ಕವಿತೆ ಕಳ್ಳರಿದ್ದಾರೆ ಎಚ್ಚರಿಕೆ!!!: ನಟರಾಜು ಎಸ್. ಎಂ.

ಪಿಯುಸಿಯ ದಿನಗಳವು. ಯಾವುದೋ ಮುದ್ದು ಕನಸಿಗೆ ಬಿದ್ದು ಕವಿತೆ ಬರೆಯಲು ಶುರು ಮಾಡಿದ್ದೆ. ಬರೆದ ಕವಿತೆಯನ್ನು ತರಗತಿಯಲ್ಲಿ ಓದಬೇಕೆಂಬ ಹಪಹಪಿ ಇತ್ತು. ಅಂದು ಕ್ಲಾಸಿಗೆ ಸರ್ ಇನ್ನೂ ಬಾರದಿದ್ದ ಕಾರಣ ಕ್ಲಾಸಿನಲ್ಲಿ ಹರಟುತ್ತಾ ಕುಳಿತ್ತಿದ್ದ ಸಹಪಾಠಿಗಳಿಗೆ ಅಚ್ಚರಿಯಾಗುವಂತೆ ಡಯಾಸ್ ಬಳಿ ನಿಂತು "ಇವತ್ತು ಒಂದೆರಡು ಕವಿತೆ ಓದಬೇಕು ಅಂದುಕೊಂಡಿದ್ದೇನೆ" ಎಂದಿದ್ದೆ. ನನ್ನ ಮಾತಿಗೆ ಗಲಾಟೆಯಲ್ಲಿ ತೊಡಗಿದ್ದ ಕ್ಲಾಸ್ ಒಂದು ಹಂತಕ್ಕೆ ಸೈಲೆಂಟ್ ಆಗಿ ಹೋಗಿತ್ತು. ಹಿಂದಿನ ಬೆಂಚಿನ ಒಂದಿಬ್ಬರು ಗೆಳೆಯರು "ಎಲ್ಲಾ ಸೈಲೆಂಟ್ ಆಗ್ರಪ್ಪಾ ನಟ ಕವಿತೆ … Read more

ದಾರಿ ತೋರುವ ದುರಂತನಾಯಕ: ಚೈತ್ರಾ ಎಸ್.ಪಿ.

ಅವನೆಂದರೆ ಥಟ್ಟನೆ ನೆನಪಾಗುವುದು ಹೆಸರು ದುರಂತನಾಯಕ. ಮಹಾಕಾವ್ಯದ ದುರಂತನಾಯಕ. ಅಸಹಾಯಕ ಪರಿಸ್ಥಿತಿಯಲ್ಲಿ ಸಿಕ್ಕಿ ಒದ್ದಾಡಿದ ನತದೃಷ್ಟ.ಅವಮಾನಗಳಲ್ಲಿ ಬೆಂದು ಮಿಂದೆದ್ದವ. ತಿರಸ್ಕಾರಗಳನ್ನೆ ಕಂಡವ. ಹುಟ್ಟಿದಾಗ ತಾಯಿಗೆ ಬೇಡವಾದ. ಗುರುಕುಲದಲ್ಲಿ ಗುರುಗಳಿಗೆ ಬೇಡವಾದ.ಸ್ವಯಂವರದಲ್ಲಿ ಮೆಚ್ಚಿದ ಹುಡುಗಿಗೆ ಬೇಡವಾದ. ಹೇಗೆ ಬದುಕಿರಬಹುದು ತನ್ನ ಬಾಳನ್ನು ? ಬೇಸರದಲ್ಲೇ ? ಖಿನ್ನತೆಯಲ್ಲೇ ? ಕಂಡಿರದ ತಂದೆ-ತಾಯಿಗಾಗಿ ಹಂಬಲಿಸಿದನೇ ? ಮಾಡಿದ ತಪ್ಪಿಗಾಗಿ ಪರಿತಪಿಸಿದನೇ ? ಬೆರಳು ತೋರಿಸಿದರೆಂದು ಮರುಗಿದನೇ ? ಜನ್ಮದತ್ತವಾಗಿ ಐಶ್ವರ್ಯ, ಕ್ಷಾತ್ರಪಂಥದ ಹೆಗ್ಗುರುತಾದ ಎದೆಗವಚಗಳನ್ನು ಹೊತ್ತು ಬಂದರೂ ಸೂತಪುತ್ರನೆಂಬ ಹಣೆಪಟ್ಟಿಯಿಂದ ಕಂಗೆಟ್ಟನೆ … Read more

ಪಾಂಡದ ಪರಿ-ಬಿದಿರೆಂಬ ಸಿರಿ: ಅಖಿಲೇಶ್ ಚಿಪ್ಪಳಿ

ಕಳೆದ 2 ವರ್ಷದಿಂದ ಕಳಲೆ ತಿಂದಿಲ್ಲ. ಕಳಲೆ ತಿನ್ನುವುದು ಕಾನೂನುಬಾಹಿರವೆಂದು ಅಂದು ಕೊಂಡಿದ್ದ ದಿನಗಳವು. ಆದರೂ ಮಳೆಗಾಲ ಬಂತೆಂದರೆ ಕಳಲೆಗೆ ಮುಗಿಬೀಳುವುದು ನಡದೇ ಇತ್ತು ಮತ್ತು ಇದೆ. ಕಳಲೆಗಾಗಿಯಲ್ಲವಾದರೂ ರೈತರು ತಮ್ಮ ಸ್ವಂತ ಜಮೀನಿನಲ್ಲಿ ಬಿದಿರನ್ನು ನೆಟ್ಟು ಬೆಳೆಸಿರುತ್ತಾರೆ. ಅದರಲ್ಲಿ ಮೂಡುವ ಕಳಲೆಗಳ (ಬ್ಯಾಂಬೂ ಶೂಟ್) ಲ್ಲಿ ಕೆಲವನ್ನು ಕತ್ತರಿಸಿ, ಸಂಸ್ಕರಿಸಿ ತಿನ್ನುವ ವಾಡಿಕೆ ಮಲೆನಾಡಿನಲ್ಲಿ ಇದೆ. ಹಿಂದಿನ ವಾಡಿಕೆಯಂತೆ ಬಿದಿರು ಹೂ ಬಿಟ್ಟ ನಂತರದಲ್ಲಿ ಸಾಯುತ್ತದೆ. ಬಿದಿರು ಹೂ ಬಿಡುವುದು 60 ವರ್ಷಕ್ಕೊಮ್ಮೆ. 2013-14ರಲ್ಲಿ ಮಲೆನಾಡಿನ … Read more

