”ಸಂಬಂಧಗಳು ನಮಗೆಷ್ಟು ಮುಖ್ಯ?”: ಪೂಜ ಗುಜಾರನ್‌

ಸಂಬಂಧಗಳು ನಮಗೆಷ್ಟು ಮುಖ್ಯ? ಯಾವ ಸಂಬಂಧಗಳು ನಮ್ಮನ್ನು ತುಂಬಾ ಭಾವನಾತ್ಮಕವಾಗಿ ಕಾಡುತ್ತದೆ.? ಯಾವ ಸಂಬಂಧಗಳನ್ನು ನಾವು ಯಾವತ್ತು ಬಿಟ್ಟು ಹೋಗುವುದಿಲ್ಲ.?ಯಾರು ನಮ್ಮನ್ನು ಅತಿಯಾಗಿ ಕಾಡುತ್ತಾರೆ.? ಇಲ್ಲಿ ಸಂಬಂಧಗಳನ್ನು ಬೆಳೆಸಲು ಯಾವ ಮಾನದಂಡಗಳ ಅಗತ್ಯವಿದೆ.? ಪ್ರಶ್ನೆಗಳು ಮುಗಿಯಲಾರದಷ್ಟಿವೆ.. ಉತ್ತರಗಳನ್ನು ನಾವು ಹುಡುಕಬೇಕಷ್ಟೆ.. ನಮ್ಮ ಬದುಕಿನಲ್ಲಿ ಬರುವ ಸಂಬಂಧಗಳು ಅರಿತೋ ಅರಿಯದೆನೋ ನಮ್ಮನ್ನು ಗಾಢವಾಗಿ ತನ್ನ ಬಾಹುಗಳಲ್ಲಿ ಬಂಧಿಸಿರುತ್ತದೆ. ಮಾನವ ಸಂಬಂಧಗಳೆ ಹೀಗೆ ಹುಟ್ಟಿದ ಕೂಡಲೇ ಸಂಬಂಧಗಳ ಸಂಕೋಲೆಯೊಳಗೆ ಬಂಧಿಯಾಗಿರುತ್ತಾನೆ. ತನ್ನ ತಾಯಿ ಜೊತೆ ಶುರುವಾದ ಈ ಸಂಬಂಧ ಇನ್ನಷ್ಟು … Read more

ನೆನಪುಗಳ ಮಾಲೀಕ………: ರಘು ಕ.ಲ.,

ಶಿಕ್ಷಣ ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶಗಳಲ್ಲಿ ಪಡೆದರೆ ಬಹಳ ಉತ್ತಮ ಎಂಬುದು ಅನೇಕರ ಅಭಿಪ್ರಾಯ. ಏಕೆಂದರೆ ವಿಜ್ಞಾನ, ತಂತ್ರಜ್ಞಾನ, ಸೃಜನಶೀಲತೆ, ನೃತ್ಯ, ಸಂಗೀತ …… ಹೀಗೆ ಇನ್ನೂ ಹತ್ತಾರು ವಿಚಾರಗಳಿಂದ ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಬಹಳ ಹತ್ತಿರವಾದದ್ದು, ಅನುಕೂಲವಾದದ್ದು ನಗರ ಪ್ರದೇಶ ಎಂಬ ಹಂಬಲದಲ್ಲಿಯೋ, ಬೆಂಬಲದಲ್ಲಿಯೋ ಏನೋ ಗ್ರಾಮೀಣ ಪ್ರದೇಶದ ಕೆಲವರು ನಗರದೆಡೆಗೆ ಮೊರೆ ಹೋಗುತ್ತಿದ್ದಾರೆ. ಎಲ್ಲವೂ ಸಿಗುತ್ತದೆಂಬುದು ಅವರ ಕಲ್ಪನೆಯಷ್ಟೇ ಸರಿ. ಸರಿಯೋ? ತಪ್ಪೋ? ಎಂದು ನಿರ್ದಿಷ್ಟವಾಗಿ ಹೇಳಲಾಗುವುದಿಲ್ಲ. ಅವರವರ ಮನಸ್ಸಿನಂತೆ ಅವರವರ … Read more

ಕೊಠಡಿ ಮೇಲ್ವಿಚಾರಣೆ ಎಂಬ ಗುಮ್ಮ…!: ಶೀಲಾ. ಗೌಡರ. ಬದಾಮಿ.

