“ಕುರು” ವರನ ಕರುಳು ಕರಗಿತು: ಅಮರ್ ದೀಪ್ ಅಂಕಣ

ಯಾವುದೋ ಸಿನೆಮಾ ನೋಡುತ್ತಿರುತ್ತೇವೆ, ಇನ್ಯಾವುದೋ ಕಥೆ ನೆನಪಾಗುತ್ತೆ.  ಯಾರದೋ ಜೊತೆ ಮಾತಾಡುತ್ತಿರುತ್ತೇವೆ ಇನ್ಯಾರದೋ ಮಾತಿನ ವರಸೆ ನೆನಪಾಗುತ್ತೆ.   ಯಾವುದೋ ಹಾಡು ಗುನುಗು ತ್ತಿರುತ್ತೇವೆ, ಮತ್ಯಾವುದೋ ದುಃಖ ಎದೆಗಿಳಿಯುತ್ತೆ. ಸುಖದ ಕ್ಷಣಗಳು ಕೆಲವನ್ನೇ ಮಾತ್ರ ಜ್ನಾಪಿಸುತ್ತವೆ.    ನಮ್ಮಲ್ಲೂ ಒಂದಲ್ಲ ಒಂದು ಕೊರತೆ ಇದ್ದೇ ಇರುತ್ತದೆ.   ಅದನ್ನು ಯಾವ ಹಂತದಲ್ಲಿ ಚಿವುಟಿ ದಾಟಬೇಕು ಅನ್ನುವುದರಲ್ಲಿ ನಮ್ಮ ಜಾಣತನ ಇರುತ್ತೆ.  ದುರಂತವೆಂದರೆ,  ಆ ಸಮಯಕ್ಕೆ ಅಂತ ಜಾಣತನಕ್ಕೆ ಕಿವುಡು ಮತ್ತು ಮೂಗತನ  ಆವರಿಸಿರುತ್ತದೆ.   ಆಗಲೇ ನಾವು … Read more

ಮಂಗಳಪ್ರಿಯನೊಬ್ಬನ ಮಮಕಾರದ ಮಾತುಗಳು: ಪ್ರಶಸ್ತಿ ಅಂಕಣ

ನಮ್ಮ ಉಪಗ್ರಹ ಮಂಗಳನ ಮೇಲಿಳಿದಂದು ಮೂಡಿದ ಖುಷಿ ಮುಖಹೊತ್ತಿಗೆಯಲ್ಲಿನ್ನೂ ಇಳಿದಂತಿಲ್ಲ. ಮತ್ತೆ ಮತ್ತೆ ಮಂಗಳನದೇ ಸುದ್ದಿ, ಚರ್ಚೆಗಳಿಲ್ಲಿ. ಮಂಗಳನ ಮೇಲೆ ಮೊದಲ ಪ್ರಯತ್ನದಲ್ಲೇ ಕಾಲಿಟ್ಟ ಮೊದಲ ದೇಶ ನಮ್ಮದು ಎಂಬ ಹೆಮ್ಮೆ ಪಟ್ಟ ಜನರೆಷ್ಟೋ , ಮೂಲಭೂತ ಉದ್ದೇಶಗಳ ಸಾಕಾರವೇ ಸಂದೇಹವಿರೋ ಯೋಜನೆಗೆ ನಾನೂರೈವತ್ತು ಕೋಟಿ ಸುರಿದದ್ದು ಹುಚ್ಚಾಟದ ಪರಮಾವಧಿಯೆಂದು ಗೋಳಿಟ್ಟ ಜನರೂ ಅಷ್ಟೇ. ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ನಭಕ್ಕೆ ನೆಗೆವ ರಾಕೆಟ್ಟುಗಳ ನಿರ್ಮಾಣಕ್ಕೆ ನೂರಾರು ಕೋಟಿ ಸುರಿಸುವ ವಿಜ್ಞಾನಿಗಳ ವಿಚಾರಹೀನತೆಯ ಬಗ್ಗೆ ಹಿಗ್ಗಾಮುಗ್ಗಾ ಖಂಡಿಸಿದ ಬುದ್ದಿಜೀವಿಗಳು, ಆ … Read more

