ಪ್ರೇಮ ವೈಫಲ್ಯ: ವಾಸುಕಿ ರಾಘವನ್

ಎರಡು ಕನಸು, ಬಂಧನ, ಪಲ್ಲವಿ ಅನುಪಲ್ಲವಿ, ಅಮೆರಿಕಾ ಅಮೆರಿಕಾ, ನಮ್ಮೂರ ಮಂದಾರ ಹೂವೇ, ಅಮೃತವರ್ಷಿಣಿ, ಮಾನಸ ಸರೋವರ…ಹಾಗೂ “ಏ” ಚಿತ್ರಗಳಲ್ಲಿ ಮುಖ್ಯವಾಗಿ ಏನು ಕಾಮನ್ ಆಗಿದೆ? ಹೌದು, “ಪ್ರೇಮ ವೈಫಲ್ಯ”, ಅದರಲ್ಲೂ ಹೀರೋ ವೈಫಲ್ಯವನ್ನು ಅನುಭವಿಸೋದು! ಆದರೆ “ಏ” ಚಿತ್ರಕ್ಕೂ ಬೇರೆ ಚಿತ್ರಗಳಿಗೂ ಒಂದು ಪ್ರಮುಖ ವ್ಯತ್ಯಾಸ ಏನು ಗೊತ್ತಾ? ಈ ಸನ್ನಿವೇಶವನ್ನು ಹೀರೋ ಹ್ಯಾಂಡಲ್ ಮಾಡಿದ ರೀತಿ. “ಎರಡು ಕನಸು” ಚಿತ್ರದಲ್ಲಿ ತನ್ನ ಹಳೆಯ ಪ್ರೇಯಸಿಯನ್ನು ಮರೆಯಲಾಗದ ನಾಯಕ, ಹೆಂಡತಿಯನ್ನು ಕಡೆಗಣಿಸುತ್ತಾನೆ. “ಬಂಧನ” ಚಿತ್ರದಲ್ಲಿ ತಾನು … Read more

ದೀಪ: ದಿವ್ಯ ಆಂಜನಪ್ಪ

ಅಂಧಕಾರವನ್ನು ತೊಲಗಿಸಿ, ಬೆಳಕನ್ನು ನೀಡಿ ದಾರಿ ತೋರುವ 'ದೀಪ'ವು ಜ್ಞಾನದ ಸಂಕೇತವಾಗಿದೆ. ಸಾಂಪ್ರದಾಯಕ ದೃಷ್ಟಿಯಿಂದಲೂ ದೀಪವು ಶ್ರೇಷ್ಟ ಸ್ಥಾನವನ್ನು ಪಡೆದಿದೆ. ಪೂಜೆ ಆಚರಣೆಗಳಲ್ಲಿ, ಆರತಿ ಬೆಳಗುವಲ್ಲಿ, ಯಾವುದೇ ಒಂದು ಕಾರ್ಯಕ್ರಮದ ಉದ್ಘಾಟನೆಯಲ್ಲಿ, ದೀಪ ಬೆಳಗಿಸುವ ಕಾರ್ಯವೇ ಮೊದಲಾಗಿದೆ. ಹೀಗೆ ನಮ್ಮ ಮನಸ್ಸು, ನಮ್ಮ ಸಂಸ್ಕೃತಿ ಮತ್ತು ನಮ್ಮ ಬುದ್ಧಿಯೂ ದೀಪವನ್ನು ಶ್ರೇಷ್ಠ ಸ್ಥಾನದಲ್ಲಿಟ್ಟು ನೋಡುತ್ತದೆ. ಭಾವನಾತ್ಮಕವಾಗಿಯೂ ಮತ್ತು ಸಾಹಿತ್ಯಾತ್ಮಕವಾಗಿಯೂ ದೀಪವು ನಮ್ಮ ಮನಗಳನ್ನು ಬೆಳಗಿಸಿವೆ ಎಂದೇ ಹೇಳಬಹುದು. ದೀಪವು ಬೆಳಕಿನ, ಜ್ಞಾನದ, ಕ್ರಾಂತಿಯ ದ್ಯೋತಕವಾಗಿ ಅನೇಕ ಕವಿತೆಗಳಾಗಿವೆ. ಕವಿಗಳಿಗೆ ಸ್ಪೂರ್ತಿಯಾಗಿ … Read more

