ಯೂಟ್ಯೂಬ್‌ ನಲ್ಲಿ ಮೊಟ್ಟಮೊದಲ ಬಾರಿಗೆ ಕನ್ನಡ ಮಾಧ್ಯಮದಲ್ಲಿ ಬ್ಯಾಂಕ್ ಪರೀಕ್ಷೆಯ ತರಬೇತಿ

ಆತ್ಮೀಯರೆ, ನನಗೆ ಬಹಳ ಖುಷಿ ಎನಿಸುತ್ತಿದೆ. ಯಾಕೆಂದರೆ ಕನ್ನಡ ಮಾಧ್ಯಮದಲ್ಲಿ ಉಚಿತವಾಗಿ ಬ್ಯಾಂಕ್ ಪರೀಕ್ಷೆ ತರಬೇತಿಯನ್ನು ಯೂಟ್ಯೂಬ್ ಮುಖಾಂತರ ಪ್ರಾರಂಭಿಸಿದ್ದೇನೆ. ನೀವೆಲ್ಲ ಕೈಜೋಡಿಸುವಿರಿ ಎಂದು ನಿರೀಕ್ಷಿಸುತ್ತೇನೆ. ನಾನು ಭಾರತೀಯ ಸ್ಟೇಟ್ ಬ್ಯಾಂಕಿನ ಸೇವೆಗೆ ರಾಜೀನಾಮೆ ನೀಡಿ ಸ್ಪರ್ಧಾಕಾಂಕ್ಷಿಗಳಿಗೆ ಬ್ಯಾಂಕ್ ಪರೀಕ್ಷೆಯ ತರಬೇತಿಯನ್ನು ಪ್ರಾರಂಭಿಸಿದೆ. ಬೆಳಗಾವಿ ಜಿಲ್ಲೆಯ ನೂರಾರು ವಿದ್ಯಾರ್ಥಿಗಳು ನಮ್ಮ ಸಂಸ್ಥೆಗೆ ಬಂದು ತರಬೇತಿ ಪಡೆದು ಕೆಲವರು ಯಶಸ್ಸನ್ನೂ ಗಳಿಸಿದರು. ಆದರೆ ನಾನು ಕ್ಲಾಸರೂಮಿನಲ್ಲಿ ಕಲಿಸಲು ಸಾಧ್ಯವಾಗುತ್ತಿರುವುದು ಕೇವಲ ನಲವತ್ತು ಐವತ್ತು ಜನರಿಗೆ ಮಾತ್ರ. ಅವಶ್ಯವಿದ್ದವರಿಗೆಲ್ಲ ನನ್ನಲ್ಲಿರುವ … Read more

ಕಡಿದೊಗೆದ ಬಳ್ಳಿಯು ಕುಡಿಯೊಡೆಯುವಂತೆ: ಎಸ್. ಜಿ. ಸೀತಾರಾಮ್, ಮೈಸೂರು

“ತ್ಯಾಜ್ಯ ವಸ್ತು” ವಿಲೇವಾರಿಯ ಬಗ್ಗೆಯೇನೋ ಇಂದು ಎಲ್ಲೆಡೆ ಬಿಸಿಬಿಸಿ ಚರ್ಚೆಗಳಾಗುತ್ತಿವೆ; ಆದರೆ, ತಮ್ಮ ಕುಟುಂಬ, ಬಂಧು-ಬಳಗ, ಸಮುದಾಯ, ಯಾವುದಕ್ಕೂ ಬೇಡವಾದ “ತ್ಯಾಜ್ಯ ವ್ಯಕ್ತಿ”ಗಳ ಸ್ಥಿತಿಗತಿಯ ಬಗ್ಗೆ ‘ಕ್ಯಾರೇ?’ ಎನ್ನುವ ಮಂದಿ ಎಷ್ಟಿದ್ದಾರು? ಹಾಗೆನ್ನುವವರಲ್ಲೂ, ಈ ಪರಿಸ್ಥಿತಿಗೆ ಏನಾದರೊಂದು ಪರಿಹಾರ ಹೊಂದಿಸಬೇಕೆಂದು ನಿಜವಾಗಿ ‘ಕೇರ್’ ಮಾಡುವವರು ಅದೆಷ್ಟು ಇದ್ದಾರು? ಇಂಥ ದಾರುಣ ಅವಸ್ಥೆಯ ನಡುವೆ, ಸಮಾಜದ ಕುಪ್ಪೆಯಲ್ಲಿ ಕಾಲ ತೇಯುತ್ತ, ಬದುಕಾಟದ ಕೊಟ್ಟಕೊನೆಗೆ ಹೇಗೋ ‘ಜೋತುಬಿದ್ದಿರುವ’ ಸ್ತ್ರೀಯರಿಗೆ ಅನ್ನ, ಆರೈಕೆ, ನೆರಳು, ನೆಮ್ಮದಿ ನೀಡುವ ಸಲುವಾಗಿ, ವಿದ್ಯಾವಂತ, ದಯಾಶೀಲ, … Read more

ತಾಯಿಯ ಗರ್ಭವೆಂಬ ಪುಟ್ಟ ಪ್ರಪಂಚದಲ್ಲಿ: ಸಿಂಧು ಭಾರ್ಗವ್

ಒಂದು ಮಗುವಿನ ಜನನ ಯಾವ ತಾಯಿಯ ಗರ್ಭದಲ್ಲಿ ಆಗುತ್ತದೆ ಎಂಬುದು ಹೇಳಬರದು. ಹುಟ್ಟು ನಮ್ಮ ಕೈಯಲ್ಲಿ ಇರುವುದಿಲ್ಲ. ಜನಿಸಿದ ಮೇಲೆ ಹಡೆದ ಜನನಿಯ ಮುಖ ದರುಷನವಾಗುವುದು. ಅವಳು ನಮಗಾಗಿ ಎಷ್ಟೆಲ್ಲ ಕಷ್ಟ ಪಡುತ್ತಾಳೆ. ಅವಳ ತ್ಯಾಗ ಸಹನೆಗೆ ನಾವು ಎಂದಿಗೂ ಋಣಿಗಳಾಗಿರಬೇಕು. ಒಬ್ಬ ತಾಯಿ ತಾನು ಗರ್ಭವತಿ ಎಂದು ತಿಳಿದ ತತ್ಕ್ಷಣದಿಂದ ಮುಂದೆ ಜನಿಸುವ ಮಗುವಿನ ಬಗೆಗೆ ನೂರಾರು ಕನಸುಗಳನ್ನು ಕಟ್ಟಿಕೊಳ್ಳಲು ಶುರುಮಾಡುತ್ತಾಳೆ. ಜೊತೆಗೆ ತಂದೆಯಾಗುವವನೂ ಕೂಡ ಆ ಮಗುವಿನ ಬಗೆಗೆ ಸಾಕಷ್ಟು ಕನಸುಗಳನ್ನು ಹೆಣೆಯುತ್ತಾನೆ. ತಮ್ಮ … Read more

ಅಂಬೇಡ್ಕರ್ ಎಂಬ ಶಕ್ತಿಯೇ ನಿನ್ನೆಯ ಹೋರಾಟ ; ಇಂದಿನ ಬೆಳಕು, ನಾಳಿನ ಬಾಳ ಬುತ್ತಿ: ನಾಗರಾಜ್ ಹರಪನಹಳ್ಳಿ