ಅಪರಿಗ್ರಹ: ಅಖಿಲೇಶ್ ಚಿಪ್ಪಳಿ ಅಂಕಣ

ಸೆಪ್ಟೆಂಬರ್ ತಿಂಗಳೆಂದರೆ ಮಳೆಗಾಲ ಹಿಂದಾಗಿ ಚಳಿಗಾಲ ಅಂಬೆಗಾಲಿಕ್ಕುತ್ತಾ ಬರುವ ಕಾಲ. ರೈತರಿಗೂ ಸುಗ್ಗಿಯ ಪೂರ್ವತಯಾರಿ ಮಾಡಿಕೊಳ್ಳುವ ಕಾಲ. ಸತತ ಮಳೆಯಿಂದ ನಲುಗಿ ಮಾಸಿದ ಭೂತಾಯಿ ಆಭರಣಗಳು ಮತ್ತೆ ನಳನಳಿಸುವ ಕಾಲ. ಎಳೆ ಬಿಸಿಲಿಗೆ ಮೈಯೊಡ್ಡಿ ಬೆಚ್ಚಗಿನ ಕಾಫಿ ಹೀರುವ ಮಜವೇ ಬೇರೆ. ಮಣ್ಣಿನೊಳಕ್ಕೆ ಸೇರಲಾರದ ಎರೆಹುಳುಗಳು ಕಟ್ಟಿರುವೆಗಳ ದವಡೆಗೆ ಬಲಿಯಾಗುವ ಕಾಲ.  ಸೆಪ್ಟೆಂಬರ್ ತಿಂಗಳಲ್ಲಿ ಶಿಶು ಕ್ಯಾನ್ಸರ್ ಜಾಗೃತಿ, ಗರ್ಭಕೋಶದ ಕ್ಯಾನ್ಸರ್ ಜಾಗೃತಿ ಹೀಗೆ ವಿವಿಧ ರೀತಿಯ ಕ್ಯಾನ್ಸರ್ ಕುರಿತಾದ ಜಾಗೃತಿಗೊಳಿಸುವ ತಿಂಗಳು. ಪಾಶ್ಚ್ಯಾತ್ಯ ದೇಶಗಳಲ್ಲಿ ಬೇಸಿಗೆ … Read more

ನಾಲ್ಕು ಕವಿತೆಗಳು: ಕಾವ್ಯ ಪ್ರಿಯ, ದಿನೇಶ್ ಚನ್ನಬಸಪ್ಪ, ಅಕ್ಷತಾ ಕೃಷ್ಣಮೂರ್ತಿ, ಸುಚಿತ್ರ ಕೆ.

ಮರೆಯಲಾಗದು !!! ಅ೦ದೇಕೊ ಘಾಸಿಗೊ೦ಡ ಮನ ಮತ್ತೆ ಚೇತರಿಸಿಕೊಳ್ಳಲಿಲ್ಲ ಪ್ರಯತ್ನಗಳು ಹಲವು ಆದವೆಲ್ಲ ವ್ಯರ್ಥವು….. ಎಲ್ಲ ದುಃಖಗಳ ಮರೆತರೂ ಅದೊ೦ದೆ ನೆನಪು ಅದೇಕೊ ತಿಳಿಯದು ಮಾಸುತಿಲ್ಲ ಆ ಗಾಯವು…. ಅಷ್ಟಿತ್ತಾ ಘಾಸಿಯ ತೀವ್ರತೆ ಅ೦ದೇಕೊ ತಿಳಿಯಲಿಲ್ಲಿ ಸಿಹಿಯ೦ತಿತ್ತು ಆ ಮರೆಯಲಾಗದ ಮಮತೆಯು… ಮರೆತೆನೆ೦ದರೆ ಸುಳ್ಳು ಮರೆಯದಿದ್ದರೆ ಅದು ಕಹಿಯಾದ ಸತ್ಯವು ಸಾಯಿಸದೇ ಸುಡುತಿಹುದು…. — ಕಾವ್ಯಪ್ರಿಯ ***** ಬೆಳಕಾಗುವ ಮೊದಲೇ ಕತ್ತಲೆಯ ಮುಸುಕು, ಶುರುವಾಗುವ ಮೊದಲೇ ಕೊನೆಯಾಗುವ ಕೊರಗು, ಅರಳುವ ಮೊದಲೇ ಬಾಡಿಹೋಗುವ ಕುರುವು, ಒಲವೇ ನೀ … Read more

