ಯಾರಪ್ಪನ ಮನೆ ಗಂಟು ಏನ್ ಹೋಗ್ಬೇಕಾಗೈತಿ: ಅಮರ್ ದೀಪ್ ಪಿ.ಎಸ್.
ಹೈಸ್ಕೂಲ್ ದಿನಗಳಲ್ಲಿ ನಮ್ಮ ಮೇಷ್ಟ್ರು ಒಬ್ಬರಿದ್ದರು. ಬಿಡಿ, ಒಬ್ಬರಲ್ಲ ಬಹಳ ಮಂದಿ ಗುರುಗಳಿದ್ದಾರೆ. ಅವರಲ್ಲಿ ಒಬ್ಬರು ಸಂಕಪ್ಪ ಅಂತಿದ್ದರು. ಈಗ ನಿವೃತ್ತಿಯಾಗಿ ನಮ್ಮೂರಲ್ಲೇ ಇದ್ದಾರೋ ಅವರ ಸ್ವಗ್ರಾಮ ಹಡಗಲಿ ತಾಲೂಕಿನ ಉತ್ತಂಗಿಯಲ್ಲಿದ್ದಾರೋ ಗೊತ್ತಿಲ್ಲ. ಅವರು ನಮ್ಗೆ ಗಣಿತ ವಿಷಯ ತಗಳ್ಳೋರು. ಆದರೆ ಅವರ ಇಂಗ್ಲೀಷು ಚೆನ್ನಾಗಿತ್ತು. ಎತ್ತರದ, ಸ್ಥೂಲ ದೇಹವನ್ನು ಹೊತ್ತು ಕ್ಲಾಸ್ ರೂಮಿಗೆ "ಎ ಸ್ಕ್ವೇರ್ ಪ್ಲಸ್ ಬಿ ಸ್ಕ್ವೇರ್ ಇಸ್ ಇಕ್ವಲ್ ಟು ………. " ಹೇಳುತ್ತಲೇ ಎಂಟ್ರಿ ಕೊಡುತ್ತಿದ್ರು. ಸುಮ್ನೆ ಕುಳಿತೆವೋ … Read more