  ನಮ್ಮ ಕಣ್ಣ ಮುಂದಿನ ಬೆಳಕು ಅಂಬೇಡ್ಕರ್. ಅವರು ಭಾರತದ ಅಂತಃಶಕ್ತಿ ಹೆಚ್ಚಿಸಿದ ಮಹಾ ಮನವತಾವಾದಿ. ಅಂಬೇಡ್ಕರ್ ಪ್ರಜಾಪ್ರಭುತ್ವವಾದಿ. ಮಹಿಳಾವಾದಿ, ಕಾರ್ಮಿಕರ ಬಂಧು. ಮನುಷ್ಯತ್ವದ ಪ್ರತಿಪಾದಕ. ಶೋಷಿತರಿಗೆ ಪ್ರೀತಿ ಅಂತಃಕರಣದ ನದಿಯನ್ನೇ ಹರಿಸಿದ ಮನುಷ್ಯ, ಅಂಬೇಡ್ಕರ್ 1891ರಲ್ಲಿ ಜನಸಿದ್ದು. ಅವರ 128ನೇ ಜನ್ಮದಿನಕ್ಕೆ ನಾವಿಂದು ಅವರನ್ನು ಸ್ಮರಿಸಿಕೊಳ್ಳುತ್ತಿದ್ದೇವೆ. ಬಾಬಾ ಸಾಹೇಬ್ ನಮ್ಮಿಂದ ಭೌತಿಕವಾಗಿ ದೂರವಾಗಿ 63 ವರ್ಷ ಕಳೆದಿದ್ದರೂ, ಅವರನ್ನು ದೇಶ ಪ್ರತಿ ದಿನ, ಪ್ರತಿಕ್ಷಣ ನೆನಪಿಸಿಕೊಳ್ಳುವ ಭಾರತದ ಬಹುಮುಖ ಪ್ರತಿಭೆ. ಅವರು ನೀಡಿದ ಸಂವಿಧಾನದ ಮಹಾಧರ್ಮದಲ್ಲಿ … Read more

ಗೆಲ್ಲಿಸುವ ದಾರಿಯಲ್ಲಿ – ಕೌಶಲ್ಯದ ಪರಿಚಯ: ರಘುನಂದನ ಕೆ. ಹೆಗಡೆ

SKILL, SPEED, SCORE ಕೌಶಲ್ಯ ವೇಗ ಗೆಲುವು ಕೌಶಲ್ಯ (Skill) ಎಂದ ತಕ್ಷಣ ನಮ್ಮ ಯೋಚನೆಯೆಲ್ಲ ವೃತ್ತಿ ಜೀವನಕ್ಕೆ ಹೊರಟು ಬಿಡುತ್ತೆ, ಇಲ್ಲಾ ಇದೆಲ್ಲಾ ಕಲಿಕೆಯ ಕೊನೆ ಹಂತದಲ್ಲಿರೋ ವಿದ್ಯಾರ್ಥಿಗಳಿಗೆ ಬೇಕಾಗಿರೋದು ಅನ್ಕೋತೇವೆ. ಹಾಗಾದರೆ ವೃತ್ತಿಯನ್ನ ಬಿಟ್ಟು, ಜೀವನಕ್ಕೆ ಕೌಶಲ್ಯ ಬೇಕಿಲ್ವಾ? ಹೆಂಗೆಂಗೋ ಬದುಕೋರಿಗೆ ಕೌಶಲ್ಯ ಬೇಕಿಲ್ಲ, ಕೌಶಲ್ಯ ಇದ್ದೋರಿಗೆ ಸ್ಕೂಲ್ ಶಿಕ್ಷಣ ಇಲ್ದೇ ಇದ್ರು ಗೆಲುವು ಸಿಗುತ್ತೆ. ನಂಬಿಕೆ ಆಗ್ತಿಲ್ವಾ, ಥಾಮಸ್ ಅಲ್ವಾ ಎಡಿಸನ್ ಗೊತ್ತಲ್ಲಾ, ಬಲ್ಬನ್ನು ಕಂಡು ಹಿಡಿದು ಬೆಳಕು ಕೊಟ್ಟ ವಿಜ್ಞಾನಿ, ಅವರು … Read more

ಅನಕೃ ಮಹಾನ್ ಮೇರು ಕಾದಂಬರಿ ಸಾರ್ವಭೌಮರು: ಹೊರಾ.ಪರಮೇಶ್ ಹೊಡೇನೂರು

ಸಂಗೀತ, ನಾಡು ನುಡಿಗೆ ಅನಕೃ ಕೊಡುಗೆ “ಅನಕೃ”ಎಂಬ ಹೃಸ್ವ ಪದಪುಂಜದಲ್ಲಿಯೇ ಅಗಾಧವಾದ ಸಾಹಿತ್ಯ ಅನಾವರಣಗೊಳ್ಳುತ್ತದೆ. ಕನ್ನಡ ಸಾಹಿತ್ಯದ ಕೃಷಿಯ ಜೊತೆಗೆ ಕನ್ನಡ ಭಾಷೆಯ ಬಳಕೆ-ಉಳಿಕೆಗೆ ಅಕ್ಷರಶಃ ಶ್ರಮಿಸಿದ ಅಪೂರ್ವ ಸಾಹಿತಿ ಅ.ನ.ಕೃಷ್ಣರಾಯರು. ಹುಟ್ಟಿದ್ದು ಕೋಲಾರವೇ ಆದರೂ ತಂದೆ ನರಸಿಂಗರಾಯರು-ತಾಯಿ ಅನ್ನಪೂರ್ಣಮ್ಮನವರು ಮೂಲತಃ ಅರಕಲಗೂಡಿನವರಾದುದರಿಂದ ಅನಕೃ ಅವರು ಅರಕಲಗೂಡಿನವರೇ ಎಂಬುದಾಗಿ ಪರಿಭಾವಿಸಲ್ಪಟ್ಟಿದ್ದಾರೆ. ಬಳ್ಳಿಯು ಎಷ್ಟೇ ಬೃಹದಾಕಾರವಾಗಿ ಬೆಳೆದರೂ ಅದರ ಹುಟ್ಟಿದ ಜಾಗವೇ ಅಸ್ತಿತ್ವವನ್ನು ಹೇಳುವಂತೆ ಅನಕೃ ಅರಕಲಗೂಡು ಭಾಗದವರೇ ಎಂಬುದಾಗಿ ಪರಿಗಣಿತವಾಗಿದ್ದಾರೆ. 190೮ ರ ಮೇ 9 ರಂದು … Read more

ಯುವಜನರ ಹಕ್ಕುಗಳ ರಕ್ಷಣೆಗೂ ಆಯೋಗ ಬೇಕಲ್ಲವೇ?: ರುಕ್ಮಿಣಿ ನಾಗಣ್ಣವರ

ಫಕ್ಕೀರಪ್ಪ. ಹುಟ್ಟಿ-ಬೆಳೆದದ್ದು ಬೆಳಗಾವಿ ಜಿಲ್ಲೆಯ ಪುಟ್ಟ ಗ್ರಾಮದಲ್ಲಿ. ದೊಡ್ಡ ವ್ಯಕ್ತಿಯಾಗುವ ಅಥವಾ ಉನ್ನತ ಸಾಧನೆ ಮಾಡುವ ಅದಮ್ಯ ಕನಸುಗಳೇನೂ ಇರಲಿಲ್ಲ. ಸರ್ಕಾರಿ ಶಾಲೆಯಲ್ಲಿ 10ನೇ ತರಗತಿ ಪೂರ್ಣಗೊಳಿಸಿದ ಅವರಿಗೆ ವಿಶ್ವವಿದ್ಯಾಲಯದ ಮೆಟ್ಟಿಲೇರುವ ಗುರಿ ಇರಲಿಲ್ಲ. ಅಷ್ಟೇ ಅಲ್ಲ, ಪಿಯು ಕಾಲೇಜಿಗೆ ಹೋಗುವ ಸ್ಪಷ್ಟ ಕಲ್ಪನೆಯೂ ಇರಲಿಲ್ಲ. ಆಯಾ ದಿನದ ದುಡಿಮೆಯನ್ನೇ ನಂಬಿದ್ದ ತಂದೆ, ತಾಯಿಗೂ ಮಗನಿಗೆ ಉನ್ನತ ಶಿಕ್ಷಣ ಕೊಡಿಸುವ ಶಕ್ತಿ ಇರಲಿಲ್ಲ. ಸಾಂವಿಧಾನಿಕ ಹಕ್ಕು ಇದ್ದರೂ ಆರ್ಥಿಕ ಮತ್ತು ಇನ್ನಿತರ ಸೌಲಭ್ಯದ ಕೊರತೆಯಿಂದ ಫಕ್ಕೀರಪ್ಪಗೆ ಶಾಲೆಯ … Read more