ಸಾಮಾನ್ಯ ಜ್ಞಾನ (ವಾರ 47): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ನ್ಯಾಷನಲ್ ಮ್ಯೂಸಿಯಂ ಆಫ್ ನಾಚುರಲ್ ಹಿಸ್ಟರಿ ಎಲ್ಲಿದೆ? ೨.    ಅಯೋಧ್ಯ ಯಾವ ನದಿಯ ದಡದ ಮೇಲಿದೆ? ೩.    ಹಿಂದೂ ಕಾನೂನಿನ ಮಿತಾಕ್ಷರ ಎಂಬ ಪುಸ್ತಕವನ್ನು ಬರೆದವರು ಯಾರು? ೪.    ಅಂತ್ಯೋದಯ ಅನ್ನ ಯೋಜನೆ ಜಾರಿಗೊಳಿಸಲಾದ ವರ್ಷ ಯಾವುದು? ೫.    ಗೌರ್ಮೆಂಟ್ ಬ್ರಾಹ್ಮಣ ಇದು ಯಾವ ವ್ಯಕ್ತಿಯ ಕುರಿತ ಆತ್ಮ ಕಥನವಾಗಿದೆ? ೬.    ಶಕುಂತಲೆಯ ಮಗ ಭರತನ ಮೊದಲ ಹೆಸರೇನು? ೭.    ಕೋಹಿನೂರ್ ವಜ್ರಕ್ಕೆ ಆ ಹೆಸರು ನೀಡಿದವರು ಯಾರು? ೮.    ಭಾರತದ ರಾಷ್ಟ್ರೀಯ ಕಾಂಗ್ರೆಸ್‌ಗೆ … Read more

ಕಾಪಾಡಿ ಎಂದು ಕೂಗುವ ಕೂಗುಗಳ ನಿರ್ಲಕ್ಷಿಸುವ ಬದಲು..: ನಟರಾಜು ಎಸ್. ಎಂ.

ಕಳೆದ ವಾರದ ಒಂದು ಮುಂಜಾನೆ ನನ್ನ ರೂಮಿನಿಂದ ಒಂದಷ್ಟು ದೂರದಲ್ಲಿರೋ ಪ್ಲಾಟಿನಲ್ಲಿ ಯಾರೋ ಕಿರುಚಿದ ಸದ್ದಾಯಿತು. ಆ ಸದ್ದು ನಿದ್ದೆಗಣ್ಣಿನಲ್ಲಿ ನನ್ನೊಳಗೆ ಒಂದು ಆತಂಕವನ್ನು ಸೃಷ್ಟಿಸಿದರೂ ಹೊರಗೆ ನಲ್ಲಿಯಲ್ಲಿ ಬೀಳುವ ನೀರು ಹಿಡಿಯುವ ಅಕ್ಕ ಪಕ್ಕದ ಮನೆಯ ಹೆಂಗಸರು ಆ ಪ್ಲಾಟಿನಲ್ಲಿ ಏನೂ ನಡೆದೇ ಇಲ್ಲವೇನೋ ಎಂಬುವಂತೆ ತಮ್ಮ ಬಕೆಟ್ ಗಳಿಗೆ ನೀರು ತುಂಬಿಕೊಳ್ಳುತ್ತಿರುವ ಸದ್ದು ಕೇಳಿ ನಾನು ಹಾಸಿಗೆ ಮೇಲೆ ಹಾಗೆಯೇ ಸುಮ್ಮನೆ ಕಣ್ಮುಚ್ಚಿದೆ. ಆ ಪ್ಲಾಟಿನಿಂದ ಕೇಳಿ ಬರುತ್ತಿದ್ದ ಆ ಕಿರುಚುವ ದನಿ  ಕ್ಷಣ ಕ್ಷಣಕ್ಕೂ ತಾರಕ್ಕೇರುತ್ತಿತ್ತು. ಹೊರಗೆ ಹೋಗಿ ಅಲ್ಲಿ … Read more

