ಕೊಟ್ಟೂರ ಜಾತ್ರೆ ಮತ್ತು ಜಯಂತ: ಪಾರ್ಥಸಾರಥಿ ಎನ್

ಜಯಂತ ಅಮ್ಮನ ಕೈ ಹಿಡಿದು ನಡೆಯುತ್ತಿರುವಂತೆ ಸುತ್ತಲು ಕಾಣುತ್ತಿದ್ದ ರಂಗು ರಂಗು ಅವನ ಕಣ್ಣು ತುಂಬುತಿತ್ತು.  ಅಮ್ಮ, ಸರೋಜ ತನ್ನದೆ ರಸ್ತೆಯ ಅಕ್ಕಪಕ್ಕದ ಮನೆಯ ಗೆಳತಿಯರೊಡನೆ ಜಾತ್ರೆಯ  ಸಂಭ್ರಮ   ನೋಡಲು ಹೊರಟಾಗ ಜಯಂತನದೇ ಚಿಂತೆ ಸರೋಜಳಿಗೆ, ಮನೆಯಲ್ಲಿ ಬಿಟ್ಟು ಹೋಗುವಂತಿಲ್ಲ, ಕರೆದುಕೊಂಡು ಹೋಗುವಂತಿಲ್ಲ. ಅಂತಹ ವಯಸ್ಸು ಅವನದು. ಬೆಳೆಯುವ ವಯಸಿನ ಮಕ್ಕಳದೆ ಒಂದು ಸಮಸ್ಯೆ ಬಿಡಿ, ತೀರ ಚಿಕ್ಕ ಮಕ್ಕಳಾದರೆ ಅಮ್ಮಂದಿರು ಎತ್ತಿ ಸೊಂಟದ ಮೇಲೆ ಕೂಡಿಸಿಕೊಂಡು, ಆ ಕಡೆ ಈಕಡೆ ಎನ್ನುತ್ತ ಬಾರ ಬದಲಾಯಿಸುವಂತೆ, … Read more

ಸುಬ್ಬೀ ಮದುವೆ: ಕೃಷ್ಣವೇಣಿ ಕಿದೂರ್

   ಮಗಳನ್ನು  ಕರೆದುಕೊಂಡು  ರೈಲು  ಹತ್ತಿದ್ದ  ಭಟ್ಟರು  ಪ್ರಯಾಣದ ಉದ್ದಕ್ಕೂ  ಸುಬ್ಬಿ ಹತ್ತಿರ  ಒಂದೇಒಂದು  ಮಾತನ್ನೂ ಆಡಲಿಲ್ಲ.  ಅಪ್ಪನ  ದೂರ್ವಾಸಾವತಾರಕ್ಕೆ ಹೆದರಿ ಕೈಕಾಲು ಬಿಟ್ಟಿದ್ದ  ಅವಳು  ತೆಪ್ಪಗೆ  ಕುಸುಕುಸು  ಮಾಡುತ್ತ   ಮುಖ  ಊದಿಸಿಕೊಂಡೇ  ಕೂತಳು. ಎರ್ನಾಕುಲಂ   ನಿಲ್ದಾಣ  ಹತ್ತಿರವಾಗಿ ಇನ್ನೇನು  ಇಳಿಯುವ  ಹೊತ್ತು ಬಂತು ಅನ್ನುವಾಗ  ಭಟ್ಟರು  ಕೆಂಗಣ್ಣು  ಬಿಟ್ಟು  ಮಗಳತ್ತ  ದುರುಗುಟ್ಟಿದರು.                         " ಬಾಯಿ ಮುಚ್ಚಿಕೊಂಡು … Read more

ಅಳುವ ಧ್ವನಿಯು ಎಲ್ಲಿಂದ?: ಲತಾ ಆಚಾರ್ಯ

     ಅದೊಂದು ಹೆಚ್ಚು ಜನಸಂಚಾರವಿರದ ಪ್ರದೇಶ. ಸುತ್ತಲೂ ಗುಡ್ಡ, ಪೊದರುಗಳು. ಒಂದಕ್ಕಿಂತ ಒಂದು ವಿಭಿನ್ನ. ಆದರೂ ಸೂಕ್ಷ್ಮವಾಗಿ ನೋಡಿದರೆ ಅಲ್ಲೊಂದು ಮನೆ ಕಾಣುತ್ತಿತ್ತು. ಅಲ್ಲಿದ್ದವರು ಶಾಂತಿ ಅವಳ ಗಂಡ ರಘು ಮತ್ತು ಅತ್ತೆ ಕಮಲಮ್ಮ. ದಿನ ನಿತ್ಯದ ಮನೆಗೆ ಬೇಕಾದ ವಸ್ತುಗಳ ಖರೀದಿಗೆ ನಾಲ್ಕು-ಐದು ಕಿಲೋಮೀಟರ್ ನಡೆದುಕೊಂಡು ಬಂದು ಹೋಗಬೇಕಾಗಿತ್ತು. ಹೆಚ್ಚಿನವರು ಇದೇ ಕಾರಣಕ್ಕಾಗಿ ಅಲ್ಲಿಂದ ಬೇರೆ ಕಡೆಗೆ ತೆರಳಿದವರು ಮತ್ತೆ ಆ ದಾರಿಯತ್ತ ಕಣ್ಣು ಹಾಯಿಸಿರಲಿಲ್ಲ. ಹಾಗಿದ್ದರೂ ಕಮಲಮ್ಮನದು ಒಂದೇ ಹಟ. ಬೇರೆಲ್ಲೂ ಹೋಗಲಾರೆನೆಂಬುದು. … Read more

ನೀನಂದ್ರೆ ನನಗಿಷ್ಟ…: ಅನುರಾಧ ಪಿ. ಸಾಮಗ

ಈಗಷ್ಟೇ ನಿನ್ನೊಡನೆ ಮಾತಾಡಿ ಫೋನಿಟ್ಟು ಈಚೆಗೆ ಬರುತ್ತಿದ್ದೇನೆ ಗೆಳೆಯಾ. ಸಣ್ಣಪುಟ್ಟ ಅಲೆ ಸೇರಿ ಹೆದ್ದೆರೆಯಾಗುವಂತೆ ನನ್ನೊಳಗೆ ನಿನ್ನ ಬಗೆಗಿನ ಆಲೋಚನೆಗಳು ದಟ್ಟವಾಗುತಲೇ, "ಮನದಲ್ಲಿ ನೆನೆದವರು ಎದುರಲ್ಲಿ" ಎಂಬಂತೆ ನೀನು ಅಲ್ಲೆಲ್ಲಿಂದಲೋ ಸಂಪರ್ಕಿಸಿರುತ್ತೀಯಾ. ಇದು ಮೊದಲೆಲ್ಲ ತುಂಬ ಅಚ್ಚರಿಯೆನಿಸುತ್ತಿತ್ತು. ಈಗೀಗ ನಿನ್ನ ಕುರಿತಾದ ಒಂದೊಂದೇ ಯೋಚನೆ ಬರುಬರುತಾ ಕಾಡತೊಡಗಿ ತೀವ್ರವಾಗಿ ಆವರಿಸಿಕೊಳುತಲೇ ನಿನ್ನ ಕರೆಯ, ನಿನ್ನ ಸಂದೇಶವೊಂದರ ಅಥವಾ ಸಾಕ್ಷಾತ್ ನಿನ್ನ ಬರುವಿಕೆಯ ಗಾಢನಿರೀಕ್ಷೆಯೊಂದು ತನ್ನಷ್ಟಕ್ಕೆ ಮೂಡಿಬರುತ್ತದೆ. ಅದು ಹೇಗಿರುತ್ತದೆ ಅಂದರೆ, ಕತ್ತಲನ್ನು ಮೆಲ್ಲ ಸರಿಸುತ್ತಾ ನಾಕೂ ದಿಕ್ಕಿಂದ … Read more

ಆಗಸದಲ್ಲೊಂದು ಅಧೂರಿ ಕಹಾನಿ: ಪ್ರಸಾದ್ ಕೆ.

