ಹೀಗೊಂದು ಪ್ರಸಂಗ: ಗವಿಸ್ವಾಮಿ
ಮೊನ್ನೆ ಬೈಕಿನಲ್ಲಿ ಪಕ್ಕದ ಹಳ್ಳಿಗೆ ಹೊರಟಿದ್ದೆ. ಹೊರಡುವಾಗಲೇ ಸೂಜಿಗಾತ್ರದ ಹನಿಗಳು ಗಾಳಿಯಲ್ಲಿ ಚದುರಿಕೊಂಡು ಉದುರುತ್ತಿದ್ದವು. ಜನರ ಓಡಾಟ ಮಾಮೂಲಿನಂತೆಯೇ ಇತ್ತು.ಒಂದು ಮೈಲಿಯಷ್ಟು ಮುಂದೆ ಹೋಗುವಷ್ಟರಲ್ಲಿ ಸೂಜಿ ಗಾತ್ರದ ಹನಿಗಳು ದಬ್ಬಳದ ಗಾತ್ರಕ್ಕೆ ತಿರುಗಿದ್ದವು. ಎದುರುಗಾಳಿ ಬೀಸುತ್ತಿದ್ದರಿಂದ ಹನಿಗಳು ಮುಖವನ್ನು ಅಡ್ಡಾದಿಡ್ಡಿ ಪಂಕ್ಚರ್ ಮಾಡತೊಡಗಿದವು. ಅಲ್ಲೇ ರಸ್ತೆ ಬದಿಯಲ್ಲಿದ್ದ ಹುಣಸೆಮರದಡಿಯಲ್ಲಿ ಗಾಡಿ ನಿಲ್ಲಿಸಿ ಫೇಸ್ ಬುಕ್ ಓಪನ್ ಮಾಡಿದೆ. ನೋಟಿಫಿಕೇಶನ್ ಐಕಾನ್ ಖಾಲಿ ಹೊಡೆಯುತ್ತಿತ್ತು. ಒಂದು ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಸಡನ್ನಾಗಿ ಓಕೆ ಕೊಡುವುದು ಬೇಡ, ನಿಧಾನಕ್ಕೆ ಕನ್ಫರ್ಮ್ ಮಾಡಿದರಾಯಿತು ಎಂದುಕೊಂಡು … Read more