ಕಾಯುವವ-ಕೊಲ್ಲುವವ: ಅಖಿಲೇಶ್ ಚಿಪ್ಪಳಿ

ಕೊಲ್ಲುವುದು ಸುಲಭ. ಕಾಯುವುದು ಕಷ್ಟ. ಒಂದು ಗಿಡವನ್ನು ನೆಟ್ಟು, ಪೋಷಿಸಿ, ರಕ್ಷಿಸಿ ಮರವಾಗುವತನಕ ನೋಡಿಕೊಳ್ಳುವುದು ತಪಸ್ಸಿನಂತೆ. ಕೊಲ್ಲುವುದಕ್ಕೆ ಒಂದು ಕತ್ತಿಯೇಟು ಸಾಕು. ಹಾಗೆ ಕೆಲಬಾರಿ ಪ್ರಕೃತಿಯಲ್ಲಿ ರಕ್ಷಿಸುವ ಪ್ರಯತ್ನವೂ ವಿಫಲಗೊಳ್ಳುವುದಕ್ಕೆ ಪ್ರತ್ಯಕ್ಷವಾಗಿ ನಾವೇ ಕಾರಣವಾಗುವುದು ಇದೆ. ಕಾಯುವ ಪ್ರಯತ್ನದಲ್ಲಿ ಸಫಲಗೊಂಡು ಸಂತೋಷದಿಂದ ಬೀಗಿದ ಘಟನೆಯ ಜೊತೆಗೆ ವಿಫಲಗೊಂಡು ದು:ಖ ಅನುಭವಿಸಿದ ಕತೆಯೂ ಇಲ್ಲಿದೆ. ನಾನು ಕೆಲಸ ಮಾಡುವ ಜಾಗದಲ್ಲಿ ಜನರ ತಿರುಗಾಟ ಹೆಚ್ಚು. ಜೋಡಿ ಪಿಕಳಾರಗಳಿಗೆ ಗೂಡು ಕಟ್ಟಲು ಜಾಗವೊಂದು ಬೇಕು, ಕಾಂಕ್ರೀಟ್ ಕಾಡಿನಲ್ಲಿ ಅವಕ್ಕೆ ಪ್ರಶಸ್ತ … Read more

ಆರ್ಕೆಸ್ಟ್ರಾಗಳೂ ಎಕ್ಸಾಮುಗಳೂ: ಪ್ರಶಸ್ತಿ ಅಂಕಣ

ಮೊನ್ನೆ ಬೆಳಗ್ಗೆ ಟೀವಿ ಹಾಕ್ತಿದ್ದ ಹಾಗೇ ಯಾವ್ದೋ ಕಾರ್ಯಕ್ರಮ. ನಿಮ್ಮ ಆರ್ಮ್ ನ ರೈಟ್ಗೆ ೪೫ ಡಿಗ್ರಿ ರೊಟೇಟ್ ಮಾಡಿ. ಆಮೇಲೆ ಲೆಗ್ಸ ನ ಹಾಗೇ ಪುಷ್ ಮಾಡಿ. ಹಾಗೇ ೨೦ ರೌಂಡ್ಸ್ ರಿಪೀಟ್ ಮಾಡಿ… ಯಪ್ಪಾ, ಇದ್ಯಾವ ಭಾಷೆಯೋ ಶಿವನೇ. ಬೆಂಗ್ಳೂರ ಕನ್ನಡ ಇಷ್ಟು ಕರಾಬ್ ಆಯ್ತಾ ಅಂತ ಬೇಜಾರಾಗಿ ಟೀವೀನೆ ಆಫ್ ಮಾಡ್ತೆ. ಸಂಜೆ ಮನೆಗೆ ವಾಫಾಸ್ ಬಂದ್ರೂ ಮತ್ತೆ ಟೀವಿ ಹಾಕೋ ಮಸಸ್ಸಾಗಿರ್ಲಿಲ್ಲ. ಮುಖಹೊತ್ತಿಗೆ(FB 🙂 ) ತೆಗಿತಾ ಇದ್ದೆ. ಅದೇ ಸಮಯಕ್ಕೆ … Read more

