ಫೇಸ್ ಬುಕ್ ಮತ್ತು ಗುಂಪುಗಾರಿಕೆ: ನಟರಾಜು ಎಸ್. ಎಂ.

ಫೇಸ್ ಬುಕ್ ಗೆ 2010ರ ಜನವರಿ ತಿಂಗಳಲ್ಲಿ ಸೇರಿದ್ದೆ. ಆ ವರುಷ ಪೂರ್ತಿ ಬೆರಳೆಣಿಕೆಯಷ್ಟು ಗೆಳೆಯರಷ್ಟೇ ನನ್ನ ಫೇಸ್ ಬುಕ್ ಫ್ರೆಂಡ್ ಗಳಾಗಿದ್ದರು. ಆ ಗೆಳೆಯರಲ್ಲಿ ಹೆಚ್ಚಿನ ಗೆಳೆಯರೆಲ್ಲರೂ ನಾನು ಓದಿದ ಕಾಲೇಜುಗಳಲ್ಲಿದ್ದ ಗೆಳೆಯರೇ ಆಗಿದ್ದರು. ಆಗಾಗ ನನ್ನ ವಾಲ್ ನಲ್ಲಿ ಯಾವುದಾದರೂ ಇಂಗ್ಲೀಷ್ ಶುಭಾಷಿತ ಹಾಕಿಕೊಳ್ಳುವುದನ್ನು ಬಿಟ್ಟರೆ 2010 ರ ಕೊನೆಗೆ ಕೈಗೆ ಸಿಕ್ಕ ಹೊಸ ಕ್ಯಾಮೆರಾದ ಫೋಟೋಗಳನ್ನು ಅಪ್ ಲೋಡ್ ಮಾಡುವುದನ್ನು ಕಲಿತ್ತಿದ್ದೆ. ಆ ಫೋಟೋಗಳಿಗೆ ಆಗ ಎಷ್ಟು ಲೈಕ್ ಮತ್ತು ಕಾಮೆಂಟ್ ಬಂದಿವೆ … Read more

ಗೋಳಿಬೈಲಿನ ನ್ಯೂಲೈಫು: ಶ್ರೀನಿಧಿ ಡಿ.ಎಸ್.

  ಪಂಚಾಯ್ತಿ ಮೆಂಬರು ದಾಮು ಹೇಳಿದ ಸುದ್ದಿಯನ್ನ ಗೋಳಿಬೈಲಿನ ವೆಂಕಟರಮಣ ಸ್ಟೋರ್ಸಿನ ಕಿಣಿ ಮಾಮ್ ಯಾತಕ್ಕೂ ನಂಬಲಿಲ್ಲ. ಅವರು ದಾಮು ಕೇಳಿದ ಜಾಫಾ ಕೋಲಾ ತೆಗೆದು ಕೊಟ್ಟು, ಅಂಗಡಿಯ ಗಾಜಿನ ಬಾಟಲುಗಳನ್ನ ಸರಿಯಾಗಿ ಜೋಡಿಸಿ, ಧೂಳು ಹೊಡೆದು, ಊದುಬತ್ತಿ ಹಚ್ಚಿ ಅದನ್ನು ಬಾಲಾಜಿಯ ಫೋಟೋಕ್ಕೆ ಮೂರು ಸುತ್ತು ಸುತ್ತಿಸಿ. ನಿಧಾನ ತಮ್ಮ ಕುರ್ಚಿಯ ಮೇಲೆ ಕುಳಿತು, “ಅದೆಂತ ಸಮಾ ಹೇಳು ಮಾರಾಯಾ” ಅಂದರು. ದಾಮು ಜಾಫಾ ಕುಡಿಯುತ್ತಿದ್ದವನು, ಇದಕ್ಕಾಗೇ ಕಾದಿದ್ದವನ ಹಾಗೆ, ಗಂಟಲು ಸರಿ ಮಾಡಿಕೊಂಡ. “ನೋಡಿ … Read more