ಮಾನವನ ಅಗತ್ಯತೆಗೆ ಅಣುಶಕ್ತಿ: ಎಸ್.ಎಚ್.ಮೊಕಾಶಿ

ಮಾನವನು ತನ್ನ ದೈನಂದಿನ ಅಗತ್ಯತೆಗಳ ಪೂರೈಕೆಗಾಗಿ ಹಲವಾರು ವಿಜ್ಞಾನಿಗಳ ನಿರಂತರ ಪರಿಶ್ರಮದ ಫಲವಾಗಿ ಅಣುಶಕ್ತಿಯ ಸಂಶೋಧನೆಯಾಯಿತು. ಇದನ್ನು ಹಲವಾರು ರೂಪಗಳಿಗೆ ಪರಿವರ್ತಿಸಿ ವಿವಿಧ ರೀತಿಯಲ್ಲಿ ಬಳಸಲು ಯೋಜಿಸಲಾಯಿತು. ಮಾನವನ ಕೆಲವು ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಅಣುಶಕ್ತಿಯು ಕಳೆದ ಹಲವು ದಶಕಗಳಿಂದ ಒಂದು ಪರ್ಯಾಯ ಶಕ್ತಿಯಾಗಿ ಉದ್ಭವಿಸಿದೆ. ಇದು ಸೂರ್ಯನಿಂದ ಪಡೆಯದಿರುವ ಏಕಮಾತ್ರ ಶಕ್ತಿಯ ರೂಪವಾಗಿದೆ. ಪರಮಾಣು ಬೀಜಗಳಲ್ಲಿ ಅಡಗಿರುವ ಬೈಜಿಕ ಶಕ್ತಿಯನ್ನು ಉಪಯೋಗಿಸಿಕೊಳ್ಳುತ್ತಿರುವುದು ಮಾನವನ ದೊಡ್ಡ ವೈಜ್ಞಾನಿಕ ಸಾಧನೆಗಳಲ್ಲಿ ಒಂದಾಗಿದೆ.  ಅಣುಶಕ್ತಿಯು ಪರಮಾಣುವಿನ ಬೀಜವು ಪ್ರೋಟಾನ್ ಮತ್ತು ನ್ಯುಟ್ರಾನ್‍ಗಳನ್ನು … Read more

ಗುರುಗಳನ್ನು ಗೌರವಿಸಿ ಗೌರವ ಹೆಚ್ಚಿಸಿಕೊಂಡವರು!: ಕೆ ಟಿ ಸೋಮಶೇಖರ ಹೊಳಲ್ಕೆರೆ

ಸೆಪ್ಟಂಬರ್ 5 ಡಾ!! ಸರ್ವಪಲ್ಲಿ ರಾಧಾಕೃಷ್ಣನ್ ರವರ ಜನ್ಮದಿನ. ಅದನ್ನೇ ಭಾರತದಲ್ಲಿ ಶಿಕ್ಷಕರ ದಿನ ಎಂದು ಆಚರಿಸುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಅಕ್ಟೋಬರ್ 5 ನ್ನು ವಿಶ್ವ ಶಿಕ್ಷಕರ ದಿನ ಎಂದು ಆಚರಿಸುವರು. ನಿಜವಾಗಿಯೂ ಶಿಕ್ಷಕರ ದಿನಾಚರಣೆಯನ್ನು ಸಮಾಜ ಆಚರಿಸಬೇಕು. ಸಮಾಜದಲ್ಲಿನ ಸಂಘ – ಸಂಸ್ಥೆಗಳು ಆಚರಿಸಿದರೆ ಶಿಕ್ಷಕರಿಗೆ ಗೌರವ. ಅಷ್ಟೇ ಅಲ್ಲ ಆ ಸಂಘ ಸಂಸ್ಥೆಗಳಿಗೂ ಗೌರವ ! ಸಮಾಜ ಶಿಕ್ಷಕರ ದಿನವನ್ನು ಆಚರಿಸದಿರುವುದರಿಂದ ಶಿಕ್ಷಕರೇ ಅವರ ದಿನವನ್ನು ಅವರೇ ಆಚರಿಸಿಕೊಳ್ಳುವಂತಾಗಿರುವುದು ಅವರೇ ಅವರ ಬೆನ್ನನ್ನು … Read more

ಹವ್ಯಕರಲ್ಲಿ ಗಣೇಶ ಹಬ್ಬದ ಆಚರಣೆ: ಗೀತಾ ಜಿ.ಹೆಗಡೆ, ಕಲ್ಮನೆ.

ಸೃಷ್ಟಿ ಸೌಂದರ್ಯದ ತವರೂರಾದ ಮಲೆನಾಡಿನ ಜಿಲ್ಲೆಯಾದ್ಯಂತ ನೂರಾರು ಹವ್ಯಕ ಕುಟುಂಬಗಳು ಅಲ್ಲಲ್ಲಿ ನಾಲ್ಕು ಐದು ಮನೆಗಳಿಂದ ಸಣ್ಣ ಸಣ್ಣ ಹಳ್ಳಿಗಳಾಗಿ ಪುರಾತನ ಕಾಲದಿಂದಲೂ ನೆಲೆ ನಿಂತಿವೆ. ಒಂದೊಂದು ಹಳ್ಳಿಗೂ ಒಂದೊಂದು ಹೆಸರು. ಹಾಗೆ ಅಲ್ಲಿ ಆಚರಿಸುವ ಹಬ್ಬಗಳಲ್ಲೂ ವಿಶೇಷತೆಯಿದೆ. ಅವುಗಳಲ್ಲಿ “ಗಣೇಶ ಹಬ್ಬ”ವೂ ಒಂದು. ಹವ್ಯಕರಲ್ಲಿ ಈ ಗಣೇಶ ಹಬ್ಬಕ್ಕೆ ಚೌತಿ ಹಬ್ಬವೆಂದು ಹೇಳುವ ವಾಡಿಕೆ. ತಲೆ ತಲಾಂತರದಿಂದ ಮನೆತನದಲ್ಲಿ ನಡೆದುಕೊಂಡು ಬಂದ ಹಲವು ಪದ್ಧತಿಗಳಿದ್ದು ಅದು ಈಗಲೂ ಮುಂದುವರೆದಿದೆ. ಹಬ್ಬಕ್ಕೆ ಹದಿನೈದು ದಿನಗಳಿರುವಾಗಲೆ ಹಬ್ಬದ ತಯಾರಿ … Read more