ಶೈಕ್ಷಣಿಕ ವರ್ಷ ಪ್ರಾರಂಭವಾದೊಡನೆ ಮೊದಲ ಸಭೆಯಲ್ಲೇ ಮುಖ್ಯಸ್ಥರು,”ಕಳೆದ ವರ್ಷ ಆದದ್ದಾಯ್ತು. ಈ ವರ್ಷ ಮಾತ್ರ ನಾವು 100/ ರಿಸಲ್ಟ ಮಾಡಬೇಕು.ಅದಕ್ಕಾಗಿ ಪರೀಕ್ಷೆ ಬಂದಾಗ ಗಡಿಬಿಡಿ ಮಾಡುವುದಕ್ಕಿಂತ ಈಗಿನಿಂದಲೇ ಗುರಿ ಸಾಧನೆಗೆ ಕಂಕಣಬದ್ದರಾಗಬೇಕು. “ ಎಂದು ಎಚ್ಚರಿಸುತ್ತಾರೆ. ಆಗಿನಿಂದಲೇ ಎಲ್ಲ ಶಿಕ್ಷಕರ, ಉಪನ್ಯಾಸಕರ ಎದೆ ಢವ….ಢವ…..ವಾರ್ಷಿಕ ಅಂದಾಜು,ಕ್ರಿಯಾಯೋಜನೆ ಸಿದ್ದಪಡಿಸಿ, ಡಿಸೆಂಬರ್ ಅಂತ್ಯಕ್ಕೆ ಸಿಲ್ಯಾಬಸ್ ಮುಗಿಸಿ, ಎರಡು ತಿಂಗಳು ರಿವಿಜನ್ ಮಾಡಬೇಕು ಎಂದು ಜೂನ್ ಒಂದರಿಂದಲೇ ಆನ್ ಯುವರ್ ಮಾರ್ಕ, ಗೆಟ್ ಸೆಟ್,ಗೋ……ಎಂದು ನಮ್ಮನ್ನು ರೇಸಿಗೆ ಬಿಟ್ಟು ಬಿಡುತ್ತಾರೆ. ಅದು … Read more

ಅಂತರ ರಾಷ್ಟ್ರೀಯ ಖ್ಯಾತಿಯ ಛಾಯಾಚಿತ್ರಕಾರ ಮಹೇಶ್: ಎಂ.ಎನ್.ಸುಂದರ ರಾಜ್

ಪ್ರಕೃತಿ ಛಾಯಾಚಿತ್ರಗಳು ಕೇವಲ ಬಣ್ಣಬಣ್ಣದ ಚಿತ್ರಗಳಲ್ಲ, ಪ್ರಕೃತಿಯಲ್ಲಿ ಮೂಡಿಬಂದ ಸುಂದರ ಕಲಾಕೃತಿಗಳು. ಅವುಗಳನ್ನು ಕೆಮರಾದಲ್ಲಿ ಸೆರೆಹಿಡಿದು ಕಣ್ಮನಗಳಿಗೆ ಮುದನೀಡುವಂತೆ ಸಮಾಜಕ್ಕೆ ನೀಡಿರುವುದರ ಹಿಂದೆ, ಅಪಾರ ಪರಿಶ್ರಮ ಮತ್ತು ತನ್ಮಯತೆಯಿದೆ. ಅದೊಂದು ತಪಸ್ಸು. ನಾವು ಆ ಚಿತ್ರಗಳನ್ನು ನೋಡಿ ಚೆನ್ನಾಗಿದೆ ಎಂದು ಒಂದೇ ಮಾತಿನಲ್ಲಿ ಹೇಳುತ್ತೇವೆ. ಆದರೆ ಅಂತಹ ಫೋಟೋ ತೆಗೆಯಲು ಪಟ್ಟ ಪಾಡು, ತಿರುಗಿದ ಕಾಡು ಮೇಡುಗಳು, ಜೀವದ ಹಂಗು ತೊರೆದು ವನ್ಯ ಜೀವಿಗಳ ಅಪಾಯವನ್ನೂ ಲೆಕ್ಕಿಸದೆ ಒಂದು ಉತ್ತಮ ಚಿತ್ರಕ್ಕೆ ದಿನಗಟ್ಟಲೆ ಆಹಾರ ನಿದ್ರೆಯಿಲ್ಲದೆ ಕಾದು … Read more

ಗುಲಾಮಿ: ಗಿರೀಶ ಜಕಾಪುರೆ

ಮೂಲ : ಖಲೀಲ ಜಿಬ್ರಾನ್ ಕನ್ನಡಕ್ಕೆ : ಗಿರೀಶ ಜಕಾಪುರೆ ಮಾನವರು ಬದುಕಿನ ಗುಲಾಮರು. ಜೀವನದ ಜೀತದಾಳುಗಳು. ಈ ಬದುಕು ಅವರ ಹಗಲುಗಳಲ್ಲಿ ದುಃಖ ಮತ್ತು ಕ್ಲೇಶದ ಬಿರುಗಾಳಿಯಾಗಿ ಬೀಸುತ್ತದೆ, ರಾತ್ರಿಗಳಲ್ಲಿ ಕಣ್ಣೀರು ಮತ್ತು ಸಂತಾಪದ ಮಹಾಪೂರವಾಗಿ ನುಗ್ಗುತ್ತದೆ. ಏಳು ಸಾವಿರ ವರ್ಷಗಳಾದವು ನಾನು ಜನಿಸಿ. ಅಂದಿನಿಂದಲೂ ನಾನು ತಮ್ಮ ಕೈಕಾಲುಗಳಿಗೆ ಸುತ್ತಿದ ಭಾರದ ಬೇಡಿಗಳನ್ನು ಎಳೆಯುತ್ತ ಹೆಜ್ಜೆ ಹಾಕುತ್ತಿರುವ ಬದುಕಿನ ಗುಲಾಮರನ್ನು ಕಾಣುತ್ತಿದ್ದೇನೆ. ನಾನು ಭೂಮಿಯ ಪೂರ್ವಪಶ್ಚಿಮಗಳಲ್ಲಿ ಸುತ್ತಾಡಿದ್ದೇನೆ, ಜೀವನದ ನೆರಳು ಬೆಳಕುಗಳಲ್ಲಿ ದಿಕ್ಕೇಡಿಯಾಗಿ ಅಲೆದಿದ್ದೇನೆ. … Read more