ಕಾಕ್ರೋಚ್ ಎಫೆಕ್ಟ್ ಮತ್ತು ಹನಿಯನ್ ಗಿಬ್ಬನ್: ಅಖಿಲೇಶ್ ಚಿಪ್ಪಳಿ

ಯಾರ ಬಾಯಲ್ಲಿ ನೋಡಿದರೂ ಒಂದೇ ಮಾತು. ಸೆಕೆ-ಸೆಕೆ-ಸೆಕೆ-ಉರಿ. ಮಳೆ ಯಾವಾಗ ಬರುತ್ತೋ? ಇತ್ಯಾದಿಗಳು. ರಾತ್ರಿಯಿಡೀ ನಿದ್ದೆಯಿಲ್ಲ. ವಿಪರೀತ ಸೆಖೆ ಮತ್ತು ಸೊಳ್ಳೆ. ಮೇಲುಗಡೆ ಮತ್ಸ್ಯಯಂತ್ರ ತಿರುಗದಿದ್ದರೆ ನಿದ್ದೆಯಿಲ್ಲ. ಬೆಳಗ್ಗೆ ಎದ್ದಾಗ ಕಣ್ಣೆಲ್ಲಾ ಉರಿ. ಎಷ್ಟು ನೀರು ಕುಡಿದರೂ ಕಡಿಮೆ. ದಾಹ. ವಿಪರೀತ ದಾಹ. ಕಳೆದೆರೆಡು ಮೂರು ದಶಕಗಳಿಂದ ಹವಾಮಾನ ಏರುಪೇರಾಗುತ್ತಿದೆ ಎಂಬ ಕೂಗು ಶುರುವಾಗಿ ಇದೀಗ ಅದೇ ಕೂಗು ಮುಗಿಲು ಮುಟ್ಟುತ್ತಿದೆ. ಊರ್ಧ್ವಮುಖಿಯ ಅವಾಂತರಗಳು ಹೆಚ್ಚಾದಷ್ಟು ವಾತಾವರಣದಲ್ಲಿ ಬಿಸಿಯೇರಿಕೆಯಾಗುತ್ತದೆ. ಒಟ್ಟಾರೆಯಾಗಿ ಭೂಮಿಯ ಬಿಸಿಯನ್ನು ಕಡಿಮೆ ಮಾಡಬೇಕೆಂಬ ಉದ್ಧೇಶದಿಂದ … Read more

ಎಂತಾ ಸೆಖೆ ಮಾರ್ರೆ..: ಅನಿತಾ ನರೇಶ್ ಮಂಚಿ

ಶಾಲೆಯಲ್ಲಿ ಮಕ್ಕಳಿಗೆ ಪಾಠ ಮಾಡುವಾಗ ವರ್ಷಕ್ಕೆ ಮೂರು ಕಾಲಗಳಿರುತ್ತವೆ, ಮಳೆಗಾಲ ಚಳಿಗಾಲ ಬೇಸಿಗೆಗಾಲ  ಎಂದು ಟೀಚರುಗಳು ಹೇಳಿ ಕೊಟ್ಟದ್ದು ನಿಮಗೆ ನೆನಪಿರಬಹುದು.  ನಾನಂತೂ ಅದನ್ನೇ ಪರಮ ಸತ್ಯವೆಂದು ತಿಳಿದು  ಉರು ಹೊಡೆದಿದ್ದೆ ಮಾತ್ರವಲ್ಲ ಅದನ್ನೇ ಪರೀಕ್ಷೆಗಳಿಗೆ ಬರೆದು ಮಾರ್ಕೂ ಗಿಟ್ಟಿಸಿದ್ದೆ. ಆದರೆ  ದಕ್ಷಿಣ ಕನ್ನಡಕ್ಕೆ ಕಾಲಿಟ್ಟ ಮೇಲೆ ತಿಳಿದಿದ್ದು ಸತ್ಯ ಕೂಡಾ ಊರಿಂದೂರಿಗೆ ಬದಲಾಗುತ್ತದೆ ಎಂದು..!!  'ನೋಡಿ ಹಾಗೆ ಹೇಳ್ಬೇಕು ಅಂದ್ರೆ ನಮ್ಮೂರಲ್ಲಿ ಬೇಸಿಗೆ ಕಾಲ ಅಂತಲೇ ಇಲ್ಲ..' 'ಅರ್ರೇ.. ವಾವ್ ಎಷ್ಟು ಚಂದ' ಅಂತ ಟಿಕೆಟ್ … Read more

ನಾನು ನೋಡಿದ ನಾಟಕ- ಸೋರೆಬುರುಡೆ (ನೃತ್ಯನಾಟಕ): ಹನಿಯೂರು ಚಂದ್ರೇಗೌಡ

"ಮಾನವನ ಸ್ವಾರ್ಥಪರ ನಡವಳಿಕೆ-ಆಲೋಚನೆ ತೆರೆದಿಡುವ ಜಾನಪದೀಯ ಕಥಾನಕ" ಪ್ರಪಂಚದ ಮರುಹುಟ್ಟು ಕುರಿತ ಇರುಳಿಗರ ಸೃಷ್ಟಿಪುರಾಣದ ಕಥೆಯನ್ನು ಆಧಾರವಾಗಿಟ್ಟುಕೊಂಡು ರಚಿಸಲ್ಪಟ್ಟ "ಸೋರೆಬುರುಡೆ" ಜಾನಪದೀಯ ನೃತ್ಯನಾಟಕವು ಬೆಂಗಳೂರು ವಿವಿ ಆವರಣದಲ್ಲಿರುವ ಕಲಾಗ್ರಾಮದ ರಂಗಮಂದಿರದಲ್ಲಿ ಪ್ರದರ್ಶನಗೊಂಡು ಕಿಕ್ಕಿರಿದ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ಬೆಂಗಳೂರಿನ ಕೆ.ಎಸ್.ಎಂ.ಟ್ರಸ್ಟ್ ಕಲಾವಿದರು ಪ್ರಸ್ತುತಪಡಿಸಿದ ಈ ನಾಟಕವು, ಮನುಷ್ಯ ತನ್ನ ಅಸ್ತಿತ್ವದ ಉಳಿವಿಗಾಗಿ ಏನೂ ಬೇಕಾದರೂ ಮಾಡಲು ಹಿಂಜರಿಯಲಾರ ಎಂಬ ಸಂದೇಶವನ್ನು ನೀಡಿತು. ಅಲ್ಲದೆ, ಮಾನವನದು ಸದಾ ಸ್ವಾರ್ಥಪರ-ಅನುಕೂಲಸಿಂಧುವೂ ಆದ ವರ್ತನೆ ಮತ್ತು ನಡವಳಿಕೆಯಾಗಿದೆ ಎನ್ನುವುದನ್ನು ನಾಟಕದಲ್ಲಿ ಮನೋಜ್ಞವಾಗಿ … Read more