ಬಾಂಧವ್ಯದ ಸಂಕೇತ ರಕ್ಷಾ ಬಂಧನ: ವೆಂಕಟೇಶ ಗುಡೆಪ್ಪನವರ ಮುಧೋಳ

ರಸ್ತೆಯಲ್ಲಿ ಶಾಲಾ ಮಕ್ಕಳು ಓರ್ವ ಪ್ರಯಾಣಿಕನಿಗೆ ರಾಕಿ ಕಟ್ಟಿ, “ನಮಗೆ ಹಾಗೆ ಬೇಡ ರಾಕಿ ಕಟ್ಟುತ್ತೇವೆ ಹಣ ಕೊಡಿ” ಎಂದು ಕಡ್ಡಾಯವಾಗಿ ಪಡೆದು ಅದನ್ನು ಒಂದು ಬಿಳಿ ಪೆಟ್ಟಿಗೆದಲ್ಲಿ ಹಾಕುತ್ತಿದ್ದರು. ಸಮೀಪಕ್ಕೆ ಹೋಗಿ ನೋಡಿದರೆ, ಅದು ಕೊಡಗು ಹಾಗೂ ಕೇರಳ ಸಂತ್ರಸ್ಥರ ಪರಿಹಾರ ನಿಧಿ ಪೆಟ್ಟಿಗೆಯಾಗಿತ್ತು. ಸಹೋದರನಿಗೆ ಸಹೋದರಿ ರಕ್ಷಾಬಂಧನ ಕಟ್ಟಿ ಮಮತೆ ತೋರಿಸಿ ಅವನ ಯೋಗಹಕ್ಷೇಮಕ್ಕಾಗಿ ಪ್ರಾರ್ಥಿಸುವುದು, ಅಷ್ಟೇ ಅಲ್ಲ ಈ ಹಣ ಈ ರೀತಿಯಿಂದ ಅಪಾಯದ ಸ್ಥಿತಿಯಲ್ಲಿರುವ ಸಂತ್ರಸ್ಥರ ಬಾಳಿಗೂ ಬೆಳಕಾಗ ಬಲ್ಲದು ಎನ್ನುವುದು, … Read more

ಪಂಜು ಸಂಚಾಲಕರು

ನಲ್ಮೆಯ ಗೆಳೆಯರೇ, ಪಂಜು ಬಳಗದ ಪರವಾಗಿ ನಿಮ್ಮೆಲ್ಲರಿಗೂ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು. ಪಂಜು ಈಗಾಗಲೇ ತನ್ನದೇ ಓದುಗ ಹಾಗು ಬರಹಗಾರರ ಬಳಗ ಹೊಂದಿದೆಯಾದರೂ ಪಂಜು ಇನ್ನೂ ಹೆಚ್ಚು ಓದುಗರಿಗೆ ತಲುಪಬೇಕೆನ್ನುವ ಉದ್ದೇಶದಿಂದ ಪಂಜು ಬಳಗಕ್ಕೆ ಪಂಜು ಸಂಚಾಲಕರನ್ನು ಸೇರಿಸಿಕೊಳ್ಳುವ ಆಸೆ ಇದೆ. ಆಸಕ್ತಿ ಉಳ್ಳವರು ನಿಮ್ಮ ಹೆಸರು, ವಿಳಾಸ, ಮೊಬೈಲ್ ನಂಬರ್ ಮತ್ತು ಫೋಟೋ ಕಳುಹಿಸಿಕೊಡಿ. ನಮ್ಮ ಇ ಮೇಲ್: smnattu@gmail.com, editor.panju@gmail.com ನಮ್ಮ ವಾಟ್ಸ್ ಅಪ್ ನಂಬರ್: 9844332505 ಧನ್ಯವಾದಗಳೊಂದಿಗೆ ಪಂಜು ಬಳಗ

π ಗೊಂದು ದಿನ ಮಾರ್ಚ್ 14: ಜಲಸುತ

ಗಣಿತ ಸರ್ವ ವಿಜ್ಞಾನಗಳ ಅಧಿನಾಯಕಿ – – ಖ್ಯಾತ ಜರ್ಮನ್ ಗಣಿತಜ್ಞ ಕಾರ್ಲ್ ಫ್ರೆಡ್ರಿಕ್ ಗಾಸ್. ವಿಜ್ಞಾನ-ತಂತ್ರಜ್ಞಾನಕ್ಕೆ ಸಂಬಂಧಿಸಿದ ಯಾವುದೇ ವಿಷಯವನ್ನಾದರೂ ವಿವರಿಸಿ ಹೇಳಲು ಗಣಿತ ಬೇಕೇ ಬೇಕು. ಗಣಿತವಿಲ್ಲದೆ ವಿಜ್ಞಾನ ಇಲ್ಲ ವಿಜ್ಞಾನವನ್ನು ಒಂದು ಭಾಷೆ ಎಂದು ಪರಿಗಣಿಸಿದರೆ, ಗಣಿತ ಆ ಭಾಷೆಗೆ ಲಿಪಿಯಿದ್ದಂತೆ. ಇದು ಗಣಿತದ ಹೆಗ್ಗಳಿಕೆ. ಗಣಿತದಲ್ಲಿ ಕೆಲವೊಂದು ವಿಶೇಷ ಸಂಖ್ಯೆಗಳಿವೆ. ಇವಿಲ್ಲದೆ ವಿಜ್ಞಾನ-ತಂತ್ರಜ್ಞಾನವಿಲ್ಲ, ಕಲೆ-ವಾಸ್ತುಶಿಲ್ಪವಿಲ್ಲ. ಜಗದ ಜನರ ಮೊಗದಲಿ ಮಂದಹಾಸ ಮೂಡಲು ಯಾವುದ್ಯಾವುದು ಅಗತ್ಯವೋ ಅಲ್ಲೆಲ್ಲಾ ಈ ಸಂಖ್ಯೆಗಳು ಇರಲೇಬೇಕು. ಕೆಲವೊಮ್ಮೆ … Read more

ಪುಸ್ತಕ ಕೊಳ್ಳಿರಿ: ಮುಖವಾಡದ ಮಾಫಿಯಾದಲ್ಲಿ

ಶಿವಕುಮಾರ ಚನ್ನಪ್ಪನವರ ಇವರು ಬರೆದ ಮುಖವಾಡದ ಮಾಫಿಯಾದಲ್ಲಿ ಕಥಾಸಂಕಲನವನ್ನು ಕೊಳ್ಳಲು ಈ ಕೆಳಗಿನ ಲಿಂಕ್ ಒತ್ತಿರಿ.. https://www.instamojo.com/panjuprakashana/mukhavadada-mafiyadalli/  

ರಾಜಹಂಸ ನಿರ್ದೆಶನದ ಕಿರುಚಿತ್ರ

ನನ್ನ ಹೆಸರು ರಾಜಹಂಸ. ಮೂಲತಃ ಬೀದರ್ ದವನು. ಪ್ರಸ್ತುತ ಚಿಕ್ಕಬಳ್ಳಾಪುರದಲ್ಲಿ ನೆಲೆಸಿದ್ದೇನೆ. ಓರ್ವ ಕವಿ ಕೂಡ. ಈಗಾಗಲೇ ನಾಲ್ಕು ಕವನ ಸಂಕಲನಗಳನ್ನು ಪ್ರಕಟಿಸಿದ್ದೇನೆ. ಸಿನಿಮಾ ನಿರ್ದೇಶಕನಾಗಬೇಕೆಂಬುದು ನನ್ನ ಜೀವಮಾನದ ಕನಸು. ಈ ನಿಟ್ಟಿನಲ್ಲಿ ಕಳೆದ 10 ವರ್ಷಗಳಿಂದ ಪ್ರಯತ್ನಿಸುತ್ತಿದ್ದೇನೆ. ಈಗ “ನೋಡ್ ಬೇಡ” ಎಂಬ ಶೀರ್ಷಿಕೆಯ ಕಿರುಚಿತ್ರವೊಂದಕ್ಕೆ ಕಥೆ-ಚಿತ್ರಕಥೆ-ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದೇನೆ. ಜೊತೆಗೆ ನಾಯಕನಟನಾಗಿ ಅಭಿನಯಿಸಿದ್ದೇನೆ. ಇದು ನನ್ನ ಮೊದಲ ಪುಟ್ಟಪ್ರಯತ್ನ. ದಯವಿಟ್ಟು ಒಮ್ಮೆ ನೋಡಿ ಮತ್ತು ಸಾಧ್ಯವಾದರೆ ಈ ಕಿರುಚಿತ್ರದ ಕುರಿತು ಸರಿ ತಪ್ಪುಗಳ … Read more