13 ಫೆಬ್ರವರಿ, 2016 ದೆಹಲಿಯ ಮಯೂರ್ ವಿಹಾರ್ ಎಂಬ ಪ್ರದೇಶದ, ಕೋಟ್ಲಾ ಹಳ್ಳಿಯ ಮೂರನೇ ಗಲ್ಲಿಯಲ್ಲಿ ತಲೆಯೆತ್ತಿರುವ ಕಟ್ಟಡದ ಐದನೇ ಮಹಡಿಯ ಮನೆಯೊಂದು ಆ ದಿನ ತುಸು ಹೆಚ್ಚೇ ಅನ್ನುವಷ್ಟು ಚಟುವಟಿಕೆಯಲ್ಲಿತ್ತು.  ನಾನು ಆಫ್ರಿಕಾದ ಮೂಲೆಯೊಂದರಲ್ಲಿರುವ ಲುವಾಂಡಾಗೆ ಉದ್ಯೋಗ ನಿಮಿತ್ತವಾಗಿ ತೆರಳುವ ತರಾತುರಿಯಲ್ಲಿದ್ದೆ. ಪ್ಯಾಕಿಂಗ್ ಬಹುತೇಕ ಮುಗಿದಿದ್ದರೂ ಬ್ಯಾಗಿನೊಳಗೆ ಇನ್ನೇನು ತುರುಕಬಹುದು ಎಂಬ ದುರಾಸೆಯಿಂದ ನನ್ನ ಕಣ್ಣುಗಳು ಮನೆಯ ಮೂಲೆಮೂಲೆಗಳನ್ನು ಜಾಲಾಡುತ್ತಿದ್ದವು. ನಾಲ್ಕೈದು ಭಾರದ ಪುಸ್ತಕಗಳು “ಬಾ ಬಾರೋ… ಎತ್ತಿಕೋ ನನ್ನ'' ಎಂದು ಮೌನವಾಗೇ ಬಲು ಪ್ರೀತಿಯಿಂದ … Read more

ಕಾಣದ ಕಣ್ಣಲಿ ಕಾಡುವ ಕಣ್ಣೀರು: ಕ.ಲ.ರಘು.

ಅದೊಂದು ದಿನ ಸಂಜೆ ನನ್ನ ಪಯಣ ಬೆಂಗಳೂರಿನ ಕಡೆಗೆ ಸಾಗಿತ್ತು. ನನ್ನ ಸಂಬಂಧಿಕರ ಮದುವೆಸಮಾರಂಭಕ್ಕೆ ಹೋಗಬೇಕಾಗಿದ್ದರಿಂದ ನನ್ನ ವೃತ್ತಿ ಮುಗಿಸಿಕೊಂಡು ಕೆಎಸ್‍ಆರ್‍ಟಿಸಿ ಬಸ್‍ಗೆ ಹತ್ತಿದೆ. ಮನಸಿಗೆ ಉಲ್ಲಾಸ ನೀಡುವ ಮೌನಗೀತೆ ಹಾಗೂ ಭಾವಗೀತೆಗಳನ್ನು ಕೇಳುವ ಹವ್ಯಾಸ ಸ್ವಲ್ಪ ಇರುವುದರಿಂದ ಏನಾಗಲಿ ಮುಂದೆ ಸಾಗು ನೀ ಎಂಬ ಗೀತೆಯನ್ನು ಕೇಳುತ್ತಾ ಪ್ರಯಾಣ ಆರಂಭವಾಗಿ ಚಂದಿರ ಬರುವ ವೇಳೆಗೆ ಬೇಂಗಳೂರು ತಲುಪಿದೆ.  ಪ್ರಯಾಣ ಅಲ್ಲಿಗೆ ಮುಗಿಯಲಿಲ್ಲ ಅಲ್ಲಿಂದ ನಮ್ಮ ಸಂಬಂಧಿಕರ ಕಾರಿನಲ್ಲಿ ಮದುವೆ ನಡೆಯುತ್ತಿದ್ದ ಸ್ಥಳಕ್ಕೆ ಹೊರಟೆ. ಹಿಂದೆ ಮುಂದೆ … Read more

ರೋಹಿಣಿ: ಸಾವಿತ್ರಿ ವಿ. ಹಟ್ಟಿ

ಆ ಒಂಟಿ ಕೋಣೆಯಲ್ಲಿ ಅವಳನ್ನು ಹೊರತುಪಡಿಸಿದರೆ, ಒಂದೆರಡು ತಟ್ಟೆ ಲೋಟಗಳು, ಒಂದೆರಡು ಪಾತ್ರೆಗಳು, ಪ್ಲಾಸ್ಟಿಕ್ ಕೊಡ, ಬಕೆಟ್, ಚೊಂಬು ಹಾಗೂ ಒಂದಷ್ಟು ಪುಸ್ತಕಗಳು ಮಾತ್ರ. ಕೋಣೆಯಲ್ಲಿ ನಿಃಶಬ್ದ ಕವಿದಿತ್ತು. ಅಪರೂಪಕ್ಕೆ ಕೈಜಾರಿಸಿದರೆ ಪಾತ್ರೆಗಳ ಸದ್ದಷ್ಟೆ. ಆ ಮೌನ ಅವಳನ್ನು ಅದೆಷ್ಟು ಹಿಂಸಿಸುತ್ತಿತ್ತೆಂದರೆ ಇನ್ನೂ ತಾಸು ಮುಂಚಿತವಾಗಿಯೇ ಕಾಲೇಜಿಗೆ ಹೊರಟು ಬಿಡುತ್ತಿದ್ದಳು. ಅಲ್ಲಿಯಾದರೆ ವಿದ್ಯಾರ್ಥಿಗಳ, ಸಹೋದ್ಯೋಗಿಗಳ ಒಡನಾಟ ಸಿಗುತ್ತದೆ. ಬಿಡುವಿನ ವೇಳೆಯಲ್ಲಿ ಗ್ರಂಥಾಲಯದಲ್ಲಿಯ ಪುಸ್ತಕಗಳಿರುತ್ತವೆ ಎಂಬುದು ರೋಹಿಣಿಯ ಯೋಚನೆಯಾಗಿರುತ್ತಿತ್ತು. ಆದರೆ ಅವಳಿಗೆ ಮೊದಲಿನಂತೆ ತನ್ಮಯಳಾಗಿ ಪಾಠ ಮಾಡಲಾಗುವುದಿಲ್ಲ. ಮೈಮರೆತು … Read more

