ಚಾರ್ಲಟ್‌ಟೌನ್ – ಒಂದು ಬಣ್ಣದ ಕನಸು: ಡಾ. ಅಮೂಲ್ಯ ಭಾರದ್ವಾಜ್
ಚಾರ್ಲಟ್‌ಟೌನ್, ಕೆನಡಾ – ಇಲ್ಲಿನ ಬದುಕು ಅಕ್ಷರಶಃ ಬಣ್ಣಗಳ ನಡುವೆ ಜೀವಿಸಿದಂತಿದೆ ಎಂದರೆ ತಪ್ಪಾಗದು. ಊರೆಲ್ಲಾ ಹಾಲು ಚೆಲ್ಲಿದಂತೆ ಕಾಣುವ ಚಳಿಗಾಲವು, ಬೆಂಕಿಯ ರಶ್ಮಿಯೊಂದಿಗೆ ಬೆರೆತು ನಗುವ ಬೇಸಿಗೆ, ಕೋಗಿಲೆಯ ರಾಗದಲ್ಲಿ ಮೂಡುವ ಗೀಜುಗಾಲು, ಹೊಸ ಜೀವನಕ್ಕೆ ಶಕ್ತಿಯ ಉಡುಗೊರೆಯಾದ ವಸಂತ—ಪ್ರಕೃತಿಯೆಂಬ ಭಾಷೆಯಲ್ಲಿ ಇಲ್ಲಿ ಎಲ್ಲವೂ ಒಂದು ಅಪೂರ್ವ ಕವಿತೆಯಾಗಿ ಮೂಡಿಬರುತ್ತವೆ. ಮೈಸೂರಿನಲ್ಲಿ ವರ್ಷ ಪೂರ್ತಿ ಹಸಿರಿನ ಸಿರಿಯನ್ನೇ ಕಂಡ ನಾವು ಇಲ್ಲಿಗೆ ಬಂದಾಗ, ಕಾಲದೊಂದಿಗೆ ಬದಲಾಗುವ ಪ್ರಕೃತಿಯ ಬಣ್ಣ ಮತ್ತು ಆಕಾಶವೇ ದಿನಕ್ಕೊಂದು ಹೊಸ ಬಣ್ಣದಲ್ಲಿ … Read more