ಏಕಾದಶಿ: ಗುಂಡುರಾವ್ ದೇಸಾಯಿ

‘ಲೇ ರಂಡೆಗಂಡಾ, ಎಂತಾ ಅನಾಹುತ ಮಾಡಿಬಿಟ್ಟಿ, ನನ್ನ ಜೀವಮಾನದ ಸಾಧನೆಯಲ್ಲಾ ಇವತ್ತು ವ್ಯರ್ಥ ಮಾಡತಿದ್ದೆಲ್ಲೋ    , ಕೃಷ್ಣ ಕೃಷ್ಣ ನೀನ ಕಾಪಾಡಬೇಕ¥!À’ ಅಂತ ಬಯ್ಯಕೋತ ಗುಡಿಯಿಂದ ಬಂದ್ಲು. ‘ಏನಾಯ್ತವ್ವ ಒಮ್ಮಿದೊಮ್ಮೆಲೆ, ಯಾಕ ಸಿಟ್ಟಿಗೆದ್ದು ದಾರ್ಯಾಗಿನಿಂದ ಕೂಗಿಕೊಂತ ಬರಕತಿದಿ, ಮೆಲ್ಲಕ ಬಾರವ್ವ, ಮೆಲ್ಲಕ ಮಾತಾಡು ’ ‘ನನ್ನ ಸುದ್ದಿ ಬಿಡು, ಎಂತ ಮೋಸ ಮಾಡಿಬಿಟ್ಟೆಲ್ಲೋ, ನೀನು ಬಾಳ ಶ್ಯಾಣೆ ಅಂತ ಮಾಡಿದ್ದೇ, ನಿನಗಿಂತ ನಿಮ್ಮಕ್ಕನ ವಾಸಿ. ನಿಮ್ಮಪ್ಪ ಹೋದ ಮ್ಯಾಲೆ ಪಂಚಾಂಗ ನೋಡಿ ತಿಥಿ ಲೆಕ್ಕ ಎಷ್ಟು ಕರೆಕ್ಟಾಗಿ … Read more

ಸಾವು: ಪ್ರಶಸ್ತಿ

ಸಾವೆಂಬುದು ಬೆನ್ನ ಹತ್ತಿ ಬರುತ್ತಿದೆಯಾ ಎಂಬ ಭಾವ ಪದೇ ಪದೇ ಕಾಡತೊಡಗಿತ್ತವನಿಗೆ. ಯದ್ವಾತದ್ವಾ ಟ್ರಾಫಿಕ್ ಜ್ಯಾಂನಿಂದ ರೈಲು ತಪ್ಪಿಸಿಕೊಂಡ ಬೇಜಾರಲ್ಲಿ ಬಸ್ಸಿಗೆ ಹೋದ ದಿನವೇ ರೈಲಿನ ಅಪಘಾತವಾಗಿ ಅದೆಷ್ಟೋ ಜನ ಅಸುನೀಗಿದ್ದರು. ಆ  ಆಘಾತ ಮನಸ್ಸಿನಿಂದ ಅಳಿಸೋ ಮುನ್ನವೇ ಇವ ರಿಸರ್ವ ಮಾಡಿಸಿದ್ದ ಬಸ್ಸು ಆಯತಪ್ಪಿ ಕೊರಕಲಿಗೆ ಜಾರಿದ ಸುದ್ದಿ ಕೇಳಿಬಂದಿತ್ತು. ಬೇಗ ಹೋಗಬೇಕಂದುಕೊಂಡ್ರೂ ಆ ಶುಕ್ರವಾರವೇ ವಿಪರೀತ ಲೇಟಾಗಿ ರಿಸರ್ವ್ ಮಾಡಿಸಿದ ಬಸ್ಸಿಗೆ ಹೋಗಲಾಗದ್ದಕ್ಕೆ ಅದೆಷ್ಟೋ ಶಾಪ ಹಾಕಿದ್ದವನಿಗೆ ಮಾರನೇ ದಿನದ ಪೇಪರ್ ನೋಡಿದಾಗ ಮತ್ತೊಮ್ಮೆ … Read more

ನಾಲ್ವರ ಕವನಗಳು: ಶಿದ್ರಾಮ ತಳವಾರ, ನೂರುಲ್ಲಾ ತ್ಯಾಮಗೊಂಡ್ಲು, ಮೆಲ್ವಿನ್ ಕೊಳಲಗಿರಿ, ಆಶಿತ್

ಪಯಣ ಎಲ್ಲೋ ನಡೆಯುತ್ತಿದೆ ನನ್ನೀ ಪಯಣ ಎಲ್ಲೆಂತೆನಗರಿವಿಲ್ಲವಾದರೂ ಇಲ್ಲೇ ಎಲ್ಲೋ ನಡೆಯುತ್ತಿದ್ದೇನೆ,,,,, ದಾರಿಯುದ್ದಕ್ಕೂ ಬರೀ ಕತ್ತಲು ಎಲ್ಲೆಲ್ಲೂ ಸ್ಮಶಾನ ಮೌನ ಕಾಣದಿಹ ಈ ದಾರಿಯಲ್ಲಿ ನನಗೆ ನಾನೇ ಪ್ರಶ್ನೆ, ಅಲ್ಲಲ್ಲಿ ನಾಯಿ ಊಳಿಡುತಿವೆ, ತಂಪು ಗಾಳಿಗೆ ಒಣಗಿದೆಲೆಗಳು ಪಟ ಪಟ ಉದುರುವ ಸದ್ದು ಬೇರೇನಿಲ್ಲ, ಆದರೂ,,, ಅದಾರೋ ನನ್ನ ಹಿಂಬಾಲಿಸುವಂತಿದೆ. ಇಲ್ಲೇ ಎಲ್ಲೋ ದೂರದಲ್ಲಿ ಬೆಂಕಿ ಹೊತ್ತಿಕೊಂಡಿದೆ ಬಹುಶ: ಹೆಣ ಸುಡುತಿರಬಹುದು ವಾಸನೆ ಮೂಗು ಕಟ್ಟುತಿದೆ ಯಾವುದೀ ತಾಣ ? ಕೆಟ್ಟ ಕನಸಿರಬಹುದು ಅಲ್ಲವೇ ? ಆದರೂ,,,, … Read more

ಗೆಲುವು ಸುಲಭಾನಾ?: ರೋಷನ್ ಅರೆಹೊಳೆ

ಅದ್ಭುತವಾದ ವಿಜಯವನ್ನು ಸಾಧಿಸಿದವರೆಲ್ಲ ಉನ್ನತ ಸ್ಥಾನದಿಂದ ಬಂದವರಲ್ಲ…! ತೀರಾ ಕೆಳಮಟ್ಟದಿಂದಾನೇ ಬಂದಿರುವವರು….! ಕಷ್ಟದ ಅರಿವಿದ್ದರೆ, ಜಯದ ರುಚಿ ಬೇಕು ಎನಿಸುವುದು. ಒಮ್ಮೆ ಕೆಲವು ಸಾಧಕರ ಬಗ್ಗೆ ತಿಳಿದುಕೊಂಡರೆ, ನಾವು ಎಲ್ಲಿದ್ದೇವೆ? ಎನ್ನುವಂತಹದ್ದು ಅರಿವಾಗುತ್ತದೆ. ಇಂದು ಜಗತ್ತಿನಾದ್ಯಂತ ಅತಿ ಹೆಚ್ಚು ಜನರು ಇಷ್ಟ ಪಡುವ ಆಟ ಫುಟ್ಬಾಲ್. ಸದ್ಯದ ಯುವಕರಿಗೆ ಫುಟ್ಬಾಲ್ ಅಲ್ಲಿ ಇಷ್ಟವಾಗುವ ಆಟಗಾರ "ಲೂಯಿಸ್ ಲಯೋನೆಲ್ ಆ್ಯಂಡ್ರೆಸ್ ಮೆಸ್ಸಿ" ಲೂಯಿಸ್ ರೊನಾಲ್ಡೊ ತರ ಆಕ್ರಮಣಕಾರಿ ಆಟಗಾರನಲ್ಲದಿದ್ದರೂ ಆತ ಜಗತ್ತಿಗೆ ಇಷ್ಟವಾಗುತ್ತಾನೆ….! ಇಷ್ಟರ ಮಟ್ಟಿಗೆ ಈತ ಜನಪ್ರಿಯನಾಗಲು … Read more

