ನಿನ್ನ ಕಣ್ಣುಗಳಲ್ಲಿನ ಉತ್ಸಾಹದ ಜಲಪಾತವ ಕಾಣುವಾಸೆಯೆನಗೆ: ಕೆ. ಎನ್ ಶ್ರೀವಲ್ಲಿ
ನನ್ನೊಲವಿನ ಇನಿಯಾ, ಸವಿನೆನಪೆಂಬ ರೇಷಿಮೆ ದಾರದಿಂದ ಕನಸೆಂಬ ಹೊನ್ನಿನ ಬಟ್ಟೆಯ ನೇಯ್ದಂತೆ ನನ್ನ ಮನದಲಿ ನಿನ್ನದೇ ರೂಪ ಅಚ್ಚೊತ್ತಿದೆ. ಪಿಸುಮಾತಿನ ಸಮಾಗಮದ ಕಲೆಯನ್ನು ನನ್ನಲ್ಲಿ ಅರಳಿಸಿದ್ದು ನೀನಲ್ಲವೆ. ನನ್ನ ಕಡೆಗಣ್ಣಿನ ಮಿಂಚಿನ ನೋಟ, ಚೆಂದುಟಿಯ ಮುಗುಳುನಗೆ, ಕಿರುಬೆರಳ ಸ್ಪರ್ಶ, ನನ್ನ ಮನದ ಭಾವನೆಯನ್ನು ನಿನಗೆ ತಿಳಿಸಿಲ್ಲವೆ. ನನ್ನ ಅನಿಸಿಕೆಗಳು ನಿನಗೇಕೆ ಅರಿವಾಗಲೇ ಇಲ್ಲ. ಮೋಡದ ಮುಸುಕಿನಲಿ ಪೂರ್ಣಚಂದ್ರ ಮರೆಯಾದ ಆ ಬೆಳದಿಂಗಳ ರಾತ್ರಿಯಲಿ, ನಿನ್ನ ಕಣ್ಣೋಟದ ಬೆಳ್ಳಿ ಬೆಳಕಿಗೆ ನಾ ಸೋತು ಕಣ್ಮುಚ್ಚಿದ್ದು ನಿನಗೇಕೆ ಅರಿವಾಗಲೇ ಇಲ್ಲ … Read more