ಕಂದನ ಕರೆ: ಲಾವಣ್ಯ ಸಿದ್ದೇಶ್ವರ್

ವಿಜಯ ನರ್ಸಿಂಗ್ ಹೋಮಿನ ಆಪರೇಷನ್ ಥಿಯೇಟರಿನ ಮುಂದೆ, ಪ್ರಭಾಕರ ಶತಪಥ ತಿರುಗುತ್ತಿದ್ದಾನೆ, ಸಾವಿತ್ರಮ್ಮ ಬೆಂಚಿನ ಮೇಲೆ ಏನಾಗುವುದೋ ಎಂಬ ಭಯದಲ್ಲಿ ತನ್ನ ಸೊಸೆ, ಮೊಮ್ಮಗುವಿನ ಸೌಖ್ಯಕ್ಕಾಗಿ ಕಣ್ಣೀರಿಡುತ್ತಾ ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ, ಒಳಗಿನಿಂದ ಗೌರಿಯ ಅಳು ಎಂಥವರನ್ನು ಕರಗಿಸುವಂತಿದೆ. ********* ಗೌರಿ, ಪ್ರಭಾಕರ್ ಮದುವೆಯಾಗಿ ಎಂಟು ವರ್ಷಗಳಾಗಿತ್ತು, ಆ ಮನೆಯಲ್ಲಿ ಇನ್ನೂ ಒಂದು ತೊಟ್ಟಿಲು ಕಂಡಿರಲಿಲ್ಲ, ಇದು ಸಾವಿತ್ರಮ್ಮನಿಗೂ ಬೇಸರದ ವಿಷಯವೇ ಆದರೂ ಸೊಸೆಗೆ ಚಿತ್ತವಧೆ ಮಾಡುವಂಥ ಸ್ವಭಾವದ ಹೆಣ್ಣಾಗಿರಲಿಲ್ಲ. ಆದರೂ ಹೋದಲ್ಲಿ, ಬಂದಲ್ಲಿ ಕಡೆ ನಿಮ್ಮ ಸೊಸೆಗಿನ್ನು … Read more

ಐಚ್ಚಿಕಮು: ಪಾರ್ಥಸಾರಥಿ ಎನ್

ಅದೇನೊ ಕೆಲವೊಮ್ಮೆ ಇಂತಹ ಅಚಾತುರ್ಯಗಳೆ ನಡೆಯುತ್ತದೆ.  ಆಂದ್ರದ ಯಾವುದೋ ಊರಿಗೆ ಹೋಗಿದ್ದವನು, ಬೆಂಗಳೂರಿಗೆ ವಾಪಸ್ಸು ಬರಲು ರೈಲು ಹತ್ತಿದ್ದೆ.  ಅದೇನು ನೇರವಾಗಿ ಬೆಂಗಳೂರಿಗೆ ಬರುವ ರೈಲಲ್ಲ ಬಿಡಿ. ಹೈದರಾಭಾದಿಗೆ ಬಂದು ಮತ್ತೆ ಬೆಂಗಳೂರು ಕಡೆ ಹೊರಡುವ ರೈಲು ಹಿಡಿಯಬೇಕಿತ್ತು.  ಮಧ್ಯಾನ್ಯದ ಊಟವು ಇಲ್ಲವಾಗಿ, ಕುಳಿತಲ್ಲೆ ಜೊಂಪು ಎಳೆಯುತ್ತಿತ್ತು.  ನಿದ್ದೆಗಣ್ಣಲ್ಲಿ ಎಚ್ಚರವಾಗಿ ನೋಡಿದರೆ ಎಲ್ಲರೂ ಕೆಳಗೆ ಇಳಿಯುತ್ತಿದ್ದರು.  ಅದೇ ಹೈದರಾಭಾದ್ ಇರಬೇಕೆಂದು ಯಾರನ್ನೋ ಕೇಳಿದೆ ಅವನು ಅದೇನು ಕೇಳಿಸಿಕೊಂಡನೊ  ’ಅವುನೂ ’ ಎನ್ನುತ್ತ ಇಳಿದುಹೋದ!,  ನಾನು ಸಹ ಬ್ಯಾಗ್ … Read more

ಅಯ್ಯಯ್ಯೋ.. ದೆವ್ವಾ…!!: ತಿರುಪತಿ ಭಂಗಿ

                       ಅಂದು ಮಟಮಟ ಮದ್ಯಾಹ್ನ  ಆಕಾಶದಲ್ಲಿ ಸೂರ್ಯ ಸೀಮೆ ಎಣ್ಣೆ ಸುರುವಿಕೊಂಡು ಅತ್ತೆಯ ಕಾಟ ಸಹಿಸಿಕೊಳ್ಳದ ಸೊಸೆ ಆತ್ಮಹತ್ತೆ ಮಾಡಿಕೊಂಡು ಧಗಧಗಿಸುವಂತೆ ಉರಿಯುತ್ತಿದ್ದ. ಡಾಂಬರ ರಸ್ತೆ  ಸ್ಮಾಶಾನ ಮೌನವಾಗಿ ಮಲಗಿತ್ತು. ಗಿಡಮರಗಳು ಮಿಲ್ಟಟ್ರೀ ಯೋಧರಂತೆ ವಿಶ್ರಾಮ್ ಸ್ಥಿತಿಯಲ್ಲಿ ನಿಂತುಕೊಂಡಿದ್ದವು. ಒಂದು ಎಲೆಯೂ ಅಲಗಾಡುತ್ತಿರಲಿಲ್ಲ. ಗಾಳಿ ಭೂಮಂಡಲದಿಂದ ಗಡಿಪಾರಾಗಿ ಹೋದಂತೆ ಇತ್ತು. ಅಂತ ಭಯಂಕರ  ರಸ್ತೆಯ ಮೇಲೆ ಒಂದು ಮೋಟಾರಿನ ಸುಳಿವಿಲ್ಲ. ಅಪ್ಪಿತಪ್ಪಿ ಆ … Read more

ತಾಯಿ ಭಾಗ್ಯ: ಸಾವಿತ್ರಿ ವಿ. ಹಟ್ಟಿ

-ಒಂದು- ಅಂವ ರಾತ್ರಿ ಆದ್ರ ಸಾಕು ಹೆದರಿದ ಮೊಲ ಆಕ್ಕಿದ್ದ. ಆಕಿ ಏನು ಕೇಳೂದ ಬ್ಯಾಡ ಹಸಿದ ಹೆಣ್ಣು ಹುಲಿ ಆಕ್ಕಿದ್ಲು. ಆಕೀ ಮೂಲಭೂತ ಬೇಡಿಕೆ ಅಂವಂಗ ಅತಿ ದುಬಾರಿದಾಗಿ ಕಾಣ್ತಿತ್ತು. ರಾತ್ರಿಯಾದ್ರ ಸಾಕು; ಬಡವರು ಸಂತೀಗಿ ಹೋಗುವಾಗ ಪುಡಿಗಾಸ್ನ ಎಣಿಸಿ ಎಣಿಸಿ ನೋಡಿಕೊಂಡು ಹೋಗುವಂಗ ಅಂವ ಇದ್ದಷ್ಟು ತನ್ನ ಗಂಡಸ್ತನನೆಲ್ಲಾ ಒಟ್ಟುಗೂಡಿಸಿಕೊಂಡು ಇವತ್ತರ ಆಕೀನ್ನ ತೃಪ್ತಿಪಡಿಸಲೇಬೇಕು ಅಂತ ಹೋದ್ರೂ ಆಕೀ ಬೇಡಿಕೆಯ ಕಾಲು ಭಾಗನಾದ್ರೂ ಪೂರೈಸದಾ ಹೈರಾಣಾಕ್ಕಿದ್ದ. ‘ನಿನ್ನ ಹಾಡು ಇಷ್ಟಾ ಹೋಗಾ ಮೂಳ’ ಅಂತ … Read more

