ಪಂಜು ಕಾವ್ಯಧಾರೆ

ಬಯಲ ದೃಷ್ಟಾಂತ ! ಪಾತರಗಿತ್ತಿಯ ಹಾಗೆಒಂದೆಡೆ ನಿಲಲೊಲ್ಲದೆಸುಂಟರ ಗಾಳಿಯಂತೆ ಗಿರಗಿರನೇ ತಿರುಗುತ್ತದಿನ ನೂಕುತ್ತಿರೆಒಡಲಲ್ಲಿ ಕಸ ಕಡ್ಡಿಗಳೇ ತುಂಬಿಕೊಂಡುಎದೆಯಗೂಡು ಹರಿದುಹೃದಯ ಪಾಳುಬಿದ್ದಮನೆಯಂತಾಗುತ್ತದೆ !ಅದೆಲ್ಲೋ ದೂರದ ಗಗನಚುಕ್ಕೆ ಪ್ರಕಾಶಿಸುವುದ ಕಂಡುಅದರಂತಾಗಬೇಕೆಂದು ಕಣ್ಮುಚ್ಚಿ ಕುಳಿತಡೆಕಣ್ಮುಂದೆ ಅದರ ಚಿತ್ತಾರವೇ ಬಂದುಗಹಗಹಿಸಿ ನಗುತ ಕೇಳುತ್ತಿದೆನೀನು ಗಗನದ ಚುಕ್ಕೆ ಆಗಬಲ್ಲೆಯಾ?!ಸುತ್ತಲ ಪ್ರಪಂಚದಿಂದದೂರಾಗಬೇಕೆಂದುಕಣ್ಣು, ಕಿವಿ, ಬಾಯ್ಮುಚ್ಚಿಕೊಂಡುನಿರ್ಲಿಪ್ತವಾಗಬೇಕೆಂದು ತಟಸ್ಥವಾದರೆಸುತ್ತಲ ಸಮಾಜದ ಕಣ್ಣು, ಕಿವಿ, ಬಾಯ್ಗಳುನನ್ನತ್ತ ತೆರೆದುಕೊಂಡುಕುಹಕವಾಡುತ್ತ ಹುಸಿನಗು ಬೀರುತಿವೆ !ಇದಾವುದರ ಗೊಡವೆಯೇ ಬೇಡವೆಂದುಆತ್ಮಾರ್ಪಣಕ್ಕಿಳಿದರೆಲೋ ಹುಚ್ಚ! ನೋಡಿಲ್ಲಿ ಎನುತಮಧುರಗಾನಗೈಯುತ್ತಹಕ್ಕಿಯೊಂದು ದೂರದಿ ತಂದಅನ್ನದಗಳನುಗೂಡಿನೊಳಗಿರುವ ಮರಿಹಕ್ಕಿಯಬಾಯೊಳಗೆ ಇಡುತ್ತಿತ್ತು!ಆ ಮರದ ಗೂಡಿನ ಮೇಲೊಂದುಕರಿನಾಗ ಹೆಡೆಯೆತ್ತಿ … Read more

ಅಗ್ನಿಪರೀಕ್ಷೆ: ಕೆ ಎನ್‌ ಮಹಾಬಲ

ಅದು ಬೆಳಿಗ್ಗೆ ಹತ್ತೂಕಾಲು ಗಂಟೆಯ ಸಮಯ. ಬ್ಯಾಂಕ್ ಶಾಖೆಯೊಳಕ್ಕೆ ಸಿಬ್ಬಂದಿ ಒಬ್ಬೊಬ್ಬರಾಗಿ ಬಂದು ತಂತಮ್ಮ ಸೀಟಿನತ್ತ ನಡೆದು, ಅಲ್ಲಿನ ಕಂಪ್ಯೂಟರ್, ಕುರ್ಚಿ, ಮುಂಗಟ್ಟೆಯ ಭಾಗ ಮುಂತಾದವನ್ನು ಒರೆಸಿಕೊಂಡು ಕೆಲಸ ಆರಂಭಿಸಲು ಅಣಿಯಾಗುತ್ತಿದ್ದರು. ಇನ್ನೂ ಹತ್ತೂವರೆ ಆಗದೆ ಇದ್ದುದರಿಂದ ಗ್ರಾಹಕರಿಗೆ ಪ್ರವೇಶವಿರಲಿಲ್ಲ. ಹಾಗೆ ಒಳಕ್ಕೆ ನುಗ್ಗಲು ಯತ್ನಿಸುತ್ತಿದ್ದವರಿಗೆ ಬಾಗಿಲಲ್ಲಿ ನಿಂತಿದ್ದ ಭದ್ರತಾ ಸಿಬ್ಬಂದಿ ತಡೆಯುತ್ತಿದ್ದ. ಅದೇ ಸಮಯದಲ್ಲಿ ನಗರ ಪೋಲಿಸ್ ಠಾಣೆಯ ಇನ್ಸ್‌ಪೆಕ್ಟರ್ ದಯಾನಂದ‌ ಅವರು ತಮ್ಮ ಒಬ್ಬ ಸಿಬ್ಬಂದಿಯೊಡನೆ ಆಗಮಿಸಿ ಒಳಕ್ಕೆ ಬಿಡಲು ಭದ್ರತಾ ಸಿಬ್ಬಂದಿಗೆ ಆಗ್ರಹಿಸಿ … Read more

ಸ್ಟಿಂಗ್‌ಲೆಸ್ ಜೇನುಕೃಷಿ ಸಂಪ್ರದಾಯದಿಂದ ವೈಜ್ಞಾನಿಕದೆಡೆಗೆ: ಚರಣಕುಮಾರ್

ಜೇನನ್ನು ಉತ್ಪಾದಿಸುವ ಜೇನು ನೊಣಗಳಲ್ಲಿ ಹಲವಾರು ವಿಧಗಳಿದ್ದು ಮುಖ್ಯವಾಗಿ ಭಾರತದಲ್ಲಿ ಹೆಜ್ಜೇನು, ತುಡುವೆ ಜೇನು, ಯೂರೋಪಿಯನ್ ಜೇನು, ಕಡ್ಡಿ ಜೇನು (ಕೋಲು ಜೇನು), ಮತ್ತು ಮುಳ್ಳುರಹಿತ ಜೇನು, ಕಂಡುಬರುತ್ತವೆ. ಕರ್ನಾಟಕದ ಮಲೆನಾಡು ಅರಣ್ಯಗಳ ಸುತ್ತ-ಮುತ್ತಲಿನ ಸ್ಥಳೀಯ ಅರಣ್ಯವಾಸಿಗಳಾದ ಕುಣಬಿಗಳು, ಹಾಲಕ್ಕಿ ಜನಾಂಗದವರು, ಮಲೆಕುಡಿಯರು, ಸೋಲಿಗರು, ಬೆಟ್ಟಕುರುಬರು, ಜೇನುಕುರುಬರು, ಕೊಡವರು, ಗೌಳಿಗಳು, ಕಾಡುಗೊಲ್ಲರು, ಕಾಡುಕುರುಬರು ಕೊರಗರು ಇನ್ನಿತರ ಅರಣ್ಯಕ್ಕೆ ಹೊಂದಿಕೊಂಡು ಜೀವನ ನಡೆಸುತ್ತಿರುವ ಜನರು ಸ್ಟಿಂಗ್‌ಲೆಸ್ ಜೇನು ಪ್ರಭೇದವನ್ನು ಸಾಕಾಣಿಕೆ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸ್ಟಿಂಗ್‌ಲೆಸ್ ಜೇನು ಅವೈಜ್ಞಾನಿಕ … Read more

