ಎತ್ತ ಸಾಗುತ್ತಿದ್ದೇವೆ ನಾವು?: ಸಹನಾ ಪ್ರಸಾದ್
ಪ್ರತಿದಿನ ದೃಶ್ಯ ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿ, ಜನರ ನುಡಿಗಳಲ್ಲಿ, ಹೆಂಗಸರ ಮೇಲೆ ದೌರ್ಜನ್ಯ, ಮಾನಭಂಗ ಇತ್ಯಾದಿಗಳ ಸುದ್ದಿ ಸರ್ವೇಸಾಮಾನ್ಯವಾಗಿಬಿಟ್ಟಿದೆ. ಸಮೀಕ್ಷೆಗಳ ಪ್ರಕಾರ, ನಮ್ಮ ಮೆದುಳು ಕೆಲವು ಶಬ್ಢಗಳು, ವಿಷಯಗಳನ್ನು ತಕ್ಷಣ ಗುರುತಿಸುತ್ತಂತೆ. ಆದುದರಿಂದಲೇ ಕೆಲವು ಮಾಧ್ಯಮಗಳಲ್ಲಿ ಸುದ್ದಿಗಳನ್ನು ಅತ್ಯಂತ ಆಸಕ್ತಿಯಿಂದ(!!) ರೋಚಕವಾಗಿ ಚಿತ್ರಿಸುತ್ತಾರೆ. ಅದರಲ್ಲಿ ಅವರ ಕಾಳಜಿ, ಕಳಕಳಿಗಿಂತ ಸುದ್ದಿಯನ್ನು ಜನರ ಮನಸ್ಸಿಗೆ ಹೊಡೆಯುವಂತೆ ಸೃಷ್ಟಿಸುವುದೇ ಉದ್ದೇಶ. ದೌರ್ಜನ್ಯದ ಘಟನೆಗಳು ನಡೆದಾಗ ನಮ್ಮ ಮನ ರೊಚ್ಚಿಗೇಳಬೇಕು, ಕಷ್ಟಪಡಬೇಕು. ಆಗ ಉಂಟಾದ ಹಿಂಸೆಯಿಂದ ನಮ್ಮ ಮನಸ್ಸಲ್ಲಿ ಒಂದು ನಿಲುಮೆ ಜನ್ಮತಾಳಬೇಕು. … Read more