ಪ್ರಜ್ವಲ್ ಫೋಟೋಗ್ರಾಫಿ: ಪ್ರಜ್ವಲ್ ಕುಮಾರ್

ಯಶಸ್ವಿಯಾಗಿ ಬಾವುಟ ಹಾರಿಸಿದೆ  ಇಂಡಿಯನ್ ಬುಲ್ ಫ್ರಾಗ್ ಹೆಲಿಕ್ಯಾಪ್ಟರ್ ಚಿಟ್ಟೆಯ ಗಟ್ಟಿ ಹಿಡಿತ ಹಸಿರು ಹುಳ ಕರೆಂಟ್ ಇಲ್ಲದಿದ್ದಾಗ ಉಪಯೋಗಿಸುತ್ತಿದ್ದ ನಮ್ಮನೆ ದೀಪ ಮಲೆನಾಡ ನೆಲ ಓಟ ನಟ್ಟು ಬೋಲ್ಟು :))

ಯುವ ಪ್ರಕಾಶಕನೊಬ್ಬನ ಅಂತರಾಳದ ಮಾತುಗಳು: ನಟರಾಜು ಎಸ್. ಎಂ.

ಒಮ್ಮೆ ಪುಸ್ತಕವೊಂದನ್ನು ಪ್ರಕಟಿಸುವ ಕನಸು ಕಂಡಿದ್ದೆ. ಗೆಳೆಯನೊಬ್ಬ ತಾನೆ ಆ ಪುಸ್ತಕವನ್ನು ತನ್ನ ಪ್ರಕಾಶನದ ಮೂಲಕ ಪ್ರಕಟಿಸುವೆನೆಂದು ಮಾತು ನೀಡಿದ್ದ. ಟೈಪಿಂಗ್ ನಿಂದ ಹಿಡಿದು ಕರಡು ಪ್ರತಿ ತಿದ್ದುವ ಕೆಲಸವನ್ನು ಸಹ ಶ್ರದ್ಧೆಯಿಂದ ಮಾಡಿ ಮುಗಿಸಿ, ಪುಸ್ತಕ ಪ್ರಕಟವಾಗುತ್ತದೆ ಎಂದು ಆಸೆಯಿಂದ ಬರೋಬ್ಬರಿ ಹತ್ತು ತಿಂಗಳು ಜಾತಕ ಪಕ್ಷಿಯಂತೆ ಕಾದಿದ್ದೆ. ಕವರ್ ಪೇಜ್ ಡಿಸೈನ್ ನಿಂದ ಹಿಡಿದು ಸಣ್ಣ ಪುಟ್ಟ ಕೆಲಸಗಳವರೆಗೆ ಎಲ್ಲವೂ ಮುಗಿದು ಆ ಪುಸ್ತಕ ಅಚ್ಚಿಗೆ ಹೋಗುವುದಷ್ಟೇ ಬಾಕಿ ಇತ್ತು. ವಿಪರ್ಯಾಸವೆಂದರೆ ಆ ಗೆಳೆಯ … Read more

ಹನುಮಂತ ಹಾಲಿಗೇರಿಯವರ ‘ಕೆಂಗುಲಾಬಿ’ ಕಾದಂಬರಿ ಪ್ರಾರಂಭ

ಪಂಜುವಿನ ನಲ್ಮೆಯ ಓದುಗರಿಗಾಗಿ ಲೇಖಕ, ಪತ್ರಕರ್ತ ಹನುಮಂತ ಹಾಲಿಗೇರಿಯವರ ಪ್ರಶಸ್ತಿ ವಿಜೇತ ಕಾದಂಬರಿ "ಕೆಂಗುಲಾಬಿ" ಈ ಸಂಚಿಕೆಯಿಂದ  ಪ್ರಾರಂಭ… ಈ ಗರ್ಭ ಹೊತ್ತಾಗಿನ ತಳಮಳ ಹೇಳತೀರದು: ಕೆಂಗುಲಾಬಿಯ ಆತ್ಮ  ನನ್ನ ಮಸ್ತಕದ ಗರ್ಭದಲ್ಲಿ ಮೊಳಕೆ ಮೂಡಿ ಬೆಳೆಯುತ್ತಿರುವಾಗಲೆಲ್ಲಾ ನಾನು ತಳಮಳಕ್ಕೆ ಈಡಾಗುತ್ತ ಖಿನ್ನನಾಗುತ್ತಿದ್ದೆ. ಇದನ್ನು ಬರೆಯಬೇಕಾ ಬೇಡವಾ  ಎಂದು ತಾಕಲಾಟದಲ್ಲಿಯೆ ಬಹಳಷ್ಟು ದಿನಗಳನ್ನು ದೂಡಿದೆ. ನಾನು ಬರೆಸಿಕೊಂಡೆ ತೀರುತ್ತೇನೆ ಎಂದು ಇದು ಹಟ ಹಿಡಿದಂತೆಲ್ಲಾ ನಾನು ಸೋಲುತ್ತ ಹಿಂದೆ ಸರಿಯುತ್ತಲೆ ಇದ್ದೆ. ನನ್ನೊಡನೆ, ಶಾಲಿಗೆ ಬರುತ್ತಿದ್ದ, ರಜೆಯಲ್ಲಿ ಬಾಗಲಕೋಟೆಯ … Read more