ಸಾಬ್ಯ: ಶ್ರೀಮಂತ ರಾಜೇಶ್ವರಿ ಯನಗುಂಟಿ

                          ಅವನ ಹೆಸರು ಸಾಹೇಬಗೌಡ ಅಂತ. ಅವನನ್ನು ಪ್ರೀತಿಸುವವರು ಪ್ರೀತಿಯಿಂದ ಸಾಬು ಅಂತ ಕರೀತಾರೆ. ಮೊನ್ನೆ ಸಿಕ್ಕಿದ್ದ. ನಮ್ಮ ಪರಿಚಯದವರೊಬ್ಬರ ಮದುವೆಯಲ್ಲಿ. ಅವನೂ ಸಹ ನಮ್ಮ ಊರಿನವನೇ ಆದ್ದರಿಂದ ಊರಿನವರೆಗೂ ಹೋಗಿ ಎಲ್ಲರಿಗೂ ಆಮಂತ್ರಣವನ್ನು ಕೊಟ್ಟು ಅವನೊಬ್ಬನಿಗೆ ಕೊಡದಿರುವುದು ಸರಿಯೆನಿಸುವುದಿಲ್ಲವೆಂಬ ದೃಷ್ಟಿಯಿಂದ ಅವನಿಗೂ ಮದುವೆಗೆ ಆಹ್ವಾನಿಸಿ ಬರಲಾಗಿತ್ತು. ನಮ್ಮ ಪಾಡಿಗೆ ನಾವೂ ಆ ಕೆಲಸ ಈ ಕೆಲಸ ಅಂತ ಓಡಾಡಿಕೊಂಡಿದ್ವಿ. … Read more

ನೀಲಿ: ತಿರುಪತಿ ಭಂಗಿ

                                     ಮೊದಲ ಕೋಳಿ ಕೂಗಿತು. “ಅಯ್ಯೋ ಬೆಳಕ ಆತು. ಇಂದ ಬ್ಯಾರೆ ಅಮವಾಸಿ ಐತಿ ಹಾರಿಗೆಡಿಲಿ, ಈ ನಿದ್ದಿ ಒಂದ ನನಗ ದೆವ್ವ ಕಾಡಿದಂಗ ಕಾಡ್ತೈತಿ ನೋಡ, ಅಮವಾಸಿ ಅಡಗಿ ಮಾಡಬೇಕಾದ್ರ ಸೂರ್ಯಾ ನೆತ್ತಿ ಮ್ಯಾಲ ಬರ್ತಾನ” ಎಂದು ಗಡಬಡಿಸಿ ಹಾಸಗಿಯಿಂದ ಮ್ಯಾಲೆದ್ದು ನೀಲವ್ವ ಕಣ್ಣುಜ್ಜತೊಡಗಿದಳು. ತನ್ನ ಮಗ್ಗಲ ಮಲಿಗಿದ್ದ ಲಕ್ಕಪ್ಪ ಇನ್ನ … Read more

‘ನಿರ್ಧಾರ’: ರಮೇಶ್ ನೆಲ್ಲಿಸರ

'ನಂಗೊತ್ತಿತ್ತು ಒಂದ್ ದಿನ ನೀನು ಬಂದೇ ಬರ್ತೀಯ ಅಂತ' ಎಲ್ಲ ಸಂಬಂಧಗಳ ಬಂಧನವನ್ನು ಕಳಚಿ ಬಹುದೂರ ಸಾಗಿಬಂದ ಜಾಹ್ನವಿ,ರಾಘವ್ ತನ್ನನ್ನು ಏಂದಾದರೂ ಹುಡುಕಿಕೊಂಡು ಬಂದೇಬರುವನೆಂಬ ಆಸೆಯನ್ನು ಮನದ ಗರ್ಭದಲಿ ಸುಪ್ತ ಶಿಲಾಪಾಕದಂತೆ ಕಾಯ್ದಿಟ್ಟುಕೊಂಡಿದ್ದಳು. ಕಳೆದ ಹತ್ತು ವರ್ಷಗಳಿಂದ ಅನಾಥ ಮಕ್ಕಳ ಸೇವಾಸಂಸ್ಥೆ ನಡೆಸುತ್ತಿ‌ದ ಜಾಹ್ನವಿ ಮೊದಲ ಬಾರಿಗೆ ತನಗಾಗಿ ಇಷ್ಟೊಂದು ಖುಷಿಪಟ್ಟಿದ್ದಳು. ರಾಘವ್ ನ ಮುಖವನ್ನು ಕಣ್ತುಂಬಿಕೊಳ್ಳುತ್ತಿರುವಾಗಲೇ,ಹಿಂದೆ ಎಂದೋ ಕೀಲಿಹಾಕಿ ಭದ್ರಪಡಿಸಿ‌ದ್ದ ನೆನಪಿನ ಬಾಗಿಲು ತಂತಾನೆ ತೆರೆದುಕೊಂಡಿತು. ““““““““` ರಾಘವ್ ಹಾಗೂ ಜಾಹ್ನವಿ ಒಂದೇ ಕಾಲೇಜಿನಲ್ಲಿ ಕಲಿತದ್ದು,ರಾಘವ್ … Read more

ಶಾಲಿನಿ: ಶ್ರೀ, ಧಾರವಾಡ.

  ಸಂಜೆಗೆಂಪಿನ ಸೂರ್ಯ ಪೂರ್ವದಿಂದ ಪಶಚಿಮಕ್ಕೆ ಬಾಡಿಗೆಗೆ ಬಿಟ್ಟ ತನ್ನ ಕಿರಣಗಳನ್ನೆಲ್ಲ ಲೆಕ್ಕಹಾಕಿ ಹಿಂಪಡೆಯುತ್ತ ಮನೆಯ ಹಾದಿ ಹಿಡಿದಿದ್ದ. ಹುಬ್ಬಳ್ಳಿಯ ದುರ್ಗದಬೈಲಿನ ತುಂಬ ಬದಲಾಯಿಸಿದ ಚಹಾ ಪುಡಿಯ ಚಹಾ ಕುದಿಯುತ್ತ ತನ್ನ ಕಂಪನ್ನೆಲ್ಲ ಹರಡಿ ಸೂರ್ಯನಿಗೆ ಬೀಳ್ಕೊಟ್ಟು ಅಲ್ಲಿದ್ದವರನ್ನೆಲ್ಲ ತನ್ನ ಕಡೆಗೇ ಸೆಳೆಯುತ್ತಿತ್ತು. ಸಂಜೆಯಾಗುತ್ತಲೇ ಇಲ್ಲಿ ಹುಟ್ಟುವ ತಾತ್ಕಾಲಿಕ ಸಾಮ್ರಾಜ್ಯದಲ್ಲಿ ತರಾವರಿ ತಿನಿಸಿನಂಗಡಿಗಳು, ಮುಂಬೈಯಿಂದ ತರಿಸಿದ ಸೋವಿ ಬೂಟು, ಚಪ್ಪಲ್ಲು, ಜರ್ಕಿನ್ನುಗಳು, ದಾರಿಯ ಬದಿಗೆ ಬಿಕರಿಯಾಗುವ ಬ್ರ್ಯಾಂಡೆಡ್ ವಾಚುಗಳ ವಹಿವಾಟು ತನ್ನದೇ ತನ್ಮಯತೆಯಲ್ಲಿ ಸಾಗುತ್ತದೆ. ಈ ಪೇಟೆಯ … Read more

