ಬೆಳ್ಳಿಮೋಡ: ವಾಸುಕಿ ರಾಘವನ್

  ನಾನು ಪುಟ್ಟಣ್ಣ ಕಣಗಾಲ್ ಅವರ ಸಾಕಷ್ಟು ಚಿತ್ರಗಳನ್ನ ನೋಡಿಲ್ಲ. ನೋಡಿರುವ ಬಹಳಷ್ಟು ಚಿತ್ರಗಳು ಚಿಕ್ಕವನಾಗಿದ್ದಾಗ, ದೂರದರ್ಶನದಲ್ಲಿ ಪ್ರಸಾರ ಆಗ್ತಿದ್ದ ಕಾಲದಲ್ಲಿ, ಜಾಹೀರಾತುಗಳ ನಡುವೆ. ಚಲನಚಿತ್ರ ಒಂದು ಕಲೆ ಎಂಬ ಗ್ರಹಿಕೆ ಶುರು ಆದಮೇಲೆ ನೋಡಿರೋ ಚಿತ್ರಗಳಲ್ಲಿ ಕಾರಣಾಂತರಗಳಿಂದ ಕನ್ನಡ ಚಿತ್ರಗಳ ಸಂಖ್ಯೆ ಕಮ್ಮಿ ಅಂತಾನೆ ಹೇಳ್ಬೇಕು. ಈ ವಿಷಯದ ಬಗ್ಗೆ ನನಗೆ ಬೇಸರ ಇದೆ ಕೂಡ.   ಇದನ್ನು ಬದಲಿಸೋ ಪ್ರಯತ್ನ ಮಾಡ್ತಿದೀನಿ ಇತ್ತೀಚಿಗೆ. ಈ ಪಯಣದಲ್ಲಿ ನನಗೆ ಸಿಕ್ಕ ಪುಟ್ಟಣ್ಣರ ಚಿತ್ರ “ಬೆಳ್ಳಿಮೋಡ”. 1966ರಲ್ಲಿ ಬಿಡುಗಡೆಯಾದ … Read more

ಇಬ್ಬರ ಕವಿತೆಗಳು: ನರಹರಿ ಭಟ್ಟ, ವೈ.ಬಿ. ಹಾಲಬಾವಿ

  ದೂರದೂರಿನ ಚಿಂತೆ…. ಏನಂತರಾಳಗಳು ಏನಗ್ನಿಜ್ವಾಲೆಗಳು ದಾಹಗಳ ಗಾಳಗಳ ನರ್ತನೋನ್ಮಾದಗಳು ಅರ್ಧಸತ್ಯದ ಮೆಲಕು ವಿಶ್ರಾಂತಿ ಬೇಡದೆಯೆ ಪೂರ್ಣಸತ್ಯದ ತಾಣ ಹುಡುಕುತಿಹುದು||೧||   ದೇಹಪಂಜರ ತೊರೆವ ಪ್ರಾಣಪಕ್ಷಿಯ ತವಕ ಹುಟ್ಟುಸಾವಿನಗುಟ್ಟ ಹೊರಗೆಳೆವಯತ್ನ ಒರೆಯಿಂದ ಹೊರಗೆಳೆದ ಕತ್ತಿಯಲಗಿನ ತೆರದಿ ಚರ್ಮಚೀಲದ ಹಂಗು ತೊರೆದು ಹೊರಟಂತೆ||೨||   ಬದುಕು ಭಾವನೆಯೆಲ್ಲ ಕರಗಿ ಸೋರಿದೆ ಹೃದಯ ಕಣ್ಪನಿಯು ಕಾರಣವ ಹುಡುಕ ಹೊರಟಿದೆ ಚೆಲುವ ಸುಪ್ತ ಮನಸಿನಭಾವ ಮುಪ್ಪಾಗಿ ಹಿಂಜುತಿದೆ ಉಪ್ಪೆಲ್ಲ ಕರಗಿ ಗಡಸು ನೀರಾದಂತೆ||೩||   ಅನುಭವದ ಜಾಳೆಲ್ಲ ಕುಸಿದು ಜಾರಿದೆ ಧರೆಗೆ … Read more