ಸುಸ್ಥಿರ ಅಭಿವೃದ್ಧಿ-ಕೃಷ್ಣಾ ನದಿ: ಅಖಿಲೇಶ್ ಚಿಪ್ಪಳಿ

ಭರತ ಖಂಡ ಎಂದು ಕರೆಸಿಕೊಂಡ ಸಮಗ್ರ ಭಾರತ ಹಲವಾರು ಸಾರಿ ಛಿದ್ರವಾಯಿತು. ಚೀನಾ ಅತಿಕ್ರಮಿಸಿದರೆ, ಪಾಕಿಸ್ತಾನವನ್ನು ನಾವೇ ಕೊಟ್ಟೆವು. ಇಷ್ಟಾಗ್ಯೂ ನೂರಾರು ನದಿಗಳ ಭವ್ಯ ಪರ್ವತಗಳ, ಗಿರಿ ಶಿಖರಗಳ ನಾಡು. ಹೇರಳ ನೈಸರ್ಗಿಕ ಸಂಪತ್ತಿನ ಬೀಡು ಭಾರತ. ಪ್ರಪಂಚದ ಎಲ್ಲಾ ಖಂಡಗಳಲ್ಲೂ ನಾಗರೀಕತೆ ಅರಳಿದ್ದು, ನದಿಗಳ ದಂಡೆಗಳ ಮೇಲೆ. ಪವಿತ್ರ ಗಂಗಾನದಿ ಅದೆಷ್ಟು ಜನರಿಗೆ ಆಧಾರವಾಗಿದೆ. ಅದೆಷ್ಟು ಆಹಾರ ಧಾನ್ಯವನ್ನು ಇದೇ ನದಿಯ ನೀರನ್ನುಪಯೋಗಿಸಿ ಬೆಳೆಯಲಾಗುತ್ತಿದೆ. ಜನಸಂಖ್ಯೆ ಮತ್ತು ಅಭಿವೃದ್ಧಿಯೆಂಬೆರೆಡು ಗಂಗಾನದಿಗೆ ಕಂಟಕವಾಗಿ ಪರಿಣಮಿಸಿದ್ದೊಂತು ದುರಂತವೇ ಸೈ. … Read more

ನಾಟಕಕಾರರಾಗಿ ಕುವೆಂಪು (ಭಾಗ-9): ಹಿಪ್ಪರಗಿ ಸಿದ್ದರಾಮ್, ಧಾರವಾಡ

ಆತ್ಮೀಯರೇ, ಈ ಹಿಂದಿನ ಸಂಚಿಕೆಯಲ್ಲಿ ನಾವು ಮಹಾಕವಿಗಳ ‘ಚಂದ್ರಹಾಸ’ ರಂಗಕೃತಿಯ ಕುರಿತು ನೋಡಿದ್ದೇವೆ. ಆ ರಂಗಕೃತಿಯು ಲಕ್ಷ್ಮೀಶನಂತಹ ಪ್ರಾಚೀನ ಕನ್ನಡಕವಿಗಳು ಕಾವ್ಯರೂಪದಲ್ಲಿ (ನಾನು ಕನ್ನಡ ಮಾಧ್ಯಮ ಪ್ರಾಥಮಿಕ ಶಾಲೆಯಲ್ಲಿದ್ದಾಗ (1986-87) ಚಂದ್ರಹಾಸೋಪಾಖ್ಯಾನದಲ್ಲಿಯ ‘ಚಂದ್ರಹಾಸನ ಬಾಲ್ಯ’ ಭಾಗವು ಪದ್ಯ-ಪಠ್ಯವಾಗಿತ್ತು. ವೈಭವದಿಂದ ಮೆರೆದಾಡಬೇಕಿದ್ದ ಚಂದ್ರಹಾಸನ ದುರ್ದೈವದ ಸ್ಥಿತಿಗೆ, ಆತನನ್ನು ಸಲಹುತ್ತಿರುವ ಮುದುಕಿಯಾಗಿರುವ ರಾಜದಾಸಿಯು ವ್ಯಥೆಪಡುವ ಪ್ರಸಂಗವನ್ನು ದುಃಖಿಸುತ್ತಲೇ ಪಾಠ ಮಾಡಿದ ಗುರುಗಳನ್ನು ಮರೆಯಲಾಗುವುದಿಲ್ಲ) ಚಿತ್ರಿಸಿದ ಕಥಾನಕವನ್ನು ಅದ್ಭುತ ದೃಶ್ಯಾವಳಿಗಳ ಸೃಷ್ಟಿಯೊಂದಿಗೆ ಕಟ್ಟಿಕೊಡುವ ಒಂದು ಪ್ರಯತ್ನವಾಗಿ ಮಹಾಕವಿಗಳು ರಂಗಕೃತಿಯಲ್ಲಿ ಆಕಸ್ಮಿಕಗಳ ಸರಮಾಲೆ, … Read more