ಮಂಗಳಗೌರಿಯೂ ಫಾರಿನ್ ಸೊಸೆಯೂ: ಪಾರ್ಥಸಾರಥಿ ಎನ್

ಗೆಳೆಯ ಶಿವರಾಜ್ ಮನೆಗೆ ಹೋಗಿ ತುಂಬಾ ದಿನಗಳೆ ಕಳೆದಿದ್ದವು. ಅವನು ಮೊದಲಾದರು ದಿನಾ ಅಂತ ನಮ್ಮ ಮನೆಗೆ ಬರುತ್ತಿದ್ದವರು ಈಗ ರಿಟೈರ್ಡ್ ಆದಮೇಲೆ ಕಾಣಿಸುತ್ತಲೇ ಇಲ್ಲ,  ’ನಾನು ರಿಟೈರ್ಡ್ ಆದ ಮೇಲೆ ತುಂಬ ಎಂಗೇಂಜ್ ಆಗಿ ಬಿಟ್ಟಿದ್ದೀನಿ ಯಾವುದಕ್ಕು ಸಮಯವಿಲ್ಲ ಅಂತ ಅವನ ಗೋಳಾಟ’  ಒಮ್ಮೆ ಮಾತನಾಡಿಸಿಯಾದರು ಬರೋಣ, ಇನ್ನು ನನ್ನ ಮುಖ ಮರೆತೀತು ಎಂದು ಬಾನುವಾರ ಅವರ ಮನೆಗೆ ಹೋದೆ. ಮುಂಬಾಗಿಲು ತೆರೆದಿತ್ತು, ಸೀದಾ ಒಳಗೆ ಹೋದೆ, ಯಾರು ಕಾಣಲಿಲ್ಲ ಅನ್ನುವಷ್ಟರಲ್ಲಿ, ರೂಮಿನಲ್ಲಿ ಸಣ್ಣ ಶಬ್ದ, … Read more

ಹೀಗೊಂದಿಷ್ಟು ಕಥೆಗಳು (ಕಥೆಗಳಾ !!?) … : ಸುನೀತಾ ಮಂಜುನಾಥ್

ಹೀಗೊಂದಿಷ್ಟು ಕಥೆಗಳು ಪುಟ್ಟ ಪಾದಗಳಿಗೆ ಗೆಜ್ಜೆ ತೊಡಿಸಿದ್ದ ಅಪ್ಪ 'ಮಹಾಲಕ್ಷ್ಮಿಯ ಕಾಲು ಅಂತ ಮುತ್ತಿಟ್ಟಿದ್ದ  …  ಮದುವೆಯಾದ ವರ್ಷದೊಳಗೆ ಕುಡಿತ ಚಟವಾಗಿದ್ದ ಮಾವ ತೀರಿ ಹೋದ ಅತ್ತೆ ಮೈದುನಂದಿರು 'ಅದ್ಯಾವ ಘಳಿಗೆಯಲ್ಲಿ ಕಾಲಿಟ್ಟಳೋ ಮಾವನ್ನೇ ತಿಂದ್ಬಿಟ್ಲು' ಅಂತ ಮುಖ ಮುರಿದರು …  **** ಈವತ್ತು ಉಪವಾಸದ ಹಬ್ಬ (ಏಕಾದಶಿ )' ಅಂದ್ಲು ಅಮ್ಮ . ನಕ್ಕುಬಿಟ್ಟಳು   'ಅದೆಷ್ಟೋ ವರ್ಷಗಳಿಂದ  ದಿನಾ ಎರಡ್ಹೊತ್ತು ಉಪವಾಸ ಮಾಡ್ತಾನೆ ಇದ್ದೇವೆ . ಅದಕ್ಕೂ ಒಂದು ಹಬ್ಬ ಬೇಕೇ'   ಎಂಬಂತೆ … Read more

ಬ್ರೇಕಿಂಗ್ ನ್ಯೂಸ್ !!: ಜಯಶ್ರೀ ದೇಶಪಾಂಡೆ

ಮುಸ್ಸ೦ಜೆಯ ಮುಗಿಲು ಸೂರ್ಯನನ್ನು ಬೀಳ್ಕೊಟ್ಟು  ದಣಿವಾರಿಸಿಕೊಳ್ಲುವ ಹೊತ್ತಿನಲ್ಲಿ ಬಹುಶ: ದಾರಿ ತಪ್ಪಿರಬೇಕೆನಿಸಿ  ಮೇಲೆ ಒಮ್ಮೆ ದೃಷ್ಟಿ  ಹಾಯಿಸಿದ್ದಕ್ಕೂ  ಯಾರೋ ಪಿಸುದನಿಯಲ್ಲಿ ಮಾತಾಡಿದರೆ೦ಬ ಆಭಾಸವಾದದ್ದಕ್ಕೂ  ತಾಳೆಯಾಗಿತ್ತು. .ಯಾರಿರಬೇಕು ? ಅಥವಾ ಅದೊ೦ದು ಭ್ರಮೆಯೇ. . . ?              " ನಿಮ್ಮ ಧೈರ್ಯ ದೊಡ್ಡದು ಸ್ವಾಮಿ. . " ಅಚ್ಚರಿಯನ್ನು ಹೆಚ್ಚಿಸುತ್ತ ಸ್ವರ ಮು೦ದುವರಿಯಿತು, "ನಿಮಗೇ  ಸ್ವಾಮೀ ಹೇಳುತ್ತಿರುವುದು. . ನೀವು ಯಾರೆ೦ದು ನಾ ಕೇಳುವುದಿಲ್ಲ, ಆದರೆ ನೀವು ನೇರವಾಗಿ ಇಲ್ಲಿಗೇ … Read more

ಇವನು ಬದುಕಲೇ ಬೇಕು: ಜೆ.ವಿ.ಕಾರ್ಲೊ, ಹಾಸನ.

ಇಂಗ್ಲಿಷಿನಲ್ಲಿ: ರೊಆಲ್ಡ್ ದಾಹ್ಲ್ ಕನ್ನಡಕ್ಕೆ: ಜೆ.ವಿ.ಕಾರ್ಲೊ, ಹಾಸನ. ‘ಚಿಂತೆ ಮಾಡುವ ಅವಶ್ಯಕತೆಯೇ ಇಲ್ಲ. ಎಲ್ಲಾ ಸರಿಯಾಗಿದೆ.’ ವೈದ್ಯರು ಹೇಳುತ್ತಿದ್ದರು.. ಅವಳಿಗೆ ವೈದ್ಯರ ಸ್ವರ ಗಟ್ಟಿಯಾಗಿ, ಬಹಳ ದೂರದಿಂದೆಂಬಂತೆ ಕೂಗಿ ಹೇಳಿದಂತೆ ಭಾಸವಾಯಿತು. ‘ನಿನಗೆ ಗಂಡು ಮಗು ಹುಟ್ಟಿದ್ದಾನೆ!’ ವೈದ್ಯರು ಹೇಳಿದರು. ‘ಏನು?’ ಆಕೆ ಪ್ರಯಾಸದಿಂದ ಕೇಳಿದಳು.  ‘ಗಂಡು ಮಗು, ಗಂಡು ಮಗು. ಈಗ ಕೇಳಿಸಿತೇನು?’ ‘ಮಗು ಹೇಗಿದೆ ಡಾಕ್ಟರ್?’ ‘ಚೆನ್ನಾಗಿದೆ. ಚೆನ್ನಾಗಿದೆ.’ ‘ನಾನು ನೋಡಬಹುದೆ, ಡಾಕ್ಟರ್?’ ‘ಖಂಡಿತಾ, ಖಂಡಿತಾ. ಇನ್ನೊಂದು ಗಳಿಗೆ..’ ‘ಮಗು ಖಂಡಿತವಾಗಿಯೂ ಆರೋಗ್ಯದಿಂದೆಯಾ ಡಾಕ್ಟರ್?’ … Read more

