ಮಕ್ಕಳ ಕವನ: ವೃಂದಾ ಸಂಗಮ, ವಿಭಾ ಶ್ರೀನಿವಾಸ್

ಪುಟ್ಟನ ರೈಲು ಪುಟ್ಟಗೆಂದು ಅಪ್ಪ ತಂದ ಚಿಕ್ಕದೊಂದು ರೈಲನು ನೋಡಿ ಈಗ ಪುಟ್ಟನೊಮ್ಮೆ ರೈಲು ಬಿಡುವ ಸ್ಟೈಲನು || ರೈಲು ಈಗ ಓಡುತಿಹುದು ಮನೆಯ ಮೂಲೆ ಮೂಲೆಗೆ ಆಗ ಈಗ ಹಾರುತದೆ ಹಿತ್ತಲಾಚೆ ಬೇಲಿಗೆ ಹೋಗುತಿಹುದು ರೈಲು ನಿಮಗೆ ಎಲ್ಲಿ ಬೇಕೊ ಅಲ್ಲಿಗೆ ನಿಲ್ಲುತದೆ ಚಿಂತೆಯಿಲ್ಲ ನೀವೆ ಕೇಳಿದಲ್ಲಿಗೆ || ಹಳಿಯ ಮೇಲೆ ಓಡ ಬೇಕು ಎಂಬ ನಿಯಮವಿಲ್ಲ ಗೋಡೆ ಮೇಲೆ ಕಿಡಕಿಯೊಳಗೆ ತೂರಿ ನಡೆವುದಲ್ಲ ಚಿಕ್ಕದೇನು ದೊಡ್ಡದೇನು ಅಡ್ಡ ಬಂದ್ರೆ ಎಲ್ಲ ಹಾರಿಕೊಂಡು ಹೋಗುತದೆ ಅದಕೆ … Read more

ಸಮಾನತೆ ಮತ್ತು ಕೌಟಂಬಿಕ ಸಾಮರಸ್ಯ: ನಾಗರೇಖಾ ಗಾಂವಕರ

ಆಕೆಯೊಬ್ಬ ವಿದ್ಯಾವಂತೆ. ಬುದ್ದಿವಂತೆ. ಆದರೀಗ ಗೃಹಿಣಿ.. ವಿವಾಹವಾಗಿ ನಾಲ್ಕೈದು ತಿಂಗಳುಗಳಷ್ಟೇ ಕಳೆದಿವೆ. ಆಕೆಯ ಆ ವಯಸ್ಸು ಸೊಗಸಾದ ಪ್ರೇಮದ ಬಯಕೆಯನ್ನು ವ್ಯಕ್ತಪಡಿಸುವ, ಪತಿಯ ಜೊತೆಜೊತೆಯಲ್ಲಿ ಬಹುಹೊತ್ತು ಇರಬೇಕೆನ್ನಿಸುವ, ರಸಮಯ ಜೀವನದ ಆಕಾಂಕ್ಷೆಯನ್ನು ಹೊತ್ತ ಕಾಲ. ಅದು ಹೆಣ್ಣಿನ ಸಹಜ ಬಯಕೆ. ಅದರಂತೆ ಮನೆವಾಳ್ತೆ ಮುಗಿಸಿ ಆಕೆ ದಿನವೂ ಹೊರದುಡಿಮೆಯಲ್ಲಿ ಬಸವಳಿದು ಬರುವ ಗಂಡನಿಗಾಗಿ ರುಚಿಯಾದ ಅಡುಗೆ ತಿಂಡಿ ಮಾಡಿ ಕಾಯುತ್ತಾಳೆ. ಆತ ಬರುವ ಮುನ್ನ ಪತಿಯ ಆಗಮನ ಇಂದಿಗೆ ತನ್ನ ದಿನವನ್ನು ಹೇಗೆಲ್ಲಾ ಬದಲಾಯಿಸಬಹುದೆಂದು ಕನಸುತ್ತಾಳೆ. ಆ … Read more

ಬಂದೂಕು ಹಿಡಿದ ಕೈಗಳು ಪುಸ್ತಕಾವಲೋಕನ: ಸುರೇಶ ಎಲ್.ರಾಜಮಾನೆ, ರನ್ನಬೆಳಗಲಿ.

