ಅಂಬಿಕಾತನಯನ ಕಾವ್ಯಾನುಸಂಧಾನ: ಅಶ್ಫಾಕ್ ಪೀರಜಾದೆ
ದಿನಾಂಕ ೦೭/೦೧/೨೦೨೦ ರಂದು ಧಾರವಾಡದ ಬೇಂದ್ರೆ ಭವನದಲ್ಲಿ ವಿಜಯಶ್ರೀ ಸಾಹಿತ್ಯ ಪ್ರಶಸ್ತಿ ವಿಜೇತ ಯುವ ಸಾಹಿತಿ ಶ್ರೀ ಮಾರ್ತಾಂಡಪ್ಪ ಎಂ. ಕತ್ತಿಯವರು ರಚಿಸಿದ “ಅಂಬಿಕಾತನಯನ ಕಾವ್ಯಾನುಸಂಧಾನ” ಗ್ರಂಥ ಲೋಕಾರ್ಪಣೆಗೊಂಡಿತು. ಈ ಪ್ರಯುಕ್ತ ಕೃತಿ ಪರಿಚಯ ಇಲ್ಲಿದೆ. ಈ ಕೃತಿಯಲ್ಲಿ ಕತ್ತಿಯವರು ಒಟ್ಟು ಮೂವತ್ತಾರು ಬೇಂದ್ರೆ ಕವಿತೆಗಳೊಂದಿಗೆ ಹೃದಯ ಸಂಪರ್ಕ ಸಾಧಿಸಿದ್ದಾರೆ. ವರ ಕವಿ ಬೇಂದ್ರೆಯವರ ವಿವಿಧ ಕಾವ್ಯ ಸಂಕಲನಗಳಿಂದ ಅತಿಮುಖ್ಯ ಅನಿಸುವ ಕವಿತೆಗಳನ್ನು ಅಯ್ದುಕೊಂಡು ಅದರೊಂದಿಗೆ ಅನುಸಂಧಾನ ನಡೆಸಿದ್ದಾರೆ. ನಾಕು ತಂತಿ, ಜೋಗಿ, ಪರಾಗ, ಏಲಾಗೀತ, ನನ್ನವಳು, … Read more