ಹನಿಯೂರು ಚಂದ್ರೇಗೌಡರ “ಸೋಲಿಗರು: ಬದುಕು ಮತ್ತು ಸಂಸ್ಕೃತಿ” ಕೃತಿಯ- ಒಂದು ವಿಮರ್ಶೆ: ಡಾ. ಕೆ.ಮಧುಸೂದನ ಜೋಷಿ

  ಬಹುಮುಖಿಯಾಗಿ  ಬಹುರೂಪಿಯಾಗಿ ಬೆಳೆದು ಬಂದ ಕನ್ನಡ ಸಾಹಿತ್ಯ ಕಾಲದಿಂದ ಕಾಲಕ್ಕೆ ತಕ್ಕಂತೆ ಬದಲಾಗುತ್ತ, ಪ್ರಸ್ತುತಗೊಳ್ಳುತ್ತ ಬಂದಿದ್ದರಿಂದಲೇ ಅದು ಜೀವಂತಿಕೆಯನ್ನು ಕಾಯ್ದುಕೊಂಡು 8 ಜ್ಞಾನಪೀಠಗಳನ್ನು ಏರಿ ಭರತೀಯ ಸಾಹಿತ್ಯ ಸಾಮ್ರಾಜ್ಯದ ಮೊದಲ ಚಕ್ರವರ್ತಿಯಾಗಿ ಮೆರೆದಿದೆ; ಮೆರೆಯುತ್ತಿದೆ. ಕಾವ್ಯ, ಕತೆ, ಕಾದಂಬರಿ, ನಾಟಕ, ವಿಮರ್ಶೆ, ಸಂಶೋಧನೆ, ಆತ್ಮಚರಿತ್ರೆ, ಜೀವನಚರಿತ್ರೆ, ಗೀತನಾಟಕ, ಕಥನಕವನ, ಪ್ರವಾಸಕಥನ, ಜನಾಂಗೀಯ ಅಧ್ಯಯನ…. ಹೀಗೆ ಹತ್ತು ಹಲವು ಮುಖಗಳಲ್ಲಿ ಹೊಮ್ಮಿಬಂದ ಕನ್ನಡ ಸಾಹಿತ್ಯವಾಹಿನಿ ಮೈದುಂಬಿಕೊಳ್ಳುತ್ತ, ಮನಗಳನ್ನು ತುಂಬುತ್ತ ಸಾಗಿದೆ. ಆದರೆ ಈ ಎಲ್ಲ ಸಾಹಿತ್ಯದ ಪ್ರಕಾರಗಳಲ್ಲಿಯೇ ಅಪರೂಪ … Read more

ಇರಲಾದರದ್ದು ಮಾಡಿ ಮೈ ಕೆರಕೊಂಡರಂತ…: ಗಾಯತ್ರಿ ಬಡಿಗೇರ

ಬಾಳಿನ ಹಾದಿಯಲ್ಲಿ ಸಂಬಂಧ, ಸ್ನೇಹ, ಪ್ರೀತಿ, ದ್ವೇಷ, ಸಿಟ್ಟು ಮತ್ತು ನೋವು-ನಲಿವು ಎಲ್ಲವೂ ಸಹಜ. ಕೆಲವೊಮ್ಮೆ ಕನಸದಾಗು ನೆನಸಿಕೊಂಡಿರಂಗಿಲ್ಲ ಹಂತಾ ದುರಂತ ನಡದ ಬಿಡ್ತಾವ. ಜೀವನಾ ಒಂದ ಚೌಕ್ಕಟನ್ಯಾಗ ಇರಬೇಕು. ಆದ್ರ ಚೌಕ್ಕಟ್ಟೆ ಜೀವನಲ್ಲ. ತಿಳ್ಕೊಬೇಕಾದ ವಿಷಯ ಹೇಳಲಾರದಷ್ಟ ಆದ. ಆದ್ರ ಕೇಳೊ ಮನಸ್ಸಗಳು ಪ್ರೀತಿ ಎಂಬ ಬೆಂಕಿಯಲ್ಲಿ ಬಿದ್ದು ಜಗತ್ತಿನ ಅರಿವಿಲ್ಲದೆ ನರಳತಿದಾವ. ಪ್ರೀತಿ ಮಾಡೋದ ತಪ್ಪಲ್ಲ. ಹಂಗಂತಾ ಪ್ರೀತಿನೇ ಜೀವನಾ ಅಲ್ರಿ. ಪ್ರೀತಿ ಮಾಡಿ ಅದೇನು ಸಾದಸ್ತಾರೋ? ಗೊತ್ತಿಲ್ಲ. ಆದ್ರ ಮನೆವರ ಹೊಟ್ಟೆ ಮಾತ್ರ … Read more

ಅಂತ:ಕರಣ: ಕು.ಸ.ಮಧುಸೂದನ್

ಕಳೆದ ಒಂದು ತಿಂಗಳಿನಿಂದ ಶುರುವಾಗಿದ್ದ ರಾಮೇಗೌಡನ ಕಲ್ಲಿನ ಪುರಾಣ ಅವನ ಹೆಂಡತಿ ಮಗನ ತಲೆ ಕೆಡಿಸಿತ್ತು. ಅನ್ನ ಕಲೆಸಿ ಒಂದು ತುತ್ತು ಬಾಯಿಗಿಟ್ಟು ಅಗಿಯುತ್ತಿದ್ದಂತೆ, ‘ಅಯ್ಯೋ!ಕಲ್ಲು!ಕಲ್ಲು!’ ಅಂತ ರಾಮೆಗೌಡ ಕೂಗಾಡಲು ಪ್ರಾರಂಭಿಸುತ್ತಿದ್ದ. ಇದರಿಂದ ರೋಸತ್ತ ತಾಯವ್ವ ಪ್ರತಿ ಸಾರಿಯೂ ತಾನೇ ಅನ್ನ ಸಾರು ಕಲೆಸಿ ಒಂದೊಂದು ಅಗುಳನ್ನೂ ಹಿಚುಕಿ ನೋಡಿಊಟ ಬಡಿಸುತ್ತಿದ್ದಳು. ಅಷ್ಟಾದರು ಬಾಯಿಗಿಟ್ಟ ತುತ್ತನ್ನು ಉಗಿದು ಕಲ್ಲು, ಕಲ್ಲು ಎಂದು ಕೂಗಾಡುವುದನ್ನೇನು ರಾಮೇಗೌಡ ಬಿಟ್ಟಿರಲಿಲ್ಲ. ಜೊತೆಗೆ ‘ಬಡ್ಡೆತ್ತದೆ, ಬರೀ ಕಲ್ಲೇ ಉಣ್ಣಾಕಿಕ್ತಿಯಲ್ಲೇ ಬೇವಾರ್ಸಿ’ ಅಂತ ತಾಯವ್ವನ … Read more

