೆಂಬ ಬ್ರಹ್ಮರಾಕ್ಷಸನ ತೃಪ್ತಿ … Read more

ನಿಯತ್ತಿಗೆ ಮತ್ತೊಂದು ಹೆಸರೇ ಹನುಮಂತಣ್ಣ: ಜೆಪಿ.ಅಡೂರ್

ಎಪ್ಪ ಏನೋ ಇದು ಅಷ್ಟೊಂದು ದೊಡ್ದುದು ಗುಡ್ಡ ಇದ್ದಂಗೆ ಇದೆಯಲ್ಲೋ ಮಾರಾಯ ಅಂದ ನಮ್ಮ ಹನುಮಂತಣ್ಣ ಜೆರೋಸಿಕ್ ಪಾರ್ಕ್ ಸಿನಿಮಾನ ಟಿವಿ ನಲ್ಲಿ ನೋಡುತ. ಹೇ ಹನುಮಂತಣ್ಣ ಅಂತವು ಎರಡು ತರೋನು ನಾವು ಹೊಲ ಹಸನು ಮಾಡೋಕೆ ಬರುತ್ತೆ ಅಂದೆ ಅದಕೆ ಥಟ್ಟಂತ ಉತ್ತರ ಬಂತು ಹನುಮಂತಣ್ಣನಿಂದ “ಬೇಡ ಚಿಕ್ಕ ಧಣಿಯಾರೇ ನಮಗೆ ತಿನ್ನಾಕೆ ಏನು ಸಿಗ್ತಿಲ್ಲಾ ಈ ಮಳೆ ನಂಬಕಂಡು ಇರೋ ಎರಡು ಎತ್ತು ಸಾಕೋದಕ್ಕೆ ಅವರ ಕಾಲು ಇವರ ಕಾಲು ಹಿಡಿದು ಮೇವತಗೊಂಡು ಬರ್ತಾಇದಿವಿ” … Read more

ಮಹಿಳಾ ಸಬಲೀಕರಣದತ್ತ…!: ನಸ್ರೀನ್. ಮೈ. ಕಾಖಂಡಕಿ

ದೇಶದ ಅಭಿವೃದ್ಧಿ ಸಾಧನೆಯಲ್ಲಿ ಮಹಿಳಾ ಸಶಕ್ತೀಕರಣದಷ್ಟು ಪರಿಣಾಮಕಾರಿ ಸಾಧನ ಮತ್ತೊಂದಿಲ್ಲ. ಮಹಿಳೆಯರ ಸಾಮಥ್ರ್ಯವನ್ನು ಇದಕ್ಕಿಂತ ಸರಿಯಾಗಿ ಬಣ್ಣಿಸುವ ಹೇಳಿಕೆ ಬೇರೊಂದಿಲ್ಲ ಎನ್ನಬಹುದು. ಇದು ಸಾಂಪ್ರದಾಯಿಕ ಕ್ಷೇತ್ರವಾಗಿರಲಿ ಅಥವಾ ಆಧುನಿಕ ರಂಗವಿರಲಿ, ಮಹಿಳೆ ತನ್ನ ಛಾಪು ಮೂಡಿಸದ ಕ್ಷೇತ್ರವೇ ಇಲ್ಲ. ಮಕ್ಕಳನ್ನು ಹೆತ್ತು, ಹೊತ್ತು ಭವಿಷ್ಯದ ಭವ್ಯ ನಾಗರಿಕರನ್ನಾಗಿ ರೂಪಿಸುವ ಮಹತ್ವದ ಪ್ರಾಥಮಿಕ ಜವಾಬ್ದಾರಿ ಯಾವಾಗಲೂ ಅಮ್ಮನದೇ ಆಗಿದೆ. ನಾರಿ, ಮಗಳು, ಅಕ್ಕ, ತಂಗಿ, ಹೆಂಡತಿಯಾಗಿಯೂ ಪುರುಷರ ಬೆನ್ನೆಲುಬಾಗಿದ್ದಾಳೆ. ಆಧುನಿಕ ರಂಗದಲ್ಲಿ ಪ್ರಶಿಕ್ಷಕರಾಗಿ, ಪ್ರಬಂಧಕರಾಗಿ, ರಾಜಕೀಯ ಧುರೀಣೆಯಾಗಿ ಪ್ರಮುಖ … Read more