ಜಾತಿವ್ಯವಸ್ಥೆಯ ಕಪ್ಪುಕನ್ನಡಕ: ಅನುರಾಧ ಪಿ. ಸಾಮಗ

ಹಲ ದಿನಗಳ ಹಿಂದೆ ಪ್ರಸಿದ್ಧ ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ಒಂದು ಲೇಖನ ಕಣ್ಸೆಳೆದಿತ್ತು. ಅದು ಪುರಂದರದಾಸರನ್ನು ಕರ್ಣಾಟಕ ಸಂಗೀತದ ಪಿತಾಮಹನೆಂದು ಕರೆಯುವುದರ ವಿರುದ್ಧ ಎತ್ತಿದ ದನಿಯಾಗಿತ್ತು. ಅಲ್ಲಿ ಸಂಗೀತಕ್ಕವರ ಕೊಡುಗೆಯ ಪ್ರಮಾಣವಾಗಲಿ, ಕರ್ಣಾಟಕ ಸಂಗೀತದ ಆ ತಲೆಮಾರುಗಳಿಂದ ಈ ತಲೆಮಾರಿನವರೆಗಿನ ಸಂವಹನದಲ್ಲಿ ಅವರ ಕೆಲಸದ ಪಾತ್ರವೇನು ಎಂಬುದಾಗಲಿ ಲೇಖಕರಿಗೆ ಪ್ರಸ್ತುತವೆನಿಸದೆ, ಪುರಂದರರು ಕೀಳ್ಜಾತಿಯೆನುವ ವ್ಯವಸ್ಥೆಯ ಸದಸ್ಯರಾಗಿರದೆ ಇದ್ದು, ಒಂದು ಸಂಸ್ಕೃತಿಯ ಪಿತಾಮಹನೆನಿಸಿಕೊಂಡದ್ದು ಅವರನ್ನು ಕಾಡಿದಂತಿತ್ತು. ಅದರಲ್ಲಿ ಸ್ಪಷ್ಟವಾಗಿ ಉಲ್ಲೇಖಿತವಾದ ಪುರಂದರರಿಗೊಲಿಯದೆ ಕೃಷ್ಣ ಕನಕನಿಗೊಲಿದಿದ್ದ ಎಂಬ ಪದಗಳೇಕೋ ಬಹಳ ಕಾಡುತ್ತಲೇ … Read more

ಏನೆಂದು ಬರೆಯಲಿ, ಬಾರದ ಅಕ್ಷರ ಎದೆ ಗಾಳಕ್ಕೆ ಸಿಕ್ಕಿ ಮೇಲೆ ಬರದ “ಮೀನು”: ಸ್ಫೂರ್ತಿ ಗೌಡ

ಹೆಣ್ಣು ಒಂದು ಅಕ್ಷರ ಬರೆದರೆ ಅದರ ಹಿಂದೆ ಅದೆಂತದೋ ಇತಿಹಾಸ ಕಂಪನ.. ಪಾಂಡವರು ಮಾಡಿದ ರಾಜಸೂಯದಂತಹ ತನ್ಮಯತೆ…ಹೆಣ್ಣೆಂದರೆ ದೇಹವಲ್ಲ, ನಿನ್ನ ಚೆಲ್ಲಾಟಕ್ಕೆ ಕಿಬ್ಬೊಟ್ಟೆ ಕೊಟ್ಟು ಕರಗಿಸುವವಳಲ್ಲ, ನಿನ್ನ ಅಂತಃಕರಣಕ್ಕೆ ಕುಣಿದು ತಣಿಸುವ ರಮಣಿಯಲ್ಲ, ನಿನ್ನ ದುಖಃಕ್ಕೆ ಎದೆ ಒಡ್ಡಿ ತಲೆ ಸವರುವ ಮುದ್ದಲ್ಲ, ಹೆಣ್ಣು… ತಾಳಿಕಟ್ಟಿದ ಗಂಡಿನ ಬಂಧ ಬಿಟ್ಟು ಚೆನ್ನಮಲ್ಲಿಕಾರ್ಜುನೇ ಗಂಡನೆಂದು ಪೂಜಿಸಿದ ಮಹಾದೇವಿ, ಕಾಣದ ಗೋಕುಲ ನಂದನನಿಗೆ ಹಾತೊರೆದು ತನ್ನ ತನವೆಲ್ಲಾ ಸಮರ್ಪಿಸಿದ ಮೀರಾ, ಭೋಗ ಸುಖವ ಬಿಟ್ಟು ಓಡಿ ಬಂದು ಲಿಂಗಕ್ಕೆ ಶರಣು … Read more