ಕವನ ಸಂಕಲನ: ಬಂದೂಕು ಹಿಡಿದ ಕೈಗಳು ಲೇಖಕಿ: ಕು.ಅಂಜಲಿ ಬೆಳಗಲ್, ಹೊಸಪೇಟೆ ಬಂದೂಕು ಹಿಡಿದ ಕೈಗಳಿಂದ ಎದೆಗಿಳಿದ ಗುಂಡುಗಳು (ಕವಿತೆಗಳು)….. ಕನ್ನಡದ ಕೆಚ್ಚೆದೆಯ ಯುವ ಕವಯಿತ್ರಿ ಕುಮಾರಿ ಅಂಜಲಿ ಬೆಳಗಲ್ ಅವರ “ಬಂದೂಕು ಹಿಡಿದ ಕೈಗಳು” ಕವನ ಸಂಕಲನ ಕನ್ನಡ ಸಾಹಿತ್ಯದಲ್ಲಿ ಮೊಳಗುವ ಗಂಟಾನಾದವೇ ಸರಿ. ಬದುಕಿನ ಏಳು ಬೀಳುಗಳೊಂದಿಗೆ ಬದುಕಿನ ಚಿತ್ರಣವನ್ನು ಹಾಗು ಆಸರೆಯಾದ ತೃಣವನ್ನೂ ಮನಸಾರೆ ನೆನೆಯುವ ಮತ್ತು ಕವಿತೆಯ ಮೂಲಕ ಕೃತಜ್ಞತೆ ಸಲ್ಲಿಸುವ ಕವಿಭಾವ ಅದ್ಭುತ. ಕವಯಿತ್ರಿ ಯುವಪೀಳಿಗೆಯ ಬರಹಗಾರರಿಗೆ ಮಾದರಿಯಾಗಿ ನಿಲ್ಲಬಲ್ಲ … Read more

ಮೈಸೂರಿನ ಕಲಾಮಂದಿರದ ಕಿರುರಂಗಮಂದಿರದಲ್ಲಿ “ಪಾರ್ಶ್ವ ಸಂಗೀತ” ನಾಟಕ ಪ್ರದರ್ಶನ

ಇದೇ ಜೂನ್ ತಿಂಗಳ 23, 24, 29, 30 ಹಾಗೂ ಜುಲೈ 1 ರಂದು ಸಂಜೆ 7 ಗಂಟೆಗೆ ಕಲಾಮಂದಿರ ಆವರಣದಲ್ಲಿರುವ ನೂತನ ಕಿರುರಂಗಮಂದಿರದಲ್ಲಿ ರಂಗವಲ್ಲಿ ತಂಡದ ನೂತನ ರಂಗಪ್ರಯೋಗ, ಹೆಸರಾಂತ ಸಾಹಿತಿ ಶ್ರೀನಿವಾಸ ವೈದ್ಯ ಅವರ ಬರಹಗಳನ್ನಾಧರಿಸಿದ “ಪಾಶ್ರ್ವಸಂಗೀತ” ನಾಟಕದ ಪ್ರದರ್ಶನವಿದೆ. ರಂಗಾಯಣದ ಹಿರಿಯ ಕಲಾವಿದರಾದ ಪ್ರಶಾಂತ್ ಹಿರೇಮಠ ಈ ನಾಟಕದ ನಿರ್ದೇಶಕರು. ನಾಟಕ ಕುರಿತು ಪಾಶ್ರ್ವಸಂಗೀತ ನಾಟಕವು 1940ರ ದಶಕದಿಂದ 70ರ ದಶಕಗಳವರೆಗಿನ ಆದರೆ ಇಂದಿಗೂ ಜನಮಾನಸದಲ್ಲಿ ಉಳಿದಿರುವ ಹಿಂದಿ ಚಿತ್ರಗೀತೆಗಳೊಂದಿಗಿನ ನಮ್ಮ ಅವಿನಾಭಾವ … Read more

ನನ್ನ ಈ ಒಲವಿನ ಪಯಣಕೆ ನಿನ್ನ ನಯನಗಳೇ ದೀವಟಿಗೆ: ಬಿ.ಎಲ್.ಶಿವರಾಜ್ ದೇವದುರ್ಗ

ಅಂದು ನಾನು ಗ್ರಂಥಾಲಯದಲ್ಲಿ ನನ್ನ ಪಾಡಿಗೆ ನನ್ನ ಇಷ್ಟದ ಪುಸ್ತಕವಾದ ಶಿವರಾಮ್ ಕಾರಂತರ “ಮೈಮನಗಳ ಸುಳಿಯಲ್ಲಿ” ಪುಸ್ತಕದ ತಲಾಶ್ ನಲ್ಲಿ ತಲ್ಲೀನನಾಗಿದ್ದೆ. ರ್ಯಾಕ್ ನಲ್ಲಿ ನನಗೆ ಬೇಕಾದ ಪುಸ್ತಕ ಕಂಡಿತು, ಅದನ್ನು ರ್ಯಾಕ್ ನಿಂದ ತೆಗೆದ ಕೂಡಲೇ ರ್ಯಾಕ್ ನ ಕಿಂಡಿಯಲ್ಲಿ ಹೊಂಬೆಳಕನ್ನು ಹೊತ್ತಿದ್ದ ತಿಳಿ ನೀಲಿ ಬಣ್ಣದ ನಿನ್ನ ನಯನಗಳು ಹೊಳೆದವು. ನೀನು ಕೂಡ ನನ್ನಂತೆ ಪುಸ್ತಕದ ಹುಡುಕಾಟದಲ್ಲಿದ್ದೆ. ಪುಸ್ತಕ ಹಿಡಿದು ಅಲ್ಲೇ ಇದ್ದ ಮೇಜಿನ ಮೇಲೆ ಓದುತ್ತಾ ಕುಳಿತೆ. ಪುಸ್ತಕದ ಮೊದಲ ಪುಟದ ಮೂರು … Read more