ಹುಚ್ಚರ ಹಾಬಿ ಮತ್ತು ಕೇಜ್ರಿವಾಲ್ ಪ್ರತಿಜ್ಞೆ: ಆದರ್ಶ ಸದಾನ೦ದ ಅರ್ಕಸಾಲಿ

  'ಪಕ್ಷಿ ವೀಕ್ಷಣೆ – ಭಾಗ ೧ '  ಇದೊ೦ದು ಇತ್ತೀಚಿಗೆ ಬೆಳೆಸಿಕೊ೦ಡ ಹುಚ್ಚುತನ. ಕೆಲವರು ಈ ಹುಚ್ಚುತನದ ಅಡ್ಡಗೆಲಸಕ್ಕೆ 'ಹವ್ಯಾಸ' ವೆ೦ಬ ಸುಸ೦ಕೃತ ಪದ ಬಳಸುತ್ತಾರೆ.  ಪರಿಚಯವಾದ ಹೊಸತರಲ್ಲಿ ಗೆಳೆಯ-ಗೆಳತಿಯರು ಕೇಳುವ ಪ್ರಶ್ನೆಯಿ೦ದ ಹಿಡಿದು, ಕೆಲಸಕ್ಕೆ ಸೇರುವ ಮುನ್ನ ಅರ್ಜಿ ತು೦ಬುವ ಕಾಲಮ್ ಗಳಲ್ಲಿ , ಈ 'ಹವ್ಯಾಸ'ವೆ೦ಬ ಪದವನ್ನು ಕಾಣುತ್ತೇವೆ. ಮದುವೆಗೆ ಮು೦ಚೆ, ಹೆಣ್ಣು-ಗ೦ಡು  ನೋಡುವ೦ಥ ಸ್ವಾರಸ್ಯಕರವಾದ ಶಾಸ್ತ್ರಗಳಲ್ಲಿ, " ನಿಮ್ಮ ಹವ್ಯಾಸಗಳೇನು " ಅನ್ನುವ ಮಹತ್ತರ ಪ್ರಶ್ನೆಗಳು ತಮ್ಮದೇ ಆದ ಸೊಬಗು ಕ೦ಡುಕೊ೦ಡಿವೆ. … Read more

ಕಾಲದ ಬೆನ್ನು: ಹೃದಯಶಿವ

ಹೆಂಡತಿಯು ಹದ ಮಾಡಿಕೊಟ್ಟ ತಾಂಬೂಲ ಜಗಿಯುತ್ತಲೇ ಅವರು ರಾಜಾಜಿನಗರದ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿರುವ ತನ್ನ ಮೊದಲ ಹೆಂಡತಿಯ ಬಗ್ಗೆ ಆಲೋಚಿಸುತ್ತಿದ್ದರು. ನಲವತ್ತು ವರ್ಷಗಳ ಹಿಂದೆ ಯಾರ ಜೊತೆಯಲ್ಲೋ ಸರಸವಾಡಿದ್ದಳೆಂಬ ಶಂಕೆಯಿಂದ ಹತ್ತಾರು ಜನ ಸೇರಿಸಿ ಪಂಚಾಯ್ತಿ ಮಾಡಿ ಆಕೆಯನ್ನು ಶಾಶ್ವತವಾಗಿ ಮನೆಯಿಂದ ಹೊರಹಾಕಿದ್ದ ದೃಶ್ಯ ಅವರ ಮನಸ್ಸಿನಲ್ಲಿ ಮೂಡಿಬಂತು. ನೀಳಕೇಶದ, ತಾವರೆ ಕಣ್ಣುಗಳ ಚೆಲುವೆಯಾದ ತಮ್ಮ ಪ್ರಥಮಪತ್ನಿ! ಈಗ, ತನ್ನನ್ನು ಗಂಡನೆಂದು ಆಕೆಯೇನೂ ಭಾವಿಸುವ ಅಗತ್ಯವೇನೂ ಇಲ್ಲ. ಬದುಕು ಬೇಡವೆನಿಸಿದಾಗ ಆತ್ಮದ ಅಳಲಿಗೆ ಕಿವಿಯಾದರೆ ಸಾಕು. ಬೇಕಾದರೆ … Read more