ಡ್ರೀಮ್ ಲೈಫ್ ನ ಡ್ರಿಲ್ ಪಾಸಿಟಿವ್ ಆಗಿರಲಿ: ವೀಣಾ ಭಟ್ ಯಲ್ಲಾಪುರ

ಕಾಲ ಬದಲಾಗಿದೆ. ನಿಜವೇ? ಹೌದೆ? ಬದಲಾದದ್ದು ಕಾಲವೇ? ನಮ್ಮಗಡಿಯಾರವೇ? ಅಥವಾ ನಮ್ಮ ಮನಸ್ಸೇ? ನೋಡುವ ದ್ರಷ್ಟಿಕೋನವೇ ? ವೈಚಾರಿಕತೆಯ ಪರಿಯೇ? ಯಾವುದು ಹಾಗಾದರೆ??! ಕನಸುಗಳೂ ಬದಲಾಗುತ್ತಿರುತ್ತವೆ ಕಾಮನಬಿಲ್ಲಿನಂತೆ. ಹೇಗೆ ಕಾಮನಬಿಲ್ಲು ಮೋಡ, ಮಳೆ, ಸೂರ್ಯಕಿರಣ, ಗಾಳಿಯ ಚಾರಣಗಳಿಗನುಗುಣವಾಗಿ ಆಗಸದಲ್ಲಿ ಕಮಾನು ಕಟ್ಟುವುದೋ ಹಾಗೆ ನಮ್ಮ ಆಧ್ಯತೆ, ಅವಶ್ಯಕತೆಗಳಿಗನುಸಾರವಾಗಿ ಕನಸುಗಳನ್ನು ಕಾಣುತ್ತೇವೆ. ಕಿರಿಯರ ಮನಸ್ಸಂತೂ ಚಂಚಲ. ಟೀನೇಜ್ ಮಧುರ ಯಾತನೆಯ ಮರ್ಕಟ. ಮದ್ಯವಯಸ್ಸು ಸಂಸಾರ-ಸಂತೃಪ್ತಿ ಹೊಂದಿಸಲು ಜಂಜಾಟ. ಲಿಟ್ಲ್ ಪಾಂಡವಾಸ್, ಲಿಟ್ಲ್ ಕೌರವಾಸ್ ಗಳ ಚಕಮಕಿಯ ಚೆಲ್ಲಾಟ, ಸುತ್ತಮುತ್ತ ಭಾಷಣ-ಕೂಟಗಳು, ಫ್ಲೆಕ್ಸ್ , ಬಂಟಿಂಗ್ಸ್ , ಬ್ಯಾನರ್ , … Read more

ಪಂಜು ಚುಟುಕ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆದ ಸುಷ್ಮಾ ಮೂಡುಬಿದರೆ ಅವರ ಹನಿಗವಿತೆಗಳು

ಮೌನ ಮಾತಾಗದ ಹೊರತು ಕಂಬನಿಗಳ ತಡೆಯುವರಿಲ್ಲ ಮಾತು ನೀನಾಗದ ಹೊರತು ದುಮ್ಮಾನಕ್ಕೆ ಅಂತ್ಯವಿಲ್ಲ. ಹುಸಿ ನಿರೀಕ್ಷೆಗಳ  ಜೀವಂತಿಕೆ  ಜೀವಂತ ಕನಸುಗಳಿಗೇಕೆ  ಇರುವುದಿಲ್ಲ.. ?  ಅವಳಿಗೆ ಬೆನ್ನು ಮಾಡಿ  ಈತನೊಂದಿಗೆ ಹೊರಡಲು  ಅಣಿಯಾದಾಗ  ಅಮ್ಮನೆಂಬ ಅವಳ  ಕಣ್ಣಿಂದ ಉದುರಿದ್ದು  ನನ್ನೆಡೆಗಿದ್ದ ಅವಳ ಕನಸುಗಳಾ..?! ಹೆಗಲ ಮೇಲೆ ಮಗಳನ್ನು  ಅಂಬಾರಿ ಕೂರಿಸುವ  ಇವನನ್ನು ನೋಡುವಾಗ  ಮನೆಯ ಮೂಲೆಯ  ಒಂಟಿ ಚಾಪೆಯ ಮುದುಕ, ಅಪ್ಪನ ನೆನಪಾಗುತ್ತದೆ..!  ನಾ ಸಿಕ್ಕಿ ನಿನ್ನ ಕಾಡಿಸುವುದಕ್ಕಿಂತ ಸಿಗದೇ ನೀನೇ ಕಾಡಿಸಿಕ್ಕೊಳ್ಳುವುದು ಚಂದ ಅಲ್ಲವೇನೋ..?! ಕಣ್ಣೋಟಕ್ಕೆ , … Read more

ಇಕ್ಕೇರಿಯಲೊಂದು ಸುತ್ತು: ಪ್ರಶಸ್ತಿ ಪಿ.

