ಮೋಹಕ ತಿರುವು: ಕಮಲ ಬೆಲಗೂರ್.
ಪಾರ್ವತಿ ಒಲೆಯ ಮುಂದೆ ಕುಳಿತು ರೊಟ್ಟಿ ಮಾಡ್ತಿದ್ದಾಳೆ. ಯಾಂತ್ರಿಕವಾಗಿ ಕೈ ಕೆಲಸಮಾಡುತ್ತಿದ್ದರೂ ಮನಸ್ಸು ಗಾಢವಾದ ಯೋಚನೆಯಲ್ಲಿ ಸಿಲುಕಿದೆ. ಕಣ್ಣು ಗಳು ಉರಿಯನ್ನೇ ದಿಟ್ಟಿಸಿ ನೋಡುತ್ತಿವೆ. ಮನಸ್ಸು ಮಗನ ಬಗ್ಗೆ ಯೋಚಿಸುತ್ತಾ ಕೊರಗುತ್ತಿದೆ. ಮಗನ ಸಂಸಾರವನ್ನು ನೋಡುತ್ತಾ ಕಣ್ತುಂಬಿಸಿಕೊಳ್ಳಬೇಕೆಂಬ ಆಸೆ ಆಸೆಯಾಗಿಯೇ ಉಳಿದುಬಿಟ್ಟಿದೆ. ಪಾರ್ವತಿ ವಿಧವೆ. ಮಗ ಸೋಮು ಪ್ರತಿಭಾವಂತ. ಚಿಕ್ಕಂದಿನಲ್ಲಿಯೇ ಅಪ್ಪನನ್ನು ಕಳೆದುಕೊಂಡು ಬೆಳೆದ ಅವನಿಗೆ ಅಮ್ಮನೇ ಸರ್ವಸ್ವ. ಅಪ್ಪನ ಕೊನೆಯ ಆಸೆಯಂತೆ ಅವರ ಸ್ನೇಹಿತರ ಮಗಳೊಂದಿಗೆ ಅವನ ಬಾಲ್ಯ ವಿವಾಹವಾಗಿರುತ್ತದೆ. ತಂದೆಯ ಮರಣಾನಂತರ ಎರಡೂ ಕುಟುಂಬಗಳು … Read more