ನಾನು ಮತ್ತೆ ನಾನಾದದ್ದು….!: ಶೀಲಾ. ಗೌಡರ

ಆಹಾ….! ನಾನೂ ಸಾಮಾನ್ಯ ಗೃಹಿಣಿಯರಂತೆ ಸುಮ್ನೆ ಮನೆ ನಿಭಾಯಿಸಿಕೊಂಡು, ಮನೇಲಿ ಹಾಯಾಗಿ ಇರಬಹುದಿತ್ತು, ಅಂತ ಎಷ್ಟೋಸಲ ಅನಿಸಿದ್ದುಂಟು. ಕೆಲಸ ಬೇಡ ಅಂತ ಬಿಡುವಂತಿಲ್ಲ…! ಸರಕಾರಿ ಕೆಲಸ…! ಮೇಲಾಗಿ ಶಿಕ್ಷಕ ವೃತ್ತಿ…. ಎಷ್ಟೊಂದು ಸುರಕ್ಷಿತ, ನೆಮ್ಮದಿ. ಆದರೆ ಕೆಲವೊಮ್ಮೆ ಮನೆ, ಶಾಲೆ ಎರಡನ್ನೂ ನಿಭಾಯಿಸುವಾಗ ಉಶ್ಯಪ್ಪ ಅಂತ ಬಸವಳಿದು, ಕಾಲಿಗೆ ಗಾಲಿ ಕಟ್ಟಿ ಇಪ್ಪತ್ತು ವರ್ಷಗಳಿಂದಲೂ ಬಸ್ಸಿನ ಹಿಂದೆ ಓಡುವಾಗ, ಏನೋ ಟೆನ್ ಶನ್ ನಲ್ಲಿ ಮನೆಯವರ ಹತ್ರ ಬಯ್ಸಿಕೊಡಾಗ, ಮಕ್ಕಳ ಓದಿನ ಬಗ್ಗೆ-ಊಟದ ಬಗ್ಗೆ-ಆರೋಗ್ಯದ ಬಗ್ಗೆ ಸಮಸ್ಯೆ … Read more

ಈ ಕ್ಷಣದಿಂದಲೇ ನೆಪಗಳಿಗೆಲ್ಲ ಗುಡ್ ಬೈ. . . . : ಆಶಾ ಹೆಗಡೆ

ಇನ್ನೂ ನೆನಪಿದೆ ನನ್ನ ಬಗ್ಗೆ ಗೆಳೆಯ ಗೆಳತಿಯರು ಆಡುತ್ತಿದ್ದ ಮಾತುಗಳು. . . ”ಹೇ, ಎಷ್ಟು ಚೆನ್ನಾಗಿ ಕತೆ, ಕವನ ಬರೀತಿಯಾ” “ಓ drawing ಕೂಡ ಮಾಡ್ತಿಯಾ?” “ಅರೆ ಎಷ್ಟು ಚೆನ್ನಾಗಿ ಹಾಡು ಹೇಳತೀಯಾ”, ”ಇವತ್ತಿನ speech ಎಷ್ಟು ಚೆನ್ನಾಗಿತ್ತು”, ”ನೀನ್ ಬಿಡು all rounder “,,, ಇವತ್ತಿಗೆ ಈ ಹೊಗಳಿಕೆ ಬರೀ ಹಿತವಾಗಿ ನೋಯಿಸುವ ನೆನಪುಗಳು ಮಾತ್ರ. ಹವ್ಯಾಸಕ್ಕೆ ಒರೆ ಹಚ್ಚಿ, ಅದ ಪ್ರತಿಭೆಯಾಗಿ ಪರಿವರ್ತಿಸಿ ಎಡಬಿಡದೆ ಅದೇ ದಾರಿಯಲಿ ಮುನ್ನಡೆದು ಏನಾದರೊಂದು ಸಾದಿಸಿದ್ದು ಮಾತ್ರ … Read more

ಪರಿವರ್ತನೆ ನನ್ನಿಂದಲೇ . . . . .: ಜಯಲಕ್ಷ್ಮಿ ಕೆ. , ಮಡಿಕೇರಿ

” ನಿನ್ನ ಮಗನಿಗೆ ಎಷ್ಟು ಪರ್ಸೆಂಟು ಬಂತೂ . . ? 89% ?? ಅಯ್ಯೋ . . . ಇನ್ನು ಸ್ವಲ್ಪ ಓದಿದ್ದಿದ್ದರೆ 9ಂ% ಬರುತ್ತಿತ್ತು , ಹೋಗ್ಲಿ ಬಿಡು . . . ಇನ್ನೇನ್ ಮಾಡೋಕಾಗುತ್ತೆ . ನನ್ ಮಗಳಿಗೆ ಓದಿಸಿ ಓದಿಸಿ 98% ತೆಗೆಸೋ ಹೊತ್ತಿಗೆ ನಂಗೆ ಸಾಕಾಗಿ ಹೋಗಿತ್ತು. ಅಂದ ಹಾಗೆ ನಿನ್ನ ತಂಗಿ ಮಗಳೂ ಪಿ ಯು ಸಿ . . ಅಲ್ವಾ ? ಅವಳೆಷ್ಟು ಮಾರ್ಕ್ಸ್ ತಕೊಂಡಳು ??” … Read more