'ಪಂಜು' ಬಳಗದವರು ಒಂದಂಕಣ ಬರೀತೀರಾ ಅಂದಾಗ ಒಂಥರಾ ಆಶ್ಚರ್ಯ!  ನಾನೂ ಅಂಕಣ ಬರೀಬೋದಾ ಅಂತ. ಪ್ರಯತ್ನ ಮಾಡಿ ನೋಡಿ ಅಂತ ಮತ್ತೆ ಕಾಲ್ ಮಾಡಿದ್ರು. ಸರಿ ನೋಡೋಣ ಅಂದರೂ ಮತ್ತೆ ಬಂದ ಯೋಚನೆ ಒಂದೇ, ಏನು ಬರ್ಯೋದು ?! ಮುಂಚೆಯಿಂದಲೂ ನಮ್ಮ ಗೆಳೆಯರ ಗುಂಪಿಗೆ 'ಕಾಲಿಗೆ ಚಕ್ರ ಕಟ್ಕೊಂಡೋರಾ ನೀವು' ಅಂತನೇ ತಮಾಷೆ ಮಾಡ್ತಿದ್ರು ಉಳ್ದವ್ರು. ಹಾಗಾಗಿ ಅದ್ನೇ ಯಾಕೆ ಬರೀಬಾದ್ರು ಅನುಸ್ತು. ಇನ್ನು ಹೆಚ್ಗೆ ಮಾತಾಡೋ ಬದ್ಲು ನನ್ನ ಕಾಲಿನ ಚಕ್ರ ನಿಮ್ಗೇ ಕೊಡ್ತೀನಿ. ಬನ್ನಿ, … Read more

ಹೀಗೋರ್ವ ಹಸಿರು ಸ್ವಾಮೀಜಿ:ಪ್ರಸಾದ್ ಎಸ್

  ಒಂದು ಸಮೃದ್ದವಾದ ಅರಣ್ಯವನ್ನು ನಾಶ ಮಾಡಲು ಮಾನವನಿಗೆ ಕೇವಲ ಕೆಲವು ಸಮಯ ಸಾಕು. ಆದರೆ ಒಂದು ಸಮೃದ್ದವಾದ ಅರಣ್ಯ ಬೆಳೆಸುವುದು ಒಂದು ಸಾಧನೆಯೇ ಸರಿ, ಅದಕ್ಕೆ ದಶಕಗಳೇ ಬೇಕು. ಅರಣ್ಯವನ್ನು ಬೆಳೆಸುವುದು ಸುಲಭದ ಮಾತಲ್ಲ. ಅದಕ್ಕೆ ಅಗಾಧವಾದ ಪರಿಶ್ರಮ ಬೇಕು, ಸುಮ್ಮನೆ ಒಂದಷ್ಟು ಜಾಗದಲ್ಲಿ ಒಂದಷ್ಟು ಗಿಡಗಳನ್ನು ನೆಟ್ಟು ಬಂದರೆ ಅರಣ್ಯ ಬೆಳೆಯುವುದಿಲ್ಲ.ಅದನ್ನು ಸರಿಯಾಗಿ ಪೋಷಿಸುವುದು ಅತ್ಯಂತ ಮಹತ್ವದ್ದಾಗಿರುತ್ತದೆ .ಈ ಕೆಲಸವನ್ನು ನಮ್ಮ ಸ್ವಾಮೀಜಿ ಅತ್ಯಂತ ಶೃದ್ದೆಯಿಂದ ಮಾಡಿದ್ದಾರೆ. ಆದ್ದರಿಂದಲೇ ಇಂದು ಶಿವನಹಳ್ಳಿಯಲ್ಲಿ ಸಮೃದ್ದವಾದ ನೂರಾರು … Read more