ಹಳೇ ಬಟ್ಟೆ ಮತ್ತು ಹೊಸಾ ಪರ್ಸು: ಅನಿತಾ ನರೇಶ್ ಮಂಚಿ

ಮಳೆಗಾಲ ಬಂತೆಂದರೆ ಹಳ್ಳಿಯವರಾದ ನಮಗೆ ಸ್ವಲ್ಪ ಬಿಡುವು ಸಿಕ್ಕಿದ ಹಾಗೆ. ಬೇಸಿಗೆಯಿಡೀ ತೋಟಕ್ಕೆ ನೀರು ಹನಿಸುವ ಕೆಲಸ, ಆ ನೀರಿನ ಪೈಪುಗಳು ತುಂಡಾದರೆ ಜೋಡಿಸುವ ಕೆಲಸ, ಅದಕ್ಕೆ ಬೇಕಾದ ಸಲಕರಣೆಗಳು ಇಲ್ಲದಿದ್ದರೆ ಪೇಟೆಗೆ ಓಡುವ ಕೆಲಸ ಹೀಗೆ ಒಂದರ ಹಿಂದೊಂದು ಅಂತ ಪುರುಸೊತ್ತೇ ಇರೋಲ್ಲ, ಜಿಟಿ ಪಿಟಿ ಮಳೆ ಬೀಳಲು ಸುರುವಾಯ್ತೆಂದರೆ ಈ ಕೆಲಸಗಳಿಗೆಲ್ಲ ಮುಕ್ತಿ ಸಿಕ್ಕಿದಂತಾಗುತ್ತದೆ. ಮೊದಲಿಗೆ ಸುಮ್ಮನೇ ಕುಳಿತು ದಿನ ದೂಡುವುದರಲ್ಲೇ ಸುಖ ಅನುಭವಿಸಿದರೂ ಮತ್ತೆ ನಿಧಾನಕ್ಕೆ ಹೊತ್ತು ಕಳೆಯುವುದು ಹೇಗಪ್ಪಾ ಅನ್ನುವ ಚಿಂತೆ … Read more

ಬದಲಾವಣೆ-ಬಟ್ಟಂಗಿಗಳು-ಸ್ವಂತಿಕೆ: ರಾಘವೇಂದ್ರ ತೆಕ್ಕಾರ್

ನಮ್ಮೊಂದಿಗೆ ಸದಾ ಇದ್ದು ತುಸು ಹೆಚ್ಚಾಗೆ ನಮ್ಮನ್ನು ಹೊಗಳುತ್ತಿರುವವರನ್ನು ತುಸು ದೂರವೆ ಇಡೋಣ. ಸುಮ್ಮನೆ ಸುಮ್ಮನೆ ಹಲುಬುವವರನ್ನು ನಿರ್ಲಕ್ಷಿಸೋಣ. ಅನುಕೂಲಕ್ಕೆ ತಕ್ಕಂತೆ ವ್ಯಕ್ತಿತ್ವವನ್ನ ಬದಲಾಯಿಸಿಕೊಳ್ಳುವ ಒಂದು ವರ್ಗದ ಜನರಿವರು. ಯಾವತ್ತು ಇಂಥವರನ್ನು ನಾವು ನಿರ್ಲಕ್ಷಿಸಿಕೊಂಡು ಮುಂದುವರಿಯುತ್ತೇವೆಯೊ ಅದು ನಮ್ಮಲ್ಲಿನ ಕ್ರೀಯಾಶೀಲತೆಯನ್ನು ಸಾಣೆ ಹಿಡಿಯುತ್ತಲೆ ನಾವು ಮುನ್ನಡೆಯುತಿದ್ದೇವೆ ಎಂಬುದರ ಅರ್ಥ. ಮನುಷ್ಯ ಹೊಸ ಸವಾಲುಗಳನ್ನು ಎದುರಿಸುತ್ತ ಕೆಲವೊಮ್ಮೆ ಗೊತ್ತಿದ್ದು ಇನ್ನೂ ಕೆಲವೊಮ್ಮೆ ತನಗೆ ಗೊತ್ತಿಲ್ಲದಂತೆ ಕೂಡ ತನ್ನೊಳಗೆ ಅಪ್ ಡೇಟ್ ಆಗುತ್ತಾನೆ ಇರುತ್ತಾನೆ.ಹಾಗೆ ನೋಡಿದಲ್ಲಿ ಹೊಸ ಬದಲಾವಣೆಗೆ ತೆರದುಕೊಳ್ಳದವರ್ಯಾರು?ಎಲ್ಲೋ … Read more

ಸಿಕಾಡ ಎಂಬ ಸಂಗೀತ: ಅಖಿಲೇಶ್ ಚಿಪ್ಪಳಿ

ಜೂನ್ ತಿಂಗಳಲ್ಲಿ ಮುಂಗಾರು ಪ್ರಾರಂಭವಾಗದೆ, ಈ ವರುಷದ ಗಿಡ ನೆಡುವ ಕಾರ್ಯಕ್ರಮ ಮುಂದಕ್ಕೆ ಹೋಯಿತು. ಅಂತೂ ಜುಲೈ ತಿಂಗಳಲ್ಲಿ ಮಳೆಗಾಲ ಶುರುವಾಯಿತೇನೊ ಎನಿಸಿ, ಗಿಡ ನೆಡುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು. ಮಳೆ ಬಂದು ಇಳೆಯೇನೋ ತಂಪಾಯಿತು. ಗಿಡ ನೆಟ್ಟ ಮೇಲೆ ಬಿರು ಬೇಸಿಗೆ ಶುರುವಾಯಿತು. ನೆಟ್ಟ ಗಿಡಗಳು ಇನ್ನೆರೆಡು ದಿನ ಮಳೆ ಬಾರದಿದ್ದಲ್ಲಿ ಸತ್ತೇ ಹೋಗುವ ಸಂದರ್ಭ. ಮನುಷ್ಯರ ಕತೆ ಹೀಗಾದರೆ, ಮಳೆಗಾಲದಲ್ಲೇ ಜನ್ಮ ತಳೆಯುವ ಅದೆಷ್ಟೋ ಕೀಟಗಳು ಸಂಕಷ್ಟಕ್ಕೆ ಸಿಲುಕಿದ್ದವೋ. ನಮ್ಮಲ್ಲಿ ಮಳೆಗಾಲದಲ್ಲಿ ಸಾಮಾನ್ಯವಾಗಿ ಕಂಡು … Read more

ಮೂವರ ಕವನಗಳು: ರವಿಶಂಕರ್.ಎನ್. ಕೆ., ಬಿದಲೋಟಿ ರಂಗನಾಥ್, ಸಿಪಿಲೆ ನಂದಿನಿ

ಬದುಕುವೆನು ನಾನು  ಬರೆಯುವ ಮೊದಲೇ ಮರೆತು ಹೋಗಿದೆ  ನನ್ನಿಷ್ಟದ ಸಾಲು , ಹೇಗೆ ಹೇಳಲಿ …? ಏನು ಮಾಡಲಿ…? ಜಿಗಿದಾಡುವ ಮನದ ಮೂಲೆಯಲ್ಲಿ ಜೋಕಾಲಿಯಂತೆ ಜೀಕುವಾಗ ನೀನು  ಸುಡುವ ಪ್ರೇಮದ ಒಡಲೊಳಗೆ ಕಾಡುವ ನಿನ್ನದೇ ನೆನಪಿನ ಜಗದೊಳಗೆ ತುಸು ಯಾಮಾರಿದಾಗ ಹೇಗೆ ಹೇಳಲಿ …? ಏನು ಮಾಡಲಿ …? ಜಗದ ಕೊನೆಯ ತುದಿಯ ಬಳಿ ನಿಂತು  ಕೂಗುವಾಗ ಸಾವಿರ ಸಲ ಹೇಳ ಹೆಸರಿಲ್ಲದಂತೆ ಮರೆತು ಹೋಗಿ ಬಿಡು  ಮತ್ತೆ ಬಾರದಂತೆ ನೀನು, ಬದುಕಬಹುದು ನಾನು. ನೀನಿಲ್ಲದೆ…! ಏನೂ … Read more