ಪರೀಕ್ಷೆಯಲ್ಲಿ ಪಾಸಾದವರೊಂದಿಗೆ ಫೇಲಾದವರೂ ಉತ್ತಮ ಸಾಧಕರು…: ವೀರಣ್ಣ ಮಂಠಾಳಕರ್, ಬಸವಕಲ್ಯಾಣ

ಪರೀಕ್ಷೆಯ ಫಲಿತಾಂಶ ಬಂದ ತಕ್ಷಣ ಅದೇಷ್ಟೋ ವಿದ್ಯಾರ್ಥಿಗಳು ಮಾರ್ಕ್ಸ್ ಕಡಿಮೆ ಬಂತು/ ಫೇಲಾದೆ ಎಂಬ ಕಾರಣಕ್ಕೆ ಮಾನಸಿಕ ಸ್ಥೈರ್ಯವನ್ನು ಕಳೆದುಕೊಳ್ಳದೇ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಬೇಕು. ಪಾಸಾದವರು, ರ್ಯಾಂಕ್ ಪಡೆದವರಷ್ಟೇ ಪ್ರತಿಭಾವಂತರಲ್ಲ. ನೆನಪಿರಲಿ ಫೇಲಾದವರೂ ಜೀವನದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ನೆನಪಿಸಿಕೊಂಡು, ಮುಂದಿನ ಗುರಿ-ಛಲದೊಂದಿಗೆ ಮುನ್ನುಗ್ಗಬೇಕು. ಜೀವನ ಮತ್ತು ಸಾಧನೆಗೆ ಶಿಕ್ಷಣವೊಂದೇ ಮುಖ್ಯವಲ್ಲ. ಕನಿಷ್ಠ ಓದು ಬರಹ ಕಲಿತವರೆಷ್ಟೋ ಶೈಕ್ಷಣಿಕ ವಿದ್ಯಾಭ್ಯಾಸದಲ್ಲಿ ಉತ್ತಮ ಬರಹಗಾರರಾಗಿ ರಾಜ್ಯ/ರಾಷ್ಟ್ರ ಮಟ್ಟದಲ್ಲಿ ಹೆಸರಾಗಿದ್ದಾರೆ. ಸಾಮಾಜಿಕ ಚಿಂತಕರಾಗಿ, ಪತ್ರಕರ್ತರಾಗಿ, ಪತ್ರಿಕಾ ಸಂಪಾದಕರಾಗಿ, ಹೋರಾಟಗಾರರಾಗಿ ಒಳ್ಳೆಯ … Read more

ಟ್ರೇನ್ ಪ್ರಯಾಣ: ಆಶಾಜಗದೀಶ್

ನನಗೆ ಪ್ರಯಾಣವೆಂದರೆ ಬಹಳ ಇಷ್ಟ. ಬಸ್ ಟ್ರೇನ್ ಕಾರ್ ಬೈಕ್… ಯಾವ್ದಾದ್ರೂ ಸರಿ ಹತ್ತಿ ಹೊರಟುಬಿಟ್ಟರೆ ಮುಗೀತು. ಯಾಕೆ ಅಂತ ಗೊತ್ತಿಲ್ಲ. ಅದರೆ ನನಗೆ ಬೀಸುವ ಗಾಳಿ ಅಂದ್ರೆ ಇಷ್ಟ, ತೊಟ್ಟಿಲ ಹಾಗೆ ತೂಗುವ ವಾಹನ ಇಷ್ಟ, ಪ್ರಯಾಣದ ನಿದ್ದೆ ಇಷ್ಟ, ನಾನಾ ಥರದ ಜನಗಳನ್ನು ನೋಡುವುದು ಇಷ್ಟ, ಹಿಂದಕ್ಕೆ ಜೋರಾಗಿ ಓಡುವ ಮರಗಳು ಇಷ್ಟ, ನಾನಾ ಥರದ ಪರಿಸರದ ಚಿತ್ರಣವನ್ನು ಕಣ್ತುಂಬಿಕೊಳ್ಳುವುದು ಇಷ್ಟ….. ಹೀಗೆ ಇಷ್ಟಗಳ ಸಾಲೇ ಇದೆ. ಅದರೊಂದಿಗೆ ಅಪರೂಪದ ಅನುಭವಗಳೂ ಸಿಗುತ್ತವೆ. ಇಂತಹ … Read more