ಎರೆಡು ಕವಿತೆಗಳು:ಅನುರಾಧ ಸಾಮಗ ಹಾಗೂ ಪ್ರೇಮಾಶ್ರೀ

  ಕಣ್ಣೀರಿಗೂ, ಎದೆಯ ಆರ್ದ್ರತೆಗೂ ಒಪ್ಪಿಗೆ ಮುದ್ರೆಯ ಪ್ರಮಾಣ ಪತ್ರವೇ?! ಅವು ತಮ್ಮ ಸಾಬೀತು ಪಡಿಸಬೇಕೇ?.. ಸ್ಪಂದನಕಿಲ್ಲಿ ಜಾತಿಯಗ್ನಿಪರೀಕ್ಷೆಯ ಪಾಡು ನಿಜಭಾವಕೆ ಬಂಜೆಯ ಹೆರಿಗೆಬೇನೆಯ ಪಟ್ಟ   ರಕ್ತಮಾಂಸಗಳೊಂದೇ, ದೇಹಗೂಡೊಂದೇ ವಾಸವಲ್ಲಿ ನೂರಾರು ಹಕ್ಕಿಯಂಥ ಭಾವಗಳಿಗೆ. ಬಣ್ಣ, ಗಾತ್ರ, ಕೂಗಷ್ಟೇ ಬೇರೆಬೇರೆ, ಹಾರಾಟ ಜನ್ಮಸಿದ್ಧಹಕ್ಕು ಹಕ್ಕಿ ಜನ್ಮಕೆ. ನೀ-ನಾನೆಂಬ ನಿರ್ಬಂಧವಿಲ್ಲದ ಸ್ವಚ್ಛಂದ ಚಲನೆ.   ಶೋಷಣೆಗೆದುರು ನಿಂತವರೇ, ಘೋಷಣೆ, ಬಾವುಟದಾಸರೆಯಿರದಲ್ಲೂ, ಯಾವ ಜೀವ-ಬಂಧುವಿನದಾದರೂ, ಹಸಿವೆ-ದಾರಿದ್ರ್ಯಕೆ, ದಮನ-ಅಸಮಾನತೆಗೆ ಸಾವು-ನೋವಿಗೆ ಒಳಗಿಲ್ಲೆಡೆ ಕರಗುತದೆ.. ಅನ್ಯಾಯಕೆ ಒಳಗೆಲ್ಲೆಡೆ ಮರುಗುತದೆ, ದಬ್ಬಾಳಿಕೆಗೆ ಒಳಗೆಲ್ಲೆಡೆ … Read more

ಅಮೊರೆಸ್ ಪೆರ್ರೋಸ್:ವಾಸುಕಿ ರಾಘವನ್

  "ಅಮೊರೆಸ್ ಪೆರ್ರೋಸ್". ನಾನು ನೋಡಿದ ಮೊದಲ ಆಂಗ್ಲೇತರ ವಿಶ್ವಚಿತ್ರಗಳಲ್ಲಿ ಒಂದು. ಚಿತ್ರದ ಮೊದಲ ದೃಶ್ಯವೇ ಒಂದು ಟೆನ್ಸ್ ಕಾರ್ ಚೇಸ್. ಐದು ನಿಮಿಷದೊಳಗೆ ಒಂದು ಭೀಕರ ಕಾರ್ ಅಪಘಾತ ಆಗುತ್ತೆ. ಇದರಿಂದ ಮೂರು ಜನರ ಬದುಕಿನಲ್ಲಿ ಊಹಿಸಲಾಗದ ರೀತಿಯಲ್ಲಿ ಬದಲಾವಣೆಗಳು ಉಂಟಾಗುತ್ತವೆ. ಈ ಮೂರು ಜನರ ಬದುಕು ಅಪಘಾತದ ಮುನ್ನ ಹೇಗಿರುತ್ತೆ, ಹೇಗೆ ಮೂರೂ ಜನರು ಅದೇ ಜಾಗದಲ್ಲಿ, ಅದೇ ಸಮಯದಲ್ಲಿ ಬರುವಂತೆ ಆಗುತ್ತೆ ಹಾಗೂ ಅಪಘಾತದ ನಂತರ ಏನಾಗುತ್ತೆ ಅನ್ನೋದೇ ಚಿತ್ರದ ಕಥೆ. ಈ … Read more

ಯಶಸ್ಸಿನ ಬೆನ್ನು ಹತ್ತಿ:ಪ್ರಸಾದ್ ಕೆ.