ಸಾಮಾನ್ಯ ಜ್ಞಾನ (ವಾರ 25): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಭಾರತದ ಮೂರು ಪ್ರಾದೇಶಿಕ ಕ್ಷೀರೋದ್ಯಮ ಸಂಶೋಧನೆ ಕೇಂದ್ರಗಳಲ್ಲಿ ಒಂದು ಕರ್ನಾಟಕದಲ್ಲಿದೆ. ಅದು ಎಲ್ಲಿದೆ? ೨.    ೧೯೨೪ ರ ಬೆಳಗಾವಿ ಕಾಗ್ರೇಸ್ ಅಧಿವೇಶನದಲ್ಲಿ ಸ್ವಾಗತ ಗೀತೆಯನ್ನು ಹಾಡಿದವರು ಒಬ್ಬ ಖ್ಯಾತ ಹಿಂದೂಸ್ಥಾನಿ ಗಾಯಕಿ. ಈಕೆ ಯಾರು? ೩.    ಶಿವಪುರಿ ರಾಷ್ಟ್ರೀಯ ಉದ್ಯಾನ ಎಲ್ಲಿದೆ? ೪.    ಮಧ್ಯಪ್ರದೇಶ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದ ವರ್ಷ ಯಾವುದು? ೫.    ಅಗ್ನಿಶಾಮಕದವರು ಬಳಸುವ ರಾಸಾಯಾನಿಕ ಮಿಶ್ರಣ ಯಾವುದು? ೬.    ಜೈ ಜವಾನ್ ಜೈ ಕಿಸಾನ್ ಘೋಷಣೆ ಜೊತೆಗೆ ಜೈ ವಿಜ್ಞಾನ್ ಎಂಬುವುದನ್ನು … Read more

ತರಾವರೀ ತರ್ಕ ಮತ್ತು ಹಾಸ್ಯ (ಭಾಗ 2): ಎಂ.ಎಸ್. ನಾರಾಯಣ

(ಇಲ್ಲಿಯವರೆಗೆ) ಯಾಕೋ ಏನೋ ಪುಟ್ಟಿಯನ್ನು ಬಿಡುಗಡೆಗೊಳಿಸಿದ ನಾನೇ ಯಾವುದೋ ಬಂಧನಕ್ಕೆ ಸಿಕ್ಕಿಕೊಂಡಿದ್ದ ಹಾಗೆ ಅನುಭವವಾಗಲಾರಂಭಿಸಿತು. ನನ್ನ ತಲೆಯನ್ನು ಹೊಕ್ಕಿದ್ದ ತರ್ಕವೆಂಬ ಹುಳದ ಗುಂಯ್ಗಾಟ ನಿಲ್ಲುವಂತೆಯೇ ಕಾಣಲಿಲ್ಲ. ನಿಜಕ್ಕೂ ತರ್ಕಶಾಸ್ತ್ರವೊಂದು ಮಹಾ ಸಾಗರ. ಆವರಣದ ಸತ್ಯಾಸತ್ಯತೆಯಲ್ಲಿ ತರ್ಕಶಾಸ್ತ್ರಕ್ಕೆ ಆಸಕ್ತಿ ಇಲ್ಲ. ತರ್ಕವು ಕೇವಲ ಸಾಕ್ಷೀ ಪ್ರಮಾಣ ಕೇಂದ್ರೀಕೃತವಾಗಿರುತ್ತದೆ. ಶುದ್ಧತರ್ಕವಲ್ಲದೆ, ತರ್ಕದೋಷಗಳೆನ್ನಬಹುದಾದ ಅತರ್ಕ, ವಿತರ್ಕ, ಕುತರ್ಕ, ಚಕ್ರತರ್ಕ, ವಕ್ರತರ್ಕ…..! ಎಂದು ಎಷ್ಟೆಲ್ಲಾ ವೈವಿಧ್ಯತೆ ಅನ್ನಿಸಿತು. ಪುಟ್ಟಿಯ ಲೆವೆಲ್ಲಿಗೆ ಇದೆಲ್ಲಾ ಟೂ ಮಚ್ಚೆಂದೂ ಅನಿಸಿತು. ತರ್ಕಶಾಸ್ತ್ರದಂಥಾ ಜಟಿಲವಾದ ವಿಷಯವನ್ನು ಕಠಿಣವಾದ ಭಾಷೆಯಲ್ಲಿ … Read more