ತಾಯಿಯ ಗರ್ಭವೆಂಬ ಪುಟ್ಟ ಪ್ರಪಂಚದಲ್ಲಿ: ಸಿಂಧು ಭಾರ್ಗವ್

ಒಂದು ಮಗುವಿನ ಜನನ ಯಾವ ತಾಯಿಯ ಗರ್ಭದಲ್ಲಿ ಆಗುತ್ತದೆ ಎಂಬುದು ಹೇಳಬರದು. ಹುಟ್ಟು ನಮ್ಮ ಕೈಯಲ್ಲಿ ಇರುವುದಿಲ್ಲ. ಜನಿಸಿದ ಮೇಲೆ ಹಡೆದ ಜನನಿಯ ಮುಖ ದರುಷನವಾಗುವುದು. ಅವಳು ನಮಗಾಗಿ ಎಷ್ಟೆಲ್ಲ ಕಷ್ಟ ಪಡುತ್ತಾಳೆ. ಅವಳ ತ್ಯಾಗ ಸಹನೆಗೆ ನಾವು ಎಂದಿಗೂ ಋಣಿಗಳಾಗಿರಬೇಕು. ಒಬ್ಬ ತಾಯಿ ತಾನು ಗರ್ಭವತಿ ಎಂದು ತಿಳಿದ ತತ್ಕ್ಷಣದಿಂದ ಮುಂದೆ ಜನಿಸುವ ಮಗುವಿನ ಬಗೆಗೆ ನೂರಾರು ಕನಸುಗಳನ್ನು ಕಟ್ಟಿಕೊಳ್ಳಲು ಶುರುಮಾಡುತ್ತಾಳೆ. ಜೊತೆಗೆ ತಂದೆಯಾಗುವವನೂ ಕೂಡ ಆ ಮಗುವಿನ ಬಗೆಗೆ ಸಾಕಷ್ಟು ಕನಸುಗಳನ್ನು ಹೆಣೆಯುತ್ತಾನೆ. ತಮ್ಮ … Read more

ಪುಟ್ಟಿಯ ಬೆಂಗಳೂರು: ನಾಗರಾಜನಾಯಕ ಡಿ.ಡೊಳ್ಳಿನ

ಬೆಂಗಳೂರು ಅಂದರೆ ಚಿಕ್ಕಂದಿನಿಂದಲೂ ನಮಗೆ ಆಕರ್ಷಣೆ. ಅಲ್ಲಿನ ಮೆಜೆಸ್ಟಿಕ್, ಗಾಂಧಿನಗರ, ವಿಧಾನಸೌಧ, ಉದ್ಯೋಗಸೌಧ, ಹೈಕೋರ್ಟು, ಕಬ್ಬನ ಉದ್ಯಾನವನದಲ್ಲಿನ ಗ್ರಂಥಾಲಯ, ಲಾಲಬಾಗ್, ಬನ್ನೇರುಘಟ್ಟ, ನೆಹರು ತಾರಾಲಯ, ರವೀಂದ್ರ ಕಲಾಕ್ಷೇತ್ರ ಹೀಗೆ ಒಂದೇ ಎರಡೆ ಹೇಳುತ್ತಾ ಹೋದರೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಚಿಕ್ಕವನಿದ್ದಾಗ ಬೆಂಗಳೂರು ಕಾಡಿದ್ದು ಸುಳ್ಳಲ್ಲ. ಅಪ್ಪ ಬೆಂಗಳೂರಿಗೆ ಹೋದಾಗಲೆಲ್ಲ ನಮಗಾಗಿ ಚೆಂದನೆಯ ಆಟಿಕೆ, ಶಾಲಾ ಬ್ಯಾಗಗಳನ್ನು ತರುತ್ತಿದ್ದರಿಂದಲೋ ಏನೋ ನಮಗೆ ಬೆಂಗಳೂರಿನ ಬಣ್ಣ ಬಣ್ಣದ ಕಲ್ಪನೆಗಳು ಮೂಡುವಂತೆ ಮಾಡಿದ್ದು. ಆದರೆ ಆ ಕಲ್ಪನೆಗಳು ನಾವು ಪ್ರೌಢಾವಸ್ಥೆಗೆ ತಲುಪಿ … Read more

ಗೆಲ್ಲುವ, ಗೆಲ್ಲಿಸುವ ದಾರಿಯ ಅನ್ವೇಷಣೆ: ರಘುನಂದನ ಕೆ. ಹೆಗಡೆ

ನಮ್ಮೂರ ಯಂಕ್ಟ ಅದ್ಭುತ ಮಾತುಗಾರ, ಏನನ್ನೇ ಕೊಟ್ಟರೂ ಮಾರಾಟ ಮಾಡಬಲ್ಲ. ಎಲ್ಲಿ ಬೇಕಾದರೂ ಬದುಕಬಲ್ಲ. ಯಾವ ವಿಷಯದ ಬಗ್ಗೆ ಬೇಕಾದರೂ ಮಾತಾಡಬಲ್ಲ. ರಿಸೆಶ್ಶನ್, ಷೇರು ಮಾರುಕಟ್ಟೆಯಿಂದ ರಸಗೊಬ್ಬರ, ಮಣ್ಣಿನ ಫಲವತ್ತತೆಯವರೆಗೆ ಎಲ್ಲ ವಿಷಯಗಳೂ ಅವನಿಗೆ ಗೊತ್ತು. ಜನರನ್ನ ಸೆಳೆಯುವುದು, ಸಂವಹನ ಮಾಡುವುದು, ಯಾವುದೇ ವಿಷಯದ ಬಗ್ಗೆ ಮಾತಾಡುವುದು ಇದರಲ್ಲಿ ಅವನು ತುಂಬಾ ನಿಪುಣ. ಆದರೇನು, ಕಳೆದ 20 ವರ್ಷಗಳಿಂದಲೂ ಅವನು ಸೇಲ್ಸ್‍ಮೆನ್ ಆಗಿಯೇ ದುಡಿಯುತ್ತಿದ್ದಾನೆ. ನಮ್ಮೂರ ಬಡ ಮೇಷ್ಟ್ರ ಮಗ ತುಂಬಾ ಬುದ್ದಿವಂತ. ನಾವೆಲ್ಲ ಕಂಪ್ಯೂಟರ್ ಎಂದರೇನು … Read more