ಉದಾತ್ತನೊಳ್ ಪುಟ್ಟದಲ್ತೆ ನೀಲೀರಾಗಂ: ಡಾ.ವೃಂದಾ ಸಂಗಮ್

ನಾಗಚಂದ್ರ ಕವಿಯ ಸಾಲು ಇದು. ನನಗೆ ಒಂದು ಪ್ರಶ್ನೆ ಉದಾತ್ತನಾದ ರಾವಣನಲ್ಲಿ ನೀಲೀ ರಾಗವೇ ಏಕೆ ಪುಟ್ಟುವುದು. ಕೆಂಪೋ, ಹಸಿರೋ ಅದರಲ್ಲೂ ಕಪ್ಪು ಅಜ್ಞಾನದ ಸಂಕೇತವಲ್ಲವೇ, ಅಂಧಃ ತಮಸ್ಸು ಅದರಿಂದ ಹೊರ ಬಂದ ಬೆಳಕಿನ ಕಿರಣದ ಬಿಳಿಯಾದರೂ ಮೂಡಬಹುದಾಗಿತ್ತಲ್ಲವೇ. ಅದೆಲ್ಲಾ ಬಿಟ್ಟು ಈ ನೀಲೀ ರಾಗವೇ ಯಾಕೆ ಪುಟ್ಟಿದೆ ಎನ್ನುವುದು. ನೀಲಿ ವರ್ಣವೆಂದರೆ ಆಕಾಶ. ಆಕಾಶವೆಂದರೆ ಅವಕಾಶ. ಆಕಾಶಕ್ಕೇ ಏಣಿ ಇಡುವಷ್ಟು ಅವಕಾಶ ತೆರೆವುದು ಇದು ನೀಲಿ ವರ್ಣ. ಅಗಾಧ ಸಾಗರದ ವರ್ಣವೂ ನೀಲಿಯೇ ಅಲ್ಲವೇ. ಅದಕ್ಕೇ … Read more

ಅರಿತಾಗ…: ಬಿ.ಟಿ.ನಾಯಕ್

ಅದೊಂದು ದಿನ ಒಬ್ಬ ಯುವಕ ಬೈಕ್ ಸವಾರಿ ಮಾಡುತ್ತಾ ಹೋಗುತ್ತಿರುವಾಗ, ದಾರಿಯಲ್ಲಿ ಒಂದಿಬ್ಬರು ಯುವಕರು ಯುವತಿಯನ್ನು ಚುಡಾಯಿಸುತ್ತಿದ್ದಿದು ಆತನ ದೃಷ್ಟಿಗೆ ಬಿತ್ತು! ಆದರೆ, ಅದು ನಿಜವೋ, ಅಲ್ಲವೋ ಎಂಬುದನ್ನು ತಿಳಿದು ಕೊಳ್ಳಲು, ತನ್ನ ಬೈಕ್ ದೂರದಲ್ಲೇ ನಿಲ್ಲಿಸಿ, ಅವರ ಕೀಟಲೆಯ ಮಾತುಗಳನ್ನು ಕೇಳಲು ಮುಂದಾದನು. ಬಹುಶಃ, ಅವರವರು ಪರಿಚಯದವರೋ ಏನೋ ಎಂಬ ಅನುಮಾನ ಆತನಿಗೆ ಉಂಟಾಯಿತು. ಆದರೂ, ಆತ ಸ್ಪಷ್ಟತೆ ಕಂಡುಕೊಳ್ಳುವದರ ಸಲುವಾಗಿ, ಸ್ವಲ್ಪ ಅವರ ಹತ್ತಿರಕ್ಕೆ ಹೋದ. ಅಲ್ಲಿ ಸ್ಪಷ್ಟವಾಗಿ ಮಾತುಗಳು ಕೇಳಿಸ ತೊಡಗಿದವು ಮತ್ತು … Read more

ಟೀಕೆ – ಟಿಪ್ಪಣಿಗಳಾಚೆಗೆ “ಬೈಸನ್” ಮತ್ತು “ಮಾರಿಸೆಲ್ವರಾಜ್” ಕುರಿತ ಒಂದು ಸಣ್ಣ ಅವಲೋಕನ..!: ಪ್ರಶಾಂತ ಬೆಳತೂರು

ಬೈಸನ್ ಎಂಬ ಮಾರಿಸೆಲ್ವರಾಜ್ ಅವರ ಸಿನಿಮಾ ಕಳೆದ ವರ್ಷದ ಅಕ್ಟೋಬರ್ ನಲ್ಲಿ ಬಿಡುಗಡೆಗೊಂಡಾಗ ತಮಿಳು ಸಿನಿ ವಲಯ ಒಳಗೊಂಡಂತೆ ಮೇನ್ ಸ್ಟ್ರೀಮ್ ಮಾಧ್ಯಮಗಳಲ್ಲಿ ಅದರ ಪರವಾಗಿ ಹೆಚ್ಚಿನ ಒಲವು ಕಂಡು ಬರಲಿಲ್ಲ, ಬಹುತೇಕ ವಿರೋಧದ ಚರ್ಚೆಗಳು ಎಗ್ಗಿಲ್ಲದೆ ಶುರುವಾದವು. ಹಾಗೆ ನೋಡಿದರೆ ತಾನು ನಿರ್ದೇಶಿಸಿದ ಸಿನಿಮಾವೊಂದಕ್ಕೆ ನಿರ್ದೇಶಕನೊಬ್ಬ ತಾನೇ ಮೀಡಿಯಾದೆದುರು ಕೂತು ತನ್ನ ಸಿನಿಮಾದ ಬಗ್ಗೆ ಸಮರ್ಥನೆ ಮಾಡಿಕೊಳ್ಳುವ ಮಟ್ಟಿಗೆ ಒತ್ತಡಕ್ಕೆ ದೂಡಿತು. ಅದಕ್ಕೆ ಕಾರಣಗಳು ಹಲವಿರಬಹುದು. ಆದರೆ ಒಂದೊಳ್ಳೆಯ ಚಿತ್ರ ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣದೆ … Read more

ಜೀವನಪಾಠ: ಕೋಡೀಹಳ್ಳಿ ಮುರಳೀಮೋಹನ್

ತೆಲುಗು ಮೂಲ : ಅಪ್ಪರಾಜು ನಾಗಜ್ಯೋತಿಕನ್ನಡ ಅನುವಾದ : ಕೋಡೀಹಳ್ಳಿ ಮುರಳೀಮೋಹನ್ನನಗೂ ರೈಲ್ವೇ ಸ್ಟೇಷನಿಗೂ ಒಂದು ಬಗೆಯ ಅವಿನಾಭಾವ ಸಂಬಂಧವಿದೆ. ಪ್ರತಿ ಪ್ರಯಾಣವೂ ನನಗೆ ಹೊಸ ವಿಷಯವನ್ನು ಕಲಿಸುತ್ತದೆ. ಈ ಬಾರಿ ಏನನ್ನು ಕಲಿಯಬೇಕಿದೆಯೋ ಅಂತ ಯೋಚಿಸುತ್ತಾ ನಿಧಾನವಾಗಿ ಪ್ಲಾಟ್ಫಾರ್ಮ್ ಸುತ್ತಲೂ ನೋಡಿದೆ. ನನ್ನ ಬಲಕ್ಕೆ ಇದ್ದ ಬೆಂಚಿನ ಮೇಲೆ ಸುಮಾರು ಮೂವತ್ತು ವರ್ಷದ ಮಹಿಳೆಯೊಬ್ಬಳು ತನ್ನ ಇಬ್ಬರು ಮಕ್ಕಳೊಂದಿಗೆ ಕುಳಿತಿದ್ದಳು. ಮಗಳಿಗೆ ಸುಮಾರು ಏಳು ವರ್ಷವಿರಬಹುದು, ಗೊಂಬೆಯಂತೆ ಮುದ್ದಾಗಿದ್ದಳು, ಚುರುಕಾಗಿ ಪ್ಲಾಟ್ಫಾರ್ಮ್ನಲ್ಲೆಲ್ಲಾ ಓಡಾಡುತ್ತಿದ್ದಳು. ಇನ್ನೊಂದು ಮಗುವಿಗೆ … Read more