ಕುಂದ್ಲಳ್ಳಿ ಕೆರೆ: ಪ್ರಶಸ್ತಿ

ಒಂದಾನೊಂದು ಕಾಲದಲ್ಲಿ ಬೆಂಗಳೂರನ್ನೋದು ಉದ್ಯಾನನಗರಿ ಅನ್ನುವಂತೆಯೇ ಕೆರೆಗಳ ನಗರವೂ ಆಗಿತ್ತಂತೆ. ಈಗ ಕೆರೆಯಿದ್ದೆಡೆಯೆಲ್ಲಾ ಅಪಾರ್ಟುಮೆಂಟುಗಳೋ, ಸ್ಟೇಡಿಯಮ್ಮುಗಳೋ ತಲೆಯೆತ್ತಿ ಬೇಸಿಗೆ ಬರೋದ್ರೊಳಗೇ ನೀರಿಗೆ ಹಾಹಾಕಾರ. ಸಾವಿರ ಅಡಿ ಕೊರೆದ್ರೂ ಬೋರಲ್ಲಿ ನೀರಿಲ್ಲ ಅನ್ನೋ ಸಮಸ್ಯೆ ಒಂದೆಡೆಯಾದ್ರೆ ಇರೋ ಕೆರೆಗಳ ನೀರಿಗೂ ವಿಪರೀತ ಪ್ರಮಾಣದ ರಾಸಾಯನಿಕಗಳ ಸುರುವಿ ಅದನ್ನೂ ಹಾಲಾಹಲವಾಗಿಸುತ್ತಿರುವ ಸಮಸ್ಯೆ ಇನ್ನೊಂದೆಡೆ. ವೈಟ್ ಫೀಲ್ಡೆಂಬ ಏರಿಯಾವನ್ನೇ ತಗೊಂಡ್ರೆ ಸುತ್ತಲ ಏಳೆಂಟು ಕೆರೆಗಳಿದ್ದಿದ್ದನ್ನ ಕಾಣಬಹುದು(ಚಿತ್ರ:lakes around whitefield).ಇದ್ದಿದ್ದು ಅಂತ್ಯಾಕೇ ಹೇಳ್ತಿದೀನಾ ? ಇನ್ನೂ ಇಲ್ವಾ ಆ ಕೆರೆಗಳು ಅಂತ ಅಂದ್ರಾ … Read more

ಆಸ್ಪತ್ರೆಯಲ್ಲಿ ಹೀಗೊಂದು ಮಾತುಕತೆ…: ಎಚ್.ಕೆ.ಶರತ್

ಅದು ಆಸ್ಪತ್ರೆಯ ಜನರಲ್ ವಾರ್ಡು. ನಾಲ್ವರು ನಾಲ್ಕು ಪ್ರತ್ಯೇಕ ಹಾಸಿಗೆಗಳ ಮೇಲೆ ಮಲಗಿಕೊಂಡೇ ಮಾತಿಗಿಳಿದಿದ್ದಾರೆ. ಡಾಕ್ಟರ್ ಒಬ್ಬನ ಹೊಟ್ಟೆ ಭಾಗದಲ್ಲಿ ಅರ್ಧ ಅಡಿ ಉದ್ದ ಕೊಯ್ದು ಆಪರೇಷನ್ ಮಾಡಿದ್ದಾರೆ. ಮತ್ತೊಬ್ಬ ಬೈಕ್ ಮೇಲಿಂದ ಬಿದ್ದು ಬೆನ್ನಿನ ಮೂಳೆಗೆ ಪೆಟ್ಟು ಮಾಡಿಕೊಂಡಿದ್ದಾನೆ. ಇನ್ನೊಬ್ಬ ಬೇರೊಬ್ಬರ ತಪ್ಪಿಗೆ ತಾನು ನೋವು ಅನುಭವಿಸುತ್ತಿದ್ದಾನೆ. ರಸ್ತೆ ಬದಿಯಲ್ಲಿ ಸುಮ್ಮನೆ ನಿಂತಿದ್ದ ಅವನಿಗೆ ಬೈಕೊಂದು ಬಂದು ಗುದ್ದಿದ ಪರಿಣಾಮ ಹಣೆ ಹಾಗೂ ಕಾಲಿಗೆ ಪೆಟ್ಟಾಗಿದೆ. ಕಾಲಿನ ಚರ್ಮ ಕಿತ್ತು ಹೋಗಿದೆ. ತೊಡೆಯ ಚರ್ಮ ಕಿತ್ತು … Read more

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಮೊಳೆ ಒಂದು ಮೊಳೆ ಮತ್ತು ಒಬ್ಬ ಮನುಷ್ಯನ ನಡುವೆ ನಡೆದ ಸಂಭಾಷಣೆ ಇಂತಿದೆ: ಮೊಳೆ: “ಅನೇಕ ವರ್ಷಗಳಿಂದ ಈ ಫಲಕಕ್ಕೆ ಅಂಟಿಕೊಂಡಿರುವ ನಾನು ಭವಿಷ್ಯದಲ್ಲಿ ನನಗೆ ಏನಾಗಬಹುದೆಂಬುದರ ಕುರಿತು ಅನೇಕ ಸಲ ಕುತೂಹಲದಿಂದ ಆಲೋಚಿಸಿದ್ದೇನೆ.” ಮನುಷ್ಯ: “ನೀನು ಈಗ ಇರುವ ಸನ್ನಿವೇಶದಲ್ಲಿ ಅನೇಕ ಸಾಧ್ಯತೆಗಳು ಹುದುಗಿವೆ. ಯಾರಾದರು ಚಿಮುಟದಿಂದ ನಿನ್ನನ್ನು ಎಳೆದು ಹಾಕಬಹುದು, ನೀನಿರುವ ಫಲಕ ಸುಟ್ಟು ಹೋಗಬಹುದು, ನೀನಿರುವ ಫಲಕವನ್ನು ಹುಳು ತಿನ್ನಬಹುದು – ಹೀಗೆ ಅನೇಕ ಸಾಧ್ಯತೆಗಳಿವೆ. ಮೊಳೆ: “ಇಂಥ ಮೂರ್ಖ ಪ್ರಶ್ನೆಗಳನ್ನು … Read more