ಆತ್ಮ ವಿಶ್ವಾಸ ಯಶಸ್ಸಿನ ಮೊದಲ ಮೆಟ್ಟಿಲು: ಎಂ.ಎನ್.ಸುಂದರ ರಾಜ್

ಹೆನ್ರಿ ಡೇವಿಡ್ ಥೋರೋ ಹೇಳಿದಂತೆ, “ಮನುಷ್ಯರು ಯಶಸ್ಸುಗಳಿಸಲೆಂದೇ ಜನಿಸಿರುವರು, ಅಪಜಯ ಹೊಂದುವುದಕ್ಕಲ್ಲ” ಸಂತೋಷದಂತೆ ಯಶಸ್ಸು ಸಹ ಮಾನವನ ಮೂಲಭೂತ ಗುರಿಯಾಗಿದೆ. ‘ನಾವು ಹೆಚ್ಚು ಗುಲಾಬಿಗಳನ್ನು ಪಡೆಯಬೇಕಾದರೆ ಹೆಚ್ಚು ಗಿಡಗಳನ್ನು ನೆಡಬೇಕು’ ಎಂದು ಇಲಿಯೆಟ್ ಒಂದೆಡೆ ಹೇಳಿದ್ದಾನೆ. ನಾವು ಜೀವನದಲ್ಲಿ ಏನೇ ಸಾಧಿಸಲು ನಮಗೆ ಅತ್ಯಗತ್ಯವಾದದ್ದು ಹಣವಲ್ಲ, ಯಾರ ಆಶ್ರಯವೂ ಅಲ್ಲ, ಇನ್ನೊಬ್ಬರ ಉತ್ತೇಜನವೂ ಇಲ್ಲ. ಬೇಕಾಗಿರುವುದು ಆತ್ಮವಿಶ್ವಾಸ. ಇದು ಇಲ್ಲದ ವ್ಯಕ್ತಿ ಎಷ್ಟೇ ಉತ್ತೇಜನ ನೀಡಿದರೂ ಯಶಸ್ಸಿನ ದಾರಿಯಲ್ಲಿ ನಡೆಯಲಾರ. ಆತ್ಮ ವಿಶ್ವಾಸವೆಂದರೇನು ಎನ್ನುವ ಪ್ರಶ್ನೆಗೆ ಉತ್ತರ … Read more

ದಿಟ್ಟ ಹೆಣ್ಣು..: ದೇವರಾಜ್ ನಿಸರ್ಗತನಯ

ಆಗ ತಾನೇ ಹೈಸ್ಕೂಲು ಮೆಟ್ಟಿಲೇರಿದ್ದ ನಿರೋಷಾಗೆ ತನ್ನ ದೇಹದಲ್ಲಾಗುತ್ತಿದ್ದ ಬದಲಾವಣೆಗಳನ್ನು ಕಂಡು ತನ್ನೊಳಗೇ ತಾನು ಹೆಮ್ಮೆಪಡಲಾರಂಭಿಸಿದಳು. ಇತರ ಹೆಣ್ಮಕ್ಕಳಿಗಿಂತ ಭಿನ್ನವಾಗಿ ಆಲೋಚಿಸತೊಡಗಿದಳು. ಮುಗ್ದತೆ ತುಂಟತನ ಮಾಯವಾಗಿ ಗಂಭೀರ ಸ್ವಭಾವ ದಿನೇ ದಿನೇ ಹೆಚ್ಚಾಗತೊಡಗಿತು. ಅವಳ ಬದಲಾವಣೆಯನ್ನು ಗಮನಿಸಿದ ಅವಳ ತಾಯಿ ಸುಜಾತಳಿಗೂ ತನ್ನ ಮಗಳು ಬೆಳೆದು ದೊಡ್ಡವಳಾಗುತ್ತಿದ್ದಾಳೆ ಎಂಬ ಹೆಮ್ಮೆ ಒಂದು ಕಡೆಯಾದರೆ ಈಗಿನ ಸಮಾಜದಲ್ಲಿ ಬೆಳೆದ ಹೆಣ್ಣುಮಕ್ಕಳು ಸೆರಗಿನಲ್ಲಿ ಕೆಂಡ ಕಟ್ಟಿಕೊಂಡಂತೆ ಎನ್ನುವ ಆತಂಕವೂ ಅವಳನ್ನು ಕಾಡಿತ್ತು. ಚಿಕ್ಕವಯಸ್ಸಿಗೆ ಗಂಡನನ್ನು ಕಳೆದುಕೊಂಡು ಬದುಕುತಿದ್ದ ಒಂಟಿ ಜೀವ … Read more