ದಯೆಯೇ ಧರ್ಮದ ಮೂಲ (ಕೊನೆಯ ಭಾಗ): ಸುನಂದಾ ಎಸ್ ಭರಮನಾಯ್ಕರ

ಇಲ್ಲಿಯವರೆಗೆ ಕರುಣೆ ಇರುವುದು ಕೊಡುವುದರಲ್ಲಿ ಇಲ್ಲ:- ನಾವು ಬೇರೆಯವರಿಗೆ ತೋರಿಸುವ ಕರುಣೆ ಅವರನ್ನು ಆಶಕ್ತರನ್ನಾಗಿ, ಬಲಹೀನರನ್ನಾಗಿ ಮಾಡಬಾರದು ಅಷ್ಟೇ ಅಲ್ಲ, ನಮ್ಮ ದಯೆ ಅವರಲ್ಲಿ ದುಷ್ಟ ಆಲೋಚನೆಗಳನ್ನು ಹುಟ್ಟುಹಾಕಬಾರದು, ಹಾಗಾದಲ್ಲಿ ಅದಕ್ಕೆ ಸೂಕ್ತ ದಂಡನೆಯನ್ನು ನಾವೇ ಅನುಭವಿಸುತ್ತೇವೆ. ಅದಕ್ಕೊಂದು ಉತ್ತಮ ಉದಾಹರಣೆ ಇಲ್ಲಿದೆ. ಅರ್ಹತೆಯಿಲ್ಲದೆ ಏನನ್ನು ಪಡೆಯಬಾರದು ಹಾಗೇ ಅರ್ಹತೆಯಿಲ್ಲದವನಿಗೆ ಏನನ್ನು ಕೊಡಲೂಬಾರದು. ಸಾಧುವೊಬ್ಬ ಒಂದು ಗುಹೆಯಲ್ಲಿ ಕುಳಿತುಕೊಂಡು ಬಹಳ ಕಠಿಣವಾದ ತಪಸ್ಸನ್ನಾಚರಿಸುತ್ತಿದ್ದ ಆತ ಸಾಧನೆಯಲ್ಲಿ ಏಕಾಗ್ರತೆಯಿಂದ ತೊಡಗಿಸಿಕೊಂಡಿದ್ದನು. ಒಂದು ದಿನ ಅರಣ್ಯದಲ್ಲಿ ಬೇಟೆಯಾಡುತ್ತಾ ಬಂದ ರಾಜನೊಬ್ಬ … Read more

ಶಾಲಾ ಶೈಕ್ಷಣಿಕ ಯೋಜನೆ: ವೈ. ಬಿ. ಕಡಕೋಳ

ಸ್ವಂತ ಜ್ವಾಲೆಯಿಂದ ಉರಿಯುವ ದೀಪ ಮತ್ತೊಂದು ದೀಪವನ್ನು ಹೇಗೆ ಹೊತ್ತಿಸಲಾರದೋ ಹಾಗೆಯೇ ಸ್ವತಃ ಕಲಿಯದೇ ಇದ್ದ ಶಿಕ್ಷಕನು ಸಮರ್ಥವಾಗಿ ಬೋಧಿಸಲಾರ -ರವೀಂದ್ರನಾಥ ಠಾಗೂರ್ ಜೂನ್ ತಿಂಗಳು ಬಂತೆಂದರೆ ಶಾಲೆಗಳ ಪ್ರಾರಂಭ. ಇಲ್ಲಿ ಪಾಲಕರು. ಮಕ್ಕಳು ಶಿಕ್ಷಕರು ತಮ್ಮದೇ ಆದ ತಯಾರಿ ಮಾಡಿಕೊಳ್ಳುವ ಮೂಲಕ ಕಲಿಕಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸಿದ್ದರಾಗುವ ಸಮಯ. 2018-19 ಶೃಕ್ಷಣಿಕ ವರ್ಷ ಪ್ರಾರಂಭವಾಯಿತು. ಶಾಲೆ ಪ್ರಾರಂಭವಾಗುವ ಮೊದಲು ವೇಳಾಪತ್ರಿಕೆ, ವರ್ಗದ ಶೈಕ್ಷಣಿಕ ರೂಪರೇಷೆಗಳ ಅಂದಾಜು ಪತ್ರಿಕೆ,ಅಭ್ಯಾಸ ಪತ್ರಿಕೆ, ದಿನಚರಿ ಹೀಗೆ ಒಂದಲ್ಲಾ ಹಲವು ದಾಖಲೆಗಳ … Read more

ದಯೆಯೇ ಧರ್ಮದ ಮೂಲ (ಭಾಗ 1): ಸುನಂದಾ ಎಸ್ ಭರಮನಾಯ್ಕರ

ಇಂದು ಮಾನವ ಕಟುಕನಾಗಿದ್ದಾನೆ, ಕರುಣೆ, ಕನಿಕರ ಎಲ್ಲವೂ ಅವನಿಂದ ಮಾಯವಾಗಿದೆ ಎನ್ನುವುದು ಸತ್ಯ. ಅತೀ ಶ್ರೇಷ್ಠ ಎನಿಸಿಕೊಂಡ ಮಾನವ ಜೀವಿ ಕರುಣಾ ಮೂರ್ತಿ, ಸಹನಾಮಯಿ, ಸಂಘಜೀವಿ ಎಂದೆಲ್ಲಾ ಬಿರುದು ಪಡೆದಿರುವ ಮನುಷ್ಯ ಇಂದು ತನ್ನೆಲ್ಲ ಮೌಲ್ಯಯುತ ಗುಣಗಳನ್ನು ತೊರೆದು ರಾಕ್ಷಸ ಪ್ರವೃತ್ತಿಗೆ ಇಳಿದಿರುವುದು, ಹೇಯಕರ ಸಂಗತಿ. ನಮ್ಮ ಧರ್ಮಗಳು, ಪರಸ್ಪರ ಮಾನವರು ಮಾತ್ರವಲ್ಲ ಇಡೀ ಪ್ರಕೃತಿಯನ್ನೇ ಪ್ರೀತಿಸುವದಕ್ಕೆ ಹೆಚ್ಚು ಒತ್ತು ಕೊಟ್ಟಿವೆ. ಪ್ರಳಯ ಎದುರುಗೊಂಡರೂ ಕೈಯಲ್ಲಿರುವ ಸಸಿಯನ್ನು ನಾಟಿ ಮಾಡಿರೆಂದು ಹೇಳುತ್ತವೆ. ನಾವು ಬೆಳೆದ ಕೃಷಿಯನ್ನು ಮಾನವರು … Read more

ಪುದೀನ ರೈಸ್ ಮತ್ತು ಹಲಸಿನ ಹಣ್ಣಿನ ಪಾಯಸ ರೆಸಿಪಿ: ವೇದಾವತಿ ಹೆಚ್. ಎಸ್.

