ಕನ್ನಡಿಗಳು: ಪ್ರಸಾದ್ ಕೆ.
ಕಳೆದ ಒಂದೆರಡು ತಿಂಗಳಿನಿಂದ ಇದು ತುಂಬಾ ಕಷ್ಟವಾಗಿಬಿಟ್ಟಿದ್ದರೂ ಅಭ್ಯಾಸವಾಗಿ ಹೋಗಿದೆ. ನನ್ನ ಸಮಸ್ಯೆಯೇನೆಂದರೆ ನಾನು ನೋಡುತ್ತಿರುವ ದೃಶ್ಯಗಳೆಲ್ಲಾ ತಿರುಗುಮುರುಗಾಗಿ ಕಾಣಿಸುತ್ತಿವೆ. ಮಿರರ್ ಇಮೇಜ್ ಅಂತೀವಲ್ಲಾ, ಆ ಥರಾನೇ. ಪುಸ್ತಕದಲ್ಲಿರುವ ಅಕ್ಷರಗಳು, ಬೀದಿಯ ಸೈನ್ ಬೋರ್ಡುಗಳು, ಕಟ್ಟಡಗಳಿಗೆ ಜೋತುಬಿದ್ದಿರುವ ಫಲಕಗಳು ಹೀಗೆ ಎಲ್ಲವೂ, ಎಲ್ಲೆಲ್ಲೂ ಕನ್ನಡಿಯಿಂದ ನೋಡಿದಂತೆ ಕಾಣುತ್ತಿವೆ. ಮಗುವೊಂದು ಮೊಟ್ಟಮೊದಲ ಬಾರಿಗೆ ನಡೆದಾಡಲು ಆರಂಭಿಸಿದಾಗ ಜಗತ್ತನ್ನು ಹೇಗೆ ಅಚ್ಚರಿಯಿಂದ ಕಣ್ಣರಳಿಸಿ ನೋಡುತ್ತದೆಯೋ ಹಾಗೇ ನನಗೂ ಅನುಭವವಾಗುತ್ತಿದೆ. ಎಲ್ಲವೂ ನಿಗೂಢ, ಎಲ್ಲವೂ ವಿಚಿತ್ರ. ಮೊದಲೊಮ್ಮೆ ಭಯಭೀತನಾಗಿದ್ದರೂ ಈಗ ಸಾಮಾನ್ಯವಾಗಿ … Read more