ಜಗದೊಳು ಸರ್ವವೂ ಸುಖಮಯವು: ಜಯಶ್ರೀ.ಜೆ. ಅಬ್ಬಿಗೇರಿ ಬೆಳಗಾವಿ

ಹಾಲಿನಂಥ ಬೆಳದಿಂಗಳು ಚೆಲ್ಲಿ ಹಿತ ನೀಡುವ ಚಂದಿರ ಕಾರ್ಮೋಡಗಳ ನಡುವೆ ಸಿಕ್ಕು ಮರೆಯಾಗುತ್ತಾನೆ. ಕೆಲ ಕಾಲದ ನಂತರ ಬೆಳ್ಳಿ ಮೋಡಗಳ ನಡುವೆ ಮತ್ತೆ ಬೆಳ್ಳನೆಯ ನಗು ಬೀರುತ್ತಾನೆ. ಅಮವಾಸ್ಯೆಯ ದಿನ ಸಂಪೂರ್ಣ ಮಾಯವಾದ ಚಂದಿರ ಹುಣ್ಣಿಮೆ ದಿನ ಬಾಗಿಲು ಮುಚ್ಚಿ ಮಲಗಿದ್ದರೂ ಬೆಳಕಿಂಡಿಯಿಂದ ನಾವಿದ್ದಲ್ಲಿಗೆ ಬಂದು ತಂಪು ನೀಡುತ್ತಾನೆ. ಬದುಕಿನಲ್ಲಿ ಸುಖ ದುಃಖಗಳೂ ಹೀಗೇ ಒಂದರ ಹಿಂದೆ ಒಂದು ಬರುತ್ತಲೇ ಇರುತ್ತವೆ. ಸುಖ ದುಃಖಗಳು ಸೈಕಲ್ ಗಾಲಿಯ ಚಕ್ರದ ಕಡ್ಡಿಗಳಿದ್ದಂತೆ ಒಮ್ಮೆ ಮೇಲಿದ್ದದ್ದು ಇನ್ನೊಮ್ಮೆ ಕೆಳಗೆ ಬರಲೇಬೇಕು. … Read more

ಹೃದಯವನ್ನು ಸೀಟಿಯಂತೆ ಹೊಡೆಸುವ  ರೈಲಿನ ವೇಟಿಂಗ್ ಲಿಸ್ಟ್!: ಭಾರ್ಗವ ಎಚ್ ಕೆ

ಸುಡುಸುಡು ಬಿಸಿಲಿನಲ್ಲಿ ಬಿಳಿ ಟೊಪ್ಪಿಗೆಯನ್ನು ಹಾಕಿಕೊಂಡು ರಫೀಕ್ ತಾತನು ಎಳೆನೀರನ್ನು ಮಾರುತ್ತಿದ್ದನು. ಹೊಂದಿಸಿಟ್ಟ ಎಳೆನೀರನ್ನು ರಾಯಲ್ ಫೀಲ್ಡ್ ಬೈಕಿನಲ್ಲಿ ಬಂದ ಶೋಕಿಲಾಲ್ ರಾಕಿಭಾಯ್ ತನಗಿಷ್ಟವಾದುದನ್ನು ಕಿತ್ತುಕೊಂಡು ರಫೀಕ್ ತಾತನ ಕೈಯಲ್ಲಿ ಕೊಟ್ಟನು. ತಾತನ ಬಿಳಿ ಟೊಪ್ಪಿಗೆಯು  ನೀರು ದೋಸೆಯಂತೆ ನಾನ್ ಸ್ಟಿಕ್ ತಲೆಯ ಮೇಲೆ ಹೊಯ್ದುಬಿಟ್ಟಿತ್ತು. ಬೆವರ ಹನಿಯಲ್ಲೂ ರಾಕಿಭಾಯ್ ಮೇಲೆ ಸಿಟ್ಟು ಬರಲಿಲ್ಲ. ಕೈಯಲ್ಲಿರುವ ಮಚ್ಚು ಎಳೆನೀರನ್ನು ಕೊಚ್ಚಿತೇ ವಿನಹ ಬೈಕ್ ಸವಾರನನ್ನಲ್ಲ. ಆ ತಾತನು ಬಿಸಿಯಾಗಿದ್ದ ಎಳೆನೀರನ್ನು ಕುಡಿಯುತ್ತಿದ್ದ ರಾಕಿಭಾಯ್ ಗೆ ಒಂದು ನಿಂಬೆಹಣ್ಣನ್ನು … Read more