  ರಿಚರ್ಡ್ ಬ್ರಾನ್‌ಸನ್! ಈ ಶತಮಾನದ ಓರ್ವ ಯಶಸ್ವಿ ಉದ್ಯಮಿ, ಲೇಖಕ, ಸಾಹಸಿ ಮತ್ತು ವರ್ಜಿನ್ ಸಮೂಹ ಸಂಸ್ಥೆಗಳ ಅಧ್ಯಕ್ಷ. ವಿಶ್ವದಾದ್ಯಂತ ನಾಲ್ಕುನೂರಕ್ಕೂ ಹೆಚ್ಚು ಕಂಪೆನಿಗಳ ಮಾಲೀಕ. ಸಂಗೀತ, ಏರ್ ಲೈನ್ಸ್, ಮೊಬೈಲ್ಸ್ ಸೇರಿದಂತೆ ಹತ್ತು ಹಲವು ಕ್ಷೇತ್ರಗಳಲ್ಲಿ ಮೂವತ್ತಕ್ಕೂ ಹೆಚ್ಚು ದೇಶಗಳಲ್ಲಿ ತನ್ನ ಕಬಂಧಬಾಹುಗಳನ್ನು ವರ್ಜಿನ್ ಸಮೂಹ ಸಂಸ್ಥೆಗಳು ಹಬ್ಬಿಕೊಂಡಿವೆ. ಇವರ ಆತ್ಮಕಥೆ ’ಲೂಸಿಂಗ್ ಮೈ ವರ್ಜಿನಿಟಿ’ ಜಗತ್ತಿನಾದ್ಯಂತ ಕೋಟಿಗಟ್ಟಲೆ ಸಂಖ್ಯೆಯಲ್ಲಿ ಬಿಕರಿಯಾದ ಬಹುಚರ್ಚಿತ ಕೃತಿ. ರಿಚರ್ಡ್ ತನ್ನ ಜೀವನದಲ್ಲಿ ಅನುಭವಗಳಿಂದ ಕಲಿತ ಪಾಠಗಳನ್ನು ’ಸ್ಕ್ರ್ಯೂ … Read more

ತುಮುಲಗಳು ತೀರಿ ಹೋದ ಹೊತ್ತು:ಎಚ್.ಕೆ.ಶರತ್

    ತುಮುಲಗಳು ತೀರಿ ಹೋದ ಹೊತ್ತು… ಭಾವುಕ ಕನ್ನಡಿ ಚೂರಾಯ್ತು. ಮನಸ್ಸು ಮೋಡ ಕವಿದ ಸಂಜೆಯಷ್ಟೇ ನೀರವ. ದೂರದಲ್ಲೆಲ್ಲೋ ಮಳೆ ಹನಿಗಳ ಕಲರವ. ಬರ ಬರಬಾರದಿತ್ತು ಭಾವುಕತೆಗೆ. ಸುಖಾಸುಮ್ಮನೆ ಅಳುವುದರಲ್ಲೂ ಒಂದು ಸುಖ. ಅಕಾರಣವಾಗಿ ನಗೆ ಚೆಲ್ಲಿದಾಗಲೂ ಇಣುಕುವ ದುಃಖ… ಬದುಕು ಕಳೆಗುಂದದಿರಲು ಕಣ್ಣಂಚಲ್ಲಿ ಒಂದಷ್ಟು ನೀರು ಶೇಖರಿಸಿಟ್ಟುಕೊಳ್ಳುವ ಜಾಣ್ಮೆ ಮೊದಲೇ ಮೈಗೂಡಬೇಕಿತ್ತು. ಎರಡು ಬದಿಯ ಮೌನ ಮಾತಾಡುವಷ್ಟು, ಒಂದು ಬದಿಯ ಕದನ ಪದ ಕಕ್ಕಲಾರದು. ಮೌನವಿರಬೇಕಿತ್ತು ಇಬ್ಬರ ನಡುವೆ… ನಮ್ಮಿಬ್ಬರಿಗೂ ಇಷ್ಟವಾದ ಮಾತನಾಡುವ ಸಲುವಾಗಿಯಾದರೂ! … Read more

ಗಿಫ್ಟ್ ಶಾಪ್ ನಲ್ಲೊಂದು ದಿನ: ಸಂತೋಷ್ ಕುಮಾರ್ ಎಲ್.ಎಮ್.

ಪ್ರಪಂಚ ಓಡುತ್ತಿದೆ ಅನ್ನುವ ಭ್ರಮೆಯಲ್ಲಿ ನಾವು! ಪ್ರಪಂಚವೇನೂ ಓಡುತ್ತಿಲ್ಲ, ಅದು ಇದ್ದಲ್ಲೇ ಇದೆ. ಆದರೆ ಮನುಷ್ಯನೆಂಬೋ ಈ ಮನುಷ್ಯ ಮಾಮೂಲಿ ಜೀವನವನ್ನು ಸುಖಾಸುಮ್ಮನೆ ಓಡಿಸುತ್ತಿದ್ದಾನೆ ಎನ್ನುವುದು ತಿಳಿದವರ ಮಾತು. ಅದೇನೇ ಇರಲಿ ಈ ಓಡುತ್ತಿರುವ ಜೀವನದ ಮಧ್ಯೆ ಅದೆಷ್ಟೋ ಮುಗ್ಧರು, ಬಡವರು, ಅಸಹಾಯಕ ಪುಟಾಣಿಗಳು ನಮ್ಮ ಕಾಲಿಗೆ ಎಡವಿದರೂ ನಮಗೆ ಗೊತ್ತೇ ಇಲ್ಲದವರಂತೆ ಮುಂದೆ ಹೋಗುತ್ತಿರುತ್ತೇವೆ. ನಮ್ಮ ಪಕ್ಕದಲ್ಲೇ ರಸ್ತೆಯಲ್ಲಿ ಅಪಘಾತವಾಗಿ ನಮ್ಮ ಅಪ್ಪನ ವಯಸ್ಸಿನ ವ್ಯಕ್ತಿಯೊಬ್ಬ ಬಿದ್ದು ಹೊರಳಾಡುತ್ತಿದ್ದರೆ ಆತನ ಕಡೆಗೆ ಕಣ್ಣಾಯಿಸಿಯೂ ನೋಡದೆ ಆಫೀಸಿನತ್ತ … Read more