ಅಂತ:ಕರಣ: ಕು.ಸ.ಮಧುಸೂದನ್

ಕಳೆದ ಒಂದು ತಿಂಗಳಿನಿಂದ ಶುರುವಾಗಿದ್ದ ರಾಮೇಗೌಡನ ಕಲ್ಲಿನ ಪುರಾಣ ಅವನ ಹೆಂಡತಿ ಮಗನ ತಲೆ ಕೆಡಿಸಿತ್ತು. ಅನ್ನ ಕಲೆಸಿ ಒಂದು ತುತ್ತು ಬಾಯಿಗಿಟ್ಟು ಅಗಿಯುತ್ತಿದ್ದಂತೆ, ‘ಅಯ್ಯೋ!ಕಲ್ಲು!ಕಲ್ಲು!’ ಅಂತ ರಾಮೆಗೌಡ ಕೂಗಾಡಲು ಪ್ರಾರಂಭಿಸುತ್ತಿದ್ದ. ಇದರಿಂದ ರೋಸತ್ತ ತಾಯವ್ವ ಪ್ರತಿ ಸಾರಿಯೂ ತಾನೇ ಅನ್ನ ಸಾರು ಕಲೆಸಿ ಒಂದೊಂದು ಅಗುಳನ್ನೂ ಹಿಚುಕಿ ನೋಡಿಊಟ ಬಡಿಸುತ್ತಿದ್ದಳು. ಅಷ್ಟಾದರು ಬಾಯಿಗಿಟ್ಟ ತುತ್ತನ್ನು ಉಗಿದು ಕಲ್ಲು, ಕಲ್ಲು ಎಂದು ಕೂಗಾಡುವುದನ್ನೇನು ರಾಮೇಗೌಡ ಬಿಟ್ಟಿರಲಿಲ್ಲ. ಜೊತೆಗೆ ‘ಬಡ್ಡೆತ್ತದೆ, ಬರೀ ಕಲ್ಲೇ ಉಣ್ಣಾಕಿಕ್ತಿಯಲ್ಲೇ ಬೇವಾರ್ಸಿ’ ಅಂತ ತಾಯವ್ವನ … Read more

ಸಾವ ಅರಸುತ್ತಾ……..: ರೋಷನ್ ಪೂಜಾರಿ

ಮರಳನ್ನ ಅಗೆದು ಅಗೆದು ರಾಶಿ ಮಾಡಿದ ಕಡೆಯಲ್ಲಿ  ನಿಧಾನವಾಗಿ ಹತ್ತುತ್ತಿರುವ, ಇರುವೆಗಳ ಸಾಲನ್ನ ತುಂಡರಿಸಿ ಹೋಗಿದ್ದು ಸಮುದ್ರದ ನೀರು …. ಅದೆಷ್ಟೋ ಬಾರಿ ಸಾರಿಕಾಳ ಕಾಲುಗಳನ್ನ ಮುಟ್ಟಿ ಹಿಂತಿರುಗಿ ಹೋದರು ಸಹ, ಸಮುದ್ರವನ್ನ ಕ್ಷಮಿಸುವ ಮನಸ್ಸು ಅವಳಿಗಿಲ್ಲವಾಗಿತ್ತು…..ಮದುವೆಯ ನಂತರದ ದಿನಗಳು , ಅವಳು ತನ್ನ ಜೀವನದಲ್ಲಿ ಕಳೆದ ಅತ್ಯಮೂಲ್ಯ ಕ್ಷಣ. ಹನಿಮೂನಿಗೆ ಒಂದು ವಾರ ಮುಂಚೆಯೇ ಇದ್ದ ಖುಷಿ, ಹನಿಮೂನು ಮುಗಿಸಿದ ಒಂದು ವಾರದ ನಂತರ ಇರಲಿಲ್ಲ. ವಿಧಿವಶರಾಗಿದ್ದ ತನ್ನ ಗಂಡನ ನೆನಪನ್ನ ಮರೆಯಲು, ಸಮುದ್ರದ ತಟಕ್ಕಿಂತ ಬೇರೆ … Read more

ತೆರೆದ ಕಿಟಕಿ: ಜೆ.ವಿ.ಕಾರ್ಲೊ

ಮೂಲ: ‘ಸಕಿ’ (ಹೆಚ್.ಹೆಚ್.ಮನ್ರೊ) ಅನುವಾದ: ಜೆ.ವಿ.ಕಾರ್ಲೊ ‘ಇನ್ನೇನು ಚಿಕ್ಕಮ್ಮ ಬರೋ ಹೊತ್ತಾಯ್ತು ಮಿಸ್ಟರ್ ನಟ್ಟೆಲ್. ಅಲ್ಲೀವರೆಗೂ ನೀವು ನನ್ನ ಕೊರೆತ ಕೇಳಲೇ ಬೇಕು. ಬೇರೆ ದಾರಿಯೇ ಇಲ್ಲ!’ ಎಂದಳು ಹುಡುಗಿ. ಅವಳಿಗೆ ಹದಿನಾಲ್ಕೋ, ಹದಿನೈದು ಆಗಿದ್ದಿರಬಹುದು. ವಯಸ್ಸೇ ಅಂತಾದ್ದು. ಚುರುಕಾಗಿದ್ದಳು. ಕಣ್ಣುಗಳಲ್ಲಿ ತುಂಟತನ, ಆತ್ಮವಿಶ್ವಾಸ ಭರಪೂರು ಎದ್ದು ಕಾಣುತ್ತಿತ್ತು. ಹುಡುಗಿಯ ದೃಷ್ಟಿಯಲ್ಲಿ ತೀರಾ ಮಂಕಾಗದಂತೆ ಏನಾದರೂ ಆಸಕ್ತಿ ಕೆರಳುವಂತಾದ್ದು ಹೇಳಲು ಅವನು ಮಾತುಗಳಿಗಾಗಿ ತಡಕಾಡಿದ. ಮನೋವ್ಯಾಕುಲತೆಯಿಂದ ಬಳಲುತ್ತಿದ್ದ ಅವನು ಈಗಷ್ಟೇ ಚೇತರಿಸಿಕೊಂಡಿದ್ದು, ವೈಧ್ಯರ ಸಲಹೆ ಮೇರೆಗೆ ವಿಶ್ರಮಿಸಿಕೊಳ್ಳಲು … Read more