ಉಪವಾಸ ನಿರತ ಕಾಲ ರಂಜಾನ್: ಬಂದೇಸಾಬ. ಮೇಗೇರಿ ರಾಮಾಪುರ

ರಂಜಾನ್ ಮುಸ್ಲಿಮರ ಪಾಲಿನ ವಸಂತ ಮಾಸವಾಗಿದೆ. ರಂಜಾನ್ ಮಾಸವು ಪುಣ್ಯಗಳನ್ನು ಬಾಚಿಕೊಳ್ಳುವ ತಿಂಗಳಾಗಿದೆ. ಜಗತ್ತಿನ ಎಲ್ಲ ಮುಸ್ಲಿಮರು ಭಯ, ಭಕ್ತಿಯಿಂದ ಆಚರಿಸುವ ಹಬ್ಬ ಇದಾಗಿದೆ. ಈ ತಿಂಗಳಲ್ಲಿ ಮುಸ್ಲಿಮ್ ಬಾಂಧವರೆಲ್ಲ ಪುಳಕಿತಗೊಳ್ಳುತ್ತಾರೆ. ಏಕೆಂದರೆ ಇದು ಪವಿತ್ರ ಕುರ್‍ಆನ್ ಅವತರಿಸಿದ ಮಾಸ. ಒಳ್ಳೆಯ ಕೆಲಸಗಳನ್ನು ಮಾಡುತ್ತ ನಮಾಜ್, ದಾನ-ಧರ್ಮ(ಜಕಾತ್) ದಂತಹ ಪುಣ್ಯ ಕರ್ಮಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ವಿಶೇಷವಾಗಿ ರಂಜಾನ್ ತಿಂಗಳಲ್ಲೇ ಮಹಮ್ಮದ್(ಸ) ಪೈಗಂಬರರು ಈ ಮಾಸದಲ್ಲಿ ಬಲು ಉದಾರಿಗಳಾಗಿದ್ದರು ಎಂದು ಇತಿಹಾಸದಿಂದ ತಿಳಿದು ಬರುತ್ತದೆ. ಹಗಲು ರಾತ್ರಿಯೆಲ್ಲಾ ಸೃಷ್ಠಿಕರ್ತನ ಆರಾಧನೆಯಲ್ಲಿ … Read more

ಸಮಾಜವಾದಿ ಕ್ಯೂಬಾದ ವೈದ್ಯಕೀಯ ಕ್ರಾಂತಿ; ಜಗತ್ತಿಗೇ ಮಾದರಿ: ಜೈಕುಮಾರ್ ಹೆಚ್.ಎಸ್.

ಬೆಂಗಳೂರಿನಷ್ಟು ಜನಸಂಖ್ಯೆ ಹೊಂದಿರುವ ಪುಟ್ಟ ದೇಶ ಕ್ಯೂಬಾ ವೈದ್ಯಕೀಯ ರಂಗದಲ್ಲಿ ಮಾಡುತ್ತಿರುವ ಹೊಸ ಆವಿಷ್ಕಾರಗಳು ಮತ್ತು ಅದರ ವಿಶಿಷ್ಟ ಆರೋಗ್ಯ ವ್ಯವಸ್ಥೆಯ ಕಾರ್ಯಕ್ಷಮತೆ ಪ್ರತಿದಿನ ಸುದ್ದಿಯಲ್ಲಿವೆ. ಅಲ್ಲಿಯ ಜನರ ಜೀವಿತಾವಧಿ ಸುಮಾರು 78 ವರ್ಷ ಮತ್ತು ಅಲ್ಲಿನ ಹಲವು ಆರೋಗ್ಯ ಸೂಚ್ಯಂಕಗಳು ಅಭಿವೃದ್ಧಿ ಹೊಂದಿದ ದೇಶಗಳ ಮಟ್ಟದಲ್ಲಿದೆ. ಭೂಕಂಪ, ಚಂಡಮಾರುತ, ಇತ್ಯಾದಿ ವಿಪತ್ತಿನ ಕಾಲದಲ್ಲಿಯಂತೂ ವಿಶ್ವದಾದ್ಯಂತ ಕ್ಯೂಬಾದ ವೈದ್ಯರು ತಮ್ಮ ಅನುಪಮ ಸೇವೆಯಿಂದ ಮೇಲ್ಪಂಕ್ತಿಯಲ್ಲಿದ್ದಾರೆ. ಮಿಷನ್ ಐ ಹೆಸರಿನ ಕಾರ್ಯಕ್ರಮದಡಿ ಇತರೆ ದೇಶಗಳಲ್ಲಿ ಸುಮಾರು 35 ಲಕ್ಷ … Read more

ಸೋಮರಸಕ್ಕೆ ರಾಜಮಾರ್ಗ- ೨: ಆದರ್ಶ ಸದಾನ೦ದ ಅರ್ಕಸಾಲಿ

  ಸರ್ಕಾರಿ ಮದ್ಯದಂಗಡಿಯಿ೦ದ ಕೈಯಲ್ಲಿ ಬಾಟಲಿ ಹಿಡಿದುಕೊಂಡು ಹೊರಬಿದ್ದಾಗ ಮಳೆರಾಯ ಕರುಣೆತೋರುತ್ತಾ ತನ್ನ ವಿರಾಟರೂಪದಿ೦ದ ಸೌಮ್ಯರೂಪಧಾರಿಯಾಗಿದ್ದ. ಕೆಲವರು ತಮ್ಮ ಬಾಟಲಿಗಳನ್ನು ರದ್ದಿಪೇಪರನಲ್ಲಿ ಸುತ್ತಿದ್ದರೆ, ಕೆಲವರು ತಮ್ಮ ಟವೇಲ್ ನಲ್ಲಿ ಬಚ್ಚಿಟ್ಟಿದ್ದರು, ಇವರಡೂ ದೊರಕದ ಹಲವರು, ತ೦ತಮ್ಮ ಲು೦ಗಿಗಳಲ್ಲಿ ಆಶ್ರಯ ಕೊಟ್ಟು ಸ್ಮಗ್ಲರ್ ಗಳ ತರ ಹೊರಹೋಗುತ್ತಿದ್ದರು. ಸುಮ್ಮನೆ ಕೈಯಲ್ಲಿ ಹಿಡಿದುಕೊ೦ಡು ಹೋಗಿದ್ದರೆ ಅಷ್ಟೇನೂ ಸ೦ಶಯ ಬರುತ್ತಿರಲಿಲ್ಲವೇನೋ , ಆದರೆ ಬಾಟಲಿಗಳಿಗೆ ನೋಡುಗರ ದೃಷ್ಟಿ ತಾಕಬಾರೆನ್ನುವ ನೈತಿಕ ಹೊಣೆಗಾರಿಕೆಯೋ ಇಲ್ಲಾ ಸಮಾಜದಲ್ಲಿ ತಮ್ಮ ಇಮೇಜ್ ಗೆ ಮಡಿವಂತಿಕೆ ಮನಸ್ಥಿತಿಯಿರುವವರ … Read more

ವಾಸ್ತವಕ್ಕೆ ಮುಖಮಾಡದ ಸಾವುಗಳು: ರಾಘವೇಂದ್ರ ತೆಕ್ಕಾರ್

ಕಳೆದೆರಡು ವಾರದ ಎರಡು ದಿನಗಳಲ್ಲಿ ಎರಡು ಡೆತ್ ನೋಟ್ಗಳನ್ನು ನೋಡಿದೆ of course ಸಾವನ್ನು ಕೂಡ. ವಯಸ್ಸು ಆಜುಬಾಜು 24 ರಿಂದ 28ರ ಮಂದಿ. ಮಹಿಳೆ ಒಳಗೊಂಡಂತೆ ಮತ್ತೋರ್ವ. ಇಬ್ಬರು ವಿವಾಹಿತರು. 2ರಿಂದ 3 ವರುಷದ ದಾಂಪತ್ಯ ಜೀವನ ಇವರುಗಳದ್ದು. ನಾವೆಲ್ಲರೂ ಪ್ರೇಮಿಗಳು ಸಂಗಾತಿಗಳಾಗಲು ಸಾದ್ಯವಿಲ್ಲ ಮನೆಯವರು ಒಪ್ಪಲ್ಲ ಜಾತಿ ಸಮಸ್ಯೆ ಇತ್ಯಾದಿ ಇತ್ಯಾದಿ ಗಳಿಂದಾಗಿ ಆತ್ಮಹತ್ಯೆಗೆ ಶರಣಾಗುವದನ್ನು ಕೇಳಿಯೆ ಇರುತ್ತೇವೆ. ಆದರೆ ಇವಕ್ಕೆ ಹೊರತಾದದ್ದು ಮೇಲೆ ತಿಳಿಸಿದ ಎರಡು ಸಾವುಗಳು.ಕಾರಣ ಕೌಟುಂಬಿಕ ಕಲಹ, ಜೀವನದಲ್ಲಿ ಜಿಗುಪ್ಸೆ. … Read more

ನಾನು ಮತ್ತು ಅವನು……: ಚೈತ್ರಾ ಎಸ್.ಪಿ.