ಇಷ್ಟು ಕಾಲ ಒಟ್ಟಿಗಿದ್ದು, ಎಷ್ಟು ಬೆರೆತರೂ…: ದಿವ್ಯ ಆಂಜನಪ್ಪ

ಹೆಚ್.ಎಸ್. ವೆಂಕಟೇಶ ಮೂರ್ತಿ ರವರ ಕವನ:- ಇಷ್ಟು ಕಾಲ ಒಟ್ಟಿಗಿದ್ದು, ಎಷ್ಟು ಬೆರೆತರೂ, ಅರಿತೆವೇನು ನಾವು ನಮ್ಮ ಅಂತರಾಳವಾ… ಕವಿಯು ತಮ್ಮ ಈ ಕವನದಲ್ಲಿ ಮಾನವ ಸಂಬಂಧಗಳ ನಡುವಿನ ಅಂತರವನ್ನು ವಿಶ್ಲೇಷಿಸಿದ್ದಾರೆ. ನಾವು ನಮ್ಮೊಂದಿಗಿರುವ ಜನರೊಂದಿರೆ ಎಷ್ಟೇ ಕಾಲ ಒಟ್ಟಿಗೆ ಕಳೆದರೂ, ಒಬ್ಬರಿಗೊಬ್ಬರು ಅಂತರಾತ್ಮವನ್ನು ತೆರೆದುಕೊಂಡಿರುವುದಿಲ್ಲ ಎಂದು ಕವಿ ಹೇಳುವಾಗ ಹೋಲಿಕೆಗಳನ್ನು ಹೀಗೆ ನೀಡುತ್ತಾರೆ. ಕಡಲ ಮೇಲೆ ಸಾಗುವ ದೋಣಿ ಎಷ್ಟೇ ದೂರ ಸಾಗಿದರೂ ಕಡಲ ಆಳವನ್ನು ತಿಳಿಯುವ ಗೊಡವೆಗೆ ಹೋಗುವುದಿಲ್ಲ. ಸಾಗರಕ್ಕೂ ದೋಣಿಗೂ ತೀರ ಅಂಟಿದ … Read more