ಬದಲಾದ ಯುವ ಮನಸ್ಸು-ಹೊಸ ದಿಕ್ಕಿನ ಹುಡುಕಾಟ: ಪರಮೇಶ ಕೆ.ಉತ್ತನಹಳ್ಳಿ

ಉಸಿರುಗಟ್ಟಿದ‌ ವಾತಾವರಣ, ವಿಷಕಾರಿಯಾದ ಬೆಳವಣಿಗೆ, ಒತ್ತಡದ ಒಡಲಲ್ಲಿ ಜೀಕುತ್ತಿವೆ ಮನಸ್ಸುಗಳು ನೂರು ಕಾಲ ಬದುಕಬೇಕಾದ ಹಸುಕಂದ ಅರಳು ಮುನ್ನವೇ ಬಾಡುವ ಚಿಂತಾಜನಕ ಸ್ಥಿತಿ ಎದುರಾಗಿದೆ. ಭರವಸೆಯಿಲ್ಲದ ಭವನಗಳು ಶೃಂಗಾರಗೊಳ್ಳುತ್ತಿವೆ, ವಿಷಮಶೀತ ವಿಷವರ್ತುಲ ವಿಷಯಗಳು ಮುಕ್ಕುತ್ತಿವೆ ಬೆಳಕಿನ ಬಳ್ಳಿಗಳ, ಕರುಳ ಬಳ್ಳಿಗಳೇ ಕರುಣೆಯನ್ನು ಬಸಿಯದೆ ಕಂಗಾಲಾಗುತ್ತಿದ್ದಾರೆ, ಜೀವ ಕರುಣಿಸಿದ ಜೀವಧಾತ ದೇವಧೂತರಾಗುವ ಬದಲು ಅನಾಥರಾಗುತ್ತಿದ್ದಾರೆ ಕಾಲಚಕ್ರ ನಿರಂತರವಾಗಿ ಸಾಗುತ್ತಿರುವಂತೆ ಸಮಾಜದ ರೂಪವೂ, ಮೌಲ್ಯಗಳ ಸ್ವರೂಪವೂ ಬದಲಾಗುತ್ತಿವೆ. ಆ ಬದಲಾವಣೆಯ ಕೇಂದ್ರಬಿಂದುವಾಗಿರುವುದು ಇಂದಿನ ಯುವ ಮನಸ್ಸು. ವಿಜ್ಞಾನ, ತಂತ್ರಜ್ಞಾನ, ಜಾಗತೀಕರಣ … Read more

ಯಕ್ಷ ಪಲಕುಗಳು: ದಿನೇಶ್ ಕೆ. ನಾಯ್ಕ್

ಯಕ್ಷಗಾನವು ದೈವಾರಾಧನೆಯ ಮೂಲದಿಂದ ಉಗಮಿಸಿತು ಎಂಬುದು ವಿದ್ವಾಂಸರ ಅಂಬೋಣ. ಕಾಲ ಕ್ರಮದಲ್ಲಿ ನಾಟ್ಯ, ವೇಷಭೂಷಣ, ವಾಚನ, ಹಿಮ್ಮೇಳ, ರಂಗಸ್ಥಳ ಮೈಗೂಡಿಸಿಕೊಂಡು ಸರ್ವಾಂಗ ಸುಂದರ ಕಲಾ ಪ್ರಕಾರವಾಗಿ ಹೊರ ಹೊಮ್ಮಿತು. ಯಕ್ಷಗಾನಕ್ಕೆ ಭಾಗವತರ ಆಟ, ಬೆಳಕಿನ ಸೇವೆ ಎಂಬ ಹೆಸರು ಕೂಡ ಇದೆ. ಭಗವಂತನನ್ನು ಸ್ತುತಿಸುವವ ಭಾಗವತ. ಯಕ್ಷಗಾನ ದೇವರ ಆರಾಧನೆಯ ಜೊತೆ ಜೊತೆಗೆ ಮನೋರಂಜನೆ, ಕಲೆ, ಸಾಹಿತ್ಯಗಳ ಬೆಳವಣಿಗೆಗೆ ಪೂರಕವಾಗಿದೆ. ಯಕ್ಷಗಾನದಿಂದ ಜ್ಞಾನವರ್ಧನೆ, ನೀತಿ ಬೋಧನೆ ಪ್ರಾಪ್ತವಾಗುತ್ತದೆ. ಪ್ರಬುದ್ಧ ಕಲಾವಿದರ ಯಕ್ಷ ಸಂಭಾಷಣೆ ತರ್ಕ ಶಕ್ತಿ & … Read more

ಒಂದೂಕಾಲು ಸಾವಿರ ದಾಟಿದ ಪಂಜು ಬರಹಗಾರರು

ಪಂಜು ಬರಹಗಾರರು (ಒಟ್ಟು=1254) 1 ಅಂಜಲಿ ರಾಮಣ್ಣ2 ಅಂಬಿಕ ರಾವ್3 ಅಂಬಿಕಾ ಪ್ರಸಾದ್4 ಅಕ್ಕಿಮಂಗಲ ಮಂಜುನಾಥ5 ಅಕ್ಬರ್ ಅಲಿ6 ಅಕ್ಷತಾ ಕೃಷ್ಣಮೂರ್ತಿ7 ಅಕ್ಷಯ ಕಾಂತಬೈಲು8 ಅಕ್ಷಯಕುಮಾರ ಜೋಶಿ9 ಅಖಿಲೇಶ್ ಚಿಪ್ಪಳಿ10 ಅಜ್ಜಿಮನೆ ಗಣೇಶ್11 ಅಜಯ್12 ಅಜಯ್ ಅಂಗಡಿ13 ಅಜಯ್ ಕುಮಾರ್ ಎಂ ಗುಂಬಳ್ಳಿ14 ಅಜಿತ್ ಕೌಂಡಿನ್ಯ15 ಅಜಿತ್ ಭಟ್16 ಅಣ್ಣಪ್ಪ ಆಚಾರ್ಯ17 ಅಣ್ಣಯ್ಯ ಸ್ವಾಮಿ18 ಅದಿತಿ ಎಂ. ಎನ್.19 ಅನಂತ ಕುಣಿಗಲ್20 ಅನಂತ ರಮೇಶ್21 ಅನಂತ್ ಕಳಸಾಪುರ22 ಅನ್ನಪೂರ್ಣಾ ಬೆಜಪ್ಪೆ23 ಅನಿತ.ಎನ್24 ಅನಿತಾ25 ಅನಿತಾ ಕೆ. ಗೌಡ26 … Read more