ನೈತಿಕತೆಯಿಲ್ಲದ ಮೇಲೆ ಬಹಳ ಕಠಿಣ ಕಾನೂನು ಕಾಯ್ದೆಗಳ ರೂಪಿಸಿಯೇನು ಫಲ!: ಕೆ ಟಿ ಸೋಮಶೇಖರ ಹೊಳಲ್ಕೆರೆ

ಅಗತ್ಯ, ಯೋಗ್ಯ ಕಾನೂನು ಕಾಯ್ದೆಗಳ ರೂಪಿಸುವುದು ಜವಾಬ್ದಾರಿಯುತ ಆಡಳಿತ ವ್ಯವಸ್ಥೆಗಳ ಕರ್ತವ್ಯ! ಕಾನೂನು, ಕಾಯ್ದೆಗಳು ಸಮಾಜ ಸುವ್ಯವಸ್ಥಿತವಾಗಿರಲು, ನೆಮ್ಮದಿಯಿಂದಿರಲು ಸಹಕಾರಿ. ಅತಿ ಅವಶ್ಯಕ! ಹಾಗಂತ ಎಲ್ಲಾ ಅವುಗಳಿಂದನೇ ಅಲ್ಲಾ! ವ್ಯಕ್ತಿಯ, ಸಮಾಜದ, ದೇಶದ ಉದ್ಧಾರಕ್ಕೆ, ಆತ್ಮೋದ್ಧಾರಕ್ಕೆ ನೈತಿಕತೆಯೇ ಮೂಲ. ತಳಹದಿ! ಹಿಂದಿನವರು ನೈತಿಕತೆಯನ್ನು ಜೀವನದ ಉಸಿರು ಮಾಡಿಕೊಂಡಿದ್ದರಿಂದ ಉತ್ತಮ ಸಮಾಜ ನಿರ್ಮಾಣವಾಗಿತ್ತು. ಜನ ಶಾಂತಿ, ಸಹನೆ, ಸದಾಚಾರ, ಸದ್ಗುಣದಿಂದ ಬದುಕುತ್ತಿದ್ದರು. ಭಗವಂತನ ಮೇಲಿನ ಪರಮ ಭಕ್ತಿಯಿಂದ ಆತ್ಮೋದ್ಧಾರ ಮಾಡಿಕೊಂಡರು! ಅಂದು ಅಪರಾಧಗಳು ಇರಲಿಲ್ಲ ಎನ್ನುವುದಕ್ಕಿಂತ ಅವು ಅಲ್ಪ … Read more

ಸೋಲೇ ಗೆಲುವಿನ ಮೆಟ್ಟಿಲು: ವೆಂಕಟೇಶ ಚಾಗಿ

ಜೀವನದಲ್ಲಿ ನಾವು ಒಂದಲ್ಲಾ ಒಂದು ಸ್ಪರ್ಧೆಯನ್ನು ಎದುರಿಸುತ್ತಲೇ ಇರುತ್ತೇವೆ. ಕೆಲವೊಂದು ತುಂಬಾ ಮಹತ್ವದ್ದಾಗಿರುವ ಸ್ಪರ್ಧೆಗಳು ನಮ್ಮ ಗಮನಕ್ಕೆ ಬರುತ್ತವೆ. ಕೆಲವೊಂದು ಸ್ಪರ್ಧೆಗಳಲ್ಲಿ ನಾವು ಸ್ಪರ್ಧಿಸಿದ್ದರೂ ನಮ್ಮ ಗಮನಕ್ಕೆ ಬರುವುದಿಲ್ಲ.ಮಹತ್ವ ಪಡೆದಂತಹ ಸ್ಪರ್ಧೆ ಗಳಲ್ಲಿ ನಾವು ಗೆದ್ದರೆ ತುಂಬಾ ಸಂತೋಷಪಡುತ್ತೇವೆ. ಜಗತ್ತನ್ನೇ ಗೆದ್ದೆವು ಎನ್ನುವ ಖುಷಿಯಲ್ಲಿ ಮುಳುಗಿಬಿಡುತ್ತೇವೆ. ನಮ್ಮ ಎಲ್ಲಾ ಸ್ನೇಹಿತರು ಬಂಧು ಬಾಂಧವರೊಂದಿಗೆ ಆ ಖುಷಿ ಯನ್ನು ಹಂಚಿಕೊಂಡು ನಾವೂ ಸಂತೋಷ ಪಡುತ್ತೇವೆ. ಅದೇ ಸೋಲಾದರೆ ?! ನಮ್ಮವರ ಎದುರು ಅವಮಾನವಾಯಿತಲ್ಲಾ ಎಂದು ಕೊರಗುತ್ತೇವೆ. ದುಃಖದಲ್ಲಿ ಮುಳುಗಿಬಿಡುತ್ತೇವೆ. … Read more