ಪುದೀನ ರೈಸ್. ಬೇಕಾಗುವ ಸಾಮಾಗ್ರಿಗಳು: ಪುದೀನ ಸೊಪ್ಪು ½ ಕಟ್ಟು ಕೊತ್ತಂಬರಿ ಸೊಪ್ಪು ½ ಕಟ್ಟು ಬೆಳ್ಳುಳ್ಳಿ 3 ಶುಂಠಿ 1ಇಂಚು ಹಸಿ ಮೆಣಸಿನಕಾಯಿ 4 ಈರುಳ್ಳಿ 1 ತೆಂಗಿನ ತುರಿ ½ ಕಪ್ ನೀರು ¼ ಕಪ್ ಇಷ್ಟನ್ನು ಹಾಕಿ ಮಿಕ್ಸಿಯಲ್ಲಿ ನುಣ್ಣಗೆ ರುಬ್ಬಿಕೊಳ್ಳಿ. ಉಳಿದ ಸಾಮಾಗ್ರಿಗಳು: ತುಪ್ಪ 3 ಚಮಚ ಗೋಡಂಬಿ ಸ್ವಲ್ಪ ಜೀರಿಗೆ 1 ಚಮಚ ಕಾಳುಮೆಣಸು 10 ಪಲಾವ್ ಎಲೆ 1 ಲವಂಗ 4 ಸ್ಟಾರ್ ಅನೈಸ್ 1 ಚಕ್ಕೆ ಒಂದಿಂಚು … Read more

ಪಂಜುವಿನ ಯುಗಾದಿ ವಿಶೇಷಾಂಕ

ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳೊಂದಿಗೆ… ಪಂಜುವಿನ ಯುಗಾದಿ ವಿಶೇಷಾಂಕ ನಿಮ್ಮ ಓದಿಗೆ.. ಈ ಸಂಚಿಕೆಯಲ್ಲಿ…. ಕಾವ್ಯಧಾರೆ 1 ಮಮತಾ ಅರಸೀಕೆರೆ ಮೌಲ್ಯ ಎಂ. ಗೋವಿಂದ ಹೆಗಡೆ ಪ್ರವೀಣಕುಮಾರ್ .ಗೋಣಿ ಷಣ್ಮುಖ ತಾಂಡೇಲ್ ಬೀನಾ ಶಿವಪ್ರಸಾದ ಶಿವಕುಮಾರ ಕರನಂದಿ ಮಾ.ವೆಂ.ಶ್ರೀನಾಥ ನಂದೀಶ್ ಮಾಧವ ಕುಲಕರ್ಣಿ, ಪುಣೆ ಸಂದೀಪ ಫಡ್ಕೆ, ಮುಂಡಾಜೆ ವಿಭಾ ವಿಶ್ವನಾಥ್ ಜಹಾನ್ ಆರಾ ಎಚ್.ಕೊಳೂರು ಆದಿತ್ಯಾ ಮೈಸೂರು ರಂಜಿತ ದರ್ಶಿನಿ ಆರ್. ಎಸ್ ಯಲ್ಲಪ್ಪ ಎಮ್ ಮರ್ಚೇಡ್ ಕುರಿಯ ಕಾಲು: ಜೆ.ವಿ.ಕಾರ್ಲೊ ಉದಾತ್ತ ಜೀವಿ ಪ್ಲಾಟಿಪಸ್: … Read more

ವಿದ್ಯಾಕಾಶಿಯೊಳಗ ಉಗಾದಿ, ಬಾರೋ ವಸಂತ ಬಾ……..!!!!!: ಡಾ. ಅನಿರುದ್ಧ ಸು ಕುಲಕರ್ಣಿ

ವಿದ್ಯಾಕಾಶಿ ಧಾರವಾಡ, ರಾಜ್ಯದ ಎರಡನೇ ಸಾಂಸ್ಕೃತಿಕ ನಗರಿ, ಮಲೆನಾಡಿಗೆ ದ್ವಾರ ಅಂದ್ರೆ ಧಾರವಾಡ, ಧಾರವಾಡ ಅಂದ ಕೂಡಲೇ ಎಲ್ಲಾರಿಗೂ ಮೊದಲ ನೆನಪು ಆಗುದು ಧಾರವಾಡ ಪೇಢ, ಕರ್ನಾಟಕ ವಿಶ್ವವಿದ್ಯಾಲಯ, ಮಾಳಮಡ್ಡಿಯ ವನವಾಸಿ ರಾಮದೇವರ ಗುಡಿ, ಉತ್ತರಾದಿಮಠ, ಸಾಧನಕೇರಿಯ ಬೇಂದ್ರೆ ಅಜ್ಜ, ಗೋಪಾಲಪುರದ ಬೆಟಗೇರಿ ಕೃಷ್ಣ ಶರ್ಮ, ನುಗ್ಗಿಕೇರಿ ಹನುಮಪ್ಪ, ಸೋಮೇಶ್ವರ ಗುಡಿ, ವಿದ್ಯಾಗಿರಿ, ಧರ್ಮಸ್ಥಳ ಆಸ್ಪತ್ರೆ., ಇನ್ನು ಅನೇಕ ಅವ. ಹೋಳಿಹುಣ್ಣಿಮೆ ಮುಂದೆ ಹಳೆಯ ಡ್ರೆಸ್ ಯಾವ ಇರತಾವ ಅವನ್ನ ಸ್ವಲ್ಪ ಇಸ್ತ್ರಿ ಮಾಡಿ, ಬಣ್ಣ ಆಡಲಿಕ್ಕೆ … Read more

ಆಧುನಿಕ ವಿಜ್ಞಾನಕ್ಕೆ ಸವಾಲಾದ ಪುರಾತನ ಸಲಕರಣೆಗಳು: ಆರ್.ಬಿ.ಗುರುಬಸವರಾಜ ಹೊಳಗುಂದಿ

21ನೇ ಶತಮಾನದಲ್ಲಿ ನಮ್ಮ ಪೂರ್ವಜರ ಹೆಚ್ಚಿನ ಸಹಾಯವಿಲ್ಲದೇ ನಾವು ಮಹತ್ತರವಾದ ಮತ್ತು ಪ್ರಬಲವಾದ ತಾಂತ್ರಿಕ ಸಾಮ್ರಾಜ್ಯವನ್ನು ಸಾಧಿಸಿದ್ದೇವೆಂದು ಭಾವಿಸುತ್ತೇವೆ. ಆದರೆ ಭಾವಿಸಿದಂತೆ ಇದು ಸತ್ಯವಲ್ಲ. ಇತ್ತೀಚಿನ ಸಂಶೋಧನೆ ಎಂದು ಹೇಳುವ ಬಹುತೇಕ ವಸ್ತುಗಳನ್ನು ನಮ್ಮ ಪೂರ್ವಜರು ಆಗಲೇ ಬಳಸಿದ್ದರು ಮತ್ತು ನಾವು ಈಗ ಯೋಚಿಸುವುದಕ್ಕಿಂತ ಮುಂಚಿತವಾಗಿ ಅವರು ವೈಜ್ಞಾನಿಕವಾಗಿ ಮುಂದುವರೆದಿದ್ದರು ಎನ್ನುವುದಕ್ಕೆ ಕೆಲವೊಂದು ನಿದರ್ಶನಗಳು ದೊರೆಯುತ್ತವೆ. ಅಂತಹ ಕೆಲ ಸಲಕರಣೆಗಳೇ ನಮ್ಮ ಇಂದಿನ ಆಧುನಿಕ ತಂತ್ರಜ್ಞಾನಕ್ಕೆ ಹಾಗೂ ವಿವಿಧ ಸಂಶೋಧನೆಗಳಿಗೆ ಪ್ರೇರಣೆಯಾಗಿವೆ. ಹಾಗಾದರೆ ಆ ವಸ್ತುಗಳು ಯಾವುವು? … Read more