ವಿಸ್ಮಯದ ಮಾಯಾಲೋಕ!: ಗುರುಪ್ರಸಾದ ಕುರ್ತಕೋಟಿ

ಕಾರ್ಪೊರೇಟ್ ಜಗತ್ತಿನಲ್ಲಿ, ವರ್ಷಕ್ಕೊಮ್ಮೆಯೋ, ಎರಡು ಸರ್ತಿಯೋ ಟೀಮ್ ಔಟಿಂಗ್ (team outing) ಅಂತ ಮಾಡುತ್ತಾರೆ. ಒಂದು ದಿನದ ಮಟ್ಟಿಗೆ ಕಚೇರಿಯ ಸಹೋದ್ಯೋಗಿಗಳೆಲ್ಲರೂ ಬೆಂಗಳೂರಿನಿಂದ ಸ್ವಲ್ಪ ಹೊರ ವಲಯದಲ್ಲಿರುವ ರಿಸಾರ್ಟ ಒಂದರಲ್ಲಿ ಕಾಲ ಕಳೆದು ಬರುತ್ತಾರೆ. ಅಲ್ಲಿ ಆಟವಾಡಿಸುತ್ತಾರೆ, ಅಬ್ಬರದ ಸಂಗೀತವಿರುತ್ತೆ, ನೃತ್ಯವಿರುತ್ತೆ. ತಮ್ಮ ಒತ್ತಡದ ಕೆಲಸದ ಮಧ್ಯೆ ದಣಿದ ಜೀವಗಳಿಗೆ ಒಂದಿಷ್ಟು ವಿರಾಮ ಕೊಡಿಸುವ ಪ್ರಯತ್ನ ಅದು. ಅದರ ಘೋಷಣೆಯಾಗುತ್ತಲೇ ಎಲ್ಲರಿಗೂ ಖುಷಿ, ಇನ್ನೂ ಕೆಲವು ಆತ್ಮಗಳಂತೂ ಸಂತಸದಿಂದ ಅರಳುತ್ತವೆ. ಆ ಆತ್ಮಗಳ ನೆಲೆಯಾಗಿರುವ ದೇಹಗಳಿಗೊಂದು, ವಿಶಿಷ್ಠವಾದ … Read more

ಜನಪದ ಸಾಹಿತ್ಯದ ಸ್ಥಿತಿಗತಿ. ಏನು..? ಎತ್ತ..?: ರಕ್ಷಿತ್ ಶೆಟ್ಟಿ

 ಜನಪದ ಎಂಬುವುದು ಕೇವಲ ಒಂದೆರಡು ಪ್ರಕಾರಗಳಿಗೆ ಸೀಮಿತವಾದುದಲ್ಲ ಜನಜೀವನದ ಪ್ರತಿಯೊಂದು ಮಜಲಿನಲ್ಲಿಯೂ ಹಾಸುಹೊಕ್ಕಾಗಿ ನಿಂತಿರುವಂತದ್ದು. ಪ್ರತೀ ಪ್ರದೇಶದ ಪರಿಧಿಯೊಳಗೂ ತನ್ನದೇ ಆದ ವಿವಿದ ರೀತಿಯ ಜಾನಪದ ಚಿತ್ರಣ ಇದ್ದೇ ಇರುತ್ತದೆ. ಅನಕ್ಷರಸ್ಥ ಸಮಾಜದಲ್ಲಿ ಕೇವಲ ಮೌಖಿಕವಾಗಿ ಹರಿದು ಬಂದ ಸಾಹಿತ್ಯ ಪ್ರಕಾರಗಳಿಗೆ ಜಾತಿ, ಧರ್ಮ, ಮತ, ಪಂಥಗಳ ಹಿಡಿತವಿಲ್ಲ. ನಂಬಿಕೆ ಪುರಾಣ ನಡವಳಿಕೆ ಸಮಾಜದ ಆಗುಹೋಗುಗಳೇ ಒಳಗೊಂಡಿರುವುದು ಸರ್ವೇಸಾಮಾನ್ಯ. ಈ ರೀತಿಯಲ್ಲಿ ಕಂಠಸ್ಥ ಸಂಪ್ರದಾಯದ ಮೂಲಕ ತಲೆಮಾರಿನಿಂದ ತಲೆಮಾರಿಗೆ ಹರಿದು ಬಂದ ಕಲಾಪ್ರಕಾರಗಳು ನಿರಂತರವಾಗಿ ಹೊಸ ರೀತಿ … Read more