ಹೆಣ್ಣು ಗಂಡೆಂಬ ಅಸಮಾನತೆಯ ಹಳತಾದ ಚರ್ಚೆಗೆ ಇನ್ನೊಂದು ಆಯಾಮ: ವಾಣಿ ಚೈತನ್ಯ

ಪ್ರಜ್ಞಾವಂತ ನಗರೀಕೃತ ಭಾರತದಲ್ಲಿ, ಮಗಳಿಗೆ ಓದಿಸಬೇಕು ಎನ್ನುವ ಹಂಬಲ ಹೆಚ್ಚಾಗಿ, ಕಾಲೇಜು ಮೆಟ್ಟಿಲೇರಿರುವ ಹೊಸ gen G ಪೀಳಿಗೆಯಲ್ಲಿ, ಲಿಂಗ ಅಸಮಾನತೆ ಎನ್ನುವ ಚರ್ಚೆಯು ಔಟ್ ಡೇಟೆಡ್ ಚರ್ಚೆ ಎನ್ನಿಸುತ್ತಿದೆ.ನಾನು 15 ವರ್ಷದ ಹಿಂದೆ ಬಿಜಾಪುರದಲ್ಲಿ ಕೌಟುಂಬಿಕ ದೌರ್ಜನ್ಯದ ವಿಷಯವಾಗಿ ಕೆಲಸಮಾಡುವಾಗ, ದೇವದಾಸಿ ಮಹಿಳೆಯರ ಇರುವಿಕೆ, ಕಷ್ಟ ಸುಖ ತಿಳಿದು, ಒಂದು ಪತ್ರಿಕೆಗೆ ಕಥೆಯ ರೂಪದಲ್ಲಿ ಲೇಖನ ಬರೆದಿದ್ದೆ. ಅದನ್ನು ಬೆಂಗಳೂರಲ್ಲಿ ಕುಳಿತ ಸಂಪಾದಕರು, ಔಟ್ ಡೇಟೆಡ್ ಎಂದು ಆಗಿನ ಕಾಲಕ್ಕೆ ಸೂಕ್ತವಲ್ಲ ಎಂದು ತಿರಸ್ಕರಿಸಲಾಗಿತ್ತು. ನಾನು … Read more

ಮನುಷ್ಯನ ಭಾವಂತಃಕರಣದ ಸಹಜ ತೊಳಲಾಟಗಳ ಒಂದು ಸದಭಿರುಚಿಯ ಚಿತ್ರ – ಡಿ. ಎನ್. ಎ: ಪ್ರಶಾಂತ ಬೆಳತೂರು

ಇತ್ತೀಚಿನ ಮುಕ್ಕಾಲು ಪಾಲು ತಳಬುಡವಿಲ್ಲದ ಕನ್ನಡ ಸಿನಿಮಾಗಳನ್ನು ಕಂಡು ಬೇಸತ್ತು ತಮಿಳು ಮತ್ತು ಮಲಯಾಳಂ ಚಿತ್ರಗಳನ್ನು ಆಗಾಗ್ಗೆ ಬಿಡುವಿನ ವೇಳೆಯಲ್ಲಿ ನೋಡುತ್ತಿದ್ದ ನಾನು ಆರಂಭದಲ್ಲಿ ಈ ಡಿ. ಎನ್. ಎ. ಚಿತ್ರಗಳ ಪೋಸ್ಟರ್ ಅನ್ನು ಹಾಗೂ ಇದರ ಯುಟ್ಯೂಬ್ ವಿಡಿಯೋ ಲಿಂಕ್ ಅನ್ನು ನೋಡಿಯು ನೋಡದಂತೆ ನಿರ್ಲಕ್ಷ್ಯ ವಹಿಸಿದ್ದೆ. ತೀರಾ ಇತ್ತೀಚೆಗೆ ತಮಿಳಿನಲ್ಲೂ ಹಾಗೂ ಮಲಯಾಳಂನಲ್ಲೂ ಇದೇ ಡಿಎನ್ಎ ಹೆಸರಿನ ಚಿತ್ರಗಳು ಬಂದಿದ್ದರಿಂದ ಪ್ರಾಯಶಃ ಇದರ ಕಥಾಹಂದರವೂ ಇದೇ ಇರಬೇಕೆಂಬ ನನ್ನ ಪೂರ್ವಾಗ್ರಹ ಪೀಡಿತ ತಿಳವಳಿಕೆಯಿಂದಾಗಿ ಈ … Read more

ಬದಲಾಗುತ್ತಿರುವ ಕುಟುಂಬ ವ್ಯವಸ್ಥೆ: ಕಲ್ಪನಾ ಪ್ರಭಾಕರ ಹೆಗಡೆ

ಮಾನವರಲ್ಲಿ ಕುಟುಂಬ ಎಂದರೆ ರಕ್ತಸಂಬಂಧ, ಹೊಂದಾಣಿಕೆ ಅಥವಾ ಸಹಬಾಳ್ವೆಯಿಂದ ಒಟ್ಟಾಗಿರುವ ಒಂದು ಗುಂಪು. ಇದು ಸಮಾಜದ ಬಹುಮುಖ್ಯ ಅಂಗ. ನಾವು ಸಾಮಾಜಿಕವಾಗಿ ಸಮರ್ಥರಾಗಲು ಕುಟುಂಬ ಒಂದು ಅಗತ್ಯ ಸಂಸ್ಥೆ. ಭಾಷೆ ಸಂಸ್ಕೃತಿ ಸಂಪ್ರದಾಯ ಶಾಸ್ತ್ರಗಳು ಪಾರಂಪರಿಕವಾಗಿ ಬೆಳೆದು ಬರುವುದಕ್ಕೂ ಈ ಕುಟುಂಬವೇ ಕಾರಣ. ಹುಟ್ಟಿದಾಗಿನಿಂದ ಕುಟುಂಬದೊಳಗೆ ಬೆಳೆದು ಪ್ರೀತಿ, ಕಾಳಜಿ ,ದಯೆ ಇತ್ಯಾದಿ ಜೀವನ ಮೌಲ್ಯಗಳನ್ನು ಕಲಿಯುವುದು ಇಲ್ಲಿಯೇ. ಇದು ನಮ್ಮ ಮೊದಲ ಪಾಠ ಶಾಲೆ ಎನ್ನಬಹುದು. ಹಿಂದೆಲ್ಲ ಹೆಚ್ಚಾಗಿ ಅವಿಭಕ್ತ ಕುಟುಂಬಗಳಿರುತ್ತಿದ್ದವು. ಅಂದರೆ ಒಂದೇ ಕಡೆ … Read more

ಎಕ್ಸ್ಪ್ರೆಸ್ ಟ್ರೈನ್: ಮೋಹನ ಬಣಕಾರ

“ಮೈಸೂರು ಎಕ್ಸ್ಪ್ರೆಸ್”, ಇದು ಬೆಳಗಾವಿಯಿಂದ ಬೆಳಗ್ಗೆ ಸುಮಾರು 6:15 ಕ್ಕೆ ಹೊರಟರೆ, ಮೈಸೂರನ್ನು ತಲುಪೋದು ತಡಸಂಜೆ 8:00 ಗಂಟೆಗೆ. ಸುಮಾರು 615 ಕಿಲೋ ಮೀಟರ್ ರೈಲು ಮಾರ್ಗವನ್ನು ಕ್ರಮಿಸಲು 14 ಗಂಟೆಗಳ ಸುದೀರ್ಘ ಪ್ರಯಾಣ. ಅಂದರೆ ಪ್ರಯಾಣದ ಗತಿ, ಗಂಟೆಗೆ 43 ರಿಂದ 44 ಕಿಲೋಮೀಟರ್ಗಳು. ಇದು ನಮ್ಮ ಎಕ್ಸ್ಪ್ರೆಸ್ ಟ್ರೈನ್ ಗಳ ಹಣೆಬರಹ. ಇದೆಲ್ಲಾ ರೈಲು ನಿಗದಿತ ವೇಳಾಪಟ್ಟಿಯಂತೆ ಚಲಿಸಿದರೆ ಮಾತ್ರ ಅನ್ವಯ. ವಾಸ್ತವದಲ್ಲಿ, ಬಹುತೇಕ ರೈಲು ಪ್ರಯಾಣದ ಸ್ಥಿತಿ ಹೇಗೆಂದರೆ, ರೈಲು ಬಂದಾಗ (ಬಂದಾಗ … Read more