ಪಂಜು ಕಾವ್ಯಧಾರೆ

ಹೋಗಬಾರದಿತ್ತು! ಆತ್ಮೀಯ ಸ್ನೇಹಿತ ರೂಮ ಪಾರ್ಟನರ್‍ ಧೀಢರನೆದ್ದು ಹೊರಟೇ ಹೋದ ಏನನ್ನು ಹೇಳದೆ ಕೇಳದೆ ಎಲ್ಲಿ ಕಳೆದು ಹೋದನೋ ಗೊತ್ತಿಲ್ಲ ಆಕಾಶಕ್ಕೆ ಹಾರಿದನೋ, ಭೂಮಿಯೊಳಕ್ಕೆ ಹೂತು ಹೋದನೋ, ಕಾಡಿಗೆ ಹೋದನೋ, ಸುಡಗಾಡಕ್ಕೆ ಹೋದನೋ ಗೊತ್ತಿಲ್ಲ ಹೋಗಿದಂತೂ ನಿಜ ನಮ್ಮನ್ನು ಬಿಟ್ಟು ಈ ಖೋಲೆ ಬಿಟ್ಟು ಇನ್ನೆಲ್ಲಿಗೋ ಅವನಿಗೆ ಅದೇನಾಯಿತೋ ಯಾಕಾದರು ಮನಸು ಬದಲಿಸಿದನೋ ಇನ್ನೂ ಇರುತ್ತೇನೆಂದವನು ಸಡ್ಡನ್ನಾಗಿ ಎದ್ದು ಹೋಗೇ ಬಿಟ್ಟ ದೈವಾಧೀನನಾದನೆಂದೋ ಸ್ವರ್ಗವಾಸಿಯಾದನೆಂದೋ ಜನ ಹೇಳುತ್ತಿದ್ದಾರೆ ನಂಬಲಾಗುತ್ತಿಲ್ಲ ಆತ್ಮೀಯರು ಅಳುತ್ತಿದ್ದಾರೆ ಆಗದವರು ನಗುತ್ತಿದ್ದಾರೆ ಹೋಗುವದೇ ಆಗಿದ್ದರೆ … Read more

ಜಾಣಸುದ್ದಿ 10: ಕೊಳ್ಳೇಗಾಲ ಶರ್ಮ

ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ ಇ … Read more

ಅಜ್ಜ ನೆಟ್ಟ ಹಲಸಿನ ಮರ: ಸತೀಶ್ ಶೆಟ್ಟಿ. ವಕ್ವಾಡಿ

ಸೂರ್ಯನ ಬೆಳಗಿನ ಬೆಳಕಿಗೆ ಮಂಜಿನ ಹನಿಗಳ ರಂಗಿನಾಟ ಆಗತಾನೆ ಮುಗಿದಿತ್ತು. ಸೂರ್ಯನ ಬೆಳಕಿನ ಅಟ್ಟಹಾಸ ಹೆಚ್ಚಾದಂತೆ ಮನೆ ಎದುರಿನ ಹುಲ್ಲು ಹಾಸಿನ ಮೇಲೆ ಬೆಚ್ಚನೆ ಮಲಗಿದ್ದ ಮಂಜಿನ ಹನಿಗಳು ಒಂದೊಂದಾಗಿ ಕಾಣದ ಗೂಡು ಸೇರುವ ತವಕದಲ್ಲಿದ್ದವು. ಅದೂ ಬೇರೆ ಕಾರ್ತಿಕ ಮಾಸ. ಚಳಿರಾಯನ ಒಡ್ಡೋಲಗಕ್ಕೆ ಆಗಷ್ಟೇ ರಂಗಸಜ್ಜಿಕೆಯ ಹೂರಣವಾಗಿತ್ತು. ಮನೆಯ ಕಣದಲ್ಲಿ ರಂಗು ಮೂಡಿಸಿದ್ದ ಭತ್ತದ ತಿರಿ ಮತ್ತು ಹುಲ್ಲಿನ ಕುತ್ತರಿಗಳಿಂದ ಮೂಗಿಗೆ ಅಪ್ಪಳಿಸುತ್ತಿದ್ದ ಭತ್ತದ ಸುವಾಸನೆ ಮನದ ಮೂಲೆಯಲ್ಲಿ ಹೊಂಗಿರಣದ ಚಿತ್ತಾರ ಬರೆಸಿದ್ದವು. ಮನೆ ಹಿಂದಿನ … Read more

