ಮೆಟ್ಟು ಹೇಳಿದ ಕಥಾ ಪ್ರಸಂಗ ಒಂದು ನೀಳ್ಗಾವ್ಯ (ಭಾಗ 29 & 30): ಎಂ. ಜವರಾಜ್
-೨೯- ಅವತ್ತೊಂದಿನ ಈ ಅಯ್ನೋರು ಹೊಳಕರಲಿ ಕೈಯಿ ಕಾಲು ತೊಳಕಂಡು ನನ್ನೂ- ಮರುಳ್ಗಾಕಂಡು ಉಜ್ಜಿ ತೊಳ್ದು ನೀರಂಜಿ ಮರದ ಬುಡದಲ್ಲಿ ನೀರ ಸೋರಕ ಬುಟ್ಟು ಗರಕ ಮ್ಯಾಲ ತಿಕ ಊರಿ ಕುಂತ್ಮೇಲ ಅಕ್ಕ ಪಕ್ಕ ಊರೋರು ಅನ್ತ ಕಾಣುತ್ತ ನೆಪ್ಪಿರ ಮುಂದಾಳು ಬಂದ್ರು. ನಾನು ನೋಡ್ತನೆ ಇದ್ದಿ ಗಗ್ಗೇಶ್ವರಿ ಆಣ್ಗುಂಟ ಹೊಳ ದಾಟ್ಗಂಡು ಚೆಂಗುಲಿ ಬತ್ತಿರದು ಕಾಣ್ತು ಅವನ ಕಂಕುಳಲ್ಲಿ ಏನಾ ಇತ್ತು. ಬಂದವ ಸುತ್ತ ಕುಂತಿದವ್ರ ಮುಂದ ಟವಲ್ಲ ಹಾಸಿ ಪುರಿ ಸುರುದು ಕಾರಸ್ಯಾವ್ಗ ಕಳ್ಳ … Read more