ಹಿಮಾಲಯವೆಂಬ ಸ್ವರ್ಗ (ಭಾಗ 5): ವೃಂದಾ ಸಂಗಮ್
ಇಲ್ಲಿಯವರೆಗೆ ಅದು ಥಮ್ಸಾ ನದಿಯಂದು ಹೇಳಿದರು. ಲಂಡನ್ ನಗರದ ಥೇಮ್ಸ ನದಿಯನ್ನು ನೆನಪಿಸಿಕೊಂಡು ಥಮ್ಸಾ ನದಿಯನ್ನು ನೋಡಿದೆವು. ಭಾರತದಲ್ಲಿಲ್ಲದ್ದು ಲಂಡನ್ ನಲ್ಲೇನಿದೆ. ದೇವಸ್ಥಾನದ ಸುತ್ತಲು ಹುಲ್ಲು ಚಿಕ್ಕ ಚಿಕ್ಕ ಗುಡ್ಡೆಯಾಗಿ ಬೆಳೆದಿತ್ತು. ಸೀತೆ ಭೂಮಿಯ ಒಳಗೆ ಸೇರುವ ಸಮಯದಲ್ಲಿ, ಸೀತೆಯನ್ನು ಮೇಲೆತ್ತಲು ಆಕೆಯ ಕೂದಲನ್ನು ಹಿಡಿದು ಎಳೆದರಂತೆ ರಾಮ ಲಕ್ಷ್ಮಣರು. ಅದು ಹಿಡಿ ಹಿಡಿಯಾಗಿ ಅವರ ಕೈಲ್ಲಿಯೇ ಉಳಿಯಿತಂತೆ. ಅದೇ ಈ ಹುಲ್ಲು. ಅದನ್ನು ಈಗ ದನ ಕರುಗಳೂ ತಿನ್ನಲಾರವು ಎಂದರು. ಈಗ ಕೆಲ ದಿನಗಳ ಹಿಂದೆ … Read more