ದದ್ದ ಬೂಗು ಕಟ್ಟಿದಾಗ !: ಪ್ರಜ್ವಲ್ ಕುಮಾರ್

ಹೊರಗಿನಿಂದ ಬರುತ್ತಿದ್ದ ಗಾಳಿಗೋ, ರೂಮಿನಲ್ಲಿ ತಿರುಗುತ್ತಿದ್ದ ಫ್ಯಾನ್ ಗಾಳಿಗೋ ಗೊತ್ತಿಲ್ಲ; ಗೋಡೆಗೆ ನೇತುಹಾಕಿದ್ದ ಕ್ಯಾಲೆಂಡರ್ ಆಚೀಚೆ ಅಲ್ಲಾಡುತ್ತಾ ಶಬ್ದ ಮಾಡುತ್ತಿತ್ತು. ಸಾಮಾನ್ಯವಾಗಿ ನನಗೆ ಮಲಗಿದ ಹತ್ತು-ಹದಿನೈದು ನಿಮಿಷಕ್ಕೆಲ್ಲಾ ನಿದ್ದೆ ಬರ್ತಿತ್ತು. ಇವತ್ತು ಹನ್ನೆರಡು ಘಂಟೆ ಆದ್ರೂ ನಿದ್ದೆ ಬರದೆ ಆಚೀಚೆ ಹೊರಳಾಡ್ತಾ ಇದ್ದ ನನ್ನನ್ನ ನೋಡಿ ಪಕ್ಕದಲ್ಲಿದ್ದ ರೂಮ್ ಮೇಟ್ ಕೇಳ್ದ. “ಯಾಕೋ? ಇನ್ನೂ ನಿದ್ದೆ ಬಂದಿಲ್ವಾ?” “ಇಲ್ಲಾ ಕಡೋ, ಬೂಗು ಕಟ್ಟಿದೆ” ಅಂದೆ. “ಏನು?! ಏನು ಕಟ್ಟಿದೆ?” ಜೋರಾಗಿ ನಗುತ್ತಾ ಮತ್ತೆ ಕೇಳಿದ. “ಬೂಗು! ಕಡೋ … Read more

ಪಂಜು ಚುಟುಕ ಸ್ಪರ್ಧೆ: ಅನುಪಮಾ ಎಸ್. ಗೌಡ ಅವರ ಚುಟುಕಗಳು

1) ರಾಮ-ಶಾಮ ಕೃಷ್ಣನನ್ನೇ ಪೂಜಿಸೋ  ಎನ್ನ ಮಡದಿಗೆ  ನಾನೆಂದೂ "ರಾಮ" ಕೈತಪ್ಪಿ ಹೋದ  ನನ್ನ ನನ್ನೊಲವ ರಾಧೆ  ಹೇಳುತಿದ್ದಳು  ನಿನ್ನೊಳಗಿಹನೊಬ್ಬ  "ತುಂಟ ಶಾಮ" …………………… 2) ಹಾಫ್ ಶರ್ಟ್   ಹಾಫ್ ಶರ್ಟ್ ಮೇಲೆ ರಾರಜಿಸುತಿದ್ದ ಹಾರ್ಟ್ ಕಂಡು ಮೌನವಾಗಿ ಕೇಳಿದಳು  ಅರ್ಧಾಂಗಿ  ಯಾರು ಕೊಟ್ಟ  ಗಿಪ್ಟು ಈ ಅಂಗಿ? ………………… 3) ಬಯಕೆ   ಸಿಕ್ಕರೆ ರಾಮನಂಥ ಗಂಡ ಸಿಗಬೇಕೆಂದು ದೇವರಲ್ಲಿ  ಕೋರುವ ಬಯಕೆ..!   ಮೆಲ್ಲೆಗೆ  ಪಿಸುಗುಟ್ಟಿತು ಮನ ಮಾಡ್ಯನು ಶಂಕೆ ಕಾಡಿಗೆ ಅಟ್ಯಾನು  … Read more

ಗಡ್ಡ: ಪ್ರಶಸ್ತಿ ಅಂಕಣ

ಹಾಡ್ತಾ ಹಾಡ್ತಾ ರಾಗ, ನರಳತಾ ನರಳಾತಾ ರೋಗ ಅಂದಗೇನೇ ನೆನಿತಾ ನೆನಿತಾ ನೆನಪು ಅಂತನೂ ಹೇಳ್ಬೋದೇನೋ. ಸುಮ್ನೆ ಎಲ್ಲೋ ಹೊಳೆದ ಎಳೆಯೊಂದು ಕತೆಯಾಗಿಯೋ, ಕವಿತೆಯಾಗಿಯೋ ರೂಪುಗೊಳ್ಳಬಹುದು. ಕೆಲವೊಂದು ಎಳೆಗಳು ನೆನಪಿನಾಳಕ್ಕಿಳಿದು ನೋವ ಅಲೆಗಳನ್ನ ಕೆದಕಬಹುದು. ತನ್ನನ್ನೇ ಹಾಸ್ಯವಾಗಿಸಿ ನಗುವ ಕಡಲಲ್ಲಿ ತೇಲಿಸಲೂಬಹುದು. ಆ ಕ್ಷಣಕ್ಕೆ ಅದೇ ದೊಡ್ಡ ಹಾಸ್ಯ. ಮಿಸ್ಸಾದರೆ ಏನೂ ಇಲ್ಲ.  ತೆರೆಗಳು ಸರಿದಾಗ ಮರಳ ತಡಿಯಲ್ಲಿ ಮೂಡೋ ಚಿತ್ರಗಳಂತೆ.. ಮತ್ತೊಂದು ಅಲೆ ಬಂದು ಅದನ್ನು ತೊಳೆದು ಹಾಕೋ ತನಕ.. ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ … Read more

ಫ್ಲಾಪೀ ಬಾಯ್ ಕಂಡ ಕೆಂಪುತೋಟ: ಸಚಿನ್ ಎಂ. ಆರ್.