ಭಾವಗಳ ಮೂಟೆ ಕಟ್ಟೋ ಹಾಗಿದ್ರೆ: ಪ್ರಶಸ್ತಿ

ಈ ಗಣಕ ಅನ್ನೋದು ಅದೆಷ್ಟು ಖುಷಿ ಕೊಡುತ್ತೆ ಕೆಲೋ ಸಲ ಅಂದ್ರೆ ಅದನ್ನ ಬರಿ ಮಾತಲ್ಲಿ ಹೇಳೋಕಾಗದಷ್ಟು. ಯಾಕಂತೀರಾ ?  ಸದ್ಯಕ್ಕೆ ಸಮಯವಿಲ್ಲದಿದ್ದರೂ ಮುಂದೆಂದಾದರೂ ಬೇಕಾಗುವುದೆಂಬ ನಮಗಿಷ್ಟದ ಅದೆಷ್ಟೋ ಜೀ.ಬಿಗಟ್ಲೆ ಹಾಡುಗಳನ್ನು, ಸಿನಿಮಾಗಳನ್ನು ಸಂಗ್ರಹಿಸಿಟ್ಟು ಬೇಕಾದಾಗ ನೋಡಬಹುದಾದ ವ್ಯವಸ್ಥೆಯಿದೆಯೆಲ್ಲ ಅದೇ ಎಲ್ಲಕ್ಕಿಂತ ಹೆಚ್ಚು ಖುಷಿ ಕೊಡೋದು ನಂಗೆ ಅಂದ್ರೆ ಕೆಲವರಿಗೆ ಅಷ್ಟೇನಾ ಅನಿಸಬಹುದು. ಕೆಲವರಿಗೆ  ತಮಾಷೆಯೆನಿಸಬಹುದು . ಕೆಲವರಿಗೆ ವಿಡಂಬನೆಯಂತೂ ಭಾಸವಾಗಬಹುದು. ನಮ್ಮ ಮನಸ್ಸಿನಲ್ಲಿರೋ.. ವೈಜ್ನಾನಿಕವಾಗಿ ಹೇಳೋದಾದ್ರೆ ಮೆದುಳಿನಲ್ಲಿರೋ ಮಾಹಿತಿಯ ವಾಹಕವಾಗಿ ಸಂಗ್ರಾಹಕವಾಗಿ ಕೆಲಸ ಮಾಡೋ ನ್ಯೂರಾನುಗಳಲ್ಲಿ … Read more

ಮಂಗನಿಂದ ದಾನವ – ಭಾಗ-೨: ಅಖಿಲೇಶ್ ಚಿಪ್ಪಳಿ ಅಂಕಣ

ಇಲ್ಲಿಯವರೆಗೆ… ಪ್ರಪಂಚದಲ್ಲಿ ಏನೇ ಆದರೂ, ಹಗಲು-ರಾತ್ರಿ ಆಗುವುದು ತಪ್ಪದು. ಕಾಲ ಯಾರಿಗೂ ಕಾಯುವುದಿಲ್ಲ. ಮೂಡಣದಲ್ಲಿ ಸೂರ್ಯನ ನಸುಬೆಳಕು ಮೂಡುತ್ತಿದ್ದಂತೆ ಮೊದಲು ಎಚ್ಚರಗೊಂಡು ಕೂಗುವುದು ಕಾಜಾಣ. ಹಿಂದೆಯೇ ಕರಿಕುಂಡೆಕುಸ್ಕದ ಸೀಟಿ ಶುರು. ಪ್ರಾಣಿ-ಪಕ್ಷಿಗಳಿಗೆ ಹೋಲಿಸಿದರೆ, ಮಾನವನಿಗೆ ಬೆಳಗಾಗುವುದು ತುಸು ತಡ. ವಯಸ್ಸಾದ ಕಾರಣಕ್ಕೆ ಹೆಚ್ಚು ನಿದ್ದೆ ಮಾಡದ ದ್ಯಾವರ ಭಟ್ಟರು ಬೇಗ ಏಳುತ್ತಾರೆ. ಹೆಂಡತಿ ತೀರಿಕೊಂಡ ಮೇಲೆ ಬೆಳಗಿನ ಕಾಫಿ ಕುಡಿಯುವ ಅಭ್ಯಾಸ ತಪ್ಪಿ ಹೋಗಿದೆ. ಬರುವ ಛಪ್ಪನ್ನಾರು ಧಾರಾವಾಹಿಗಳನ್ನು ನೋಡಿ ಸೊಸೆ-ಮಗ ಮಲಗುವುದು ರಾತ್ರಿ ೧೧.೩೦ ಆಗುತ್ತದೆ. … Read more