ಮೂರು ಕವಿತೆಗಳು: ಜೈಕುಮಾರ್ ಎಚ್.ಎಸ್., ಪ್ರಶಾಂತ್ ಭಟ್, ರಾಣಿ ಪಿ.ವಿ.

ತೇಪೆ ಚಡ್ಡಿ ಮತ್ತು ನಕ್ಷತ್ರ ಶನಿವಾರದ ಬೆಳ್ಳಂಬೆಳಗ್ಗೆ ಒಪ್ಪತ್ತಿನ ಶಾಲೆಗೆ ಹೊಂಟಿದ್ದೆ ಎದುರಿಗೆ ಸಿಕ್ಕ ಜಮೀನ್ದಾರನ ಸೊಕ್ಕಿನ ಹೈದ 'ನಿಂದು ಪೋಸ್ಟ್ ಆಗಿದೆ' ಎಂದ! ನನಗ್ಯಾವ ಲೋಕದವರು ಪತ್ರ ಬರೆವರೆಂದು ನೋಡಿದರೆ ಅವನ ಕಣ್ಣುಗಳು ನೆಟ್ಟಿದ್ದು ಒಡೆದುಹೋಗಿರುವ ನನ್ನ ಚಡ್ಡಿ ಮೇಲೆ! ಹೋದ್ವಾರ ಅವ್ವ ತವರಿಂದ ತಮ್ಮನ ಚಡ್ಡಿ ತಂದು ಇಕ್ಕಿಸಿದ್ದಳು, ಇದೇ ಹಲ್ಕಟ್ ಹೈದ, 'ದೊಗಳೆ ಚಡ್ಡಿ' ಎಂದು ಆಗಲೂ ಛೇಡಿಸಿದ್ದ. ಅಪ್ಪ ಗದ್ದೆಗೆ ಪಲಾಯನಗೈವ ಮೊದಲೇ ಹಿಡಿಯಲೆಂಬಂತೆ ಓಡಿದೆ ಮನೆ ಎದುರು ಏರು ಕಟ್ಟುತ್ತಿದ್ದ … Read more

ಒಮ್ಮೆ ಮಾತ್ರ ಕೇಳುತ್ತಿದ್ದ ಕಥೆಗಳು !: ಪ್ರಜ್ವಲ್ ಕುಮಾರ್

ನಾವು ಚಿಕ್ಕವರಿದ್ದಾಗ, ರಾತ್ರಿ ಮಲಗುವಾಗ 'ಕಥೆ ಹೇಳಿ' ಎಂದು ಪೀಡಿಸುತ್ತಿದ್ದ ನಮ್ಮಿಂದ ಮುಕ್ತಿ ಪಡೆಯಲು ನನ್ನ ತಂದೆಯಾದಿಯಾಗಿ ನಮ್ಮ ಹಿರಿಯರು ಹೇಳುತ್ತಿದ್ದ ಕೆಲವು ಕಥೆಗಳು. ಈ ಕಥೆಗಳ ವಿಶೇಷವೆಂದರೆ ಒಮ್ಮೆ ನಾವು ಈ ಕಥೇನ ಕೇಳಿದ್ರೆ, ಆ ಕಥೆ ಹೇಳಿದವರ ಹತ್ರ ಮತ್ಯಾವತ್ತೂ ಕಥೆ ಕೇಳೋಕೆ ಹೋಗ್ತಿರ್ಲಿಲ್ಲ! ಇನ್ನು ಮುಂದೆ ಒಂದಾದ ಮೇಲೊಂದರಂತೆ ನಾಲ್ಕು ಕಥೆಗಳು! ಕಥೆಯ ಘಟನೆ ಒಂದು : "ಗುಬ್ಬಚ್ಚಿ ಮತ್ತು ಭತ್ತದ ಕಾಳು" "ಒಂದೂರಲ್ಲಿ ಒಂದು ದೊಡ್ಡ ಕಣ (ಭತ್ತವನ್ನು ಅದರ ಗಿಡದಿಂದ … Read more