ಬದುಕಿನಲ್ಲಿ ಎಲ್ಲವನ್ನು ಸೀರಿಯಸ್ ಆಗಿ ತಗೋಳೋ ನಾನು ಕೆಲವೊಂದು ಸೀರಿಯಸ್ ವಿಚಾರಗಳನ್ನ ತಮಾಷೆಯಾಗಿ ತಗೊಂಡು ನನ್ನನ್ನ ಅದ್ಯಾವುದೋ ಲೋಕಕ್ಕೆ ಲಾಕ್ ಮಾಡ್ಕೊಂಡಿದ್ದೀನಿ ಅನ್ನಿಸ್ತಾ ಇದೆ. ಬೇಡವೆಂದರೂ ಮತ್ತೆ ಹಚ್ಚಿಕೊಂಡೆ. ಪ್ರೀತಿಯೆಂಬ ಮಾಯೆಯೊ, ಸಂತೋಷವೋ ಅಲ್ಲ ಕೊರಗೋ !! ಯಾವುದೋ ಒಂದು ಭಾವಕ್ಕೆ ಮಣಿದೆ. ಪ್ರೀತಿಸಿದೆ, ಮುದ್ದಿಸಿದೆ, ಗೋಳಾಡಿದೆ, ಕಣ್ಣೀರಾದೆ.  ನನ್ನೆಲ್ಲ ಹುಚ್ಚಾಟಗಳನ್ನು ತಿದ್ದಿ ಬುದ್ದಿ ಹೇಳಿ ಒಂದು ರೂಪ ಕೊಟ್ಟು, ಪ್ರೀತಿಯ ಧಾರೆಯೆರೆದು ನನ್ನನ್ನು ಧಾರೆಯೆರೆಸಿಕೊಳ್ಳಲಾರೆನೆಂಬ ದುಃಖದ ಕೂಪಕ್ಕೆ ತನ್ನನ್ನು ತಾನೇ ತಳ್ಳಿಕೊಂಡ ಆ ಜೀವಕ್ಕೆ ನಾ … Read more

ನಾನೋದಿದ ಹೊತ್ತುಗೆ ಪೆರುವಿನ ಪವಿತ್ರ ಕಣಿವೆಯಲ್ಲಿ: ಪ್ರಶಸ್ತಿ

ಬೇಸಿಗೆರಜೆ ಮತ್ತು ಚಳಿಗಾಲದ ರಜೆ ಬಂತು ಅಂದ್ರೆ ಎಲ್ಲಿಲ್ಲದ ಖುಷಿ ನಂಗೆ. ಅಜ್ಜಿ ಮನೆ, ದೊಡ್ಡಪ್ಪನ ಮನೆ ಅಂತ ಒಂದು ಕಡೆ ಇಂದ ಹೊರಟ್ರೆ ಅಲ್ಲಿಂದ ಹತ್ತಿರ ಇರ್ತಿದ್ದ ಮತ್ತೊಂದು ಮಾವನ ಮನೆ, ಅಲ್ಲಿಂದ ಮತ್ತೊಂದು ಚಿಕ್ಕಪ್ಪನ ಮನೆ ಅಂತ ಸುಮಾರಷ್ಟು ಕಡೆ ತಿರುಗಿ ರಜಾ ಮುಗಿಯೋ ಹೊತ್ತಿಗೆ ಮನೆ ತಲುಪುತ್ತಿದ್ದೆ. ದಿನಾ ಮನೆಗೆ ಫೋನ್ ಮಾಡಿ ಎಲ್ಲಿದ್ದೀನಿ ಅಂತ ಹೇಳ್ಬೋಕು ಅನ್ನೋದನ್ನ ಬಿಟ್ರೆ ಬೇರ್ಯಾವ ನಿರ್ಬಂಧಗಳೂ ಇಲ್ಲದ ಸ್ವಚ್ಛಂದ ಹಕ್ಕಿಯ ಭಾವವಿರುತ್ತಿದ್ದ ದಿನಗಳವು. ಮನೆ ಬಿಟ್ಟು … Read more

ಮೂವರ ಕವನಗಳು: ಕು.ಸ.ಮಧುಸೂದನ್, ಶ್ರೀಮಂತ್.ಎಮ್.ವೈ, ವೆಂಕಟೇಶ ನಾಯಕ್, ಮಂಗಳೂರು

ಇವತ್ತಿನ ಕವಿತೆಗಳು. 1. ಇವತ್ತಿನ ರಾತ್ರಿ ಮುಗಿದು ಹೋಗೋದ್ರೊಳಗೆ ಚುಕ್ಕಿಗಳೆಲ್ಲ ಲೆಕ್ಕ ಚುಕ್ತಾ ಮಾಡಿ ಪುಸ್ತಕ ಮುಚ್ಚೋದ್ರೊಳಗೆ ಚಂದ್ರ ಪಾಳಿ ಮುಗಿಸಿ  ಖೋಲಿ ಸೇರೋದ್ರೊಳಗೆ ಬಿಲ ಬಿಟ್ಟ ಹಾವು ಇಲಿ ಬಲಿ ನುಂಗಿ ನೊಣೆದು ತೇಗೋದ್ರೊಳಗೆ ಗಿಡುಗನಂತವನು ಗಿಣಿಯಂತೋಳ ಜೊತೆ ಸುರತ ನಡೆಸಿ ಸ್ಖಲಿಸಿ ಬಿಡೋದ್ರೊಳಗೆ ಸೂರ್ಯ ಅನ್ನೋ ಮೂಧೇವಿ ಬೆಳೆಗ್ಗೆ ಬಂದು  ಬ್ಯಾಟರಿ ಹಾಕಿ ಬೆಳಕ ಹರಿಸೋದ್ರೊಳಗೆ ತಿಕ ಸುಟ್ಟ ಬೆಕ್ಕು ಮುಂಜಾನೆ ಮಿಯಾಂವ್ ಅಂತ ಹಿಮ್ಮಡಿ ನೆಕ್ಕೋದ್ರೊಳಗೆ ಹೀಗೇ ಸುಮ್ಮ ಸುಮ್ಮನೇ ಸತ್ತು ಹೋಗಿಬಿಡಬೇಕು … Read more