ಕಥೆಗಾರರ ದೇಶಕಾಲವ ತೊರೆದು ಓದುಗನ ಎಲ್ಲೆ ಪ್ರವೇಶಿಸುವ ಕತೆಗಳು: ಸ್ವಾಲಿ ತೋಡಾರ್‌

ಒಂದು ಕೃತಿಗೆ ಮುಖ್ಯವಾಗಿ ಎರಡು ಗುಣಗಳಿರಬೇಕು. ಓದುಗನನ್ನು ಸೆಳೆದುಕೊಳ್ಳುವ ಆಕರ್ಷಣೆ ಮತ್ತು ಓದುಗನೊಳಗಿನ ತರ್ಕಶೀಲತೆಯನ್ನು ವಿಶಾಲಗೊಳಿಸುವ ಹೂರಣ. ಲಂಕೇಶರು ಇದನ್ನೇ ರಂಜನೆ ಮತ್ತು ಪ್ರಚೋದನೆ ಎಂದು ಕರೆದಿದ್ದಾರೆ. ಬೋಧನೆ ಎನ್ನುವುದು ಕೃತಿಕಾರನ ಪ್ರಜ್ಞೆ, ಪ್ರಬುದ್ಧತೆಯನ್ನು ಆಧರಿಸಿದ ನಂತರದ ಎತ್ತರ. ಅದು ಸಾಹಿತ್ಯ ಕೃತಿಯಾಗಿರಲಿ, ವೈಚಾರಿಕ ಹೊತ್ತಿಗೆಯಾಗಿರಲಿ ರಂಜನೆ, ಪ್ರಚೋದನೆಗಳು ತುಂಬಾ ಮುಖ್ಯ. ಇತ್ತೀಚೆಗೆ ಪ್ರಕಟವಾಗುತ್ತಿರುವ ಕೃತಿಗಳಲ್ಲಿ ‘ಎಲ್ಲೆ ತೊರೆದ  ಕಥೆಗಳು’ ಸಂಕಲನ ಅಂತಹ ಒಂದು ಕೃತಿ ಎನ್ನಬಹುದು. ಗಿರೀಶ್ ತಾಳಿಕಟ್ಟೆ ಅವರು ಕನ್ನಡಕ್ಕೆ ಅನುವಾದಿಸಿದ ಭಾರತದ ಶ್ರೇಷ್ಠ … Read more

ಶಕುಂತಲೆ ಕವಿತೆ ಝಲಕ್: ಸಂತೋಷ್ ಟಿ

ಶಕುಂತಲೆ ಕವಿತೆ ಝಲಕ್ ೧ ಶಕುಂತಲೆ ಮರೆತ ಅಭಿಜ್ಞಾನ ಉಂಗುರನೀರೊಳಗಿನ ಮೀನೊಂದರ ಎದೆಯಲಿ ಆಹಾರಪ್ರೀತಿಯ ಕುರುಹು ಮರೆತ ದುಃಖ ಬಲುಭಾರದುಷ್ಯಂತ ರಾಜಪ್ರೇಮಿ ಮರೆತ ಗಾಂಧರ್ವ ಪ್ರೀತಿಮಾಲಿನಿ ತೀರದ ಕಣ್ವರ ಸಾಕುಪುತ್ರಿ ಶಕುಂತಲೆಹದಿಹರೆಯದ ಪ್ರೇಮದ ಹಾಡುಪಾಡುಆಶ್ರಮದ ಹೆಣ್ಣು ಸುಂದರಿ ತರುಣಿಶಕುಂತಲೆಯ ಬದುಕು ಬವಣೆಯ ಬಾಳು ತಪೋವನದ ಸಾತ್ವಿಕರ ಮಗಳು ಕಾಡಿನಲಿಹೂವು ತರಲು ಹೋದ ವೇಳೆ ಮದನೋತ್ಸವಮನ್ಮಥನ ಹೂ ಬಾಣ ಸುಳಿಗಾಳಿಯಾಗಿ ನಾಟಿರಲುಹಸ್ತಿನಾವತಿಯ ರಾಜ ದುಷ್ಯಂತ ಮದನನ ಕಣಿಯಾಗಿರಲುಸಂಭ್ರಮಿತಗೊಂಡವು ಲತೆ ಬಳ್ಳಿ ಕಾಡು ಮೇಡುಸುವಾಸಿತಗೊಂಡವು ಕಾಡು ಮೃಗ ಕಗ ಜಿಂಕೆಗಳ … Read more

ಮನೆ ಮಾರಾಟಕ್ಕಿದೆ: ಸೂರಿ ಹಾರ್ದಳ್ಳಿ

ನಾನು ದಿನಪತ್ರಿಕೆಗಳನ್ನು ಓದುವುದನ್ನು ನಿಲ್ಲಿಸಿ ತುಂಬಾ ಕಾಲವಾಯಿತು. ಏನಿವೆ ಅದರಲ್ಲಿ? ಕೊಲೆ, ಸುಲಿಗೆ, ದರೋಡೆ, ಭ್ರಷ್ಟಾಚಾರ, ಮಾನಭಂಗ, ಅಪಘಾತ, ಇವಿಷ್ಟೇ. ಅದೂ ಅಲ್ಲದೇ ಕೆಲ, ಅಷ್ಟೇ ಏಕೆ, ಬಹು ದರಿದ್ರದ ರಾಜಕಾರಣಿಗಳ ಚಿತ್ರಗಳೂ ಮುಖಪುಟದಲ್ಲಿಯೇ ಪ್ರಕಟವಾಗುತ್ತವೆ, ಅವನ್ನು ಶುಭ ಮುಂಜಾನೆ ನೋಡಬೇಕೇ? ಇದನ್ನು ಬೆಳ್ಳಂಬೆಳಗ್ಗೆ ಓದಿ ಯಾಕೆ ತಲೆಯನ್ನು ರಾಡಿ ಮಾಡಿಕೊಳ್ಳಬೇಕು ಎಂಬ ಅಭಿಪ್ರಾಯ ನನ್ನದು.ಆದರೆ ನನ್ನ ಹೆಂಡತಿಗೆ ಒಂದು ತಲಬು ಇದೆ, ಹಾಗೆ ಹೇಳಿದರೆ ಅವಳು ಬೇಜಾರು ಮಾಡಿಕೊಳ್ಳುವುದಿಲ್ಲ ಬಿಡಿ, ಒಂದು ಕೈಲಿ ಕಾಫಿ ಲೋಟ … Read more

ಗಾಂಜ ಮತ್ತು ಹೊಲ: ಅಕ್ಬರ್ ಅಲಿ

1ಪಂಪಣ್ಣ ಹಾಗೂ ಸಿದ್ದಪ್ಪ ತಮ್ಮ ಹೊಲಗಳನ್ನ ಮಲ್ಲಾರೆಡ್ಡಿ ಎಂಬಾತಗ ಪಾಲಿಗೆ ಕೊಟ್ಟರು. ಈ ಸಂಗತಿ ಸಂಗವ್ವಗ ಸಮಾಧಾನ ತಂದಿರ್ಲಿಲ್ಲ. ಎಷ್ಟನ ಬೆಳಿಲಿ ಮನೆವ್ರೆ ಮಾಡ್ಕೆಂದು ತಿನ್ಬೇಕು. ಭೂಮಿತಾಯಿ ಒಂದೊರ್ಷ ಕೊಡ್ಲಿಲ್ಲಂದ್ರ ಇನ್ನೊಂದೊರ್ಷ ಕೊಡ್ತಾಳ. ರೈತ್ರು ನಂಬಿಕೀನ ಕಳ್ಕಾಬಾರ್ದು ಅಂತ ಸಂಗವ್ವನ ಗಂಡ ಸತ್ಯಪ್ಪ ಹೇಳ್ತಿದ್ದ. ಎಂತಾ ತಂದಿಗೆ ಎಂತಾ ಮಕ್ಳು ಹುಟ್ಟಿದ್ರಲಾ? ಅಂತ ಸಂಗವ್ವ ಭಾಳ ಚಿಂತಿ ಮಾಡಂಗಾತಿ. ರಡ್ಡೇರು ಮೊದ್ಲ ಹೊಲ್ದಾಗ ಕಾಲಿಡ್ತಾರಾ ಆಮ್ಯಾಗ ಮಾಲಕ್ರಿಗೆ ಸಾಲ ಕೊಟ್ಗಂತ ಹೋತಾರ. ಆ ಸಾಲಾನ ಟೈಮಿಗೆ ತೀರ್ಸಲಿಲ್ಲಂದ್ರ … Read more