ಬದುಕು ಜಟಕಾ ಬಂಡಿ, ವಿಧಿ ಅದರ ಮಾಲೀಕ: ಸುಮನ್ ದೇಸಾಯಿ

ನಸಿಕಲೆ ೫.೩೦ ಗಂಟೆ ಹೊತ್ತದು, ಬಾಗಲಾ ಬಾರಿಸಿದ ಸಪ್ಪಳಕ್ಕ ಎಚ್ಚರಾತು, ಶ್ರೀ ಬಂದ್ಲಂತ ಕಾಣಸ್ತದ ಅಂತ ಹೋಗಿ ಬಾಗಲಾ ತಗದೆ. ನೀರಿಕ್ಷಿಸಿದ ಪ್ರಕಾರ ಆಕಿನ ನಿಂತಿದ್ಲು.ಯಾಕೊ ಭಾಳ ಖಿನ್ನ ಆಗಿತ್ತು ಮುಖಾ.ಪ್ರಯಾಣದ ಆಯಾಸ ಇರಬಹುದು ಅಂತ ಸುಮ್ನಾದೆ. ಅಕಿ ಹೋಗಿ ಮುಖಾ ತೊಳ್ಕೊಂಡ ಬರೊದ್ರಾಗ,ಬಿಸಿ ಬಿಸಿ ಚಹಾ ಮಾಡ್ಕೊಂಡ ಬಂದು ಆಕಿಗೊಂದ ಕಪ್ಪ್ ಕೊಟ್ಟು ನಾನು ಆಕಿ ಮುಂದನ ಕುತೆ.ಆದ್ರು ಯಾಕೊ ಆಕಿ ಎನೊ ಚಿಂತಿ ಮಾಡಲಿಕತ್ತಾಳ ಅನಿಸ್ತು. ಯಾಕಂದ್ರ ನನ್ನ ರೂಮ್ ಮೇಟ್, ಸಹೊದ್ಯೋಗಿ,ನನ್ನ ಜೀವನದ … Read more

ಮರುಜನ್ಮ: ಪ್ರಶಸ್ತಿ ಪಿ.

ಊರಾಚೆಯ ಒಂದು ನಾಲೆ. ಚಿಕ್ಕಂದಿನಲ್ಲಿ ಈಜು ಬೀಳುತ್ತಿದ್ದ, ಬಟ್ಟೆ ತೊಳೆಯೊ, ಕೆಲವರ ಎಮ್ಮೆ ತೊಳೆಯೋ.. ಹೀಗೆ ಊರ ಎಲ್ಲಾ ಕೊಳೆಗಳ ತೊಳೆಯೋ ಪವಿತ್ರ ಸ್ಥಳವದು ! ಸಂಜೆಯ ಹೊತ್ತಾಗಿದ್ದರಂದ ಬಟ್ಟೆ ತೊಳೆವ ಹೆಂಗಸರು, ಈಜು ಬೀಳೋ ಮಕ್ಕಳೂ,ಎಮ್ಮೆ ತೊಳೆಯೋ ರೈತರೂ ಮನೆ ಸೇರಿದ್ದರೆಂದು ಕಾಣುತ್ತೆ. ನಾಲೆಯ ದಡದಲ್ಲಿ ಕೂತಿದ್ದ ಈತನನ್ನು, ನಾಲೆಯಲ್ಲಿ ಪ್ರತಿಬಿಂಬಿಸುತ್ತಿದ್ದ ಕೇಸರಿ ರವಿಯನ್ನುಳಿದು ಇನ್ಯಾರೂ ಇರಲಿಲ್ಲ. ಆಗಾಗ ಬಂದು ನೇಪಥ್ಯದಲ್ಲಿ ಮರೆಯಾಗುತ್ತಿದ್ದ ಹಕ್ಕಿಗಳ ಸಾಲುಗಳು ಹಾರೋ ಹಕ್ಕಿಯಂತೆ ಸ್ವಚ್ಚಂದವಾಗಿದ್ದ ಹಿಂದಿನ ದಿನಗಳನ್ನು ನೆನಪಿಸುತ್ತಿದ್ದವು. ಒಮ್ಮೆ … Read more

ಪತ್ರಗಳು: ರಘು ಕೆ.ಟಿ.

ಜಾಹಿರಾತಿಗೆ ಅಂಕುಶ. . .  ಮಾನ್ಯರೆ, ಕೊನೆಗೂ ಆ ದಿನ ಬಂದೇಬಿಟ್ಟಿತು ನೋಡಿ.. .. ..  ಸುಳ್ಳು ಮತ್ತು ನಂಬಲಾರ್ಹವಲ್ಲದ ಜಾಹಿರಾತುಗಳನ್ನು ನೀಡಿ ಗ್ರಾಹಕರ ಕಣ್ಣಿಗೆ ಮಣ್ಣೆರಚ್ಚುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸುಲಭವಾಗಿ ಹಣಮಾಡುತ್ತಿರುವ ಬಹುರಾಷ್ಟ್ರೀಯ ಹಾಗೂ ಇತರೆ ಜಾಹಿರಾತು ಕಂಪನಿಗಳಿಗೆ ಕೇಂದ್ರೀಯ ಗ್ರಾಹಕ ರಕ್ಷಣೆ ಮಂಡಳಿಯು ಕೊನೆಗೂ ಅಂಕುಶವನ್ನು ಹಾಕಲು ನಿರ್ಧರಿಸಿರುವುದ ಸಂತೋಷದ ವಿಷಯ. ತಮ್ಮ ಉತ್ಪನ್ನಗಳನ್ನು ಮಾರಾಟಮಾಡಲು ಕಂಪನಿಗಳು ನಾನಾ ಬಗೆಯ ತಂತ್ರಗಳನ್ನು ಬಳಸಿಕೊಳ್ಳುವುದು ಸಾಮಾನ್ಯವಾಗಿದೆ. ಇದಕ್ಕೆ ಇಂಬುಕೊಡುವಂತೆ ವಿವಿಧ ಕ್ಷೇತ್ರಗಳ ದೊಡ್ಡ ದೊಡ್ಡ … Read more