ಅಚ್ಚರಿಯ ಕಂಗಳು: ಸಿಂಧು ಭಾರ್ಗವ್ ಬೆಂಗಳೂರು

ಚಿಕ್ಕ ಮಕ್ಕಳು ಮುಗ್ಧರಾಗಿರುತ್ತಾರೆ. ಪ್ರಪಂಚದ ಅರಿವೇ ಇಲ್ಲದೇ ತಮ್ಮ ಪಾಡಿಗೆ ತಾವು ಆಡಿ ಕುಣಿದು ನಲಿಯುತ್ತಿರುತ್ತಾರೆ. ಹೆತ್ತವರು ಯಾವುದೋ ಕಾರಣಕ್ಕೆ ಗದರಿಸಿದರೆ ಹೆದರಿ ಮುದುರಿಕೊಂಡು ಕುಳಿತುಬಿಡುತ್ತಾರೆ. ಅವರ ತುಂಟಾಟ, ಚೇಷ್ಠೆಗಳು ಲೆಕ್ಕವಿಲ್ಲದಷ್ಟು ಮಾಡಿದರೂ ಹೆತ್ತವರು ಬೆದರಿಸದೇ, ಹೊಡೆಯದೇ ತಾಳ್ಮೆಯಿಂದ ಇರಬೇಕು. ತಮ್ಮ ಕೆಲಸದ ಒತ್ತಡವನ್ನು, ಕೋಪವನ್ನು ಅವರ ಮೇಲೆ ತೀರಿಸಿಕೊಳ್ಳಬಾರದು. ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ ಮಾಡುವುದು ಎಷ್ಟು ಸರಿ? ಬದಲಾಗಿ ಅವರ ಖುಷಿಯಲ್ಲಿ ತಾವು ಕೂಡ ಖುಷಿಪಡಬೇಕು. ಮಕ್ಕಳ ಮನಸ್ಸಿಗೆ ಘಾಸಿ ಮಾಡಬಾರದು. ಅವುಗಳ‌ ಜೊತೆ ಬೆರೆತು … Read more

ಬೆಳೆಸುವ ಸಿರಿ ಮೊಳಕೆಯಲ್ಲೇ?: ಕೊಟ್ರೇಶ್ ಕೊಟ್ಟೂರು

ಬೆಳೆಯುವ ಸಿರಿ ಮೊಳಕೆಯಲ್ಲೇ ಎನ್ನುವ ಗಾದೆಯನ್ನು ನಾವು ಕೇಳಿದ್ದೇವೆ ಆದರೆ ಇದು ಬೆಳೆಯುವ ಸಿರಿ ಮೊಳಕೆಯಲ್ಲೇ ಅಲ್ಲ, ಬದಲಾಗಿ ಬೆಳೆಸುವ ಸಿರಿ ಮೊಳಕೆಯಲ್ಲೇ ಎನ್ನುವುದು. ಯಾವುದೇ ಒಂದು ಮಗು ಬೆಳೆಯುವುದು ಬಿಡುವುದು ಅವರವರ ಇಚ್ಛೆ. ಆದರೆ ಈ ಮಗುವನ್ನು ಬೆಳೆಸುವುದರಲ್ಲಿ ಆ ಮಗುವಿನ ತಾಯಿ ಹೇಗೆ ಬೆಳೆಸಿ ಪೋಷಿಸುತ್ತಿರುವಳು ಎನ್ನುವುದು ನನಗಂತೂ ಆಶ್ಚರ್ಯ ಮತ್ತು ಅಗಾಧ. ಆ ಮಗುವಿಗೆ ಬದುಕುವ ಛಲವನ್ನು ಹೇಗೆಲ್ಲಾ ತುಂಬಬಹುದು ಎಂಬುದಕ್ಕೆ ಜೀವಂತ ನಿದರ್ಶನ ಅಮೃತಳ ಆ ನನ್ನ ತಾಯಿ. ನಾನೀಗ ಹೇಳುತ್ತಿರುವುದು … Read more

ಸಂಸ್ಕಾರ ಜ್ಞಾನವೇ ಸಂಸಾರ ಪ್ರಾಣ: ರವಿ ರಾ ಕಂಗಳ

ಯಾವುದೇ ದೇಶದ ಅಭಿವೃದ್ಧಿಗೆ ಪೂರಕವಾದ ಅಂಶಗಳೆಂದರೆ ಒಂದು ನೈಸರ್ಗಿಕ ಸಂಪನ್ಮೂಲ ಇನ್ನೊಂದು ಮಾನವ ಸಂಪನ್ಮೂಲ. ಯಾವ ದೇಶದಲ್ಲಿ ವಿಪುಲವಾಗಿ ನೈಸರ್ಗಿಕ ಸಂಪನ್ಮೂಲವಿದೆಯೋ ಆ ದೇಶವು ಅಭಿವೃದ್ಧಿಶೀಲ ದೇಶವೆಂದು ಹೇಳಲು ಸಾಧ್ಯವಿಲ್ಲ, ಆ ನೈಸರ್ಗಿಕ ಸಂಪನ್ಮೂಲವನ್ನು ಅಲ್ಲಿನ ಮಾನವ ಸಂಪನ್ಮೂಲವು ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳುತ್ತಾರೆಯೋ ಎಂಬುದರ ಮೇಲೆ ಅದು ನಿರ್ಧಾರವಾಗುತ್ತದೆ. ಹಾಗಾಗಿ ನೈಸರ್ಗಿಕ ಸಂಪನ್ಮೂಲವನ್ನು ಮಿತವ್ಯಯವಾಗಿ ಮತ್ತು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮಾನವ ಸಂಪನ್ಮೂಲವು ಈ ದೇಶಕ್ಕೆ ಬೇಕಾಗಿದೆ. ಅದು ಅಲ್ಲದೆ ಇಂದು ನೈತಿಕ ಮೌಲ್ಯಗಳು ಕುಸಿಯುತ್ತಿರುವ ಸಂದರ್ಭದಲ್ಲಿ, ಮಾನವೀಯತೆಯ … Read more