ಈ ಫ್ಲಾಪೀ ಬಾಯ್‍ಗೆ ಕೆಲಸ ಇಲ್ಲ. ಇದ್ದರೂ ಅವ ಮಾಡೊಲ್ಲ. ಅಂತಹ ಈ ನಿಮ್ಮ ಹುಡುಗ ಹೀಗೆ ಒಂದು ದಿನ ಎಲ್ಲಾ ಬಿಟ್ಟು ಅವನ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ನಮ್ಮ ಬೆಂಗಳೂರಿನ ಲಾಲ್‍ಬಾಗ್ ಗೆ ಹೊಂಟ. ಅಲ್ಲಿ ಅವನು ಏನೇನು ನೋಡಿದ, ಏನೇನು ಮಾಡಿದ ಅನ್ನುವ ಕುತೂಹಲವಿದ್ದರೆ ಮುಂದೆ ಒದಿ. ಬೆಳಿಗ್ಗೆ ಹತ್ತು ಮೂವತ್ತರ ಸಮಯ. ಒಳಗೆ ಹೋಗುವಾಗ ಒಬ್ಬನೇ ಏಕಾಂಗಿ ಫ್ಲಾಪೀಬಾಯ್, ಆದರೆ ಹೊರಬರುವಾಗ ಅವನ ತಲೆಯಲ್ಲಿತ್ತು ಏನೇನೋ ಆಲೋಚನೆಗಳು, ವಿಚಾರಗಳು ಅವೆಲ್ಲ ಏನು … Read more

ಆಸೆಗಳು ನನ್ನವು ಸಾವಿರಾರು: ವಾಸುಕಿ ರಾಘವನ್

ಜವಹರಲಾಲ್ ನೆಹರು ಅವರ “ಟ್ರಿಸ್ಟ್ ವಿತ್ ಡೆಸ್ಟಿನಿ” ನಮ್ಮ ದೇಶದ ಅತ್ಯಂತ ಪ್ರಸಿದ್ಧ ಭಾಷಣ ಅನ್ಸುತ್ತೆ. ಸುಧೀರ್ ಮಿಶ್ರಾ ಅವರ “ಹಜಾರೋ ಖ್ವಾಹಿಷೇ ಏಸೀ” ಚಿತ್ರ ಶುರುವಾಗುವುದೇ ಈ ಭಾಷಣದ ಧ್ವನಿ ಮುದ್ರಿಕೆಯೊಂದಿಗೆ. “ವಿಧಿಯೊಂದಿಗೆ ನಮ್ಮ ಒಪ್ಪಂದ ಯಾವಾಗಲೋ ಆಗಿದೆ, ಅದರೆಡೆಗೆ ಮುನ್ನುಗ್ಗುವ ಪಣವನ್ನು ಇಂದು ತೊಡೋಣ. ಮಧ್ಯರಾತ್ರಿಯ ಈ ಹೊತ್ತಿನಲ್ಲಿ, ಇಡೀ ಪ್ರಪಂಚವೇ ಮಲಗಿರುವಾಗ, ಭಾರತ ಸ್ವಾತ್ರಂತ್ರ್ಯದೆಡೆಗೆ, ಬೆಳಕಿನೆಡೆಗೆ ಸಾಗುತ್ತದೆ”. ದಾಸ್ಯದಲ್ಲಿ ಸಿಕ್ಕಿ ನರಳುತ್ತಿದ್ದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ದಿನ ಇಂಥ ಒಂದು ಭಾಷಣ ಕೇಳಿ … Read more