ಅಪರೂಪಕ್ಕೊಂದ್ ಮದ್ವಿಗಿ ಹೋಗಿದ್ನಿರಿ (ಭಾಗ-೨):ರುಕ್ಮಿಣಿ ಎನ್.

ಆ ತೆಗ್ಗಿಮನಿ ಸಿದ್ದಕ್ಕನ್ ಹೆಸರ ಎತ್ತುಗೊಡ್ದ, ದೂರ್ನಿಂದ ಅಕಿ ಬರುದ್ ಕಾಣ್ತ್. ಬರಿಮೈ ಮುಕ್ಳಿ ಹುಡುಗನ್ ಬಗಲಾಗ ಕುಂದ್ರಸ್ಕೊಂಡ್, ಹುಡುಗನ ಚಡ್ಡಿ ಸೊಂಟದಾಗ ತುರ್ಕೊಂಡ್, ಇನ್ನೊಂದ್ ಕಡೆ ಹುಡ್ಗಿ ಕೈ ಹಿಡದ್ ದರಾ-ದರಾ ಎಳ್ಕೋತ್ ಬರಾಕತ್ತಿದ್ಳು. ಅಕೀ ಆ ಕೂಸಿನ್ ಕೈ ಎಳಿಯು ಕಡ್ತಕ್ಕ, ಹುಡುಗಿದ್ ರಟ್ಟಿ ನೂಸ್ತಿತ್ತ್ ಯಾಂಬಾಲ್(ಯಾರಿಗೆ ಗೊತ್ತು). ಒಂದ್ ಸವ್ನಿ ರೊಂಯ್ ಅಂತ ಅಳಾಕತ್ತಿತ್ ಹುಡುಗಿ.  ಕಣ್ಣಾಗೀನ್ ನೀರ್ ಕಪಾಳಕ್ಕ್ ಬಂದ್ರ, ಮೂಗನ್ಯಾಗಿನ್ ಸುಂಬಳ್ ಬಾಯಾಗ್ ಇಳ್ಯಾಕತ್ತಿತ್. ದೊಡ್ಡ್  ಗಾಡ್ಯಾಗ್ ಹತ್ತಾಕ್ ಏನರ … Read more

ಮಹಿಳೆ ಮತ್ತು ಸಂಗೀತ: ಅನುರಾಧ ಸಾಮಗ

  ಗೇಯತೆಗೊಳಪಡುವ ಕವನವೊಂದು ಗೀತೆಯಾಗುತ್ತದೆ. ಗೇಯತೆ ಆ ರಚನೆ ಬಿಂಬಿಸುವ ಭಾವವನ್ನು ತೀವ್ರಗೊಳಿಸುತ್ತದೆ. ಆ ಗೀತೆ ಸ್ವರ-ಲಯ, ರಾಗ-ತಾಳಗಳೆಂಬ ನಿರ್ದಿಷ್ಟತೆಗೊಳಪಟ್ಟಾಗ ಅದು ಸಂಗೀತವಾಗುತ್ತದೆ. ಇದು ಭಾವ ಬಿಂಬಿಸುವುದರೊಂದಿಗೆ, ಕೆಲವು ಕಟ್ಟುನಿಟ್ಟಿನ ನಿಯಮಗಳಿಗೊಳಪಡುವ ಶಿಸ್ತಿನೊಡನೆ ಪಾಂಡಿತ್ಯಪೂರ್ಣವೆನಿಸುತ್ತದೆ. ಮನುಷ್ಯ ಹುಟ್ಟಿನಿಂದಲೇ ಭಾವಜೀವಿ.  ಆದಿಮಾನವನ ಕಾಲದಿಂದಲೂ ಮಾತು ಎನ್ನುವುದು ಸಂಜ್ಞೆಗಳ ಮುಂದುವರಿಕೆಯಾಗಿ ಹುಟ್ಟಿದರೆ, ಹಾಡು ಅದೇ ಮಾತಿನ ಮುಂದುವರಿಕೆಯಾಗಿ ಆಂಗಿಕಸಂಜ್ಞೆಗಳು ಕುಣಿತವಾದಾಗ ಅದಕ್ಕೆ ಪೂರಕವಾಗಿ ಹುಟ್ಟಿರುವುದಾಗಿದೆ. ಬಹುಶಃ ಹಾಡು ಮತ್ತು ಕುಣಿತ ದಿನದ ಬೇಟೆಯೇ ಮೊದಲಾದ ಜೀವನೋಪಾಯದ ಕೆಲಸಗಳ ದಣಿವನ್ನು ಕಡಿಮೆಯಾಗಿಸುವ … Read more