ಮೆಕ್ಸಿಕೋ ಮೈತ್ರಿ: ಪ್ರಶಸ್ತಿ ಪಿ.

ಕೆಲಸದ ನಿಮಿತ್ತ ಮೆಕ್ಸಿಕೋಗೆ ಬಂದ ಮೊದಲ ದಿನಗಳಲ್ಲಿ ಕಾಡಿದ ದಿಗಿಲುಗಳು ಅಷ್ಟಿಷ್ಟಲ್ಲ. ಭಾರತದ ಮಾಧ್ಯಮಗಳಲ್ಲಿ ಕಂಡ ಹಾದಿಬೀದಿಯಲ್ಲೆಲ್ಲಾ ಡ್ರಗ್ಸ್ ಮಾಡೋ ನಾಡೆಂಬ ಸುದ್ದಿಗಳಾಗಿರಬಹುದು, ರಾತ್ರಿ ಏಳರ ಮೇಲೆ ಹೊರಗೆ ಕಾಲಿಡಬೇಡವೆಂದು ಎಚ್ಚರಿಸುತ್ತಿದ್ದ ಹೋಟೇಲು ರೂಂಮೇಟಾಗಿರಬಹುದು, ಗೊತ್ತಿಲ್ಲದ ಸ್ಪಾನಿಷ್ ಭಾಷೆಯಾಗಿರಬಹುದು, ಇಂಟರ್ ನ್ಯಾಷನಲ್ ರೋಮಿಂಗ್ ಇದ್ದರೂ ಸಿಗ್ನಲ್ ಸಿಗದ ಸಿಮ್ಮಾಗಿರಬಹುದು, ಎಲ್ಲೆಡೆಯೂ ಮಾಂಸದ ಸಾಮ್ರಾಜ್ಯವಾಗಿ ವೆಜ್ಜಿಗಳಿಗೆ ಸಿಗದ ಊಟವಾಗಿರಬಹುದು, ತಮ್ಮ ಕೆಲಸವನ್ನೇ ನೋಡಿಕೊಳ್ಳುತ್ತಾ ಹೆಚ್ಚೇನೂ ನೆರವಾಗದ ಈಗಾಗಲೇ ಅಲ್ಲಿಗೆ ಹೋಗಿದ್ದ ಸಹೋದ್ಯೋಗಿಗಳಾಗಿರಬಹುದು. ಸಿಮ್ಮು ತಗೊಳ್ಳೋಕೆ ನಾಲ್ಕು ದಿನ, ಬ್ಯಾಂಕ್ … Read more

ಟಚ್ ಸ್ಕ್ರೀನ್: ಸುದರ್ಶನ್.ವಿ

  “ಹಲೋ ಎಲ್ಲಿದ್ದಿಯೋ? ಎಷ್ಟು ವರ್ಷ ಆಯ್ತು ನಿನ್ನ ನೋಡಿ, ಯಾವಾಗ ಸಿಗೋಣ?” “ಹ್ಯಾಟ್ಸ್ ಆಫ್ ಫೇಸ್ ಬುಕ್‍ಗೆ. ನಿನ್ನ ನಂಬರ್ ಸಿಕ್ತು. ನಿಜಕ್ಕೂ ಥ್ಯಾಂಕ್ಸ್ ಈ ಟೆಕ್ನಾಲಜಿಗೆ” … ಈ ಕಡೆ ಒಂದು ಕ್ಷಣ ಮೌನ. ಹೀಗೆ ಅಚಾನಕ್ಕಾಗಿ ಬಂದ ಹಳೆಯ ಗೆಳೆಯನ ಕರೆ ಕೊಂಚ ನನ್ನನ್ನು ಪಾಪ ಪ್ರಜ್ಞೆ ಗೆ ದೂಡಿತು. ಛೇ ನಾನೆಂಥ ಮನುಷ್ಯ…? ಡಿಗ್ರಿ ಮುಗಿದ ನಂತರ ಎಲ್ಲರ ಜೊತೆಗೂ ಸಂಬಂಧ ಕಡಿದುಕೊಂಡು ಬದುಕುತ್ತಿದ್ದೆನಲ್ಲಾ… ಬಾಲ್ಯದ ಗೆಳೆಯರು ಜಯನಗರದ ಮನೆಯನ್ನು ಬಿಟ್ಟು … Read more