ದಿಕ್ಕುಗಳು (ಭಾಗ 11): ಹಟ್ಟಿ ಸಾವಿತ್ರಿ ಪ್ರಭಾಕರಗೌಡ

ಅಜ್ಜಿಯ ಜೊತೆಗೆ ಜ್ಯೋತಿ ತನ್ನ ಮನೆ ತಲುಪಿ, ತನ್ನ ಕಂಪ್ಯೂಟರ್ ಮುಂದೆ ಹೋಗಿ ಕುಳಿತುಕೊಂಡಳು. ಅಜ್ಜಿಗೆ ಅನುಶ್ರೀಯ ಆತ್ಮಹತ್ಯೆಯ ಪ್ರಯತ್ನ ತುಂಬಾ ಆಘಾತ ನೀಡಿತ್ತು. ಆಕೆ ಜ್ಯೋತಿಗಾಗಿರುವ ಮಾನಸಿಕ ಪೆಟ್ಟನ್ನು ಅದರ ಆಳವನ್ನು ಪತ್ತೆ ಹಚ್ಚಿದ್ದಾಳೆ. ಮಾತನ್ನೆ ಕಳೆದುಕೊಂಡಂತಾಗಿರುವ ಮೊಮ್ಮಗಳನ್ನು ಕಂಡು ಅವರ ಹೃದಯ ವಿಲವಿಲನೆ ಒದ್ದಾಡುತ್ತಿದೆ. ಸದಾ ಏನಾದರೂ ಹರಟೆ ಹೊಡೆಯುತ್ತಾ, ಆ ಹರಟೆಯಲ್ಲಿಯೇ ಒಂದಿಷ್ಟು ನೆಮ್ಮದಿ ಕೊಡುತ್ತಾ, ಪಡೆಯುತ್ತಾ ಬೆಳೆದಿರುವ ಹುಡುಗಿ ಮಾತನ್ನೂ, ಕಣ್ಣಿನ ಹೊಳಪನ್ನೂ, ಊಟದ ಮೇಲಿನ ಆಸಕ್ತಿಯನ್ನೂ ಕಳೆದುಕೊಂಡು ಹೀಗೆ ಸೊರಗಿ … Read more

ಪ್ರಾಮಾಣಿಕ ಪ್ರಯತ್ನ ಗೆಲುವಿನ ಮೊದಲ ಮತ್ತು ಕೊನೆಯ ಮೆಟ್ಟಿಲು: ಜಿ. ಎಸ್. ಶರಣು

ನಾವು ಯಶಸ್ಸಿನ ಕಥೆಗಳನ್ನು ಓದುವಾಗ ಅಥವಾ ಕೇಳುವಾಗ, ನಮಗೆ ಕೇವಲ ಅಂತಿಮ ಫಲಿತಾಂಶ ಮಾತ್ರ ಕಾಣಿಸುತ್ತದೆ. ಆ ವ್ಯಕ್ತಿ ಪಡೆದ ಪದಕ, ಗಳಿಸಿದ ಹಣ ಅಥವಾ ಏರಿದ ಎತ್ತರ ನಮ್ಮ ಕಣ್ಣಿಗೆ ಕಾಣುತ್ತದೆ. ಆಗ ಸಹಜವಾಗಿಯೇ ನಾವು, “ಅವರು ತುಂಬಾ ಅದೃಷ್ಟವಂತರು” ಎಂದು ಅಂದುಕೊಳ್ಳುತ್ತೇವೆ. ಆದರೆ ಆ ಅದೃಷ್ಟದ ಹಿಂದೆ ಹಗಲಿರುಳು ಸುರಿಸಿದ ಬೆವರಿನ ಹನಿಗಳು ಮತ್ತು ಯಾರಿಗೂ ಕಾಣದಂತೆ ಮಾಡಿದ ಪ್ರಾಮಾಣಿಕ ಪ್ರಯತ್ನ ನಮಗೆ ಕಾಣಿಸುವುದಿಲ್ಲ. ವಾಸ್ತವದಲ್ಲಿ, ಜಗತ್ತಿನಲ್ಲಿ ಅದೃಷ್ಟ ಎನ್ನುವುದು ಲಾಟರಿ ಟಿಕೆಟ್ ಅಲ್ಲ, … Read more

ಪಂಜು ಕಾವ್ಯಧಾರೆ

ಮಳೆ ಹನಿ ಆಸೆ ನೀನು ತುಂಬಾ ವಿಶಾಲಪ್ರಶಾಂತ, ವಿಸ್ಮಯನಿನ್ನ ಸುಂದರ ಸೆಳೆಯುವ ನೋಟಕ್ಕೆಸೂರ್ಯ ಚಂದ್ರರ ಹಗಲು ಇರುಳು ಆಟಕ್ಕೆನಿನ್ನ ಮೊಗದ ಬಣ್ಣ ಬಣ್ಣಚಿತ್ತಾರ ಕಂಡುಹರ್ಷದಿ ಪುಳಕಿತಗೊಂಡೆ. ನಾ ಬೆಳ್ಳಿ ಮೋಡವಾಗಿಸನಿಹ ಬಂದಾಗಕಣ್ಣಿನ ನೋಟಕೆ ನಿಲುಕದಅಗಾಧ ಭಾವಬಣ್ಣ ರಹಿತ ಕಲ್ಪನಾತೀತರೂಪ ನಿನ್ನದು. ನಾ ನಿನ್ನಲ್ಲೊಂದುಕಾಮನ ಬಿಲ್ಲಿನ ಚಿತ್ತಾರ ಮೂಡಿಸಿಉಲ್ಲಾಸ ಹೊಂದುವ ಮುನ್ನವೇಮಾಯದ ಮಳೆಗೆ ಸಿಲುಕಿಬಿಸಿಲುಗಾಡಿನ ಸರೋವರದಲಿ ಹನಿಯಾಗಿಉಬ್ಬರವಿಳಿತದ ಅಲೆಯಾಗಿರುವೆ. ಮತ್ತೊಮ್ಮೆಮುಂಗಾರು ಕಾಲದಲಿಆವಿಯಾಗಿ ನೀಲಿ ಮುಗಿಲಿನಹೊನ್ನಿನ ಬಣ್ಣವ ನೋಡುವಸ್ನೇಹ ಚಿತ್ತಾರ ಕಂಡುತನ್ಮಯವಾಗುವಾಸೆ. -ತೇಜಸ್ವಿನಿ ನಾನೆಂಬ ಮರ ಬಾನೆತ್ತರಕೆ ಬೆಳೆದು ನಿಂತಿದೆಬೋಳಾದ … Read more