ಪಕ್ಷಾಂತರ ಮತ್ತು ಪೂಜಾಯಣ:ವಿಜಯ್ ಹೆರಗು

  ಎಂದಿನಂತೆ ನಮ್ಮ ಕೆಂಚ, ಸೀನ, ಸಿದ್ದ, ನಾಣಿ ಎಲ್ಲಾರೂ ಬಂದು ಅವರ ಮಾಮೂಲಿ 'ಅಡ್ಡಾ' ರಾಮಣ್ಣನ ಟೀ ಅಂಗಡಿ ಮುಂದೆ ಕೂತ್ಕೊಂಡು ಹರಟೆ ಹೊಡೀತಾ ಇದ್ರು. ನಮ್ ಸಿದ್ದ ಅಲ್ಲಿ ಇದ್ದ ಅಂದ್ಮೇಲೆ ರಾಜಕೀಯದ ಮಾತು ಬರಲೇಬೇಕು..   ಸಿಧ್ಧ : ಲೋ ಕೆಂಚ ಇಷ್ಯಾ ಗೊತ್ತಾಯ್ತಾ ? ನಮ್ ಪೂಜಾ ಗಾಂಧೀ ಫ್ಯಾನ್ ಹಿಡ್ಕಂಡು ನೇತಾಡ್ತಾ ಅವಳಂತೆ.!!?? ಕೆಂಚ : ಅಯ್ಯೋ ಬುಡ್ಲಾ ಆ ಸ್ಟೋರಿ ಗೊತ್ತಿಲ್ವಾ ನಿಂಗೆ. ಆಯಮ್ಮಾ ಮೊನ್ನೆ ಹೊರೆ ಹೊತ್ಕೊಂಡು ಹೋಯ್ತಾ ಇದ್ಲು. … Read more

ಕವನಗಳು:ಪೂರ್ಣಿಮಾ ಹಾಗೂ ಹಿಪ್ಪರಗಿ ಸಿದ್ದರಾಮ್

  ಆಸ್ಪತ್ರೆಯಲ್ಲಿ ಅಮ್ಮ ಖಾಯಿಲೆಯಾದಾಗ ತುತ್ತು ತಿನ್ನಿಸಿದ್ದವಳಿಗೆ ಏಕೋ ತೃಪ್ತಿಯಾಗಲಿಲ್ಲ, ತನ್ನ ಅಮ್ಮ ಚಂದ್ರನ ತೋರಿಸಿ ತಿನಿಸಿದ್ದ ತುತ್ತುಗಳ ನೆನಪಾಗಿ …   ಹತ್ತು ಕಥೆ ಹೇಳು ಎಂದು ಅಜ್ಜನ ಕೈ ಜಗ್ಗಿದಾಗ, ಕೈ ಹಿಡಿದು ಹಳ್ಳಿಯೆಲ್ಲ ಹೆಜ್ಜೆ ಹಾಕಿಸಿದ ಕಣ್ಣ ಮುಂದೆ ನೂರು ಕಥೆಗಳು ಸರಿದಾಡಿದವು…   ಪುಟ್ಟ ಮನೆಯನ್ನು ಹಿಗ್ಗಿಸಲು ತಾನೆ ಬೆಳೆಸಿದ ಅಂಗಳದಲ್ಲಿನ ಮರಗಳನ್ನು ಕೆಡವಿದ, ಅದೊಂದು ದಿನ ತಣ್ಣನೆಯ ವಾತಾವರಣ ಹುಡುಕುತ್ತ ಹೊರಟವನು ಬೇರೆಯವರು ಬೆಳಸಿದ್ದ ಮರಗಿಡಗಳ ಪಾರ್ಕಿನಲ್ಲಿ ಕುಳಿತ…   … Read more