ಸಡಿಲವಾಗುತ್ತಿರುವ ಸಂಬಂಧಗಳು !: ಕೆ ಟಿ ಸೋಮಶೇಖರ ಹೊಳಲ್ಕೆರೆ

ಬದಲಾವಣೆ ಜಗದ ನಿಯಮ! ಪ್ರಕೃತಿ ನಿತ್ಯನೂತನ. ನವನವೀನ! ಬದಲಾಗದಿದ್ದರೆ ಏಕತಾನತೆ ಉಂಟಾಗಿ ಬೇಸರ ಆವರಿಸಿ ಬದುಕಾಗುವುದು ಯಾತನಾಮಯ! ಬದಲಾವಣೆಯ ಗಾಳಿ ತರುವುದು ಉತ್ಸಾಹ. ನವ ಚೇತನ !ಹೊಸ ಚಿಗುರು ಹೂವು ಹಣ್ಣು! ಹೊಸತನ ತುಂಬಿ ಬದುಕಾಗುವುದು ನೂತನ! ಬದಲಾವಣೆಯೇ ಜೀವನಕೆ ಆಗುವುದು ಟಾನಿಕ್ ! ಅವಿಭಕ್ತಕುಟುಂಬಗಳು ಮಾಯವಾಗಿ ವಿಬಕ್ತಕುಟುಂಬಗಳು ಉಂಟಾಗಿರುವುದರಿಂದ, ಜಾತಿ ಧರ್ಮಗಳ ಕಪಿ ಮುಷ್ಟಿಯಿಂದ ಮಾನವ ಮುಕ್ತನಾಗುತ್ತಿರುವುದರಿಂದ, ಆಧುನಿಕ ಬದಲಾದ ಬದುಕಿನಿಂದ, ತಾಂತ್ರಿಕತೆ ಹೆಚ್ಚಾಗಿರುವುದರಿಂದ, ಶಿಕ್ಷಣಕ್ಕೆ, ಹಣಕ್ಕೆ ಪ್ರಾಧಾನ್ಯತೆ ಬಂದುದರಿಂದ, ವೈಯುಕ್ತಿಕ ಸ್ವಾತಂತ್ರ್ಯ ಅತಿಯಾಗಿರುವುದರಿಂದ, ಪಾಶ್ಚಿಮಾತ್ಯರ … Read more

ಜ್ಞಾನಕ್ಕಿಂತ ಮಿಗಿಲಾದುದು ಯಾವುದೂ ಇಲ್ಲ: ಮೊಕಾಶಿ ಎಂ.ಎಚ್.

“ನಹೀ ಜ್ಞಾನೇನ ಸದೃಶಂ ಪವಿತ್ರಮಿಹ ವಿದ್ಯತೇ” ಎಂದು ಸಂಸ್ಕøತ ಶ್ಲೋಕದಲ್ಲಿ ತಿಳಿಸಲಾಗಿದೆ. ಇದರರ್ಥ ಜ್ಞಾನಕ್ಕಿಂತ ಮಿಗಿಲಾದುದು ಮತ್ತು ಪವಿತ್ರವಾದುದು ಇನ್ನೊಂದಿಲ್ಲ. ಜ್ಞಾನವೊಂದು ಸಾರ್ವತ್ರಿಕ ಶಕ್ತಿಯಾಗಿದೆ. ಶಿಕ್ಷಣದ ಪ್ರಮುಖ ಗುರಿ ಜ್ಞಾನಾರ್ಜನೆಯಾಗಿದೆ. ಜ್ಞಾನದಿಂದ ವ್ಯಕ್ತಿಯ ಬದುಕಿನ ಎಲ್ಲ ಕ್ಷೇತ್ರಗಳನ್ನು ಬೆಳಗಿಸಬಹುದಾಗಿದೆ. “ಜ್ಞಾನವೇ ಶಕ್ತಿಯಾಗಿದ್ದು ಅದರಿಂದಲೇ ಎಲ್ಲ ಕೆಲಸಕಾರ್ಯಗಳು ಸಾಧ್ಯ” ಎಂದು ಸಾಕ್ರೆಟಿಸ್ ಹೇಳಿದ್ದಾನೆ. ಜ್ಞಾನವೆಂಬುದು ಕೇವಲ ಮಾಹಿತಿ ಸಂಗ್ರಹಣೆಯಲ್ಲ ಇದು ಮಾನವ ಜನಾಂಗದ ಅನುಭವಗಳ ಸಾರವಾಗಿದೆ. ಯಾವುದೇ ವಸ್ತು ಘಟನೆಯನ್ನು ವಸ್ತು ನಿಷ್ಠೆಯಿಂದ ಪರಾಮರ್ಶಿಸಿ ನೋಡುವ ರೀತಿಯೇ ಜ್ಞಾನವಾಗಿದೆ. … Read more