ವೃದ್ಧಾರಾಧನೆ: ಕೆ ಎನ್ ಮಹಾಬಲ

ಆ ದಿನ ಬೆಳಿಗ್ಗೆ ಎಂದಿನಂತೆ ಬೆಳಗಿನ ವಾಯುಸಂಚಾರಕ್ಕೆ, ತರಕಾರಿ, ಹಾಲು ತರಲು ಹೊರಟಿದ್ದೆ. ರಸ್ತೆಯ ಎದುರುಗಡೆ ಟೀ ಅಂಗಡಿಯ ರಾಜೇಶ್‌”ಸಾರ್‌, ಇಲ್ಲಿ ಬನ್ನಿ” ಎಂದು ಜೋರಾಗಿ ಕೂಗಿದ. ರಸ್ತೆ ದಾಟಿ ಅವನನ್ನು ಸಮೀಪಿಸಿ “ಏನು ರಾಜೇಶ್?”‌ಎಂದು ಕೇಳಿದೆ.“ಸಾರ್‌, ಆ ಮುದುಕ ಹೊನ್ನಪ್ಪ, ಅದೇ ನೀವು ದಿನಾ ಕಾಸು ಕೊಡ್ತಾ ಇದ್ರಲ್ಲಾ ಅವನು ಹೋದ ತಿಂಗಳು ಯುಗಾದಿ ಹಿಂದಿನ ದಿನ ತೀರ್ಕೊಂಡ್ನಂತೆ, ಲಾಕ್‌ಡೌನ್‌ಆಗಿತ್ತಲ್ಲವಾ ಬಹಳ ಕಷ್ಟ ಆಯ್ತಂತೆ ಹೆಣ ಸಾಗಿಸೋದು. ಕಡೆಗೆ ಯಾವುದೋ ಟೆಂಪೋ ಗೊತ್ತು ಮಾಡಿ ಹುಟ್ಟಿದ … Read more

ಪ್ರೀತಿ: ಎಲ್.ಚಿನ್ನಪ್ಪ, ಬೆಂಗಳೂರು

ಮೇನೇಜರ್ ಸಾಹೇಬ್ರೇ, ಪಾಪ ! ನಮ್ಮ ಜಯಂತಿ ಬರೀ ಕೈ ಕಾಲು ವೀಕ್ ಎಂದು ಆಸ್ಪತ್ರೆಗೆ ಸೇರಿ ಹತ್ತು ದಿನಗಳಾದವು, ಇನ್ನೂ ಡಿಸ್ಚಾರ್ಜ್ ಆಗಿಲ್ಲ. ನಾನೀಗ ಅವಳನ್ನು ನೋಡಲು ಹೋಗುತ್ತಿದ್ದೇನೆ, ನೀವೂ ಒಮ್ಮೆ ಹೋಗಿ ನೋಡಿದ್ರೆ ಅವಳ ಮನಸ್ಸಿಗೆ ಸ್ವಲ್ಪ ಸಮಧಾನವಾಗಬಹುದು ಸಾರ್” ಎಂದಳು ಸ್ಟೆನೋ ಸುಮತಿ. “ನೀನ್ಹೋಗಿ ನೋಡ್ಕೊಂಡು ಬಾಮ್ಮ ಸುಮತಿ. . . ಇಲ್ಲಿ ನನ್ನ ಕೆಲಸ ಯಾವಾಗ ಮುಗಿಯುತ್ತೋ. . . . . .?” ಅದಿರಲಿ ಸಾರ್, ಹೇಗಾದರು ಒಮ್ಮೆ ನೀವು … Read more

ಅಪ್ಪಣ್ಣ ಭಟ್ಟರ ಶ್ರುತಿಪೆಟ್ಟಿಗೆ: ಡಾ. ವಿಶ್ವನಾಥ ಎನ್ ನೇರಳಕಟ್ಟೆ

“. . . ವಿಚ. ಕ್ಷಣಗು. ಣಶೀ. ಲದಯಾ. ಲವಾ. ಲಮಾಂ. ಪಾ. ಲಯ. . . ” ತಾರಸ್ಥಾಯಿಯೇ ಉತ್ತುಂಗವೆನಿಸಿದ್ದ ಸಾಲನ್ನು ಹಾಡುವಾಗ ಅಪ್ಪಣ್ಣ ಭಟ್ಟರ ಶ್ರುತಿ ಎಲ್ಲೋ ಕಳೆದುಹೋಯಿತು. ಶುದ್ಧ ಮಧ್ಯಮ ಧ್ವನಿ ಹೊಮ್ಮುವ ಬದಲು ಪ್ರತಿ ಮಧ್ಯಮ ಧ್ವನಿಯನ್ನು ಅವರ ಗಂಟಲು ಹೊರಡಿಸಿದ್ದರಿಂದಾಗಿ ಅಪಶ್ರುತಿ ಕೇಳಿಬಂತು. ಅದು ಅವರಿಗೆ ತಿಳಿಯದ ಸಂಗತಿಯೇನಲ್ಲ. ತಕ್ಷಣಕ್ಕೆ ತಾನೆಲ್ಲೋ ತಪ್ಪು ಮಾಡಿದ್ದೇನೆ ಎಂಬ ಭಾವ ಅವರನ್ನು ಆವರಿಸಿತು. ಆದರೆ ಅದನ್ನು ಒಪ್ಪಿಕೊಳ್ಳಲು ಮನಸ್ಸು ಬಾರದೆ ಶ್ರುತಿಪೆಟ್ಟಿಗೆಯ ಕಡೆಗೆ … Read more

ಜಯಂತಿಪುರವೆಂಬ ಸಾವಿರದ ಕಥಾಕಡಲು…!: ಜಗದೀಶ ಬ. ಹಾದಿಮನಿ

ಶ್ರೀಧರ ಬನವಾಸಿಯವರು ‘ಅಮ್ಮನ ಆಟೋಗ್ರಾಫ್’, ‘ಬ್ರಿಟಿಷ್ ಬಂಗ್ಲೆ’, ‘ದೇವರ ಜೋಳಿಗೆ’ ಕಥಾ ಸಂಕಲನಗಳು; ‘ತಿಗರಿಯ ಹೂಗಳು’, ‘ಬಿತ್ತಿದ ಬೆಂಕಿ’, ‘ಪೂರ್ಣಚಂದ್ರನಿಗೆ ಮುಖವಾಡವಿಲ್ಲ’ ಕವನ ಸಂಕಲನಗಳು, ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಪಡೆದ ‘ಬೇರು’ ಕಾದಂಬರಿ ಹಾಗೂ ‘ಪಂಚಮಿ ಪ್ರಕಾಶನ’ದಿಂದ ಈಗಾಗಲೇ ಕನ್ನಡನಾಡಿಗೆ ಚಿರಪರಿಚಿತರು. ಈಗಿವರ ಮತ್ತೊಂದು ವಿಶಿಷ್ಟಕೃತಿಯೇ ‘ಜಯಂತಿಪುರದ ಕತೆಗಳು’ ಎಂಬ ಕಥಾ ಸಂಕಲನ. ಇದರಲ್ಲಿ ಒಟ್ಟು ಹತ್ತು ಕತೆಗಳು, ಎರಡು ನೀಳ್ಗತೆಗಳಿವೆ. ಯಾವವೂ ಅವಸರದ ರಚನೆಗಳಾಗಿಲ್ಲ; ಎಲ್ಲವೂ ಧ್ಯಾನಿಸಿಕೊಂಡು ನಿಧಾನ ಮೈದಾಳಿದಂತಹವುಗಳು. ಜಯಂತಿಪುರವನ್ನೇ ಕೇಂದ್ರಸ್ಥಾನ … Read more

ತ್ಯಾಗ, ನಿಸ್ವಾರ್ಥ ಹಾಗೂ ಮಾನವೀಯತೆಯ ಬೆಳಕು ಪಸರಿಸುವ ಅಪರೂಪದ ಜೀವನಗಾಥೆ ‘ಹೆಗಲು’: ಬೆಂಶ್ರೀ ರವೀಂದ್ರ, ಬೆಂಗಳೂರು