ಜೀವ ಜೀವನದ ಭಿನ್ನತೆಯೊಳಗಿನ ಸಂಭ್ರಮ: ಪಿ. ಕೆ. ಜೈನ್ ಚಪ್ಪರಿಕೆ

ಅಂದು ಪ್ರಕೃತಿಯು ತನ್ನ ವಸಂತಕ್ಕೆ ಕಾಲಿಟ್ಟ ಸಮಯ. ಆ ತಾಯಿಯು ತನ್ನೆಲ್ಲ ನೋವುಗಳನ್ನು ಮರೆತು ತನ್ನ ಸೌಂದರ್ಯವನ್ನು ಇಮ್ಮಡಿಗೊಳಿಸಿಕೊಳ್ಳುತ್ತಲ್ಲಿದ್ದಳು. ವಸಂತ ಎಂಬ ಪದವೇ ಹಾಗೆ. ಅವನಿಗೆ ಎಣೆ ಯಾರು? ಯಾರನ್ನಾದರೂ ಬಿಟ್ಟಿಹನೆ? ಸೃಷ್ಟಿಯ ರುವಾರಿಯಾದ ಬ್ರಹ್ಮನನ್ನೇ ಬಿಡದ ಮಾರ…ಪ್ರಕೃತಿಯನ್ನು ಬಿಡಬಲ್ಲನೆ? ಹಾಗೆಯೇ ವಸಂತಕ್ಕೆ ಕಾಲಿಟ್ಟ ಭೂಮಿ ತಾಯಿಯ ಜೊತೆ ಅನೋನ್ಯದಿಂದ ಜೀವಿಸುತ್ತಿದ್ದ ಪ್ರಾಣಿ ಪಕ್ಷಿಗಳು, ಗಿಡ ಮರಗಳಿಗೂ ಅದರ ಅನುಭವ ಆಗಬೇಕಲ್ಲವೇ… ಗಿಡ ಮರಗಳು ಮೈ ಕೊಡಗಿ ಚಿಗುರೊಡೆದು ಹಚ್ಚ ಹಸುರಿನಿಂದ ಕಂಗೊಳಿಸುತ್ತಿದ್ದವು…ಅವುಗಳನ್ನು ಅವಲಂಬಿಸಿದ ಪ್ರಾಣಿ ಪಕ್ಷಿಗಳಲ್ಲೂ … Read more

ಪ್ರಕೃತಿಯ ಹಾಡು: ಧನು ಮಲ್ಪೆ

ನೀವು ಎಂದಾದರೂ ಪ್ರಕೃತಿಯ ಸಂಗೀತ ಕೇಳಿದ್ದೀರಾ. . ? ಪಾಪ್ ಗೊತ್ತು ರಾಕ್‌ ಗೊತ್ತು ಇದ್ಯಾವುದಪ್ಪಾ ಹೊಸ ಪ್ರಕಾರದ ಸಂಗೀತ ಅಂತೀರಾ? ಹಾಗಾದರೆ ಇಲ್ಲಿ ಕೇಳಿ. ಪ್ರಕೃತಿಯ ಪ್ರತಿಯೊಂದು ಶಬ್ಧವೂ ಮಧುರ ಸಂಗೀತವೆ. ಆದರೆ ಸಿಟಿಯಲ್ಲಿ ಇರುವವರಿಗೆ ಆಟೋರಿಕ್ಷಾ ಬಸ್ಸುಗಳ ಇಂಜಿನ್ ಶಬ್ಧ, ಕರ್ಕಶ ಹಾರ್ನ್ ಬಿಟ್ಟು ಬೇರೆ ಶಬ್ದ ಮರೆತೇ ಹೋಗಿರಬಹುದು. ಪ್ರಕೃತಿಯ ಹಾಡು ಕೇಳಬೇಕಿದ್ದರೆ ನೀವು ಮಾನವ ನಿರ್ಮಿತ ಕೃತಕ ಶಬ್ಧಗಳೇ ಇಲ್ಲದ ದೊಡ್ಡ ಪರ್ವತವನ್ನೇರಬೇಕು ಅಥವಾ ಬಿಸಿಲೇ ನೆಲ ತಾಗದ ದಟ್ಟ ಅರಣ್ಯವನ್ನು … Read more

ಕುವೆಂಪು ಮತ್ತು ಕನ್ನಡ: ದೊರೇಶ್

 ಡಿಸೆಂಬರ್ 29 ಕುವೆಂಪು ಅವರ ಹುಟ್ಟುಹಬ್ಬವನ್ನು ನಾವು ಆಚರಿಸುತ್ತಿದ್ದೇವೆ. ಆದಿಕವಿ ಪಂಪನಿಂದ ಸಶಕ್ತ ಕಾವ್ಯ ಮಾರ್ಗವನ್ನು ಕಂಡುಕೊಂಡ ಕನ್ನಡ ಸಾಹಿತ್ಯವು ಅಗಾಧವಾಗಿ ಬೆಳೆದಿರುವುದಷ್ಟೇ ಅಲ್ಲದೆ ಅನುಪಮ ಕೊಡುಗೆಯನ್ನು ವಿಶ್ವ ಸಾಹಿತ್ಯಕ್ಕೆ ನೀಡಿದೆ. ಈ ಕನ್ನಡದ ಸಾಹಿತ್ಯ ನದಿಯು ತನ್ನ ಸುದೀರ್ಘ ಪಯಣದಲ್ಲಿ ಆಚೀಚೆಯಿಂದ ಜಲದ್ರವ್ಯಗಳನ್ನು ಪಡೆದು ಮುಂದೆ ಸಾಗಿ ಸಾಗರವಾಗಿ ರೂಪುಗೊಂಡಿತು. ಆ ಸಾಗರದಲ್ಲಿ ಮುತ್ತುರತ್ನಗಳು ನಿರ್ಮಾಣವಾದವು. ಅದರಲ್ಲೊಂದು ಅದ್ಭುತ ಮುತ್ತು ಕುವೆಂಪು.ಅವರ ಸಾಧನೆಯ ಪ್ರತಿಯೊಂದು ಹೆಜ್ಜೆಯಲ್ಲೂ ಕನ್ನಡ ಸಂಸ್ಕೃತಿಯ ದರ್ಶನವಾಗುತ್ತದೆ. ಕುವೆಂಪು ಅವರಷ್ಟು ಕನ್ನಡದ ಪರವಾಗಿ … Read more