ಕನಸಿನಲ್ಲು ಕನವರಿಸುವಂತ ಪ್ರೀತಿ ಕೊಟ್ಟವಳೇ..: ಸಿದ್ದುಯಾದವ್ ಚಿರಿಬಿ.

ನೆಲದ ಮಣ್ಣು ಒಲುಮೆ ಕಣ್ಣು ತೆರಯಬಹುದು ಪ್ರೇಮದ ಹೆಣ್ಣು ಕನಸು ಮನಸುಗಳ ಬೆಸಗೆಯಲ್ಲಿ ನಮ್ಮಿಬ್ಬರ ಹೃದಯ ಮಿಲನದ ನವಿಲ ನರ್ತನವು ಪ್ರೇಮ ಕಾಶಿಯಲಿ…., ಜಗತ್ತಿನಲ್ಲಿ ಪ್ರೇಮವೇ ಧರ್ಮವೆಂದು ನಂಬಿಕೊಂಡು ಬಂದವರಲ್ಲಿ ಪ್ರೀತಿಯ ಜಲಪಾತ ಹೃದಯಂತರಾಳದಲ್ಲಿ ಧುಮ್ಮಿಕ್ಕುತ್ತದೆ. ನಿನ್ನೊಲವಿನ ಅಮಲಿನಲ್ಲೂ ಪ್ರೇಮ ನಳನಳಿಸುತ್ತದೆ ಸ್ವೀಟಿ. ಬಿರು ಬೇಸಿಗೆಯಲ್ಲೂ ಮುಂಗಾರಿನ ಅಭಿಷೇಕವಾಗುವಂತೆ ನಿನ್ನ ಒಲವಿನ ಮುಂಗಾರಿನ ಮಳೆ ನನ್ನೆದೆಯ ನೆಲದ ಮೇಲೆ ಸುರಿಯುತ್ತಿದೆ ಸಖಿ. ಕಾಡುವ ಕನಸಾಗಿ, ಪ್ರೀತಿಗೆ ಒಲವಾಗಿ, ಬದುಕಿಗೆ ಛಲವಾಗಿ ನನ್ನ ಜೀವನದ ಜ್ಯೋತಿ ನೀನಾಗಿ, ನನ್ನೊಂದಿಗೆ … Read more

ಬದುಕು ಸ್ನೇಹಮಯವಾಗಿರಲಿ ಬದುಕು ಸುಂದರ!!: ಗೂಳೂರು ಚಂದ್ರು

ಸ್ನೇಹ ಅಂದ ತಕ್ಷಣ ಮನಸ್ಸಿಗೆ ಬರೋದು ಒಂದು ಆಗಾದವಾದ ಸಂಬಂಧ, ಸಂಬಂಧಗಳ ಬಗ್ಗೆ ಗೊತ್ತಿಲ್ಲದವರಿಗೆ ನಿಜವಾಗಿಯೂ ಸ್ನೇಹದ ಮೌಲ್ಯ ಗೊತ್ತಿರಲಿಕ್ಕೆ ಸಾಧ್ಯವೇ ಇಲ್ಲ. ಅದು ಪಕ್ಕಕಿರಲಿ ಬಿಡಿ. ನಮ್ಮನ್ನ ಆಳವಾಗಿ ಅಧ್ಯಯನ ಮಾಡಿ ಅರ್ಥ ಮಾಡಿಕೊಂಡು ಅದಕ್ಕೆ ತಕ್ಕನಾಗಿ ಸ್ಬಂದಿಸಿಕೊಂಡು ಸರಿದೂಗಿಸುವವರು ನಿಜವಾದ ಸ್ನೇಹಿತರು. ಈಗಿನ ಜಮಾನದಲ್ಲಿ ನಮ್ಮನ್ನ ಅರ್ಥ ಮಾಡಿಕೊಂಡವರು ಎಷ್ಟು ಜನ ಅಂತ ಯೋಚನೆ ಮಾಡಿದರೆ ಸಿಗವವರು ಬೆರಳೆಣಿಕೆಗಿಂತ ಕಡಿಮೆ. ಇಲ್ಲಿ ಎಲ್ಲಾ ನಿರೀಕ್ಷೆಗಳನ್ನ ಇಟ್ಟುಕೊಂಡು ಬರುವವರು ಹೆಚ್ಚು. ಮೊನ್ನೆ ನನ್ನ ಸ್ನೇಹಿತ ಫೋನ್ … Read more

ಬೆಸುಗೆ: ವೇದಾವತಿ ಹೆಚ್.ಎಸ್.