ಮರೆಯಲಾಗದ ಬಂಧುಗಳು: ವೆಂಕಟೇಶ ಚಾಗಿ

ಆ ದಿನ ರಾತ್ರಿ ಮನೆಯ ಹಿತ್ತಲಿನ ಗೋಡೆಯ ಒಂದು ಮೂಲೆಯಲ್ಲಿ ಅದೇನೋ ಶಬ್ದ. ಇಡೀ ರಾತ್ರಿ ಅದಾವುದೋ ಬೆಕ್ಕು ಬುಸುಗುಡುವ ಶಬ್ದ. ಆಗಾಗ ನಾಯಿ ಬೊಗಳುವ ಶಬ್ದ ಬೇರೆ. ರಾತ್ರಿ ಎದ್ದು ಆ ಬೆಕ್ಕು ಮತ್ತು ನಾಯಿ ಎರಡನ್ನೂ ಓಡಿಸೋಣ ಎಂದುಕೊಂಡರೆ ಮನದಲ್ಲಿ ಅದೇನೋ ಭಯ. ಆದರೂ ದೈರ್ಯ ತಂದುಕೊಂಡು ಕೈಯಲ್ಲಿ ಟಾರ್ಚ ಹಾಗೂ ಮೂಲೆಯಲ್ಲಿದ್ದ ಕೋಲನ್ನು ಹಿಡಿದು ನಿಧಾನವಾಗಿ ಬಾಗಿಲನ್ನು ತರೆದು ಹೊರ ಬಂದೆ. ವಿದ್ಯುತ್ ಕೈ ಕೊಟ್ಟಿದ್ದರಿಂದ ಹೊರಗಿನ ಬಲ್ಬ್ ಉರಿಯುತ್ತಿರಲಿಲ್ಲ. ಧೈರ್ಯ ತಂದುಕೊಂಡು … Read more

ಈ ಹುಚ್ಚುವಿಗೆ ಯಾವುದು ಮದ್ದು?:  ಸ್ಮಿತಾ ಅಮೃತರಾಜ್. ಸಂಪಾಜೆ

ಅನ್ವರ್ಥ ನಾಮಕ್ಕೆ ವೈದ್ಯ, ವಿದ್ವಾಂಸ, ವ್ಯಾಪಾರಿ ಹೀಗೆ ಅನೇಕ ಉದಾಹರಣೆಗಳನ್ನು ಕೊಡುತ್ತಾ ಹೋಗಬಹುದು. ಹಾಗೆಯೇ ಒಂದಷ್ಟು ಮಿನಿ ಕವಿತೆ, ಚುಟುಕು ಅಂತ ಎರಡು ಸಾಲು ಗೀಚಿದ ಕವಿಗಳಿಗೆ ಕೂಡ ಅವರ ವಿಳಾಸದ ಕೆಳಗೆ ಅವರಿಗೂ ಗೊತ್ತಿಲ್ಲದಂತೆ ‘ಕವಿಗಳು’ ಅಂತ ಅನ್ವರ್ಥಕ ನಾಮವೊಂದು ತಗಲಿ ಹಾಕಿಕೊಂಡು ಬಿಡುತ್ತದೆ. ಇದನ್ನು ನಾನು ಯಾಕೆ ಉದಾಹರಿಸುತ್ತಿರುವೆನೆಂದರೆ ಕೆಲವೊಂದು ಪರ್ಯಾಯ ಹೆಸರುಗಳು ನಮಗೆ ಅದು ಹೇಗೋ  ಜಿಗುಟು ಜಿಗುಟು ಮೇಣದಂತೆ ಅಂಟು ಹಾಕಿಕೊಂಡು ಬಿಡುತ್ತದೆ. ಮತ್ತೆ ನಾವು ಬಿಟ್ಟರೂ ಅದು ನಮ್ಮನ್ನು ಬಿಡದಂತೆ … Read more