ನಾಲಗೆ ಮೇಲಿನ ಮಚ್ಚೆಯ ರಾಚ: ಅಮರ್ ದೀಪ್ ಪಿ.ಎಸ್.

ಊರಲ್ಲಿ ನೋಡಿದ್ರೆ ಜನ ರಾಚನ ಮನೆ ಮುಂದೆ ಜಮಾಯ್ಸಿದಾರೆ.  ರಾಚ ಮಾತ್ರ ತನಗೇನು ಗೊತ್ತೇ ಇಲ್ಲ ದಂತೆ ಊರ ಉಸಾಬರಿ ಮಾಡದೇ ತಾನಾಯ್ತು ತನ್ನ ಹೊಲ,  ದೊಡ್ಡಿ ದನಗಳ ಮೇವು, ಮುಸುರಿ, ಸಗಣಿ ಕೆಲಸದ ಜೊತೆ ಬಿಜಿನೋ ಬಿಜಿ.  ಜನ, ಅವನ ಹೆಂಡ್ತೀನ ಕೇಳ್ತಾ ಇದ್ರು. ಅವನ ಹೆಂಡ್ತಿ ಕೂಡ "ಇವ್ನ ಹೆಣದ್ ಜೊತೆ ಅವ್ರೀಸು ಮಂದೀದು ಎತ್ಲಿ" ಅಂದು ಬಾಯ್ತುಂಬ ಶಪಿಸಿದಳು.  ಸಧ್ಯಕ್ಕೆ ಒಲೆಗೆ ಇಡೋಕೆ ಸೌದೆ ಇಲ್ದೇ  ಮನೆ ಮುಂದೆ ಬಂದ ಜನಗಳ ಕೈ … Read more

ಆಂಬುಲೆನ್ಸ್ ಗೂ ಮೊದಲೇ ಪಿಜ್ಜಾ ಡೆಲಿವರಿ : ಸಂತೋಷ್ ಗುರುರಾಜ್

ಗೆಳೆಯರೇ ಈ ನಮ್ಮ ದೇಶದ ವ್ಯವಸ್ಥೆಯೇ ಹೀಗಾ ಅನಿಸ್ಸುವಷ್ಟು ಮತ್ತು ಇದನ್ನು ಬದಲಾಯಿಸಲು ಆಗುವುದೇ ಇಲ್ಲವಾ ಎನ್ನುವ ಅನುಮಾನ ಬರುವುದಂತೂ ಖಂಡಿತ, ಯಾಕೇ ಈ ರೀತಿಯ ಹೀನಾಯ ಪರಿಸ್ಥಿತಿ ಎನ್ನುವ ಅನುಮಾನ ನನ್ನನ್ನು ಕಾಡುತ್ತಿದೆ, ಯಾಕೆ ಈ ಸರಕಾರಗಳಿಗೆ ಇಷ್ಟೊಂದು ನಿರ್ಲಕ್ಷ್ಯ ದೋರಣೆ, ಸರಕಾರದ ಕೆಲಸ ದೇವರ ಕೆಲಸ ಎಂದು ಮಾಡಬೇಕಾಗಿರುವ ಇವರು ತಮ್ಮ ತಮ್ಮ ಅದಿಕಾರಕ್ಕೆ ಹೊಡೆದಾಡುತ್ತ, ತಮ್ಮ ತಮ್ಮ ಖಜಾನೆಗಳನ್ನು ತುಂಬಿಸಿ ಕೊಳ್ಳುವುದರಲ್ಲಿ ನಿರತರಾಗಿರುತ್ತಾರೆ. (ಎಲ್ಲರೂ ಹೀಗೆ ಇರುತ್ತಾರೆಂದು ಹೇಳಲಾಗುವುದಿಲ್ಲ, ನಿಷ್ಟಾವಂತರು ಇದ್ದಾರೆ ಆದರೆ … Read more