ಕುಪ್ಪಳ್ಳಿಯ ಕವಿಶೈಲದ ಮರೆಯಲಾಗದ ನೆನಪುಗಳು: ವೈ.ಬಿ.ಕಡಕೋಳ

ಹತ್ತು ವರ್ಷಗಳ ಹಿಂದಿನ ನೆನಪು (2007) ಕುವೆಂಪುರ ಮನೆಯಲ್ಲಿ ಐದು ದಿನಗಳ ಕಾಲ ಸಂಶೋಧನ ವಿದ್ಯಾರ್ಥಿಗಳಿಗೆ ಕಮ್ಮಟವನ್ನು ಅನಿಕೇತನ ಕಟ್ಟಡದಲ್ಲಿ ಹಮ್ಮಿಕೊಳ್ಳಲಾಗಿತ್ತು. ಐದು ದಿನಗಳು ಕಮ್ಮಟದ ಜೊತೆಗೆ ಕವಿಮನೆಯನ್ನು ನೋಡುತ್ತ ಅಲ್ಲಿನ ವಾತಾವರಣದ ಜೊತೆಗೆ ಕುವೆಂಪುರವರ ಬದುಕಿನ ಘಟ್ಟಗಳ ಹಾಗೂ ಅವರ ಕೃತಿಗಳ ಓದು ನನಗೆ ಹಿಡಿಸಿತ್ತು. ಆ ಐದು ದಿನಗಳ ಅವಧಿಯ ನಂತರ ಆ ಸ್ಥಳ ಪರಿಸರ ಬಿಟ್ಟು ಬರುವಾಗ ಕವಿಸ್ಮøತಿಯನ್ನು ಮನದಲ್ಲಿ ಹೊತ್ತು ಹೊರಬರಬೇಕಾಯಿತು.ಆ ದಿನ ಅವರ ಹುಟ್ಟು ಹಬ್ಬದ ಸಡಗರ ಎಲ್ಲ ಶಿಬಿರಾರ್ಥಿಗಳೊಡನೆ … Read more

ಲೇಡೀಸ್ ಬೋಗಿ: ಪ್ರೇಮಾ ಟಿ ಎಮ್ ಆರ್

ರೈಲು ಸಿಳ್ಳೆ ಹೊಡೆಯುತ್ತ ಹೊರಟಿದೆ. ಲೇಡೀಸ್ ಬೋಗಿ ತುಂಬಿ ತುಳುಕುತ್ತಿದೆ. ಮುಚ್ಚಿದ  ಕಿಟಕಿ ಗಾಜಿನಮೇಲೆ ಮಳೆನೀರು ಧಾರೆಯಾಗಿ ಹರಿಯುತ್ತಿದೆ. ಒಳಗೆ ಬದುಕಿನ ಕಥೆಗಳು  ಮಾತುಗಳಾಗಿ ಬಿಚ್ಚಿಕೊಳ್ಳುತ್ತಿವೆ. ಇನ್ನಷ್ಟು ಕಥೆಗಳು ಸರದಿಯಲ್ಲಿವೆ. ಅವಳು ಕಸ್ತೂರಿ.  ಕಾವೇರಿಯಂತೆ ತಂಪಿನ ಹುಡುಗಿ. ಅವಳ ನಗು ರೇಶಿಮೆಯಷ್ಟು ನವಿರು. ಜುಳುಗುಡುವ ನೀರ ಮೈಮೇಲೆ ಮೂಡುವ ಸುಳಿಯಂಥ ಕೆನ್ನೆಗುಳಿ. ಕಸ್ತೂರಿ ಏಳನೇ ತರಗತಿ ಮುಟ್ಟುವದರೊಳಗೆ ಅಮ್ಮ ಮತ್ತೆ ನಾಲ್ಕು ಹೆತ್ತಿದ್ದಳು. ನಿತ್ಯದ ಗಂಜಿಗೆ ಅಮ್ಮ ಅಪ್ಪನಿಗೆ ನೆರಳಾಗಿ ನಡೆಯಬೇಕು  ಹೊರಗಿನ ದುಡಿತಕ್ಕೆ. ತಮ್ಮ ತಂಗಿಯರು  … Read more

ಇಲ್ಲಿಯವರೆಗೆ ಪಂಜುವಿಗಾಗಿ ಬರೆದವರ ಪಟ್ಟಿ

ಸಹೃದಯಿಗಳೇ, ಮುಂದಿನ ಜನವರಿ ತಿಂಗಳು 21ನೇ ತಾರೀಖು ಬಂದರೆ ಪಂಜು ಶುರುವಾಗಿ ಐದು ವರ್ಷವಾಗುತ್ತದೆ. ಈ ಐದು ವರ್ಷಗಳಲ್ಲಿ ಪಂಜು ತನ್ನದೇ ಆದ ದೊಡ್ಡ ಓದುಗ ಬಳಗವನ್ನೇ ಹೊಂದಿದೆ. ಹಾಗೆಯೇ ಇಲ್ಲಿಯವರೆಗೂ 680 ಲೇಖಕರು ವಿವಿಧ ಲೇಖನಗಳನ್ನು ಪಂಜುವಿಗಾಗಿ ಬರೆದಿದ್ದಾರೆ. ಆ ಅಷ್ಟು ಲೇಖಕರ ಲಿಸ್ಟ್ ಅನ್ನು ಈ ಕೆಳಗೆ ನೀಡಲಾಗಿದೆ. ನಿಮ್ಮೆಲ್ಲರ ಪ್ರೀತಿಯಿಂದ ಪಂಜುವಿನ ಪುಟಗಳ ಹಿಟ್ಸ್ ಇಲ್ಲಿಯವರೆಗೆ 33 ಲಕ್ಷಕ್ಕೂ ಅಧಿಕವಾಗಿದೆ. ಪಂಜುವಿನ ಮೇಲಿನ ನಿಮ್ಮ ಪ್ರೀತಿ ಹೀಗೆಯೇ ಇರಲಿ.  “ಪಂಜು” ಅಂತರ್ಜಾಲ ವಾರ ಪತ್ರಿಕೆಗೆ … Read more

ಬಲ್ಲವನೇ ಬಲ್ಲ ರಂಗದ ರುಚಿ: ಮಲ್ಲಮ್ಮ ಯಾಟಗಲ್, ದೇವದುರ್ಗ

    ರಂಗಭೂಮಿ ಎಂದರೆ ಬೇರೆ  ರೀತಿಯಲ್ಲಿ ಅರ್ಥೈಸಿಕೊಂಡಿರುವ  ಪಾಲಕರಿಗೆ ಮನವರಿಕೆ ಮಾಡುವವರು ಯಾರು ? ಶಾಲಾ ಕಾಲೇಜುಗಳಲ್ಲಿ ಇರುವ ವಿದ್ಯಾರ್ಥಿಗಳಿಗೆ ರಂಗಭೂಮಿಯ ರುಚಿಯನ್ನು ನೀಡಬೇಕೆಂದು ಪಿಯುಸಿ, ಪದವಿ ವಿದ್ಯಾರ್ಥಿಗಳಿಗೆ ಕುವೆಂಪುರವರ ಸ್ಮಶಾನ ಕುರುಕ್ಷೇತ್ರದ ನಾಟಕ ಮಾಡಿಸಿದಾಗ ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಮುಂದೆ ಧಾರವಾಡದಲ್ಲಿ ನಡೆದ ವಿಭಾಗೀಯ ಮಟ್ಟಕ್ಕೆ ಅಯ್ಕೆಯಾದ ಸಂದರ್ಭದಲ್ಲಿ ನನಗೇನು ರಂಗಭೂಮಿಯ ಬಗ್ಗೆ ಅಷ್ಟೊಂದು ಆಸಕ್ತಿ ಉಳಿದಿರಲಿಲ್ಲ. ಯಾಕೆಂದರೆ ಪಾಲಕರು ತಿಳಿದುಕೊಂಡ ನಾಟಕ ನಮ್ಮದಾಗಿರಲಿಲ್ಲ. ಅಂದು ಸಂಜೆ ಧಾರವಾಡದಲ್ಲಿ ಶೋ ಇತ್ತು. … Read more