ಕಗ್ರಾಸ ಹಿಡಿದ ಹೊತ್ತಲ್ಲಿ….: ಮಹಾದೇವ ಹಡಪದ

ನವಿಲುತೀರ್ಥದ ಈ ಮೂಲೆಯ ಹಳ್ಳಿಗೂ ಆ ಧಾರವಾಡ ಶಹರಕ್ಕೂ ಎಲ್ಲಿಂದೆಲ್ಲಿಯ ನಂಟು..?  ಅಪೂಟ ಮಳೆ ಹೋದಾಗಿನಿಂದ ಒಂದಳತಿ ನೆತ್ತಿ ಮ್ಯಾಗಳ ಸೂರ್ಯ ಇನ್ನೇನು ಬ್ಲಾಸ್ಟ ಆಗ್ತಾನೇನೋ ಅನ್ನೋ ಹಂಗ ಉರಿತಿದ್ದ. ರಸ್ತಾದ ಮ್ಯಾಲ ಬಿಸಿಲಗುದುರೆ ಅವಸರ ಮಾಡಿ ಓಡುತ್ತಿದ್ದರಿಂದ ಎಳೆಬಿಸಿಲು ರಣಹೊಡೆಧಂಗ ಹೊಡಿತಿತ್ತು. ಬಸ್ಸಿನ ಓಟವೂ, ನಿದ್ದಿಗೆಟ್ಟ ಹಸಿವು ಒಂದನಮೂನಿ ಕಸಾರಕಿ ಬಂದವರಂಗ ಹೊಟ್ಟಿಯಳಗ ಸುಳ್ಳಿ ಸುತ್ತುತ್ತಿದ್ದರಿಂದ – ಇದ್ದಬಿದ್ದದ್ದೆಲ್ಲ ಬಾಯಿಗೆ ಬಂದಂತಾಗಿ ವ್ಯಾ..ಕ ಎಂದು ಕಿಟಕಿಯೊಳಗ ಕಾರಿಕೊಂಡಳು. ಆಗ ಫ್ರೆಶ್ ಆಗಿ ಬಸ್ ಹತ್ತಿದವರ ಗರಿಗರಿ … Read more

ಅವ್ವ: ಸತೀಶ್ ಜೋಶಿ

ಅವ್ವ ನನ್ನನ್ನು ಕರೆದು ನನಗ ಸಲ್ಪು ಅಫು ತಂದು ಕೊಡು ಅಂದ್ಳು, ನಾ ಎಲ್ಲೆ ಸಿಗತದವ್ವಾ ಅಂದಾಗ ಬಾಯಿ ಮೇಲೆ ಸೆರಗಿಟ್ಟುಕೊಂಡು ಅಳಲು ಶುರು ಮಾಡಿದಳು. ನನಗೆ ಗಾಬರಿ ಆಗಿತ್ತೋ ಸಿಟ್ಟು ಬಂದಿತ್ತೋ ಈಗ ನೆನಪಿಲ್ಲ. ಅಫು ಅಂದ್ರೇನಂತ ನಾನೂ ಕೇಳ್ಲಿಲ್ಲ, ಅವ್ವನೂ ಹೇಳ್ಲಿಲ್ಲ. ಆ ಅಫು ತರೋ ವಿಚಾರ ಮಾತ್ರ ಅಲ್ಲಿಗೇ ನಿಂತಿತ್ತು. ನಾನು ಆಗ ಪಿಯುಸಿ ಓದ್ತಿದ್ದೆ, ಅಂದ್ರೆ, ಅಷ್ಟು ದೊಡ್ಡವನಿದ್ದೆ, ಆದ್ರೂ ನನಗೆ ಅಫು ಬಗ್ಗೆ ಗೊತ್ತಿರಲಿಲ್ಲ. ಈಗಿನ ಜನರೇಷನ್ ಹುಡುಗರಿಗೆ ಹೋಲಿಸಿದರೆ … Read more

ಮಲೆನಾಡಿನ ಕಂದರಗಳ ನಡುವೆ: ವಿನೋದ್ ಕುಮಾರ್

..ಹೇ.. ಆಶೋಕ..ರಾಘು.. ಕವಿತಾ.. ಬೇಗ ಬನ್ರೇ.. ಇಲ್ಲಿದೆ ಅದು.. ಬೇಗ ಬನ್ನಿ.. ಸಕತ್ತಾಗಿದೆ ನೋಡೋಕೆ.. ಅಂತ ಕೂಗಿದಳು ವೀಣಾ.. ಮಲೆನಾಡಿನ ಕಾಡಿನ ಆ ಕಡಿದಾದ ಹಾದಿಯಲ್ಲಿ.. ಅದೂ ಜಾರು ರಸ್ತೆ ಬೇರೆ.. ವೀಣಾಳ ಕೂಗಿಗೆ.. ಕವಿತಾ ಮತ್ತು ರಾಘು ಕೂಡಲೇ ವೀಣಾ ಇದ್ದ ಸ್ಥಳಕ್ಕೆ ತಲುಪಿದರು.. ಎಲ್ಲೇ ವೀಣಾ.. ಎಲ್ಲೇ ತೋರಿಸೇ ಬೇಗ.. ಅದೋ ಅಲ್ಲಿ ನೋಡಿ.. ಆ ಮತ್ತಿ ಮರದ ಬಲಭಾಗದ ದೊಡ್ಡ ಕೊಂಬೆ ಇದೆಯಲ್ಲ.. ಅದರ ತುದಿಯಲ್ಲಿ.. ಕೆಂಪು ಕಾಣ್ತಿದೆ ನೋಡಿ ಅದೇ.. ಮಲಬಾರ್ … Read more

ಮಾನಸಿ: ಮಹಾದೇವ ಹಡಪದ

        ಬರೋ…. ಬಂಧು ಬಳಗ ದೊಡ್ಡದು, ಆದ್ದರಿಂದ ಮದುವಿ ಮನಿ ತುಂಬ ಬರೇ ಹೊಯ್ಯ-ನಯ್ಯ ಮಾತುಕತೆ ಜೋರಾಗಿ ನಡೆದಿತ್ತು. ಅತ್ತಿ ಮಾವ ಬಂದ ಮಂದೀನ ಸಂಭಾಳಸಲಿಕ್ಕ ಮತ್ತು ಯಾವ ಅನಾನುಕೂಲ ಆಗಧಂಗ ನೋಡಕೊಳ್ಳಲಿಕ್ಕ ಒದ್ದಾಡೊ ಆ ಹೊತ್ತಿನಾಗ ಮನುಕುಮಾರ ಮತ್ತವನ ವಿಧವೆ ತಾಯಿ ಶಿವಕ್ಕ ಧೂಳಸಂಜಿ ಅಷ್ಟೊತ್ತಿಗೆ ಬಂದ್ರು. ‘ಇದೇನವಾ ಬೆಂಗ್ಳೂರು ಸೇರಿದ್ದ ಮಗರಾಯ ಅಪರೂಪಕ್ಕ ಅತ್ತಿ ಮನೀಗೆ ಬಂದನಲ’್ಲ ಸಣ್ಣತ್ತಿ ಚಾಷ್ಟಿ ಮಾಡಿದಳು. ಹೌದು ನಾಟಕ, ಹಾಡು, ಕುಣಿತ ಅಂತ ತಿರುಗೋ … Read more