ಕಾಡು (ವ) ದಿಟ್ಟೆಯರು!!: ಅಖಿಲೇಶ್ ಚಿಪ್ಪಳಿ

ಲೋಕಾಯುಕ್ತ ಕಚೇರಿಯಲ್ಲೇ ಲಂಚಾವತಾರ. ರೈತರ ಸರಣಿ ಆತ್ಮಹತ್ಯೆಗಳು. ರೈತನ ಪಾಲಿಗೆ ಕಬ್ಬಿನ ಬೆಳೆ ಕಬ್ಬಿಣದ ಶೂಲವಾಗಿ ಪರಿಣಮಿಸಿದ್ದು, ತನ್ಮಧ್ಯೆ ಮಳೆ ಕೊರತೆಯಿಂದ ಉಂಟಾಗಬಹುದಾದ ಬರಗಾಲದ ಛಾಯೆ. ಕ್ರಿಕೇಟ್ ಆಟಕ್ಕೆ ಸಂಬಂಧಿಸಿದಂತೆ ಲಲಿತ್ ಮೋದಿಯ ವೀಸಾಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವೆ ಮತ್ತು ರಾಜಾಸ್ಥಾನದ ಮಹಿಳಾ ಮುಖ್ಯಮಂತ್ರಿಯ ಮೇಲೆ ಬಂದ ಗಂಭೀರ ಆರೋಪ. ವ್ಯಾಪಂ ಹಗರಣದ ಸರಣಿ ಸಾವುಗಳು. ಒಟ್ಟಾರೆ ಋಣಾತ್ಮಕ ಅಂಶಗಳೇ ಹೆಚ್ಚು. ಈ ಮಧ್ಯದಲ್ಲೂ ಅನೇಕ ಮಹಿಳೆಯರು ಭೂಆರೋಗ್ಯದ ಕುರಿತು ಚಿಂತಿಸಿ, ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ. … Read more

ಋಣಮುಕ್ತವಲ್ಲದ ಬದುಕು ನಮ್ಮದು: ಗಾಯತ್ರಿ ಬಡಿಗೇರ

                  ತಂದೆ ತಾಯಿ ನಾವ ಹುಟ್ಟಿದಮ್ಯಾಗ ತುಸು ಖರ್ಚು ಮಾಡಿ ಹೆಸರಿಟ್ಟಿರಂಗಿಲ್ರಿ. ಹುಟ್ಟಿದ ಜಾತಕ ತಗಸಿ ಅದು ಇದು ಅಂತಾ ಪಾಪಾ ಬಾಳ ತಿರಗ್ಯಾಡಿ ಬಂಗಾರದಂಗ ಹೆಸರ ಇಟ್ಟಿರತಾರ.. ನಾವ ದೀಡ ಪಂಡಿತ್ರ ಅದೀವಿ ಅಲ್ಲ. ‘ಅಂದ ಅನಸ್ಕೊದ ಚಂದಗೇಡಿಂತ’ ಹಂಗ ಎತ್ತಾಗರ ಪತ್ತಾಗರ ಅರ್ಧಂಬರ್ಧಾ ಹೆಸರ ಕರಕೋತ ನಾಯಿ, ನರಿ, ಹಂದಿ, ಮಗಾ, ಮಚ್ಚಾ, ಮಾಮಾ, ಮಾಮಿ ಅದು ಇದು ಸುಡಾಗಾಡ ಸಂತಿ ವಟ್ಟ … Read more

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಕಪ್ಪೆಗಳು ಕಪ್ಪೆಗಳ ಗುಂಪೊಂದು ಕಾಡಿನ ಮೂಲಕ ಎಲ್ಲಿಗೋ ಪಯಣಿಸುತ್ತಿದ್ದಾಗ ಅವುಗಳ ಪೈಕಿ ಎರಡು ಕಪ್ಪೆಗಳು ಒಂದು ಆಳವಾದ ಗುಂಡಿಯೊಳಕ್ಕೆ ಬಿದ್ದವು. ಉಳಿದ ಕಪ್ಪೆಗಳು ಗುಂಡಿಯ ಮೇಲೆ ಸುತ್ತಲೂ ನಿಂತು ಗುಂಡಿ ಎಷ್ಟು ಆಳವಿದೆ ಎಂಬುದನ್ನು ಅಂದಾಜಿಸಿದವು. ತದನಂತರ ಗುಂಡಿಯೊಳಕ್ಕೆ ಬಿದ್ದ ದುರದೃಷ್ಟವಂತ ಕಪ್ಪೆಗಳಿಗೆ ಅವು ಎಂದೆಂದಿಗೂ ಹೊರಬರಲು ಸಾಧ್ಯವಾಗುವುದಿಲ್ಲ ಎಂಬುದಾಗಿ ಹೇಳಿದವು. ಆ ಎರಡು ಕಪ್ಪೆಗಳು ಈ ಹೇಳಿಕೆಯನ್ನು ನಿರ್ಲಕ್ಷಿಸಿ ಗುಂಡಿಯಿಂದ ಹೊರಕ್ಕೆ ಹಾರಲು ಪ್ರಯತ್ನಿಸತೊಡಗಿದವು.   ಆ ಗುಂಡಿಯೊಳಗೇ ಸಾಯುವುದು ಖಚಿತವಾದ್ದರಿಂದ ವೃಥಾ ಶ್ರಮ … Read more

ಹೆಸರಿಲ್ಲ: ಸಖ್ಯಮೇಧ (ವಿಶ್ವನಾಥ ಗಾಂವ್ಕರ್)

ಸಾಲು ಅಡಿಕೆ ಮರಗಳು ಮುರಿದು ಬೀಳುತ್ತವೇನೋ ಎಂಬಂತೆ ತೂಗುತ್ತಿದ್ದವು  ಬೀಸುಗಾಳಿಗೆ… ಹುಚ್ಚುಗಾಳಿಯು ತರಗೆಲೆಗಳನ್ನು ಧೂಳನ್ನು ಹೊತ್ತು ತರುತ್ತಿತ್ತು… ತೋಟದಾಚೆ ಬಹುದೂರ ಕಾಣುವ ಬೆಟ್ಟದಲ್ಲಿ ಮಳೆ ಸುರಿಯುವುದು ಅಸ್ಪಷ್ಟವಾಗಿ ಕಾಣುತ್ತಿತ್ತು… ಇನ್ನೇನು ಇಲ್ಲೂ ಮಳೆಯಾಗುತ್ತದೆ.. ತಂಪು ಗಾಳಿ ಬೀಸತೊಡಗಿದೆ.. ಮೋಡ ಕವಿದ ಮಲೆನಾಡ ಕತ್ತಲು… ಅವಳೂ ಮಳೆಗಾಗಿಯೇ ಕಾದಿದ್ದಾಳೆ… ಮಳೆಗಾಗಿ ಎನ್ನುವುದಕ್ಕಿಂತ ಮಳೆಯೊಡನೇ ಒತ್ತಿ ಬರುವ ಅವನ ನೆನಪುಗಳಿಗಾಗಿ…ಕಳೆದ ಮಳೆಗಾಲದಲ್ಲಿ ಅವನ ಜೊತೆಯಾಗಿ ಸವಿದ ಮಲೆನಾಡ ಮಳೆಯ ಸವಿನೆನಪು ಮಾತ್ರ ಅವಳ ಪಾಲಿಗೆ ಉಳಿದಿರುವುದು.. ಅವಳ ಹಾಗೂ ಅವನ ಅಭಿರುಚಿಗಳಲ್ಲಿ … Read more