ತಾಳಿ ಕಟ್ಟಿದ ಶುಭ ವೇಳೆ ….ಕೊರಳಲ್ಲಿ ಅದ್ಯಾವ ಮಾಲೆ?: ಅಮರ್ ದೀಪ್ ಪಿ.ಎಸ್.

ಅದೊಂದು ಅದ್ಭುತವಾದ ಸಿನೆಮಾ.  "ಬೆಂಕಿಯಲ್ಲಿ ಅರಳಿದ ಹೂ "   ಬಹುಶಃ 1983 ರಲ್ಲಿ ಬಂದ ಕೆ. ಬಾಲ ಚಂದರ್ ಅವರ ನಿರ್ಧೇಶನದ ಸಿನೆಮಾ ಅದು.  ತನ್ನೊಳಗಿನ ವೈಯುಕ್ತಿಕ ಆಸೆ ಮತ್ತು ಬದುಕಿನ ಕನಸು ಗಳನ್ನು ಅದುಮಿಟ್ಟುಕೊಂಡು ತನ್ನ ಕುಟುಂಬದವರ ಹಿತಕಾಗಿಯೇ ತಾನು ತನ್ನ ನಗುವನ್ನು ಜೀವಂತವಾಗಿಟ್ಟು ದುಡಿಯಲು ಸಿಟಿ ಬಸ್ಸು ಹತ್ತುವುದರಲ್ಲೇ ಕೊನೆಗೊಳ್ಳುವ ಸಿನೆಮಾದಲ್ಲಿ ಸುಹಾಸಿನಿ ಎಂಬ ಚೆಲುವೆ ತನ್ನ ಕಣ್ಣಲ್ಲೇ ನಗುವನ್ನು  ಮತ್ತು ನಗುವಿನಲ್ಲೇ ದುಃಖವನ್ನು ವ್ಯಕ್ತಪಡಿಸುತ್ತಲೇ ಇರುತ್ತಾರೆ.  ನಿಜ ಬದುಕಿನ ಹಲವರ ಸನ್ನಿವೇಶಗಳನ್ನು … Read more

ಬೆಳದಿಂಗಳ ನೋಡ: ಉಮೇಶ್ ದೇಸಾಯಿ

:೧: ಕಮಲಾಬಾಯಿ ನಿರಾಳವಾದರು ಎರಡು ದಿನಗಳಿಂದ ಬಹಳ ತಳಮಳಿಸಿದ್ದರು. ತಾವು ನೋಡಿದ ವಿಷಯ ಮೊದಲು ಯಜಮಾನರಿಗೆ ತಿಳಿಸಿದ್ದರು. ಅವರ ನೀರನ ಪ್ರತಿಕ್ರಿಯೆ ಅವರನ್ನು ನಿರುತ್ಸಾಹಗೊಳಿಸಿದರಲಿಲ್ಲ. ತಪ್ಪು ನಡೆಯುತ್ತಿದೆ ಎಂದು ಗೊತ್ತಿದ್ದೂ ನೋಡುತ್ತ ಸುಮ್ಮನೆ ಕುಳಿತುಕೊಳ್ಳುವ ಜಾಯಮಾನ ಅವರದಲ್ಲ. ಅದರಲ್ಲೂ ತಮ್ಮ ಪ್ರೀತಿಯ ಮಂಗಲಾಳ ಮಗಳು ತಪ್ಪು ಹಾದಿ ತುಳಿಯುತ್ತಿದ್ದಾಳೆ. ಇದರ ಬಗ್ಗೆ ಮಂಗಲಾಳಿಗೆ ಹೇಳಲೇಬೇಕು ಎಂದು ನಿರ್ಧರಿಸಿದರು. ಆಗಿದ್ದಿಷ್ಟೆ… ಎರಡು ದಿನದ ಹಿಂದಿನ ಮಧ್ಯಾಹ್ನ ಕಮಲಾಬಾಯಿ ಅಪಾರ್ಟಮೆಂಟಿನ ಮುಂದಿನ ಲಾನ್‌ನಲ್ಲಿ ಕುಳಿತಾಗ, ಮುಖ್ಯ ರಸ್ತೆಯ ತಿರುವಿಗೆ ಬೈಕ್ … Read more