ಪಡುವಣದಂಚಿನಲ್ಲಿ ದಿನಕರನು ಮುಳುಗುತ್ತಿರುವ ಸಮಯದಲ್ಲಿ ಕಟಕಿಯಿಂದ ದೂರಾಚೆಯ ಗಿರಿ ಶಿಖರವನ್ನು ದಿಟ್ಟಿಸಿ ನೋಡುತ್ತಿದ್ದಾಗ ರಾಷ್ಟ್ರಕವಿ ಶಿವರುದ್ರಪ್ಪನವರ ಕವಿತೆ ನೆನಪಾಗುತ್ತದೆ. “ಹತ್ತಿರವಿದ್ದೂ ದೂರ ನಿಲ್ಲುವೆವು ನಮ್ಮ ಅಹಮ್ಮಿನ ಕೋಟೆಯಲಿ ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನದ ಈ ಬದುಕಿನಲಿ” ಎಷ್ಟೊಂದು ಅರ್ಥವಿದೆ. ಇಲ್ಲೋಬ್ಬರು ನಮ್ಮಲ್ಲಿ ಕೇಳುತ್ತಿದ್ದರು. “ಎಷ್ಟು ವರ್ಷವಾಯಿತು ಕಾರು ತೆಗೆದುಕೊಂಡು?ಇನ್ನೂ ಹೊಸದಾಗಿ ತೆಗೆದುಕೊಂಡು ಬಂದ ಹಾಗೆ ಇದೆಯಲ್ಲ?ವರ್ಷಕ್ಕೆ ಎಷ್ಟು ಬಾರಿ ಸರ್ವೀಸ್ ಮಾಡುತ್ತೀರಾ? ನಮ್ಮ ಕಾರು ನೋಡಿ ಹೇಗಿದೆಯೆಂದು. ಕಂಪನಿ ಚೆನ್ನಾಗಿಲ್ಲ. ಲಕ್ಷಗಟ್ಟಲೆ ಹಣ ಕೊಟ್ಟು … Read more

2018 ನೇ ಸಾಲಿನ ವಿಭಾ ಸಾಹಿತ್ಯ ಪ್ರಶಸ್ತಿಗೆ ಹಸ್ತಪ್ರತಿ ಆಹ್ವಾನ

ಕನ್ನಡ ಕವಯಿತ್ರಿ ವಿಭಾ ಅವರ ನೆನಪಿನಲ್ಲಿ ‘ವಿಭಾ ಸಾಹಿತ್ಯ ಪ್ರಶಸ್ತಿ-2018’ ಕ್ಕಾಗಿ ಕನ್ನಡದ ಕವಿ/ಕವಿಯಿತ್ರಿಯರಿಂದ ಮೂವತ್ತಕ್ಕೂ ಹೆಚ್ಚು ಸ್ವರಚಿತ ಕವಿತೆಗಳ ಹಸ್ತಪ್ರತಿಗಳನ್ನು ಆಹ್ವಾನಿಸಲಾಗಿದೆ. ಅನುವಾದಿತ ಕವಿತೆಗಳು ಬೇಡ. ಚುಟುಕು, ಹನಿಗವನಗಳು ಬೇಡ. ಈ ಪ್ರಶಸ್ತಿಯು ರೂ. 10,000/- ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಆಸಕ್ತರು ತಮ್ಮ ಹೊಸ ಕವಿತೆಗಳ ಹಸ್ತಪ್ರತಿಯನ್ನು ಸ್ಪರ್ಧೆಗೆ ಕಳುಹಿಸಲು ವಿನಂತಿಸಲಾಗಿದೆ. ವಿ.ಸೂ; ಯಾವುದೇ ಕಾರಣಕ್ಕೂ ಹಸ್ತಪ್ರತಿಯನ್ನು ಹಿಂದಿರುಗಿಸಲಾಗುವುದಿಲ್ಲ. ಮೇಲ್ ಮೂಲಕ ಕಳಿಸುವದಕ್ಕಿಂತ ಡಿಟಿಪಿ ಮಾಡಿದ ಹಸ್ತಪ್ರತಿ ಕಳಿಸಿಕೊಡಬೇಕು. ಬರವಣಿಗೆ ಮಾಡಿದ ಹಸ್ತಪ್ರತಿಯನ್ನೂ … Read more