ನಮ್ಮಪ್ಪನೇ ಈಗ ಸೊಸೈಟಿಯ ಅಧ್ಯಕ್ಷ: ಡಾ. ಗವಿ ಸ್ವಾಮಿ
ನಮ್ಮ ಸಂಪಾದಕರ ಟೈಮ್ ಲೈನನ್ನು ಜಾಲಾಡುತ್ತಿದ್ದೆ. ಅರೆ, ಡಿಪೋ ಅಕ್ಕಿಯ ಬಗ್ಗೆ ಲೇಖನ ಕಳಿಸಬೇಕಂತೆ ಪಂಜು ವಿಶೇಷ ಸಂಚಿಕೆಗಾಗಿ! ಛೇ ನಾನು ಇದನ್ನು ಮೊದಲೇ ಗಮನಿಸಬಾರದಿತ್ತಾ. ಇನ್ನೊಂದೇ ದಿನ ಬಾಕಿ ಇದೆ. 18ಕ್ಕೆ ಡೆಡ್ ಲೈನ್. ಬರೆಯಲೇಬೇಕು. ಏನಾದರೂ ಬರೆಯಲೇಬೇಕು. ಆ ಹಕ್ಕು ನನಗಿದೆ. ಬಹುಶಃ ಡಿಪೋ ಅಕ್ಕಿಯ ಬಗ್ಗೆ ಅಧಿಕಾರಯುತವಾಗಿ ಮಾತನಾಡುವ ಹಾಗು ಬರೆಯುವ ಹಕ್ಕು ಇರುವುದು ಅದರ ರುಚಿ ನೋಡಿದವರಿಗೆ ಮಾತ್ರ! ಅವರಲ್ಲಿ ನಾನೂ ಒಬ್ಬ . ಅದಕ್ಕೇ ಹೇಳಿದ್ದು ನನಗೆ ಹಕ್ಕಿದೆ … Read more