ತಕರಾರಿನ ತರಕಾರಿ-ತಲೆನೋವಿನ ಎಳನೀರು: ಅಖಿಲೇಶ್ ಚಿಪ್ಪಳಿ

ಅತಿಸಾರದಿಂದ ಬಳಲುತ್ತಿರುವ ವ್ಯಕ್ತಿಯೊಬ್ಬ ಚಿತ್ರದುರ್ಗದ ಖಾಸಗಿ (ಹೆಸರು ನೆನಪಿಲ್ಲ) ಆಸ್ಪತ್ರೆಗೆ ದಾಖಲಾಗುತ್ತಾನೆ. ಅಲ್ಲಿನ ತಜ್ಞವೈದ್ಯರು ಒಂದು ವಾರ ಆತನಿಗೆ ಸೂಕ್ತ ಚಿಕಿತ್ಸೆ ನೀಡಿ ಬಿಡುಗಡೆ ಮಾಡುತ್ತಾರೆ. ಅತಿಸಾರದಿಂದ ಬಳಲಿದ ರೋಗಿಗೆ ಹೆಚ್ಚು-ಹೆಚ್ಚು ದ್ರವರೂಪದ ಆಹಾರಗಳನ್ನು ಸೇವಿಸಲು ಹೇಳುತ್ತಾರೆ. ಹಾಗೆಯೇ ಎಳನೀರನ್ನು ಹೆಚ್ಚು ಸೇವಿಸಿ ಎಂದೂ ಸಲಹೆ ನೀಡುತ್ತಾರೆ. ಬಿಡುಗಡೆಯಾಗಿ ಹೋದ ರೋಗಿ ಮೂರನೇ ದಿನಕ್ಕೆ ಮತ್ತೆ ವಾಪಾಸು ಬರುತ್ತಾನೆ. ಈ ಬಾರಿ ಇನ್ನೂ ಹೆಚ್ಚು ಸುಸ್ತಿನಿಂದ ಬಳಲಿರುತ್ತಾನೆ. ಮುಖ ಬಿಳಿಚಿಕೊಂಡಿರುತ್ತದೆ. ಚಿಕಿತ್ಸೆಯಲ್ಲಿ ಏನೂ ವ್ಯತ್ಯಾಸ ಆಗಿರುವುದಿಲ್ಲ ಎಂದು … Read more

ದೆಲ್ಲಿ ಚಲೋ .. : ಪ್ರಶಸ್ತಿ ಪಿ.

ಹೆಂಗಿದ್ರೂ ರಜೆಯಿದ್ಯಲ್ಲ ಬಾರೋ, ಉತ್ತರ ಭಾರತ ಸುತ್ತಬಹುದು ಅಂತ ಮೀರತ್ತಿನಲ್ಲಿದ್ದ ಮಾವ ಕರೆದಾಗ ದೇಶ ಸುತ್ತಬೇಕೆಂಬ ಬಯಕೆ ಗರಿಗೆದರಿ ನಿಂತಿತ್ತು. ದೇಶ ಸುತ್ತಬೇಕೆಂಬ ಮನ ಚಲೋ ದಿಲ್ಲಿ ಎಂದು ಹೊರಟು ನಿಂತಿತ್ತು. ದೆಲ್ಲಿಗೆಂದು ಹೊರಟಿದ್ದೆಂತು ಹೌದು. ಆದರೆ ಬೆಂಗಳೂರಿಂದ ದಿಲ್ಲಿಗೆ  2,153 ಕಿ.ಮೀಗಳ ಪಯಣ ಸುಲಭದ್ದೇನಲ್ಲ. ಸಣ್ಣವನಿದ್ದಾಗ ನಮ್ಮೂರು ಸಾಗರಕ್ಕೆ ಬರುತ್ತಿದ್ದ ರೈಲನ್ನು ದೂರದಿಂದ ನೋಡುವುದರಲ್ಲೇ ಖುಷಿ ಪಡುತ್ತಿದ್ದ ನನಗೆ ಮುಂದೊಮ್ಮೆ ಅದೇ ರೈಲಿನಲ್ಲಿ ದಿನಗಟ್ಟಲೇ ಪಯಣಿಸುವ ಭಾಗ್ಯ ಸಿಗುತ್ತೆ ಅಂತ ಕನಸಲ್ಲೂ ಅನಿಸಿರಲಿಲ್ಲ. ಯಾಕೆಂದರೆ ದೆಲ್ಲಿಗೆ … Read more