ಬದುಕು ಹಲವು ಸಾಧನೆಗಳಿಗೆ ಅವಕಾಶ ಮಾಡುವ ರಂಗಮಂಚ. ಯಾವ ಸಾಧನೆಯನ್ನೂ ಒಬ್ಬ ವ್ಯಕ್ತಿ ಮಾಡಲಾರ. ಆತನಿಗೆ ಹತ್ತಾರು ಜನರ ಸಹಕಾರ ಇದ್ದೇ ಇರುತ್ತದೆ. ಅದು ಅವನ ಅರಿವಿಗೆ ಬರಬಹುದು ಅಥವಾ ಬಾರದಿರಬಹುದು. ಈ ಸಾಧನೆಗಳು ವ್ಯಷ್ಟಿಯಾಗದೆ ಸಮಷ್ಟಿಯಾದಾಗ ಮಾತ್ರ ಸಾರ್ಥಕವಾಗುತ್ತದೆ. ಸಾಧಿಸಿ ಮುಂದೆ ನಡೆದವನು ತನ್ನನ್ನು ಆ ಎತ್ತರಕ್ಕೆ ಕರೆದೊಯ್ಯದವರನ್ನು ಪ್ರಜ್ಞಾಪೂರ್ವಕವಾಗಿ ಕೃತಜ್ಞತೆಯಿಂದ ನೆನಪಿಸಿಕೊಂಡಾಗ ಆ ಸಾಧನೆಗೂ, ವ್ಯಕ್ತಿಗೂ ಗೌರವ ಬರುತ್ತದೆ. ಅಂತಹ ಸಾರ್ಥಕತೆ “ಹೆಗಲು” ಪುಸ್ತಕದಲ್ಲಿ ಕಾಣುತ್ತದೆ. “ಹೆಗಲು”, ಒಂದು ಅಪರೂಪದ ಜೀವನಗಾಥೆ. ಈ ಕಥನದಲ್ಲಿ … Read more

ಮಂಗಟ್ಟೆ ಪಕ್ಷಿಯ ವಿಸ್ಮಯ ಲೋಕ: ಶ್ರೀಧರ ಬನವಾಸಿ

ಅರಣ್ಯ ಸಂರಕ್ಷಣೆ ಮತ್ತು ಜೀವ ಸಂಕುಲಗಳ ಅಳಿವು ಉಳಿವಿನ ಹೋರಾಟವು ಸದಾ ಪರಿಸರ ಪ್ರಿಯರನ್ನು ಕಾಡುವ ಪ್ರಶ್ನೆ. ಮಾನವ ಅನಾದಿಕಾಲದಿಂದಲೂ ಕಾಡು, ಅಲ್ಲಿನ ಜೀವರಾಶಿಗಳ ನಡುವೆ ಸಹಬಾಳ್ವೆಯಿಂದಲೇ ಬದುಕುತ್ತಾ ಬಂದವನು. ಕಾಲಘಟ್ಟದ ಕಡುವೈರುಧ್ಯವೋ ಏನೋ…ಮಾನವ ತನ್ನ ಹಿಂದಿನ ಹಾದಿ ತಪ್ಪಿ ಹಿಂಸೆ, ಸ್ವಾರ್ಥದ ಚಿಂತನೆಯ ದಿಕ್ಕಿನತ್ತ ಸಾಗಿದಾಗ ಅಲ್ಲಿಂದ ಕಾಡಿನ ಜೊತೆ ಅವನ ಹೋರಾಟ ಶುರುವಿಟ್ಟುಕೊಂಡ. ಇದೊಂದು ಅನೈಸರ್ಗಿಕ ಸುದೀರ್ಘ ಪಯಣ. ಈ ದುರುಳ ಹಾದಿಯಲ್ಲಿ ನಾವು ಕಳೆದುಕೊಂಡ ಸಂಪತ್ತೇಷ್ಟೋ! ಒಂದು ರೀತಿಯಲ್ಲಿ ಮಾನವನ ಅಜ್ಞಾನದ ಹಾದಿಯು … Read more

ಅಜ್ಜಿ ಕತೆ: ಆದರ್ಶ ಜೆ.

ಈ ದಿನ ಮಳೆ ಬಿಡುವಂತೆ ಇರಲಿಲ್ಲ ಮಾಡಲು ಕೆಲಸಗಳು ಬೇಕಾದಿಷ್ಟಿದ್ದರು ಮಾಡುವಂತೆಯೂ ಇರಲಿಲ್ಲ, ಈ ಹಾಳಾದ ಮಳೆ ಈಗ್ಲೇ ಮಳೆಗಾಲದ ನಮೂನೆ ಮಾಡ್ತಿದೆ. ಮಳೆಗಾಲ ಶುರುವಾಯ್ತೆನೊ?ಎಂದು ಕಾಲು ತೊಳೆಯುತ್ತಾ, ಹಿಮ್ಮಡಿಗೆ ಹತ್ತಿದ ಸಗಣಿ ಸರಿಯಾಗಿ ತೊಳೆದಿದಿಯೋ ಇಲ್ಲವೋ ಎಂದು ಖಾತರಿಪಡಿಸಿ. ಸೀದಾ ಅಡುಗೆ ಮನೆಗೆ ತೆರಳಿ ತಿಂಡಿ ತಿಂದು ಜಗುಲಿಯ ಕುರ್ಚಿಯೇರಿ, ಬೀಳುವ ಮಳೆಯನ್ನೇ ದಿಟ್ಟಿಸುತ್ತ ಕವಳ ಮೆಲ್ಲಲು ಶುರು ಮಾಡಿದ. ಒಮ್ಮೆಲೇ ಏನೋ ನೆನಪಾದವನಂತೆ ದಿಗ್ಗನೆ ಎದ್ದು ಚಡಿ ಕಟ್ಟೆ ತುದಿಗೆ ನೆಡೆದು, ಕವಳದ ಕೆಂಪು … Read more

ಪಂಜು ಕಥಾ ಸ್ಪರ್ಧೆ

ಪಂಜು ಅಂತರ್ಜಾಲ ಪತ್ರಿಕೆ ವತಿಯಿಂದ ಕಥಾ ಸ್ಪರ್ಧೆಗೆ ನಿಮ್ಮ ಕಥೆಯನ್ನು ಆಹ್ವಾನಿಸಲಾಗಿದೆ. ಸೂಚನೆಗಳು:-ಕಥೆ ಸ್ವಂತ ರಚನೆಯಾಗಿರಬೇಕು.-ಕಥೆ ಯೂನಿಕೋಡ್ ನಲ್ಲಿ ಇದ್ದರೆ ಒಳ್ಳೆಯದು.-ಸ್ಪರ್ಧೆಗೆ ಅಪ್ರಕಟಿತ ಕಥೆಯನ್ನು ಮಾತ್ರ ಕಳುಹಿಸಬೇಕು. ಕಥೆಯು, ಎಫ್ ಬಿ, ಸೇರಿದಂತೆ ಬೇರೆ ಎಲ್ಲಾದರು ಪ್ರಕಟವಾಗಿದ್ದರೆ ಅಂತಹ ಕಥೆಯನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ.-ಬೇರೆಯವರ ಕದ್ದ ಕಥೆಯನ್ನು ಕಳುಹಿಸಿದರೆ ಅಂತಹ ಲೇಖಕರನ್ನು ಪಂಜುವಿನ ಬ್ಲಾಕ್ ಲಿಸ್ಟ್ ಗೆ ಹಾಕಲಾಗುವುದು. ಕಥೆಯನ್ನು ಕಳುಹಿಸಿಕೊಡಬೇಕಾದ ಮಿಂಚಂಚೆ: editor.panju@gmail.com, smnattu@gmail.com ಮಿಂಚಂಚೆಯ ಸಬ್ಜೆಕ್ಟ್ ನಲ್ಲಿ “ಪಂಜು ಕಥಾಸ್ಪರ್ಧೆ” ಎಂದು ತಿಳಿಸಲು ಮರೆಯದಿರಿ. ಮಿಂಚಂಚೆಯಲ್ಲಿ … Read more