ಇಬ್ಬರ ಕವನಗಳು: ಸಚಿನ್ ನಾಯ್ಕ್, ಪರಶಿವ ಧನಗೂರು

ಹೀಗೊಂದು ಸಂಜೆ…! ಇಳಿಸಂಜೆಯ ಹೊತ್ತಲ್ಲಿ ತಂಗಾಳಿಯ ಹಂಬಲಕೆ ಮೆಲ್ಲನೆ ತೆರೆದುಕೊಳ್ಳುತ್ತೇನೆ ಕಡುಕಪ್ಪು ಹಾಸಿನ ರಸ್ತೆಯಲ್ಲಿ ಲಯಬದ್ದ ಹೆಜ್ಜೆಗಳೊಂದಿಗೆ… ತಲೆಯ ಮೇಲೆ ಸಾಗುತಿಹ ಅರ್ಧ ಚಂದ್ರನ ಮೊಗದಲ್ಲೂ ನನ್ನದೇ ಒಂಟಿಬಿಂಬ ಕಂಡಾಗ ನಗಬೇಕೆನಿಸಿದರೂ ನಗುಬಾರದವನಂತೆ ಮುಂದೆ ಸಾಗುತ್ತೇನೆ… ಬೆಳದಿಂಗಳಿಗೂ ಪೈಪೋಟಿ ಎಂಬಂತೆ ಬೆಳಗುತಿಹ ಹಳದಿ ಬೀದಿ ದೀಪಗಳು; ತರಗೆಲೆಯು ಸದ್ದು ಮಾಡುವ ಗಾಡ ಮೌನದ ಜೊತೆಗೆ ಹೊಸ ಸಂಭಂದ ಬೆಳೆಸಿ ಹುನ್ನಾರ ನಡೆಸಿದಂತಿದೆ…! ಯಾಕೊ ಕಳೆದು ಹೋದದ್ದೆಲ್ಲಾ ನೆನಪಾಗಿ ಕಣ್ಣಂಚಲಿ ಸಂತಾಪದ ಹನಿಗಳು ಜಾರಿದಾಗ ಎದೆಭಾರ ಕಳಚಿದಂತೆ ಹಗುರ … Read more

ಪಾಕೀಟಿನ್ಮುಂದೆ ಓಸಿ ಪಾಸಿಯೆಲ್ಲ ಪುಟ್ಗೋಸಿ ಇದ್ದಂಗೆ! : ಎಚ್.ಕೆ.ಶರತ್

ಹಾಳೂರಿನ ಫುಲ್‍ಟೈಟು ಪಾರ್ಟಿಗಳಾದ ನೈಂಟಿ, ಫೋರ್‍ಟ್ವೆಂಟಿ ಮತ್ತು ಪಂಟಿ ಕರುಳ ತಳಮಳ ತಾಳಲಾರದೇ ‘ಕಿಕ್ಕೇಶ್ವರ’ ಲಿಕ್ಕರ್ ಶಾಪಿನೆಡೆಗೆ ದಾಪುಗಾಲಿಟ್ಟರು. ನೈಂಟಿ: ಸಿದ್ರಾಮಣ್ಣ ನಮ್ ಕಷ್ಟ ಅರ್ಥ ಮಾಡ್ಕಂದು ಚೀಪ್ ಅಂಡ್ ಬೆಸ್ಟು ಹೆಂಡನಾ ನಮ್ಗೆಲ್ಲ ಕುಡ್ಸೋಕೆ ಹೊಂಟಿತ್ತಪ್ಪ. ಯಾರ್ಯಾರೋ ಸೇರ್ಕಂದು ಅದ್ಕೆ ಕಲ್ಲಾಕ್ಬುಟ್ರು. ಫೋರ್‍ಟ್ವೆಂಟಿ: ಈಗಿರೋ ಸಿಸ್ಟಮ್ಮೇ ಸರ್ಯಾಗೈತೆ ಸುಮ್ಕಿರಪ್ಪ. ಈಗೆಂಗೋ ದಿನಾ ದುಡ್ಕಂದು ಸಂಜೆ ಹೊತ್ ಮಾತ್ರ ಕುಡ್ಕಂದು ನ್ಯಾಯ್ವಾಗಿ ಬದುಕ್ತಿದ್ದೀವಿ. ಚೀಪಾಗಿರೋ ಹೆಂಡನಾ ಮಾರ್ಕೆಟ್ಟಿಗೆ ಬಿಟ್ರೆ ವಾರ್ದಲ್ಲಿ ಮೂರ್ದಿನ ದುಡ್ದು ಏಳ್ದಿನಾನೂ ಕುಡ್ದು ಕಳ್ಳು … Read more