ಮತ್ತೊಂದಿಷ್ಟು ವರುಷ ಸಿಗಲಾರೆಯಾ?: ಪದ್ಮಾ ಭಟ್

                  ಸರಿಯಾಗಿ ಲೆಕ್ಕ ಹಾಕಿದ್ರೆ ಇನ್ನು ಒಂದು ತಿಂಗಳು  ಮಾತ್ರ ನಾ ನಿನ್ ಜೊತೆ ಇರೋದು..ಆಮೇಲೆ  ನೆನಪುಗಳಷ್ಟೆ.. ಏನೇ ಹೇಳು ನಿನ್ನನ್ನು ತುಂಬಾ ಮಿಸ್ ಮಾಡ್ಕೋಳ್ತೀನಿ ಕಣೇ.. ಎಂದು ರೂಂ ಮೇಟ್ ಶ್ರೇಯಾ ಹೇಳುತ್ತಿದ್ದರೆ, ನಾ ನನ್ನ ಪಾಡಿಗೆ ಅಷ್ಟೊಂದು ಲಕ್ಷ್ಯವಿಲ್ಲದೇ ಯಾವುದೋ ಪುಸ್ತಕವನ್ನು ಓದುತ್ತ ಕುಳಿತಿದ್ದೆ.. ಹೂಂ.. ಕಣೇ ನಾನೂ ನಿನ್ ಮಿಸ್ ಮಾಡ್ಕೊಳ್ತೀನಿ ಅಂತಾ ಬಾಯಿಂದ ಮಾತು ಬಂದರೂ ಓದುವ ಪುಸ್ತಕದ ಕಡೆಗೇ … Read more

ಮೂರು ಕವಿತೆಗಳು: ಶಿದ್ರಾಮ ತಳವಾರ್, ವೆಂಕಟೇಶ ನಾಯಕ್, ಲೋಕೇಶಗೌಡ ಜೋಳದರಾಶಿ

ನಾನೊಂದು ಖಾಲಿ ಸೀಸೆ ನಾನೊಂದು ಖಾಲಿ ಸೀಸೆ ಈಗ ನಾ 'ನೊಂದೆ', ಮತ್ತು ತರುವ ಮದಿರೆ ತುಂಬಿಹೆ ನನ್ನೊಳು ಪೂರ್ತಿ, ಬರೀ ಮೈಗಷ್ಟೇ ಮತ್ತು; ಮತ್ತೇನಿಲ್ಲ ದಾಹದಿ ಮದಿರೆಯ ದಾಸರು ಕೊಂಡು ಹೀರಿದರೆಲ್ಲ ನನ್ನೊಳ ಮತ್ತು ; ಮತ್ತೇನೂ ಅಷ್ಟೇ ಮತ್ತೇನಿಲ್ಲ, ದಾಹದಿ ಹೀರಿ ಮೋಹದಿ ಇವರು ಮುತ್ತಿಕ್ಕಿ ಮತ್ತೆಲ್ಲ ಹೀರಿ ಮತ್ತೂ ಮುತ್ತಿಕ್ಕಿ; ಕೊನೆಗೊಮ್ಮೆ ಬಿಸಾಕಿದರೆನ್ನ ಬೀದಿಯಲಿ ಅಷ್ಟೇ ನನ್ನೊಳು ಮತ್ತೇನಿಲ್ಲ, ತೂರಾಡುತಲಿ ಕೂಗಾಡುತಲಿ ಬೈಯುತಲಿ ನನ್ನನೂ; ಬೈಸಿಕೊಳುತಲಿ ತಮ್ಮನೂ ಕಕ್ಕುತಿಹರು ಮನದೊಳಗಣ ಕಿಚ್ಚನು ಇಷ್ಟೇ … Read more

ಸಾಮಾನ್ಯ ಜ್ಞಾನ (ವಾರ 24): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು :  ೧.    ಭಾರತೀಯ ರಿಸರ್ವ್ ಬ್ಯಾಂಕಿನ ಗವರ್ನರ್ ಆಗಿದ್ದ ಇಬ್ಬರು ಕನ್ನಡಿಗರು ಯಾರು? ೨.    ವಿಕ್ರಂ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ ಎಲ್ಲಿದೆ? ೩.    ಗಾಂಧಿ ೧೯೧೯ರಲ್ಲಿ ನವ ಜೀವನ್ ಪತ್ರಿಕೆ ಸಂಪಾದಕೀಯಕ್ಕೆ ಇಳಿದರು. ಯಾವ ಭಾಷೆಯಲ್ಲಿ ಈ ಪತ್ರಿಕೆ ಇದ್ದಿತು? ೪.    ಮಹಿಳೆಯರು ಒಲಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಪಾಲ್ಗೊಂಡಿದ್ದು ಯಾವ ವರ್ಷ? ೫.    ಟೆಲಿಫೋನ್ ಕಂಡು ಹಿಡಿದವರು ಯಾರು? ೬.    ಮೃತ ಸಮುದ್ರ (ಡೆಡ್‌ಸೀ) ಯಾವ ದೇಶದಲ್ಲಿದೆ? ೭.    ಅಮೇರಿಕಾದ ಸಿಲಿಕಾನ್ ವ್ಯಾಲಿ ಎಂಬುದು ಏತಕ್ಕೆ … Read more