ಕಾಡಹಾದಿ: ಮಹಾದೇವ ಹಡಪದ

ಆಷಾಢದ ಒಂದು ದಿನ ಹೊರಡಲು ನಿರ್ಧರಿಸಿ ಕೌದಿಯೊಳಗೆ ಮುಖವಿಟ್ಟು ಮಲಗಿದ. ಬಣ್ಣ-ಬಣ್ಣದ ಚೌಕಡಿಯೊಳಗೆ ಚಂದಮಾಮನ ಚಿತ್ರದಂತೆ ಗುಂಗುರು ಗುಂಗುರವಾಗಿ ನೂರಾರು ಆಲೋಚನೆಗಳು. ಸಗಣಿ ಸಾರಿಸಿದ್ದ ತಂವಟು ವಾಸನೆಯ ಕೋಣೆಯೊಳಗೆ ಬೀಡಿ ತುಂಡುಗಳೇ ನೆಲಹಾಸಿಗೆ. ಗುದ್ದು ಮುಚ್ಚಿದಷ್ಟು ನೆಲಗೆಬರಿ ತೂತು ಮಾಡುವ ಇಲಿಗಳು ಹಾಡಹಗಲಲ್ಲಿ ನಿರ್ಭಿಡೆಯಿಂದ ಓಡಾಡುತ್ತಲಿದ್ದವು. ಸತತ ಒಂಭತ್ತು ಸಲ ಪ್ರಯತ್ನಿಸಿ ಮೇಲೇರಿದ್ದ ಮಹ್ಮದನ ಕಾಲದ ಜೇಡ, ಜಂತಿ ತುಂಬೆಲ್ಲ ತನ್ನ ಹರಕು-ಮುರುಕು ಸಂಸ್ಥಾನಗಳ ಬಲೆ ಹೆಣೆದಿತ್ತು. ಹೂಸದಾಗಿ ಬಾಡಿಗೆಗೆ ಬಂದಾಗ ಸುಣ್ಣದ ಗೋಡೆಗೆ ಹಸಿರು ಡಿಸ್ಟೆಂಪರ್ … Read more

ಆಸರಕ್ಕೊಂದು ಬ್ಯಾಸರದ ನೆನಪು: ಮಹಾದೇವ ಹಡಪದ

ಶ್ರಾವಣದ ಜಿಟಿಜಿಟಿ ಮಳೀಗೆ ಧಾರವಾಡದ ಓಣಿಗಳೊಳಗೆ ರಾಡಿ ಹಿಡಿದಿತ್ತು. ಹಿಂಗ ನಿಂತ ಮಳಿ ಹಾಂಗ ಸುಳ್ಳಿ ಸುತಗೊಂಡು ರಪರಪ ಹೊಡಿತಿತ್ತು. ಬರೊ ತಿಂಗಳ ಒಂದನೇ ತಾರೀಖಿಗೆ ಖೋಲಿಯ ಬಾಡಿಗೆ ವಾಯಿದೆ ಮುಗಿಯೋದು ಇದ್ದುದ್ದರಿಂದ ನಾನು ಮತ್ತೊಂದು ಖೋಲಿ ತಪಾಸ ಮಾಡಲೇಬೇಕಿತ್ತು. ಅಗಸಿ ಓಣಿಯ ಕಡೀ ಮನಿ ಇದಾದುದರಿಂದ ಪ್ಯಾಟೀಗೂ ಮನೀಗೂ ಭಾಳ ದೂರ ಆಗ್ತಿತ್ತು. ಆಫಿಸಿನಿಂದ ಮಧ್ಯಾಹ್ನದ ಆಸರ-ಬ್ಯಾಸರಾ ಕಳಿಲಿಕ್ಕ ಮನಿಗೆ ಹೋಗಬೇಕಂದ್ರೂ ಅಡ್ಯಾಡೋದು ದೊಡ್ಡ ತ್ರಾಸ ಆಗತಿತ್ತು. ಹಂಗಾಗಿ ಎನ್.ಟಿ.ಟಿ,ಎಫ್, ಸಂಗಮ ಟಾಕೀಜ್ ಸುತ್ತಹರದು ಖೋಲಿ … Read more

ಹೀಗೊಂದು ಧರ್ಮ, ಜಾತಿ: ಪಾರ್ಥಸಾರಥಿ ಎನ್

’ನಿಮ್ಮದು ಯಾವ ಧರ್ಮ? ’  ’…. ಧರ್ಮವೆ?  ಹಿಂದೂ ಇರಬಹುದು’  ಆಕೆ ನನ್ನ ಮುಖವನ್ನು ವಿಚಿತ್ರವಾಗಿ ನೋಡಿದಳು.  ’ಇರಬಹುದು , ಅಂದರೆ ಏನು ಸಾರ್ ಸರಿಯಾಗಿ ಹೇಳಿ’  ಆಕೆಯ ಮುಖದಲ್ಲಿ ಅಸಹನೆ. ’ಸರಿ, ಹಿಂದೂ ಎಂದು ಬರೆದುಕೊಳ್ಳಿ’  ’ಮತ್ತೆ ಜಾತಿ ಯಾವುದು ಸಾರ್, ಅದರಲ್ಲಿ ಪಂಗಡ ಯಾವುದು ತಿಳಿಸಿ’  ’ಜಾತಿಯೆ ? ಯಾವುದೆಂದು ಸರಿಯಾಗಿ ತಿಳಿಯದು. ಪಂಗಡವು ಗೊತ್ತಿಲ್ಲ’  ಆಕೆಗೆ ನನ್ನ ಉತ್ತರದಿಂದ ರೇಗಿಹೋಯಿತು, ಆಕೆಯ ಸಹನೆಯೂ ಮೀರಿಹೋಗಿತ್ತು. ಬಿಸಿಲಿನಲ್ಲಿ ಅಲೆಯುತ್ತ ಮನೆಯಿಂದ ಮನೆಗೆ ಸುತ್ತುತ್ತ ಇದ್ದ … Read more

ಹರಕೆ ತೀರಿತ್ತು…! (ಕೊನೆ ಭಾಗ) : ಸಾವಿತ್ರಿ ವಿ. ಹಟ್ಟಿ

ನಾಗರಾಜ ಗದಗ್‍ಗೆ ಸ್ಥಳಾಂತರವಾದ ಮೇಲೆ ಮೊದಲ ದಿನಗಳಲ್ಲಿ ಮಂಕು ಬಡಿದವನಂತೆ ಕುಳಿತಿರುತ್ತಿದ್ದ. ಕ್ರಮೇಣ ಅವನು ಗೆಲುವಾಗತೊಡಗಿದ. ಮಕ್ಕಳೊಂದಿಗೆ ಬ್ಯಾಂಕ್ ರೋಡ್‍ನಲ್ಲಿರುವ ವಾಸು ಸ್ಟೋರ್‍ನಿಂದ ದೀಪಿಕಾಳಿಗೆ ಬೇಕಾಗುವ ಹೊಲಿಗೆ ಪರಿಕರಗಳನ್ನು ತರುವುದು, ಮಾರ್ಕೆಟ್‍ನಿಂದ ತರಕಾರಿ ತರುವುದು, ಸಾಯಂಕಾಲ ಹೆಂಡತಿ-ಮಕ್ಕಳೊಂದಿಗೆ ಪಂಚಾಕ್ಷರಿ ಗವಾಯಿಗಳ ಮಠಕ್ಕೆ ಹೋಗಿ ಅಜ್ಜನವರ ದರ್ಶನ ಪಡೆಯುವುದು… ಹೀಗೆ ಹೊಸ ದಿನಚರಿಯೊಂದಿಗೆ ಅವನು ಹೊಂದಾಣಿಕೆಯನ್ನು ಸಾಧಿಸತೊಡಗಿದ್ದ. ದೀಪಿಕಾಳ ಹೊಲಿಗೆ ವಿದ್ಯೆ ತನ್ನ ನಿಜವಾದ ವಿಸ್ತಾರವನ್ನು ವ್ಯಕ್ತಪಡಿಸುವ ಕಾಲ ಅದಾಗಿತ್ತು. ಆಕೆ ಮನೆಯ ಹತ್ತಿರದಲ್ಲೇ ಇರುವ ಪಠೇಲ್ ರೋಡ್‍ನಲ್ಲಿ, … Read more