ಬೆನ್ ಜಾನಸನ್‍ನ ನಾಟಕ- Every Man In His Humour- ಅವಿವೇಕತನಕ್ಕೆ ಕನ್ನಡಿ: ನಾಗರೇಖಾ ಗಾಂವಕರ
ಇಂಗ್ಲೆಂಡಿನ ಹಳೆಯ ಉಪನಗರ ಹಾಗ್ಸ್‍ಡೆನ್‍ನ ನೋವೆಲ್ಲ್ ವಯೋವೃದ್ದ, ಆದರೆ ಧೀಮಂತ, ವ್ಯವಹಾರಿಕ ಕಲೆಯಲ್ಲಿ ನಿಪುಣ. ಆತನ ಮಗ ತರುಣ ಎಡ್ವರ್ಡ. ಮಗನ ಆಸಕ್ತಿಗಳು ಆತನ ಶ್ರೇಯಸ್ಸು ಇವುಗಳ ಬಗ್ಗೆಯೇ ತಂದೆಯ ಮೊದಲ ಆದ್ಯತೆ. ಮಗನಿಗೆ ಆಪ್ತವಾಗಿರುವ ಕಾವ್ಯ ಸಾಹಿತ್ಯಗಳೆಲ್ಲವೂ ಆತನಿಗೆ ಉಪಯೋಗಕ್ಕೆ ಬಾರದ ಸಂಗತಿಗಳು. ಲಾಭವಿಲ್ಲದ ವಿದ್ಯೆ. ಅದರೊಂದಿಗೆ ಆತನ ಇನ್ನೊಂದು ಚಿಂತೆ ಸದಾ ಗಿಡುಗಗಳ ಪಳಗಿಸುತ್ತ ಕಾಲಹರಣ ಮಾಡುವ ಆತನ ಅಣ್ಣನ ಮಗ ಹಳ್ಳಿ ಗಮಾರ ಸ್ಟೀಫನ್ ಬಗ್ಗೆ. ಒಬ್ಬ ವ್ಯಾವಹಾರಿಕ ಚಾತುರ್ಯವುಳ್ಳ ನೊವೆಲ್ಲ್ ತಂದೆಯಾಗಿ … Read more