ಗುರುವೆಂಬುದು ಅತಿಭೌತಿಕ ಶಕ್ತಿ: ಶ್ರೀ.ಎಂ.ಎಚ್.ಮೊಕಾಶಿ

ಸಮಾಜದಲ್ಲಿ ಅನೇಕ ವೃತ್ತಿಗಳಿವೆ. ಅವುಗಳಲ್ಲಿ ಪ್ರಮುಖವಾದುದೆಂದರೆ ಶಿಕ್ಷಕ ವೃತ್ತಿಯಾಗಿದೆ. ಶಿಕ್ಷಕನನ್ನು ಬೋಧಕ, ಅಧ್ಯಾಪಕ, ಮೇಷ್ರು, ಗುರು, ಮೊದಲಾದ ಬೇರೆ ಬೇರೆ ಹೆಸರುಗಳಿಂದ ಕರೆಯುವರು. ಗುರುವನ್ನು “ಆಚಾರ್ಯ ದೇವೋಭವ”ಎನ್ನಲಾಗಿದೆ. ಅಂದರೆ ದೇವರ ಸ್ಥಾನ ಮಾನ ನೀಡಲಾಗಿದೆ. ಗುರು “ಸಂಸ್ಕøತಿಯ ಪ್ರಗತಿಯ ಅಗ್ರಧೂತ”, ”ರಾಷ್ರ ನಿರ್ಮಾತೃ”, ”ಇತಿಹಾಸದ ನಿರ್ಮಾಪಕ” ಕೂಡ ಆಗಿದ್ದಾನೆ. ಗುರು ಮಗುವಿಗೆ ದ್ವಿತೀಯ ಜನ್ಮದಾತನಾಗಿದ್ದಾನೆ. ಹೀಗಾಗಿ ಗುರುವಿಗೆ ಸಮಾಜದಲ್ಲಿ ಮಹತ್ವದ ಸ್ಥಾನಮಾನ ನೀಡಲಾಗಿದೆ. ಗುರು ಭೂಮಿಯ ಮೇಲಿರುವ ಅತಿಭೌತಿಕ ಹಾಗೂ ಉನ್ನತ ಶಕ್ತಿಯ ಕುರಿತಾದ ಅತ್ಯುನ್ನತ ಜ್ಞಾನವನ್ನು … Read more

ಅತಿಥಿ ದೇವೋ ಭವ: ಸುನಂದಾ ಎಸ್ ಭರಮನಾಯ್ಕರ

ಭಾರತೀಯ ನಾಗರೀಕತೆಯು ಭೂಮಿಯಲ್ಲಿಯೇ ಅತ್ಯಂತ ಪ್ರಾಚೀನವಾದವುಗಳಲ್ಲಿ ಒಂದಾಗಿರುವುದಲ್ಲದೇ, ಇತರೇ ಎಲ್ಲಾ ಸಂಸ್ಕøತಿಗಳಂತೆ ತನ್ನದೇ ಆದ ಸಂಪ್ರದಾಯಗಳನ್ನು ಹೊಂದಿದ್ದು ಅವುಗಳಲ್ಲಿ ಸಾಕಷ್ಟು ಅತಿಥಿ ಸತ್ಕಾರದ ವಿಚಾರಗಳನ್ನು ಹೊಂದಿದೆ. ಅತಿಥಿ ಎಂಬ ಶಬ್ದವು ಭಾರತೀಯರ ಒಂದು ವಿಶಿಷ್ಟ ಜೀವನಕ್ರಮವನ್ನು ಸೂಚಿಸುತ್ತದೆ. ಯಾರಿಗಾದರೂ ಅನೀರಿಕ್ಷಿತವಾಗಿ ಅಪರಿಚಿತರ ಆತಿಥ್ಯವನ್ನು ಅವಲಂಬಿಸುವ ಪ್ರಸಂಗ ಒದಗಬಹುದು. ಸಂಚಾರ ಸಾಧನಗಳು ಇಂದಿನ ಹಾಗೆ ಇಲ್ಲದಿದ್ದ ಕಾಲದಲ್ಲಿ ದೂರ ಪ್ರಯಾಣದಲ್ಲಿರುವವರು ಇಂಥ ಆತಿಥ್ಯವನ್ನು ನಂಬಿಕೊಂಡೆ ವ್ಯವಹಾರ ಸಾಗಿಸಬೇಕಿತ್ತು. ಇಂದು ಕೂಡ ಬಾರತೀಯ ಹಳ್ಳಿಗರಲ್ಲಿ ಈ ಧೋರಣೆ ಹಾಗೇ ಉಳಿದಿದೆ. … Read more