ಅಮ್ಮನೆಂಬ ಅನುಬಂಧದ ಸುತ್ತ: ಪದ್ಮಾ ಭಟ್

          ಮೊನ್ನೆ ಮೊಬೈಲ್ ಗೆ ಬಂದ ಮೆಸೇಜು ಒಂದುಕ್ಷಣ ಮೂಕಳನ್ನಾಗಿ ಮಾಡಿಸಿತ್ತು ಅದೇನೆಂದರೆ ೫ ನೇ ಕ್ಲಾಸಿನ ಪರೀಕ್ಷೆಯಲ್ಲಿ ಅಮ್ಮನ ಬಗ್ಗೆ ಬರೆಯಿರಿ ಎಂಬ ಒಂದು ಪ್ರಬಂಧವಿತ್ತಂತೆ.. ಆ ಪುಟ್ಟ ಹುಡುಗನೊಬ್ಬ ಬರೆದಿದ್ದೇನೆಂದರೆ ನನ್ನ ಅಮ್ಮನ ಬಗ್ಗೆ ಬರೆಯಲು ಇಂಗ್ಲೀಷಿನಲ್ಲಿರುವ ಯಾವ ಅಕ್ಷರವೂ ಸಮನಾಗಲಾರದು..ಯಾವುದೇ ಭಾಷೆಯ ಅಕ್ಷರಗಳೂ ಸಾಕಾಗದು ..ಸಮಯದ ಮಿತಿಯೂ ಇಲ್ಲ ಎಂಬುದು.. ಹೌದಲ್ವಾ? ಅಮ್ಮನೆಂದರೆ ಸಾವಿರ ಜನರ ನಡುವೆಯಿದ್ದರೂ ಆತ್ಮೀಯವಾಗಿ ಕಾಣುವ ಜೀವಿ. ಹುಟ್ಟುವ ಮೊದಲೇ ನಮ್ಮ ಬಗ್ಗೆ … Read more

ಸಾಮಾನ್ಯ ಜ್ಞಾನ (ವಾರ 46): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ವಿಶ್ವದಲ್ಲಿ ಉದ್ಭವಿಸಬಹುದಾದ ವಾಣಿಜ್ಯ ವಿವಾದಗಳನ್ನು ನಿವಾರಿಸಲು ಸ್ಥಾಪಕವಾದ ಸಂಸ್ಥೆ ಯಾವುದು? ೨.    ಮೋಹಿನಿಯಟ್ಟಂ ಇದು ಯಾವ ರಾಜ್ಯಕ್ಕೆ ಸಂಬಂಧಿಸಿದ ನೃತ್ಯ ಶೈಲಿಯಾಗಿದೆ? ೩.    ನಳ ಸರೋವರ ಪಕ್ಷಿಧಾಮ ಯಾವ ರಾಜ್ಯದಲ್ಲಿದೆ? ೪.    ನೇಪಾಳದ ಕಠ್ಮಂಡು ನಗರದಲ್ಲಿರುವ ಹಿಂದುಗಳ ಪ್ರಸಿದ್ಧ ದೇವಾಲಯ ಯಾವುದು? ೫.    ಭಾರತದ ರಾಷ್ಟ್ರ ಧ್ವಜಕ್ಕೆ ಬಳಸುವ ಬಟ್ಟೆ ಯಾವುದು? ೬.    ನಾಯಿಕೆಮ್ಮು ರೋಗಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾ ಯಾವುದು? ೭.    ಚಿಕ್ಕಮಗಳೂರು ಮಂಗಳೂರು ನಡುವೆ ಬರುವ ಕಣಿವೆ ಮಾರ್ಗ ಯಾವುದು? ೮.    ಭಾರತ … Read more