ನೀವು ಬಡಿಸಿದ್ದು ಪಾಯಸವೋ ಅಥವಾ ಪ್ರೀತಿಯೋ???: ನಾಗೇಶ್ ಪ್ರಸನ್ನ
ನಲ್ಮೆಯ ಗೆಳತಿಯೇ, ನೆನಪಿರಲಿ, ಇದು ನಾನು ಬರೆಯುತ್ತಿರವ ಮೊಟ್ಟಮೊದಲ ಪ್ರೇಮಪತ್ರ. ಈ ಹಿಂದೆ ಯಾರಿಗೂ ಬರೆದಿಲ್ಲ, ಮಂದೆಯೂ ಬರೆಯುವುದಿಲ್ಲ – ನಿಮಗೆ ಹೊರತಾಗಿ. ನಂಬುವುದು, ಬಿಡುವುದು ನಿಮ್ಮ ಕ್ಷಮೆಗೆ ಬಿಟ್ಟಿದ್ದು. ನೀವು ಬಡಿಸಿದ್ದು ಪಾಯಸವೋ ಅಥವಾ ಪ್ರೀತಿಯೋ??? ಸುಮಾರು 5-6 ವರ್ಷಗಳಾಯಿತು ನಾನು ನಿಮ್ಮನ್ನು ಮೊದಲ ಬಾರಿ ನೋಡಿ. ಆ ದಿನದ ನೆನಪು ನನ್ನೆದೆಯಲ್ಲಿ ಇನ್ನೂ ಉಸಿರಾಡುತ್ತಲೇ ಇದೆ. ಅಂದು, ನಿಮ್ಮ ಮನೆಯಲ್ಲಿ ಯಾವುದೋ ಪೂಜಾ ಕಾರ್ಯಕ್ರಮವಿತ್ತು, ಎಷ್ಟೋ ಜನ ನೆರೆದಿದ್ದರು. ಆದರೆ, ಅಷ್ಟೂ ಜನಗಳಲ್ಲಿ ನನ್ನ … Read more